064 ಸಂಜಯವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಯಾನಸಂಧಿ ಪರ್ವ

ಅಧ್ಯಾಯ 64

ಸಾರ

“ವಾಸುದೇವನ ನಂತರ ಅರ್ಜುನನು ಹೇಳಿದುದರಲ್ಲಿ ನಮಗೆ ಹೇಳದೇ ಬಿಟ್ಟಿದ್ದುದನ್ನು ಹೇಳು” ಎಂದು ಧೃತರಾಷ್ಟ್ರನು ಸಂಜಯನನ್ನು ಕೇಳಲು, ಸಂಜಯನು ಅರ್ಜುನನ ಸಂದೇಶವನ್ನು ಪೂರ್ಣಗೊಳಿಸುವುದು (1-16).

05064001 ವೈಶಂಪಾಯನ ಉವಾಚ।
05064001a ಏವಮುಕ್ತ್ವಾ ಮಹಾಪ್ರಾಜ್ಞೋ ಧೃತರಾಷ್ಟ್ರಃ ಸುಯೋಧನಂ।
05064001c ಪುನರೇವ ಮಹಾಭಾಗಃ ಸಂಜಯಂ ಪರ್ಯಪೃಚ್ಚತ।।

ವೈಶಂಪಾಯನನು ಹೇಳಿದನು: “ಸುಯೋಧನನಿಗೆ ಹೀಗೆ ಹೇಳಿ ಮಹಾಪ್ರಾಜ್ಞ, ಮಹಾಭಾಗ ಧೃತರಾಷ್ಟ್ರನು ಸಂಜಯನನ್ನು ಪುನಃ ಪ್ರಶ್ನಿಸಿದನು.

05064002a ಬ್ರೂಹಿ ಸಂಜಯ ಯಚ್ಚೇಷಂ ವಾಸುದೇವಾದನಂತರಂ।
05064002c ಯದರ್ಜುನ ಉವಾಚ ತ್ವಾಂ ಪರಂ ಕೌತೂಹಲಂ ಹಿ ಮೇ।।

“ಸಂಜಯ! ವಾಸುದೇವನ ನಂತರ ಅರ್ಜುನನು ಹೇಳಿದುದರಲ್ಲಿ ನಮಗೆ ಹೇಳದೇ ಬಿಟ್ಟಿದ್ದುದನ್ನು ಹೇಳು. ಏಕೆಂದರೆ ಅದರಲ್ಲಿ ನನಗೆ ಅತ್ಯಂತ ಕುತೂಹಲವಿದೆ.”

05064003 ಸಂಜಯ ಉವಾಚ।
05064003a ವಾಸುದೇವವಚಃ ಶ್ರುತ್ವಾ ಕುಂತೀಪುತ್ರೋ ಧನಂಜಯಃ।
05064003c ಉವಾಚ ಕಾಲೇ ದುರ್ಧರ್ಷೋ ವಾಸುದೇವಸ್ಯ ಶೃಣ್ವತಃ।।

ಸಂಜಯನು ಹೇಳಿದನು: “ವಾಸುದೇವನ ಮಾತನ್ನು ಕೇಳಿ ಕುಂತೀಪುತ್ರ ಧನಂಜಯನು ದುರ್ಧರ್ಷ ವಾಸುದೇವನು ಕೇಳುವಂತೆ ಕಾಲೋಚಿತ ಮಾತನ್ನಾಡಿದನು:

05064004a ಪಿತಾಮಹಂ ಶಾಂತನವಂ ಧೃತರಾಷ್ಟ್ರಂ ಚ ಸಂಜಯ।
05064004c ದ್ರೋಣಂ ಕೃಪಂ ಚ ಕರ್ಣಂ ಚ ಮಹಾರಾಜಂ ಚ ಬಾಹ್ಲಿಕಂ।।
05064005a ದ್ರೌಣಿಂ ಚ ಸೋಮದತ್ತಂ ಚ ಶಕುನಿಂ ಚಾಪಿ ಸೌಬಲಂ।
05064005c ದುಃಶಾಸನಂ ಶಲಂ ಚೈವ ಪುರುಮಿತ್ರಂ ವಿವಿಂಶತಿಂ।।
05064006a ವಿಕರ್ಣಂ ಚಿತ್ರಸೇನಂ ಚ ಜಯತ್ಸೇನಂ ಚ ಪಾರ್ಥಿವಂ।
05064006c ವಿಂದಾನುವಿಂದಾವಾವಂತ್ಯೌ ದುರ್ಮುಖಂ ಚಾಪಿ ಕೌರವಂ।।
05064007a ಸೈಂಧವಂ ದುಃಸಹಂ ಚೈವ ಭೂರಿಶ್ರವಸಮೇವ ಚ।
05064007c ಭಗದತ್ತಂ ಚ ರಾಜಾನಂ ಜಲಸಂಧಂ ಚ ಪಾರ್ಥಿವಂ।।
05064008a ಯೇ ಚಾಪ್ಯನ್ಯೇ ಪಾರ್ಥಿವಾಸ್ತತ್ರ ಯೋದ್ಧುಂ ಸಮಾಗತಾಃ ಕೌರವಾಣಾಂ ಪ್ರಿಯಾರ್ಥಂ।
05064008c ಮುಮೂರ್ಷವಃ ಪಾಂಡವಾಗ್ನೌ ಪ್ರದೀಪ್ತೇ ಸಮಾನೀತಾ ಧಾರ್ತರಾಷ್ಟ್ರೇಣ ಸೂತ।।

