182 ರಾಮಭೀಷ್ಮಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಅಂಬೋಽಪಾಖ್ಯಾನ ಪರ್ವ

ಅಧ್ಯಾಯ 182

ಸಾರ

ಪರಶುರಾಮ-ಭೀಷ್ಮರ ಮೂರನೆಯ ದಿನದ ಯುದ್ಧ (1-16).

05182001 ಭೀಷ್ಮ ಉವಾಚ।
05182001a ಸಮಾಗತಸ್ಯ ರಾಮೇಣ ಪುನರೇವಾತಿದಾರುಣಂ।
05182001c ಅನ್ಯೇದ್ಯುಸ್ತುಮುಲಂ ಯುದ್ಧಂ ತದಾ ಭರತಸತ್ತಮ।।

ಭೀಷ್ಮನು ಹೇಳಿದನು: “ಭರತಸತ್ತಮ! ಅವನನ್ನು ಪುನಃ ಎದುರಿಸಿದಾಗ ನನ್ನ ಮತ್ತು ರಾಮನ ನಡುವೆ ಇನ್ನೊಂದು ಅತಿದಾರುಣ ತುಮುಲಯುದ್ಧವು ನಡೆಯಿತು.

05182002a ತತೋ ದಿವ್ಯಾಸ್ತ್ರವಿಚ್ಚೂರೋ ದಿವ್ಯಾನ್ಯಸ್ತ್ರಾಣ್ಯನೇಕಶಃ।
05182002c ಅಯೋಜಯತ ಧರ್ಮಾತ್ಮಾ ದಿವಸೇ ದಿವಸೇ ವಿಭುಃ।।

ಆಗ ದಿವಸ ದಿವಸವೂ ಆ ದಿವ್ಯಾಸ್ತ್ರವಿದು ಧರ್ಮಾತ್ಮ ವಿಭು ಶೂರನು ಅನೇಕ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದನು.

05182003a ತಾನ್ಯಹಂ ತತ್ಪ್ರತೀಘಾತೈರಸ್ತ್ರೈರಸ್ತ್ರಾಣಿ ಭಾರತ।
05182003c ವ್ಯಧಮಂ ತುಮುಲೇ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಸುದುಸ್ತ್ಯಜಾನ್।।

ಭಾರತ! ನಾನು ತ್ಯಜಿಸಲು ದುಷ್ಕರವಾದ ಪ್ರಾಣವನ್ನೂ ತ್ಯಜಿಸಿ ಆ ತುಮುಲಯುದ್ಧದಲ್ಲಿ ಅವುಗಳನ್ನು ಪ್ರತಿಘಾತಿಸುವ ಅಸ್ತ್ರಗಳಿಂದ ನಿಷ್ಫಲಗೊಳಿಸಿದೆನು.

05182004a ಅಸ್ತ್ರೈರಸ್ತ್ರೇಷು ಬಹುಧಾ ಹತೇಷ್ವಥ ಚ ಭಾರ್ಗವಃ।
05182004c ಅಕ್ರುಧ್ಯತ ಮಹಾತೇಜಾಸ್ತ್ಯಕ್ತಪ್ರಾಣಃ ಸ ಸಂಯುಗೇ।।

ಸಂಯುಗದಲ್ಲಿ ಬಹಳಷ್ಟು ಅಸ್ತ್ರಗಳನ್ನು ಅಸ್ತ್ರಗಳಿಂದ ಹತಗೊಳಿಸಲು ಆ ಮಹಾತೇಜಸ್ವಿ ಭಾರ್ಗವನು ಪ್ರಾಣವನ್ನೂ ತ್ಯಜಿಸಿ ಕ್ರೋಧಿತನಾದನು.

05182005a ತತಃ ಶಕ್ತಿಂ ಪ್ರಾಹಿಣೋದ್ಘೋರರೂಪಾಂ ಅಸ್ತ್ರೈ ರುದ್ಧೋ ಜಾಮದಗ್ನ್ಯೋ ಮಹಾತ್ಮಾ।
05182005c ಕಾಲೋತ್ಸೃಷ್ಟಾಂ ಪ್ರಜ್ವಲಿತಾಮಿವೋಲ್ಕಾಂ ಸಂದೀಪ್ತಾಗ್ರಾಂ ತೇಜಸಾವೃತ್ಯ ಲೋಕಾನ್।।

ಆಗ ಮಹಾತ್ಮ ಜಾಮದಗ್ನಿಯು ಕೋಪದಿಂದ ಘೋರರೂಪದ ಕಾಲನೇ ಬಿಸುಟ ಅಸ್ತ್ರದಂತಿರುವ, ಉಲ್ಕೆಯಂತೆ ಉರಿಯುತ್ತಿರುವ, ಬಾಯಿ ತೆರೆದಿರುವ, ತೇಜಸ್ಸಿನಿಂದ ಲೋಕಗಳನ್ನು ಆವರಿಸಿದ ಶಕ್ತಿಯನ್ನು ನನ್ನ ಮೇಲೆ ಎಸೆದನು.

