ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಜಂಬೂಖಂಡವಿನಿರ್ಮಾಣ ಪರ್ವ
ಅಧ್ಯಾಯ 6
ಸಾರ
ಸಂಜಯನು ಪಂಚಭೂತಗಳನ್ನು ವರ್ಣಿಸಿ (1-11), ಸುದರ್ಶನ ದ್ವೀಪವನ್ನು ಸಂಕ್ಷಿಪ್ತವಾಗಿ ವರ್ಣಿಸುವುದು (12-16).
06006001 1ಧೃತರಾಷ್ಟ್ರ ಉವಾಚ। 06006001a ನದೀನಾಂ ಪರ್ವತಾನಾಂ ಚ ನಾಮಧೇಯಾನಿ ಸಂಜಯ।
06006001c ತಥಾ ಜನಪದಾನಾಂ ಚ ಯೇ ಚಾನ್ಯೇ ಭೂಮಿಮಾಶ್ರಿತಾಃ।।
06006002a ಪ್ರಮಾಣಂ ಚ ಪ್ರಮಾಣಜ್ಞ ಪೃಥಿವ್ಯಾ ಅಪಿ ಸರ್ವಶಃ।
06006002c ನಿಖಿಲೇನ ಸಮಾಚಕ್ಷ್ವ ಕಾನನಾನಿ ಚ ಸಂಜಯ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಪ್ರಮಾಣಜ್ಞ! ಭೂಮಿಯನ್ನು ಆಶ್ರಯಿಸಿರುವ ನದಿಗಳ, ಪರ್ವತಗಳ, ಜನಪದಗಳ ಮತ್ತು ಅನ್ಯರ ಹೆಸರುಗಳನ್ನೂ, ಪೃಥ್ವಿಯಲ್ಲಿರುವ ಎಲ್ಲವುಗಳ ನಿಖಿಲ ಕಾನನಗಳ ಪ್ರಮಾಣಗಳನ್ನೂ ಹೇಳು ಸಂಜಯ!”
06006003 ಸಂಜಯ ಉವಾಚ।
06006003a ಪಂಚೇಮಾನಿ ಮಹಾರಾಜ ಮಹಾಭೂತಾನಿ ಸಂಗ್ರಹಾತ್।
06006003c ಜಗತ್ ಸ್ಥಿತಾನಿ ಸರ್ವಾಣಿ ಸಮಾನ್ಯಾಹುರ್ಮನೀಷಿಣಃ।।
ಸಂಜಯನು ಹೇಳಿದನು: “ಮಹಾರಾಜ! ಈ ಐದು ಸಮಾನ ಮಹಾಭೂತಗಳು ಕೂಡಿ ಜಗತ್ತಿನ ಸರ್ವವೂ ಇವೆಯೆಂದು ಮನೀಷಿಣರು ಹೇಳುತ್ತಾರೆ.
06006004a ಭೂಮಿರಾಪಸ್ತಥಾ ವಾಯುರಗ್ನಿರಾಕಾಶಮೇವ ಚ।
06006004c ಗುಣೋತ್ತರಾಣಿ ಸರ್ವಾಣಿ ತೇಷಾಂ ಭೂಮಿಃ ಪ್ರಧಾನತಃ।।
ಭೂಮಿ, ನೀರು, ವಾಯು, ಅಗ್ನಿ, ಆಕಾಶ ಇವು ತುದಿಯಿಂದ ಒಂದೊಂದು ಗುಣದಿಂದ ಅಧಿಕವಾದವುಗಳು2. ಮೊದಲು ಭೂಮಿಯನ್ನು ಹೇಳಲು ಕಾರಣವೇನೆಂದರೆ ಅದು ಸಮಸ್ತಗುಣಗಳಿಂದಲೂ ಕೂಡಿದೆ.
06006005a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಶ್ಚ ಪಂಚಮಃ।
06006005c ಭೂಮೇರೇತೇ ಗುಣಾಃ ಪ್ರೋಕ್ತಾ ಋಷಿಭಿಸ್ತತ್ತ್ವವೇದಿಭಿಃ।।
ತತ್ವವೇದಿ ಋಷಿಗಳು ಭೂಮಿಗೆ ಶಬ್ಧ, ಸ್ಪರ್ಷ, ರೂಪ, ರಸ, ಮತ್ತು ಐದನೆಯದಾಗಿ ಗಂಧ - ಈ ಎಲ್ಲ ಗುಣಗಳೂ ಇವೆಯೆಂದು ಹೇಳುತ್ತಾರೆ.
