ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಕರ್ಣವಿವಾದ ಪರ್ವ
ಅಧ್ಯಾಯ 148
ಸಾರ
ಕುರುಸಂಸದಿಯಲ್ಲಿ ತಾನು ಹೇಗೆ ಸಾಮ-ದಾನ-ಬೇಧ-ದಂಡೋಪಾಯಗಳನ್ನು ಬಳಸಿ ಶಾಂತಿಯನ್ನು ತರಲು ಪ್ರಯತ್ನಿಸಿದೆನೆಂದು ಕೃಷ್ಣನು ಯುಧಿಷ್ಠಿರನಲ್ಲಿ ಹೇಳಿಕೊಳ್ಳುವುದು (1-19).
05148001 ವಾಸುದೇವ ಉವಾಚ।
05148001a ಏವಮುಕ್ತೇ ತು ಭೀಷ್ಮೇಣ ದ್ರೋಣೇನ ವಿದುರೇಣ ಚ।
05148001c ಗಾಂಧಾರ್ಯಾ ಧೃತರಾಷ್ಟ್ರೇಣ ನ ಚ ಮಂದೋಽನ್ವಬುಧ್ಯತ।।
ವಾಸುದೇವನು ಹೇಳಿದನು: “ಭೀಷ್ಮ, ದ್ರೋಣ, ವಿದುರರು, ಗಾಂಧಾರಿ ಮತ್ತು ಧೃತರಾಷ್ಟ್ರರು ಹೀಗೆ ಹೇಳಿದರೂ ಆ ಮಂದನು ತನ್ನ ಬುದ್ಧಿಯನ್ನು ಬದಲಿಸಲಿಲ್ಲ.
05148002a ಅವಧೂಯೋತ್ಥಿತಃ ಕ್ರುದ್ಧೋ ರೋಷಾತ್ಸಂರಕ್ತಲೋಚನಃ।
05148002c ಅನ್ವದ್ರವಂತ ತಂ ಪಶ್ಚಾದ್ರಾಜಾನಸ್ತ್ಯಕ್ತಜೀವಿತಾಃ।।
ಅವರನ್ನು ಕಡೆಗಣಿಸಿ, ರೋಷದಿಂದ ರಕ್ತಲೋಚನನಾಗಿ ಸಿಟ್ಟಿನಿಂದ ಮೇಲೆದ್ದನು. ಅವನ ಹಿಂದೆ ಜೀವಿತವನ್ನು ತೊರೆದ ಇತರ ರಾಜರು ಹಿಂಬಾಲಿಸಿದರು.
05148003a ಅಜ್ಞಾಪಯಚ್ಚ ರಾಜ್ಞಾಸ್ತಾನ್ಪಾರ್ಥಿವಾನ್ದುಷ್ಟಚೇತಸಃ।
05148003c ಪ್ರಯಾಧ್ವಂ ವೈ ಕುರುಕ್ಷೇತ್ರಂ ಪುಷ್ಯೋಽದ್ಯೇತಿ ಪುನಃ ಪುನಃ।।
ಆ ದುಷ್ಟಚೇತಸನು ಅಲ್ಲಿದ್ದ ರಾಜ ಪಾರ್ಥಿವರಿಗೆ “ಇಂದು ಪುಷ್ಯ. ಕುರುಕ್ಷೇತ್ರಕ್ಕೆ ಪ್ರಯಾಣಿಸಿ!” ಎಂದು ಪುನಃ ಪುನಃ ಅಜ್ಞಾಪಿಸಿದನು.
05148004a ತತಸ್ತೇ ಪೃಥಿವೀಪಾಲಾಃ ಪ್ರಯಯುಃ ಸಹಸೈನಿಕಾಃ।
05148004c ಭೀಷ್ಮಂ ಸೇನಾಪತಿಂ ಕೃತ್ವಾ ಸಂಹೃಷ್ಟಾಃ ಕಾಲಚೋದಿತಾಃ।।
ಆಗ ಕಾಲಚೋದಿತರರಾದ ಆ ಪೃಥಿವೀ ಪಾಲಕರು ಸೈನಿಕರೊಂದಿಗೆ ಭೀಷ್ಮನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು ಹೊರಟರು.
