ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 184
ಸಾರ
ಒಂದು ರಾತ್ರಿ ವಸುಗಳು ಕನಸಿನಲ್ಲಿ ಬಂದು ಭೀಷ್ಮನಿಗೆ ಪ್ರಸ್ವಾಪವೆಂಬ ಅಸ್ತ್ರವನ್ನು ಬಳಸೆಂದು ಸೂಚಿಸಿದುದು (1-18).
05184001 ಭೀಷ್ಮ ಉವಾಚ।
05184001a ತತೋಽಹಂ ನಿಶಿ ರಾಜೇಂದ್ರ ಪ್ರಣಮ್ಯ ಶಿರಸಾ ತದಾ।
05184001c ಬ್ರಾಹ್ಮಣಾನಾಂ ಪಿತೄಣಾಂ ಚ ದೇವತಾನಾಂ ಚ ಸರ್ವಶಃ।।
05184002a ನಕ್ತಂಚರಾಣಾಂ ಭೂತಾನಾಂ ರಜನ್ಯಾಶ್ಚ ವಿಶಾಂ ಪತೇ।
05184002c ಶಯನಂ ಪ್ರಾಪ್ಯ ರಹಿತೇ ಮನಸಾ ಸಮಚಿಂತಯಂ।।
ಭೀಷ್ಮನು ಹೇಳಿದನು: “ರಾಜೇಂದ್ರ! ವಿಶಾಂಪತೇ! ಆ ರಾತ್ರಿ ನಾನು ಬ್ರಾಹ್ಮಣರಿಗೆ, ಪಿತೃಗಳಿಗೆ, ದೇವತೆಗಳೆಲ್ಲರಿಗೂ, ರಾತ್ರಿ ಸಂಚರಿಸುವ ಎಲ್ಲ ಭೂತಗಳಿಗೂ, ರಾತ್ರಿಗೂ ತಲೆಬಾಗಿ ನಮಸ್ಕರಿಸಿ, ಏಕಾಂತದ ಶಯನವನ್ನು ತಲುಪಿ ಮನಸ್ಸಿನಲ್ಲಿಯೇ ಚಿಂತಿಸಿದೆನು.
05184003a ಜಾಮದಗ್ನ್ಯೇನ ಮೇ ಯುದ್ಧಮಿದಂ ಪರಮದಾರುಣಂ।
05184003c ಅಹಾನಿ ಸುಬಹೂನ್ಯದ್ಯ ವರ್ತತೇ ಸುಮಹಾತ್ಯಯಂ।।
“ಜಾಮದಗ್ನಿ ಮತ್ತು ನನ್ನ ಈ ಪರಮದಾರುಣ ಮತ್ತು ಮಹಾತ್ಯಯ ಯುದ್ಧವು ಈಗ ಬಹಳ ದಿನಗಳಿಂದ ನಡೆಯುತ್ತಿದೆ.
05184004a ನ ಚ ರಾಮಂ ಮಹಾವೀರ್ಯಂ ಶಕ್ನೋಮಿ ರಣಮೂರ್ಧನಿ।
05184004c ವಿಜೇತುಂ ಸಮರೇ ವಿಪ್ರಂ ಜಾಮದಗ್ನ್ಯಂ ಮಹಾಬಲಂ।।
ನಾನು ಮಹಾವೀರ್ಯ, ಮಹಾಬಲ, ವಿಪ್ರ ಜಾಮದಗ್ನಿ ರಾಮನನ್ನು ಸಮರ ರಣದಲ್ಲಿ ಜಯಿಸಲು ಸಾದ್ಯನಾಗಿಲ್ಲ.
05184005a ಯದಿ ಶಕ್ಯೋ ಮಯಾ ಜೇತುಂ ಜಾಮದಗ್ನ್ಯಃ ಪ್ರತಾಪವಾನ್।
05184005c ದೈವತಾನಿ ಪ್ರಸನ್ನಾನಿ ದರ್ಶಯಂತು ನಿಶಾಂ ಮಮ।।
ಪ್ರತಾಪವಾನ್ ಜಾಮದಗ್ನಿಯನ್ನು ನಾನು ಜಯಿಸಲು ಶಕ್ಯನೆಂದಾದರೆ ಪ್ರಸನ್ನರಾಗಿ ದೇವತೆಗಳು ಈ ರಾತ್ರಿ ನನಗೆ ಕಾಣಿಸಿಕೊಳ್ಳಲಿ.”
