083 ಮಾರ್ಗೇ ಸಭಾನಿರ್ಮಾಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 83

ಸಾರ

ಕೃಷ್ಣನು ಬರುತ್ತಿದ್ದಾನೆಂದು ದೂತರಿಂದ ತಿಳಿದ ಧೃತರಾಷ್ಟ್ರನು ಅವನನ್ನು ಎದಿರುಗೊಳ್ಳಲು ಸಿದ್ಧತೆಗಳನ್ನು ದುರ್ಯೋಧನನಿಗೆ ಹೇಳಿ ಮಾಡಿಸಿದುದು (1-18).

05083001 ವೈಶಂಪಾಯನ ಉವಾಚ।
05083001a ತಥಾ ದೂತೈಃ ಸಮಾಜ್ಞಾಯ ಆಯಾಂತಂ ಮಧುಸೂದನಂ।
05083001c ಧೃತರಾಷ್ಟ್ರೋಽಬ್ರವೀದ್ಭೀಷ್ಮಮರ್ಚಯಿತ್ವಾ ಮಹಾಭುಜಂ।।
05083002a ದ್ರೋಣಂ ಚ ಸಂಜಯಂ ಚೈವ ವಿದುರಂ ಚ ಮಹಾಮತಿಂ।
05083002c ದುರ್ಯೋಧನಂ ಚ ಸಾಮಾತ್ಯಂ ಹೃಷ್ಟರೋಮಾಬ್ರವೀದಿದಂ।।

ವೈಶಂಪಾಯನನು ಹೇಳಿದನು: “ಮಧುಸೂದನನು ಬರುತ್ತಿದ್ದಾನೆ ಎನ್ನುವುದನ್ನು ದೂತರಿಂದ ತಿಳಿದ ಧೃತರಾಷ್ಟ್ರನು ಮಹಾಭುಜ ಭೀಷ್ಮನನ್ನು ಪೂಜಿಸಿ, ದ್ರೋಣ, ಸಂಜಯ, ಮಹಾಮತಿ ವಿದುರ, ಮತ್ತು ಅಮಾತ್ಯರೊಂದಿಗೆ ರೋಮ ಹರ್ಷಿತನಾಗಿ ದುರ್ಯೋಧನನಿಗೆ ಹೇಳಿದನು:

05083003a ಅದ್ಭುತಂ ಮಹದಾಶ್ಚರ್ಯಂ ಶ್ರೂಯತೇ ಕುರುನಂದನ।
05083003c ಸ್ತ್ರಿಯೋ ಬಾಲಾಶ್ಚ ವೃದ್ಧಾಶ್ಚ ಕಥಯಂತಿ ಗೃಹೇ ಗೃಹೇ।।
05083004a ಸತ್ಕೃತ್ಯಾಚಕ್ಷತೇ ಚಾನ್ಯೇ ತಥೈವಾನ್ಯೇ ಸಮಾಗತಾಃ।
05083004c ಪೃಥಗ್ವಾದಾಶ್ಚ ವರ್ತಂತೇ ಚತ್ವರೇಷು ಸಭಾಸು ಚ।।

“ಕುರುನಂದನ! ಅದ್ಭುತವೂ ಮಹದಾಶ್ಚರ್ಯವೂ ಆದುದು ಕೇಳಿಬರುತ್ತಿದೆ! ಮನೆಮನೆಗಳಲ್ಲಿ ಸ್ತ್ರೀಯರು, ಬಾಲಕರು, ವೃದ್ಧರು ಹೇಳುತ್ತಿದ್ದಾರೆ. ಕೆಲವರು ಭಕ್ತಿಯಿಂದ ಹೇಳುತ್ತಿದ್ದಾರೆ, ಇತರರು ಗುಂಪುಗಳಲ್ಲಿ ಹೇಳುತ್ತಿದ್ದಾರೆ, ಚೌಕಗಳಲ್ಲಿ ಸಭೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ವಾರ್ತೆಯು ಕೇಳಿಬರುತ್ತಿದೆ.

