ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 175
ಸಾರ
ಅದೇ ಸಮಯದಲ್ಲಿ ಅಲ್ಲಿಗೆ ಬಂದ ಪರಶುರಾಮನ ಮಿತ್ರ ಅಕೃತವ್ರಣನಿಗೆ ಹೋತ್ರವಾಹನನು ಅಂಬೆಯ ಕಷ್ಟಗಳನ್ನು ತಿಳಿಸಿ ಭೀಷ್ಮನೇ ಈ ಕಷ್ಟಗಳಿಗೆ ಮೂಲ ಕಾರಣನೆಂದು ತಿಳಿಸಲು ಪರಶುರಾಮನು ಆ ತಪೋವನಕ್ಕೆ ಬರುವವನಿದ್ದಾನೆ ಎಂದು ತಿಳಿಯುವುದು (1-30).
05175001 ಹೋತ್ರವಾಹನ ಉವಾಚ।
05175001a ರಾಮಂ ದ್ರಕ್ಷ್ಯಸಿ ವತ್ಸೇ ತ್ವಂ ಜಾಮದಗ್ನ್ಯಂ ಮಹಾವನೇ।
05175001c ಉಗ್ರೇ ತಪಸಿ ವರ್ತಂತಂ ಸತ್ಯಸಂಧಂ ಮಹಾಬಲಂ।।
ಹೋತ್ರವಾಹನನು ಹೇಳಿದನು: “ವತ್ಸೇ! ಮಹಾವನದಲ್ಲಿ ಉಗ್ರತಪಸ್ಸಿನಲ್ಲಿ ನಿರತನಾಗಿರುವ ಸತ್ಯಸಂಧ ಮಹಾಬಲ ಜಾಮದಗ್ನಿಯನ್ನು ನೀನು ಕಾಣುತ್ತೀಯೆ.
05175002a ಮಹೇಂದ್ರೇ ವೈ ಗಿರಿಶ್ರೇಷ್ಠೇ ರಾಮಂ ನಿತ್ಯಮುಪಾಸತೇ।
05175002c ಋಷಯೋ ವೇದವಿದುಷೋ ಗಂಧರ್ವಾಪ್ಸರಸಸ್ತಥಾ।।
ಗಿರಿಶ್ರೇಷ್ಠವಾದ ಮಹೇಂದ್ರದಲ್ಲಿ ಋಷಿಗಳು, ವೇದವಿದುಷರು, ಮತ್ತು ಗಂಧರ್ವಾಪ್ಸರೆಯರು ನಿತ್ಯವೂ ರಾಮನನ್ನು ಉಪಾಸಿಸುತ್ತಾರೆ.
05175003a ತತ್ರ ಗಚ್ಚಸ್ವ ಭದ್ರಂ ತೇ ಬ್ರೂಯಾಶ್ಚೈನಂ ವಚೋ ಮಮ।
05175003c ಅಭಿವಾದ್ಯ ಪೂರ್ವಂ ಶಿರಸಾ ತಪೋವೃದ್ಧಂ ದೃಢವ್ರತಂ।।
ಅಲ್ಲಿಗೆ ಹೋಗು! ನಿನಗೆ ಮಂಗಳವಾಗಲಿ. ಮೊದಲು ಆ ತಪೋವೃದ್ಧ ದೃಢವ್ರತನಿಗೆ ಶಿರಸಾ ವಂದಿಸಿ ನಾನು ಹೇಳಿದುದನ್ನು ಅವನಿಗೆ ಹೇಳು.
05175004a ಬ್ರೂಯಾಶ್ಚೈನಂ ಪುನರ್ಭದ್ರೇ ಯತ್ತೇ ಕಾರ್ಯಂ ಮನೀಷಿತಂ।
05175004c ಮಯಿ ಸಂಕೀರ್ತಿತೇ ರಾಮಃ ಸರ್ವಂ ತತ್ತೇ ಕರಿಷ್ಯತಿ।।
ಭದ್ರೇ! ಯಾವ ಕಾರ್ಯವಾಗಬೇಕೆಂದು ಬಯಸುತ್ತೀಯೋ ಅದನ್ನೂ ಹೇಳು. ನನ್ನ ಹೆಸರನ್ನು ಹೇಳು. ರಾಮನು ಎಲ್ಲವನ್ನೂ ನಿನಗೆ ಮಾಡುತ್ತಾನೆ.
