069 ಧೃತರಾಷ್ಟ್ರವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಯಾನಸಂಧಿ ಪರ್ವ

ಅಧ್ಯಾಯ 69

ಸಾರ

ಧೃತರಾಷ್ಟ್ರನು ಮಹಾವಿಷ್ಣುವನ್ನು ಪ್ರಾರ್ಥಿಸಿದುದು (1-7).

05069001 ಧೃತರಾಷ್ಟ್ರ ಉವಾಚ।
05069001a ಚಕ್ಷುಷ್ಮತಾಂ ವೈ ಸ್ಪೃಹಯಾಮಿ ಸಂಜಯ ದ್ರಕ್ಷ್ಯಂತಿ ಯೇ ವಾಸುದೇವಂ ಸಮೀಪೇ।
05069001c ವಿಭ್ರಾಜಮಾನಂ ವಪುಷಾ ಪರೇಣ ಪ್ರಕಾಶಯಂತಂ ಪ್ರದಿಶೋ ದಿಶಶ್ಚ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ದಿಕ್ಕುಗಳನ್ನು ದಿಕ್ಸೂಚಿಯಂತೆ ಪ್ರಕಾಶಗೊಳಿಸುವ ಪರಮ ಶರೀರದಿಂದ ಬೆಳಗುವ ವಾಸುದೇವನನ್ನು ಹತ್ತಿರದಿಂದ ನೋಡಬಲ್ಲ ಕಣ್ಣುಳ್ಳವರ ಮೇಲೆ ಅಸೂಯೆಪಡುತ್ತೇನೆ.

05069002a ಈರಯಂತಂ ಭಾರತೀಂ ಭಾರತಾನಾಂ ಅಭ್ಯರ್ಚನೀಯಾಂ ಶಂಕರೀಂ ಸೃಂಜಯಾನಾಂ।
05069002c ಬುಭೂಷದ್ಭಿರ್ಗ್ರಹಣೀಯಾಮನಿಂದ್ಯಾಂ ಪರಾಸೂನಾಮಗ್ರಹಣೀಯರೂಪಾಂ।।

ಅವನು ಭಾರತರು ಗೌರವದಿಂದ ಕೇಳುವಹಾಗೆ, ಸೃಂಜಯರಿಗೆ ಮಂಗಳವನ್ನು ಮಾಡುವ, ಅಭಿವೃದ್ಧಿಯನ್ನು ಬಯಸುವವರು ಕೇಳಬೇಕಾದ, ಯಾವರೀತಿಯಲ್ಲಿಯೂ ನಿಂದನೀಯವಲ್ಲದ, ಸಾಯಲು ಬಯಸುವವರು ಕೇಳದ ಮಾತುಗಳನ್ನು ಆಡುತ್ತಾನೆ.

05069003a ಸಮುದ್ಯಂತಂ ಸಾತ್ವತಮೇಕವೀರಂ ಪ್ರಣೇತಾರಮೃಷಭಂ ಯಾದವಾನಾಂ।
05069003c ನಿಹಂತಾರಂ ಕ್ಷೋಭಣಂ ಶಾತ್ರವಾಣಾಂ ಮುಷ್ಣಂತಂ ಚ ದ್ವಿಷತಾಂ ವೈ ಯಶಾಂಸಿ।।

ಸಾತ್ವತರ ಏಕವೀರನು ನಮ್ಮಲ್ಲಿಗೆ ಬರುತ್ತಾನೆ. ಯಾದವರ ಪ್ರಣೇತಾರ ಆ ವೃಷಭ, ಶತ್ರುಗಳ ಕ್ಷೋಭಣ ಮತ್ತು ಹಂತಾರ, ಮತ್ತು ದ್ವೇಷಿಸುವವರ ಯಶಸ್ಸನ್ನು ಎಳೆದುಕೊಳ್ಳುವವನು.

