ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಭಗವದ್ಯಾನ ಪರ್ವ
ಅಧ್ಯಾಯ 92
ಸಾರ
ಮರುದಿನ ಬೆಳಿಗ್ಗೆ ಕೃಷ್ಣನು ಪ್ರಾತಃವಿಧಿಗಳನ್ನು ಪೂರೈಸಲು, ಕುರುಸಭೆಯಲ್ಲಿ ಎಲ್ಲರೂ ಸೇರಿರಲು, ದುರ್ಯೋಧನ-ಶಕುನಿಯರು ವಿದುರನ ಮನೆಗೆ ಬಂದು ಕೃಷ್ಣನನ್ನು ಕರೆದುಕೊಂಡು ಹೋದುದು, ಸಾತ್ಯಕಿ-ಕೃತವರ್ಮರು ಅವನನ್ನು ಹಿಂಬಾಲಿಸಿದಿದು (1-17). ರಾಜಬೀದಿಯಲ್ಲಿ ಮುಂದುವರೆದು ಕೃಷ್ಣನು ಕುರುಸಭೆಯನ್ನು ಪ್ರವೇಶಿಸಿ ಅಂತರಿಕ್ಷದಲ್ಲಿ ನಿಂತಿದ್ದ ಋಷಿಗಳನ್ನು ನೋಡಿ ಋಷಿಗಳಿಗೆ ಮೊದಲು ಆಸನಗಳನ್ನು ಕೊಡುವಂತೆ ಭೀಷ್ಮನಿಗೆ ಸೂಚಿಸಿದುದು (18-43). ಎಲ್ಲರೂ ಕುಳಿತುಕೊಂಡ ನಂತರ ಕೃಷ್ಣನು ಕುಳಿತುಕೊಂಡಿದುದು (44-53).
05092001 ವೈಶಂಪಾಯನ ಉವಾಚ।
05092001a ತಥಾ ಕಥಯತೋರೇವ ತಯೋರ್ಬುದ್ಧಿಮತೋಸ್ತದಾ।
05092001c ಶಿವಾ ನಕ್ಷತ್ರಸಂಪನ್ನಾ ಸಾ ವ್ಯತೀಯಾಯ ಶರ್ವರೀ।।
ವೈಶಂಪಾಯನನು ಹೇಳಿದನು: “ಹೀಗೆ ಆ ಬುದ್ಧಿಮತರಿಬ್ಬರ ನಡುವೆ ಮಾತುಕಥೆಯು ನಡೆಯಲು ಮಂಗಳ ನಕ್ಷತ್ರಸಂಪನ್ನ ರಾತ್ರಿಯು ಕಳೆಯಿತು.
05092002a ಧರ್ಮಾರ್ಥಕಾಮಯುಕ್ತಾಶ್ಚ ವಿಚಿತ್ರಾರ್ಥಪದಾಕ್ಷರಾಃ।
05092002c ಶೃಣ್ವತೋ ವಿವಿಧಾ ವಾಚೋ ವಿದುರಸ್ಯ ಮಹಾತ್ಮನಃ।।
05092003a ಕಥಾಭಿರನುರೂಪಾಭಿಃ ಕೃಷ್ಣಸ್ಯಾಮಿತತೇಜಸಃ।
05092003c ಅಕಾಮಸ್ಯೇವ ಕೃಷ್ಣಸ್ಯ ಸಾ ವ್ಯತೀಯಾಯ ಶರ್ವರೀ।।
ಧರ್ಮಾರ್ಥಕಾಮಯುಕ್ತವಾದ, ವಿಚಿತ್ರಾರ್ಥಪದಾಕ್ಷರಗಳಿಂದ ಕೂಡಿದ ವಿವಿಧ ಮಾತುಗಳನ್ನು ಕೇಳುತ್ತಿದ್ದ ಮಹಾತ್ಮ ವಿದುರನಿಗೆ ಮತ್ತು ಅದಕ್ಕೆ ಸಮನಾದ ಮಾತುಗಳನ್ನು ಕೇಳುತ್ತಿದ್ದ ಅಮಿತ ತೇಜಸ್ವಿ ಕೃಷ್ಣನಿಗೆ ಇಷ್ಟವಾಗದೇ ಇದ್ದರೂ ಆ ರಾತ್ರಿಯು ಕಳೆದು ಹೋಯಿತು.
05092004a ತತಸ್ತು ಸ್ವರಸಂಪನ್ನಾ ಬಹವಃ ಸೂತಮಾಗಧಾಃ।
05092004c ಶಂಖದುಂದುಭಿನಿರ್ಘೋಷೈಃ ಕೇಶವಂ ಪ್ರತ್ಯಬೋಧಯನ್।।
ಆಗ ಸ್ವರಸಂಪನ್ನರಾದ ಬಹುಮಂದಿ ಸೂತಮಾಗಧರು ಶಂಖದುಂದುಭಿಗಳ ನಿರ್ಘೋಷಗಳಿಂದ ಕೇಶವನನ್ನು ಎಚ್ಚರಿಸಿದರು.
05092005a ತತ ಉತ್ಥಾಯ ದಾಶಾರ್ಹ ಋಷಭಃ ಸರ್ವಸಾತ್ವತಾಂ।
05092005c ಸರ್ವಮಾವಶ್ಯಕಂ ಚಕ್ರೇ ಪ್ರಾತಃಕಾರ್ಯಂ ಜನಾರ್ದನಃ।।
ಆಗ ದಾಶಾರ್ಹ, ಸರ್ವಸಾತ್ವತರ ಋಷಭ, ಜನಾರ್ದನನು ಎದ್ದು ಪ್ರಾತಃಕಾರ್ಯದಲ್ಲಿ ಅವಶ್ಯಕವಾದುದೆಲ್ಲವನ್ನೂ ಮಾಡಿ ಮುಗಿಸಿದನು.
