161 ಸೇನಾಪತಿನಿಯೋಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ರಥಾಥಿರಥಸಂಖ್ಯ ಪರ್ವ

ಅಧ್ಯಾಯ 161

ಸಾರ

ಯುಧಿಷ್ಠಿರನು ಸೇನಾ ನಾಯಕತ್ವವನ್ನು ಧೃಷ್ಟದ್ಯುಮ್ನನಿಗೆ ನೀಡಿದುದು (1-4). ತನ್ನ ಸೇನೆಯಲ್ಲಿರುವ ಒಬ್ಬೊಬ್ಬ ರಥಿಗಳಿಗೆ ಕೌರವ ಸೇನೆಯ ರಥಿಗಳನ್ನು ಪ್ರತ್ಯೇಕ ಪ್ರತ್ಯೇಕ ಗುರಿಯಾಗಿ ಗುರುತಿಸಿಕೊಳ್ಳುವುದು (5-12).

05161001 ಸಂಜಯ ಉವಾಚ।
05161001a ಉಲೂಕಸ್ಯ ವಚಃ ಶ್ರುತ್ವಾ ಕುಂತೀಪುತ್ರೋ ಯುಧಿಷ್ಠಿರಃ।
05161001c ಸೇನಾಂ ನಿರ್ಯಾಪಯಾಮಾಸ ಧೃಷ್ಟದ್ಯುಮ್ನಪುರೋಗಮಾಂ।।

ಸಂಜಯನು ಹೇಳಿದನು: “ಉಲೂಕನ ಮಾತನ್ನು ಕೇಳಿ ಕುಂತೀಪುತ್ರ ಯುಧಿಷ್ಠಿರನು ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಸೇನೆಯನ್ನು ಹೊರಡಿಸಿದನು.

05161002a ಪದಾತಿನೀಂ ನಾಗವತೀಂ ರಥಿನೀಮಶ್ವವೃಂದಿನೀಂ।
05161002c ಚತುರ್ವಿಧಬಲಾಂ ಭೀಮಾಮಕಂಪ್ಯಾಂ ಪೃಥಿವೀಮಿವ।।

ಪದಾತಿಗಳಿಂದ, ಆನೆಗಳಿಂದ, ರಥಗಳಿಂದ, ಅಶ್ವವೃಂದಗಳಿಂದ ಕೂಡಿದ ಚತುರ್ವಿಧ ಬಲವು ಪೃಥ್ವಿಯನ್ನೇ ನಡುಗಿಸುವಂತೆ ಭಯಂಕರವಾಗಿತ್ತು.

05161003a ಭೀಮಸೇನಾದಿಭಿರ್ಗುಪ್ತಾಂ ಸಾರ್ಜುನೈಶ್ಚ ಮಹಾರಥೈಃ।
05161003c ಧೃಷ್ಟದ್ಯುಮ್ನವಶಾಂ ದುರ್ಗಾಂ ಸಾಗರಸ್ತಿಮಿತೋಪಮಾಂ।।

ಭೀಮಸೇನನಿಂದ, ಅರ್ಜುನನಿಂದ ಮತ್ತು ಮಹಾರಥಿಗಳಿಂದ ರಕ್ಷಿತವಾದ ಧೃಷ್ಟದ್ಯುಮ್ನನ ವಶದಲ್ಲಿದ್ದ ಆ ಸೇನೆಯು ತಿಮಿಂಗಿಲಗಳಿಂದ ತುಂಬಿದ ಸಾಗರದಂತೆ ಅಸಾಧ್ಯವಾಗಿತ್ತು.

05161004a ತಸ್ಯಾಸ್ತ್ವಗ್ರೇ ಮಹೇಷ್ವಾಸಃ ಪಾಂಚಾಲ್ಯೋ ಯುದ್ಧದುರ್ಮದಃ।
05161004c ದ್ರೋಣಪ್ರೇಪ್ಸುರನೀಕಾನಿ ಧೃಷ್ಟದ್ಯುಮ್ನಃ ಪ್ರಕರ್ಷತಿ।।

ಅದರ ಮುಂದೆ ಮಹೇಷ್ವಾಸ, ಯುದ್ಧದುರ್ಮದ, ದ್ರೋಣನನ್ನು ಅರಸುತ್ತಿರುವ ಪಾಂಚಾಲ ಧೃಷ್ಟದ್ಯುಮ್ನನು ಸೇನೆಯನ್ನು ಕರೆದುಕೊಂಡು ಹೋಗುತ್ತಿದ್ದನು.

05161005a ಯಥಾಬಲಂ ಯಥೋತ್ಸಾಹಂ ರಥಿನಃ ಸಮುಪಾದಿಶತ್।
05161005c ಅರ್ಜುನಂ ಸೂತಪುತ್ರಾಯ ಭೀಮಂ ದುರ್ಯೋಧನಾಯ ಚ।।
05161006a ಅಶ್ವತ್ಥಾಮ್ನೇ ಚ ನಕುಲಂ ಶೈಬ್ಯಂ ಚ ಕೃತವರ್ಮಣೇ।
05161006c ಸೈಂಧವಾಯ ಚ ವಾರ್ಷ್ಣೇಯಂ ಯುಯುಧಾನಮುಪಾದಿಶತ್।।

ಯಥಾಬಲವಾಗಿ, ಉತ್ಸಾಹವಿದ್ದಂತೆ ರಥಿಗಳನ್ನು ಸೂಚಿಸಲಾಗಿತ್ತು: ಸೂತಪುತ್ರನಿಗೆ ಅರ್ಜುನ, ದುರ್ಯೋಧನನಿಗೆ ಭೀಮ, ಅಶ್ವತ್ಥಾಮನಿಗೆ ನಕುಲ, ಕೃತವರ್ಮನಿಗೆ ಶೈಬ್ಯ, ಸೈಂಧವನಿಗೆ ವಾರ್ಷ್ಣೇಯ ಯುಯುಧಾನನನ್ನು ಇಡಲಾಯಿತು.