05083005a ಉಪಯಾಸ್ಯತಿ ದಾಶಾರ್ಹಃ ಪಾಂಡವಾರ್ಥೇ ಪರಾಕ್ರಮೀ।
05083005c ಸ ನೋ ಮಾನ್ಯಶ್ಚ ಪೂಜ್ಯಶ್ಚ ಸರ್ವಥಾ ಮಧುಸೂದನಃ।।
05083006a ತಸ್ಮಿನ್ ಹಿ ಯಾತ್ರಾ ಲೋಕಸ್ಯ ಭೂತಾನಾಮೀಶ್ವರೋ ಹಿ ಸಃ।
05083006c ತಸ್ಮಿನ್ಧೃತಿಶ್ಚ ವೀರ್ಯಂ ಚ ಪ್ರಜ್ಞಾ ಚೌಜಶ್ಚ ಮಾಧವೇ।।

ಪಾಂಡವರಿಗಾಗಿ ಪರಾಕ್ರಮಿ ದಾಶಾರ್ಹನು ಬರುತ್ತಿದ್ದಾನೆ. ಆ ಮಧುಸೂದನನನ್ನು ಸರ್ವಥಾ ಗೌರವಿಸಬೇಕು, ಪೂಜಿಸಬೇಕು. ಅವನಲ್ಲಿಯೇ ಲೋಕದ ಯಾತ್ರೆಯು ನಡೆಯುತ್ತದೆ. ಅವನೇ ಭೂತಗಳ ಈಶ್ವರ! ಆ ಮಾಧವನಲ್ಲಿ ಧೃತಿ, ವೀರ್ಯ, ಪ್ರಜ್ಞೆ ಮತ್ತು ಓಜಸ್ಸುಗಳು ನೆಲೆಸಿವೆ.

05083007a ಸ ಮಾನ್ಯತಾಂ ನರಶ್ರೇಷ್ಠಃ ಸ ಹಿ ಧರ್ಮಃ ಸನಾತನಃ।
05083007c ಪೂಜಿತೋ ಹಿ ಸುಖಾಯ ಸ್ಯಾದಸುಖಃ ಸ್ಯಾದಪೂಜಿತಃ।।

ಆ ನರಶ್ರೇಷ್ಠನನ್ನು ಮನ್ನಿಸಬೇಕು. ಅವನೇ ಸನಾತನ ಧರ್ಮ. ಪೂಜಿಸಿದರೆ ಸುಖವನ್ನು, ಪೂಜಿಸದಿದ್ದರೆ ಅಸುಖವನ್ನು ತರುತ್ತಾನೆ.

05083008a ಸ ಚೇತ್ತುಷ್ಯತಿ ದಾಶಾರ್ಹ ಉಪಚಾರೈರರಿಂದಮಃ।
05083008c ಕೃತ್ಸ್ನಾನ್ಸರ್ವಾನಭಿಪ್ರಾಯಾನ್ಪ್ರಾಪ್ಸ್ಯಾಮಃ ಸರ್ವರಾಜಸು।।

ನಮ್ಮ ಉಪಚಾರಗಳಿಂದ ಅರಿಂದಮ ದಾಶಾರ್ಹನು ತೃಪ್ತನಾದರೆ, ನಮ್ಮೆಲ್ಲ ರಾಜರ ಸರ್ವ ಕಾಮನೆಗಳನ್ನೂ ಪಡೆಯುತ್ತೇವೆ.

05083009a ತಸ್ಯ ಪೂಜಾರ್ಥಮದ್ಯೈವ ಸಂವಿಧತ್ಸ್ವ ಪರಂತಪ।
05083009c ಸಭಾಃ ಪಥಿ ವಿಧೀಯಂತಾಂ ಸರ್ವಕಾಮಸಮಾಹಿತಾಃ।।

ಪರಂತಪ! ಇಂದೇ ಅವನ ಪೂಜೆಗೆ ಸಿದ್ಧಗೊಳಿಸು. ದಾರಿಯಲ್ಲಿ ಸರ್ವಕಾಮಗಳನ್ನು ಪೂರೈಸಬಲ್ಲ ಸಭೆಗಳು ನಿರ್ಮಾಣಗೊಳ್ಳಲಿ.