05092006a ಕೃತೋದಕಾರ್ಯಜಪ್ಯಃ ಸ ಹುತಾಗ್ನಿಃ ಸಮಲಂಕೃತಃ।
05092006c ತತ ಆದಿತ್ಯಮುದ್ಯಂತಮುಪಾತಿಷ್ಠತ ಮಾಧವಃ।।
ಅವನು ಸಮಲಂಕೃತನಾಗಿ ಉದಕಕಾರ್ಯಗಳನ್ನು ಪೂರೈಸಿ, ಜಪಿಸಿ, ಅಗ್ನಿಯಲ್ಲಿ ಆಹುತಿಯನ್ನಿತ್ತು ಆದಿತ್ಯನನ್ನು ಉಪಾಸಿಸಿದನು.
05092007a ಅಥ ದುರ್ಯೋಧನಃ ಕೃಷ್ಣಂ ಶಕುನಿಶ್ಚಾಪಿ ಸೌಬಲಃ।
05092007c ಸಂಧ್ಯಾಂ ತಿಷ್ಠಂತಮಭ್ಯೇತ್ಯ ದಾಶಾರ್ಹಮಪರಾಜಿತಂ।।
ಅಪರಾಜಿತ ದಾಶಾರ್ಹ ಕೃಷ್ಣನು ಸಂಧ್ಯಾವಂದನೆಯಲ್ಲಿ ನಿರತನಾಗಿರಲು ದುರ್ಯೋಧನ ಮತ್ತು ಸೌಬಲ ಶಕುನಿಯರು ಬಂದು ಭೇಟಿಮಾಡಿದರು.
05092008a ಆಚಕ್ಷೇತಾಂ ತು ಕೃಷ್ಣಸ್ಯ ಧೃತರಾಷ್ಟ್ರಂ ಸಭಾಗತಂ।
05092008c ಕುರೂಂಶ್ಚ ಭೀಷ್ಮಪ್ರಮುಖಾನ್ರಾಜ್ಞಾಃ ಸರ್ವಾಂಶ್ಚ ಪಾರ್ಥಿವಾನ್।।
ಅವರು ಧೃತರಾಷ್ಟ್ರ, ಭೀಷ್ಮಪ್ರಮುಖ ಕುರುಗಳು ಮತ್ತು ಎಲ್ಲ ಪಾರ್ಥಿವರೂ ರಾಜರೂ ಸಭೆಗೆ ಬಂದಿರುವುದನ್ನು ಕೃಷ್ಣನಿಗೆ ವರದಿಮಾಡಿದರು.
05092009a ತ್ವಾಮರ್ಥಯಂತೇ ಗೋವಿಂದ ದಿವಿ ಶಕ್ರಮಿವಾಮರಾಃ।
05092009c ತಾವಭ್ಯನಂದದ್ ಗೋವಿಂದಃ ಸಾಮ್ನಾ ಪರಮವಲ್ಗುನಾ।।
“ಗೋವಿಂದ! ದಿವಿಯಲ್ಲಿ ಅಮರರು ಶಕ್ರನನ್ನು ಹೇಗೋ ಹಾಗೆ ನಿನ್ನ ಬರವನ್ನು ಕಾಯುತ್ತಿದ್ದಾರೆ” ಎನ್ನಲು ಗೋವಿಂದನು ಅವರನ್ನು ಸಾಮದಿಂದ ಪರಮ ಪ್ರೀತಿಯಿಂದ ಅಭಿನಂದಿಸಿದನು.
05092010a ತತೋ ವಿಮಲ ಆದಿತ್ಯೇ ಬ್ರಾಹ್ಮಣೇಭ್ಯೋ ಜನಾರ್ದನಃ।
05092010c ದದೌ ಹಿರಣ್ಯಂ ವಾಸಾಂಸಿ ಗಾಶ್ಚಾಶ್ವಾಂಶ್ಚ ಪರಂತಪಃ।।
ಆದಿತ್ಯನು ಸ್ವಲ್ಪ ಮೇಲೆ ಬರಲು ಪರಂತಪ ಜನಾರ್ದನನು ಬ್ರಾಹ್ಮಣರಿಗೆ ಹಿರಣ್ಯ, ವಸ್ತ್ರಗಳು, ಮತ್ತು ಗೋವುಗಳನ್ನು ದಾನವನ್ನಾಗಿತ್ತನು.
05092011a ವಿಸೃಷ್ಟವಂತಂ ರತ್ನಾನಿ ದಾಶಾರ್ಹಮಪರಾಜಿತಂ।
05092011c ತಿಷ್ಠಂತಮುಪಸಂಗಮ್ಯ ವವಂದೇ ಸಾರಥಿಸ್ತದಾ।।
ರತ್ನಗಳನ್ನು ಹಂಚಿದ ನಂತರ ಅಪರಾಜಿತ ದಾಶಾರ್ಹನು ನಿಂತುಕೊಳ್ಳಲು ಸಾರಥಿಯು ಬಳಿಬಂದು ವಂದಿಸಿದನು.
05092012a ತಮುಪಸ್ಥಿತಮಾಜ್ಞಾಯ ರಥಂ ದಿವ್ಯಂ ಮಹಾಮನಾಃ।
05092012c ಮಹಾಭ್ರಘನನಿರ್ಘೋಷಂ ಸರ್ವರತ್ನವಿಭೂಷಿತಂ।।
ಆ ಮಹಾಮನಸ್ವಿಯು ಮಹಾಮೋಡದಂತೆ ಘೋಷಿಸುವ, ಸರ್ವರತ್ನವಿಭೂಷಿತವಾದ ದಿವ್ಯ ರಥವನ್ನು ತರಲು ಆಜ್ಞಾಪಿಸಿದನು.
