ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 192
ಸಾರ
ಶೋಕಪರಾಯಣರಾದ ತಂದೆ-ತಾಯಿಯರು ದೈವದ ಮೊರೆಹೊಗಲು ಶಿಖಂಡಿಯು ದುಃಖಿತಳಾಗಿ ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಜನ ಗಹನ ವನಕ್ಕೆ ಹೋದುದು (1-19). ಆ ಪ್ರದೇಶವನ್ನು ಪಾಲಿಸುತ್ತಿದ್ದ ಸ್ಥೂಲಕರ್ಣನೆಂಬ ಯಕ್ಷನು ಶಿಖಂಡಿಯನ್ನು ಕೇಳಲು ಅವಳು ನಡೆದುದೆಲ್ಲವನ್ನೂ ಹೇಳಿದುದು (20-30).
05192001 ಭೀಷ್ಮ ಉವಾಚ।
05192001a ತತಃ ಶಿಖಂಡಿನೋ ಮಾತಾ ಯಥಾತತ್ತ್ವಂ ನರಾಧಿಪ।
05192001c ಆಚಚಕ್ಷೇ ಮಹಾಬಾಹೋ ಭರ್ತ್ರೇ ಕನ್ಯಾಂ ಶಿಖಂಡಿನೀಂ।।
ಭೀಷ್ಮನು ಹೇಳಿದನು: “ಮಹಾಬಾಹೋ! ಆಗ ಶಿಖಂಡಿನಿಯ ಮಾತೆಯು ಕನ್ಯೆ ಶಿಖಂಡಿನಿಯ ಕುರಿತು ಇದ್ದಹಾಗೆ ನರಾಧಿಪ ಪತಿಗೆ ಹೇಳಿದಳು:
05192002a ಅಪುತ್ರಯಾ ಮಯಾ ರಾಜನ್ಸಪತ್ನೀನಾಂ ಭಯಾದಿದಂ।
05192002c ಕನ್ಯಾ ಶಿಖಂಡಿನೀ ಜಾತಾ ಪುರುಷೋ ವೈ ನಿವೇದಿತಃ।।
“ರಾಜನ್! ಪುತ್ರನಿಲ್ಲದಿರುವ ನಾನು ಸವತಿಯರ ಭಯದಿಂದ ಕನ್ಯೆ ಶಿಖಂಡಿನಿಯು ಗಂಡೆಂದು ಅವಳು ಹುಟ್ಟಿದಾಗಿನಿಂದ ಹೇಳಿಕೊಂಡು ಬಂದಿದ್ದೇನೆ.
05192003a ತ್ವಯಾ ಚೈವ ನರಶ್ರೇಷ್ಠ ತನ್ಮೇ ಪ್ರೀತ್ಯಾನುಮೋದಿತಂ।
05192003c ಪುತ್ರಕರ್ಮ ಕೃತಂ ಚೈವ ಕನ್ಯಾಯಾಃ ಪಾರ್ಥಿವರ್ಷಭ।
05192003e ಭಾರ್ಯಾ ಚೋಢಾ ತ್ವಯಾ ರಾಜನ್ದಶಾರ್ಣಾಧಿಪತೇಃ ಸುತಾ।।
ನರಶ್ರೇಷ್ಠ! ಪಾರ್ಥಿವರ್ಷಭ! ನೀನು ನನ್ನ ಮೇಲಿನ ಪ್ರೀತಿಯಿಂದ ಈ ಕನ್ಯೆಗೆ ಪುತ್ರನಿಗಾಗಬೇಕಾದ ಕರ್ಮಗಳನ್ನು ಮಾಡಿದೆ. ರಾಜನ್! ದಶಾರ್ಣಾಧಿಪತಿಯ ಮಗಳನ್ನು ಅವನಿಗೆ ಪತ್ನಿಯನ್ನಾಗಿ ಮಾಡಿದೆ.
05192004a ತ್ವಯಾ ಚ ಪ್ರಾಗಭಿಹಿತಂ ದೇವವಾಕ್ಯಾರ್ಥದರ್ಶನಾತ್।
05192004c ಕನ್ಯಾ ಭೂತ್ವಾ ಪುಮಾನ್ಭಾವೀತ್ಯೇವಂ ಚೈತದುಪೇಕ್ಷಿತಂ।।
ಇವಳು ಕನ್ಯೆಯಾಗಿ ನಂತರ ಗಂಡಾಗುತ್ತಾಳೆಂದು ಹಿಂದೆ ದೇವವಾಕ್ಯವು ಹೇಳಿದುದರಿಂದ ಇದನ್ನು ನೀನು ಉಪೇಕ್ಷಿಸಿದೆ.”
