120 ಗಾಲವಚರಿತೇ ಯಯಾತಿಸ್ವರ್ಗಾರೋಹಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 120

ಸಾರ

ಯಯಾತಿಯು ಗುರುತಿಸಲ್ಪಟ್ಟಕೂಡಲೇ ವಿಗತಜ್ವರನಾಗಿ ತನ್ನ ಮೊಮ್ಮಕ್ಕಳ ಪುಣ್ಯದಿಂದ ಸ್ವರ್ಗವನ್ನು ಪುನಃ ಸೇರಿದುದು (1-18).

05120001 ನಾರದ ಉವಾಚ।
05120001a ಪ್ರತ್ಯಭಿಜ್ಞಾತಮಾತ್ರೋಽಥ ಸದ್ಭಿಸ್ತೈರ್ನರಪುಂಗವಃ।
05120001c ಯಯಾತಿರ್ದಿವ್ಯಸಂಸ್ಥಾನೋ ಬಭೂವ ವಿಗತಜ್ವರಃ।।

ನಾರದನು ಹೇಳಿದನು: “ನರಪುಂಗವ ಯಯಾತಿಯು ಆ ದಿವ್ಯಸಂಸ್ಥಾನದಲ್ಲಿ ಗುರುತಿಸಲ್ಪಟ್ಟ ಕೂಡಲೇ ಅವನು ವಿಗತಜ್ವರನಾದನು.

05120002a ದಿವ್ಯಮಾಲ್ಯಾಂಬರಧರೋ ದಿವ್ಯಾಭರಣಭೂಷಿತಃ।
05120002c ದಿವ್ಯಗಂಧಗುಣೋಪೇತೋ ನ ಪೃಥ್ವೀಮಸ್ಪೃಶತ್ಪದಾ।।

ದಿವ್ಯಮಾಲಾಂಬರಧರನಾಗಿ ದಿವ್ಯಾಭರಣಭೂಷಿತನಾಗಿ ದಿವ್ಯಗಂಧಗುಣೋಪೇತನಾಗಿ ಅವನ ಕಾಲುಗಳು ಭೂಮಿಯನ್ನು ಮುಟ್ಟಲಿಲ್ಲ.

05120003a ತತೋ ವಸುಮನಾಃ ಪೂರ್ವಮುಚ್ಚೈರುಚ್ಚಾರಯನ್ವಚಃ।
05120003c ಖ್ಯಾತೋ ದಾನಪತಿರ್ಲೋಕೇ ವ್ಯಾಜಹಾರ ನೃಪಂ ತದಾ।।

ಆಗ ಮೊಟ್ಟಮೊದಲು ಲೋಕದಲ್ಲಿ ದಾನಪತಿಯೆಂದು ಖ್ಯಾತನಾದ ವಸುಮನನು ಉಚ್ಚವಾಗಿ ಉಚ್ಚರಿಸಿ ನೃಪನಿಗೆ ಹೇಳಿದನು:

05120004a ಪ್ರಾಪ್ತವಾನಸ್ಮಿ ಯಲ್ಲೋಕೇ ಸರ್ವವರ್ಣೇಷ್ವಗರ್ಹಯಾ।
05120004c ತದಪ್ಯಥ ಚ ದಾಸ್ಯಾಮಿ ತೇನ ಸಂಯುಜ್ಯತಾಂ ಭವಾನ್।।

“ಸರ್ವವರ್ಣದವರೊಡನೆ ಅಗರ್ಹದಿಂದ ನಡೆದುಕೊಂಡಿದುದರಿಂದ ಈ ಲೋಕದಲ್ಲಿ ಏನನ್ನು ಸಂಪಾದಿಸಿದ್ದೇನೋ ಅದನ್ನು ನಿನಗೆ ಕೊಟ್ಟು ಸಂಯೋಜಿಸುತ್ತಿದ್ದೇನೆ.

