ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ರಥಾಥಿರಥಸಂಖ್ಯ ಪರ್ವ
ಅಧ್ಯಾಯ 167
ಸಾರ
ಪಾಂಡವರ ಸೇನೆಯಲ್ಲಿರುವ ದ್ರೌಪದೇಯರು ಮತ್ತು ಉತ್ತರರು ಮಹಾರಥರೆಂದೂ, ಅಭಿಮನ್ಯು ಸಾತ್ಯಕಿಯರು ರಥಯೂಥಪಯೂಥರೆಂದೂ, ಉತ್ತಮೌಜಸ, ವಿರಾಟ, ದ್ರುಪದರು ಮಹಾರಥಿಗಳೆಂದೂ, ಯುಧಾಮನ್ಯುವು ರಥೋದಾರನೆಂದೂ ಭೀಷ್ಮನು ದುರ್ಯೋಧನನಿಗೆ ಹೇಳಿದುದು (1-14).
05167001 ಭೀಷ್ಮ ಉವಾಚ।
05167001a ದ್ರೌಪದೇಯಾ ಮಹಾರಾಜ ಸರ್ವೇ ಪಂಚ ಮಹಾರಥಾಃ।
05167001c ವೈರಾಟಿರುತ್ತರಶ್ಚೈವ ರಥೋ ಮಮ ಮಹಾನ್ಮತಃ।।
ಭೀಷ್ಮನು ಹೇಳಿದನು: “ಮಹಾರಾಜ! ದ್ರೌಪದೇಯರೆಲ್ಲರೂ ಐವರು ಮಹಾರಥರು. ವೈರಾಟೀ ಉತ್ತರನೂ ಕೂಡ ಮಹಾರಥನೆಂದು ನನ್ನ ಮತ.
05167002a ಅಭಿಮನ್ಯುರ್ಮಹಾರಾಜ ರಥಯೂಥಪಯೂಥಪಃ।
05167002c ಸಮಃ ಪಾರ್ಥೇನ ಸಮರೇ ವಾಸುದೇವೇನ ವಾ ಭವೇತ್।।
ಮಹಾರಾಜ! ಅಭಿಮನ್ಯುವು ರಥಯೂಥಪಯೂಥಪನು. ಸಮರದಲ್ಲಿ ಅವನು ಪಾರ್ಥನ ಅಥವಾ ವಾಸುದೇವನ ಸಮನಾಗುತ್ತಾನೆ.
05167003a ಲಘ್ವಸ್ತ್ರಶ್ಚಿತ್ರಯೋಧೀ ಚ ಮನಸ್ವೀ ದೃಢವಿಕ್ರಮಃ।
05167003c ಸಂಸ್ಮರನ್ವೈ ಪರಿಕ್ಲೇಶಂ ಸ್ವಪಿತುರ್ವಿಕ್ರಮಿಷ್ಯತಿ।।
ಅಸ್ತ್ರಗಳಲ್ಲಿ ಲಘುತ್ವವನ್ನು ಹೊಂದಿದ, ಚಿತ್ರಯೋಧೀ, ಆ ಮನಸ್ವೀ ದೃಢವಿಕ್ರಮಿಯು ತನ್ನ ತಂದೆಗುಂಟಾದ ಪರಿಕ್ಲೇಶಗಳನ್ನು ಸಂಸ್ಮರಿಸಿಕೊಂಡು ವಿಕ್ರಮವನ್ನು ತೋರಿಸುತ್ತಾನೆ.
05167004a ಸಾತ್ಯಕಿರ್ಮಾಧವಃ ಶೂರೋ ರಥಯೂಥಪಯೂಥಪಃ।
05167004c ಏಷ ವೃಷ್ಣಿಪ್ರವೀರಾಣಾಮಮರ್ಷೀ ಜಿತಸಾಧ್ವಸಃ।।
ಮಾಧವ ಶೂರ ಸಾತ್ಯಕಿಯು ರಥಯೂಥಪಯೂಥಪನು. ಈ ವೃಷ್ಣಿಪ್ರವೀರನು ಭಯವಿಲ್ಲದವನು, ಜಯಿಸಲಸಾಧ್ಯನು.
