074 ಭೀಮವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಭಗವದ್ಯಾನ ಪರ್ವ

ಅಧ್ಯಾಯ 74

ಸಾರ

ಕೃಷ್ಣನ ಮಾತಿನಿಂದ ಉತ್ತೇಜನಗೊಂಡ ಭೀಮನು “ಸರ್ವ ಲೋಕಗಳೇ ಸಿಟ್ಟಾದರೂ ಭಯವೆನ್ನುವುದು ನನಗೆ ತಿಳಿದಿಲ್ಲ!” ಎಂದು ತನ್ನ ಪರಾಕ್ರಮವನ್ನು ಹೇಳಿಕೊಳ್ಳುತ್ತಾ “ಕೇವಲ ಸೌಹಾರ್ದತೆಯಿಂದ ಮಾತ್ರ ಭರತರು ನಾಶವಾಗಬಾರದೆಂದು ನಾನು ಎಲ್ಲ ಸಂಕ್ಲೇಶಗಳನ್ನು ಸಹಿಸಿಕೊಂಡಿದ್ದೇನೆ” ಎಂದು ಹೇಳಿದುದು (1-18).

05074001 ವೈಶಂಪಾಯನ ಉವಾಚ।
05074001a ತಥೋಕ್ತೋ ವಾಸುದೇವೇನ ನಿತ್ಯಮನ್ಯುರಮರ್ಷಣಃ।
05074001c ಸದಶ್ವವತ್ಸಮಾಧಾವದ್ಬಭಾಷೇ ತದನಂತರಂ।।

ವೈಶಂಪಾಯನನು ಹೇಳಿದನು: “ವಾಸುದೇವನು ಹೀಗೆ ಹೇಳಿದ ನಂತರ ನಿತ್ಯವೂ ಕೋಪದಲ್ಲಿದ್ದ, ಅಮರ್ಷಣನಾದ ಅವನು ಕುದುರೆಯಂತೆ ಓಡಾಡುತ್ತಾ ಹೇಳಿದನು:

05074002a ಅನ್ಯಥಾ ಮಾಂ ಚಿಕೀರ್ಷಂತಮನ್ಯಥಾ ಮನ್ಯಸೇಽಚ್ಯುತ।
05074002c ಪ್ರಣೀತಭಾವಮತ್ಯಂತಂ ಯುಧಿ ಸತ್ಯಪರಾಕ್ರಮಂ।।

“ಅಚ್ಯುತ! ನಾನು ಏನು ಮಾಡಬೇಕೆಂದಿದ್ದೇನೆ ಎನ್ನುವುದನ್ನು ನೀನು ಸಂಪೂರ್ಣವಾಗಿ ತಪ್ಪು ತಿಳಿದುಕೊಂಡಿದ್ದೀಯೆ. ನಾನು ಯುದ್ಧದಲ್ಲಿಯೂ ಅತ್ಯಂತ ಸತ್ಯಪರಾಕ್ರಮಿ ಮತ್ತು ಕುಶಲ.

05074003a ವೇತ್ಥ ದಾಶಾರ್ಹ ಸತ್ತ್ವಂ ಮೇ ದೀರ್ಘಕಾಲಂ ಸಹೋಷಿತಃ।
05074003c ಉತ ವಾ ಮಾಂ ನ ಜಾನಾಸಿ ಪ್ಲವನ್ ಹ್ರದ ಇವಾಲ್ಪವಃ।
05074003e ತಸ್ಮಾದಪ್ರತಿರೂಪಾಭಿರ್ವಾಗ್ಭಿರ್ಮಾಂ ತ್ವಂ ಸಮರ್ಚಸಿ।।

ದಾಶಾರ್ಹ! ನನ್ನ ಸತ್ವವನ್ನು ಅರ್ಥಮಾಡಿಕೊಳ್ಳುವಷ್ಟು ದೀರ್ಘ ಕಾಲ ನೀನು ನನ್ನೊಡನೆ ವಾಸಿಸಿದ್ದೀಯೆ! ಅಥವಾ ಸರೋವರದಲ್ಲಿ ತೇಲುವವನಂತೆ ನೀನು ನನ್ನನ್ನು ಅರಿತೇ ಇಲ್ಲ. ಆದುದರಿಂದ ನೀನು ಗುರಿಗೆ ಬಹುದೂರವಾಗಿರುವ ಮಾತುಗಳಿಂದ ನನ್ನನ್ನು ಆಕ್ರಮಣ ಮಾಡುತ್ತಿದ್ದೀಯೆ!

