ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಯಾನಸಂಧಿ ಪರ್ವ
ಅಧ್ಯಾಯ 55
ಸಾರ
“ಏಳು ಅಕ್ಷೌಹಿಣಿಗಳನ್ನು ಪಡೆದು ಕೌಂತೇಯ ಯುಧಿಷ್ಠಿರನು ರಾಜರೊಂದಿಗೆ ಯುದ್ಧಕ್ಕಾಗಿ ಏನು ಮಾಡುತ್ತಿದ್ದಾನೆ?” ಎಂದು ದುರ್ಯೋಧನನು ಕೇಳಲು ಸಂಜಯನು ಪಾಂಡವರ ರಥಗಳನ್ನು ವರ್ಣಿಸಿದುದು (1-16).
05055001 ದುರ್ಯೋಧನ ಉವಾಚ।
05055001a ಅಕ್ಷೌಹಿಣೀಃ ಸಪ್ತ ಲಬ್ಧ್ವಾ ರಾಜಭಿಃ ಸಹ ಸಂಜಯ।
05055001c ಕಿಂ ಸ್ವಿದಿಚ್ಚತಿ ಕೌಂತೇಯೋ ಯುದ್ಧಪ್ರೇಪ್ಸುರ್ಯುಧಿಷ್ಠಿರಃ।।
ದುರ್ಯೋಧನನು ಹೇಳಿದನು: “ಸಂಜಯ! ಏಳು ಅಕ್ಷೌಹಿಣಿಗಳನ್ನು ಪಡೆದು ಕೌಂತೇಯ ಯುಧಿಷ್ಠಿರನು ರಾಜರೊಂದಿಗೆ ಯುದ್ಧಕ್ಕಾಗಿ ಏನು ಮಾಡುತ್ತಿದ್ದಾನೆ?”
05055002 ಸಂಜಯ ಉವಾಚ।
05055002a ಅತೀವ ಮುದಿತೋ ರಾಜನ್ಯುದ್ಧಪ್ರೇಪ್ಸುರ್ಯುಧಿಷ್ಠಿರಃ।
05055002c ಭೀಮಸೇನಾರ್ಜುನೌ ಚೋಭೌ ಯಮಾವಪಿ ನ ಬಿಭ್ಯತಃ।।
ಸಂಜಯನು ಹೇಳಿದನು: “ರಾಜನ್! ಯುದ್ಧದ ಕುರಿತು ಯುಧಿಷ್ಠಿರನು ಅತೀವ ಹರ್ಷಿತನಾಗಿದ್ದಾನೆ. ಭೀಮಸೇನ-ಅರ್ಜುನರೂ, ಇಬ್ಬರು ಯಮಳರೂ ಕೂಡ ಭಯಪಡುತ್ತಿಲ್ಲ.
05055003a ರಥಂ ತು ದಿವ್ಯಂ ಕೌಂತೇಯಃ ಸರ್ವಾ ವಿಭ್ರಾಜಯನ್ದಿಶಃ।
05055003c ಮಂತ್ರಂ ಜಿಜ್ಞಾಸಮಾನಃ ಸನ್ಭೀಭತ್ಸುಃ ಸಮಯೋಜಯತ್।।
ಮಂತ್ರಗಳನ್ನು ಪರೀಕ್ಷಿಸಲು ಕೌಂತೇಯ ಬೀಭತ್ಸುವು ಎಲ್ಲ ದಿಕ್ಕುಗಳನ್ನೂ ಬೆಳಗಿಸುವ ದಿವ್ಯ ರಥವನ್ನು ಸಿದ್ಧಪಡಿಸಿದ್ದಾನೆ.
05055004a ತಮಪಶ್ಯಾಮ ಸಮ್ನದ್ಧಂ ಮೇಘಂ ವಿದ್ಯುತ್ಪ್ರಭಂ ಯಥಾ।
05055004c ಸ ಮಂತ್ರಾನ್ಸಮಭಿಧ್ಯಾಯ ಹೃಷ್ಯಮಾಣೋಽಭ್ಯಭಾಷತ।।
ಕವಚಗಳನ್ನು ಧರಿಸಿದ ಅವನು ಮಿಂಚಿನಿಂದ ಕೂಡಿದ ಕಪ್ಪು ಮೋಡದಂತೆ ಕಾಣಿಸುತ್ತಾನೆ. ಸ್ವಲ್ಪ ಯೋಚಿಸಿ ಅವನು ಹರ್ಷದಿಂದ ನನಗೆ ಈ ಮಾತುಗಳನ್ನಾಡಿದನು:
05055005a ಪೂರ್ವರೂಪಮಿದಂ ಪಶ್ಯ ವಯಂ ಜೇಷ್ಯಾಮ ಸಂಜಯ।
05055005c ಬೀಭತ್ಸುರ್ಮಾಂ ಯಥೋವಾಚ ತಥಾವೈಮ್ಯಹಮಪ್ಯುತ।।
“ಸಂಜಯ! ಮೊದಲ ಈ ರೂಪವನ್ನು ನೋಡು. ನಾವು ಗೆಲ್ಲುತ್ತೇವೆ!” ಬೀಭತ್ಸುವು ನನಗೆ ಹೇಳಿದುದು ಸತ್ಯವಾಗಿ ತೋರಿತು.”