05167005a ಉತ್ತಮೌಜಾಸ್ತಥಾ ರಾಜನ್ರಥೋ ಮಮ ಮಹಾನ್ಮತಃ।
05167005c ಯುಧಾಮನ್ಯುಶ್ಚ ವಿಕ್ರಾಂತೋ ರಥೋದಾರೋ ನರರ್ಷಭಃ।।
ರಾಜನ್! ಉತ್ತಮೌಜಸನು ಮಹಾರಥನೆಂದು ನನ್ನ ಮತ. ನರರ್ಷಭ ವಿಕ್ರಾಂತ ಯುಧಾಮನ್ಯುವು ರಥೋದಾರ.
05167006a ಏತೇಷಾಂ ಬಹುಸಾಹಸ್ರಾ ರಥಾ ನಾಗಾ ಹಯಾಸ್ತಥಾ।
05167006c ಯೋತ್ಸ್ಯಂತೇ ತೇ ತನುಂ ತ್ಯಕ್ತ್ವಾ ಕುಂತೀಪುತ್ರಪ್ರಿಯೇಪ್ಸಯಾ।।
05167007a ಪಾಂಡವೈಃ ಸಹ ರಾಜೇಂದ್ರ ತವ ಸೇನಾಸು ಭಾರತ।
05167007c ಅಗ್ನಿಮಾರುತವದ್ರಾಜನ್ನಾಹ್ವಯಂತಃ ಪರಸ್ಪರಂ।।
ಅವರಲ್ಲಿ ಬಹುಸಹಸ್ರ ರಥಗಳಿವೆ, ಆನೆಗಳಿವೆ ಮತ್ತು ಕುದುರೆಗಳಿವೆ. ರಾಜೇಂದ್ರ! ಭಾರತ! ಅವರು ತನುವನ್ನು ತ್ಯಜಿಸಿ ಕುಂತೀಪುತ್ರನನ್ನು ಸಂತೋಷಗೊಳಿಸಲೋಸುಗ ಪಾಂಡವರೊಂದಿಗೆ ನಿನ್ನ ಸೇನೆಯು ವಿರುದ್ಧ ಅಗ್ನಿ-ಮಾರುತಗಳಂತೆ ಪರಸ್ಪರರನ್ನು ಕರೆಯುತ್ತಾ ಯುದ್ಧಮಾಡುವರು.
05167008a ಅಜೇಯೌ ಸಮರೇ ವೃದ್ಧೌ ವಿರಾಟದ್ರುಪದಾವುಭೌ।
05167008c ಮಹಾರಥೌ ಮಹಾವೀರ್ಯೌ ಮತೌ ಮೇ ಪುರುಷರ್ಷಭೌ।।
ವೃದ್ಧರಾದ ವಿರಾಟ-ದ್ರುಪದರಿಬ್ಬರೂ ಸಮರದಲ್ಲಿ ಅಜೇಯರು. ಇಬ್ಬರು ಮಹಾವೀರ್ಯ ಪುರುಷರ್ಷಭರೂ ನನ್ನ ಪ್ರಕಾರ ಮಹಾರಥರು.
05167009a ವಯೋವೃದ್ಧಾವಪಿ ತು ತೌ ಕ್ಷತ್ರಧರ್ಮಪರಾಯಣೌ।
05167009c ಯತಿಷ್ಯೇತೇ ಪರಂ ಶಕ್ತ್ಯಾ ಸ್ಥಿತೌ ವೀರಗತೇ ಪಥಿ।।
ವಯೋವೃದ್ಧರಾಗಿದ್ದರೂ ಇವರಿಬ್ಬರು ಕ್ಷತ್ರಧರ್ಮಪರಾಯಣರು ತಮ್ಮ ಪರಮ ಶಕ್ತಿಯನ್ನುಪಯೋಗಿಸಿ ವೀರರು ಹೋದ ಪಥದಲ್ಲಿ ನಿಲ್ಲುತ್ತಾರೆ.