05175005a ಮಮ ರಾಮಃ ಸಖಾ ವತ್ಸೇ ಪ್ರೀತಿಯುಕ್ತಃ ಸುಹೃಚ್ಚ ಮೇ।
05175005c ಜಮದಗ್ನಿಸುತೋ ವೀರಃ ಸರ್ವಶಸ್ತ್ರಭೃತಾಂ ವರಃ।।
ವತ್ಸೇ! ವೀರ, ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠ, ಜಮದಗ್ನಿಸುತ ರಾಮನು ನನ್ನ ಸಖ. ಪ್ರೀತಿಯ ಸ್ನೇಹಿತ.”
05175006a ಏವಂ ಬ್ರುವತಿ ಕನ್ಯಾಂ ತು ಪಾರ್ಥಿವೇ ಹೋತ್ರವಾಹನೇ।
05175006c ಅಕೃತವ್ರಣಃ ಪ್ರಾದುರಾಸೀದ್ರಾಮಸ್ಯಾನುಚರಃ ಪ್ರಿಯಃ।।
ಪಾರ್ಥಿವ ಹೋತ್ರವಾಹನನು ಕನ್ಯೆಗೆ ಹೀಗೆ ಹೇಳುತ್ತಿರಲು ಅಲ್ಲಿಗೆ ರಾಮನ ಪ್ರಿಯ ಅನುಚರ ಅಕೃತವ್ರಣನು ಆಗಮಿಸಿದನು.
05175007a ತತಸ್ತೇ ಮುನಯಃ ಸರ್ವೇ ಸಮುತ್ತಸ್ಥುಃ ಸಹಸ್ರಶಃ।
05175007c ಸ ಚ ರಾಜಾ ವಯೋವೃದ್ಧಃ ಸೃಂಜಯೋ ಹೋತ್ರವಾಹನಃ।।
ಆಗ ಸಹಸ್ರಾರು ಸಂಖ್ಯೆಗಳಲ್ಲಿ ಆ ಮುನಿಗಳೆಲ್ಲರೂ ಒಟ್ಟಿಗೇ ಮೇಲೆದ್ದರು. ರಾಜಾ ವಯೋವೃದ್ಧ ಸೃಂಜಯ ಹೋತ್ರವಾಹನನೂ ಕೂಡ ಹಾಗೆಯೇ ಮಾಡಿದನು.
05175008a ತತಃ ಪೃಷ್ಟ್ವಾ ಯಥಾನ್ಯಾಯಮನ್ಯೋನ್ಯಂ ತೇ ವನೌಕಸಃ।
05175008c ಸಹಿತಾ ಭರತಶ್ರೇಷ್ಠ ನಿಷೇದುಃ ಪರಿವಾರ್ಯ ತಂ।।
ಭರತಶ್ರೇಷ್ಠ! ಆಗ ಆ ವನೌಕಸರಿಬ್ಬರೂ ಯಥಾನ್ಯಾಯವಾಗಿ ಅನ್ಯೋನ್ಯರನ್ನು ಪ್ರಶ್ನಿಸಿ, ಒಟ್ಟಿಗೇ ಸುತ್ತುವರೆಯಲ್ಪಟ್ಟು ಕುಳಿತು ಕೊಂಡರು.
05175009a ತತಸ್ತೇ ಕಥಯಾಮಾಸುಃ ಕಥಾಸ್ತಾಸ್ತಾ ಮನೋರಮಾಃ।
05175009c ಕಾಂತಾ ದಿವ್ಯಾಶ್ಚ ರಾಜೇಂದ್ರ ಪ್ರೀತಿಹರ್ಷಮುದಾ ಯುತಾಃ।।
ರಾಜೇಂದ್ರ! ಆಗ ಅವರಿಬ್ಬರೂ ಪ್ರೀತಿ, ಹರ್ಷ, ಮುದದಿಂದ ಕೂಡಿದ ಮನೋರಮ ದಿವ್ಯ ಕಥೆಗಳನ್ನು ಹೇಳಿ ಮಾತನಾಡಿದರು.
