ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಅಂಬೋಽಪಾಖ್ಯಾನ ಪರ್ವ
ಅಧ್ಯಾಯ 172
ಸಾರ
ಅನುಜ್ಞೆಯನ್ನು ಪಡೆದ ಅಂಬೆಯು ಶಾಲ್ವನಲ್ಲಿಗೆ ಹೋಗಲು, ಅವನು ಅವಳನ್ನು ಎಷ್ಟು ಹೇಳಿದರೂ ತಿರಸ್ಕರಿಸಿದುದು (1-23).
05172001 ಭೀಷ್ಮ ಉವಾಚ।
05172001a ತತೋಽಹಂ ಸಮನುಜ್ಞಾಪ್ಯ ಕಾಲೀಂ ಸತ್ಯವತೀಂ ತದಾ।
05172001c ಮಂತ್ರಿಣಶ್ಚ ದ್ವಿಜಾಂಶ್ಚೈವ ತಥೈವ ಚ ಪುರೋಹಿತಾನ್।
05172001e ಸಮನುಜ್ಞಾಸಿಷಂ ಕನ್ಯಾಂ ಜ್ಯೇಷ್ಠಾಮಂಬಾಂ ನರಾಧಿಪ।।
ಭೀಷ್ಮನು ಹೇಳಿದನು: “ನರಾಧಿಪ! ಆಗ ನಾನು ಕಾಲೀ ಸತ್ಯವತಿಯ, ಹಾಗೆಯೇ ಮಂತ್ರಿಗಳು, ದ್ವಿಜರು ಮತ್ತು ಪುರೋಹಿತರ ಅನುಜ್ಞೆಯನ್ನು ಪಡೆದು ಆ ಹಿರಿಯ ಕನ್ಯೆ ಅಂಬೆಗೆ ಅನುಜ್ಞೆಯನ್ನಿತ್ತೆನು1.
05172002a ಅನುಜ್ಞಾತಾ ಯಯೌ ಸಾ ತು ಕನ್ಯಾ ಶಾಲ್ವಪತೇಃ ಪುರಂ।
05172002c ವೃದ್ಧೈರ್ದ್ವಿಜಾತಿಭಿರ್ಗುಪ್ತಾ ಧಾತ್ರ್ಯಾ ಚಾನುಗತಾ ತದಾ।
05172002e ಅತೀತ್ಯ ಚ ತಮಧ್ವಾನಮಾಸಸಾದ ನರಾಧಿಪಂ।।
ನನ್ನಿಂದ ಅನುಜ್ಞಾತಳಾಗಿ ಆ ಕನ್ಯೆಯು ಶಾಲ್ವಪತಿಯ ಪುರಕ್ಕೆ ಹೋದಳು. ಹೋಗುವಾಗ ಅವಳು ವೃದ್ಧ ದ್ವಿಜರಿಂದ ರಕ್ಷಿತಳಾಗಿದ್ದಳು. ಅವಳನ್ನು ಓರ್ವ ದಾಸಿಯೂ ಅನುಸರಿಸಿ ಹೋಗಿದ್ದಳು. ಆ ದೂರವನ್ನು ಪ್ರಯಾಣಿಸಿ ನರಾಧಿಪನನ್ನು ತಲುಪಿದಳು.
05172003a ಸಾ ತಮಾಸಾದ್ಯ ರಾಜಾನಂ ಶಾಲ್ವಂ ವಚನಮಬ್ರವೀತ್।
05172003c ಆಗತಾಹಂ ಮಹಾಬಾಹೋ ತ್ವಾಮುದ್ದಿಶ್ಯ ಮಹಾದ್ಯುತೇ।।
ರಾಜ ಶಾಲ್ವನ ಬಳಿಹೋಗಿ ಅವಳು ಈ ಮಾತುಗಳನ್ನಾಡಿದಳು: “ಮಹಾಬಾಹೋ! ಮಹಾದ್ಯುತೇ! ನಿನ್ನನ್ನು ಬಯಸಿ ನಾನು ಬಂದಿದ್ದೇನೆ.”
05172004a ತಾಮಬ್ರವೀಚ್ಚಾಲ್ವಪತಿಃ ಸ್ಮಯನ್ನಿವ ವಿಶಾಂ ಪತೇ।
05172004c ತ್ವಯಾನ್ಯಪೂರ್ವಯಾ ನಾಹಂ ಭಾರ್ಯಾರ್ಥೀ ವರವರ್ಣಿನಿ।।
ವಿಶಾಂಪತೇ! ಶಾಲ್ವಪತಿಯು ಮುಗುಳ್ನಗುತ್ತಾ ಅವಳಿಗೆ ಹೇಳಿದನು: “ವರವರ್ಣಿನೀ! ಈ ಮೊದಲು ಬೇರೆಯವನಳಾಗಿದ್ದವಳನ್ನು ನನ್ನ ಭಾರ್ಯೆಯನ್ನಾಗಿಸಿಕೊಳ್ಳಲು ಬಯಸುವುದಿಲ್ಲ.
