ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಯಾನಸಂಧಿ ಪರ್ವ
ಅಧ್ಯಾಯ 62
ಸಾರ
“ಎಲ್ಲರೂ ಸಮಜಾತೀಯರಾಗಿದ್ದೇವೆ. ಎಲ್ಲರೂ ಮನುಷ್ಯ ಯೋನಿಯಲ್ಲಿಯೇ ಹುಟ್ಟಿದ್ದೇವೆ. ಹೀಗಿರುವಾಗ ಪಿತಾಮಹನು ಪಾರ್ಥರಿಗೇ ವಿಜಯವೆಂದು ಹೇಗೆ ಹೇಳುತ್ತಾನೆ?” ಎಂದು ದುರ್ಯೋಧನನು ಪ್ರಶ್ನಿಸಲು (1-5), ವಿದುರನು ದಾಯಾದಿಗಳು ಹೊಡೆದಾಡಬಾರದೆಂದು ಹಕ್ಕಿಹಿಡಿಯುವವನ (6-19) ಮತ್ತು ಗಿರಿಯಲ್ಲೊಮ್ಮೆ ಕಂಡಿದುದರ ಉದಾಹರಣೆಯನ್ನಿತ್ತು (20-31) ಉಪದೇಶಿಸಿದುದು.
05062001 ದುರ್ಯೋಧನ ಉವಾಚ।
05062001a ಸದೃಶಾನಾಂ ಮನುಷ್ಯೇಷು ಸರ್ವೇಷಾಂ ತುಲ್ಯಜನ್ಮನಾಂ।
05062001c ಕಥಮೇಕಾಂತತಸ್ತೇಷಾಂ ಪಾರ್ಥಾನಾಂ ಮನ್ಯಸೇ ಜಯಂ।।
ದುರ್ಯೋಧನನು ಹೇಳಿದನು: “ಮನುಷ್ಯರ ಸದೃಶರಾಗಿರುವ, ಜನ್ಮದಲ್ಲಿ ಎಲ್ಲರ ಸಮನಾಗಿರುವ ಪಾಂಡವರು ಮಾತ್ರ ಜಯವನ್ನು ಪಡೆಯುತ್ತಾರೆ ಎಂದು ಏಕೆ ನಂಬುತ್ತೀಯೆ?
05062002a ಸರ್ವೇ ಸ್ಮ ಸಮಜಾತೀಯಾಃ ಸರ್ವೇ ಮಾನುಷಯೋನಯಃ।
05062002c ಪಿತಾಮಹ ವಿಜಾನೀಷೇ ಪಾರ್ಥೇಷು ವಿಜಯಂ ಕಥಂ।।
ಎಲ್ಲರೂ ಸಮಜಾತೀಯರಾಗಿದ್ದೇವೆ. ಎಲ್ಲರೂ ಮನುಷ್ಯ ಯೋನಿಯಲ್ಲಿಯೇ ಹುಟ್ಟಿದ್ದೇವೆ. ಹೀಗಿರುವಾಗ ಪಿತಾಮಹನು ಪಾರ್ಥರಿಗೇ ವಿಜಯವೆಂದು ಹೇಗೆ ಹೇಳುತ್ತಾನೆ?
05062003a ನಾಹಂ ಭವತಿ ನ ದ್ರೋಣೇ ನ ಕೃಪೇ ನ ಚ ಬಾಹ್ಲಿಕೇ।
05062003c ಅನ್ಯೇಷು ಚ ನರೇಂದ್ರೇಷು ಪರಾಕ್ರಮ್ಯ ಸಮಾರಭೇ।।
ನನ್ನ ಪರಾಕ್ರಮವು ನಿನ್ನ, ದ್ರೋಣನ, ಕೃಪ, ಬಾಹ್ಲೀಕ, ಮತ್ತು ಇತರ ನರೇಂದ್ರರ ಪರಾಕ್ರಮವನ್ನು ಆಧಾರಿಸಿಲ್ಲ.