05175010a ತತಃ ಕಥಾಂತೇ ರಾಜರ್ಷಿರ್ಮಹಾತ್ಮಾ ಹೋತ್ರವಾಹನಃ।
05175010c ರಾಮಂ ಶ್ರೇಷ್ಠಂ ಮಹರ್ಷೀಣಾಮಪೃಚ್ಚದಕೃತವ್ರಣಂ।।
ಆಗ ಮಾತಿನ ಕೊನೆಯಲ್ಲಿ ರಾಜರ್ಷಿ ಮಹಾತ್ಮ ಹೋತ್ರವಾಹನನು ಶ್ರೇಷ್ಠ ರಾಮನ ಕುರಿತು ಮಹರ್ಷಿ ಅಕೃತವ್ರಣನಲ್ಲಿ ಕೇಳಿದನು:
05175011a ಕ್ವ ಸಂಪ್ರತಿ ಮಹಾಬಾಹೋ ಜಾಮದಗ್ನ್ಯಃ ಪ್ರತಾಪವಾನ್।
05175011c ಅಕೃತವ್ರಣ ಶಕ್ಯೋ ವೈ ದ್ರಷ್ಟುಂ ವೇದವಿದಾಂ ವರಃ।।
“ಮಹಾಬಾಹೋ! ಪ್ರತಾಪವಾನ್ ಜಾಮದಗ್ನಿಯು ಈಗ ಎಲ್ಲಿ ಕಾಣಲು ಸಿಗುತ್ತಾನೆ? ಅಕೃತವ್ರಣ! ವೇದವಿದರಲ್ಲಿ ಶ್ರೇಷ್ಠನಾದ ಅವನನ್ನು ನೋಡಲು ಶಕ್ಯವಿದೆಯೇ?”
05175012 ಅಕೃತವ್ರಣ ಉವಾಚ।
05175012a ಭವಂತಮೇವ ಸತತಂ ರಾಮಃ ಕೀರ್ತಯತಿ ಪ್ರಭೋ।
05175012c ಸೃಂಜಯೋ ಮೇ ಪ್ರಿಯಸಖೋ ರಾಜರ್ಷಿರಿತಿ ಪಾರ್ಥಿವ।।
ಅಕೃತವ್ರಣನು ಹೇಳಿದನು: “ಪ್ರಭೋ! ಪಾರ್ಥಿವ! ರಾಮನು ರಾಜರ್ಷಿ ಸೃಂಜಯನು ನನ್ನ ಪ್ರಿಯ ಸಖನೆಂದು ಸತತವಾಗಿ ನಿನ್ನ ಕುರಿತೇ ಹೇಳುತ್ತಿರುತ್ತಾನೆ.
05175013a ಇಹ ರಾಮಃ ಪ್ರಭಾತೇ ಶ್ವೋ ಭವಿತೇತಿ ಮತಿರ್ಮಮ।
05175013c ದ್ರಷ್ಟಾಸ್ಯೇನಮಿಹಾಯಾಂತಂ ತವ ದರ್ಶನಕಾಂಕ್ಷಯಾ।।
ನಾಳೆ ಪ್ರಭಾತದಲ್ಲಿ ರಾಮನು ಇಲ್ಲಿರುತ್ತಾನೆಂದು ನನಗನ್ನಿಸುತ್ತದೆ. ನಿನ್ನನ್ನು ನೋಡಲು ಬಯಸಿ ಇಲ್ಲಿಗೇ ಬರುವ ಅವನನ್ನು ನೀನು ಕಾಣುತ್ತೀಯೆ.
05175014a ಇಯಂ ಚ ಕನ್ಯಾ ರಾಜರ್ಷೇ ಕಿಮರ್ಥಂ ವನಮಾಗತಾ।
05175014c ಕಸ್ಯ ಚೇಯಂ ತವ ಚ ಕಾ ಭವತೀಚ್ಚಾಮಿ ವೇದಿತುಂ।।
ರಾಜರ್ಷೇ! ಈ ಕನ್ಯೆಯಾದರೋ ಏಕೆ ವನಕ್ಕೆ ಬಂದಿದ್ದಾಳೆ? ಇವಳು ಯಾರವಳು? ಮತ್ತು ನಿನಗೇನಾಗಬೇಕು? ಇದನ್ನು ತಿಳಿಯಲು ಬಯಸುತ್ತೇನೆ.”