05184006a ತತೋಽಹಂ ನಿಶಿ ರಾಜೇಂದ್ರ ಪ್ರಸುಪ್ತಃ ಶರವಿಕ್ಷತಃ।
05184006c ದಕ್ಷಿಣೇನೈವ ಪಾರ್ಶ್ವೇನ ಪ್ರಭಾತಸಮಯೇ ಇವ।।
05184007a ತತೋಽಹಂ ವಿಪ್ರಮುಖ್ಯೈಸ್ತೈರ್ಯೈರಸ್ಮಿ ಪತಿತೋ ರಥಾತ್।
05184007c ಉತ್ಥಾಪಿತೋ ಧೃತಶ್ಚೈವ ಮಾ ಭೈರಿತಿ ಚ ಸಾಂತ್ವಿತಃ।।
05184008a ತ ಏವ ಮಾಂ ಮಹಾರಾಜ ಸ್ವಪ್ನದರ್ಶನಮೇತ್ಯ ವೈ।
05184008c ಪರಿವಾರ್ಯಾಬ್ರುವನ್ವಾಕ್ಯಂ ತನ್ನಿಬೋಧ ಕುರೂದ್ವಹ।।
ಮಹಾರಾಜ! ಆಗ ನಾನು ಬಾಣಗಳಿಂದ ಗಾಯಗೊಂಡ ಬಲಭಾಗದಲ್ಲಿ ರಾತ್ರಿ ಮಲಗಿದೆನು. ಬೆಳಗಾಗುತ್ತದೆ ಎನ್ನುವ ಸಮಯದಲ್ಲಿ ನಾನು ರಥದಿಂದ ಬಿದ್ದಾಗ ಮೇಲೆತ್ತಿ ಹೆದರಬೇಡ ಎಂದು ಸಂತವಿಸಿ ಧೈರ್ಯವನ್ನಿತ್ತಿದ್ದ ಆ ವಿಪ್ರರೇ ಸ್ವಪ್ನದಲ್ಲಿ ಕಾಣಿಸಿಕೊಂಡರು. ನನ್ನನ್ನು ಸುತ್ತುವರೆದು ಹೇಳಿದ ಮಾತುಗಳನ್ನು ಕೇಳು ಕುರೂದ್ವಹ!
05184009a ಉತ್ತಿಷ್ಠ ಮಾ ಭೈರ್ಗಾಂಗೇಯ ಭಯಂ ತೇ ನಾಸ್ತಿ ಕಿಂ ಚನ।
05184009c ರಕ್ಷಾಮಹೇ ನರವ್ಯಾಘ್ರ ಸ್ವಶರೀರಂ ಹಿ ನೋ ಭವಾನ್।।
“ಎದ್ದೇಳು! ಗಾಂಗೇಯ! ಭಯಪಡಬೇಡ! ನಿನಗೆ ಯಾವ ರೀತಿಯ ಭಯವೂ ಇಲ್ಲ. ನರವ್ಯಾಘ್ರ! ನಮ್ಮದೇ ಶರೀರವಾಗಿರುವ ನಿನ್ನನ್ನು ನಾವು ರಕ್ಷಿಸುತ್ತೇವೆ!
05184010a ನ ತ್ವಾಂ ರಾಮೋ ರಣೇ ಜೇತಾ ಜಾಮದಗ್ನ್ಯಃ ಕಥಂ ಚನ।
05184010c ತ್ವಮೇವ ಸಮರೇ ರಾಮಂ ವಿಜೇತಾ ಭರತರ್ಷಭ।।
ಜಾಮದಗ್ನಿ ರಾಮನು ರಣದಲ್ಲಿ ಎಂದೂ ನಿನ್ನನ್ನು ಗೆಲ್ಲಲಾರನು. ಭರತರ್ಷಭ! ನೀನೇ ಸಮರದಲ್ಲಿ ರಾಮನನ್ನು ಗೆಲ್ಲುತ್ತೀಯೆ.
05184011a ಇದಮಸ್ತ್ರಂ ಸುದಯಿತಂ ಪ್ರತ್ಯಭಿಜ್ಞಾಸ್ಯತೇ ಭವಾನ್।
05184011c ವಿದಿತಂ ಹಿ ತವಾಪ್ಯೇತತ್ಪೂರ್ವಸ್ಮಿನ್ದೇಹಧಾರಣೇ।।
ನೀನು ಈ ಪ್ರಿಯವಾದ ಅಸ್ತ್ರವನ್ನು ಗುರುತಿಸುತ್ತೀಯೆ. ಏಕೆಂದರೆ ನಿನ್ನ ಪೂರ್ವ ದೇಹಧಾರಣೆಯಲ್ಲಿ ಇದನ್ನು ನೀನು ತಿಳಿದಿದ್ದೆ.
05184012a ಪ್ರಾಜಾಪತ್ಯಂ ವಿಶ್ವಕೃತಂ ಪ್ರಸ್ವಾಪಂ ನಾಮ ಭಾರತ।
05184012c ನ ಹೀದಂ ವೇದ ರಾಮೋಽಪಿ ಪೃಥಿವ್ಯಾಂ ವಾ ಪುಮಾನ್ಕ್ವ ಚಿತ್।।
ಭಾರತ! ಪ್ರಸ್ವಾಪವೆಂಬ ಹೆಸರಿನ ಇದನ್ನು ಪ್ರಜಾಪತಿಗಾಗಿ ವಿಶ್ವಕರ್ಮನು ನಿರ್ಮಿಸಿದನು. ಇದು ರಾಮನಿಗೂ ಅಥವಾ ಭೂಮಿಯಲ್ಲಿರುವ ಯಾವ ಪುರುಷನಿಗೂ ಗೊತ್ತಿಲ್ಲ.