05074004a ಕಥಂ ಹಿ ಭೀಮಸೇನಂ ಮಾಂ ಜಾನನ್ಕಶ್ಚನ ಮಾಧವ।
05074004c ಬ್ರೂಯಾದಪ್ರತಿರೂಪಾಣಿ ಯಥಾ ಮಾಂ ವಕ್ತುಮರ್ಹಸಿ।।

ಮಾಧವ! ಹೇಗೆ ತಾನೇ ಭೀಮಸೇನ ನನ್ನನ್ನು ತಿಳಿದ ಯಾರೂ ನೀನು ಸಂತೋಷದಿಂದ ಹೇಳಿದಂತ ಆ ದೊಡ್ಡ ಮಾತುಗಳನ್ನು ಆಡಬಲ್ಲರು?

05074005a ತಸ್ಮಾದಿದಂ ಪ್ರವಕ್ಷ್ಯಾಮಿ ವಚನಂ ವೃಷ್ಣಿನಂದನ।
05074005c ಆತ್ಮನಃ ಪೌರುಷಂ ಚೈವ ಬಲಂ ಚ ನ ಸಮಂ ಪರೈಃ।।

ಆದುದರಿಂದ ವೃಷ್ಣಿನಂದನ! ನನ್ನ ಪೌರುಷದ ಕುರಿತು ಮತ್ತು ಬೇರೆ ಯಾರಲ್ಲಿಯೂ ಸಮನಾಗಿರದ ಬಲದ ಕುರಿತು ಇದನ್ನು ಹೇಳುತ್ತೇನೆ.

05074006a ಸರ್ವಥಾ ನಾರ್ಯಕರ್ಮೈತತ್ಪ್ರಶಂಸಾ ಸ್ವಯಮಾತ್ಮನಃ।
05074006c ಅತಿವಾದಾಪವಿದ್ಧಸ್ತು ವಕ್ಷ್ಯಾಮಿ ಬಲಮಾತ್ಮನಃ।।

ತನ್ನನ್ನು ತಾನೇ ಹೊಗಳಿಕೊಳ್ಳುವುದು ಅರ್ಯರ ನಡತೆಯಲ್ಲ. ಆದರೂ ನೀನು ಅವಹೇಳನ ಮಾಡಿದುದರಿಂದ ನನ್ನ ಬಲದ ಕುರಿತು ಹೇಳುತ್ತೇನೆ.

05074007a ಪಶ್ಯೇಮೇ ರೋದಸೀ ಕೃಷ್ಣ ಯಯೋರಾಸನ್ನಿಮಾಃ ಪ್ರಜಾಃ।
05074007c ಅಚಲೇ ಚಾಪ್ಯನಂತೇ ಚ ಪ್ರತಿಷ್ಠೇ ಸರ್ವಮಾತರೌ।।
05074008a ಯದೀಮೇ ಸಹಸಾ ಕ್ರುದ್ಧೇ ಸಮೇಯಾತಾಂ ಶಿಲೇ ಇವ।
05074008c ಅಹಮೇತೇ ನಿಗೃಹ್ಣೀಯಾಂ ಬಾಹುಭ್ಯಾಂ ಸಚರಾಚರೇ।।

ಕೃಷ್ಣ! ಒಂದು ವೇಳೆ ಜೀವಿಗಳೆಲ್ಲವೂ ಇರುವ, ಅಚಲವಾಗಿರುವ, ಅನಂತವಾಗಿರುವ, ಎಲ್ಲವುಗಳ ತಾಯಂದಿರೆನಿಸಿಕೊಂಡಿರುವ ಇಲ್ಲಿ ಕಾಣುವ ಆಕಾಶ ಮತ್ತು ಭೂಮಿಗಳೆರಡೂ ಒಮ್ಮಿಂದೊಮ್ಮೆಗೇ ಕೋಪಗೊಂಡು ಶಿಲಾಬಂಡೆಗಳಂತೆ ಒಂದಕ್ಕೊಂದು ಅಪ್ಪಳಿಸಿದರೆ ಕೂಡ ನನ್ನ ಈ ಎರಡು ಬಾಹುಗಳಿಂದ ಸಚರಾಚರಗಳೊಂದಿಗೆ ಅವೆರಡನ್ನೂ ಬೇರೆಬೇರೆ ಮಾಡಿ ಹಿಡಿಯಬಲ್ಲೆ!