06006006a ಚತ್ವಾರೋಽಪ್ಸು ಗುಣಾ ರಾಜನ್ಗಂಧಸ್ತತ್ರ ನ ವಿದ್ಯತೇ।
06006006c ಶಬ್ದಃ ಸ್ಪರ್ಶಶ್ಚ ರೂಪಂ ಚ ತೇಜಸೋಽಥ ಗುಣಾಸ್ತ್ರಯಃ।
06006006e ಶಬ್ದಃ ಸ್ಪರ್ಶಶ್ಚ ವಾಯೋಸ್ತು ಆಕಾಶೇ ಶಬ್ದ ಏವ ಚ।।
ರಾಜನ್! ಜಲದಲ್ಲಿ ನಾಲ್ಕು ಗುಣಗಳಿವೆ. ಅದರಲ್ಲಿ ಗಂಧವಿಲ್ಲ. ತೇಜಸ್ಸಿಗೆ ಶಬ್ಧ, ಸ್ಪರ್ಶ ಮತ್ತು ರೂಪ ಈ ಮೂರು ಗುಣಗಳಿವೆ. ವಾಯುವಿಗೆ ಶಬ್ಧ ಮತ್ತು ಸ್ಪರ್ಶಗಳು ಗುಣಗಳು. ಆಕಾಶದಲ್ಲಿ ಶಬ್ಧ ಮಾತ್ರ ಇದೆ3.
06006007a ಏತೇ ಪಂಚ ಗುಣಾ ರಾಜನ್ಮಹಾಭೂತೇಷು ಪಂಚಸು।
06006007c ವರ್ತಂತೇ ಸರ್ವಲೋಕೇಷು ಯೇಷು ಲೋಕಾಃ ಪ್ರತಿಷ್ಠಿತಾಃ।।
ರಾಜನ್! ಇವು ಈ ಐದು ಮಹಾಭೂತಗಳಲ್ಲಿರುವ ಐದು ಗುಣಗಳು. ಇವುಗಳನ್ನು ಆಧರಿಸಿಯೇ ಲೋಕಗಳು ಇವೆ ಮತ್ತು ಸರ್ವ ಲೋಕಗಳು ಇವುಗಳ ಮೂಲಕವೇ ನಡೆದುಕೊಳ್ಳುತ್ತವೆ4.
06006008a ಅನ್ಯೋನ್ಯಂ ನಾಭಿವರ್ತಂತೇ ಸಾಮ್ಯಂ ಭವತಿ ವೈ ಯದಾ।
06006008c ಯದಾ ತು ವಿಷಮೀಭಾವಮಾವಿಶಂತಿ ಪರಸ್ಪರಂ।
06006008e ತದಾ ದೇಹೈರ್ದೇಹವಂತೋ ವ್ಯತಿರೋಹಂತಿ ನಾನ್ಯಥಾ।।
ಯಾವಾಗ ಈ ಪಂಚಭೂತಗಳು ಸಮಾನರೂಪದಲ್ಲಿರುತ್ತವೆಯೋ ಆಗ ಅವುಗಳು ಪರಸ್ಪರ ಕೂಡುವುದಿಲ್ಲ5. ಈ ಪಂಚಭೂತಗಳು ನ್ಯೂನಾಧಿಕ ಭಾವಗಳನ್ನು ಹೊಂದಿದಾಗ ಅವು ಪರಸ್ಪರ ಸೇರುವವು. ಆಗ ಪ್ರಾಣಿಗಳು ದೇಹಧಾರಣೆ ಮಾಡುವವು. ಹಾಗಾಗದೇ ದೇಹವೇ ಉತ್ಪನ್ನವಾಗುವುದಿಲ್ಲ.
