ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 185
ಸಾರ
ಪರಶುರಾಮ-ಭೀಷ್ಮರಿಬ್ಬರೂ ಬ್ರಹ್ಮಾಸ್ತ್ರವನ್ನು ಹೂಡಿದುದು (1-23).
05185001 ಭೀಷ್ಮ ಉವಾಚ।
05185001a ತತೋ ರಾತ್ರ್ಯಾಂ ವ್ಯತೀತಾಯಾಂ ಪ್ರತಿಬುದ್ಧೋಽಸ್ಮಿ ಭಾರತ।
05185001c ತಂ ಚ ಸಂಚಿಂತ್ಯ ವೈ ಸ್ವಪ್ನಮವಾಪಂ ಹರ್ಷಮುತ್ತಮಂ।।
ಭೀಷ್ಮನು ಹೇಳಿದನು: “ಭಾರತ! ರಾತ್ರಿಯು ಕಳೆದು ನಾನು ಎಚ್ಚೆತ್ತೆನು. ಕಂಡ ಸ್ವಪ್ನದ ಕುರಿತು ಯೋಚಿಸಿ ಉತ್ತಮ ಹರ್ಷವಾಯಿತು.
05185002a ತತಃ ಸಮಭವದ್ಯುದ್ಧಂ ಮಮ ತಸ್ಯ ಚ ಭಾರತ।
05185002c ತುಮುಲಂ ಸರ್ವಭೂತಾನಾಂ ಲೋಮಹರ್ಷಣಮದ್ಭುತಂ।।
ಭಾರತ! ಆಗ ಸರ್ವಭೂತಗಳ ರೋಮಹರ್ಷಣವನ್ನುಂಟುಮಾಡುವ ನನ್ನ ಮತ್ತು ಅವನ ಅದ್ಭುತ ತುಮುಲ ಯುದ್ಧವು ನಡೆಯಿತು.
05185003a ತತೋ ಬಾಣಮಯಂ ವರ್ಷಂ ವವರ್ಷ ಮಯಿ ಭಾರ್ಗವಃ।
05185003c ನ್ಯವಾರಯಮಹಂ ತಂ ಚ ಶರಜಾಲೇನ ಭಾರತ।।
ಆಗ ಭಾರ್ಗವನು ನನ್ನ ಮೇಲೆ ಬಾಣಮಯ ಮಳೆಯನ್ನು ಸುರಿಸಿದನು. ಭಾರತ! ನಾನು ಅದನ್ನು ಶರಜಾಲದಿಂದ ತಡೆದೆನು.
05185004a ತತಃ ಪರಮಸಂಕ್ರುದ್ಧಃ ಪುನರೇವ ಮಹಾತಪಾಃ।
05185004c ಹ್ಯಸ್ತನೇನೈವ ಕೋಪೇನ ಶಕ್ತಿಂ ವೈ ಪ್ರಾಹಿಣೋನ್ಮಯಿ।।
ಆಗ ಪರಮಸಂಕ್ರುದ್ಧನಾದ ಆ ಮಹಾತಪಸ್ವಿಯು ಪುನಃ ನನ್ನ ಮೇಲೆ ಶಕ್ತಿಯನ್ನು ಎಸೆದನು.
05185005a ಇಂದ್ರಾಶನಿಸಮಸ್ಪರ್ಶಾಂ ಯಮದಂಡೋಪಮಪ್ರಭಾಂ।
05185005c ಜ್ವಲಂತೀಮಗ್ನಿವತ್ಸಂಖ್ಯೇ ಲೇಲಿಹಾನಾಂ ಸಮಂತತಃ।।
ಇಂದ್ರನ ವಜ್ರದಂತೆ ಕಠಿನವಾಗಿದ್ದ, ಯಮದಂಡದಂತೆ ಪ್ರಭೆಯಿದ್ದ, ಅಗ್ನಿಯಂತೆ ಜ್ವಲಿಸುತ್ತಿದ್ದ ಅದು ರಣಭೂಮಿಯನ್ನು ಎಲ್ಲಕಡೆಯಿಂದಲೂ ಕಬಳಿಸುವಂತಿತ್ತು.
05185006a ತತೋ ಭರತಶಾರ್ದೂಲ ಧಿಷ್ಣ್ಯಮಾಕಾಶಗಂ ಯಥಾ।
05185006c ಸಾ ಮಾಮಭ್ಯಹನತ್ತೂರ್ಣಮಂಸದೇಶೇ ಚ ಭಾರತ।।
ಭರತಶಾರ್ದೂಲ! ಭಾರತ! ಆಗ ಅದು ಆಕಾಶದಲ್ಲಿ ಸಂಚರಿಸುವ ಮಿಂಚಿನಂತೆ ನನ್ನ ಭುಜದ ಮೇಲೆ ಬಿದ್ದಿತು.