05167010a ಸಂಬಂಧಕೇನ ರಾಜೇಂದ್ರ ತೌ ತು ವೀರ್ಯಬಲಾನ್ವಯಾತ್।
05167010c ಆರ್ಯವೃತ್ತೌ ಮಹೇಷ್ವಾಸೌ ಸ್ನೇಹಪಾಶಸಿತಾವುಭೌ।।
ರಾಜೇಂದ್ರ! ಸಂಬಂಧದಿಂದ ಮತ್ತು ವೀರ್ಯಬಲಾನ್ವಯದಿಂದ ಈ ಇಬ್ಬರು ಆರ್ಯ ಮಹೇಷ್ವಾಸರು ಸ್ನೇಹಪಾಶದಿಂದ ಬಂಧಿತರಾಗಿದ್ದಾರೆ.
05167011a ಕಾರಣಂ ಪ್ರಾಪ್ಯ ತು ನರಾಃ ಸರ್ವ ಏವ ಮಹಾಭುಜಾಃ।
05167011c ಶೂರಾ ವಾ ಕಾತರಾ ವಾಪಿ ಭವಂತಿ ನರಪುಂಗವ।।
ನರಪುಂಗವ! ಕಾರಣಗಳನ್ನು ಪಡೆದು ನರರೆಲ್ಲರೂ ಶೂರರು ಅಥವಾ ಹೇಡಿಗಳಾಗುತ್ತಾರೆ.
05167012a ಏಕಾಯನಗತಾವೇತೌ ಪಾರ್ಥೇನ ದೃಢಭಕ್ತಿಕೌ।
05167012c ತ್ಯಕ್ತ್ವಾ ಪ್ರಾಣಾನ್ಪರಂ ಶಕ್ತ್ಯಾ ಘಟಿತಾರೌ ನರಾಧಿಪ।।
ನರಾಧಿಪ! ಒಂದೇ ಮಾರ್ಗದಲ್ಲಿರುವ, ಪಾರ್ಥನಲ್ಲಿ ದೃಢಭಕ್ತಿಯನ್ನಿಟ್ಟಿರುವ ಇವರಿಬ್ಬರೂ ಪ್ರಾಣಗಳನ್ನು ತೊರೆದು ಶಕ್ತಿಯಿಂದ ಶತ್ರುಗಳೊಂದಿಗೆ ಹೋರಾಡುತ್ತಾರೆ.
05167013a ಪೃಥಗಕ್ಷೌಹಿಣೀಭ್ಯಾಂ ತಾವುಭೌ ಸಮ್ಯತಿ ದಾರುಣೌ।
05167013c ಸಂಬಂಧಿಭಾವಂ ರಕ್ಷಂತೌ ಮಹತ್ಕರ್ಮ ಕರಿಷ್ಯತಃ।।
ಒಂದೊಂದು ಅಕ್ಷೌಹಿಣಿಯನ್ನು ಹೊಂದಿರುವ, ಯುದ್ಧದಲ್ಲಿ ದಾರುಣರಾದ ಇವರಿಬ್ಬರು ಸಂಬಂಧಿಭಾವವನ್ನು ರಕ್ಷಿಸಿಕೊಳ್ಳುತ್ತಾ ಮಹಾಕಾರ್ಯಗಳನ್ನೆಸಗುತ್ತಾರೆ.
05167014a ಲೋಕವೀರೌ ಮಹೇಷ್ವಾಸೌ ತ್ಯಕ್ತಾತ್ಮಾನೌ ಚ ಭಾರತ।
05167014c ಪ್ರತ್ಯಯಂ ಪರಿರಕ್ಷಂತೌ ಮಹತ್ಕರ್ಮ ಕರಿಷ್ಯತಃ।।
ಭಾರತ! ಈ ಇಬ್ಬರು ಲೋಕವೀರ ಮಹೇಷ್ವಾಸರು ಆತ್ಮಗಳನ್ನು ತ್ಯಜಿಸಿ ತಮ್ಮ ಪ್ರತ್ಯಯಗಳನ್ನು ರಕ್ಷಿಸಿಕೊಳ್ಳುತ್ತಾ ಮಹಾಕಾರ್ಯಗಳನ್ನೆಸಗುತ್ತಾರೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಸಪ್ತಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ನೂರಾಅರವತ್ತೇಳನೆಯ ಅಧ್ಯಾಯವು.