05175015 ಹೋತ್ರವಾಹನ ಉವಾಚ।
05175015a ದೌಹಿತ್ರೀಯಂ ಮಮ ವಿಭೋ ಕಾಶಿರಾಜಸುತಾ ಶುಭಾ।
05175015c ಜ್ಯೇಷ್ಠಾ ಸ್ವಯಂವರೇ ತಸ್ಥೌ ಭಗಿನೀಭ್ಯಾಂ ಸಹಾನಘ।।
ಹೋತ್ರವಾಹನನು ಹೇಳಿದನು: “ವಿಭೋ! ಅನಘ! ಇವಳು ನನ್ನ ಮಗಳ ಮಗಳು. ಕಾಶಿರಾಜ ಸುತೆ. ಈ ಶುಭೆ ಹಿರಿಯವಳು ಸ್ವಯಂವರದಲ್ಲಿ ತನ್ನ ಇಬ್ಬರು ತಂಗಿಯರೊಂದಿಗೆ ನಿಂತಿದ್ದಳು.
05175016a ಇಯಮಂಬೇತಿ ವಿಖ್ಯಾತಾ ಜ್ಯೇಷ್ಠಾ ಕಾಶಿಪತೇಃ ಸುತಾ।
05175016c ಅಂಬಿಕಾಂಬಾಲಿಕೇ ತ್ವನ್ಯೇ ಯವೀಯಸ್ಯೌ ತಪೋಧನ।।
ಇವಳು ಅಂಬೆಯೆಂದು ವಿಖ್ಯಾತಳಾದ ಕಾಶಿಪತಿಯ ಜೇಷ್ಠ ಮಗಳು. ತಪೋಧನ! ಅಂಬಿಕಾ ಮತ್ತು ಅಂಬಾಲಿಕೆಯರು ಇವಳ ಇತರ ಕಿರಿಯರು.
05175017a ಸಮೇತಂ ಪಾರ್ಥಿವಂ ಕ್ಷತ್ರಂ ಕಾಶಿಪುರ್ಯಾಂ ತತೋಽಭವತ್।
05175017c ಕನ್ಯಾನಿಮಿತ್ತಂ ಬ್ರಹ್ಮರ್ಷೇ ತತ್ರಾಸೀದುತ್ಸವೋ ಮಹಾನ್।।
ಬ್ರಹ್ಮರ್ಷೇ! ಆಗ ಕಾಶಿಪುರಿಯಲ್ಲಿ ಕ್ಷತ್ರಿಯ ಪಾರ್ಥಿವರೆಲ್ಲರೂ ಕನ್ಯನಿಮಿತ್ತವಾಗಿ ಸೇರಿದ್ದರು. ಅಲ್ಲಿ ಮಹಾ ಉತ್ಸವವೇ ನಡೆದಿತ್ತು.
05175018a ತತಃ ಕಿಲ ಮಹಾವೀರ್ಯೋ ಭೀಷ್ಮಃ ಶಾಂತನವೋ ನೃಪಾನ್।
05175018c ಅವಾಕ್ಷಿಪ್ಯ ಮಹಾತೇಜಾಸ್ತಿಸ್ರಃ ಕನ್ಯಾ ಜಹಾರ ತಾಃ।।
ಆಗ ಮಹಾವೀರ್ಯಶಾಲೀ ಶಾಂತನವ ಭೀಷ್ಮನು ಮಹಾತೇಜಸ್ವಿ ನೃಪರನ್ನು ಸದೆಬಡಿದು ಮೂವರು ಕನ್ಯೆಯರನ್ನೂ ಅಪಹರಿಸಿದನು.
05175019a ನಿರ್ಜಿತ್ಯ ಪೃಥಿವೀಪಾಲಾನಥ ಭೀಷ್ಮೋ ಗಜಾಹ್ವಯಂ।
05175019c ಆಜಗಾಮ ವಿಶುದ್ಧಾತ್ಮಾ ಕನ್ಯಾಭಿಃ ಸಹ ಭಾರತ।।
ಪೃಥಿವೀಪಾಲರನ್ನು ಗೆದ್ದು ಆ ವಿಶುಧ್ಧಾತ್ಮ ಭಾರತ ಭೀಷ್ಮನು ಕನ್ಯೆಯರೊಡನೆ ಗಜಾಹ್ವಯಕ್ಕೆ ಹಿಂದಿರುಗಿದನು.
05175020a ಸತ್ಯವತ್ಯೈ ನಿವೇದ್ಯಾಥ ವಿವಾಹಾರ್ಥಮನಂತರಂ।
05175020c ಭ್ರಾತುರ್ವಿಚಿತ್ರವೀರ್ಯಸ್ಯ ಸಮಾಜ್ಞಾಪಯತ ಪ್ರಭುಃ।।
ಅನಂತರ ಸತ್ಯವತಿಗೆ ಹೇಳಿ ಪ್ರಭುವು ತಮ್ಮ ವಿಚಿತ್ರವೀರ್ಯನ ವಿವಾಹವನ್ನು ಆಜ್ಞಾಪಿಸಿದನು.