06006009a ಆನುಪೂರ್ವ್ಯಾದ್ವಿನಶ್ಯಂತಿ ಜಾಯಂತೇ ಚಾನುಪೂರ್ವಶಃ।
06006009c ಸರ್ವಾಣ್ಯಪರಿಮೇಯಾನಿ ತದೇಷಾಂ ರೂಪಮೈಶ್ವರಂ।।
ಇವು ಕ್ರಮವಾಗಿ ನಾಶ ಹೊಂದಿ ಅದರ ಹಿಂದಿನದನ್ನು ಹೋಗಿ ಸೇರಿಕೊಳ್ಳುತ್ತವೆ6. ಆಕಾಶದ ಕಡೆಯಿಂದ ಪ್ರತಿಯೊಂದೂ ತಮ್ಮ ಹಿಂದಿನವುಗಳಿಂದ ಹುಟ್ಟಿಕೊಳ್ಳುತ್ತವೆ. ಇವೆಲ್ಲವುಗಳ ಅಪರಿಮಿತ ರೂಪಗಳು ಈಶ್ವರನಿಂದಲೇ ಹುಟ್ಟುತ್ತವೆ7.
06006010a ತತ್ರ ತತ್ರ ಹಿ ದೃಶ್ಯಂತೇ ಧಾತವಃ ಪಾಂಚಭೌತಿಕಾಃ।
06006010c ತೇಷಾಂ ಮನುಷ್ಯಾಸ್ತರ್ಕೇಣ ಪ್ರಮಾಣಾನಿ ಪ್ರಚಕ್ಷತೇ।।
ಭಿನ್ನ-ಭಿನ್ನ ಲೋಕಗಳಲ್ಲಿ ಪಾಂಚಭೌತಿಕ ಧಾತುಗಳು ಕಂಡುಬರುತ್ತವೆ. ಅವುಗಳ ಪ್ರಮಾಣವೆಷ್ಟೆಂದು ಮನುಷ್ಯನು ತರ್ಕದಿಂದ ಮಾತ್ರ ಊಹಿಸಿಕೊಳ್ಳಬಹುದು8.
06006011a ಅಚಿಂತ್ಯಾಃ ಖಲು ಯೇ ಭಾವಾ ನ ತಾಂಸ್ತರ್ಕೇಣ ಸಾಧಯೇತ್।
06006011c ಪ್ರಕೃತಿಭ್ಯಃ ಪರಂ ಯತ್ತು ತದಚಿಂತ್ಯಸ್ಯ ಲಕ್ಷಣಂ।।
ಅಚಿಂತ್ಯವಾಗಿರುವ ಭಾವ9ಗಳನ್ನು ತರ್ಕದಿಂದ ಸಾಧಿಸಬಾರದು. ಪ್ರಕೃತಿಗೂ ಆಚೆಯಿರುವುದು, ಭಿನ್ನವಾದುದು ಅಚಿಂತ್ಯದ ಲಕ್ಷಣ.
06006012a ಸುದರ್ಶನಂ ಪ್ರವಕ್ಷ್ಯಾಮಿ ದ್ವೀಪಂ ತೇ ಕುರುನಂದನ।
06006012c ಪರಿಮಂಡಲೋ ಮಹಾರಾಜ ದ್ವೀಪೋಽಸೌ ಚಕ್ರಸಂಸ್ಥಿತಃ।।
ಆದರೂ ಕುರುನಂದನ! ನಿನಗೆ ಸುದರ್ಶನ ದ್ವೀಪದ ಕುರಿತು ಹೇಳುತ್ತೇನೆ. ಈ ದ್ವೀಪವು ಚಕ್ರದಂತೆ ಗುಂಡಾಗಿರುವುದು10.