05148005a ಅಕ್ಷೌಹಿಣ್ಯೋ ದಶೈಕಾ ಚ ಪಾರ್ಥಿವಾನಾಂ ಸಮಾಗತಾಃ।
05148005c ತಾಸಾಂ ಪ್ರಮುಖತೋ ಭೀಷ್ಮಸ್ತಾಲಕೇತುರ್ವ್ಯರೋಚತ।।
ಹನ್ನೊಂದು ಅಕ್ಷೌಹಿಣೀ ಸೇನೆ ಮತ್ತು ಪಾರ್ಥಿವರು ಸಮಾಗತರಾಗಿದ್ದರು. ಅವರ ಪ್ರಮುಖನಾಗಿ ತಾಲಕೇತು ಭೀಷ್ಮನು ಮಿಂಚಿದನು.
05148005e ಯದತ್ರ ಯುಕ್ತಂ ಪ್ರಾಪ್ತಂ ಚ ತದ್ವಿಧತ್ಸ್ವ ವಿಶಾಂ ಪತೇ।।
05148006a ಉಕ್ತಂ ಭೀಷ್ಮೇಣ ಯದ್ವಾಕ್ಯಂ ದ್ರೋಣೇನ ವಿದುರೇಣ ಚ।
05148006c ಗಾಂಧಾರ್ಯಾ ಧೃತರಾಷ್ಟ್ರೇಣ ಸಮಕ್ಷಂ ಮಮ ಭಾರತ।।
05148006e ಏತತ್ತೇ ಕಥಿತಂ ರಾಜನ್ಯದ್ವೃತ್ತಂ ಕುರುಸಂಸದಿ।।
ವಿಶಾಂಪತೇ! ಈಗ ಅಲ್ಲಿ ಹೋಗಿ ಯುಕ್ತವಾದುದು ಏನೆಂದು ತಿಳಿದಿದ್ದೀಯೋ ಅದನ್ನು ಮಾಡು. ಭಾರತ! ನನ್ನ ಸಮಕ್ಷಮದಲ್ಲಿ ಭೀಷ್ಮ, ದ್ರೋಣ, ವಿದುರ, ಗಾಂಧಾರಿ ಮತ್ತು ಧೃತರಾಷ್ಟ್ರನು ಹೇಳಿದ ಮಾತನ್ನು ಮತ್ತು ಕುರುಸಂಸದಿಯಲ್ಲಿ ನಡೆದುದನ್ನು ರಾಜನ್! ನಿನಗೆ ಹೇಳಿದ್ದೇನೆ.
05148007a ಸಾಮ ಆದೌ ಪ್ರಯುಕ್ತಂ ಮೇ ರಾಜನ್ಸೌಭ್ರಾತ್ರಮಿಚ್ಚತಾ।
05148007c ಅಭೇದಾತ್ಕುರುವಂಶಸ್ಯ ಪ್ರಜಾನಾಂ ಚ ವಿವೃದ್ಧಯೇ।।
ರಾಜನ್! ಮೊದಲು ನಾನು ಸೌಭ್ರಾತೃತ್ವವನ್ನು ಇಚ್ಛಿಸಿ, ಕುರುವಂಶದಲ್ಲಿ ಒಡಕು ಬರಬಾರದೆಂದು, ಪ್ರಜೆಗಳ ಅಭಿವೃದ್ಧಿಗಾಗಿ ಸಾಮವನ್ನು ಬಳಸಿದೆನು.
05148008a ಪುನರ್ಭೇದಶ್ಚ ಮೇ ಯುಕ್ತೋ ಯದಾ ಸಾಮ ನ ಗೃಹ್ಯತೇ।
05148008c ಕರ್ಮಾನುಕೀರ್ತನಂ ಚೈವ ದೇವಮಾನುಷಸಂಹಿತಂ।।
ಯಾವಾಗ ಸಾಮವು ಸೋತಿತೋ ಆಗ ಪುನಃ ಭೇದವನ್ನು ಬಳಸಿದೆನು. ನಿಮ್ಮ ದೇವ ಮಾನುಷ ಸಂಹಿತ ಕರ್ಮಗಳನ್ನು ವರ್ಣಿಸಿದೆನು.
05148009a ಯದಾ ನಾದ್ರಿಯತೇ ವಾಕ್ಯಂ ಸಾಮಪೂರ್ವಂ ಸುಯೋಧನಃ।
05148009c ತದಾ ಮಯಾ ಸಮಾನೀಯ ಭೇದಿತಾಃ ಸರ್ವಪಾರ್ಥಿವಾಃ।।
ಯಾವಾಗ ಸುಯೋಧನನು ನನ್ನ ಸಾಮಪೂರ್ವಕ ವಾಕ್ಯವನ್ನು ಕೇಳಲಿಲ್ಲವೋ ಆಗ ಸರ್ವಪಾರ್ಥಿವರಲ್ಲಿ ಭೇದವನ್ನು ಬಿತ್ತಲು ಪ್ರಯತ್ನಿಸಿದೆ.