05074009a ಪಶ್ಯೈತದಂತರಂ ಬಾಹ್ವೋರ್ಮಹಾಪರಿಘಯೋರಿವ।
05074009c ಯ ಏತತ್ಪ್ರಾಪ್ಯ ಮುಚ್ಯೇತ ನ ತಂ ಪಶ್ಯಾಮಿ ಪೂರುಷಂ।।

ಮಹಾ ಪರಿಘಗಳಿಂತಿರುವ ಈ ಎರಡು ಬಾಹುಗಳ ಮಧ್ಯೆ ನೋಡು. ಇವುಗಳ ಮಧ್ಯೆ ಸಿಲುಕಿ ಬಿಡುಗಡೆಯಾಗಬಲ್ಲ ಯಾವ ಪುರುಷನನ್ನೂ ನಾನು ನೋಡೆ!

05074010a ಹಿಮವಾಂಶ್ಚ ಸಮುದ್ರಶ್ಚ ವಜ್ರೀ ಚ ಬಲಭಿತ್ಸ್ವಯಂ।
05074010c ಮಯಾಭಿಪನ್ನಂ ತ್ರಾಯೇರನ್ಬಲಮಾಸ್ಥಾಯ ನ ತ್ರಯಃ।।

ಹಿಮವಂತ, ಸಮುದ್ರ ಮತ್ತು ವಜ್ರಿಗಳು ಮೂವರೂ ಒಟ್ಟಿಗೇ ತಮ್ಮ ಬಲದಿಂದ ನಾನು ಬಲವನ್ನುಪಯೋಗಿಸಿ ಹಿಡಿಯುವವನನ್ನು ಬಿಡಿಸಲಾರರು.

05074011a ಯುಧ್ಯೇಯಂ ಕ್ಷತ್ರಿಯಾನ್ಸರ್ವಾನ್ಪಾಂಡವೇಷ್ವಾತತಾಯಿನಃ।
05074011c ಅಧಃ ಪಾದತಲೇನೈತಾನಧಿಷ್ಠಾಸ್ಯಾಮಿ ಭೂತಲೇ।।

ಪಾಂಡವರ ಆತತಾಯಿ ಕ್ಷತ್ರಿಯರನ್ನು ಎಲ್ಲರನ್ನೂ ಯುದ್ಧದಲ್ಲಿ ಪಾದದ ಅಡಿಯಲ್ಲಿ ತುಳಿದು ಭೂಮಿಯ ಒಳಗೆ ಕಳುಹಿಸಿಯೇನು!

05074012a ನ ಹಿ ತ್ವಂ ನಾಭಿಜಾನಾಸಿ ಮಮ ವಿಕ್ರಮಮಚ್ಯುತ।
05074012c ಯಥಾ ಮಯಾ ವಿನಿರ್ಜಿತ್ಯ ರಾಜಾನೋ ವಶಗಾಃ ಕೃತಾಃ।।

ಅಚ್ಯುತ! ಇಲ್ಲ. ನೀನು ನನ್ನ ವಿಕ್ರಮವನ್ನು – ಹೇಗೆ ನಾನು ರಾಜರನ್ನು ಸದೆಬಡಿದು ವಶಮಾಡಿಕೊಂಡೆ ಎನ್ನುವುದನ್ನು - ತಿಳಿದಿಲ್ಲ!

05074013a ಅಥ ಚೇನ್ಮಾಂ ನ ಜಾನಾಸಿ ಸೂರ್ಯಸ್ಯೇವೋದ್ಯತಃ ಪ್ರಭಾಂ।
05074013c ವಿಗಾಢೇ ಯುಧಿ ಸಂಬಾಧೇ ವೇತ್ಸ್ಯಸೇ ಮಾಂ ಜನಾರ್ದನ।।

ಅಥವಾ ಉದಯಿಸುತ್ತಿರುವ ಸೂರ್ಯನ ಪ್ರಭೆಯಂತೆ ನನ್ನನ್ನು ನೀನು ತಿಳಿಯದೇ ಇದ್ದರೆ ಜನಾರ್ದನ! ನಾನು ಯುದ್ಧದ ಕುಣಿಯಲ್ಲಿ ಧುಮುಕಿದಾಗ ನೀನು ನನ್ನನ್ನು ತಿಳಿಯುತ್ತೀಯೆ.