05062004a ಅಹಂ ವೈಕರ್ತನಃ ಕರ್ಣೋ ಭ್ರಾತಾ ದುಃಶಾಸನಶ್ಚ ಮೇ।
05062004c ಪಾಂಡವಾನ್ಸಮರೇ ಪಂಚ ಹನಿಷ್ಯಾಮಃ ಶಿತೈಃ ಶರೈಃ।।
ನಾನು, ವೈಕರ್ತನ ಕರ್ಣ, ಮತ್ತು ನನ್ನ ತಮ್ಮ ದುಃಶಾಸನರು ಸಮರದಲ್ಲಿ ಪಂಚ ಪಾಂಡವರನ್ನು ಹರಿತ ಬಾಣಗಳಿಂದ ಸಂಹರಿಸುತ್ತೇವೆ.
05062005a ತತೋ ರಾಜನ್ಮಹಾಯಜ್ಞೈರ್ವಿವಿಧೈರ್ಭೂರಿದಕ್ಷಿಣೈಃ।
05062005c ಬ್ರಾಹ್ಮಣಾಂಸ್ತರ್ಪಯಿಷ್ಯಾಮಿ ಗೋಭಿರಶ್ವೈರ್ಧನೇನ ಚ।।
ರಾಜನ್! ಆಗ ಮಹಾ ಯಜ್ಞಗಳಿಂದ, ವಿವಿಧ ಭೂರಿದಕ್ಷಿಣೆಗಳಿಂದ, ಗೋ-ಐಶ್ವರ್ಯ ಧನಗಳಿಂದ ಬ್ರಾಹ್ಮಣರನ್ನು ಸಂತುಷ್ಟಗೊಳಿಸುತ್ತೇನೆ.”
05062006 ವಿದುರ ಉವಾಚ।
05062006a ಶಕುನೀನಾಮಿಹಾರ್ಥಾಯ ಪಾಶಂ ಭೂಮಾವಯೋಜಯತ್।
05062006c ಕಶ್ಚಿಚ್ಚಾಕುನಿಕಸ್ತಾತ ಪೂರ್ವೇಷಾಮಿತಿ ಶುಶ್ರುಮ।।
ವಿದುರನು ಹೇಳಿದನು: “ಹಿಂದೆ ಓರ್ವ ಹಕ್ಕಿಹಿಡಿಯುವವನು ಹಕ್ಕಿಗಳನ್ನು ಹಿಡಿಯಲು ನೆಲದ ಮೇಲೆ ಬಲೆಯನ್ನು ಬೀಸಿದ ಎಂದು ಕೇಳಿದ್ದೇವೆ.
05062007a ತಸ್ಮಿನ್ದ್ವೌ ಶಕುನೌ ಬದ್ಧೌ ಯುಗಪತ್ಸಮಪೌರುಷೌ।
05062007c ತಾವುಪಾದಾಯ ತಂ ಪಾಶಂ ಜಗ್ಮತುಃ ಖಚರಾವುಭೌ।।
ಅವುಗಳಲ್ಲಿ ಬುದ್ಧಿವಂತರಾಗಿದ್ದ, ರೆಕ್ಕೆಗಳ ಬಲದಲ್ಲಿ ಮತ್ತು ಪೌರುಷದಲ್ಲಿ ಸಮನಾಗಿದ್ದ ಎರಡು ಪಕ್ಷಿಗಳು ಒಂದು ಉಪಾಯವನ್ನು ಮಾಡಿ ಆ ಬಲೆಯನ್ನೇ ಎತ್ತಿಕೊಂಡು ಆಕಾಶವನ್ನೇರಿದವು.