06006013a ನದೀಜಲಪ್ರತಿಚ್ಛನ್ನಃ ಪರ್ವತೈಶ್ಚಾಭ್ರಸನ್ನಿಭೈಃ।
06006013c ಪುರೈಶ್ಚ ವಿವಿಧಾಕಾರೈ ರಮ್ಯೈರ್ಜನಪದೈಸ್ತಥಾ।।
06006014a ವೃಕ್ಷೈಃ ಪುಷ್ಪಫಲೋಪೇತೈಃ ಸಂಪನ್ನಧನಧಾನ್ಯವಾನ್।
06006014c ಲಾವಣೇನ ಸಮುದ್ರೇಣ ಸಮಂತಾತ್ಪರಿವಾರಿತಃ।।
ಅದು ನದೀಜಲಗಳಿಂದ, ಮೋಡಗಳಂತಿರುವ ಪರ್ವತಗಳಿಂದ, ವಿವಿಧಾಕಾರದ ಪುರಗಳಿಂದ, ರಮ್ಯ ಜನಪದಗಳಿಂದ, ಪುಷ್ಪಫಲಗಳನ್ನು ನೀಡುವ ವೃಕ್ಷಗಳಿಂದ ತುಂಬಿಕೊಂಡಿದೆ. ಧನ-ಧಾನ್ಯಗಳಿಂದ ಸಂಪನ್ನವಾಗಿದೆ. ಎಲ್ಲ ಕಡೆಗಳಿಂದಲೂ ಲವಣ ಸಮುದ್ರದಿಂದ ಸುತ್ತುವರೆಯಲ್ಪಟ್ಟಿದೆ.
06006015a ಯಥಾ ಚ ಪುರುಷಃ ಪಶ್ಯೇದಾದರ್ಶೇ ಮುಖಮಾತ್ಮನಃ।
06006015c ಏವಂ ಸುದರ್ಶನದ್ವೀಪೋ ದೃಶ್ಯತೇ ಚಂದ್ರಮಂಡಲೇ।।
ಕನ್ನಡಿಯಲ್ಲಿ ಮನುಷ್ಯನು ತನ್ನ ಮುಖವನ್ನು ಹೇಗೆ ಕಾಣುತ್ತಾನೋ ಹಾಗೆ ಸುದರ್ಶನ ದ್ವೀಪವು ಚಂದ್ರಮಂಡಲದಲ್ಲಿ ಕಾಣುತ್ತದೆ.
06006016a ದ್ವಿರಂಶೇ ಪಿಪ್ಪಲಸ್ತತ್ರ ದ್ವಿರಂಶೇ ಚ ಶಶೋ ಮಹಾನ್।
06006016c ಸರ್ವೌಷಧಿಸಮಾವಾಪೈಃ ಸರ್ವತಃ ಪರಿಬೃಂಹಿತಃ।
06006016e ಆಪಸ್ತತೋಽನ್ಯಾ ವಿಜ್ಞೇಯಾ ಏಷ ಸಂಕ್ಷೇಪ ಉಚ್ಯತೇ।।
ಅದರ ಎರಡು ಭಾಗಗಳ ಒಂದರಲ್ಲಿ ಅಶ್ವತ್ಥವೃಕ್ಷವಿದೆ. ಇನ್ನೊಂದರಲ್ಲಿ ದೊಡ್ಡ ಮೊಲವಿದೆ. ಈ ಖಂಡಗಳು ಎಲ್ಲ ಔಷಧಿಗಳಿಂದ ತುಂಬಿಕೊಂಡಿವೆ. ಈ ಭಾಗಗಳನ್ನು ಬಿಟ್ಟರೆ ಉಳಿದ ಭಾಗಗಳಲ್ಲಿ ಕೇವಲ ನೀರಿದೆ. ಸಂಕ್ಷಿಪ್ತವಾಗಿ ಹೇಳಿದ್ದೇನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಜಂಬೂಖಂಡವಿನಿರ್ಮಾಣಪರ್ವಣಿ ಸುದರ್ಶನದ್ವೀಪವರ್ಣನೇ ಷಷ್ಠೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಜಂಬೂಖಂಡವಿನಿರ್ಮಾಣಪರ್ವದಲ್ಲಿ ಸುದರ್ಶನದ್ವೀಪವರ್ಣನ ಎನ್ನುವ ಆರನೇ ಅಧ್ಯಾಯವು.