05175021a ತತೋ ವೈವಾಹಿಕಂ ದೃಷ್ಟ್ವಾ ಕನ್ಯೇಯಂ ಸಮುಪಾರ್ಜಿತಂ।
05175021c ಅಬ್ರವೀತ್ತತ್ರ ಗಾಂಗೇಯಂ ಮಂತ್ರಿಮಧ್ಯೇ ದ್ವಿಜರ್ಷಭ।।
ದ್ವಿಜರ್ಷಭ! ಆಗ ವಿವಾಹದ ಸಿದ್ಧತೆಗಳನ್ನು ನೋಡಿ ಈ ಕನ್ಯೆಯು ಮಂತ್ರಿಗಳ ಮಧ್ಯದಲ್ಲಿ ಗಾಂಗೇಯನಿಗೆ ಹೇಳಿದಳು:
05175022a ಮಯಾ ಶಾಲ್ವಪತಿರ್ವೀರ ಮನಸಾಭಿವೃತಃ ಪತಿಃ।
05175022c ನ ಮಾಮರ್ಹಸಿ ಧರ್ಮಜ್ಞಾ ಪರಚಿತ್ತಾಂ ಪ್ರದಾಪಿತುಂ।।
“ವೀರ! ಶಾಲ್ವಪತಿಯನ್ನು ನಾನು ಮನಸಾರೆ ಪತಿಯನ್ನಾಗಿ ಆರಿಸಿಕೊಂಡಿದ್ದೇನೆ. ಧರ್ಮಜ್ಞ! ಇನ್ನೊಬ್ಬನ ಮೇಲೆ ಮನಸ್ಸಿಟ್ಟಿರುವ ನನ್ನನ್ನು ಕೊಡುವುದು ಸರಿಯಲ್ಲ.”
05175023a ತಚ್ಚ್ರುತ್ವಾ ವಚನಂ ಭೀಷ್ಮಃ ಸಮ್ಮಂತ್ರ್ಯ ಸಹ ಮಂತ್ರಿಭಿಃ।
05175023c ನಿಶ್ಚಿತ್ಯ ವಿಸಸರ್ಜೇಮಾಂ ಸತ್ಯವತ್ಯಾ ಮತೇ ಸ್ಥಿತಃ।।
ಅವಳ ಮಾತನ್ನು ಕೇಳಿ ಭೀಷ್ಮನು ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಿ ಸತ್ಯವತಿಯ ಅಭಿಪ್ರಾಯದಂತೆಯೂ ಇವಳನ್ನು ವಿಸರ್ಜಿಸಲು ನಿಶ್ಚಯಿಸಿದನು.
05175024a ಅನುಜ್ಞಾತಾ ತು ಭೀಷ್ಮೇಣ ಶಾಲ್ವಂ ಸೌಭಪತಿಂ ತತಃ।
05175024c ಕನ್ಯೇಯಂ ಮುದಿತಾ ವಿಪ್ರ ಕಾಲೇ ವಚನಮಬ್ರವೀತ್।।
ವಿಪ್ರ! ಭೀಷ್ಮನಿಂದ ಅನುಜ್ಞಾತಳಾಗಿ ಸಂತೋಷಗೊಂಡು ಈ ಕನ್ಯೆಯು ಸೌಭಪತಿಗೆ ಹೇಳಿದಳು:
05175025a ವಿಸರ್ಜಿತಾಸ್ಮಿ ಭೀಷ್ಮೇಣ ಧರ್ಮಂ ಮಾಂ ಪ್ರತಿಪಾದಯ।
05175025c ಮನಸಾಭಿವೃತಃ ಪೂರ್ವಂ ಮಯಾ ತ್ವಂ ಪಾರ್ಥಿವರ್ಷಭ।।
“ಪಾರ್ಥಿವರ್ಷಭ! ಭೀಷ್ಮನು ನನ್ನನ್ನು ಬಿಟ್ಟಿದ್ದಾನೆ. ಧರ್ಮವನ್ನು ಪ್ರತಿಪಾದಿಸು. ಹಿಂದೆಯೇ ನಾನು ನಿನ್ನನ್ನು ಮನಸಾ ಆರಿಸಿಕೊಂಡಿದ್ದೆ.”