05192005a ಏತಚ್ಚ್ರುತ್ವಾ ದ್ರುಪದೋ ಯಜ್ಞಾಸೇನಃ ಸರ್ವಂ ತತ್ತ್ವಂ ಮಂತ್ರವಿದ್ಭ್ಯೋ ನಿವೇದ್ಯ।
05192005c ಮಂತ್ರಂ ರಾಜಾ ಮಂತ್ರಯಾಮಾಸ ರಾಜನ್ ಯದ್ಯದ್ಯುಕ್ತಂ ರಕ್ಷಣೇ ವೈ ಪ್ರಜಾನಾಂ।।
ಇದನ್ನು ಕೇಳಿ ಯಜ್ಞಸೇನ ದ್ರುಪದನು ಎಲ್ಲ ಸತ್ಯವನ್ನೂ ತನ್ನ ಮಂತ್ರಿಗಳಿಗೆ ನಿವೇದಿಸಿದನು. ರಾಜನ್! ಆಗ ರಾಜನು ಮಂತ್ರಿಗಳೊಂದಿಗೆ ಪ್ರಜೆಗಳ ರಕ್ಷಣೆಗೆ ಏನು ಮಾಡಬೇಕೆಂದು ಮಂತ್ರಾಲೋಚನೆ ಮಾಡಿದನು.
05192006a ಸಂಬಂಧಕಂ ಚೈವ ಸಮರ್ಥ್ಯ ತಸ್ಮಿನ್ ದಾಶಾರ್ಣಕೇ ವೈ ನೃಪತೌ ನರೇಂದ್ರ।
05192006c ಸ್ವಯಂ ಕೃತ್ವಾ ವಿಪ್ರಲಂಭಂ ಯಥಾವನ್ ಮಂತ್ರೈಕಾಗ್ರೋ ನಿಶ್ಚಯಂ ವೈ ಜಗಾಮ।।
ನರೇಂದ್ರ! ದಾಶಾರ್ಣಕನೊಂದಿಗೆ ಇನ್ನೂ ಸಂಬಂಧವಿದೆ ಎಂದು ತಿಳಿದು ತಾನೇ ಮೋಸವನ್ನು ಮಾಡಿದ್ದೇನೆಂದು ಸ್ವೀಕರಿಸಿ ಮಂತ್ರಿಗಳೊಂದಿಗೆ ಒಂದು ನಿಶ್ಚಯಕ್ಕೆ ಬಂದನು.
05192007a ಸ್ವಭಾವಗುಪ್ತಂ ನಗರಮಾಪತ್ಕಾಲೇ ತು ಭಾರತ।
05192007c ಗೋಪಯಾಮಾಸ ರಾಜೇಂದ್ರ ಸರ್ವತಃ ಸಮಲಂಕೃತಂ।।
ಭಾರತ! ರಾಜೇಂದ್ರ! ಸ್ವಭಾವತಃ ಸುರಕ್ಷಿತವಾಗಿದ್ದ ನಗರವನ್ನು ಆಪತ್ಕಾಲದಲ್ಲಿ ಇನ್ನೂ ಹೆಚ್ಚಿನ ರಕ್ಷಣೆಯನ್ನು ಎಲ್ಲ ಕಡೆಯಲ್ಲಿ ಎಲ್ಲವನ್ನೂ ಮಾಡಿ ನೀಡಿದನು.
05192008a ಆರ್ತಿಂ ಚ ಪರಮಾಂ ರಾಜಾ ಜಗಾಮ ಸಹ ಭಾರ್ಯಯಾ।
05192008c ದಶಾರ್ಣಪತಿನಾ ಸಾರ್ಧಂ ವಿರೋಧೇ ಭರತರ್ಷಭ।।
ಭರತರ್ಷಭ! ದಶಾರ್ಣಪತಿಯೊಡನೆ ವಿರೋಧವನ್ನು ತಂದುಕೊಂಡು ರಾಜನು ಪತ್ನಿಯೊಂದಿಗೆ ಪರಮ ಆರ್ತನಾದನು.