05083010a ಯಥಾ ಪ್ರೀತಿರ್ಮಹಾಬಾಹೋ ತ್ವಯಿ ಜಾಯೇತ ತಸ್ಯ ವೈ।
05083010c ತಥಾ ಕುರುಷ್ವ ಗಾಂಧಾರೇ ಕಥಂ ವಾ ಭೀಷ್ಮ ಮನ್ಯಸೇ।।

ಗಾಂಧಾರೇ! ಮಹಾಬಾಹೋ! ಅವನಿಗೆ ನಿನ್ನ ಮೇಲೆ ಪ್ರೀತಿಯುಂಟಾಗುವಂತೆ ಮಾಡು! ಅಥವಾ ಭೀಷ್ಮ! ನಿನಗೇನನ್ನಿಸುತ್ತದೆ?”

05083011a ತತೋ ಭೀಷ್ಮಾದಯಃ ಸರ್ವೇ ಧೃತರಾಷ್ಟ್ರಂ ಜನಾಧಿಪಂ।
05083011c ಊಚುಃ ಪರಮಮಿತ್ಯೇವಂ ಪೂಜಯಂತೋಽಸ್ಯ ತದ್ವಚಃ।।

ಆಗ ಭೀಷ್ಮಾದಿಗಳೆಲ್ಲರೂ ಜನಾಧಿಪ ಧೃತರಾಷ್ಟ್ರನಿಗೆ “ಬಹು ಉತ್ತಮ!” ಎಂದು ಹೇಳಿ ಅವನ ಮಾತನ್ನು ಗೌರವಿಸಿದರು.

05083012a ತೇಷಾಮನುಮತಂ ಜ್ಞಾತ್ವಾ ರಾಜಾ ದುರ್ಯೋಧನಸ್ತದಾ।
05083012c ಸಭಾವಾಸ್ತೂನಿ ರಮ್ಯಾಣಿ ಪ್ರದೇಷ್ಟುಮುಪಚಕ್ರಮೇ।।

ಅವರ ಅನುಮತವನ್ನು ತಿಳಿದ ರಾಜಾ ದುರ್ಯೋಧನನು ರಮ್ಯ ಸಭಾಭವನಗಳನ್ನು ಕಟ್ಟಿಸಲು ಪ್ರಾರಂಭಿಸಿದನು.

05083013a ತತೋ ದೇಶೇಷು ದೇಶೇಷು ರಮಣೀಯೇಷು ಭಾಗಶಃ।
05083013c ಸರ್ವರತ್ನಸಮಾಕೀರ್ಣಾಃ ಸಭಾಶ್ಚಕ್ರುರನೇಕಶಃ।।
05083014a ಆಸನಾನಿ ವಿಚಿತ್ರಾಣಿ ಯುಕ್ತಾನಿ ವಿವಿಧೈರ್ಗುಣೈಃ।
05083014c ಸ್ತ್ರಿಯೋ ಗಂಧಾನಲಂಕಾರಾನ್ಸೂಕ್ಷ್ಮಾಣಿ ವಸನಾನಿ ಚ।।
05083015a ಗುಣವಂತ್ಯನ್ನಪಾನಾನಿ ಭೋಜ್ಯಾನಿ ವಿವಿಧಾನಿ ಚ।
05083015c ಮಾಲ್ಯಾನಿ ಚ ಸುಗಂಧೀನಿ ತಾನಿ ರಾಜಾ ದದೌ ತತಃ।।