05148010a ಅದ್ಭುತಾನಿ ಚ ಘೋರಾಣಿ ದಾರುಣಾನಿ ಚ ಭಾರತ।
05148010c ಅಮಾನುಷಾಣಿ ಕರ್ಮಾಣಿ ದರ್ಶಿತಾನಿ ಚ ಮೇ ವಿಭೋ।।
ಭಾರತ! ವಿಭೋ! ನಾನು ಅದ್ಭುತ, ಘೋರ, ದಾರುಣ ಅಮಾನುಷ ಕರ್ಮಗಳನ್ನು ತೋರಿಸಿದೆನು.
05148011a ಭರ್ತ್ಸಯಿತ್ವಾ ತು ರಾಜ್ಞಾಸ್ತಾಂಸ್ತೃಣೀಕೃತ್ಯ ಸುಯೋಧನಂ।
05148011c ರಾಧೇಯಂ ಭೀಷಯಿತ್ವಾ ಚ ಸೌಬಲಂ ಚ ಪುನಃ ಪುನಃ।।
ರಾಜರನ್ನು ಹೆದರಿಸಿದೆನು; ಸುಯೋಧನನನ್ನು ತೃಣೀಕರಿಸಿದೆನು, ಮತ್ತು ರಾಧೇಯ-ಸೌಬಲರನ್ನು ಪುನಃ ಪುನಃ ಹಳಿದೆನು.
05148012a ನ್ಯೂನತಾಂ ಧಾರ್ತರಾಷ್ಟ್ರಾಣಾಂ ನಿಂದಾಂ ಚೈವ ಪುನಃ ಪುನಃ।
05148012c ಭೇದಯಿತ್ವಾ ನೃಪಾನ್ಸರ್ವಾನ್ವಾಗ್ಭಿರ್ಮಂತ್ರೇಣ ಚಾಸಕೃತ್।।
ನಾನು ಪುನಃ ಪುನಃ ಧಾರ್ತರಾಷ್ಟ್ರರ ನ್ಯೂನತೆಗಳನ್ನು ತೋರಿಸಿ ನಿಂದಿಸಿದೆನು. ಸರ್ವ ನೃಪರನ್ನೂ ಮಾತು ಮತ್ತು ಸಲಹೆಗಳಿಂದ ಭೇದಿಸಲು ಪ್ರಯತ್ನಿಸಿದೆ.
05148013a ಪುನಃ ಸಾಮಾಭಿಸಂಯುಕ್ತಂ ಸಂಪ್ರದಾನಮಥಾಬ್ರುವಂ।
05148013c ಅಭೇದಾತ್ಕುರುವಂಶಸ್ಯ ಕಾರ್ಯಯೋಗಾತ್ತಥೈವ ಚ।।
ಪುನಃ ಸಾಮವನ್ನು ಬಳಸಿ, ಕುರುವಂಶದಲ್ಲಿ ಭೇದವುಂಟಾಗಬಾರದೆಂದು, ಕಾರ್ಯಸಿದ್ಧಿಯಾಗಬೇಕೆಂದು ಈ ಲಾಭಗಳ ಕುರಿತು ಹೇಳಿದೆನು.
05148014a ತೇ ಬಾಲಾ ಧೃತರಾಷ್ಟ್ರಸ್ಯ ಭೀಷ್ಮಸ್ಯ ವಿದುರಸ್ಯ ಚ।
05148014c ತಿಷ್ಠೇಯುಃ ಪಾಂಡವಾಃ ಸರ್ವೇ ಹಿತ್ವಾ ಮಾನಮಧಶ್ಚರಾಃ।।
“ಈ ಬಾಲಕ ಪಾಂಡವರು ಮಾನ, ಮದಗಳನ್ನು ತೊರೆದು ಧೃತರಾಷ್ಟ್ರ, ಭೀಷ್ಮ ಮತ್ತು ವಿದುರರಿಗೆ ಶರಣು ಬರುತ್ತಾರೆ.