05192009a ಕಥಂ ಸಂಬಂಧಿನಾ ಸಾರ್ಧಂ ನ ಮೇ ಸ್ಯಾದ್ವಿಗ್ರಹೋ ಮಹಾನ್।
05192009c ಇತಿ ಸಂಚಿಂತ್ಯ ಮನಸಾ ದೈವತಾನ್ಯರ್ಚಯತ್ತದಾ।।
“ಸಂಬಂಧಿಯೊಂದಿಗೆ ನಾನು ಹೇಗೆ ಈ ಮಹಾ ಯುದ್ಧವನ್ನು ಮಾಡಬಲ್ಲೆ?” ಎಂದು ಚಿಂತಿಸಿ ಮನಸ್ಸಿನಲ್ಲಿಯೇ ದೈವವನ್ನು ಅರ್ಚಿಸಿದನು.
05192010a ತಂ ತು ದೃಷ್ಟ್ವಾ ತದಾ ರಾಜನ್ದೇವೀ ದೇವಪರಂ ತಥಾ।
05192010c ಅರ್ಚಾಂ ಪ್ರಯುಂಜಾನಮಥೋ ಭಾರ್ಯಾ ವಚನಮಬ್ರವೀತ್।।
ರಾಜನ್! ಅವನು ದೇವಪರನಾಗಿದ್ದು ಅರ್ಚನೆಗಳನ್ನು ಮಾಡುತ್ತಿರುವುದನ್ನು ನೋಡಿ ದೇವಿ ಭಾರ್ಯೆಯು ಅವನಿಗೆ ಹೇಳಿದಳು.
05192011a ದೇವಾನಾಂ ಪ್ರತಿಪತ್ತಿಶ್ಚ ಸತ್ಯಾ ಸಾಧುಮತಾ ಸದಾ।
05192011c ಸಾ ತು ದುಃಖಾರ್ಣವಂ ಪ್ರಾಪ್ಯ ನಃ ಸ್ಯಾದರ್ಚಯತಾಂ ಭೃಶಂ।।
“ದೇವತೆಗಳಿಗೆ ಶರಣುಹೋಗುವುದನ್ನು ಸದಾ ಸತ್ಯವೆಂದು ಸಾಧುಗಳು ಅಭಿಪ್ರಾಯ ಪಡುತ್ತಾರೆ. ಅದರಲ್ಲೂ ನಾವು ದುಃಖದ ಸಾಗರವನ್ನು ಸೇರಿ ತುಂಬಾ ಅರ್ಚಿಸುತ್ತಿದ್ದೇವೆ.
05192012a ದೈವತಾನಿ ಚ ಸರ್ವಾಣಿ ಪೂಜ್ಯಂತಾಂ ಭೂರಿದಕ್ಷಿಣೈಃ।
05192012c ಅಗ್ನಯಶ್ಚಾಪಿ ಹೂಯಂತಾಂ ದಾಶಾರ್ಣಪ್ರತಿಷೇಧನೇ।।
ಭೂರಿದಕ್ಷಿಣೆಗಳನ್ನಿತ್ತು ಸರ್ವ ದೇವತೆಗಳ ಪೂಜೆಗಳು ನಡೆಯಲಿ. ದಾಶಾರ್ಣನನ್ನು ತಡೆಯಲು ಅಗ್ನಿಗಳಲ್ಲಿ ಹೋಮಗಳೂ ನಡೆಯಲಿ.
05192013a ಅಯುದ್ಧೇನ ನಿವೃತ್ತಿಂ ಚ ಮನಸಾ ಚಿಂತಯಾಭಿಭೋ।
05192013c ದೇವತಾನಾಂ ಪ್ರಸಾದೇನ ಸರ್ವಮೇತದ್ಭವಿಷ್ಯತಿ।।
ಸ್ವಾಮೀ! ಯುದ್ಧಮಾಡದೇ ಇವನನ್ನು ಹೇಗೆ ಹಿಂದೆ ಕಳುಹಿಸಬಹುದು ಎನ್ನುವುದರ ಕುರಿತು ಚಿಂತಿಸು. ದೇವತೆಗಳ ಪ್ರಸಾದದಿಂದ ಎಲ್ಲವೂ ಆಗುತ್ತದೆ.
05192014a ಮಂತ್ರಿಭಿರ್ಮಂತ್ರಿತಂ ಸಾರ್ಧಂ ತ್ವಯಾ ಯತ್ಪೃಥುಲೋಚನ।
05192014c ಪುರಸ್ಯಾಸ್ಯಾವಿನಾಶಾಯ ತಚ್ಚ ರಾಜಂಸ್ತಥಾ ಕುರು।।
ಪೃಥುಲೋಚನ! ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಿ ನಿರ್ಧರಿಸಿದಂತೆ ಪುರದ ಅವಿನಾಶಕ್ಕೆ ಏನು ಬೇಕೋ ಅದನ್ನು ಮಾಡು.