05092013a ಅಗ್ನಿಂ ಪ್ರದಕ್ಷಿಣಂ ಕೃತ್ವಾ ಬ್ರಾಹ್ಮಣಾಂಶ್ಚ ಜನಾರ್ದನಃ।
05092013c ಕೌಸ್ತುಭಂ ಮಣಿಮಾಮುಚ್ಯ ಶ್ರಿಯಾ ಪರಮಯಾ ಜ್ವಲನ್।।
05092014a ಕುರುಭಿಃ ಸಂವೃತಃ ಕೃಷ್ಣೋ ವೃಷ್ಣಿಭಿಶ್ಚಾಭಿರಕ್ಷಿತಃ।
05092014c ಆತಿಷ್ಠತ ರಥಂ ಶೌರಿಃ ಸರ್ವಯಾದವನಂದನಃ।।
ಅಗ್ನಿ ಮತ್ತು ಬ್ರಾಹ್ಮಣರಿಗೆ ಪ್ರದಕ್ಷಿಣೆ ಮಾಡಿ, ಪರಮ ಶ್ರೀಯಿಂದ ಬೆಳಗುತ್ತಿದ್ದ ಕೌಸ್ತುಭ ಮಣಿಯನ್ನು ಧರಿಸಿ, ಕುರುಗಳಿಂದ ಸಂವೃತನಾಗಿ, ವೃಷ್ಣಿಗಳಿಂದ ರಕ್ಷಿತನಾಗಿ ಜನಾರ್ದನ, ಕೃಷ್ಣ, ಶೌರಿ, ಸರ್ವಯಾದವನಂದನನು ರಥವನ್ನೇರಿದನು.
05092015a ಅನ್ವಾರುರೋಹ ದಾಶಾರ್ಹಂ ವಿದುರಃ ಸರ್ವಧರ್ಮವಿತ್।
05092015c ಸರ್ವಪ್ರಾಣಭೃತಾಂ ಶ್ರೇಷ್ಠಂ ಸರ್ವಧರ್ಮಭೃತಾಂ ವರಂ।।
ಸರ್ವಧರ್ಮವಿದು ವಿದುರನು ರಥವನ್ನೇರಿ ಸರ್ವಪ್ರಾಣಭೃತರಲ್ಲಿ ಶ್ರೇಷ್ಠನಾದ, ಸರ್ವಧರ್ಮಭೃತರಲ್ಲಿ ಶ್ರೇಷ್ಠನಾದ ದಾಶಾರ್ಹನನ್ನು ಹಿಂಬಾಲಿಸಿದನು.
05092016a ತತೋ ದುರ್ಯೋಧನಃ ಕೃಷ್ಣಂ ಶಕುನಿಶ್ಚಾಪಿ ಸೌಬಲಃ।
05092016c ದ್ವಿತೀಯೇನ ರಥೇನೈನಮನ್ವಯಾತಾಂ ಪರಂತಪಂ।।
ಆಗ ದುರ್ಯೋಧನ ಮತ್ತು ಸೌಬಲ ಶಕುನಿಯರೂ ಕೂಡ ಎರಡನೆಯ ರಥದಲ್ಲಿ ಪರಂತಪನನ್ನು ಹಿಂಬಾಲಿಸಿದರು.
05092017a ಸಾತ್ಯಕಿಃ ಕೃತವರ್ಮಾ ಚ ವೃಷ್ಣೀನಾಂ ಚ ಮಹಾರಥಾಃ।
05092017c ಪೃಷ್ಠತೋಽನುಯಯುಃ ಕೃಷ್ಣಂ ರಥೈರಶ್ವೈರ್ಗಜೈರಪಿ।।
ವೃಷ್ಣಿಗಳ ಮಹಾರಥರಾದ ಸಾತ್ಯಕಿ-ಕೃತವರ್ಮರು ರಥ, ಕುದುರೆ ಆನೆಗಳೊಂದಿಗೆ ಕೃಷ್ಣನ ಹಿಂದೆ ಹಿಂಬಾಲಿಸಿ ಹೋದರು.
05092018a ತೇಷಾಂ ಹೇಮಪರಿಷ್ಕಾರಾ ಯುಕ್ತಾಃ ಪರಮವಾಜಿಭಿಃ।
05092018c ಗಚ್ಚತಾಂ ಘೋಷಿಣಶ್ಚಿತ್ರಾಶ್ಚಾರು ಬಭ್ರಾಜಿರೇ ರಥಾಃ।।
ಉತ್ತಮ ಕುದುರೆಗಳನ್ನು ಕಟ್ಟಿದ, ಬಂಗಾರದಿಂದ ಮಾಡಲ್ಪಟ್ಟ ಅವರ ರಥಗಳು ಹೋಗುತ್ತಿರುವಾಗ ಅವುಗಳಿಗೆ ಕಟ್ಟಿದ್ದ ಬಣ್ಣದ ಸುಂದರ ಗಂಟೆಗಳು ಬಡಿದು ಘೋಷಿಸಿದವು.
