ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 98
ಸಾರ
ನಾರದನು ದೈತ್ಯ-ದಾನವರ ಹಿರಣ್ಯಪುರವನ್ನು ಮಾತಲಿಗೆ ತೋರಿಸಿದುದು (1-15).
05098001 ನಾರದ ಉವಾಚ।
05098001a ಹಿರಣ್ಯಪುರಮಿತ್ಯೇತತ್ಖ್ಯಾತಂ ಪುರವರಂ ಮಹತ್।
05098001c ದೈತ್ಯಾನಾಂ ದಾನವಾನಾಂ ಚ ಮಾಯಾಶತವಿಚಾರಿಣಾಂ।।
ನಾರದನು ಹೇಳಿದನು: “ಇದು ಪುರಗಳಲ್ಲಿಯೇ ಶ್ರೇಷ್ಠವೆನಿಸಿಕೊಂಡಿರುವ, ದೈತ್ಯ-ದಾನವರ, ನೂರಾರು ಮಾಯಾವಿಚಾರಗಳನ್ನುಳ್ಳ ಮಹಾ ಹಿರಣ್ಯಪುರ.
05098002a ಅನಲ್ಪೇನ ಪ್ರಯತ್ನೇನ ನಿರ್ಮಿತಂ ವಿಶ್ವಕರ್ಮಣಾ।
05098002c ಮಯೇನ ಮನಸಾ ಸೃಷ್ಟಂ ಪಾತಾಲತಲಮಾಶ್ರಿತಂ।।
ಪಾತಾಲತಲದಲ್ಲಿರುವ ಇದನ್ನು ಮಯನು ಮನಸ್ಸಿನಲ್ಲಿಯೇ ರಚಿಸಿದನು ಮತ್ತು ವಿಶ್ವಕರ್ಮನು ತುಂಬಾ ಪ್ರಯತ್ನಪಟ್ಟು ನಿರ್ಮಿಸಿದನು.
05098003a ಅತ್ರ ಮಾಯಾಸಹಸ್ರಾಣಿ ವಿಕುರ್ವಾಣಾ ಮಹೌಜಸಃ।
05098003c ದಾನವಾ ನಿವಸಂತಿ ಸ್ಮ ಶೂರಾ ದತ್ತವರಾಃ ಪುರಾ।।
ಹಿಂದೆ ವರಗಳನ್ನು ಪಡೆದ, ಸಹಸ್ರಾರು ಮಾಯೆಗಳನ್ನು ಮಾಡುವ, ಮಹೌಜಸ, ಶೂರ ದಾನವರು ಅಲ್ಲಿ ವಾಸಿಸುತ್ತಾರೆ.
05098004a ನೈತೇ ಶಕ್ರೇಣ ನಾನ್ಯೇನ ವರುಣೇನ ಯಮೇನ ವಾ।
05098004c ಶಕ್ಯಂತೇ ವಶಮಾನೇತುಂ ತಥೈವ ಧನದೇನ ಚ।।
ಇದನ್ನು ಶಕ್ರನಿಂದಾಗಲೀ, ಇತರರಿಂದಾಗಲೀ - ವರುಣ, ಯಮ, ಮತ್ತು ಧನದನಿಂದಾಗಲೀ - ವಶಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
05098005a ಅಸುರಾಃ ಕಾಲಖಂಜಾಶ್ಚ ತಥಾ ವಿಷ್ಣುಪದೋದ್ಭವಾಃ।
05098005c ನೈರೃತಾ ಯಾತುಧಾನಾಶ್ಚ ಬ್ರಹ್ಮವೇದೋದ್ಭವಾಶ್ಚ ಯೇ।।
ಅಲ್ಲಿ ವಿಷ್ಣುಪದದಿಂದ ಉದ್ಭವಿಸಿದ ಕಾಲಖಂಜ ಅಸುರರೂ, ಬ್ರಹ್ಮವೇದದಿಂದ ಉದ್ಭವಿಸಿದ ನೈರೃತಾ ಯಾತುಧಾನರೂ ವಾಸಿಸುತ್ತಾರೆ.