ಆಗ ದೇಶದೇಶಗಳಲ್ಲಿ ರಮಣೀಯ ಭಾಗಗಳಲ್ಲಿ ಅನೇಕ ಸಂಖ್ಯೆಗಳಲ್ಲಿ ಸಭೆಗಳನ್ನು ನಿರ್ಮಿಸಲಾಯಿತು - ಎಲ್ಲವೂ ರತ್ನಗಳನ್ನು ಒಳಗೊಂಡಿದ್ದವು, ಬಣ್ಣಬಣ್ಣದ ವಿವಿಧ ಗುಣಗಳ ಆಸನಗಳನ್ನು ಒಳಗೊಂಡಿದ್ದವು, ಉತ್ತಮ ವಸ್ತ್ರಗಳನ್ನು ಧರಿಸಿದ ಸ್ತ್ರೀಯರು ಗಂಧ ಅಲಂಕಾರಗಳನ್ನು ಹಿಡಿದಿದ್ದರು; ಉತ್ತಮ ಗುಣದ ಅನ್ನ ಪಾನೀಯಗಳು ವಿವಿಧ ಭೋಜನಗಳು, ಮಾಲೆಗಳು, ಸುಂಗಂಧಗಳು ಎಲ್ಲವನ್ನೂ ರಾಜನು ಕೊಟ್ಟಿದ್ದನು.

05083016a ವಿಶೇಷತಶ್ಚ ವಾಸಾರ್ಥಂ ಸಭಾಂ ಗ್ರಾಮೇ ವೃಕಸ್ಥಲೇ।
05083016c ವಿದಧೇ ಕೌರವೋ ರಾಜಾ ಬಹುರತ್ನಾಂ ಮನೋರಮಾಂ।।

ವಿಶೇಷವಾಗಿ ವೃಕಸ್ಥಲ ಗ್ರಾಮದಲ್ಲಿ ಉಳಿಯುವುದಕ್ಕೆಂದು ರಾಜಾ ಕೌರವನು ಬಹುರತ್ನಗಳಿಂದ ಮನೋರಮ ಸಭೆಯನ್ನು ನಿರ್ಮಿಸಿದ್ದನು.

05083017a ಏತದ್ವಿಧಾಯ ವೈ ಸರ್ವಂ ದೇವಾರ್ಹಮತಿಮಾನುಷಂ।
05083017c ಆಚಖ್ಯೌ ಧೃತರಾಷ್ಟ್ರಾಯ ರಾಜಾ ದುರ್ಯೋಧನಸ್ತದಾ।।

ಈ ರೀತಿ ಎಲ್ಲ ಅತಿಮಾನುಷವಾದ, ದೇವತೆಗಳಿಗೆ ತಕ್ಕುದಾದ ವ್ಯವಸ್ಥೆಗಳನ್ನು ಮಾಡಿಸಿ, ದುರ್ಯೋಧನನು ರಾಜಾ ಧೃತರಾಷ್ಟ್ರನಿಗೆ ವರದಿ ಮಾಡಿದನು.

05083018a ತಾಃ ಸಭಾಃ ಕೇಶವಃ ಸರ್ವಾ ರತ್ನಾನಿ ವಿವಿಧಾನಿ ಚ।
05083018c ಅಸಮೀಕ್ಷ್ಯೈವ ದಾಶಾರ್ಹ ಉಪಾಯಾತ್ಕುರುಸದ್ಮ ತತ್।।

ಅದರೆ ವಿವಿಧ ರತ್ನಗಳಿಂದ ಕೂಡಿದ ಆ ಸಭೆಗಳೆಲ್ಲವನ್ನೂ ನಿರ್ಲಕ್ಷಿಸಿ ಕೇಶವ ದಾಶಾರ್ಹನು ಕುರುಗಳ ಸದನಕ್ಕೆ ನಡೆದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾರ್ಗೇ ಸಭಾನಿರ್ಮಾಣೇ ತ್ರ್ಯಶೀತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾರ್ಗದಲ್ಲಿ ಸಭಾನಿರ್ಮಾಣ ಎನ್ನುವ ಎಂಭತ್ಮೂರನೆಯ ಅಧ್ಯಾಯವು.