05185007a ಅಥಾಸೃಂ ಮೇಽಸ್ರವದ್ಘೋರಂ ಗಿರೇರ್ಗೈರಿಕಧಾತುವತ್।
05185007c ರಾಮೇಣ ಸುಮಹಾಬಾಹೋ ಕ್ಷತಸ್ಯ ಕ್ಷತಜೇಕ್ಷಣ।।
ಸುಮಹಾಬಾಹೋ! ಕೆಂಪುಕಣ್ಣಿನವನೇ! ರಾಮನಿಂದ ಹೊಡೆಯಲ್ಪಟ್ಟ ಅದರ ಪ್ರಹಾರದಿಂದಾಗಿ ನನ್ನ ದೇಹದಿಂದ ಗಿರಿಯಿಂದ ಖನಿಜಗಳು ಸುರಿಯುವಂತೆ ಕೆಂಪು ರಕ್ತವು ಸುರಿಯಿತು.
05185008a ತತೋಽಹಂ ಜಾಮದಗ್ನ್ಯಾಯ ಭೃಶಂ ಕ್ರೋಧಸಮನ್ವಿತಃ।
05185008c ಪ್ರೇಷಯಂ ಮೃತ್ಯುಸಂಕಾಶಂ ಬಾಣಂ ಸರ್ಪವಿಷೋಪಮಂ।।
ಆಗ ನಾನು ಜಾಮದಗ್ನಿಯ ಮೇಲೆ ತುಂಬಾ ಕೋಪಗೊಂಡು ಸರ್ಪವಿಷೋಪಮ ಮೃತ್ಯುಸಂಕಾಶ ಬಾಣವನ್ನು ಕಳುಹಿಸಿದೆನು.
05185009a ಸ ತೇನಾಭಿಹತೋ ವೀರೋ ಲಲಾಟೇ ದ್ವಿಜಸತ್ತಮಃ।
05185009c ಅಶೋಭತ ಮಹಾರಾಜ ಸಶೃಂಗ ಇವ ಪರ್ವತಃ।।
ಮಹಾರಾಜ! ಅದು ಅವನ ಹಣೆಯನ್ನು ಹೊಡೆಯಲು ಆ ವೀರ ದ್ವಿಜಸತ್ತಮನು ಶೃಂಗವಿರುವ ಪರ್ವತದಂತೆ ಶೋಭಿಸಿದನು.
05185010a ಸ ಸಂರಬ್ಧಃ ಸಮಾವೃತ್ಯ ಬಾಣಂ ಕಾಲಾಂತಕೋಪಮಂ।
05185010c ಸಂದಧೇ ಬಲವತ್ಕೃಷ್ಯ ಘೋರಂ ಶತ್ರುನಿಬರ್ಹಣಂ।।
ಅವನು ಬಲವನ್ನುಪಯೋಗಿಸಿ ಅದನ್ನು ಕಿತ್ತೊಗೆದು ಕಾಲಾಂತಕನಂತಿರುವ ಘೋರ ಶತ್ರುನಿಬರ್ಹಣ ಬಾಣವನ್ನು ಬಲವಾಗಿ ಎಳೆದು ಹೂಡಿದನು.
05185011a ಸ ವಕ್ಷಸಿ ಪಪಾತೋಗ್ರಃ ಶರೋ ವ್ಯಾಲ ಇವ ಶ್ವಸನ್।
05185011c ಮಹೀಂ ರಾಜಂಸ್ತತಶ್ಚಾಹಮಗಚ್ಚಂ ರುಧಿರಾವಿಲಃ।।
ಹಾವಿನಂತೆ ಭುಸುಗುಟ್ಟುತ್ತ ಬಂದು ಅದು ನನ್ನ ಎದೆಯಮೇಲೆ ಬಿದ್ದಿತು. ರಾಜನ್! ಆಗ ನಾನು ರಕ್ತವನ್ನು ಕಾರುತ್ತಾ ಮೂರ್ಛೆಹೊಂದಿ ನೆಲದ ಮೇಲೆ ಬಿದ್ದೆನು.