05148015a ಪ್ರಯಚ್ಚಂತು ಚ ತೇ ರಾಜ್ಯಮನೀಶಾಸ್ತೇ ಭವಂತು ಚ।
05148015c ಯಥಾಹ ರಾಜಾ ಗಾಂಗೇಯೋ ವಿದುರಶ್ಚ ತಥಾಸ್ತು ತತ್।।
ಅವರು ರಾಜ್ಯವನ್ನು ನಿಮಗೆ ಒಪ್ಪಿಸಿ, ಅವರ ಈಶತ್ವವನ್ನು ತೊರೆಯುತ್ತಾರೆ. ರಾಜ, ಗಾಂಗೇಯ ಮತ್ತು ವಿದುರರು ಹೇಳಿದಂತಾಗಲಿ.
05148016a ಸರ್ವಂ ಭವತು ತೇ ರಾಜ್ಯಂ ಪಂಚ ಗ್ರಾಮಾನ್ವಿಸರ್ಜಯ।
05148016c ಅವಶ್ಯಂ ಭರಣೀಯಾ ಹಿ ಪಿತುಸ್ತೇ ರಾಜಸತ್ತಮ।।
ರಾಜಸತ್ತಮ! ಎಲ್ಲವೂ ನಿನ್ನ ರಾಜ್ಯವಾಗಲಿ. ಐದು ಗ್ರಾಮಗಳನ್ನು ಬಿಟ್ಟುಕೊಡು. ನಿನ್ನ ತಂದೆಯು ಅವಶ್ಯವಾಗಿ ಅವರನ್ನು ಪೋಷಿಸಬಲ್ಲನು.”
05148017a ಏವಮುಕ್ತಸ್ತು ದುಷ್ಟಾತ್ಮಾ ನೈವ ಭಾವಂ ವ್ಯಮುಂಚತ।
05148017c ದಂಡಂ ಚತುರ್ಥಂ ಪಶ್ಯಾಮಿ ತೇಷು ಪಾಪೇಷು ನಾನ್ಯಥಾ।।
ಇಷ್ಟು ಹೇಳಿದರೂ ಆ ದುಷ್ಟಾತ್ಮನು ತನ್ನ ಭಾವವನ್ನು ಬದಲಾಯಿಸಲಿಲ್ಲ. ಈಗ ನನಗೆ ಅವರ ಪಾಪಗಳಿಗೆ ನಾಲ್ಕನೆಯದಾದ ದಂಡವಲ್ಲದೇ ಬೇರೆ ಏನೂ ಕಾಣುತ್ತಿಲ್ಲ.
05148018a ನಿರ್ಯಾತಾಶ್ಚ ವಿನಾಶಾಯ ಕುರುಕ್ಷೇತ್ರಂ ನರಾಧಿಪಾಃ।
05148018c ಏತತ್ತೇ ಕಥಿತಂ ಸರ್ವಂ ಯದ್ವೃತ್ತಂ ಕುರುಸಂಸದಿ।।
ಅವರದೇ ವಿನಾಶಕ್ಕೆ ನರಾಧಿಪರು ಕುರುಕ್ಷೇತ್ರಕ್ಕೆ ಹೊರಟಿದ್ದಾರೆ. ಕುರುಸಂಸದಿಯಲ್ಲಿ ನಡೆದುದೆಲ್ಲವನ್ನೂ ನಿನಗೆ ಹೇಳಿದ್ದೇನೆ.
05148019a ನ ತೇ ರಾಜ್ಯಂ ಪ್ರಯಚ್ಚಂತಿ ವಿನಾ ಯುದ್ಧೇನ ಪಾಂಡವ।
05148019c ವಿನಾಶಹೇತವಃ ಸರ್ವೇ ಪ್ರತ್ಯುಪಸ್ಥಿತಮೃತ್ಯವಃ।।
ಪಾಂಡವ! ಯುದ್ಧವಿಲ್ಲದೇ ಅವರು ನಿನಗೆ ರಾಜ್ಯವನ್ನು ಹಿಂದಿರುಗಿಸುವುದಿಲ್ಲ. ವಿನಾಶಕ್ಕೆ ಕಾರಣರಾಗುವ ಅವರು ಮೃತ್ಯುವನ್ನು ಎದುರಿಸಿದ್ದಾರೆ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣವಿವಾದ ಪರ್ವಣಿ ಕೃಷ್ಣವಾಕ್ಯೇ ಅಷ್ಟಚತ್ವಾರಿಂಶದಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣವಿವಾದ ಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ನೂರಾನಲ್ವತ್ತೆಂಟನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣವಿವಾದ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣವಿವಾದ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-4/18, ಉಪಪರ್ವಗಳು-55/100, ಅಧ್ಯಾಯಗಳು-811/1995, ಶ್ಲೋಕಗಳು-26396/73784.