05192015a ದೈವಂ ಹಿ ಮಾನುಷೋಪೇತಂ ಭೃಶಂ ಸಿಧ್ಯತಿ ಪಾರ್ಥಿವ।
05192015c ಪರಸ್ಪರವಿರೋಧಾತ್ತು ನಾನಯೋಃ ಸಿದ್ಧಿರಸ್ತಿ ವೈ।।
ಪಾರ್ಥಿವ! ದೈವವು ನಿಶ್ಚಯಿಸಿದ್ದುದು ಮನುಷ್ಯನ ಪ್ರಯತ್ನದಿಂದ ಚೆನ್ನಾಗಿ ಸಿದ್ಧಿಯಾಗುತ್ತದೆ. ಪರಸ್ಪರ ವಿರೋಧವಾಗಿದ್ದರೆ ಯಾವುದೂ ಸಿದ್ಧಿಯಾಗುವುದಿಲ್ಲ.
05192016a ತಸ್ಮಾದ್ವಿಧಾಯ ನಗರೇ ವಿಧಾನಂ ಸಚಿವೈಃ ಸಹ।
05192016c ಅರ್ಚಯಸ್ವ ಯಥಾಕಾಮಂ ದೈವತಾನಿ ವಿಶಾಂ ಪತೇ।।
ವಿಶಾಂಪತೇ! ಆದುದರಿಂದ ಸಚಿವರೊಂದಿಗೆ ನಗರಕ್ಕೆ ಬೇಕಾದುದನ್ನು ಮಾಡು. ಇಷ್ಟವಾದಂತೆ ದೇವತೆಗಳ ಅರ್ಚನೆಯನ್ನೂ ಮಾಡು.”
05192017a ಏವಂ ಸಂಭಾಷಮಾಣೌ ತೌ ದೃಷ್ಟ್ವಾ ಶೋಕಪರಾಯಣೌ।
05192017c ಶಿಖಂಡಿನೀ ತದಾ ಕನ್ಯಾ ವ್ರೀಡಿತೇವ ಮನಸ್ವಿನೀ।।
ಅವರಿಬ್ಬರೂ ಶೋಕಪರಾಯಣರಾಗಿ ಹೀಗೆ ಮಾತನಾಡಿಕೊಳ್ಳುತ್ತಿರುವುದನ್ನು ನೋಡಿ ಆ ಮನಸ್ವಿನೀ ಕನ್ಯೆ ಶಿಖಂಡಿನಿಯು ನಾಚಿಕೊಂಡಳು.
05192018a ತತಃ ಸಾ ಚಿಂತಯಾಮಾಸ ಮತ್ಕೃತೇ ದುಃಖಿತಾವುಭೌ।
05192018c ಇಮಾವಿತಿ ತತಶ್ಚಕ್ರೇ ಮತಿಂ ಪ್ರಾಣವಿನಾಶನೇ।।
“ನನ್ನಿಂದಾಗಿ ಇವರಿಬ್ಬರೂ ದುಃಖಿತರಾಗಿದ್ದಾರೆ!” ಎಂದು ಅವಳು ಚಿಂತಿಸಿದಳು. ಹೀಗೆ ಯೋಚಿಸಿ ಅವಳು ಪ್ರಾಣವನ್ನು ಕಳೆದುಕೊಳ್ಳಲು ನಿಶ್ಚಯಿಸಿದಳು.
05192019a ಏವಂ ಸಾ ನಿಶ್ಚಯಂ ಕೃತ್ವಾ ಭೃಶಂ ಶೋಕಪರಾಯಣಾ।
05192019c ಜಗಾಮ ಭವನಂ ತ್ಯಕ್ತ್ವಾ ಗಹನಂ ನಿರ್ಜನಂ ವನಂ।।
ತುಂಬಾ ಶೋಕಪರಾಯಣಳಾದ ಅವಳು ಹೀಗೆ ನಿಶ್ಚಯಿಸಿ ಭವನವನ್ನು ತೊರೆದು ಗಹನ ನಿರ್ಜನ ವನಕ್ಕೆ ತೆರಳಿದಳು.