05120005a ಯತ್ಫಲಂ ದಾನಶೀಲಸ್ಯ ಕ್ಷಮಾಶೀಲಸ್ಯ ಯತ್ಫಲಂ।
05120005c ಯಚ್ಚ ಮೇ ಫಲಮಾಧಾನೇ ತೇನ ಸಂಯುಜ್ಯತಾಂ ಭವಾನ್।।

ದಾನಶೀಲನಾದುದರಿಂದ ಮತ್ತು ಕ್ಷಮಾಶೀಲನಾದುದರಿಂದ ಏನು ಫಲಗಳನ್ನು ಪಡೆದಿದ್ದೇನೋ ಅವುಗಳನ್ನು ನಿನಗೆ ಕೊಟ್ಟು ಸಂಯೋಜಿಸುತಿದ್ದೇನೆ.”

05120006a ತತಃ ಪ್ರತರ್ದನೋಽಪ್ಯಾಹ ವಾಕ್ಯಂ ಕ್ಷತ್ರಿಯಪುಂಗವಃ।
05120006c ಯಥಾ ಧರ್ಮರತಿರ್ನಿತ್ಯಂ ನಿತ್ಯಂ ಯುದ್ಧಪರಾಯಣಃ।।
05120007a ಪ್ರಾಪ್ತವಾನಸ್ಮಿ ಯಲ್ಲೋಕೇ ಕ್ಷತ್ರಧರ್ಮೋದ್ಭವಂ ಯಶಃ।
05120007c ವೀರಶಬ್ದಫಲಂ ಚೈವ ತೇನ ಸಂಯುಜ್ಯತಾಂ ಭವಾನ್।।

ಆಗ ಕ್ಷತ್ರಿಯ ಪುಂಗವ ಪ್ರತರ್ದನನು ಹೇಳಿದನು: “ನಿತ್ಯವೂ ಧರ್ಮರತನಾಗಿರುವುದರಿಂದ, ನಿತ್ಯವೂ ಯುದ್ಧಪರಾಯಣನಾಗಿರುವುದರಿಂದ ಈ ಲೋಕದಲ್ಲಿ ಕ್ಷತ್ರಧರ್ಮದಿಂದ ಪಡೆದ ಯಶಸ್ಸು ಮತ್ತು ವೀರಶಬ್ಧಗಳ ಫಲವನ್ನು ಕೊಟ್ಟು ನಿನ್ನನ್ನು ಸಂಯೋಜಿಸುತ್ತಿದ್ದೇನೆ.”

05120008a ಶಿಬಿರೌಶೀನರೋ ಧೀಮಾನುವಾಚ ಮಧುರಾಂ ಗಿರಂ।
05120008c ಯಥಾ ಬಾಲೇಷು ನಾರೀಷು ವೈಹಾರ್ಯೇಷು ತಥೈವ ಚ।।
05120009a ಸಂಗರೇಷು ನಿಪಾತೇಷು ತಥಾಪದ್ವ್ಯಸನೇಷು ಚ।
05120009c ಅನೃತಂ ನೋಕ್ತಪೂರ್ವಂ ಮೇ ತೇನ ಸತ್ಯೇನ ಖಂ ವ್ರಜ।।

ಧೀಮಂತ ಶಿಬಿ ಔಶೀನರನು ಮಧುರ ಸ್ವರದಲ್ಲಿ ಹೇಳಿದನು: “ಈ ಹಿಂದೆ ಬಾಲಕರಲ್ಲಿಯಾಗಲೀ, ನಾರಿಯರಲ್ಲಿಯಾಗಲೀ, ವ್ಯವಹಾರದಲ್ಲಿಯಾಗಲೀ, ಯುದ್ಧಗಳಲ್ಲಿಯಾಗಲೀ, ಉತ್ಪಾತಗಳಲ್ಲಿಯಾಗಲೀ, ತುರ್ತುಪರಿಸ್ಥಿತಿಗಳಲ್ಲಿಯಾಗಲೀ ಸುಳ್ಳನ್ನು ಹೇಳದೇ ಇದ್ದ ನನ್ನ ಆ ಸತ್ಯದಿಂದ ನೀನು ಆಕಾಶವನ್ನೇರು!