05098006a ದಂಷ್ಟ್ರಿಣೋ ಭೀಮರೂಪಾಶ್ಚ ನಿವಸಂತ್ಯಾತ್ಮರಕ್ಷಿಣಃ।
05098006c ಮಾಯಾವೀರ್ಯೋಪಸಂಪನ್ನಾ ನಿವಸಂತ್ಯಾತ್ಮರಕ್ಷಿಣಃ।।
ಅವರು ಕೋರೆದಾಡೆಗಳುಳ್ಳವರು, ಭೀಮರೂಪರು, ಮಾಯಾವಿಗಳು, ವೀರ್ಯಸಂಪನ್ನರು ಮತ್ತು ತಮ್ಮನ್ನು ತಾವೇ ರಕ್ಷಿಸಿಕೊಂಡಿರುವವರು.
05098007a ನಿವಾತಕವಚಾ ನಾಮ ದಾನವಾ ಯುದ್ಧದುರ್ಮದಾಃ।
05098007c ಜಾನಾಸಿ ಚ ಯಥಾ ಶಕ್ರೋ ನೈತಾಂ ಶಕ್ನೋತಿ ಬಾಧಿತುಂ।।
ಇವರಲ್ಲದೇ ಯುದ್ಧದುರ್ಮದ ನಿವಾತಕವಚರೆಂಬ ದಾನವರೂ ನೆಲೆಸಿದ್ದಾರೆ. ಶಕ್ರನೂ ಕೂಡ ಹೇಗೆ ಇವರನ್ನು ಬಾಧಿಸಲು ಶಕ್ಯನಾಗಿಲ್ಲ ಎನ್ನುವುದು ನಿನಗೆ ತಿಳಿದೇ ಇದೆ.
05098008a ಬಹುಶೋ ಮಾತಲೇ ತ್ವಂ ಚ ತವ ಪುತ್ರಶ್ಚ ಗೋಮುಖಃ।
05098008c ನಿರ್ಭಗ್ನೋ ದೇವರಾಜಶ್ಚ ಸಹಪುತ್ರಃ ಶಚೀಪತಿಃ।।
ಮಾತಲೀ! ಬಹಳಷ್ಟು ಬಾರಿ ನೀನು ನಿನ್ನ ಪುತ್ರ ಗೋಮುಖನೊಡನೆ ಮತ್ತು ಶಚೀಪತಿ ದೇವರಾಜನು ಅವನು ಪುತ್ರನೊಡನೆ ಅವರೊಂದಿಗೆ ನಿರ್ಭಗ್ನನಾಗಿ ಹಿಂದಿರುಗಬೇಕಾಗಿತ್ತು.
05098009a ಪಶ್ಯ ವೇಶ್ಮಾನಿ ರೌಕ್ಮಾಣಿ ಮಾತಲೇ ರಾಜತಾನಿ ಚ।
05098009c ಕರ್ಮಣಾ ವಿಧಿಯುಕ್ತೇನ ಯುಕ್ತಾನ್ಯುಪಗತಾನಿ ಚ।।
05098010a ವೈಡೂರ್ಯಹರಿತಾನೀವ ಪ್ರವಾಲರುಚಿರಾಣಿ ಚ।
05098010c ಅರ್ಕಸ್ಫಟಿಕಶುಭ್ರಾಣಿ ವಜ್ರಸಾರೋಜ್ಜ್ವಲಾನಿ ಚ।।
ಮಾತಲೀ! ಚಿನ್ನ-ಬೆಳ್ಳಿಗಳಿಂದ ಮಾಡಲ್ಪಟ್ಟ, ವೈಡೂರ್ಯದ ಹಸಿರಿನಿಂದ, ಬಣ್ಣಬಣ್ಣದ ಪ್ರವಾಲಗಳಿಂದ, ಅರ್ಕಸ್ಫಟಿಕದ ಹೊಳಪಿನಿಂದ, ವಜ್ರಸಾರದಿಂದ ಬೆಳಗುತ್ತಿರುವ, ವಿಧಿಯುಕ್ತವಾಗಿ ಕಟ್ಟಲ್ಪಟ್ಟ ಅವರ ಮನೆಗಳನ್ನು ನೋಡು!