‘ಸೂತ! ಸಂಜಯ! ಕೌರವರ ಪ್ರೀತಿಗಾಗಿ ಯುದ್ಧಮಾಡಲು ಅಲ್ಲಿ ಸೇರಿರುವ ಪಿತಾಮಹ ಶಾಂತನವ, ಧೃತರಾಷ್ಟ್ರ, ದ್ರೋಣ, ಕೃಪ, ಕರ್ಣ, ಮಹಾರಾಜ ಬಾಹ್ಲೀಕ, ದ್ರೌಣಿ, ಸೋಮದತ್ತ, ಶಕುನಿ ಸೌಬಲ, ದುಃಶಾಸನ, ಶಲ, ಪುರುಮಿತ್ರ, ವಿವಿಂಶತಿ, ವಿಕರ್ಣ, ಚಿತ್ರಸೇನ, ಪಾರ್ಥಿವ ಜಯತ್ಸೇನ, ಅವಂತಿಯ ವಿಂದ-ಅನುವಿಂದರು, ಕೌರವ ದುರ್ಮುಖ, ಸೈಂಧವ, ದುಃಸಹ, ಭೂರಿಶ್ರವ, ರಾಜ ಭಗದತ್ತ, ಪಾರ್ಥಿವ ಜಲಸಂಧ - ಇವರು ಮತ್ತು ಇತರ ಪಾರ್ಥಿವರನ್ನು ಧಾರ್ತರಾಷ್ಟ್ರನು ಪಾಂಡವರ ಅಗ್ನಿಯಲ್ಲಿ ಆಹುತಿಯನ್ನಾಗಿಸಲು ಸೇರಿಸಿದ್ದಾನೆ.

05064009a ಯಥಾನ್ಯಾಯಂ ಕೌಶಲಂ ವಂದನಂ ಚ ಸಮಾಗತಾ ಮದ್ವಚನೇನ ವಾಚ್ಯಾಃ।
05064009c ಇದಂ ಬ್ರೂಯಾಃ ಸಂಜಯ ರಾಜಮಧ್ಯೇ ಸುಯೋಧನಂ ಪಾಪಕೃತಾಂ ಪ್ರಧಾನಂ।।

ಸಂಜಯ! ಯಥಾನ್ಯಾಯವಾಗಿ ನನ್ನ ಮಾತಿನಲ್ಲಿಯೇ ಅಲ್ಲಿ ಸೇರಿರುವರಿಗೆ ಕುಶಲವನ್ನು ಕೇಳು ಮತ್ತು ವಂದನೆಗಳನ್ನು ಹೇಳಬೇಕು. ಪಾಪಕೃತರಲ್ಲಿ ಪ್ರಧಾನನಾಗಿರುವ ಸುಯೋಧನನಿಗೆ ರಾಜರ ಮಧ್ಯದಲ್ಲಿ ಇದನ್ನು ಹೇಳು.

05064010a ಅಮರ್ಷಣಂ ದುರ್ಮತಿಂ ರಾಜಪುತ್ರಂ ಪಾಪಾತ್ಮಾನಂ ಧಾರ್ತರಾಷ್ಟ್ರಂ ಸುಲುಬ್ಧಂ।
05064010c ಸರ್ವಂ ಮಮೈತದ್ವಚನಂ ಸಮಗ್ರಂ ಸಹಾಮಾತ್ಯಂ ಸಂಜಯ ಶ್ರಾವಯೇಥಾಃ।।

ಸಂಜಯ! ನನ್ನ ಈ ಮಾತನ್ನು ಎಲ್ಲವನ್ನೂ ಸಮಗ್ರವಾಗಿ ಅಮಾತ್ಯರೊಂದಿಗೆ ಆ ಅಮರ್ಷಣ, ದುರ್ಮತಿ, ಲುಬ್ಧ, ರಾಜಪುತ್ರ ಧಾರ್ತರಾಷ್ಟ್ರನಿಗೆ ಕೇಳಿಸಬೇಕು.

05064011a ಏವಂ ಪ್ರತಿಷ್ಠಾಪ್ಯ ಧನಂಜಯೋ ಮಾಂ ತತೋಽರ್ಥವದ್ಧರ್ಮವಚ್ಚಾಪಿ ವಾಕ್ಯಂ।
05064011c ಪ್ರೋವಾಚೇದಂ ವಾಸುದೇವಂ ಸಮೀಕ್ಷ್ಯ ಪಾರ್ಥೋ ಧೀಮಾಽಲ್ಲೋಹಿತಾಂತಾಯತಾಕ್ಷಃ।।

ಹೀಗೆ ಪೀಠಿಕೆಯನ್ನು ಹಾಕಿ ಕೆಂಪು ಕೊನೆಗಳ ದೊಡ್ಡ ಕಣ್ಣುಗಳ ಧೀಮಾನ್ ಧನಂಜಯ ಪಾರ್ಥನು ವಾಸುದೇವನನ್ನು ನೋಡುತ್ತಾ ಅರ್ಥ-ಧರ್ಮಗಳನ್ನೊಡಗೂಡಿದ ಈ ಮಾತನ್ನು ನನಗೆ ಹೇಳಿದನು.