05120010a ಯಥಾ ಪ್ರಾಣಾಂಶ್ಚ ರಾಜ್ಯಂ ಚ ರಾಜನ್ಕರ್ಮ ಸುಖಾನಿ ಚ।
05120010c ತ್ಯಜೇಯಂ ನ ಪುನಃ ಸತ್ಯಂ ತೇನ ಸತ್ಯೇನ ಖಂ ವ್ರಜ।।

ರಾಜನ್! ನಾನು ಪ್ರಾಣವನ್ನು, ರಾಜ್ಯವನ್ನು, ಕರ್ಮ-ಸುಖಗಳನ್ನು ತ್ಯಜಿಸಿಯೇನು. ಆದರೆ ಸತ್ಯವನ್ನು ಬಿಡಲಾರೆ ಎನ್ನುವ ಸತ್ಯದಿಂದ ನೀನು ಆಕಾಶವನ್ನೇರು.

05120011a ಯಥಾ ಸತ್ಯೇನ ಮೇ ಧರ್ಮೋ ಯಥಾ ಸತ್ಯೇನ ಪಾವಕಃ।
05120011c ಪ್ರೀತಃ ಶಕ್ರಶ್ಚ ಸತ್ಯೇನ ತೇನ ಸತ್ಯೇನ ಖಂ ವ್ರಜ।।

ನಾನು ಸತ್ಯದಿಂದ ಧರ್ಮನನ್ನು, ಸತ್ಯದಿಂದ ಪಾವಕನನ್ನು, ಸತ್ಯದಿಂದ ಶಕ್ರನನ್ನು ಪ್ರೀತಿಸಿದ್ದರೆ ಆ ಸತ್ಯದಿಂದ ನೀನು ಆಕಾಶವನ್ನೇರು!”

05120012a ಅಷ್ಟಕಸ್ತ್ವಥ ರಾಜರ್ಷಿಃ ಕೌಶಿಕೋ ಮಾಧವೀಸುತಃ।
05120012c ಅನೇಕಶತಯಜ್ವಾನಂ ವಚನಂ ಪ್ರಾಹ ಧರ್ಮವಿತ್।।

ಆಗ ರಾಜರ್ಷಿ, ಕೌಶಿಕ, ಮಾಧವೀಸುತ, ಅನೇಕ ನೂರಾರು ಯಜ್ಞಗಳನ್ನು ನಡೆಸಿದ್ದ ಧರ್ಮವಿದು ಅಷ್ಟಕನು ಈ ಮಾತನ್ನು ಹೇಳಿದನು:

05120013a ಶತಶಃ ಪುಂಡರೀಕಾ ಮೇ ಗೋಸವಾಶ್ಚ ಚಿತಾಃ ಪ್ರಭೋ।
05120013c ಕ್ರತವೋ ವಾಜಪೇಯಾಶ್ಚ ತೇಷಾಂ ಫಲಮವಾಪ್ನುಹಿ।।

“ಪ್ರಭೋ! ನಾನು ನೂರಾರು ಪಂಡರೀಕ, ಗೋಸವ ಮತ್ತು ವಾಜಪೇಯ ಯಜ್ಞಗಳನ್ನು ಮಾಡಿದ್ದೇನೆ. ಅವುಗಳ ಫಲವನ್ನು ಹೊಂದು.

05120014a ನ ಮೇ ರತ್ನಾನಿ ನ ಧನಂ ನ ತಥಾನ್ಯೇ ಪರಿಚ್ಚದಾಃ।
05120014c ಕ್ರತುಷ್ವನುಪಯುಕ್ತಾನಿ ತೇನ ಸತ್ಯೇನ ಖಂ ವ್ರಜ।।

ಕ್ರತುಗಳಲ್ಲಿ ಬಳಸದೇ ಇದ್ದ ರತ್ನಗಳಾಗಲೀ, ಧನವಾಗಲೀ, ಪರಿಚ್ಚದವಾಗಲೀ ನನ್ನಲ್ಲಿ ಇಲ್ಲ ಎನ್ನುವ ಈ ಸತ್ಯದಿಂದ ಆಕಾಶವನ್ನೇರು!”