05172005a ಗಚ್ಚ ಭದ್ರೇ ಪುನಸ್ತತ್ರ ಸಕಾಶಂ ಭಾರತಸ್ಯ ವೈ।
05172005c ನಾಹಮಿಚ್ಚಾಮಿ ಭೀಷ್ಮೇಣ ಗೃಹೀತಾಂ ತ್ವಾಂ ಪ್ರಸಹ್ಯ ವೈ।।
ಭದ್ರೇ! ಪುನಃ ಆ ಭಾರತನ ಬಳಿ ಹೋಗು. ಭೀಷ್ಮನು ಬಲಾತ್ಕರಿಸಿ ಕರೆದುಕೊಂಡು ಹೋದವಳನ್ನು ನಾನು ಇಚ್ಛಿಸುವುದಿಲ್ಲ.
05172006a ತ್ವಂ ಹಿ ನಿರ್ಜಿತ್ಯ ಭೀಷ್ಮೇಣ ನೀತಾ ಪ್ರೀತಿಮತೀ ತದಾ।
05172006c ಪರಾಮೃಶ್ಯ ಮಹಾಯುದ್ಧೇ ನಿರ್ಜಿತ್ಯ ಪೃಥಿವೀಪತೀನ್।
05172006e ನಾಹಂ ತ್ವಯ್ಯನ್ಯಪೂರ್ವಾಯಾಂ ಭಾರ್ಯಾರ್ಥೀ ವರವರ್ಣಿನಿ।।
ಮಹಾಯುದ್ಧಲ್ಲಿ ಪೃಥಿವೀಪತಿಗಳನ್ನು ಗೆದ್ದು ನಿನ್ನನ್ನು ಕರೆದುಕೊಂಡು ಹೋಗುವಾಗ ನೀನು ಸಂತೋಷದಿಂದಲೇ ಅವನನ್ನು ಅನುಸರಿಸಿ ಹೋಗಿದ್ದೆ. ವರವರ್ಣಿನೀ! ಈ ಮೊದಲು ಇನ್ನೊಬ್ಬನದ್ದಾಗಿರುವವಳನ್ನು ನಾನು ಪತ್ನಿಯನ್ನಾಗಿ ಬಯಸುವುದಿಲ್ಲ.
05172007a ಕಥಮಸ್ಮದ್ವಿಧೋ ರಾಜಾ ಪರಪೂರ್ವಾಂ ಪ್ರವೇಶಯೇತ್।
05172007c ನಾರೀಂ ವಿದಿತವಿಜ್ಞಾನಃ ಪರೇಷಾಂ ಧರ್ಮಮಾದಿಶನ್।
05172007e ಯಥೇಷ್ಟಂ ಗಮ್ಯತಾಂ ಭದ್ರೇ ಮಾ ತೇ ಕಾಲೋಽತ್ಯಗಾದಯಂ।।
ನನ್ನಂತಹ ವಿಜ್ಞಾನಗಳನ್ನು ತಿಳಿದವನು ಮತ್ತು ಇತರರಿಗೆ ಧರ್ಮದ ಆದೇಶವನ್ನು ನೀಡುವವನು ಹೇಗೆ ತಾನೇ ಇನ್ನೊಬ್ಬನ ಅರಮನೆಯನ್ನು ಪ್ರವೇಶಿಸಿದವಳನ್ನು ಸ್ವೀಕರಿಸಿಯಾನು? ಭದ್ರೇ! ಕಾಲವನ್ನು ವ್ಯರ್ಥಮಾಡಬೇಡ. ನಿನಗಿಷ್ಟವಾದಲ್ಲಿಗೆ ಹೋಗು.”
05172008a ಅಂಬಾ ತಮಬ್ರವೀದ್ರಾಜನ್ನನಂಗಶರಪೀಡಿತಾ।
05172008c ಮೈವಂ ವದ ಮಹೀಪಾಲ ನೈತದೇವಂ ಕಥಂ ಚನ।।
ರಾಜನ್! ಅನಂಗಶರಪೀಡಿತಳಾದ ಅಂಬೆಯು ಅವನಿಗೆ ಹೇಳಿದಳು: “ಮಹೀಪಾಲ! ಹೀಗೆ ಹೇಳಬೇಡ! ಹಾಗೇನೂ ನಡೆದಿಲ್ಲ.