05092019a ಸಮ್ಮೃಷ್ಟಸಂಸಿಕ್ತರಜಃ ಪ್ರತಿಪೇದೇ ಮಹಾಪಥಂ।
05092019c ರಾಜರ್ಷಿಚರಿತಂ ಕಾಲೇ ಕೃಷ್ಣೋ ಧೀಮಾಂ ಶ್ರಿಯಾ ಜ್ವಲನ್।।
ಸ್ವಲ್ಪವೇ ಸಮಯದಲ್ಲಿ ಧೀಮಾನ್ ಕೃಷ್ಣನು ಶ್ರೀಯಿಂದ ಬೆಳಗುತ್ತಾ, ಗುಡಿಸಿ, ನೀರುಸಿಂಪಡಿಸಿ ಸಿದ್ಧಪಡಿಸಿದ, ರಾಜರ್ಷಿಗಳು ನಡೆದ ಮಹಾಪಥದ ಮೇಲೆ ಬಂದನು.
05092020a ತತಃ ಪ್ರಯಾತೇ ದಾಶಾರ್ಹೇ ಪ್ರಾವಾದ್ಯಂತೈಕಪುಷ್ಕರಾಃ।
05092020c ಶಂಖಾಶ್ಚ ದಧ್ಮಿರೇ ತತ್ರ ವಾದ್ಯಾನ್ಯನ್ಯಾನಿ ಯಾನಿ ಚ।।
ದಾಶಾರ್ಹನು ಮುಂದುವರೆಯುತ್ತಿರಲು ಶಂಖಗಳನ್ನು ಊದಿದರು, ಭೇರಿಗಳನ್ನು ಬಡಿದರು ಮತ್ತು ಅನ್ಯ ವಾದ್ಯಗಳನ್ನು ನುಡಿಸಿದರು.
05092021a ಪ್ರವೀರಾಃ ಸರ್ವಲೋಕಸ್ಯ ಯುವಾನಃ ಸಿಂಹವಿಕ್ರಮಾಃ।
05092021c ಪರಿವಾರ್ಯ ರಥಂ ಶೌರೇರಗಚ್ಚಂತ ಪರಂತಪಾಃ।।
ಹೋಗುತ್ತಿರುವ ಶೌರಿಯ ರಥವನ್ನು ಸರ್ವಲೋಕ ಪ್ರವೀರ, ಸಿಂಹವಿಕ್ರಮಿ, ಪರಂತಪ ಯುವಕರು ಸುತ್ತುವರೆದಿದ್ದರು.
05092022a ತತೋಽನ್ಯೇ ಬಹುಸಾಹಸ್ರಾ ವಿಚಿತ್ರಾದ್ಭುತವಾಸಸಃ।
05092022c ಅಸಿಪ್ರಾಸಾಯುಧಧರಾಃ ಕೃಷ್ಣಸ್ಯಾಸನ್ಪುರಃಸರಾಃ।।
ವಿಚಿತ್ರ ಮತ್ತು ಅದ್ಭುತವಸ್ತ್ರಗಳನ್ನು ಧರಿಸಿದ, ಖಡ್ಗ-ಪ್ರಾಸ ಮೊದಲಾದ ಆಯುಧಗಳನ್ನು ಹಿಡಿದ ಬಹುಸಹಸ್ರ ಸಂಖ್ಯೆಯಲ್ಲಿ ಇನ್ನೂ ಇತರರು ಕೃಷ್ಣನ ಮುಂದೆ ನಡೆದಿದ್ದರು.
05092023a ಗಜಾಃ ಪರಹ್ಶತಾಸ್ತತ್ರ ವರಾಶ್ಚಾಶ್ವಾಃ ಸಹಸ್ರಶಃ।
05092023c ಪ್ರಯಾಂತಮನ್ವಯುರ್ವೀರಂ ದಾಶಾರ್ಹಮಪರಾಜಿತಂ।।
ಮುಂದುವರೆಯುತ್ತಿದ್ದ ಆ ಅಪರಾಜಿತ ವೀರ ದಾಶಾರ್ಹನನ್ನು ನೂರಕ್ಕೂ ಅಧಿಕ ಆನೆಗಳು, ಸಹಸ್ರಾರು ಶ್ರೇಷ್ಠ ಕುದುರೆಗಳು ಹಿಂಬಾಲಿಸಿದವು.
05092024a ಪುರಂ ಕುರೂಣಾಂ ಸಂವೃತ್ತಂ ದ್ರಷ್ಟುಕಾಮಂ ಜನಾರ್ದನಂ।
05092024c ಸವೃದ್ಧಬಾಲಂ ಸಸ್ತ್ರೀಕಂ ರಥ್ಯಾಗತಮರಿಂದಮಂ।।
ಜನಾರ್ದನನನ್ನು ನೋಡಲು, ವೃದ್ಧ-ಬಾಲಕ-ಸ್ತ್ರೀಯರೊಂದಿಗೆ ಕುರುಗಳ ಪುರವಿಡೀ ದಾರಿಯಲ್ಲಿ ಬಂದು ನೆರೆದಿತ್ತು.
05092025a ವೇದಿಕಾಪಾಶ್ರಿತಾಭಿಶ್ಚ ಸಮಾಕ್ರಾಂತಾನ್ಯನೇಕಶಃ।
05092025c ಪ್ರಚಲಂತೀವ ಭಾರೇಣ ಯೋಷಿದ್ಭಿರ್ಭವನಾನ್ಯುತ।।
ಮನೆಯ ಮಹಡಿಗಳು ಅನೇಕ ಸಂಖ್ಯೆಯ ಜನರಿಗೆ ಆಶ್ರಯವನ್ನಿತ್ತು, ಅವರ ಭಾರದಿಂದ ತೂಗುತ್ತಿವೆಯೋ ಎಂದು ತೋರುತ್ತಿದ್ದವು.
