099 ಮಾತಲಿವರಾನ್ವೇಷಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 99

ಸಾರ

ನಾರದನು ಮಾತಲಿಗೆ ಪಕ್ಷಿಗಳ ಲೋಕವನ್ನು ತೋರಿಸಿದುದು (1-16).

05099001 ನಾರದ ಉವಾಚ।
05099001a ಅಯಂ ಲೋಕಃ ಸುಪರ್ಣಾನಾಂ ಪಕ್ಷಿಣಾಂ ಪನ್ನಗಾಶಿನಾಂ।
05099001c ವಿಕ್ರಮೇ ಗಮನೇ ಭಾರೇ ನೈಷಾಮಸ್ತಿ ಪರಿಶ್ರಮಃ।।

ನಾರದನು ಹೇಳಿದನು: “ಈ ಲೋಕವು ಪನ್ನಗಗಳನ್ನು ತಿನ್ನುವ ಸುಪರ್ಣ ಪಕ್ಷಿಗಳದ್ದು. ಅವರಿಗೆ ವಿಕ್ರಮವನ್ನು ತೋರಿಸುವಲ್ಲಿ, ಸಂಚಾರದಲ್ಲಿ ಮತ್ತು ಭಾರವನ್ನು ಹೊರುವುದರಲ್ಲಿ ಪರಿಶ್ರಮವೆನ್ನುವುದೇ ಇಲ್ಲ.

05099002a ವೈನತೇಯಸುತೈಃ ಸೂತ ಷಡ್ಭಿಸ್ತತಮಿದಂ ಕುಲಂ।
05099002c ಸುಮುಖೇನ ಸುನಾಮ್ನಾ ಚ ಸುನೇತ್ರೇಣ ಸುವರ್ಚಸಾ।।
05099003a ಸುರೂಪಪಕ್ಷಿರಾಜೇನ ಸುಬಲೇನ ಚ ಮಾತಲೇ।

ಸೂತ! ಮಾತಲಿ! ಈ ಕುಲವು ವೈನತೇಯನ ಆರು ಪುತ್ರರಿಂದ ನಡೆದಿದೆ: ಸುಮುಖ, ಸುನಾಮ, ಸುನೇತ್ರ, ಸುವರ್ಚಸ, ಸುರೂಪ ಮತ್ತು ಪಕ್ಷಿರಾಜ ಸುಬಲ.

05099003c ವರ್ಧಿತಾನಿ ಪ್ರಸೂತ್ಯಾ ವೈ ವಿನತಾಕುಲಕರ್ತೃಭಿಃ।।
05099004a ಪಕ್ಷಿರಾಜಾಭಿಜಾತ್ಯಾನಾಂ ಸಹಸ್ರಾಣಿ ಶತಾನಿ ಚ।
05099004c ಕಶ್ಯಪಸ್ಯ ತತೋ ವಂಶೇ ಜಾತೈರ್ಭೂತಿವಿವರ್ಧನೈಃ।।

ವಿನತೆಯ ಕುಲಕರ್ತೃಗಳಾಗಿ ಹುಟ್ಟಿ ಈ ಪಕ್ಷಿರಾಜರು ತಮ್ಮ ಜಾತಿಯನ್ನು ಸಹಸ್ರಾರು ನೂರಾರು ಸಂಖ್ಯೆಗಳಲ್ಲಿ ವರ್ಧಿಸಿದರು. ಹಾಗೆ ವಿವಿಧ ಜಾತಿಗಳ ಕಶ್ಯಪನ ವಂಶವನ್ನು ವೃದ್ಧಿಸಿದರು.

05099005a ಸರ್ವೇ ಹ್ಯೇತೇ ಶ್ರಿಯಾ ಯುಕ್ತಾಃ ಸರ್ವೇ ಶ್ರೀವತ್ಸಲಕ್ಷಣಾಃ।
05099005c ಸರ್ವೇ ಶ್ರಿಯಮಭೀಪ್ಸಂತೋ ಧಾರಯಂತಿ ಬಲಾನ್ಯುತ।।

ಇವರೆಲ್ಲರೂ ಶ್ರೀಯಿಂದ ಕೂಡಿದವರು, ಎಲ್ಲರೂ ಶ್ರೀವತ್ಸಲಕ್ಷಣರು, ಎಲ್ಲರೂ ಶ್ರೀಯನ್ನು ಬಯಸುವವರು ಮತ್ತು ಅತಿ ಉನ್ನತ ಭಾರವನ್ನು ಹೊರಬಲ್ಲವರು.