05192020a ಯಕ್ಷೇಣರ್ದ್ಧಿಮತಾ ರಾಜನ್ ಸ್ಥೂಣಾಕರ್ಣೇನ ಪಾಲಿತಂ।
05192020c ತದ್ಭಯಾದೇವ ಚ ಜನೋ ವಿಸರ್ಜಯತಿ ತದ್ವನಂ।।
ರಾಜನ್! ಆ ಸ್ಥಳವನ್ನು ಯಕ್ಷ ಸ್ಥೂಣಾಕರ್ಣನು ಪಾಲಿಸುತ್ತಿದ್ದನು. ಅವನ ಭಯದಿಂದ ಜನರು ಆ ವನವನ್ನು ವಿಸರ್ಜಿಸಿದ್ದರು.
05192021a ತತ್ರ ಸ್ಥೂಣಸ್ಯ ಭವನಂ ಸುಧಾಮೃತ್ತಿಕಲೇಪನಂ।
05192021c ಲಾಜೋಲ್ಲಾಪಿಕಧೂಮಾಢ್ಯಮುಚ್ಚಪ್ರಾಕಾರತೋರಣಂ।।
ಸ್ಥೂಣನು ಅಲ್ಲಿ ಲಾಜದ ಹೊಗೆಯಿಂದ ಕೂಡಿದ, ಎತ್ತರ ಗೋಡೆಗಳು ಮತ್ತು ತೋರಣಗಳಿದ್ದ, ಸುಣ್ಣವನ್ನು ಬಳಿದ ಇಟ್ಟಿಗೆಯ ಮನೆಯನ್ನು ಹೊಂದಿದ್ದನು.
05192022a ತತ್ಪ್ರವಿಶ್ಯ ಶಿಖಂಡೀ ಸಾ ದ್ರುಪದಸ್ಯಾತ್ಮಜಾ ನೃಪ।
05192022c ಅನಶ್ನತೀ ಬಹುತಿಥಂ ಶರೀರಮುಪಶೋಷಯತ್।।
ನೃಪ! ಅದನ್ನು ಪ್ರವೇಶಿಸಿ ದ್ರುಪದನ ಮಗಳು ಶಿಖಂಡಿನಿಯು ಬಹುದಿನಗಳು ಊಟಮಾಡದೇ ಶರೀರವನ್ನು ಒಣಗಿಸಿದಳು.
05192023a ದರ್ಶಯಾಮಾಸ ತಾಂ ಯಕ್ಷಃ ಸ್ಥೂಣೋ ಮಧ್ವಕ್ಷಸಮ್ಯುತಃ।
05192023c ಕಿಮರ್ಥೋಽಯಂ ತವಾರಂಭಃ ಕರಿಷ್ಯೇ ಬ್ರೂಹಿ ಮಾಚಿರಂ।।
ಜೇನಿನ ಬಣ್ಣದ ಕಣ್ಣುಗಳ ಯಕ್ಷ ಸ್ಥೂಣನು ಅವಳಿಗೆ ಕಾಣಿಸಿಕೊಂಡನು. “ಏನನ್ನು ಮಾಡಲು ಹೊರಟಿರುವೆ? ಬೇಗನೆ ಹೇಳು. ಅದನ್ನು ನಾನು ಮಾಡುತ್ತೇನೆ.
05192024a ಅಶಕ್ಯಮಿತಿ ಸಾ ಯಕ್ಷಂ ಪುನಃ ಪುನರುವಾಚ ಹ।
05192024c ಕರಿಷ್ಯಾಮೀತಿ ಚೈನಾಂ ಸ ಪ್ರತ್ಯುವಾಚಾಥ ಗುಹ್ಯಕಃ।।
ಅದು ಅಶಕ್ಯವೆಂದು ಅವಳು ಯಕ್ಷನಿಗೆ ಪುನಃ ಪುನಃ ಹೇಳಿದಳು. ಗುಹ್ಯಕನು ಅವಳಿಗೆ ಮಾಡುತ್ತೇನೆ ಎಂದು ಉತ್ತರಿಸಿದನು.
05192025a ಧನೇಶ್ವರಸ್ಯಾನುಚರೋ ವರದೋಽಸ್ಮಿ ನೃಪಾತ್ಮಜೇ।
05192025c ಅದೇಯಮಪಿ ದಾಸ್ಯಾಮಿ ಬ್ರೂಹಿ ಯತ್ತೇ ವಿವಕ್ಷಿತಂ।।
“ನೃಪಾತ್ಮಜೇ! ಧನೇಶ್ವರನ ಅನುಚರನು ನಾನು. ವರಗಳನ್ನು ನೀಡುತ್ತೇನೆ. ಕೊಡಲಾಗದಂತಿದ್ದರೂ ಕೊಡುತ್ತೇನೆ. ಏನನ್ನು ಹುಡುಕುತ್ತಿದ್ದೀಯೋ ಅದನ್ನು ಹೇಳು.”