05120015a ಯಥಾ ಯಥಾ ಹಿ ಜಲ್ಪಂತಿ ದೌಹಿತ್ರಾಸ್ತಂ ನರಾಧಿಪಂ।
05120015c ತಥಾ ತಥಾ ವಸುಮತೀಂ ತ್ಯಕ್ತ್ವಾ ರಾಜಾ ದಿವಂ ಯಯೌ।।

ಹೇಗೆ ಮಗಳ ಮಕ್ಕಳು ಹೀಗೆ ಆ ನರಾಧಿಪನಿಗೆ ಮಾತನಾಡುತ್ತಿದ್ದರೋ ಹಾಗೆ ರಾಜನು ವಸುಮತಿಯನ್ನು ಬಿಟ್ಟು ದಿವಕ್ಕೆ ತೆರಳಿದನು.

05120016a ಏವಂ ಸರ್ವೇ ಸಮಸ್ತಾಸ್ತೇ ರಾಜಾನಃ ಸುಕೃತೈಸ್ತದಾ।
05120016c ಯಯಾತಿಂ ಸ್ವರ್ಗತೋ ಭ್ರಷ್ಟಂ ತಾರಯಾಮಾಸುರಂಜಸಾ।।

ಈ ರೀತಿ ಸ್ವರ್ಗದಿಂದ ಭ್ರಷ್ಟನಾದ ಯಯಾತಿಯನ್ನು ಆ ಎಲ್ಲ ರಾಜರು ತಮ್ಮ ಸುಕೃತ ತೇಜಸ್ಸುಗಳಿಂದ ಉದ್ಧರಿಸಿದರು.

05120017a ದೌಹಿತ್ರಾಃ ಸ್ವೇನ ಧರ್ಮೇಣ ಯಜ್ಞಾದಾನಕೃತೇನ ವೈ।
05120017c ಚತುರ್ಷು ರಾಜವಂಶೇಷು ಸಂಭೂತಾಃ ಕುಲವರ್ಧನಾಃ।
05120017e ಮಾತಾಮಹಂ ಮಹಾಪ್ರಾಜ್ಞಾಂ ದಿವಮಾರೋಪಯಂತಿ ತೇ।।

ನಾಲ್ಕು ರಾಜವಂಶಗಳಲ್ಲಿ ಹುಟ್ಟಿದ ಕುಲವರ್ಧನ ಆ ಮಗಳ ಮಕ್ಕಳು ತಮ್ಮದೇ ಧರ್ಮದಿಂದ, ಯಜ್ಞ ದಾನಗಳನ್ನು ಮಾಡಿದುದರ ಮೂಲಕ ಮಹಾಪ್ರಾಜ್ಞ ಮಾತಾಮಹನನ್ನು ದಿವಕ್ಕೆ ಏರಿಸಿದರು.

05120018 ರಾಜಾನ ಊಚುಃ।
05120018a ರಾಜಧರ್ಮಗುಣೋಪೇತಾಃ ಸರ್ವಧರ್ಮಗುಣಾನ್ವಿತಾಃ।
05120018c ದೌಹಿತ್ರಾಸ್ತೇ ವಯಂ ರಾಜನ್ದಿವಮಾರೋಹ ಪಾರ್ಥಿವಃ।।

ರಾಜರು ಹೇಳಿದರು: “ರಾಜನ್! ಪಾರ್ಥಿವ! ರಾಜಧರ್ಮಗುಣೋಪೇತರಾದ, ಸರ್ವಧರ್ಮ ಗುಣಾನ್ವಿತರಾದ ನಿನ್ನ ಮಗಳ ಮಕ್ಕಳಾದ ನಮ್ಮಿಂದ ದಿವವವನ್ನೇರು!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ಯಯಾತಿಸ್ವರ್ಗಾರೋಹಣೇ ವಿಂಶತ್ಯಧಿಕಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ಯಯಾತಿಸ್ವರ್ಗಾರೋಹಣೆಯಲ್ಲಿ ನೂರಾಇಪ್ಪತ್ತನೆಯ ಅಧ್ಯಾಯವು.