05182006a ತತೋಽಹಂ ತಾಮಿಷುಭಿರ್ದೀಪ್ಯಮಾನೈಃ ಸಮಾಯಾಂತೀಮಂತಕಾಲಾರ್ಕದೀಪ್ತಾಂ।
05182006c ಚಿತ್ತ್ವಾ ತ್ರಿಧಾ ಪಾತಯಾಮಾಸ ಭೂಮೌ ತತೋ ವವೌ ಪವನಃ ಪುಣ್ಯಗಂಧಿಃ।।

ಆಗ ನಾನು ಉರಿಯುತ್ತಾ ಅಂತಕಾಲದಂತೆ, ಸೂರ್ಯನಂತೆ ಬೆಳಗುತ್ತಾ ಹತ್ತಿರ ಬರುತ್ತಿದ್ದ ಅದನ್ನು ಮೂರುತುಂಡುಗಳನ್ನಾಗಿಸಿ ಭೂಮಿಯ ಮೇಲೆ ಬೀಳಿಸಿದೆನು. ಆಗ ಪುಣ್ಯಗಂಧೀ ಗಾಳಿಯು ಬೀಸಿತು.

05182007a ತಸ್ಯಾಂ ಚಿನ್ನಾಯಾಂ ಕ್ರೋಧದೀಪ್ತೋಽಥ ರಾಮಃ ಶಕ್ತೀರ್ಘೋರಾಃ ಪ್ರಾಹಿಣೋದ್ದ್ವಾದಶಾನ್ಯಾಃ।
05182007c ತಾಸಾಂ ರೂಪಂ ಭಾರತ ನೋತ ಶಕ್ಯಂ ತೇಜಸ್ವಿತ್ವಾಲ್ಲಾಘವಾಚ್ಚೈವ ವಕ್ತುಂ।।

ಅದು ತುಂಡಾಗಲು ಕ್ರೋಧದೀಪ್ತನಾದ ರಾಮನು ಇನ್ನೂ ಹನ್ನೆರಡು ಘೋರ ಶಕ್ತಿಗಳನ್ನು ಎಸೆದನು. ಭಾರತ! ಅವುಗಳ ರೂಪವನ್ನು ವರ್ಣಿಸಲು, ಅವುಗಳ ತೇಜಸ್ಸು ಮತ್ತು ಲಾಘವಗಳ ಕುರಿತು ಹೇಳಲೂ ಅಸಾಧ್ಯವಾಗಿತ್ತು.

05182008a ಕಿಂ ತ್ವೇವಾಹಂ ವಿಹ್ವಲಃ ಸಂಪ್ರದೃಶ್ಯ ದಿಗ್ಭ್ಯಃ ಸರ್ವಾಸ್ತಾ ಮಹೋಲ್ಕಾ ಇವಾಗ್ನೇಃ।
05182008c ನಾನಾರೂಪಾಸ್ತೇಜಸೋಗ್ರೇಣ ದೀಪ್ತಾ ಯಥಾದಿತ್ಯಾ ದ್ವಾದಶ ಲೋಕಸಂಕ್ಷಯೇ।।

ಎಲ್ಲ ಕಡೆಗಳಿಂದಲೂ ಮಹಾ ಉಲ್ಕೆಗಳಂತಿರುವ, ಅಗ್ನಿಗಳಂತಿರುವ, ಲೋಕಸಂಕ್ಷಯದಲ್ಲಿ ದ್ವಾದಶಾದಿತ್ಯರು ಹೇಗೋ ಹಾಗೆ ನಾನಾರೂಪಗಳಲ್ಲಿ ಉಗ್ರ ತೇಜಸ್ಸಿನಿಂದ ಉರಿಯುತ್ತಿರುವ ಅವುಗಳನ್ನು ನೋಡಿ ನಾನು ವಿಹ್ವಲನಾದೆನು.