05098011a ಪಾರ್ಥಿವಾನೀವ ಚಾಭಾಂತಿ ಪುನರ್ನಗಮಯಾನಿ ಚ।
05098011c ಶೈಲಾನೀವ ಚ ದೃಶ್ಯಂತೇ ತಾರಕಾಣೀವ ಚಾಪ್ಯುತ।।
ಪುನಃ ನಾಗಗಳಿಂದ ತುಂಬಿದ ಆ ರಾಜಗೃಹಗಳು ತಾರಕ ಶೈಲಗಳಂತೆ ತೋರುತ್ತಿವೆ.
05098012a ಸೂರ್ಯರೂಪಾಣಿ ಚಾಭಾಂತಿ ದೀಪ್ತಾಗ್ನಿಸದೃಶಾನಿ ಚ।
05098012c ಮಣಿಜಾಲವಿಚಿತ್ರಾಣಿ ಪ್ರಾಂಶೂನಿ ನಿಬಿಡಾನಿ ಚ।।
ಆ ಮನೆಗಳ ನಿಬಿಡಗಳು ಸೂರ್ಯನಂತೆ ಹೊಳೆಯುತ್ತಿವೆ, ವಿಚಿತ್ರ ಮಣಿಜಾಲಗಳಿಂದ ಉರಿಯುತ್ತಿರುವ ಅಗ್ನಿಯಂತೆ ತೋರುತ್ತಿವೆ.
05098013a ನೈತಾನಿ ಶಕ್ಯಂ ನಿರ್ದೇಷ್ಟುಂ ರೂಪತೋ ದ್ರವ್ಯತಸ್ತಥಾ।
05098013c ಗುಣತಶ್ಚೈವ ಸಿದ್ಧಾನಿ ಪ್ರಮಾಣಗುಣವಂತಿ ಚ।।
ಇವುಗಳ ರೂಪವನ್ನು ಮತ್ತು ದ್ರವ್ಯಗಳನ್ನು ನಿರ್ದಿಷ್ಟಗೊಳಿಸಲು ಶಕ್ಯವಿಲ್ಲ. ಅವುಗಳನ್ನು ಅತೀವ ಗುಣಗಳಿಂದ ಸಿದ್ಧಪಡಿಸಿದ್ದಾರೆ.
05098014a ಆಕ್ರೀಡಾನ್ಪಶ್ಯ ದೈತ್ಯಾನಾಂ ತಥೈವ ಶಯನಾನ್ಯುತ।
05098014c ರತ್ನವಂತಿ ಮಹಾರ್ಹಾಣಿ ಭಾಜನಾನ್ಯಾಸನಾನಿ ಚ।।
ದೈತ್ಯರ ಕ್ರೀಡಾಂಗಣಗಳನ್ನು ನೋಡು, ಹಾಗೆಯೇ ಅವರ ಉತ್ತಮ ಹಾಸಿಗೆಗಳನ್ನು, ರತ್ನಗಳಿಂದ ಮಾಡಿದ ಮಹಾಬೆಲೆಬಾಳುವ ಪಾತ್ರೆಗಳು, ಆಸನಗಳನ್ನೂ ನೋಡು!
05098015a ಜಲದಾಭಾಂಸ್ತಥಾ ಶೈಲಾಂಸ್ತೋಯಪ್ರಸ್ರವಣಾನ್ವಿತಾನ್।
05098015c ಕಾಮಪುಷ್ಪಫಲಾಂಶ್ಚೈವ ಪಾದಪಾನ್ಕಾಮಚಾರಿಣಃ।।
ಮೋಡಗಳಂತೆ ತೋರುವ ಅವರ ಗುಡ್ಡಬೆಟ್ಟಗಳನ್ನು ನೋಡು, ನೀರಿನ ಆ ಕಾರಂಜಿಗಳನ್ನು, ಬೇಕಾದ ಪುಷ್ಪ ಫಲಗಳನ್ನು ನೀಡುವ, ಬೇಕಾದಲ್ಲಿಗೆ ಚಲಿಸಬಲ್ಲ ಮರಗಳನ್ನು ನೋಡು!