05099006a ಕರ್ಮಣಾ ಕ್ಷತ್ರಿಯಾಶ್ಚೈತೇ ನಿರ್ಘೃಣಾ ಭೋಗಿಭೋಜಿನಃ।
05099006c ಜ್ಞಾತಿಸಂಕ್ಷಯಕರ್ತೃತ್ವಾದ್ಬ್ರಾಹ್ಮಣ್ಯಂ ನ ಲಭಂತಿ ವೈ।।

ಕರ್ಮದಲ್ಲಿ ಅವರು ಕ್ಷತ್ರಿಯರೆನಿಸಿಕೊಂಡರೂ ಕರುಣೆಯಿಲ್ಲದೇ ನಾಗಗಳನ್ನು ಭೋಜಿಸುತ್ತಾರೆ. ತಮ್ಮ ದಾಯಾದಿಗಳ ನಾಶಕ್ಕೆ ಕರ್ತೃಗಳಾಗಿರುವುದರಿಂದ ಅವರಿಗೆ ಬ್ರಾಹ್ಮಣ್ಯವು ದೊರೆಯುವುದಿಲ್ಲ.

05099007a ನಾಮಾನಿ ಚೈಷಾಂ ವಕ್ಷ್ಯಾಮಿ ಯಥಾ ಪ್ರಾಧಾನ್ಯತಃ ಶೃಣು।
05099007c ಮಾತಲೇ ಶ್ಲಾಘ್ಯಮೇತದ್ಧಿ ಕುಲಂ ವಿಷ್ಣುಪರಿಗ್ರಹಂ।।

ಮಾತಲಿ! ಇವರಲ್ಲಿ ಪ್ರಧಾನರಾದವರ ಹೆಸರುಗಳನ್ನು ಹೇಳುತ್ತೇನೆ. ಕೇಳು. ವಿಷ್ಣುವಿನ ಪರಿಗ್ರಹವನ್ನು ಪಡೆದಿದೆಯೆಂದು ಈ ಕುಲವು ಶ್ಲಾಘನೀಯವಾಗಿದೆ.

05099008a ದೈವತಂ ವಿಷ್ಣುರೇತೇಷಾಂ ವಿಷ್ಣುರೇವ ಪರಾಯಣಂ।
05099008c ಹೃದಿ ಚೈಷಾಂ ಸದಾ ವಿಷ್ಣುರ್ವಿಷ್ಣುರೇವ ಗತಿಃ ಸದಾ।।

ವಿಷ್ಣುವೇ ಇವರ ದೇವತೆ. ವಿಷ್ಣುವೇ ಇವರ ಪರಾಯಣ. ಅವರ ಹೃದಯದಲ್ಲಿ ಸದಾ ವಿಷ್ಣುವಿರುತ್ತಾನೆ. ವಿಷ್ಣುವೇ ಇವರ ಸದಾ ಗತಿ.

05099009a ಸುವರ್ಣಚೂಡೋ ನಾಗಾಶೀ ದಾರುಣಶ್ಚಂಡತುಂಡಕಃ।
05099009c ಅನಲಶ್ಚಾನಿಲಶ್ಚೈವ ವಿಶಾಲಾಕ್ಷೋಽಥ ಕುಂಡಲೀ।।
05099010a ಕಾಶ್ಯಪಿರ್ಧ್ವಜವಿಷ್ಕಂಭೋ ವೈನತೇಯೋಽಥ ವಾಮನಃ।
05099010c ವಾತವೇಗೋ ದಿಶಾಚಕ್ಷುರ್ನಿಮೇಷೋ ನಿಮಿಷಸ್ತಥಾ।।
05099011a ತ್ರಿವಾರಃ ಸಪ್ತವಾರಶ್ಚ ವಾಲ್ಮೀಕಿರ್ದ್ವೀಪಕಸ್ತಥಾ।
05099011c ದೈತ್ಯದ್ವೀಪಃ ಸರಿದ್ದ್ವೀಪಃ ಸಾರಸಃ ಪದ್ಮಕೇಸರಃ।।
05099012a ಸುಮುಖಃ ಸುಖಕೇತುಶ್ಚ ಚಿತ್ರಬರ್ಹಸ್ತಥಾನಘಃ।
05099012c ಮೇಘಕೃತ್ಕುಮುದೋ ದಕ್ಷಃ ಸರ್ಪಾಂತಃ ಸೋಮಭೋಜನಃ।।
05099013a ಗುರುಭಾರಃ ಕಪೋತಶ್ಚ ಸೂರ್ಯನೇತ್ರಶ್ಚಿರಾಂತಕಃ।
05099013c ವಿಷ್ಣುಧನ್ವಾ ಕುಮಾರಶ್ಚ ಪರಿಬರ್ಹೋ ಹರಿಸ್ತಥಾ।।
05099014a ಸುಸ್ವರೋ ಮಧುಪರ್ಕಶ್ಚ ಹೇಮವರ್ಣಸ್ತಥೈವ ಚ।
05099014c ಮಲಯೋ ಮಾತರಿಶ್ವಾ ಚ ನಿಶಾಕರದಿವಾಕರೌ।।

ಸುವರ್ಣಚೂಡ, ನಾಗಾಶೀ, ದಾರುಣ, ಚಂಡತುಂಡಕ, ಅನಲ, ಅನಿಲ, ವಿಶಾಲಾಕ್ಷ, ಕುಂಡಲೀ, ಕಾಶ್ಯಪಿ. ದ್ವಜವಿಷ್ಕಂಭ, ವೈನತೇಯ, ವಾಮನ, ವಾತವೇಗ, ದಿಶಾಚಕ್ಷು, ನಿಮೇಷ, ನಿಮಿಷ, ತ್ರಿವಾರ, ಸಪ್ತವಾರ, ವಾಲ್ಮೀಕಿ, ದ್ವೀಪಕ, ದೈತ್ಯದ್ವೀಪ, ಸರಿದ್ವೀಪ, ಸರಸ, ಪದ್ಮಕೇಸರ, ಸುಮುಖ, ಸುಖಕೇತು, ಚಿತ್ರಬರ್ಹ, ಅನಘ, ಮೇಘಕೃತ್, ಕುಮುದ, ದಕ್ಷ, ಸರ್ಪಾಂತ, ಸೋಮಭೋಜನ, ಗುರುಭಾರ, ಕಪೋತ, ಸೂರ್ಯನೇತ್ರ, ಚಿರಾಂತಕ, ವಿಷ್ಣುಧನ್ವಾ, ಕುಮಾರ, ಪರಿಬರ್ಹ, ಹರಿ, ಸುಸ್ವರ, ಮಧುಪರ್ಕ, ಹೇಮವರ್ಣ, ಮಲಯ, ಮಾತರಿ, ನಿಶಾಕರ, ಮತ್ತು ದಿವಾಕರ.

05099015a ಏತೇ ಪ್ರದೇಶಮಾತ್ರೇಣ ಮಯೋಕ್ತಾ ಗರುಡಾತ್ಮಜಾಃ।
05099015c ಪ್ರಾಧಾನ್ಯತೋಽಥ ಯಶಸಾ ಕೀರ್ತಿತಾಃ ಪ್ರಾಣತಶ್ಚ ತೇ।।

ನಾನು ಹೇಳಿದ ಗರುಡನ ಈ ಮಕ್ಕಳು ಇದೇ ಪ್ರದೇಶದಲ್ಲಿ ವಾಸಿಸುತ್ತಾರೆ. ಯಸಸ್ಸು, ಕೀರ್ತಿ ಮತ್ತು ಶಕ್ತಿಯಲ್ಲಿ ಪ್ರಧಾನರಾಗಿರುವವರ ಹೆಸರುಗಳನ್ನು ಮಾತ್ರ ಹೇಳಿದ್ದೇನೆ.

05099016a ಯದ್ಯತ್ರ ನ ರುಚಿಃ ಕಾ ಚಿದೇಹಿ ಗಚ್ಚಾವ ಮಾತಲೇ।
05099016c ತಂ ನಯಿಷ್ಯಾಮಿ ದೇಶಂ ತ್ವಾಂ ರುಚಿಂ ಯತ್ರೋಪಲಪ್ಸ್ಯಸೇ।।

ಮಾತಲೀ! ಇಲ್ಲಿ ನಿನಗೆ ಯಾರೂ ಇಷ್ಟವಾಗದೇ ಇದ್ದರೆ ಬಾ ಹೋಗೋಣ. ನಿನ್ನನ್ನು ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ನಿನ್ನ ಮಗಳಿಗೆ ಇಷ್ಟವಾಗುವ ವರನು ಸಿಗಬಹುದು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ಏಕೋನಶತತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ತೊಂಭತ್ತೊಂಭತ್ತನೆಯ ಅಧ್ಯಾಯವು.