05192026a ತತಃ ಶಿಖಂಡೀ ತತ್ಸರ್ವಮಖಿಲೇನ ನ್ಯವೇದಯತ್।
05192026c ತಸ್ಮೈ ಯಕ್ಷಪ್ರಧಾನಾಯ ಸ್ಥೂಣಾಕರ್ಣಾಯ ಭಾರತ।।
ಭಾರತ! ಆಗ ಶಿಖಂಡಿನಿಯು ಆ ಯಕ್ಷಪ್ರಧಾನ ಸ್ಥೂಣಾಕರ್ಣನಿಗೆ ಎಲ್ಲವನ್ನೂ ನಿವೇದಿಸಿದಳು.
05192027a ಆಪನ್ನೋ ಮೇ ಪಿತಾ ಯಕ್ಷ ನಚಿರಾದ್ವಿನಶಿಷ್ಯತಿ।
05192027c ಅಭಿಯಾಸ್ಯತಿ ಸಂಕ್ರುದ್ಧೋ ದಶಾರ್ಣಾಧಿಪತಿರ್ಹಿ ತಂ।।
“ಯಕ್ಷ! ನನ್ನ ತಂದೆಯು ತೊಂದರೆಯಲ್ಲಿದ್ದಾನೆ ಮತ್ತು ಬೇಗನೇ ವಿನಾಶ ಹೊಂದುತ್ತಾನೆ. ಸಂಕ್ರುದ್ಧನಾದ ದಶಾರ್ಣಾಧಿಪತಿಯು ಅವನ ಮೇಲೆ ಧಾಳಿಯಿಡುತ್ತಿದ್ದಾನೆ.
05192028a ಮಹಾಬಲೋ ಮಹೋತ್ಸಾಹಃ ಸ ಹೇಮಕವಚೋ ನೃಪಃ।
05192028c ತಸ್ಮಾದ್ರಕ್ಷಸ್ವ ಮಾಂ ಯಕ್ಷ ಪಿತರಂ ಮಾತರಂ ಚ ಮೇ।।
ಆ ನೃಪ ಹೇಮಕವಚನು ಮಹಾಬಲಶಾಲಿ ಮತ್ತು ಮಹೋತ್ಸಾಹೀ. ಆದುದರಿಂದ ಯಕ್ಷ! ನನ್ನನ್ನೂ, ನನ್ನ ಮಾತಾಪಿತೃಗಳನ್ನೂ ರಕ್ಷಿಸು.
05192029a ಪ್ರತಿಜ್ಞಾತೋ ಹಿ ಭವತಾ ದುಃಖಪ್ರತಿನಯೋ ಮಮ।
05192029c ಭವೇಯಂ ಪುರುಷೋ ಯಕ್ಷ ತ್ವತ್ಪ್ರಸಾದಾದನಿಂದಿತಃ।।
ನನ್ನ ದುಃಖವನ್ನು ಕಳೆಯುತ್ತೀಯೆಂದು ನೀನು ಪ್ರತಿಜ್ಞೆಯನ್ನು ಮಾಡಿರುವೆ. ಯಕ್ಷ! ನಿನ್ನ ಪ್ರಸಾದದಿಂದ ನಾನು ಅನಿಂದಿತ ಪುರುಷನಾಗಲಿ.
05192030a ಯಾವದೇವ ಸ ರಾಜಾ ವೈ ನೋಪಯಾತಿ ಪುರಂ ಮಮ।
05192030c ತಾವದೇವ ಮಹಾಯಕ್ಷ ಪ್ರಸಾದಂ ಕುರು ಗುಹ್ಯಕ।।
ಗುಹ್ಯಕ! ಮಹಾಯಕ್ಷ! ಆ ರಾಜನು ನನ್ನ ಪುರಕ್ಕೆ ಬರುವುದರೊಳಗೆ ನೀನು ನನ್ನ ಮೇಲೆ ಕರುಣೆಯನ್ನು ತೋರಿಸು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಸ್ಥೂಣಾಕರ್ಣಸಮಾಗಮೇ ದ್ವಿನವತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಸ್ಥೂಣಾಕರ್ಣಸಮಾಗಮದಲ್ಲಿ ನೂರಾತೊಂಭತ್ತೆರಡನೆಯ ಅಧ್ಯಾಯವು.