-
ಈ ಅಧ್ಯಾಯದ ವಿಷಯವನ್ನು ಸಾಧಾರಣ ಇಲ್ಲಿ ಇದ್ದಂತೆಯೇ ಪದ್ಮ ಮಹಾ ಪುರಾಣದ ಆದಿಖಂಡದ ೩ನೆಯ ಅಧ್ಯಾಯದಲ್ಲಿಯೂ ಬರುತ್ತದೆ. (ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲಾ, ನಂ. 16, ಪದ್ಮ ಮಹಾ ಪುರಾಣಂ - ಸಂಸ್ಕೃತದಲ್ಲಿ ಮೂಲ, ಕನ್ನಡ ಅರ್ಥಾನುವಾದ, ಆದಿಖಂಡ, ಅನುವಾದಕರು - ಬೇಲದ ಕೆರೆ ಸೂರ್ಯನಾರಾಯಣ ಶಾಸ್ತ್ರಿ, ಮೈಸೂರು, ಬೆಂಗಳೂರು ಪ್ರೆಸ್ ಬ್ರಾಂಚ್, 1944). ↩︎
-
ಭೂಮಿಯಿಂದ ಪ್ರಾರಂಭಿಸಿ ಇವುಗಳಲ್ಲಿ ಮೊದಲನೆಯದು ಎರಡನೆಯದಕ್ಕಿಂತ, ಎರಡನೆಯದು ಮೂರನೆಯದಕ್ಕಿಂತ, ಮೂರನೆಯದು ನಾಲ್ಕನೆಯದಕ್ಕಿಂತ ಮತ್ತು ನಾಲ್ಕನೆಯದು ಐದನೆಯದಕ್ಕಿಂತ ಹೆಚ್ಚು ಗುಣವುಳ್ಳದ್ದಾಗಿರುತ್ತದೆ. ಇದನ್ನು ಹೀಗೂ ವಿವರಿಸಬಹುದು - ಆಕಾಶಾದ್ವಾಯುಃ; ವಾಯೋರಗ್ನಿಃ; ಅಗ್ನೇರಾಪಃ; ಅದ್ಭೈಃ ಪೃಥಿವೀ। ಎಂಬುದು ಶ್ರುತಿವಚನ. ಆಕಾಶದಿಂದ ವಾಯುವಿನ ಉತ್ಪತ್ತಿಯಾಗುತ್ತದೆ. ಆಕಾಶಕ್ಕೆ ಒಂದು ಗುಣವಿದ್ದರೆ ವಾಯುವಿಗೆ ಎರಡು ಗುಣಗಳಿವೆ. ಹೀಗೆ ಭೂಮಿಯಲ್ಲಿ ಐದು ಗುಣಗಳಿವೆ. ಆದುದರಿಂದ ಭೂಮಿಯೇ ಅಧಿಕವು. ↩︎
-
ಆಕಾಶವನ್ನು ವಾಯುವಿನಿಂದ ಪ್ರತ್ಯೇಕಿಸಬಹುದು. ಆದರೆ ವಾಯುವನ್ನು ಆಕಾಶದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ವಾಯುವು ಆಕಾಶಜನ್ಮವಾದುದು. ವಾಯುವು ಆಕಾಶದ ಗುಣವನ್ನು ಹೊಂದಿರುತ್ತದೆ. ಜೊತೆಗೆ ತನ್ನದೇ ಗುಣವನ್ನೂ ಹೊಂದಿರುತ್ತದೆ. ↩︎
-
