159 ಕೃಷ್ಣಾದಿವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉಲೂಕದೂತಾಗಮನ ಪರ್ವ

ಅಧ್ಯಾಯ 159

ಸಾರ

ಕೃಷ್ಣನು ಉಲೂಕನಿಗೆ “ಯುಧಿಷ್ಠಿರನಾಗಲೀ, ಪಾರ್ಥನಾಗಲೀ, ಭೀಮಸೇನನಾಗಲೀ, ಯಮಳರಾಗಲೀ ನಿನ್ನ ಪ್ರತಿಕೂಲದ ಮಾತುಗಳಿಗೆ ಗಮನ ಕೊಡುವುದಿಲ್ಲ” ಎಂದು ಹೇಳಿದುದು (1-13).

05159001 ಸಂಜಯ ಉವಾಚ।
05159001a ಉಲೂಕಸ್ತ್ವರ್ಜುನಂ ಭೂಯೋ ಯಥೋಕ್ತಂ ವಾಕ್ಯಮಬ್ರವೀತ್।
05159001c ಆಶೀವಿಷಮಿವ ಕ್ರುದ್ಧಂ ತುದನ್ವಾಕ್ಯಶಲಾಕಯಾ।।

ಸಂಜಯನು ಹೇಳಿದನು: “ತನ್ನ ವಾಕ್ಯ ಶಲಾಕೆಯಿಂದ ವಿಷಸರ್ಪದಂತಿದ್ದ ಅರ್ಜುನನನ್ನು ಪುನಃ ಪುನಃ ತಿವಿಯುತ್ತಾ ಉಲೂಕನು ಹೇಳಿದುದನ್ನೇ ಇನ್ನೊಮ್ಮೆ ಹೇಳಿದನು.

05159002a ತಸ್ಯ ತದ್ವಚನಂ ಶ್ರುತ್ವಾ ರುಷಿತಾಃ ಪಾಂಡವಾ ಭೃಶಂ।
05159002c ಪ್ರಾಗೇವ ಭೃಶಸಂಕ್ರುದ್ಧಾಃ ಕೈತವ್ಯೇನ ಪ್ರಧರ್ಷಿತಾಃ।।

ಅವನು ಮೊದಲು ಹೇಳಿದುದನ್ನು ಕೇಳಿಯೇ ಪಾಂಡವರು ತುಂಬಾ ರೋಷಿತರಾಗಿದ್ದರು. ಪುನಃ ಅದನ್ನೇ ಹೇಳಿದ ಕೈತವ್ಯನ ಮೇಲೆ ಇನ್ನೂ ತುಂಬಾ ಕುಪಿತರಾದರು.

05159003a ನಾಸನೇಷ್ವವತಿಷ್ಠಂತ ಬಾಹೂಂಶ್ಚೈವ ವಿಚಿಕ್ಷಿಪುಃ।
05159003c ಆಶೀವಿಷಾ ಇವ ಕ್ರುದ್ಧಾ ವೀಕ್ಷಾಂ ಚಕ್ರುಃ ಪರಸ್ಪರಂ।।

ಎಲ್ಲರೂ ಎದ್ದು ನಿಂತು ತಮ್ಮ ತೋಳುಗಳನ್ನು ಬೀಸಿದರು. ವಿಷಪೂರಿತ ಸರ್ಪಗಳಂತೆ ಕೃದ್ಧರಾಗಿ ಪರಸ್ಪರರನ್ನು ವೀಕ್ಷಿಸತೊಡಗಿದರು.

05159004a ಅವಾಕ್ಶಿರಾ ಭೀಮಸೇನಃ ಸಮುದೈಕ್ಷತ ಕೇಶವಂ।
05159004c ನೇತ್ರಾಭ್ಯಾಂ ಲೋಹಿತಾಂತಾಭ್ಯಾಮಾಶೀವಿಷ ಇವ ಶ್ವಸನ್।।

ಭೀಮಸೇನನು ತಲೆಯನ್ನು ಕೆಳಗೆ ಮಾಡಿಕೊಂಡು ಕೆಂಪಾಗಿದ್ದ ಕಡೆಗಣ್ಣಿನ ಓರೆನೋಟದಿಂದ ಕೇಶವನ್ನು ನೋಡಿ ವಿಷಕಾರುವ ಸರ್ಪದಂತೆ ನಿಟ್ಟುಸಿರು ಬಿಟ್ಟನು.