05055006 ದುರ್ಯೋಧನ ಉವಾಚ।
05055006a ಪ್ರಶಂಸಸ್ಯಭಿನಂದಂಸ್ತಾನ್ಪಾರ್ಥಾನಕ್ಷಪರಾಜಿತಾನ್।
05055006c ಅರ್ಜುನಸ್ಯ ರಥೇ ಬ್ರೂಹಿ ಕಥಮಶ್ವಾಃ ಕಥಂ ಧ್ವಜಃ।।
ದುರ್ಯೋಧನನು ಹೇಳಿದನು: “ಅಕ್ಷದಲ್ಲಿ ಸೋತ ಆ ಪಾರ್ಥರನ್ನು ಪ್ರಶಂಸಿಸುವುದರಲ್ಲಿ ನೀನು ಖುಷಿಪಡುವಂತಿದೆ! ಹೇಳು! ಅರ್ಜುನನ ರಥವು ಹೇಗಿದೆ? ಅಶ್ವಗಳು, ಧ್ವಜವು ಹೇಗಿವೆ?”
05055007 ಸಂಜಯ ಉವಾಚ।
05055007a ಭೌವನಃ ಸಹ ಶಕ್ರೇಣ ಬಹುಚಿತ್ರಂ ವಿಶಾಂ ಪತೇ।
05055007c ರೂಪಾಣಿ ಕಲ್ಪಯಾಮಾಸ ತ್ವಷ್ಟಾ ಧಾತ್ರಾ ಸಹಾಭಿಭೋ।।
ಸಂಜಯನು ಹೇಳಿದನು: “ವಿಭೋ! ವಿಶಾಂಪತೇ! ಶಕ್ರನೊಂದಿಗೆ ಭೌವನನು ಧಾತ್ರಾ ತ್ವಷ್ಟನ ಸಹಾಯದಿಂದ ಅವರ ರಥದಲ್ಲಿರುವ ಬಹುಚಿತ್ರ ರೂಪಗಳನ್ನು ಕಲ್ಪಿಸಿದನು.
05055008a ಧ್ವಜೇ ಹಿ ತಸ್ಮಿನ್ರೂಪಾಣಿ ಚಕ್ರುಸ್ತೇ ದೇವಮಾಯಯಾ।
05055008c ಮಹಾಧನಾನಿ ದಿವ್ಯಾನಿ ಮಹಾಂತಿ ಚ ಲಘೂನಿ ಚ।।
ಅವನ ಧ್ವಜದಲ್ಲಿ ದೇವಮಾಯೆಯನ್ನು ತೋರಿಸುವ, ದೊಡ್ಡ ಮತ್ತು ಸಣ್ಣ ದಿವ್ಯ ಆಕಾರಗಳನ್ನು ನೀಡಿದ್ದಾರೆ.
05055009a ಸರ್ವಾ ದಿಶೋ ಯೋಜನಮಾತ್ರಮಂತರಂ ಸ ತಿರ್ಯಗೂರ್ಧ್ವಂ ಚ ರುರೋಧ ವೈ ಧ್ವಜಃ।
05055009c ನ ಸಂಸಜ್ಜೇತ್ತರುಭಿಃ ಸಂವೃತೋಽಪಿ ತಥಾ ಹಿ ಮಾಯಾ ವಿಹಿತಾ ಭೌವನೇನ।।
ಭೌವನನು ಮಾಯೆಯಿಂದ ಧ್ವಜವು ಎಲ್ಲ ದಿಕ್ಕುಗಳಲ್ಲಿಯೂ, ಮೇಲೆ ಮತ್ತು ಕೆಳಗೆ ಒಂದು ಯೋಜನ ದೂರದವರೆಗೆ ಪಸರಿಸುವಂತೆ ಮಾಡಿದ್ದಾನೆ. ಗಿಡಮರಗಳೂ ಅದರ ದಾರಿಯನ್ನು ತಡೆಯಲಾರವು.