05092026a ಸಂಪೂಜ್ಯಮಾನಃ ಕುರುಭಿಃ ಸಂಶೃಣ್ವನ್ವಿವಿಧಾಃ ಕಥಾಃ।
05092026c ಯಥಾರ್ಹಂ ಪ್ರತಿಸತ್ಕುರ್ವನ್ಪ್ರೇಕ್ಷಮಾಣಃ ಶನೈರ್ಯಯೌ।।
ಕುರುಗಳು ಗೌರವಿಸುತ್ತಿರಲು, ವಿವಿಧ ಮಾತುಗಳನ್ನು ಕೇಳುತ್ತಾ, ಯಥಾರ್ಹವಾಗಿ ಪ್ರತಿಗೌರವಿಸುತ್ತಾ, ಎಲ್ಲೆಡೆ ನೋಡುತ್ತಾ, ಅವನು ಮೆಲ್ಲಗೆ ಪ್ರಯಾಣಿಸಿದನು.
05092027a ತತಃ ಸಭಾಂ ಸಮಾಸಾದ್ಯ ಕೇಶವಸ್ಯಾನುಯಾಯಿನಃ।
05092027c ಸಶಂಖೈರ್ವೇಣುನಿರ್ಘೋಷೈರ್ದಿಶಃ ಸರ್ವಾ ವ್ಯನಾದಯನ್।।
ಆಗ ಸಭೆಯನ್ನು ಸಮೀಪಿಸಲು ಕೇಶವನ ಅನುಯಾಯಿಗಳು ಶಂಖ-ವೇಣುಗಳ ನಿರ್ಘೋಷದಿಂದ ಎಲ್ಲ ದಿಕ್ಕುಗಳನ್ನೂ ಮೊಳಗಿಸಿದರು.
05092028a ತತಃ ಸಾ ಸಮಿತಿಃ ಸರ್ವಾ ರಾಜ್ಞಾಮಮಿತತೇಜಸಾಂ।
05092028c ಸಂಪ್ರಾಕಂಪತ ಹರ್ಷೇಣ ಕೃಷ್ಣಾಗಮನಕಾಂಕ್ಷಯಾ।।
ಕೃಷ್ಣನ ಆಗಮನವನ್ನು ಕಾಯುತ್ತಿದ್ದ ಆ ಎಲ್ಲ ಅಮಿತತೇಜಸ್ವಿ ರಾಜರ ಸಭೆಯು ಹರ್ಷದಿಂದ ನಡುಗಿತು.
05092029a ತತೋಽಭ್ಯಾಶಗತೇ ಕೃಷ್ಣೇ ಸಮಹೃಷ್ಯನ್ನರಾಧಿಪಾಃ।
05092029c ಶ್ರುತ್ವಾ ತಂ ರಥನಿರ್ಘೋಷಂ ಪರ್ಜನ್ಯನಿನದೋಪಮಂ।।
ಮೋಡದಂತೆ ಮೊಳಗುತ್ತಿದ್ದ ಅವನ ರಥನಿರ್ಘೋಷವನ್ನು ಕೇಳಿ, ಕೃಷ್ಣನು ಬಂದನೆಂದು, ನರಾಧಿಪರು ಪರಮ ಹರ್ಷಿತರಾದರು.
05092030a ಆಸಾದ್ಯ ತು ಸಭಾದ್ವಾರಮೃಷಭಃ ಸರ್ವಸಾತ್ವತಾಂ।
05092030c ಅವತೀರ್ಯ ರಥಾಚ್ಚೌರಿಃ ಕೈಲಾಸಶಿಖರೋಪಮಾತ್।।
ಸರ್ವಸಾತ್ವತರ ವೃಷಭ ಶೌರಿಯು ಕೈಲಾಸಶಿಖರೋಪಮ ರಥದಿಂದಿಳಿದು ಸಭಾದ್ವಾರವನ್ನು ತಲುಪಿದನು.
05092031a ನಗಮೇಘಪ್ರತೀಕಾಶಾಂ ಜ್ವಲಂತೀಮಿವ ತೇಜಸಾ।
05092031c ಮಹೇಂದ್ರಸದನಪ್ರಖ್ಯಾಂ ಪ್ರವಿವೇಶ ಸಭಾಂ ತತಃ।।
ಆಗ ಅವನು ಪರ್ವತದಂತೆ ಅಥವಾ ಬೃಹತ್ ಮೋಡದಂತೆ ತೋರುತ್ತಿದ್ದ, ತೇಜಸ್ಸಿನಿಂದ ಉರಿಯುತ್ತಿದೆಯೋ ಎಂದು ತೋರುತ್ತಿದ್ದ, ಇಂದ್ರನ ಸದನದಂತಿದ್ದ ಆ ಸಭೆಯನ್ನು ಪ್ರವೇಶಿಸಿದನು.
05092032a ಪಾಣೌ ಗೃಹೀತ್ವಾ ವಿದುರಂ ಸಾತ್ಯಕಿಂ ಚ ಮಹಾಯಶಾಃ।
05092032c ಜ್ಯೋತೀಂಷ್ಯಾದಿತ್ಯವದ್ರಾಜನ್ಕುರೂನ್ಪ್ರಚ್ಚಾದಯಂ ಶ್ರಿಯಾ।।
ರಾಜನ್! ಮಹಾಯಶ ವಿದುರ-ಸಾತ್ಯಕಿಯರ ಕೈಹಿಡಿದು ಅವನು ಸೂರ್ಯನು ನಕ್ಷತ್ರಗಳನ್ನು ಮೀರಿ ಮಿರುಗಿ ಅವರ ತೇಜಸ್ಸನ್ನು ಮುಸುಕುವಂತೆ ತನ್ನ ಶ್ರೀಯಿಂದ ಕುರುಗಳನ್ನು ಮುಸುಕಿದನು.