05098016a ಮಾತಲೇ ಕಶ್ಚಿದತ್ರಾಪಿ ರುಚಿತಸ್ತೇ ವರೋ ಭವೇತ್।
05098016c ಅಥ ವಾನ್ಯಾಂ ದಿಶಂ ಭೂಮೇರ್ಗಚ್ಚಾವ ಯದಿ ಮನ್ಯಸೇ।।
ಮಾತಲೀ! ಇಲ್ಲಿ ಯಾರಾದರೂ ವರನು ಇಷ್ಟವಾದರೆ ಪಡೆಯಬಹುದು. ಅಥವಾ ನಿನಗೆ ಇಷ್ಟವಾದರೆ ಬೇರೆ ಯಾವ ಕಡೆಯಾದರೂ ಹೋಗೋಣ!””
05098017 ಕಣ್ವ ಉವಾಚ।
05098017a ಮಾತಲಿಸ್ತ್ವಬ್ರವೀದೇನಂ ಭಾಷಮಾಣಂ ತಥಾವಿಧಂ।
05098017c ದೇವರ್ಷೇ ನೈವ ಮೇ ಕಾರ್ಯಂ ವಿಪ್ರಿಯಂ ತ್ರಿದಿವೌಕಸಾಂ
ಕಣ್ವನು ಹೇಳಿದನು: “ಹೀಗೆ ಹೇಳಲು ಮಾತಲಿಯು ಉತ್ತರಿಸಿದನು – “ದೇವರ್ಷೇ! ತ್ರಿದಿವೌಕಸರಿಗೆ ವಿಪ್ರಿಯ ಕಾರ್ಯವನ್ನೆಸಗುವುದು ನನಗೆ ಬೇಡ.
05098018a ನಿತ್ಯಾನುಷಕ್ತವೈರಾ ಹಿ ಭ್ರಾತರೋ ದೇವದಾನವಾಃ।
05098018c ಅರಿಪಕ್ಷೇಣ ಸಂಬಂಧಂ ರೋಚಯಿಷ್ಯಾಮ್ಯಹಂ ಕಥಂ।।
ಭ್ರಾತರಾಗಿದ್ದರೂ ದೇವ-ದಾನವರು ನಿತ್ಯವೂ ವೈರವನ್ನು ಸಾಧಿಸುವುದರಲ್ಲಿ ತೊಡಗಿದ್ದಾರೆ. ಹೀಗಿರುವಾಗ ನಾನು ಹೇಗೆ ತಾನೇ ಇವರೊಂದಿಗೆ ಸಂಬಂಧವನ್ನು ಬೆಳೆಸಲು ಇಚ್ಛಿಸಿಯೇನು?
05098019a ಅನ್ಯತ್ರ ಸಾಧು ಗಚ್ಚಾವೋ ದ್ರಷ್ಟುಂ ನಾರ್ಹಾಮಿ ದಾನವಾನ್।
05098019c ಜಾನಾಮಿ ತು ತಥಾತ್ಮಾನಂ ದಿತ್ಸಾತ್ಮಕಮಲಂ ಯಥಾ।।
ಬೇರೆ ಕಡೆ ಹೋಗುವುದು ಒಳ್ಳೆಯದು. ದಾನವರಲ್ಲಿ ಹುಡುಕಲು ನಾನು ಅರ್ಹನಲ್ಲ. ನಿನ್ನ ಮನಸ್ಸು ಕಲಹವನ್ನು ಹುಟ್ಟಿಸುವುದರಲ್ಲಿದೆ ಎಂದು ನನಗೆ ತಿಳಿದಿದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ಅಷ್ಟನವತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ತೊಂಭತ್ತೆಂಟನೆಯ ಅಧ್ಯಾಯವು.