05175026a ಪ್ರತ್ಯಾಚಖ್ಯೌ ಚ ಶಾಲ್ವೋಽಪಿ ಚಾರಿತ್ರಸ್ಯಾಭಿಶಂಕಿತಃ।
05175026c ಸೇಯಂ ತಪೋವನಂ ಪ್ರಾಪ್ತಾ ತಾಪಸ್ಯೇಽಭಿರತಾ ಭೃಶಂ।।
ಇವಳ ಚಾರಿತ್ರವನ್ನು ಶಂಕಿಸಿ ಶಾಲ್ವನೂ ಕೂಡ ಇವಳನ್ನು ತ್ಯಜಿಸಿದನು. ಆ ಇವಳು ಈ ತಪೋವನವನ್ನು ಸೇರಿ ತುಂಬಾ ತಪಸ್ಸಿನಲ್ಲಿ ನಿರತಳಾಗಿದ್ದಾಳೆ.
05175027a ಮಯಾ ಚ ಪ್ರತ್ಯಭಿಜ್ಞಾತಾ ವಂಶಸ್ಯ ಪರಿಕೀರ್ತನಾತ್।
05175027c ಅಸ್ಯ ದುಃಖಸ್ಯ ಚೋತ್ಪತ್ತಿಂ ಭೀಷ್ಮಮೇವೇಹ ಮನ್ಯತೇ।।
ಅವಳ ವಂಶದ ವಿವರಗಳನ್ನು ಹೇಳಿಕೊಂಡಾಗ ನಾನು ಇವಳನ್ನು ಗುರುತಿಸಿದೆ. ಭೀಷ್ಮನೇ ಈ ದುಃಖಕ್ಕೆ ಕಾರಣನೆಂದು ಇವಳ ಅಭಿಪ್ರಾಯ.”
05175028 ಅಂಬೋವಾಚ।
05175028a ಭಗವನ್ನೇವಮೇವೈತದ್ಯಥಾಹ ಪೃಥಿವೀಪತಿಃ।
05175028c ಶರೀರಕರ್ತಾ ಮಾತುರ್ಮೇ ಸೃಂಜಯೋ ಹೋತ್ರವಾಹನಃ।।
ಅಂಬೆಯು ಹೇಳಿದಳು: “ಭಗವನ್! ಪೃಥಿವೀಪತಿಯು ಹೇಳಿದಂತೆಯೇ ನಡೆದಿದೆ. ಸೃಂಜಯ ಹೋತ್ರವಾಹನನು ನನ್ನ ತಾಯಿಯ ಶರೀರಕರ್ತ.
05175029a ನ ಹ್ಯುತ್ಸಹೇ ಸ್ವನಗರಂ ಪ್ರತಿಯಾತುಂ ತಪೋಧನ।
05175029c ಅವಮಾನಭಯಾಚ್ಚೈವ ವ್ರೀಡಯಾ ಚ ಮಹಾಮುನೇ।।
ತಪೋಧನ! ನನ್ನ ನಗರಕ್ಕೆ ಹಿಂದಿರುಗಲು ಉತ್ಸಾಹವಿಲ್ಲ. ಮಹಾಮುನೇ! ಅವಮಾನ ಭಯವೂ ಇದೆ. ನಾಚಿಕೆಯೂ ಆಗುತ್ತಿದೆ.
05175030a ಯತ್ತು ಮಾಂ ಭಗವಾನ್ರಾಮೋ ವಕ್ಷ್ಯತಿ ದ್ವಿಜಸತ್ತಮ।
05175030c ತನ್ಮೇ ಕಾರ್ಯತಮಂ ಕಾರ್ಯಮಿತಿ ಮೇ ಭಗವನ್ಮತಿಃ।।
ದ್ವಿಜಸತ್ತಮ! ಭಗವನ್! ಭಗವಾನ್ ರಾಮನು ಏನು ಹೇಳುತ್ತಾನೋ ಅದನ್ನೇ ಮಾಡಬೇಕೆಂದು ನನಗನ್ನಿಸುತ್ತಿದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಅಕೃತವ್ರಣಾಂಬಾಸಂವಾದೇ ಪಂಚಸಪ್ತತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಅಕೃತವ್ರಣಾಂಬಾಸಂವಾದದಲ್ಲಿ ನೂರಾಎಪ್ಪತ್ತೈದನೆಯ ಅಧ್ಯಾಯವು.