05092033a ಅಗ್ರತೋ ವಾಸುದೇವಸ್ಯ ಕರ್ಣದುರ್ಯೋಧನಾವುಭೌ।
05092033c ವೃಷ್ಣಯಃ ಕೃತವರ್ಮಾ ಚ ಆಸನ್ಕೃಷ್ಣಸ್ಯ ಪೃಷ್ಠತಃ।।
ವಾಸುದೇವನ ಮುಂದೆ ಕರ್ಣ-ದುರ್ಯೋಧನರಿಬ್ಬರೂ, ಕೃಷ್ಣನ ಹಿಂದೆ ಕೃತವರ್ಮ ವೃಷ್ಣಿಗಳು ಇದ್ದರು.
05092034a ಧೃತರಾಷ್ಟ್ರಂ ಪುರಸ್ಕೃತ್ಯ ಭೀಷ್ಮದ್ರೋಣಾದಯಸ್ತತಃ।
05092034c ಆಸನೇಭ್ಯೋಽಚಲನ್ಸರ್ವೇ ಪೂಜಯಂತೋ ಜನಾರ್ದನಂ।।
ಧೃತರಾಷ್ಟ್ರನೇ ಮೊದಲಾಗಿ ಭೀಷ್ಮ-ದ್ರೋಣಾದಿಗಳು ಎಲ್ಲರೂ ಆಸನಗಳಿಂದ ಮೇಲೆದ್ದು ಜನಾರ್ದನನನ್ನು ಗೌರವಿಸಿದರು.
05092035a ಅಭ್ಯಾಗಚ್ಚತಿ ದಾಶಾರ್ಹೇ ಪ್ರಜ್ಞಾಚಕ್ಷುರ್ಮಹಾಮನಾಃ।
05092035c ಸಹೈವ ಭೀಷ್ಮದ್ರೋಣಾಭ್ಯಾಮುದತಿಷ್ಠನ್ಮಹಾಯಶಾಃ।।
ದಾಶಾರ್ಹನು ಆಗಮಿಸುತ್ತಲೇ ಪ್ರಜ್ಞಾಚಕ್ಷುವು ಮಹಾಮನಸ್ಕ, ಮಹಾಯಶ ಭೀಷ್ಮ-ದ್ರೋಣಾದಿಗಳೊಡನೆ ಥಟ್ಟನೇ ಮೇಲೆದ್ದು ನಿಂತನು.
05092036a ಉತ್ತಿಷ್ಠತಿ ಮಹಾರಾಜೇ ಧೃತರಾಷ್ಟ್ರೇ ಜನೇಶ್ವರೇ।
05092036c ತಾನಿ ರಾಜಸಹಸ್ರಾಣಿ ಸಮುತ್ತಸ್ಥುಃ ಸಮಂತತಃ।।
ಮಹಾರಾಜ ಜನೇಶ್ವರ ಧೃತರಾಷ್ಟ್ರನು ಎದ್ದು ನಿಲ್ಲಲು ಅಲ್ಲಿ ಸೇರಿದ್ದ ಸಹಸ್ರಾರು ರಾಜರುಗಳೂ ಮೇಲೆದ್ದು ನಿಂತರು.
05092037a ಆಸನಂ ಸರ್ವತೋಭದ್ರಂ ಜಾಂಬೂನದಪರಿಷ್ಕೃತಂ।
05092037c ಕೃಷ್ಣಾರ್ಥೇ ಕಲ್ಪಿತಂ ತತ್ರ ಧೃತರಾಷ್ಟ್ರಸ್ಯ ಶಾಸನಾತ್।।
ಧೃತರಾಷ್ಟ್ರನ ಶಾಸನದಂತೆ ಕೃಷ್ಣನಿಗಾಗಿ ಅಲ್ಲಿ ಸರ್ವತೋಭದ್ರವಾದ, ಬಂಗಾರದಿಂದ ಪರಿಷ್ಕರಿಸಲ್ಪಟ್ಟ ಆಸನವನ್ನು ಕಲ್ಪಿಸಲಾಗಿತ್ತು.
05092038a ಸ್ಮಯಮಾನಸ್ತು ರಾಜಾನಂ ಭೀಷ್ಮದ್ರೋಣೌ ಚ ಮಾಧವಃ।
05092038c ಅಭ್ಯಭಾಷತ ಧರ್ಮಾತ್ಮಾ ರಾಜ್ಞಾಶ್ಚಾನ್ಯಾನ್ಯಥಾವಯಃ।।
05092039a ತತ್ರ ಕೇಶವಮಾನರ್ಚುಃ ಸಮ್ಯಗಭ್ಯಾಗತಂ ಸಭಾಂ।
05092039c ರಾಜಾನಃ ಪಾರ್ಥಿವಾಃ ಸರ್ವೇ ಕುರವಶ್ಚ ಜನಾರ್ದನಂ।।
ಆಗ ಧರ್ಮಾತ್ಮ ಮಾಧವನು ಮುಗುಳ್ನಕ್ಕು ರಾಜನನ್ನು, ಭೀಷ್ಮ-ದ್ರೋಣರನ್ನು, ಇತರ ರಾಜರನ್ನೂ ವಯಸ್ಸಿಗೆ ತಕ್ಕಂತೆ ಮಾತನಾಡಿಸಿದನು. ಸಭೆಗೆ ಬಂದಿದ್ದ ಕೇಶವ ಜನಾರ್ದನನನ್ನು ಎಲ್ಲ ಕುರುಗಳೂ, ರಾಜ ಪಾರ್ಥಿವರೂ ಅರ್ಚಿಸಿದರು.