05172009a ನಾಸ್ಮಿ ಪ್ರೀತಿಮತೀ ನೀತಾ ಭೀಷ್ಮೇಣಾಮಿತ್ರಕರ್ಶನ।
05172009c ಬಲಾನ್ನೀತಾಸ್ಮಿ ರುದತೀ ವಿದ್ರಾವ್ಯ ಪೃಥಿವೀಪತೀನ್।।
ಅಮಿತ್ರಕರ್ಶನ! ಭೀಷ್ಮನು ಕರೆದುಕೊಂಡು ಹೋಗುವಾಗ ನಾನು ಸಂತೋಷಪಟ್ಟಿರಲಿಲ್ಲ. ಅವನು ಪೃಥಿವೀಪತಿಗಳನ್ನು ಗೆದ್ದು ಬಲಾತ್ಕಾರವಾಗಿ ಕರೆದೊಯ್ಯುತ್ತಿರುವಾಗ ನಾನು ಅಳುತ್ತಿದ್ದೆ.
05172010a ಭಜಸ್ವ ಮಾಂ ಶಾಲ್ವಪತೇ ಭಕ್ತಾಂ ಬಾಲಾಮನಾಗಸಂ।
05172010c ಭಕ್ತಾನಾಂ ಹಿ ಪರಿತ್ಯಾಗೋ ನ ಧರ್ಮೇಷು ಪ್ರಶಸ್ಯತೇ।।
ಶಾಲ್ವಪತೇ! ನನ್ನನ್ನು – ಈ ಬಾಲೆ, ಭಕ್ತೆ, ಅನಾಗಸಳನ್ನು - ಪ್ರೀತಿಸು! ಭಕ್ತರನ್ನು ಪರಿತ್ಯಜಿಸುವುದನ್ನು ಧರ್ಮವೆಂದು ಹೇಳುವುದಿಲ್ಲ.
05172011a ಸಾಹಮಾಮಂತ್ರ್ಯ ಗಾಂಗೇಯಂ ಸಮರೇಷ್ವನಿವರ್ತಿನಂ।
05172011c ಅನುಜ್ಞಾತಾ ಚ ತೇನೈವ ತವೈವ ಗೃಹಮಾಗತಾ।।
ಸಮರದಿಂದ ಹಿಂಜರಿಯದ ಗಾಂಗೇಯನ ಸಲಹೆಯನ್ನು ಕೇಳಿ, ಅವನಿಂದ ಅನುಜ್ಞಾತಳಾಗಿ ನಾನು ನಿನ್ನ ಮನೆಗೆ ಬಂದಿದ್ದೇನೆ.
05172012a ನ ಸ ಭೀಷ್ಮೋ ಮಹಾಬಾಹುರ್ಮಾಮಿಚ್ಚತಿ ವಿಶಾಂ ಪತೇ।
05172012c ಭ್ರಾತೃಹೇತೋಃ ಸಮಾರಂಭೋ ಭೀಷ್ಮಸ್ಯೇತಿ ಶ್ರುತಂ ಮಯಾ।।
ವಿಶಾಂಪತೇ! ಆ ಮಹಾಬಾಹು ಭೀಷ್ಮನಾದರೋ ನನ್ನನ್ನು ಬಯಸುವುದಿಲ್ಲ. ತನ್ನ ತಮ್ಮನಿಗಾಗಿ ಭೀಷ್ಮನು ಇದನ್ನು ಮಾಡಿದನೆಂದು ನಾನು ಕೇಳಿದ್ದೇನೆ.
05172013a ಭಗಿನ್ಯೌ ಮಮ ಯೇ ನೀತೇ ಅಂಬಿಕಾಂಬಾಲಿಕೇ ನೃಪ।
05172013c ಪ್ರಾದಾದ್ವಿಚಿತ್ರವೀರ್ಯಾಯ ಗಾಂಗೇಯೋ ಹಿ ಯವೀಯಸೇ।।
ನೃಪ! ಕರೆದುಕೊಂಡ ಹೋದ ನನ್ನ ತಂಗಿಯರಾದ ಅಂಬಿಕಾ-ಅಂಬಾಲಿಕೆಯರನ್ನು ಗಾಂಗೇಯನು ತನ್ನ ತಮ್ಮ ವಿಚಿತ್ರವೀರ್ಯನಿಗೆ ಕೊಟಿದ್ದಾನೆ.