05159005a ಆರ್ತಂ ವಾತಾತ್ಮಜಂ ದೃಷ್ಟ್ವಾ ಕ್ರೋಧೇನಾಭಿಹತಂ ಭೃಶಂ।
05159005c ಉತ್ಸ್ಮಯನ್ನಿವ ದಾಶಾರ್ಹಃ ಕೈತವ್ಯಂ ಪ್ರತ್ಯಭಾಷತ।।

ಕ್ರೋಧದಿಂದ ಅತಿ ಹೊಡೆತಕ್ಕೆ ಸಿಕ್ಕಿ ಆರ್ತನಾದ ವಾತಾತ್ಮಜನನ್ನು ನೋಡಿ ಕೈತವ್ಯನ ಉತ್ಸಾಹವನ್ನು ಹೆಚ್ಚಿಸಲೋ ಎನ್ನುವಂತೆ ದಾಶಾರ್ಹನು ಅವನಿಗೆ ತಿರುಗಿ ಮಾತನಾಡಿದನು.

05159006a ಪ್ರಯಾಹಿ ಶೀಘ್ರಂ ಕೈತವ್ಯ ಬ್ರೂಯಾಶ್ಚೈವ ಸುಯೋಧನಂ।
05159006c ಶ್ರುತಂ ವಾಕ್ಯಂ ಗೃಹೀತೋಽರ್ಥೋ ಮತಂ ಯತ್ತೇ ತಥಾಸ್ತು ತತ್।।

“ಕೈತವ್ಯ! ಶೀಘ್ರವೇ ಇಲ್ಲಿಂದ ಹೊರಟು ಸುಯೋಧನನಿಗೆ ಇದೆಲ್ಲವನ್ನೂ ಹೇಳು! ನಿನ್ನ ಮಾತನ್ನು ಕೇಳಿದ್ದಾರೆ ಮತ್ತು ಸ್ವೀಕರಿಸಿದ್ದಾರೆ. ನಿನ್ನ ಮತವೇನಿದೆಯೋ ಹಾಗೆಯೇ ಆಗಲಿ!

05159007a ಮದ್ವಚಶ್ಚಾಪಿ ಭೂಯಸ್ತೇ ವಕ್ತವ್ಯಃ ಸ ಸುಯೋಧನಃ।
05159007c ಶ್ವ ಇದಾನೀಂ ಪ್ರದೃಶ್ಯೇಥಾಃ ಪುರುಷೋ ಭವ ದುರ್ಮತೇ।।

ನನ್ನ ಈ ಮಾತುಗಳನ್ನು ಕೂಡ ಪುನಃ ಪುನಃ ಸುಯೋಧನನಿಗೆ ಹೇಳು. “ದುರ್ಮತೇ! ಪುರುಷನಾಗು! ಇವೆಲ್ಲವೂ ನಾಳೆ ನಿನಗೆ ಕಾಣಿಸಿಕೊಳ್ಳುತ್ತವೆ.

05159008a ಮನ್ಯಸೇ ಯಚ್ಚ ಮೂಢ ತ್ವಂ ನ ಯೋತ್ಸ್ಯತಿ ಜನಾರ್ದನಃ।
05159008c ಸಾರಥ್ಯೇನ ವೃತಃ ಪಾರ್ಥೈರಿತಿ ತ್ವಂ ನ ಬಿಭೇಷಿ ಚ।।

ಮೂಢ! ಈ ಜನಾರ್ದನನು ಯುದ್ಧಮಾಡುವುದಿಲ್ಲವೆಂದು ನೀನು ಯೋಚಿಸುತ್ತಿರುವೆ. ಪಾರ್ಥರಿಗೆ ಕೇವಲ ಸಾರಥಿ ಎಂದು ನಿನಗೆ ಭಯವಿಲ್ಲ.