05092040a ತತ್ರ ತಿಷ್ಠನ್ಸ ದಾಶಾರ್ಹೋ ರಾಜಮಧ್ಯೇ ಪರಂತಪಃ।
05092040c ಅಪಶ್ಯದಂತರಿಕ್ಷಸ್ಥಾನೃಷೀನ್ಪರಪುರಂಜಯಃ।।
ಅಲ್ಲಿ ರಾಜರ ಮಧ್ಯೆ ನಿಂತು ಪರಪುರಂಜಯ ಪರಂತಪ ದಾಶಾರ್ಹನು ಅಂತರಿಕ್ಷದಲ್ಲಿ ನಿಂತಿದ್ದ ಋಷಿಗಳನ್ನು ನೋಡಿದನು.
05092041a ತತಸ್ತಾನಭಿಸಂಪ್ರೇಕ್ಷ್ಯ ನಾರದಪ್ರಮುಖಾನೃಷೀನ್।
05092041c ಅಭ್ಯಭಾಷತ ದಾಶಾರ್ಹೋ ಭೀಷ್ಮಂ ಶಾಂತನವಂ ಶನೈಃ।।
ನಾರದಪ್ರಮುಖ ಆ ಋಷಿಗಳನ್ನು ನೋಡಿ ದಾಶಾರ್ಹನು ಶಾಂತನವ ಭೀಷ್ಮನಿಗೆ ಮೆಲ್ಲನೇ ಹೇಳಿದನು:
05092042a ಪಾರ್ಥಿವೀಂ ಸಮಿತಿಂ ದ್ರಷ್ಟುಮೃಷಯೋಽಭ್ಯಾಗತಾ ನೃಪ।
05092042c ನಿಮಂತ್ರ್ಯಂತಾಮಾಸನೈಶ್ಚ ಸತ್ಕಾರೇಣ ಚ ಭೂಯಸಾ।।
“ನೃಪ! ಈ ಪಾರ್ಥಿವರ ಸಭೆಯನ್ನು ನೋಡಲು ಋಷಿಗಳು ಆಗಮಿಸಿದ್ದಾರೆ. ಅವರನ್ನು ಸ್ವಾಗತಿಸಿ ಆಸನಗಳನಿತ್ತು ಸತ್ಕರಿಸಬೇಕು.
05092043a ನೈತೇಷ್ವನುಪವಿಷ್ಟೇಷು ಶಕ್ಯಂ ಕೇನ ಚಿದಾಸಿತುಂ।
05092043c ಪೂಜಾ ಪ್ರಯುಜ್ಯತಾಮಾಶು ಮುನೀನಾಂ ಭಾವಿತಾತ್ಮನಾಂ।।
ಅವರು ಕುಳಿತುಕೊಳ್ಳದೇ ಇಲ್ಲಿರುವ ಯಾರೂ ಕುಳಿತುಕೊಳ್ಳಲಾರರು. ಆದುದರಿಂದ ಈ ಭಾವಿತಾತ್ಮ ಮುನಿಗಳ ಪೂಜೆಯು ಶೀಘ್ರವಾಗಿ ನಡೆಯಲಿ.”
05092044a ಋಷೀಂ ಶಾಂತನವೋ ದೃಷ್ಟ್ವಾ ಸಭಾದ್ವಾರಮುಪಸ್ಥಿತಾನ್।
05092044c ತ್ವರಮಾಣಸ್ತತೋ ಭೃತ್ಯಾನಾಸನಾನೀತ್ಯಚೋದಯತ್।।
ಸಭಾದ್ವಾರದಲ್ಲಿ ನಿಂತಿದ್ದ ಋಷಿಗಳನ್ನು ನೋಡಿ ಶಾಂತನವನು ಅವರಿಗೆ ಬೇಗ ಆಸನಗಳನ್ನು ತರುವಂತೆ ಸೇವಕರಿಗೆ ಆಜ್ಞಾಪಿಸಿದನು.
05092045a ಆಸನಾನ್ಯಥ ಮೃಷ್ಟಾನಿ ಮಹಾಂತಿ ವಿಪುಲಾನಿ ಚ।
05092045c ಮಣಿಕಾಂಚನಚಿತ್ರಾಣಿ ಸಮಾಜಹ್ರುಸ್ತತಸ್ತತಃ।।
ಕೂಡಲೆ ಮಣಿಕಾಂಚನಗಳಿಂದ ಅಲಂಕರಿಸಲ್ಪಟ್ಟ, ಹೇರಳವಾದ ದೊಡ್ಡ ದೊಡ್ಡ ಆಸನಗಳನ್ನು ತರಲಾಯಿತು.
05092046a ತೇಷು ತತ್ರೋಪವಿಷ್ಟೇಷು ಗೃಹೀತಾರ್ಘೇಷು ಭಾರತ।
05092046c ನಿಷಸಾದಾಸನೇ ಕೃಷ್ಣೋ ರಾಜಾನಶ್ಚ ಯಥಾಸನಂ।।
ಅವರು ಅಲ್ಲಿ ಕುಳಿತುಕೊಂಡು ಅರ್ಘ್ಯಗಳನ್ನು ಸ್ವೀಕರಿಸಿದ ನಂತರ ಕೃಷ್ಣ ಮತ್ತು ರಾಜರು ಆಸನಗಳನ್ನು ಗ್ರಹಿಸಿದರು.
05092047a ದುಃಶಾಸನಃ ಸಾತ್ಯಕಯೇ ದದಾವಾಸನಮುತ್ತಮಂ।
05092047c ವಿವಿಂಶತಿರ್ದದೌ ಪೀಠಂ ಕಾಂಚನಂ ಕೃತವರ್ಮಣೇ।।
ದುಃಶಾಸನನು ಸಾತ್ಯಕಿಗೆ ಉತ್ತಮ ಆಸನವನ್ನು ನೀಡಿದನು. ವಿವಿಂಶತಿಯು ಕೃತವರ್ಮನಿಗೆ ಕಾಂಚನ ಪೀಠವನ್ನಿತ್ತನು.