05062008a ತೌ ವಿಹಾಯಸಮಾಕ್ರಾಂತೌ ದೃಷ್ಟ್ವಾ ಶಾಕುನಿಕಸ್ತದಾ।
05062008c ಅನ್ವಧಾವದನಿರ್ವಿಣ್ಣೋ ಯೇನ ಯೇನ ಸ್ಮ ಗಚ್ಚತಃ।।
ಆ ಪಕ್ಷಿಗಳು ಹಾರಿಹೋದುದನ್ನು ನೋಡಿ ಹಕ್ಕಿಹಿಡಿಯುವವನು ಅನಿರ್ವಿಣ್ಣನಾಗದೇ ಅವು ಹೋದೆಡೆಯಲ್ಲಿಯೇ ಹಿಂಬಾಲಿಸಿದನು.
05062009a ತಥಾ ತಮನುಧಾವಂತಂ ಮೃಗಯುಂ ಶಕುನಾರ್ಥಿನಂ।
05062009c ಆಶ್ರಮಸ್ಥೋ ಮುನಿಃ ಕಶ್ಚಿದ್ದದರ್ಶಾಥ ಕೃತಾಹ್ನಿಕಃ।।
ಪಕ್ಷಿಯನ್ನು ಬೇಟೆಯಾಡುವವನು ಹಾಗೆ ಓಡಿ ಹೋಗುತ್ತಿದ್ದುದನ್ನು ಅಲ್ಲಿಯೇ ಆಶ್ರಮದಲ್ಲಿದ್ದ, ಆಹ್ನೀಕವನ್ನು ಮಾಡುತ್ತಿದ್ದ ಮುನಿಯೋರ್ವನು ನೋಡಿದನು.
05062010a ತಾವಂತರಿಕ್ಷಗೌ ಶೀಘ್ರಮನುಯಾಂತಂ ಮಹೀಚರಂ।
05062010c ಶ್ಲೋಕೇನಾನೇನ ಕೌರವ್ಯ ಪಪ್ರಚ್ಚ ಸ ಮುನಿಸ್ತದಾ।।
ಕೌರವ್ಯ! ಅಂತರಿಕ್ಷದಲ್ಲಿ ಹಾರಿಹೋಗುತ್ತಿದ್ದ ಅವರನ್ನು ಶೀಘ್ರವಾಗಿ ಭೂಮಿಯುಮೇಲೆ ಓಡಿ ಹೋಗಿ ಅನುಸರಿಸುತ್ತಿದ್ದ ಅವನನ್ನು ಆ ಮುನಿಯು ಈ ಶ್ಲೋಕದಲ್ಲಿ ಪ್ರಶ್ನಿಸಿದನು.
05062011a ವಿಚಿತ್ರಮಿದಮಾಶ್ಚರ್ಯಂ ಮೃಗಹನ್ಪ್ರತಿಭಾತಿ ಮೇ।
05062011c ಪ್ಲವಮಾನೌ ಹಿ ಖಚರೌ ಪದಾತಿರನುಧಾವಸಿ।।
“ಮೃಗಹನ್! ಇದು ಆಶ್ಚರ್ಯವಾಗಿ ತೋರುತ್ತಿದೆ. ಪಕ್ಷಿಗಳು ಹಾರಿಕೊಂಡು ಹೋಗತ್ತಿವೆ. ನೀನು ಕಾಲ್ನಡುಗೆಯಲ್ಲಿ ಅನುಸರಿಸುತ್ತಿದ್ದೀಯೆ!”
05062012 ಶಾಕುನಿಕ ಉವಾಚ।
05062012a ಪಾಶಮೇಕಮುಭಾವೇತೌ ಸಹಿತೌ ಹರತೋ ಮಮ।
05062012c ಯತ್ರ ವೈ ವಿವದಿಷ್ಯೇತೇ ತತ್ರ ಮೇ ವಶಮೇಷ್ಯತಃ।।
ಹಕ್ಕಿ ಹಿಡಿಯುವವನು ಹೇಳಿದನು: ‘ಇವರಿಬ್ಬರೂ ಒಟ್ಟಾಗಿ ನನ್ನ ಬಲೆಯನ್ನು ಅಪಹರಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಅವರಲ್ಲಿ ಬಿಡುಕು ಬಂದಾಗ ಅವು ನನ್ನ ವಶವಾಗುತ್ತವೆ.””