05159009a ಜಘನ್ಯಕಾಲಮಪ್ಯೇತದ್ಭವೇದ್ಯತ್ಸರ್ವಪಾರ್ಥಿವಾನ್।
05159009c ನಿರ್ದಹೇಯಮಹಂ ಕ್ರೋಧಾತ್ತೃಣಾನೀವ ಹುತಾಶನಃ।।

ಆದರೆ ಅದು ಒಂದು ಕ್ಷಣವೂ ಹಾಗಿರುವುದಿಲ್ಲ. ಕ್ರೋಧದಿಂದ ಅಗ್ನಿಯು ಹುಲ್ಲಿನ ರಾಶಿಯನ್ನು ಸುಡುವ ಹಾಗೆ ನಾನು ಈ ಎಲ್ಲ ಪಾರ್ಥಿವರನ್ನೂ ಸುಟ್ಟು ಹಾಕಬಲ್ಲೆ.

05159010a ಯುಧಿಷ್ಠಿರನಿಯೋಗಾತ್ತು ಫಲ್ಗುನಸ್ಯ ಮಹಾತ್ಮನಃ।
05159010c ಕರಿಷ್ಯೇ ಯುಧ್ಯಮಾನಸ್ಯ ಸಾರಥ್ಯಂ ವಿದಿತಾತ್ಮನಃ।।

ಯುಧಿಷ್ಠಿರನ ನಿಯೋಗದಂತೆ ನಾನು ಯುದ್ಧಮಾಡುವಾಗ ತನ್ನನ್ನು ಚೆನ್ನಾಗಿ ತಿಳಿದುಕೊಂಡಿರುವ ಮಹಾತ್ಮ ಫಲ್ಗುನನ ಸಾರಥ್ಯವನ್ನು ಮಾಡುತ್ತೇನೆ.

05159011a ಯದ್ಯುತ್ಪತಸಿ ಲೋಕಾಂಸ್ತ್ರೀನ್ಯದ್ಯಾವಿಶಸಿ ಭೂತಲಂ।
05159011c ತತ್ರ ತತ್ರಾರ್ಜುನರಥಂ ಪ್ರಭಾತೇ ದ್ರಕ್ಷ್ಯಸೇಽಗ್ರತಃ।।

ನಾಳೆ ನೀನು ಮೂರು ಲೋಕಗಳಿಗೆ ಹಾರಿ ಹೋದರೂ ಭೂತಲವನ್ನು ಹೊಕ್ಕರೂ ಅಲ್ಲಿ ಎದುರಿಗೆ ಅರ್ಜುನನ ರಥವು ಕಂಡುಬರುತ್ತದೆ.

05159012a ಯಚ್ಚಾಪಿ ಭೀಮಸೇನಸ್ಯ ಮನ್ಯಸೇ ಮೋಘಗರ್ಜಿತಂ।
05159012c ದುಃಶಾಸನಸ್ಯ ರುಧಿರಂ ಪೀತಮಿತ್ಯವಧಾರ್ಯತಾಂ।।

ಭೀಮಸೇನನ ಗರ್ಜನೆಯು ವ್ಯರ್ಥವೆಂದು ನಿನಗನ್ನಿಸಿದರೆ ದುಃಶಾಸನನ ರಕ್ತವನ್ನು ಕುಡಿದಾಯಿತೆಂದು ತಿಳಿದುಕೋ!

05159013a ನ ತ್ವಾಂ ಸಮೀಕ್ಷತೇ ಪಾರ್ಥೋ ನಾಪಿ ರಾಜಾ ಯುಧಿಷ್ಠಿರಃ।
05159013c ನ ಭೀಮಸೇನೋ ನ ಯಮೌ ಪ್ರತಿಕೂಲಪ್ರಭಾಷಿಣಂ।।

ರಾಜಾ ಯುಧಿಷ್ಠಿರನಾಗಲೀ, ಪಾರ್ಥನಾಗಲೀ, ಭೀಮಸೇನನಾಗಲೀ, ಯಮಳರಾಗಲೀ ನಿನ್ನ ಪ್ರತಿಕೂಲದ ಮಾತುಗಳಿಗೆ ಗಮನ ಕೊಡುವುದಿಲ್ಲ.”””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉಲೂಕದೂತಾಗಮನ ಪರ್ವಣಿ ಕೃಷ್ಣಾದಿವಾಕ್ಯೇ ಏಕೋನಷಷ್ಟ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉಲೂಕದೂತಾಗಮನ ಪರ್ವದಲ್ಲಿ ಕೃಷ್ಣಾದಿವಾಕ್ಯದಲ್ಲಿ ನೂರಾಐವತ್ತೊಂಭತ್ತನೆಯ ಅಧ್ಯಾಯವು.