05184013a ತತ್ಸ್ಮರಸ್ವ ಮಹಾಬಾಹೋ ಭೃಶಂ ಸಮ್ಯೋಜಯಸ್ವ ಚ।
05184013c ನ ಚ ರಾಮಃ ಕ್ಷಯಂ ಗಂತಾ ತೇನಾಸ್ತ್ರೇಣ ನರಾಧಿಪ।।
ಮಹಾಬಾಹೋ! ನರಾಧಿಪ! ಅದನ್ನು ಸ್ಮರಿಸಿಕೊಂಡು ಚೆನ್ನಾಗಿ ಪ್ರಯೋಗಿಸು. ಈ ಅಸ್ತ್ರದಿಂದ ರಾಮನು ಸಾಯುವುದಿಲ್ಲ.
05184014a ಏನಸಾ ಚ ನ ಯೋಗಂ ತ್ವಂ ಪ್ರಾಪ್ಸ್ಯಸೇ ಜಾತು ಮಾನದ।
05184014c ಸ್ವಪ್ಸ್ಯತೇ ಜಾಮದಗ್ನ್ಯೋಽಸೌ ತ್ವದ್ಬಾಣಬಲಪೀಡಿತಃ।।
ಮಾನದ! ಇದರಿಂದ ನೀನು ಯಾವುದೇ ಪಾಪವನ್ನೂ ಹೊಂದುವುದಿಲ್ಲ. ಈ ಬಾಣದ ಬಲದಿಂದ ಪೀಡಿತನಾಗಿ ಜಾಮದಗ್ನಿಯು ನಿದ್ದೆಮಾಡುತ್ತಾನೆ ಅಷ್ಟೆ.
05184015a ತತೋ ಜಿತ್ವಾ ತ್ವಮೇವೈನಂ ಪುನರುತ್ಥಾಪಯಿಷ್ಯಸಿ।
05184015c ಅಸ್ತ್ರೇಣ ದಯಿತೇನಾಜೌ ಭೀಷ್ಮ ಸಂಬೋಧನೇನ ವೈ।।
ಭೀಷ್ಮ! ಇದರಿಂದ ಅವನನ್ನು ಸೋಲಿಸಿ ನಿನಗೆ ಪ್ರಿಯವಾದ ಸಂಬೋದನಾಸ್ತ್ರದಿಂದ ಅವನನ್ನು ಪುನಃ ಎಚ್ಚರಿಸಬಲ್ಲೆ.
05184016a ಏವಂ ಕುರುಷ್ವ ಕೌರವ್ಯ ಪ್ರಭಾತೇ ರಥಮಾಸ್ಥಿತಃ।
05184016c ಪ್ರಸುಪ್ತಂ ವಾ ಮೃತಂ ವಾಪಿ ತುಲ್ಯಂ ಮನ್ಯಾಮಹೇ ವಯಂ।।
ಕೌರವ್ಯ! ಪ್ರಭಾತದಲ್ಲಿ ರಥದಲ್ಲಿದ್ದು ಹೀಗೆ ಮಾಡು. ಮಲಗಿರುವ ಅಥವಾ ಸತ್ತಿರುವವರನ್ನು ನಾವು ಸಮನಾಗಿ ಕಾಣುತ್ತೇವಲ್ಲವೇ?
05184017a ನ ಚ ರಾಮೇಣ ಮರ್ತವ್ಯಂ ಕದಾ ಚಿದಪಿ ಪಾರ್ಥಿವ।
05184017c ತತಃ ಸಮುತ್ಪನ್ನಮಿದಂ ಪ್ರಸ್ವಾಪಂ ಯುಜ್ಯತಾಮಿತಿ।।
ಪಾರ್ಥಿವ! ರಾಮನು ಎಂದೂ ಸಾಯುವುದಿಲ್ಲ. ಆದನ್ನು ನೆನಪಿಗೆ ತಂದುಕೊಂಡು ಈ ಪ್ರಸ್ವಾಪವನ್ನು ಬಳಸು.”
05184018a ಇತ್ಯುಕ್ತ್ವಾಂತರ್ಹಿತಾ ರಾಜನ್ಸರ್ವ ಏವ ದ್ವಿಜೋತ್ತಮಾಃ।
05184018c ಅಷ್ಟೌ ಸದೃಶರೂಪಾಸ್ತೇ ಸರ್ವೇ ಭಾಸ್ವರಮೂರ್ತಯಃ।।
ರಾಜನ್! ಹೀಗೆ ಹೇಳಿ ಆ ಎಂಟು ಒಂದೇ ರೂಪದವರಾದ, ಭಾಸ್ವರಮೂರ್ತರಾದ ದ್ವಿಜೋತ್ತಮರೆಲ್ಲರೂ ಅಂತರ್ಹಿತರಾದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಭೀಷ್ಮಪ್ರಸ್ವಾಪನಾಸ್ತ್ರಲಾಭೇ ಚತುರಶೀತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಭೀಷ್ಮಪ್ರಸ್ವಾಪನಾಸ್ತ್ರಲಾಭದಲ್ಲಿ ನೂರಾಎಂಭತ್ನಾಲ್ಕನೆಯ ಅಧ್ಯಾಯವು.