05062013 ವಿದುರ ಉವಾಚ।
05062013a ತೌ ವಿವಾದಮನುಪ್ರಾಪ್ತೌ ಶಕುನೌ ಮೃತ್ಯುಸಂಧಿತೌ।
05062013c ವಿಗೃಹ್ಯ ಚ ಸುದುರ್ಬುದ್ಧೀ ಪೃಥಿವ್ಯಾಂ ಸಂನ್ನಿಪೇತತುಃ।।
ವಿದುರನು ಹೇಳಿದನು: “ಮೃತ್ಯುವನ್ನು ಸಮೀಪಿಸಿದ್ದ ಆ ಎರಡು ಪಕ್ಷಿಗಳು ವಿವಾದಕ್ಕೆ ತೊಡಗಿದವು. ತುಂಬಾ ದುರ್ಬುದ್ಧಿಯಾಗಿದ್ದ ಅವು ಹೊಡೆದಾಡಿ ಭೂಮಿಯ ಮೇಲೆ ಬಿದ್ದವು.
05062014a ತೌ ಯುಧ್ಯಮಾನೌ ಸಂರಬ್ಧೌ ಮೃತ್ಯುಪಾಶವಶಾನುಗೌ।
05062014c ಉಪಸೃತ್ಯಾಪರಿಜ್ಞಾತೋ ಜಗ್ರಾಹ ಮೃಗಯುಸ್ತದಾ।।
ಹೊಡೆದಾಟದಲ್ಲಿ ಮಗ್ನರಾಗಿದ್ದ ಆ ಮೃತ್ಯುಪಾಶಗಳಿಗೆ ಸಿಲುಕಿದ ಅವರಿಗೆ ತಿಳಿಯದಂತೆ ಬೇಟೆಗಾರನು ಬಂದು ಅವುಗಳನ್ನು ಹಿಡಿದನು.
05062015a ಏವಂ ಯೇ ಜ್ಞಾತಯೋಽರ್ಥೇಷು ಮಿಥೋ ಗಚ್ಚಂತಿ ವಿಗ್ರಹಂ।
05062015c ತೇಽಮಿತ್ರವಶಮಾಯಾಂತಿ ಶಕುನಾವಿವ ವಿಗ್ರಹಾತ್।।
ಹೀಗೆ ಸಂಪತ್ತಿಗೆ ಹೊಡೆದಾಡುವ ದಾಯಾದಿಗಳು ಅವರ ಜಗಳದಿಂದ ಈ ಪಕ್ಷಿಗಳಂತೆ ಅವರ ಶತ್ರುಗಳ ವಶರಾಗುತ್ತಾರೆ.
05062016a ಸಂಭೋಜನಂ ಸಂಕಥನಂ ಸಂಪ್ರಶ್ನೋಽಥ ಸಮಾಗಮಃ।
05062016c ಏತಾನಿ ಜ್ಞಾತಿಕಾರ್ಯಾಣಿ ನ ವಿರೋಧಃ ಕದಾ ಚನ।।
ಒಟ್ಟಿಗೇ ಊಟಮಾಡುವುದು, ಒಟ್ಟಿಗೇ ಮಾತುಕಥೆಗಳನ್ನಾಡುವುದು, ಒಟ್ಟಿಗೇ ಕೂಡಿಕೊಂಡಿರುವುದು ದಾಯಾದಿಗಳು ಮಾಡಬೇಕಾದ ಕೆಲಸಗಳು. ಎಂದಿಗೂ ವಿರೋಧವುಂಟಾಗಬಾರದು.