05185012a ಅವಾಪ್ಯ ತು ಪುನಃ ಸಂಜ್ಞಾಂ ಜಾಮದಗ್ನ್ಯಾಯ ಧೀಮತೇ।
05185012c ಪ್ರಾಹಿಣ್ವಂ ವಿಮಲಾಂ ಶಕ್ತಿಂ ಜ್ವಲಂತೀಮಶನೀಮಿವ।।
ಪುನಃ ಎಚ್ಚೆತ್ತು ನಾನು ಧೀಮತ ಜಾಮದಗ್ನಿಯ ಮೇಲೆ ವಿಮಲ ಅಗ್ನಿಯಂತೆ ಉರಿಯುತ್ತಿದ್ದ ಶಕ್ತಿಯನ್ನು ಎಸೆದೆನು.
05185013a ಸಾ ತಸ್ಯ ದ್ವಿಜಮುಖ್ಯಸ್ಯ ನಿಪಪಾತ ಭುಜಾಂತರೇ।
05185013c ವಿಹ್ವಲಶ್ಚಾಭವದ್ರಾಜನ್ವೇಪಥುಶ್ಚೈನಮಾವಿಶತ್।।
ರಾಜನ್! ಅದು ಆ ದ್ವಿಜಮುಖ್ಯನ ಎದೆಯ ಮೇಲೆ ಬಿದ್ದಿತು. ವಿಹ್ವಲನಾದ ಅವನು ನಡುಗಿದನು.
05185014a ತತ ಏನಂ ಪರಿಷ್ವಜ್ಯ ಸಖಾ ವಿಪ್ರೋ ಮಹಾತಪಾಃ।
05185014c ಅಕೃತವ್ರಣಃ ಶುಭೈರ್ವಾಕ್ಯೈರಾಶ್ವಾಸಯದನೇಕಧಾ।।
ಆಗ ಅವನ ಸಖ, ವಿಪ್ರ, ಮಹಾತಪಸ್ವಿ ಅಕೃತವ್ರಣನು ಅವನನ್ನು ಅಪ್ಪಿಕೊಂಡು ಶುಭವಾಕ್ಯಗಳಿಂದ ಆಶ್ವಾಸನೆಗಳನ್ನಿತ್ತನು.
05185015a ಸಮಾಶ್ವಸ್ತಸ್ತದಾ ರಾಮಃ ಕ್ರೋಧಾಮರ್ಷಸಮನ್ವಿತಃ।
05185015c ಪ್ರಾದುಶ್ಚಕ್ರೇ ತದಾ ಬ್ರಾಹ್ಮಂ ಪರಮಾಸ್ತ್ರಂ ಮಹಾವ್ರತಃ।।
ಆಗ ಕ್ರೋಧಾಮರ್ಷಸಮನ್ವಿತನಾದ ಮಹಾವ್ರತ ರಾಮನು ಪರಮಾಸ್ತ್ರ ಬ್ರಹ್ಮವನ್ನು ಪ್ರಯೋಗಿಸತೊಡಗಿದನು.
05185016a ತತಸ್ತತ್ಪ್ರತಿಘಾತಾರ್ಥಂ ಬ್ರಾಹ್ಮಮೇವಾಸ್ತ್ರಮುತ್ತಮಂ।
05185016c ಮಯಾ ಪ್ರಯುಕ್ತಂ ಜಜ್ವಾಲ ಯುಗಾಂತಮಿವ ದರ್ಶಯತ್।।
ಅದನ್ನು ಎದುರಿಸಲು ನಾನೂ ಕೂಡ ಆ ಉತ್ತಮ ಬ್ರಹ್ಮಾಸ್ತ್ರವನ್ನು ಹೂಡಿದೆನು. ಅದು ಯುಗಾಂತದ ಜ್ವಾಲೆಗಳಂತೆ ತೋರಿತು.
05185017a ತಯೋರ್ಬ್ರಹ್ಮಾಸ್ತ್ರಯೋರಾಸೀದಂತರಾ ವೈ ಸಮಾಗಮಃ।
05185017c ಅಸಂಪ್ರಾಪ್ಯೈವ ರಾಮಂ ಚ ಮಾಂ ಚ ಭಾರತಸತ್ತಮ।।
ಭರತಸತ್ತಮ! ನನ್ನನ್ನಾಗಲೀ ರಾಮನನ್ನಾಗಲೀ ತಾಗಲು ಅಸಮರ್ಥರಾಗಿ ಆ ಎರಡು ಬ್ರಹ್ಮಾಸ್ತ್ರಗಳು ಮಧ್ಯದಲ್ಲಿಯೇ ಕೂಡಿದವು.
05185018a ತತೋ ವ್ಯೋಮ್ನಿ ಪ್ರಾದುರಭೂತ್ತೇಜ ಏವ ಹಿ ಕೇವಲಂ।
05185018c ಭೂತಾನಿ ಚೈವ ಸರ್ವಾಣಿ ಜಗ್ಮುರಾರ್ತಿಂ ವಿಶಾಂ ಪತೇ।।
ಆಗ ಇಡೀ ಆಕಾಶವೇ ಹತ್ತಿ ಉರಿಯುತ್ತಿರುವಂತೆ ತೋರಿತು. ವಿಶಾಂಪತೇ! ಎಲ್ಲ ಭೂತಗಳೂ ಆರ್ತರಾದರು.