05069004a ದ್ರಷ್ಟಾರೋ ಹಿ ಕುರವಸ್ತಂ ಸಮೇತಾ ಮಹಾತ್ಮಾನಂ ಶತ್ರುಹಣಂ ವರೇಣ್ಯಂ।
05069004c ಬ್ರುವಂತಂ ವಾಚಮನೃಶಂಸರೂಪಾಂ ವೃಷ್ಣಿಶ್ರೇಷ್ಠಂ ಮೋಹಯಂತಂ ಮದೀಯಾನ್।।

ಕುರುಗಳು ಒಟ್ಟಿಗೇ ಆ ಮಹಾತ್ಮ, ಶತ್ರುಹರಣ, ವರೇಣ್ಯ, ಅಹಿಂಸೆಯ ಕುರಿತಾಗಿ ಮಾತನಾಡಿ ನಮ್ಮವರನ್ನು ಮೋಹಿಸುವಂತಹ ಆ ವೃಷ್ಣಿಶ್ರೇಷ್ಠನನ್ನು ನೋಡುತ್ತಾರೆ.

05069005a ಋಷಿಂ ಸನಾತನತಮಂ ವಿಪಶ್ಚಿತಂ ವಾಚಃ ಸಮುದ್ರಂ ಕಲಶಂ ಯತೀನಾಂ।
05069005c ಅರಿಷ್ಟನೇಮಿಂ ಗರುಡಂ ಸುಪರ್ಣಂ ಪತಿಂ ಪ್ರಜಾನಾಂ ಭುವನಸ್ಯ ಧಾಮ।।
05069006a ಸಹಸ್ರಶೀರ್ಷಂ ಪುರುಷಂ ಪುರಾಣಂ ಅನಾದಿಮಧ್ಯಾಂತಮನಂತಕೀರ್ತಿಂ।
05069006c ಶುಕ್ರಸ್ಯ ಧಾತಾರಮಜಂ ಜನಿತ್ರಂ ಪರಂ ಪರೇಭ್ಯಃ ಶರಣಂ ಪ್ರಪದ್ಯೇ।।

ಆ ಋಷಿ, ಅತ್ಯಂತ ಸನಾತನ, ಮಾತುಗಳ ಸಮುದ್ರ, ಯತಿಗಳ ಕಲಶ, ಅರಿಷ್ಟನೇಮಿ, ಗರುಡ, ಸುಪರ್ಣ, ಪ್ರಜೆಗಳ ಪತಿ, ಭುವನದ ಧಾಮ, ಸಹಸ್ರಶೀರ್ಷ, ಪುರುಷ, ಪುರಾಣ, ಆದಿ-ಮಧ್ಯ-ಅಂತ್ಯಗಳಿಲ್ಲದಿರುವ, ಅನಂತ ಕೀರ್ತಿ, ಶುಕ್ರದ ಧಾತಾರ, ಹುಟ್ಟಿರದ ಜನಿತ್ರ, ಪರಮ ಪರೇಭ್ಯನಿಗೆ ಶರಣು ಹೋಗುತ್ತೇನೆ.

05069007a ತ್ರೈಲೋಕ್ಯನಿರ್ಮಾಣಕರಂ ಜನಿತ್ರಂ ದೇವಾಸುರಾಣಾಮಥ ನಾಗರಕ್ಷಸಾಂ।
05069007c ನರಾಧಿಪಾನಾಂ ವಿದುಷಾಂ ಪ್ರಧಾನಂ ಇಂದ್ರಾನುಜಂ ತಂ ಶರಣಂ ಪ್ರಪದ್ಯೇ।।

ಮೂರೂಲೋಕಗಳನ್ನು ನಿರ್ಮಿಸಿದ, ದೇವಾಸುರರನ್ನೂ ನಾಗ-ರಾಕ್ಷಸರನ್ನೂ, ಪ್ರಧಾನ ನರಾಧಿಪರನ್ನೂ, ವಿದುಷರನ್ನೂ ಹುಟ್ಟಿಸಿದ, ಇಂದ್ರನ ಅನುಜನಿಗೆ ಶರಣು ಹೋಗುತ್ತೇನೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಾಕ್ಯೇ ಏಕೋನಸಪ್ತತಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಾಕ್ಯದಲ್ಲಿ ಅರವತ್ತೊಂಭತ್ತನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-4/18, ಉಪಪರ್ವಗಳು-53/100, ಅಧ್ಯಾಯಗಳು-732/1995, ಶ್ಲೋಕಗಳು-23985/73784.