05062017a ಯಸ್ಮಿನ್ಕಾಲೇ ಸುಮನಸಃ ಸರ್ವೇ ವೃದ್ಧಾನುಪಾಸತೇ।
05062017c ಸಿಂಹಗುಪ್ತಮಿವಾರಣ್ಯಮಪ್ರಧೃಷ್ಯಾ ಭವಂತಿ ತೇ।।
ಎಲ್ಲಿಯವರೆಗೆ ಅವರು ಎಲ್ಲರೂ ಸುಮನಸ್ಕರಾಗಿ ವೃದ್ಧರನ್ನು ಪೂಜಿಸುತ್ತಾರೋ ಅಲ್ಲಿಯವರೆಗೆ ಅವರು ಸಿಂಹದಿಂದ ರಕ್ಷಿತವಾದ ಕಾಡಿನಂತೆ ಅಗಮ್ಯರಾಗಿರುತ್ತಾರೆ.
05062018a ಯೇಽರ್ಥಂ ಸಂತತಮಾಸಾದ್ಯ ದೀನಾ ಇವ ಸಮಾಸತೇ।
05062018c ಶ್ರಿಯಂ ತೇ ಸಂಪ್ರಯಚ್ಚಂತಿ ದ್ವಿಷದ್ಭ್ಯೋ ಭರತರ್ಷಭ।।
ಭರತರ್ಷಭ! ಯಾರು ಉತ್ತಮ ಐಶ್ವರ್ಯವನ್ನು ಪಡೆದೂ ದೀನರಂತೆ ವರ್ತಿಸುತ್ತಾರೋ ಅವರು ಯಾವಾಗಲೂ ತಮ್ಮ ವೈರಿಗಳ ಐಶ್ವರ್ಯವನ್ನು ಹೆಚ್ಚಿಸುತ್ತಾರೆ.
05062019a ಧೂಮಾಯಂತೇ ವ್ಯಪೇತಾನಿ ಜ್ವಲಂತಿ ಸಹಿತಾನಿ ಚ।
05062019c ಧೃತರಾಷ್ಟ್ರೋಲ್ಮುಕಾನೀವ ಜ್ಞಾತಯೋ ಭರತರ್ಷಭ।।
ಭರತರ್ಷಭ! ಧೃತರಾಷ್ಟ್ರ! ದಾಯಾದಿಗಳು ಕೆಂಡಗಳಿದ್ದಂತೆ. ಒಟ್ಟಿಗೇ ಇದ್ದರೆ ಉರಿಯುತ್ತವೆ. ಬೇರೆ ಬೇರೆಯಾದರೆ ಕೇವಲ ಹೊಗೆಯನ್ನು ಕೊಡುತ್ತವೆ.
05062020a ಇದಮನ್ಯತ್ಪ್ರವಕ್ಷ್ಯಾಮಿ ಯಥಾ ದೃಷ್ಟಂ ಗಿರೌ ಮಯಾ।
05062020c ಶ್ರುತ್ವಾ ತದಪಿ ಕೌರವ್ಯ ಯಥಾ ಶ್ರೇಯಸ್ತಥಾ ಕುರು।।
ಕೌರವ್ಯ! ಗಿರಿಯಲ್ಲಿ ನಾನು ಏನು ಕಂಡೆ ಎನ್ನುವುದನ್ನೂ ಹೇಳುತ್ತೇನೆ. ಅದನ್ನೂ ಕೇಳಿಕೊಂಡು ಹೇಗೆ ಶ್ರೇಯಸ್ಸಾಗುತ್ತದೆಯೋ ಹಾಗೆ ಮಾಡು.