05185019a ಋಷಯಶ್ಚ ಸಗಂಧರ್ವಾ ದೇವತಾಶ್ಚೈವ ಭಾರತ।
05185019c ಸಂತಾಪಂ ಪರಮಂ ಜಗ್ಮುರಸ್ತ್ರತೇಜೋಭಿಪೀಡಿತಾಃ।।
ಭಾರತ! ಅಸ್ತ್ರತೇಜದಿಂದ ಪೀಡಿತರಾದ ಋಷಿಗಳು, ಗಂಧರ್ವರು ಮತ್ತು ದೇವತೆಗಳು ಕೂಡ ಪರಮ ಸಂತಾಪವನ್ನು ಹೊಂದಿದರು.
05185020a ತತಶ್ಚಚಾಲ ಪೃಥಿವೀ ಸಪರ್ವತವನದ್ರುಮಾ।
05185020c ಸಂತಪ್ತಾನಿ ಚ ಭೂತಾನಿ ವಿಷಾದಂ ಜಗ್ಮುರುತ್ತಮಂ।।
ಆಗ ಪರ್ವತ-ವನ-ವೃಕ್ಷಗಳಿಂದ ಕೂಡಿದ ಭೂಮಿಯು ನಡುಗಿತು. ಸಂತಪ್ತರಾದ ಭೂತಗಳು ಉತ್ತಮ ವಿಷಾದವನ್ನೂ ಹೊಂದಿದವು.
05185021a ಪ್ರಜಜ್ವಾಲ ನಭೋ ರಾಜನ್ಧೂಮಾಯಂತೇ ದಿಶೋ ದಶ।
05185021c ನ ಸ್ಥಾತುಮಂತರಿಕ್ಷೇ ಚ ಶೇಕುರಾಕಾಶಗಾಸ್ತದಾ।।
ರಾಜನ್! ದಶ ದಿಕ್ಕುಗಳಲ್ಲಿ ಹೊಗೆಯು ತುಂಬಿ ಆಕಾಶವು ಹತ್ತಿ ಉರಿಯತೊಡಗಿತು. ಆಕಾಶಗಾಮಿಗಳು ಆಕಾಶದಲ್ಲಿ ನಿಲ್ಲದಂತಾದರು.
05185022a ತತೋ ಹಾಹಾಕೃತೇ ಲೋಕೇ ಸದೇವಾಸುರರಾಕ್ಷಸೇ।
05185022c ಇದಮಂತರಮಿತ್ಯೇವ ಯೋಕ್ತುಕಾಮೋಽಸ್ಮಿ ಭಾರತ।।
05185023a ಪ್ರಸ್ವಾಪಮಸ್ತ್ರಂ ದಯಿತಂ ವಚನಾದ್ಬ್ರಹ್ಮವಾದಿನಾಂ।
05185023c ಚಿಂತಿತಂ ಚ ತದಸ್ತ್ರಂ ಮೇ ಮನಸಿ ಪ್ರತ್ಯಭಾತ್ತದಾ।।
ಭಾರತ! ಆಗ ದೇವಾಸುರರಾಕ್ಷಸರಿಂದ ಕೂಡಿದ ಲೋಕಗಳು ಹಾಹಾಕಾರ ಮಾಡುತ್ತಿರಲು ಇದೇ ಸಮಯವೆಂದು ಬ್ರಹ್ಮವಾದಿಗಳು ಹೇಳಿದ ಪ್ರಿಯವಾದ ಪ್ರಸ್ವಾಪ ಅಸ್ತ್ರವನ್ನು ಹೂಡಲು ಬಯಸಿದೆನು. ಹೀಗೆ ಯೋಚಿಸಲು ಆ ಅಸ್ತ್ರವೂ ಕೂಡ ನನ್ನ ಮನಸ್ಸಿನಲ್ಲಿ ಹೊಳೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಪರಸ್ಪರಬ್ರಹ್ಮಾಸ್ತ್ರಪ್ರಯೋಗೇ ಪಂಚಾಶೀತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಪರಸ್ಪರಬ್ರಹ್ಮಾಸ್ತ್ರಪ್ರಯೋಗದಲ್ಲಿ ನೂರಾಎಂಭತ್ತೈದನೆಯ ಅಧ್ಯಾಯವು.