ಮಹಾಭೂತೇಷು ಪಂಚಭೂತ್ಮಕೇಷು ಸರ್ವೇಷು ಲೋಕೇಷು ಭೋಗ್ಯ ವಸ್ತುಷು ಶರೀರಾದಿ ಘಟಾಂತೇಷು ಏತೇ ಪಂಚಗುಣಾಃ ಸಂತಿ। ಪಂಚಭೂತಾತ್ಮಕವಾದ ಸರ್ವಲೋಕಗಳಲ್ಲಿಯೂ, ಘಟಾಂತವಾದ ಶರೀರಾದಿ ಭೋಗ್ಯ ವಸ್ತುಗಳಲ್ಲಿಯೂ ಈ ಐದು ಗುಣಗಳಿವೆ. ಏತೇ ಕೇ? ಇವುಗಳು ಯಾವುವು? ಯೇಷು ಗುಣೇಷು ಭೋಕ್ತಾರೋ ಭೂತಾಃ ನಿತ್ಯನಿರ್ವೃತ್ತಾಶ್ಚೇತನಾಃ ಪುರುಷಾಃ ಪ್ರತಿಷ್ಠಿತಾಃ। ಈ ಗುಣಗಳಲ್ಲಿಯೇ ಇರುವವುಗಳ ಭೋಕ್ತಾರ ಪುರುಷನು ಚೇತನನಾಗಿ ನಿತ್ಯ ನಿವೃತ್ತನಾಗಿ ಪ್ರತಿಷ್ಠಿತನಾಗಿರುತ್ತಾನೆ. ದೇಹೇಂದ್ರಿಯಾದೀನ್ ಭೋಗ್ಯಾನಧಿಷ್ಠಾಯ ಚೇತನಾಃ ಶಬ್ಧಾದೀನಿ ಭೋಗ್ಯಂತರಾಣಿ ಭುಂಜತೇ। ಭೋಗ್ಯವಸ್ತುಗಳಾದ ದೇಹೇಂದ್ರಿಯಗಳಲ್ಲಿ ನೆಲೆಸಿರುವ ಚೇತನಗಳು ಭೋಗ್ಯಗಗಳನ್ನು ಭೋಗಿಸುತ್ತವೆ. ದೇಹಾದೀನಾಮಪಿ ಭೋಗೋಪಕರಣತ್ವಾತ್ ಭೋಗ್ಯತ್ವಮೇವ ನ ಭೋಕ್ತತ್ವಂ।। ದೇಹಗಳೂ ಭೋಗಕ್ಕೆ ಉಪಕರಣಗಳಾದುದರಿಂದ ಭೋಗ್ಯವಸ್ತುಗಳೇ. ಪಂಚಭೂತಗಳ ಭೋಕ್ತೃವೇ ಚೇತನ. ↩︎
-
ಸಮಸ್ಯ ಭಾವಃ ಸಾಮ್ಯಂ ಬ್ರಹ್ಮಭಾವಃ। ಸರ್ವಸಮತ್ವದ ಭಾವವೇ ಬ್ರಹ್ಮಭಾವ. ಸಮ ಆತ್ಮೇತಿ ವಿದ್ಯಾತ್। ನಿರ್ದೋಷಂ ಹಿ ಸಮಃ ಬ್ರಹ್ಮ। ಭೋಕ್ತೃ ಭೋಗ್ಯಯೋರ್ಯದಾ ಸುಷುಪ್ತಿಪ್ರಲಯಸಮಾಧಿಮೋಕ್ಷೇಷು ಬ್ರಹ್ಮಭಾವೋ ಭವತಿ ತದಾ ತೇ ಉಭೇ ಅನ್ಯೋನ್ಯಂ ನಾಭಿವರ್ತಂತೇ।। ಭೋಕ್ತೃ ಮತ್ತು ಭೋಗ್ಯಗಳಿಗೆ ಅಂದರೆ ಪಂಚಭೂತಾತ್ಮಕವಾದ ಶರೀರ ವುತ್ತು ಚೇತನಗಳಿಗೆ ಯಾವಾಗ ಸುಷುಪ್ತಿ-ಪ್ರಲಯ-ಸಮಾಧಿ-ಮೋಕ್ಷಗಳ ಬ್ರಹ್ಮಭಾವವು ಬರುತ್ತದೆಯೋ ಆಗ ಅವುಗಳ ನಡುವೆ ಭೋಗ್ಯ-ಭೋಕ್ತೃಗಳ ಸಂಬಂಧವಿರುವುದಿಲ್ಲ. ವ್ಯವಹಾರತೋ ವಿದ್ಯಮಾನಪಿ ಭೋಗ್ಯಂ ಭೋಕ್ತಾರಂ ನೋಪಸರ್ಪತಿ। ವ್ಯವಹಾರಿಕವಾಗಿ ಚೇತನವು ಶರೀರದಲ್ಲಿ ನೆಲೆಸಿಕೊಂಡಿದ್ದರೂ ಭೋಗ್ಯಗಳು (ವಿಷಯೇಂದ್ರಿಯಗಳು) ಚೇತನದ ಸಮೀಪ ಸರಿಯುವುದಿಲ್ಲ. ನಾಪಿಭೋಕ್ತಾಽಲುಪ್ತದೃಗಪಿ ಭೋಗಾಯ ತನಸ್ಯ ದೇಹೇಂದ್ರಿಯಾದೇರಭಾವಾತ್ ಭೋಗ್ಯಜಾತಮುಪಸರ್ಪತೀತ್ಯರ್ಥಃ।। ಶರೀರಕ್ಕೆ ಕಣ್ಣುಗಳಿದ್ದರೂ ಕೂಡ ಸಮಾಧಿಸ್ಥಿತಿಯಲ್ಲಿ ದೇಹೇಂದ್ರಿಯಗಳ ಅಭಾವವಿರುವುದರಿಂದ ಚೇತನವು ಭೋಗ್ಯವಸ್ತುಗಳ ಕಡೆ ಹೋಗುವುದಿಲ್ಲ. ಸರ್ವಃ ಖಲ್ವಿದಂ ಬ್ರಹ್ಮ ಎಂಬಂತೆ ಇಂದ್ರಿಯ ಸಹಿತವಾದ ಶರೀರವೂ ಬ್ರಹ್ಮವಾಗಿಬಿಡುತ್ತದೆ. ಭೋಜ್ಯ-ಭೋಕ್ತೃಗಳ ವ್ಯತ್ಯಾಸವೇ ಇರುವುದಿಲ್ಲ. ↩︎
-
ಪೃಥ್ವಿಯು ಜಲದಲ್ಲಿ, ಜಲವು ತೇಜಸ್ಸಿನಲ್ಲಿ, ತೇಜಸ್ಸು ವಾಯುವಿನಲ್ಲಿ ಮತ್ತು ವಾಯುವು ಆಕಾಶದಲ್ಲಿ. ↩︎
-
ಬ್ರಹ್ಮ (ಈಶ್ವರ) ನಿಂದ ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ತೇಜಸ್ಸು, ತೇಜಸ್ಸಿನಿಂದ ಜಲ, ಜಲದಿಂದ ಭೂಮಿ. ↩︎
-
ಸಿದ್ಧಾ ಅಪಿ ಯತ್ರ ಬ್ರಹ್ಮಾಂಡಂ ಭಿತ್ವಾ ಗಚ್ಛಂತಿ ತತ್ರಾಪಿ ವಾಸನಾಮಯಧಾತವೋ ವ್ಯಕ್ತಯಃ ಪಾಂಚಭೌತಿಕಾ ದೃಶ್ಯಂತೇ ಅತಃ ಅಪರಿಮೇಯಾ ಏವ ತೇ।। ಸಿದ್ಧ ಪುರುಷರು ಬ್ರಹ್ಮಾಂಡವನ್ನು ಭೇದಿಸಿಕೊಂಡು ಹೋದರೂ ಅಲ್ಲಿ ಕೂಡ ಪಂಚಭೂತಾತ್ಮಿಕ ವಾಸನಾಮಯ ಧಾತುಗಳು ಕಾಣುತ್ತವೆ. ಆದುದರಿಂದಲೇ ಅವರು ಪಂಚಭೂತಗಳು ಅಪರಿಮೇಯವೆಂದು ವರ್ಣಿಸಿದ್ದಾರೆ. ↩︎
-
ಭಾವಾಃ ಎನ್ನುವುದಕ್ಕೆ ವ್ಯಾಖ್ಯಾನಕಾರರು ಜಗಜ್ಜನ್ಮೋಪಾದನನಿಮಿತ್ತಪರಿಮಾಣಧರ್ಮಾಧರ್ಮಾದಯಃ। - ಜಗತ್ತು, ಜನ್ಮ, ಮೂಲಕಾರಣ, ನಿಮಿತ್ತ, ಪರಿಮಾಣ, ಧರ್ಮ ಮತ್ತು ಅಧರ್ಮಗಳು - ಎಂದು ಅರ್ಥಮಾಡಿರುತ್ತಾರೆ. ↩︎
-
ಸುದರ್ಶನೋ ನಾಮ ಜಂಬೂವೃಕ್ಷವಿಶೇಷಃ ತನ್ನಾಮಾಂಕಿತೋಽಯಂ ದ್ವೀಪಃ - ಒಂದು ಜಾತಿಯ ಜಂಬೂವೃಕ್ಷಕ್ಕೆ ಸುದರ್ಶನ ಎಂದು ಹೆಸರು. ಈ ಹೆಸರಿನ ದ್ವೀಪ ಎಂದು ವಾಖ್ಯಾನಕಾರರು ಅರ್ಥಮಾಡಿರುತ್ತಾರೆ. ↩︎