05182009a ತತೋ ಜಾಲಂ ಬಾಣಮಯಂ ವಿವೃತ್ಯ ಸಂದೃಶ್ಯ ಭಿತ್ತ್ವಾ ಶರಜಾಲೇನ ರಾಜನ್।
05182009c ದ್ವಾದಶೇಷೂನ್ಪ್ರಾಹಿಣವಂ ರಣೇಽಹಂ ತತಃ ಶಕ್ತೀರ್ವ್ಯಧಮಂ ಘೋರರೂಪಾಃ।।

ರಾಜನ್! ಬಂದೆರಗುತ್ತಿದ್ದ ಆ ಬಾಣಗಳ ಜಾಲವನ್ನು ನೋಡಿ ನನ್ನದೇ ಶರಜಾಲದಿಂದ ಹೊಡೆದು ಆ ಹನ್ನೆರಡೂ ಘೋರರೂಪೀ ಶಕ್ತಿಗಳನ್ನು ರಣದಲ್ಲಿ ನಾನು ತುಂಡರಿಸಿದೆನು.

05182010a ತತೋಽಪರಾ ಜಾಮದಗ್ನ್ಯೋ ಮಹಾತ್ಮಾ ಶಕ್ತೀರ್ಘೋರಾಃ ಪ್ರಾಕ್ಷಿಪದ್ಧೇಮದಂಡಾಃ।
05182010c ವಿಚಿತ್ರಿತಾಃ ಕಾಂಚನಪಟ್ಟನದ್ಧಾ ಯಥಾ ಮಹೋಲ್ಕಾ ಜ್ವಲಿತಾಸ್ತಥಾ ತಾಃ।।

ಆಗ ಮಹಾತ್ಮ ಜಾಮದಗ್ನಿಯು ಇನ್ನೊಂದು ಹೇಮದಂಡದ ಘೋರ ಶಕ್ತಿಗಳನ್ನು ಎಸೆದನು. ಬಂಗಾರದಿಂದ ಮಾಡಲ್ಪಟ್ಟಿದ್ದ ಅವು ವಿಚಿತ್ರವಾಗಿದ್ದು ಮಹಾ ಉಲ್ಕೆಗಳಂತೆ ಜ್ವಲಿಸುತ್ತಿದ್ದವು.

05182011a ತಾಶ್ಚಾಪ್ಯುಗ್ರಾಶ್ಚರ್ಮಣಾ ವಾರಯಿತ್ವಾ ಖಡ್ಗೇನಾಜೌ ಪಾತಿತಾ ಮೇ ನರೇಂದ್ರ।
05182011c ಬಾಣೈರ್ದಿವ್ಯೈರ್ಜಾಮದಗ್ನ್ಯಸ್ಯ ಸಂಖ್ಯೇ ದಿವ್ಯಾಂಶ್ಚಾಶ್ವಾನಭ್ಯವರ್ಷಂ ಸಸೂತಾನ್।।

ನರೇಂದ್ರ! ಅವುಗಳನ್ನೂ ಕೂಡ ತೋಮರಗಳಿಂದ ತಡೆದು ಖಡ್ಗದಿಂದ ನಾನು ಕೆಳಗೆ ಬೀಳಿಸಿ, ದಿವ್ಯ ಬಾಣಗಳಿಂದ ಜಾಮದಗ್ನಿಯ ದಿವ್ಯ ರಥವನ್ನೂ ಕುದುರೆಗಳನ್ನೂ ಸಾರಥಿಯೊಂದಿಗೆ ಮುಚ್ಚಿದೆನು.

05182012a ನಿರ್ಮುಕ್ತಾನಾಂ ಪನ್ನಗಾನಾಂ ಸರೂಪಾ ದೃಷ್ಟ್ವಾ ಶಕ್ತೀರ್ಹೇಮಚಿತ್ರಾ ನಿಕೃತ್ತಾಃ।
05182012c ಪ್ರಾದುಶ್ಚಕ್ರೇ ದಿವ್ಯಮಸ್ತ್ರಂ ಮಹಾತ್ಮಾ ಕ್ರೋಧಾವಿಷ್ಟೋ ಹೈಹಯೇಶಪ್ರಮಾಥೀ।।

ನಾನು ಪ್ರಯೋಗಿಸಿದ ಹಾವುಗಳಂತಿದ್ದ ಹೇಮಚಿತ್ರ ಶಕ್ತಿಗಳನ್ನು ನೋಡಿ ಕ್ರೋಧಾವಿಷ್ಟನಾದ ಆ ಮಹಾತ್ಮ ಹೈಹಯೇಶಪ್ರಮಾಥಿಯು ಪುನಃ ದಿವ್ಯಾಸ್ತ್ರಗಳನ್ನು ಬಳಸಿದನು.