05055010a ಯಥಾಕಾಶೇ ಶಕ್ರಧನುಃ ಪ್ರಕಾಶತೇ ನ ಚೈಕವರ್ಣಂ ನ ಚ ವಿದ್ಮ ಕಿಂ ನು ತತ್।
05055010c ತಥಾ ಧ್ವಜೋ ವಿಹಿತೋ ಭೌವನೇನ ಬಹ್ವಾಕಾರಂ ದೃಶ್ಯತೇ ರೂಪಮಸ್ಯ।।
ಆಕಾಶದಲ್ಲಿ ಕಾಮನಬಿಲ್ಲು ಪ್ರಕಾಶಿಸುವಂತೆ ಒಂದೇ ಬಣ್ಣವನ್ನು ತೋರಿಸುವುದಿಲ್ಲ. ಅದು ಯಾವುದರಿಂದ ಮಾಡಲ್ಪಟ್ಟಿದೆಯೆಂದು ಯಾರಿಗೂ ತಿಳಿಯದು. ಹಾಗೆ ಭೌವನನು ಅದನ್ನು ನಿರ್ಮಿಸಿದ್ದಾನೆ. ಅದರ ಆಕಾರ-ರೂಪಗಳು ಬಹಳ.
05055011a ಯಥಾಗ್ನಿಧೂಮೋ ದಿವಮೇತಿ ರುದ್ಧ್ವಾ ವರ್ಣಾನ್ಬಿಭ್ರತ್ತೈಜಸಂ ತಚ್ಚರೀರಂ।
05055011c ತಥಾ ಧ್ವಜೋ ವಿಹಿತೋ ಭೌವನೇನ ನ ಚೇದ್ಭಾರೋ ಭವಿತಾ ನೋತ ರೋಧಃ।।
ಬೆಂಕಿ-ಹೊಗೆಗಳು ಒಂದಾಗಿ ಮೇಲೇರುವಂತೆ ಅದರ ಶರೀರದಿಂದ ತೇಜಸ್ಸಿನ ಬಣ್ಣಗಳು ಹೊರಸೂಸುತ್ತವೆ. ಆ ರೀತಿಯಲ್ಲಿ ಭೌವನನು ಧ್ವಜವನ್ನು ನಿರ್ಮಿಸಿದ್ದಾನೆ. ಅದಕ್ಕೆ ಭಾರವೇ ಇಲ್ಲ. ಅದನ್ನು ತಡೆಯುವುದೂ ಅಸಾಧ್ಯ.
05055012a ಶ್ವೇತಾಸ್ತಸ್ಮಿನ್ವಾತವೇಗಾಃ ಸದಶ್ವಾ ದಿವ್ಯಾ ಯುಕ್ತಾಶ್ಚಿತ್ರರಥೇನ ದತ್ತಾಃ।
05055012c ಶತಂ ಯತ್ತತ್ಪೂರ್ಯತೇ ನಿತ್ಯಕಾಲಂ ಹತಂ ಹತಂ ದತ್ತವರಂ ಪುರಸ್ತಾತ್।।
ಅದಕ್ಕೆ ಚಿತ್ರರಥನು ಕೊಟ್ಟ ವಾಯುವೇಗವುಳ್ಳ ದಿವ್ಯವಾದ ಬಿಳಿಯ ನೂರು ಕುದುರೆಗಳನ್ನು ಕಟ್ಟಲಾಗಿವೆ. ಕೊಲ್ಲಲ್ಪಟ್ಟ ಹಾಗೆ ಅವುಗಳ ಸಂಖ್ಯೆಯು ಯಾವಾಗಲೂ ಪೂರ್ಣವಾಗಿರುವವೆಂದು ಹಿಂದೆ ವರವಿತ್ತು.
05055013a ತಥಾ ರಾಜ್ಞೋ ದಂತವರ್ಣಾ ಬೃಹಂತೋ ರಥೇ ಯುಕ್ತಾ ಭಾಂತಿ ತದ್ವೀರ್ಯತುಲ್ಯಾಃ।
05055013c ಋಶ್ಯಪ್ರಖ್ಯಾ ಭೀಮಸೇನಸ್ಯ ವಾಹಾ ರಣೇ ವಾಯೋಸ್ತುಲ್ಯವೇಗಾ ಬಭೂವುಃ।।
ಹಾಗೆಯೇ ರಾಜ (ಯುಧಿಷ್ಠಿರನ) ರಥಕ್ಕೆ ದಂತವರ್ಣದ ಗಾತ್ರದಲ್ಲಿ ದೊಡ್ಡ, ವೀರ್ಯದಲ್ಲಿ ಸಮನಾದ ಹೊಳೆಯುತ್ತಿರುವ ಕುದುರೆಗಳನ್ನು ಕಟ್ಟಲಾಗಿದೆ. ಹಾಗೆಯೇ ರಣದಲ್ಲಿ ಭೀಮಸೇನನ ವಾಹನಕ್ಕೆ ಸಪ್ತರ್ಷಿಗಳಂತೆ ತೋರುವ ವಾಯುವೇಗವಿರುವ ಕುದುರೆಗಳಿವೆ.