05064012a ಯಥಾ ಶ್ರುತಂ ತೇ ವದತೋ ಮಹಾತ್ಮನೋ ಮಧುಪ್ರವೀರಸ್ಯ ವಚಃ ಸಮಾಹಿತಂ।
05064012c ತಥೈವ ವಾಚ್ಯಂ ಭವತಾ ಹಿ ಮದ್ವಚಃ ಸಮಾಗತೇಷು ಕ್ಷಿತಿಪೇಷು ಸರ್ವಶಃ।।

“ನೀನು ಈಗಾಗಲೇ ಮಹಾತ್ಮ ಮಧುಪ್ರವೀರನು ಹೇಳಿದ ಸಮಾಹಿತ ಮಾತನ್ನು ಕೇಳಿದ್ದೀಯೆ. ಅದೇ ನನ್ನ ಮಾತುಗಳೂ ಕೂಡ ಎಂದು ಅಲ್ಲಿ ಸೇರಿರುವ ಎಲ್ಲ ಕ್ಷಿತಿಪರಿಗೆ ಹೇಳು.

05064013a ಶರಾಗ್ನಿಧೂಮೇ ರಥನೇಮಿನಾದಿತೇ ಧನುಃಸ್ರುವೇಣಾಸ್ತ್ರಬಲಾಪಹಾರಿಣಾ।
05064013c ಯಥಾ ನ ಹೋಮಃ ಕ್ರಿಯತೇ ಮಹಾಮೃಧೇ ತಥಾ ಸಮೇತ್ಯ ಪ್ರಯತಧ್ವಮಾದೃತಾಃ।।

ನೀವೆಲ್ಲರೂ ಸೇರಿ ಶರಗಳೆಬ್ಬಿಸುವ ಅಗ್ನಿಧೂಮಗಳ, ರಥಗಾಲಿಗಳ ನಿನಾದದಿಂದ ಕೂಡಿದ, ಬಲಪ್ರಹಾರಿ ಧನುಸ್ಸುಗಳೆಂಬ ಹುಟ್ಟಿನಿಂದ ಮಹಾ ಯಜ್ಞದಲ್ಲಿ ಆಹುತಿಯಾಗದಂತೆ ಏನಾದರೂ ಪ್ರಯತ್ನ ಮಾಡಿ.

05064014a ನ ಚೇತ್ಪ್ರಯಚ್ಚಧ್ವಮಮಿತ್ರಘಾತಿನೋ ಯುಧಿಷ್ಠಿರಸ್ಯಾಂಶಮಭೀಪ್ಸಿತಂ ಸ್ವಕಂ।
05064014c ನಯಾಮಿ ವಃ ಸ್ವಾಶ್ವಪದಾತಿಕುಂಜರಾನ್ ದಿಶಂ ಪಿತೄಣಾಮಶಿವಾಂ ಶಿತೈಃ ಶರೈಃ।।

ಅಮಿತ್ರಘಾತಿ ಯುಧಿಷ್ಠಿರನು ಕೇಳುವ ತನ್ನ ಪಾಲನ್ನು ನೀವು ಕೊಡದೇ ಇದ್ದರೆ ನಾವು ಹರಿತ ಬಾಣಗಳಿಂದ ನಿಮ್ಮನ್ನು ಅಶ್ವ-ಪದಾತಿ-ಕುಂಜರಗಳ ಸಹಿತ ಅಮಂಗಳವಾದ ಪಿತ್ರುಗಳ ದಿಕ್ಕಿಗೆ ಕಳುಹಿಸುತ್ತೇವೆ.”

05064015a ತತೋಽಹಮಾಮಂತ್ರ್ಯ ಚತುರ್ಭುಜಂ ಹರಿಂ ಧನಂಜಯಂ ಚೈವ ನಮಸ್ಯ ಸತ್ವರಃ।
05064015c ಜವೇನ ಸಂಪ್ರಾಪ್ತ ಇಹಾಮರದ್ಯುತೇ ತವಾಂತಿಕಂ ಪ್ರಾಪಯಿತುಂ ವಚೋ ಮಹತ್।।

ಅಮರದ್ಯುತೇ! ಆಗ ನಾನು ಚತುರ್ಭುಜ ಹರಿ ಮತ್ತು ಧನಂಜಯರಿಗೆ ನಮಸ್ಕರಿಸಿ ಬೀಳ್ಕೊಂಡು ವೇಗದಿಂದ ಆ ಮಹಾ ಮಾತನ್ನು ತಲುಪಿಸಲು ನಿನ್ನಲ್ಲಿಗೆ ಬಂದೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ಚತುಃಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಅರವತ್ನಾಲ್ಕನೆಯ ಅಧ್ಯಾಯವು.