05182013a ತತಃ ಶ್ರೇಣ್ಯಃ ಶಲಭಾನಾಮಿವೋಗ್ರಾಃ ಸಮಾಪೇತುರ್ವಿಶಿಖಾನಾಂ ಪ್ರದೀಪ್ತಾಃ।
05182013c ಸಮಾಚಿನೋಚ್ಚಾಪಿ ಭೃಶಂ ಶರೀರಂ ಹಯಾನ್ಸೂತಂ ಸರಥಂ ಚೈವ ಮಹ್ಯಂ।।

ಆಗ ಮಿಡತೆಗಳ ಗುಂಪಿನಂತಿರುವ, ತುದಿಗಳಲ್ಲಿ ರೆಕ್ಕೆಗಳನ್ನುಳ್ಳ, ಉರಿಯುತ್ತಿರುವ ಬಾಣಗಳ ರಾಶಿಯು ನನ್ನ ಶರೀರವನ್ನು, ಕುದುರೆಗಳನ್ನು, ರಥದೊಂದಿಗೆ ಸೂತನನ್ನು ತುಂಬಾ ಆಳವಾಗಿ ಚುಚ್ಚಿದವು.

05182014a ರಥಃ ಶರೈರ್ಮೇ ನಿಚಿತಃ ಸರ್ವತೋಽಭೂತ್ ತಥಾ ಹಯಾಃ ಸಾರಥಿಶ್ಚೈವ ರಾಜನ್।
05182014c ಯುಗಂ ರಥೇಷಾ ಚ ತಥೈವ ಚಕ್ರೇ ತಥೈವಾಕ್ಷಃ ಶರಕೃತ್ತೋಽಥ ಭಗ್ನಃ।।

ಅದರ ಹೊಡೆತದಿಂದಾಗಿ ನನ್ನ ರಥ, ಕುದುರೆಗಳು ಮತ್ತು ಸಾರಥಿಯೂ, ರಥದ ಎರಡು ಚಕ್ರಗಳೊಂದಿಗೆ ಎಲ್ಲ ರೀತಿಯಲ್ಲಿ ಮುರಿದು ಬಿದ್ದವು.

05182015a ತತಸ್ತಸ್ಮಿನ್ಬಾಣವರ್ಷೇ ವ್ಯತೀತೇ ಶರೌಘೇಣ ಪ್ರತ್ಯವರ್ಷಂ ಗುರುಂ ತಂ।
05182015c ಸ ವಿಕ್ಷತೋ ಮಾರ್ಗಣೈರ್ಬ್ರಹ್ಮರಾಶಿರ್ ದೇಹಾದಜಸ್ರಂ ಮುಮುಚೇ ಭೂರಿ ರಕ್ತಂ।।

ಆ ಬಾಣವರ್ಷವು ಮುಗಿಯಲು ನಾನೂ ಕೂಡ ಶರಗಳ ಮಳೆಯನ್ನು ಗುರುವಿನ ಮೇಲೆ ಸುರಿಸಿದೆನು. ಆ ಬಾಣಗಳಿಂದ ಗಾಯಗೊಂಡ ಆ ಬ್ರಹ್ಮರಾಶಿಯು ತುಂಬಾ ಕಡೆಗಳಿಂದ ಒಂದೇ ಸಮನೆ ರಕ್ತವನ್ನು ಸುರಿಸಿದನು.

05182016a ಯಥಾ ರಾಮೋ ಬಾಣಜಾಲಾಭಿತಪ್ತಸ್ ತಥೈವಾಹಂ ಸುಭೃಶಂ ಗಾಢವಿದ್ಧಃ।
05182016c ತತೋ ಯುದ್ಧಂ ವ್ಯರಮಚ್ಚಾಪರಾಹ್ಣೇ ಭಾನಾವಸ್ತಂ ಪ್ರಾರ್ಥಯಾನೇ ಮಹೀಧ್ರಂ।।

ರಾಮನು ಹೇಗೆ ಬಾಣಜಾಲಗಳಿಂದ ನೋಯುತ್ತಿದ್ದನೋ ಹಾಗೆ ನಾನೂ ಕೂಡ ತುಂಬಾ ಗಾಢವಾದ ನೋವಿನಲ್ಲಿದ್ದೆನು. ಕೊನೆಯಲ್ಲಿ ಮಧ್ಯಾಹ್ನದ ನಂತರ ಸೂರ್ಯನು ಅಸ್ತವಾಗಲು ನಮ್ಮ ಯುದ್ಧವೂ ನಿಂತಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ರಾಮಭೀಷ್ಮಯುದ್ಧೇ ದ್ವಿಶೀತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ರಾಮಭೀಷ್ಮಯುದ್ಧದಲ್ಲಿ ನೂರಾಎಂಭತ್ತೆರಡನೆಯ ಅಧ್ಯಾಯವು.