05172014a ಯಥಾ ಶಾಲ್ವಪತೇ ನಾನ್ಯಂ ನರಂ ಧ್ಯಾಮಿ ಕಥಂ ಚನ।
05172014c ತ್ವಾಮೃತೇ ಪುರುಷವ್ಯಾಘ್ರ ತಥಾ ಮೂರ್ಧಾನಮಾಲಭೇ।।
ಶಾಲ್ವಪತೇ! ಪುರುಷವ್ಯಾಘ್ರ! ನನ್ನ ನೆತ್ತಿಯ ಮೇಲೆ ಕೈಯಿಟ್ಟು ಹೇಳುತ್ತಿದ್ದೇನೆ - ನಿನ್ನನ್ನು ಬಿಟ್ಟು ಬೇರೆ ಯಾವ ನರನನ್ನೂ ನಾನು ಎಂದೂ ಯೋಚಿಸಿಲ್ಲ.
05172015a ನ ಚಾನ್ಯಪೂರ್ವಾ ರಾಜೇಂದ್ರ ತ್ವಾಮಹಂ ಸಮುಪಸ್ಥಿತಾ।
05172015c ಸತ್ಯಂ ಬ್ರವೀಮಿ ಶಾಲ್ವೈತತ್ಸತ್ಯೇನಾತ್ಮಾನಮಾಲಭೇ।।
ರಾಜೇಂದ್ರ! ಹಿಂದೆ ಇನ್ನೊಬ್ಬರವಳಾಗಿ ನಾನು ನಿನ್ನ ಬಳಿ ಬಂದಿಲ್ಲ. ಶಾಲ್ವ! ನನ್ನ ಆತ್ಮದ ಮೇಲೆ ಆಣೆಯಿಟ್ಟು ಸತ್ಯವನ್ನೇ ಹೇಳುತ್ತಿದ್ದೇನೆ.
05172016a ಭಜಸ್ವ ಮಾಂ ವಿಶಾಲಾಕ್ಷ ಸ್ವಯಂ ಕನ್ಯಾಮುಪಸ್ಥಿತಾಂ।
05172016c ಅನನ್ಯಪೂರ್ವಾಂ ರಾಜೇಂದ್ರ ತ್ವತ್ಪ್ರಸಾದಾಭಿಕಾಂಕ್ಷಿಣೀಂ।।
ವಿಶಾಲಾಕ್ಷ! ರಾಜೇಂದ್ರ! ತಾನಾಗಿಯೇ ಬಂದಿರುವ, ಇದಕ್ಕೂ ಮೊದಲು ಬೇರೆಯವರದ್ದಾಗಿರದ, ನಿನ್ನ ಕರುಣೆಯನ್ನು ಬಯಸುವ ಕನ್ಯೆ ನನ್ನನ್ನು ಪ್ರೀತಿಸು.”
05172017a ತಾಮೇವಂ ಭಾಷಮಾಣಾಂ ತು ಶಾಲ್ವಃ ಕಾಶಿಪತೇಃ ಸುತಾಂ।
05172017c ಅತ್ಯಜದ್ಭರತಶ್ರೇಷ್ಠ ತ್ವಚಂ ಜೀರ್ಣಾಮಿವೋರಗಃ।।
ಭರತಶ್ರೇಷ್ಠ! ಈ ರೀತಿ ಅವಳು ಮಾತನಾಡಿದರೂ ಶಾಲ್ವನು ಕಾಶೀಪತಿಯ ಮಗಳನ್ನು ಹಾವು ಜೀರ್ಣವಾದ ಚರ್ಮವನ್ನು ಹೇಗೋ ಹಾಗೆ ತೊರೆದನು.
05172018a ಏವಂ ಬಹುವಿಧೈರ್ವಾಕ್ಯೈರ್ಯಾಚ್ಯಮಾನಸ್ತಯಾನಘ।
05172018c ನಾಶ್ರದ್ದಧಚ್ಚಾಲ್ವಪತಿಃ ಕನ್ಯಾಯಾ ಭರತರ್ಷಭ।।
ಅನಘ! ಭರತರ್ಷಭ! ಈ ರೀತಿ ಬಹುವಿಧ ಮಾತುಗಳಲ್ಲಿ ಬೇಡಿಕೊಂಡರೂ ಶಾಲ್ವಪತಿಯು ಆ ಕನ್ಯೆಯಲ್ಲಿ ಆಸಕ್ತಿಯನ್ನು ತೋರಿಸಲಿಲ್ಲ.