05092048a ಅವಿದೂರೇಽಥ ಕೃಷ್ಣಸ್ಯ ಕರ್ಣದುರ್ಯೋಧನಾವುಭೌ।
05092048c ಏಕಾಸನೇ ಮಹಾತ್ಮಾನೌ ನಿಷೀದತುರಮರ್ಷಣೌ।।
ಕೃಷ್ಣನ ಪಕ್ಕದಲ್ಲಿಯೇ ಒಂದೇ ಪೀಠದಲ್ಲಿ ಮಹಾತ್ಮ, ದುಷ್ಟ ಕರ್ಣ-ದುರ್ಯೋಧನರಿಬ್ಬರು ಒಟ್ಟಿಗೇ ಕುಳಿತುಕೊಂಡರು.
05092049a ಗಾಂಧಾರರಾಜಃ ಶಕುನಿರ್ಗಾಂಧಾರೈರಭಿರಕ್ಷಿತಃ।
05092049c ನಿಷಸಾದಾಸನೇ ರಾಜಾ ಸಹಪುತ್ರೋ ವಿಶಾಂ ಪತೇ।।
ವಿಶಾಂಪತೇ! ಗಾಂಧಾರರಾಜ ಶಕುನಿಯು ಗಾಂಧಾರರಿಂದ ರಕ್ಷಿತನಾಗಿ ಪುತ್ರನೊಂದಿಗೆ ಅಲ್ಲಿ ಆಸನದಲ್ಲಿ ಕುಳಿತಿದ್ದನು.
05092050a ವಿದುರೋ ಮಣಿಪೀಠೇ ತು ಶುಕ್ಲಸ್ಪರ್ಧ್ಯಾಜಿನೋತ್ತರೇ।
05092050c ಸಂಸ್ಪೃಶನ್ನಾಸನಂ ಶೌರೇರ್ಮಹಾಮತಿರುಪಾವಿಶತ್।।
ಮಹಾಮತಿ ವಿದುರನು ಬಿಳಿಯ ಜಿನವಸ್ತ್ರವನ್ನು ಹೊದಿಸಿದ್ದ, ಶೌರಿಯ ಪೀಠಕ್ಕೆ ತಾಗಿಕೊಂಡಿದ್ದ ಮಣಿಪೀಠದಲ್ಲಿ ಕುಳಿತುಕೊಂಡನು.
05092051a ಚಿರಸ್ಯ ದೃಷ್ಟ್ವಾ ದಾಶಾರ್ಹಂ ರಾಜಾನಃ ಸರ್ವಪಾರ್ಥಿವಾಃ।
05092051c ಅಮೃತಸ್ಯೇವ ನಾತೃಪ್ಯನ್ಪ್ರೇಕ್ಷಮಾಣಾ ಜನಾರ್ದನಂ।।
ಅಲ್ಲಿದ್ದ ಸರ್ವ ರಾಜ ಪಾರ್ಥಿವರೂ ತುಂಬಾ ಹೊತ್ತು ದಾಶಾರ್ಹನನ್ನು ನೋಡುತ್ತಿದ್ದರೂ ಅಮೃತವನ್ನು ಎಷ್ಟು ಕುಡಿದರೂ ತೃಪ್ತರಾಗದವರಂತೆ ಜನಾರ್ದನನ್ನು ನೋಡಿ ತೃಪ್ತರಾಗಲಿಲ್ಲ.
05092052a ಅತಸೀಪುಷ್ಪಸಂಕಾಶಃ ಪೀತವಾಸಾ ಜನಾರ್ದನಃ।
05092052c ವ್ಯಭ್ರಾಜತ ಸಭಾಮಧ್ಯೇ ಹೇಮ್ನೀವೋಪಹಿತೋ ಮಣಿಃ।।
ಅತಸೀಪುಷ್ಪಸಂಕಾಶ, ಪೀತಾಂಬರವನ್ನುಟ್ಟಿದ್ದ ಜನಾರ್ದನನು ಬಂಗಾರದಲ್ಲಿ ಹುದುಗಿದ್ದ ಮಣಿಯಂತೆ ಆ ಸಭಾಮಧ್ಯದಲ್ಲಿ ಹೊಳೆಯುತ್ತಿದ್ದನು.
05092053a ತತಸ್ತೂಷ್ಣೀಂ ಸರ್ವಮಾಸೀದ್ಗೋವಿಂದಗತಮಾನಸಂ।
05092053c ನ ತತ್ರ ಕಶ್ಚಿತ್ಕಿಂ ಚಿದ್ಧಿ ವ್ಯಾಜಹಾರ ಪುಮಾನ್ಕ್ವ ಚಿತ್।।
ಗೋವಿಂದನು ಕುಳಿತುಕೊಂಡ ನಂತರ ಎಲ್ಲರೂ ಸುಮ್ಮನಾದರು. ಅಲ್ಲಿದ್ದ ಯಾವ ಪುರುಷನೂ ಏನನ್ನೂ ಹೇಳಲಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಶ್ರೀಕೃಷ್ಣಸಭಾಪ್ರವೇಶೇ ದ್ವನವತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಶ್ರೀಕೃಷ್ಣಸಭಾಪ್ರವೇಶ ಎನ್ನುವ ತೊಂಭತ್ತೆರಡನೆಯ ಅಧ್ಯಾಯವು.