05161007a ಶಿಖಂಡಿನಂ ಚ ಭೀಷ್ಮಾಯ ಪ್ರಮುಖೇ ಸಮಕಲ್ಪಯತ್।
05161007c ಸಹದೇವಂ ಶಕುನಯೇ ಚೇಕಿತಾನಂ ಶಲಾಯ ಚ।।
05161008a ಧೃಷ್ಟಕೇತುಂ ಚ ಶಲ್ಯಾಯ ಗೌತಮಾಯೋತ್ತಮೌಜಸಂ।
05161008c ದ್ರೌಪದೇಯಾಂಶ್ಚ ಪಂಚಭ್ಯಸ್ತ್ರಿಗರ್ತೇಭ್ಯಃ ಸಮಾದಿಶತ್।।

ಶಿಖಂಡಿಯನ್ನು ಪ್ರಮುಖವಾಗಿ ಭೀಷ್ಮನಿಗೆ, ಸಹದೇವನನ್ನು ಶಕುನಿಗೆ, ಚೇಕಿತಾನನನ್ನು ಶಲನಿಗೆ, ಧೃಷ್ಟಕೇತುವನ್ನು ಶಲ್ಯನಿಗೆ, ಗೌತಮನಿಗೆ ಉತ್ತಮೌಜಸನನ್ನು, ಮತ್ತು ಐವರು ದ್ರೌಪದೇಯರನ್ನು ತ್ರಿಗರ್ತರಿಗೆ ಇಡಲಾಯಿತು.

05161009a ವೃಷಸೇನಾಯ ಸೌಭದ್ರಂ ಶೇಷಾಣಾಂ ಚ ಮಹೀಕ್ಷಿತಾಂ।
05161009c ಸಮರ್ಥಂ ತಂ ಹಿ ಮೇನೇ ವೈ ಪಾರ್ಥಾದಭ್ಯಧಿಕಂ ರಣೇ।।

ಸೌಭದ್ರನನ್ನು ವೃಷಸೇನನಿಗೆ ಮತ್ತು ಉಳಿದ ಮಹೀಕ್ಷಿತರಿಗೆ ಇರಿಸಲಾಯಿತು. ಏಕೆಂದರೆ ಅವನನ್ನು ಪಾರ್ಥನಿಗಿಂತಲೂ ಸಮರ್ಥನೆಂದು ತಿಳಿಯಲಾಗಿತ್ತು.

05161010a ಏವಂ ವಿಭಜ್ಯ ಯೋಧಾಂಸ್ತಾನ್ಪೃಥಕ್ಚ ಸಹ ಚೈವ ಹ।
05161010c ಜ್ವಾಲಾವರ್ಣೋ ಮಹೇಷ್ವಾಸೋ ದ್ರೋಣಮಂಶಮಕಲ್ಪಯತ್।।

ಈ ರೀತಿ ಯೋಧರನ್ನು ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ವಿಭಜಿಸಿ ಮಹೇಷ್ವಾಸ ಜ್ವಾಲವರ್ಣಿಯು ದ್ರೋಣನನ್ನು ತನ್ನ ಪಾಲಿಗೆ ಇರಿಸಿಕೊಂಡನು.

05161011a ಧೃಷ್ಟದ್ಯುಮ್ನೋ ಮಹೇಷ್ವಾಸಃ ಸೇನಾಪತಿಪತಿಸ್ತತಃ।
05161011c ವಿಧಿವದ್ವ್ಯೂಹ್ಯ ಮೇಧಾವೀ ಯುದ್ಧಾಯ ಧೃತಮಾನಸಃ।।
05161012a ಯಥಾದಿಷ್ಟಾನ್ಯನೀಕಾನಿ ಪಾಂಡವಾನಾಮಯೋಜಯತ್।
05161012c ಜಯಾಯ ಪಾಂಡುಪುತ್ರಾಣಾಂ ಯತ್ತಸ್ತಸ್ಥೌ ರಣಾಜಿರೇ।।

ಆಗ ಮಹೇಷ್ವಾಸ ಸೇನಾಪತಿ ಮೇಧಾವೀ ಧೃಷ್ಟದ್ಯುಮ್ನನು ವಿಧಿವತ್ತಾಗಿ ವ್ಯೂಹವನ್ನು ರಚಿಸಿ ಯುದ್ಧಕ್ಕೆ ಧೃತಮನಸ್ಕನಾಗಿ ಯಥಾವತ್ತಾಗಿ ಪಾಂಡವರ ಸೇನೆಯನ್ನು ಆಯೋಜಿಸಿ ಪಾಂಡುಪುತ್ರರ ಜಯಕ್ಕಾಗಿ ರಣವನ್ನು ಸಿದ್ಧಗೊಳಿಸಿ ನಿಂತನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಸೇನಾಪತಿನಿಯೋಗೇ ಏಕಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ಸೇನಾಪತಿನಿಯೋಗದಲ್ಲಿ ನೂರಾಅರವತ್ತೊಂದನೆಯ ಅಧ್ಯಾಯವು.