05055014a ಕಲ್ಮಾಷಾಂಗಾಸ್ತಿತ್ತಿರಿಚಿತ್ರಪೃಷ್ಠಾ ಭ್ರಾತ್ರಾ ದತ್ತಾಃ ಪ್ರೀಯತಾ ಫಲ್ಗುನೇನ।
05055014c ಭ್ರಾತುರ್ವೀರಸ್ಯ ಸ್ವೈಸ್ತುರಂಗೈರ್ವಿಶಿಷ್ಟಾ ಮುದಾ ಯುಕ್ತಾಃ ಸಹದೇವಂ ವಹಂತಿ।।
ಸಹದೇವನು ದೇಹದ ಮೇಲೆ ಚುಕ್ಕೆಗಳಿರುವ, ಬೆನ್ನಿನ ಮೇಲೆ ಗಿಳಿಯ ಬಣ್ಣವನ್ನು ತಳೆದಿರುವ, ಅಣ್ಣ ಫಲ್ಗುನನು ಪ್ರೀತಿಯಿಂದ ಕೊಟ್ಟಿರುವ, ವೀರ ಸಹೋದರನ ಕುದುರೆಗಳಿಗಿಂತಲೂ ವಿಶಿಷ್ಟವಾದ ಕುದುರೆಗಳನ್ನು ಓಡಿಸುತ್ತಾನೆ.
05055015a ಮಾದ್ರೀಪುತ್ರಂ ನಕುಲಂ ತ್ವಾಜಮೀಢಂ ಮಹೇಂದ್ರದತ್ತಾ ಹರಯೋ ವಾಜಿಮುಖ್ಯಾಃ।
05055015c ಸಮಾ ವಾಯೋರ್ಬಲವಂತಸ್ತರಸ್ವಿನೋ ವಹಂತಿ ವೀರಂ ವೃತ್ರಶತ್ರುಂ ಯಥೇಂದ್ರಂ।।
ಮಾದ್ರಿಯ ಮಗ ಅಜಮೀಡ ನಕುಲನನ್ನು ಮಹೇಂದ್ರನು ನೀಡಿದ ಉತ್ತಮ ಕುದುರೆಗಳು ಕೊಂಡೊಯ್ಯುತ್ತವೆ. ವೇಗದಲ್ಲಿ ಅವು ವಾಯುವಿಗೆ ಸಮನಾದವು. ಆ ತರಸ್ವಿಗಳು ವೃತ್ರಶತ್ರು ಇಂದ್ರನನ್ನು ಹೇಗೋ ಹಾಗೆ ಆ ವೀರನನ್ನು ಹೊರುತ್ತವೆ.
05055016a ತುಲ್ಯಾಶ್ಚೈಭಿರ್ವಯಸಾ ವಿಕ್ರಮೇಣ ಜವೇನ ಚೈವಾಪ್ರತಿರೂಪಾಃ ಸದಶ್ವಾಃ।
05055016c ಸೌಭದ್ರಾದೀನ್ದ್ರೌಪದೇಯಾನ್ಕುಮಾರಾನ್ ವಹಂತ್ಯಶ್ವಾ ದೇವದತ್ತಾ ಬೃಹಂತಃ।।
ವಯಸ್ಸಿನಲ್ಲಿ ಮತ್ತು ವಿಕ್ರಮದಲ್ಲಿ ಇವುಗಳನ್ನು ಹೋಲುವ, ವೇಗದಲ್ಲಿ ಸರಿಸಾಟಿಯಿರದ, ದೇವತೆಗಳು ಕೊಟ್ಟಿರುವ ಉತ್ತಮ ದೊಡ್ಡ ಕುದುರೆಗಳು ಸೌಭದ್ರಿಯೇ ಮೊದಲಾದ ದ್ರೌಪದೇಯ ಕುಮಾರರನ್ನು ಹೊರುತ್ತವೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ಪಂಚಪಂಚಾಶತ್ತಮೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಐವತ್ತೈದನೆಯ ಅಧ್ಯಾಯವು.