05172019a ತತಃ ಸಾ ಮನ್ಯುನಾವಿಷ್ಟಾ ಜ್ಯೇಷ್ಠಾ ಕಾಶಿಪತೇಃ ಸುತಾ।
05172019c ಅಬ್ರವೀತ್ಸಾಶ್ರುನಯನಾ ಬಾಷ್ಪವಿಹ್ವಲಯಾ ಗಿರಾ।।
ಆಗ ಆ ಕಾಶಿಪತಿಯ ಹಿರಿಯ ಮಗಳು ಕೋಪಾವಿಷ್ಟಳಾಗಿ, ಕಣ್ಣೀರು ಸುರಿಸಿ, ಕಣ್ಣೀರು ಉದ್ವೇಗಗಳು ತುಂಬಿದ ಧ್ವನಿಯಲ್ಲಿ ಹೇಳಿದಳು:
05172020a ತ್ವಯಾ ತ್ಯಕ್ತಾ ಗಮಿಷ್ಯಾಮಿ ಯತ್ರ ಯತ್ರ ವಿಶಾಂ ಪತೇ।
05172020c ತತ್ರ ಮೇ ಸಂತು ಗತಯಃ ಸಂತಃ ಸತ್ಯಂ ಯಥಾಬ್ರುವಂ।।
“ವಿಶಾಂಪತೇ! ನಿನ್ನಿಂದ ತ್ಯಕ್ತಳಾಗಿ ನಾನು ಎಲ್ಲೆಲ್ಲಿ ಹೋಗುತ್ತೇನೋ ಅಲ್ಲಿ ಸಂತರು ನನ್ನನ್ನು ರಕ್ಷಿಸುತ್ತಾರೆ. ಸತ್ಯವನ್ನೇ ಹೇಳುತ್ತೇನೆ.”
05172021a ಏವಂ ಸಂಭಾಷಮಾಣಾಂ ತು ನೃಶಂಸಃ ಶಾಲ್ವರಾಟ್ತದಾ।
05172021c ಪರ್ಯತ್ಯಜತ ಕೌರವ್ಯ ಕರುಣಂ ಪರಿದೇವತೀಂ।।
ಈ ರೀತಿ ಮಾತನಾಡಿದರೂ ಶಾಲ್ವರಾಜನು ಕರುಣೆಯಿಂದ ಪರಿವೇದಿಸುತ್ತಿರುವ ಅವಳನ್ನು ಕ್ರೂರನಾಗಿ ಪರಿತ್ಯಜಿಸಿದನು.
05172022a ಗಚ್ಚ ಗಚ್ಚೇತಿ ತಾಂ ಶಾಲ್ವಃ ಪುನಃ ಪುನರಭಾಷತ।
05172022c ಬಿಭೇಮಿ ಭೀಷ್ಮಾತ್ಸುಶ್ರೋಣಿ ತ್ವಂ ಚ ಭೀಷ್ಮಪರಿಗ್ರಹಃ।।
“ಹೋಗು! ಹೋಗು! ಸುಶ್ರೋಣೀ! ಭೀಷ್ಮನಿಗೆ ಹೆದರುತ್ತೇನೆ. ಮತ್ತು ನೀನು ಭೀಷ್ಮನ ಸ್ವತ್ತು” ಎಂದು ಶಾಲ್ವನು ಪುನಃ ಪುನಃ ಹೇಳಿದನು.
05172023a ಏವಮುಕ್ತಾ ತು ಸಾ ತೇನ ಶಾಲ್ವೇನಾದೀರ್ಘದರ್ಶಿನಾ।
05172023c ನಿಶ್ಚಕ್ರಾಮ ಪುರಾದ್ದೀನಾ ರುದತೀ ಕುರರೀ ಯಥಾ।।
ದೀರ್ಘದರ್ಶಿಯಲ್ಲದ ಶಾಲ್ವನು ಹೀಗೆ ಹೇಳಲು ಅವಳು ದೀನಳಾಗಿ ಕುರರಿಯಂತೆ ರೋದಿಸುತ್ತಾ ಪುರದಿಂದ ಹೊರಬಂದಳು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ದ್ವಿಸಪ್ತತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ನೂರಾಎಪ್ಪತ್ತೆರಡನೆಯ ಅಧ್ಯಾಯವು.
-
ಈ ವಿಷಯದ ಕುರಿತು ಬಾಹ್ಲೀಕನು ಭೀಷ್ಮನಿಗೆ ಹೇಳಿದ ಮಾತುಗಳು ಮುಂದೆ ಅನುಶಾಸನ ಪರ್ವದ ಅಧ್ಯಾಯ 44ರಲ್ಲಿ ಬರುತ್ತವೆ. ↩︎