05074014a ಕಿಂ ಮಾತ್ಯವಾಕ್ಷೀಃ ಪರುಷೈರ್ವ್ರಣಂ ಸೂಚ್ಯಾ ಇವಾನಘ।
05074014c ಯಥಾಮತಿ ಬ್ರವೀಮ್ಯೇತದ್ವಿದ್ಧಿ ಮಾಮಧಿಕಂ ತತಃ।।

ಅನಘ! ಗಾಯವನ್ನು ಸುಚ್ಚುವಂತೆ ಕಟುಮಾತುಗಳಿಂದ ಏಕೆ ನನ್ನನ್ನು ಅಪಮಾನಗೊಳಿಸುತ್ತಿರುವೆ? ನನಗೆ ತಿಳಿದುದನ್ನು ನಾನು ನಿನಗೆ ಹೇಳಿದ್ದೇನೆ. ನಾನು ಅದಕ್ಕಿಂತಲೂ ಅಧಿಕ.

05074015a ದ್ರಷ್ಟಾಸಿ ಯುಧಿ ಸಂಬಾಧೇ ಪ್ರವೃತ್ತೇ ವೈಶಸೇಽಹನಿ।
05074015c ಮಯಾ ಪ್ರಣುನ್ನಾನ್ಮಾತಂಗಾನ್ರಥಿನಃ ಸಾದಿನಸ್ತಥಾ।।

ಯುದ್ಧವು ಮುಂದುವರೆಯುವಾಗ, ರಕ್ತವು ಪ್ರವಹಿಸುವ ದಿನದಂದು, ನೀನು ನನ್ನಿಂದ ಪ್ರಾಣವನ್ನು ಕಳೆದುಕೊಳ್ಳುವ ಆನೆಗಳನ್ನೂ ರಥದ ಸಾರಥಿಗಳನ್ನೂ ನೋಡುವಿಯಂತೆ!

05074016a ತಥಾ ನರಾನಭಿಕ್ರುದ್ಧಂ ನಿಘ್ನಂತಂ ಕ್ಷತ್ರಿಯರ್ಷಭಾನ್।
05074016c ದ್ರಷ್ಟಾ ಮಾಂ ತ್ವಂ ಚ ಲೋಕಶ್ಚ ವಿಕರ್ಷಂತಂ ವರಾನ್ವರಾನ್।।

ಕೃದ್ಧನಾದ ನಾನು ನರ ಶ್ರೇಷ್ಠರಲ್ಲಿಯೇ ಶ್ರೇಷ್ಠರಾದ ಕ್ಷತ್ರಿಯರ್ಷಭರನ್ನು ಎಳೆದೆಳೆದು ಕೊಲ್ಲುವುದನ್ನು ನೀನು ಮತ್ತು ಲೋಕವು ನೋಡುವಿರಂತೆ!

05074017a ನ ಮೇ ಸೀದಂತಿ ಮಜ್ಜಾನೋ ನ ಮಮೋದ್ವೇಪತೇ ಮನಃ।
05074017c ಸರ್ವಲೋಕಾದಭಿಕ್ರುದ್ಧಾನ್ನ ಭಯಂ ವಿದ್ಯತೇ ಮಮ।।

ಇಲ್ಲ! ನನ್ನ ಮಜ್ಜೆಗಳು ಕುಸಿದಿಲ್ಲ! ಮನಸ್ಸು ಕಂಪಿಸುತ್ತಿಲ್ಲ! ಸರ್ವ ಲೋಕಗಳೇ ಸಿಟ್ಟಾದರೂ ಭಯವೆನ್ನುವುದು ನನಗೆ ತಿಳಿದಿಲ್ಲ!

05074018a ಕಿಂ ತು ಸೌಹೃದಮೇವೈತತ್ಕೃಪಯಾ ಮಧುಸೂದನ।
05074018c ಸರ್ವಾಂಸ್ತಿತಿಕ್ಷೇ ಸಂಕ್ಲೇಶಾನ್ಮಾ ಸ್ಮ ನೋ ಭರತಾ ನಶನ್।।

ಮಧುಸೂದನ! ಕೇವಲ ಸೌಹಾರ್ದತೆಯಿಂದ ಮಾತ್ರ ಭರತರು ನಾಶವಾಗಬಾರದೆಂದು ನಾನು ಎಲ್ಲ ಸಂಕ್ಲೇಶಗಳನ್ನು ಸಹಿಸಿಕೊಂಡಿದ್ದೇನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭೀಮವಾಕ್ಯೇ ಚತುಃಸಪ್ತತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭೀಮವಾಕ್ಯ ಎನ್ನುವ ಎಪ್ಪತ್ನಾಲ್ಕನೆಯ ಅಧ್ಯಾಯವು.