05062021a ವಯಂ ಕಿರಾತೈಃ ಸಹಿತಾ ಗಚ್ಚಾಮೋ ಗಿರಿಮುತ್ತರಂ।
05062021c ಬ್ರಾಹ್ಮಣೈರ್ದೇವಕಲ್ಪೈಶ್ಚ ವಿದ್ಯಾಜಂಭಕವಾತಿಕೈಃ।।
05062022a ಕುಂಜಭೂತಂ ಗಿರಿಂ ಸರ್ವಮಭಿತೋ ಗಂಧಮಾದನಂ।
05062022c ದೀಪ್ಯಮಾನೌಷಧಿಗಣಂ ಸಿದ್ಧಗಂಧರ್ವಸೇವಿತಂ।।
05062023a ತತ್ರ ಪಶ್ಯಾಮಹೇ ಸರ್ವೇ ಮಧು ಪೀತಮಮಾಕ್ಷಿಕಂ।
05062023c ಮರುಪ್ರಪಾತೇ ವಿಷಮೇ ನಿವಿಷ್ಟಂ ಕುಂಭಸಮ್ಮಿತಂ।।
05062024a ಆಶೀವಿಷೈ ರಕ್ಷ್ಯಮಾಣಂ ಕುಬೇರದಯಿತಂ ಭೃಶಂ।
05062024c ಯತ್ಪ್ರಾಶ್ಯ ಪುರುಷೋ ಮರ್ತ್ಯೋ ಅಮರತ್ವಂ ನಿಗಚ್ಚತಿ।।
05062025a ಅಚಕ್ಷುರ್ಲಭತೇ ಚಕ್ಷುರ್ವೃದ್ಧೋ ಭವತಿ ವೈ ಯುವಾ।
05062025c ಇತಿ ತೇ ಕಥಯಂತಿ ಸ್ಮ ಬ್ರಾಹ್ಮಣಾ ಜಂಭಸಾಧಕಾಃ।।
05062026a ತತಃ ಕಿರಾತಾಸ್ತದ್ದೃಷ್ಟ್ವಾ ಪ್ರಾರ್ಥಯಂತೋ ಮಹೀಪತೇ।
05062026c ವಿನೇಶುರ್ವಿಷಮೇ ತಸ್ಮಿನ್ಸಸರ್ಪೇ ಗಿರಿಗಹ್ವರೇ।।
05062027a ತಥೈವ ತವ ಪುತ್ರೋಽಯಂ ಪೃಥಿವೀಮೇಕ ಇಚ್ಚತಿ।
05062027c ಮಧು ಪಶ್ಯತಿ ಸಮ್ಮೋಹಾತ್ಪ್ರಪಾತಂ ನಾನುಪಶ್ಯತಿ।।
05062028a ದುರ್ಯೋಧನೋ ಯೋದ್ಧುಮನಾಃ ಸಮರೇ ಸವ್ಯಸಾಚಿನಾ।
05062028c ನ ಚ ಪಶ್ಯಾಮಿ ತೇಜೋಽಸ್ಯ ವಿಕ್ರಮಂ ವಾ ತಥಾವಿಧಂ।।
05062029a ಏಕೇನ ರಥಮಾಸ್ಥಾಯ ಪೃಥಿವೀ ಯೇನ ನಿರ್ಜಿತಾ।
05062029c ಪ್ರತೀಕ್ಷಮಾಣೋ ಯೋ ವೀರಃ ಕ್ಷಮತೇ ವೀಕ್ಷಿತಂ ತವ।
05062030a ದ್ರುಪದೋ ಮತ್ಸ್ಯರಾಜಶ್ಚ ಸಂಕ್ರುದ್ಧಶ್ಚ ಧನಂಜಯಃ।
05062030c ನ ಶೇಷಯೇಯುಃ ಸಮರೇ ವಾಯುಯುಕ್ತಾ ಇವಾಗ್ನಯಃ।।
05062031a ಅಂಕೇ ಕುರುಷ್ವ ರಾಜಾನಂ ಧೃತರಾಷ್ಟ್ರ ಯುಧಿಷ್ಠಿರಂ।
05062031c ಯುಧ್ಯತೋರ್ಹಿ ದ್ವಯೋರ್ಯುದ್ಧೇ ನೈಕಾಂತೇನ ಭವೇಜ್ಜಯಃ।।
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ವಿದುರವಾಕ್ಯೇ ದ್ವಿಷಷ್ಟಿತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ವಿದುರವಾಕ್ಯದಲ್ಲಿ ಅರವತ್ತೆರಡನೆಯ ಅಧ್ಯಾಯವು.