046 ಸಂಜಯಪ್ರತ್ಯಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಯಾನಸಂಧಿ ಪರ್ವ

ಅಧ್ಯಾಯ 46

ಸಾರ

ಕುರುಸಭೆಗೆ ಸಂಜಯನ ಆಗಮನ ಮತ್ತು ವಿಷಯ ಪ್ರಸ್ತಾವನೆ (1-17).

05046001 ವೈಶಂಪಾಯನ ಉವಾಚ।
05046001a ಏವಂ ಸನತ್ಸುಜಾತೇನ ವಿದುರೇಣ ಚ ಧೀಮತಾ।
05046001c ಸಾರ್ಧಂ ಕಥಯತೋ ರಾಜ್ಞಾಃ ಸಾ ವ್ಯತೀಯಾಯ ಶರ್ವರೀ।।

ವೈಶಂಪಾಯನನು ಹೇಳಿದನು: “ಹೀಗೆ ಸನತ್ಸುಜಾತ ಮತ್ತು ಧೀಮತ ವಿದುರನೊಂದಿಗೆ ರಾಜನು ಮಾತುಕಥೆಯನ್ನಾಡುತ್ತಿರಲು, ರಾತ್ರಿಯು ಕಳೆಯಿತು.

05046002a ತಸ್ಯಾಂ ರಜನ್ಯಾಂ ವ್ಯುಷ್ಟಾಯಾಂ ರಾಜಾನಃ ಸರ್ವ ಏವ ತೇ।
05046002c ಸಭಾಮಾವಿವಿಶುರ್ಹೃಷ್ಟಾಃ ಸೂತಸ್ಯೋಪದಿದೃಕ್ಷಯಾ।।

ಆ ರಾತ್ರಿಯು ಕಳೆಯಲು ಎಲ್ಲ ರಾಜರೂ ಸೂತನನ್ನು ಕೇಳಲು ಸಂತೋಷದಿಂದ ಸಭೆಯನ್ನು ಪ್ರವೇಶಿಸಿದರು.

05046003a ಶುಶ್ರೂಷಮಾಣಾಃ ಪಾರ್ಥಾನಾಂ ವಚೋ ಧರ್ಮಾರ್ಥಸಂಹಿತಂ।
05046003c ಧೃತರಾಷ್ಟ್ರಮುಖಾಃ ಸರ್ವೇ ಯಯೂ ರಾಜಸಭಾಂ ಶುಭಾಂ।।

ಪಾರ್ಥರ ಧರ್ಮಾರ್ಥಸಂಹಿತ ಮಾತುಗಳನ್ನು ಕೇಳಲು ಬಯಸಿ ಎಲ್ಲರೂ ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ಶುಭ ರಾಜಸಭೆಯನ್ನು ಪ್ರವೇಶಿಸಿದರು.

05046004a ಸುಧಾವದಾತಾಂ ವಿಸ್ತೀರ್ಣಾಂ ಕನಕಾಜಿರಭೂಷಿತಾಂ।
05046004c ಚಂದ್ರಪ್ರಭಾಂ ಸುರುಚಿರಾಂ ಸಿಕ್ತಾಂ ಪರಮವಾರಿಣಾ।।
05046005a ರುಚಿರೈರಾಸನೈಃ ಸ್ತೀರ್ಣಾಂ ಕಾಂಚನೈರ್ದಾರವೈರಪಿ।
05046005c ಅಶ್ಮಸಾರಮಯೈರ್ದಾಂತೈಃ ಸ್ವಾಸ್ತೀರ್ಣೈಃ ಸೋತ್ತರಚ್ಚದೈಃ।।

ಆ ವಿಸ್ತೀರ್ಣ ಸಭೆಗೆ ಬಿಳಿಯ ಬಣ್ಣವನ್ನು ಬಳಿದಿದ್ದರು. ಕನಕರಾಜಿಗಳಿಂದ ಅಲಂಕರಿಸಿದ್ದರು. ಚಂದ್ರನ ಪ್ರಭೆಯಂತೆ ಸುಂದರ ಬೆಳಕುಗಳನ್ನಿಟ್ಟಿದ್ದರು. ಗಂಧದ ನೀರನ್ನು ಸಿಂಪಡಿಸಿದ್ದರು. ಬಂಗಾರದ ಮತ್ತು ಮರದ ಆಸನಗಳನ್ನಿರಿಸಿದ್ದರು. ದಂತ-ಅಶ್ಮಸಾರಗಳಿಂದ ಕೂಡಿದ ವಸ್ತ್ರಗಳನ್ನು ಹೊದೆಸಿದ್ದರು.

05046006a ಭೀಷ್ಮೋ ದ್ರೋಣಃ ಕೃಪಃ ಶಲ್ಯಃ ಕೃತವರ್ಮಾ ಜಯದ್ರಥಃ।
05046006c ಅಶ್ವತ್ಥಾಮಾ ವಿಕರ್ಣಶ್ಚ ಸೋಮದತ್ತಶ್ಚ ಬಾಹ್ಲಿಕಃ।।
05046007a ವಿದುರಶ್ಚ ಮಹಾಪ್ರಾಜ್ಞೋ ಯುಯುತ್ಸುಶ್ಚ ಮಹಾರಥಃ।
05046007c ಸರ್ವೇ ಚ ಸಹಿತಾಃ ಶೂರಾಃ ಪಾರ್ಥಿವಾ ಭರತರ್ಷಭ।
05046007e ಧೃತರಾಷ್ಟ್ರಂ ಪುರಸ್ಕೃತ್ಯ ವಿವಿಶುಸ್ತಾಂ ಸಭಾಂ ಶುಭಾಂ।।

ಭರತರ್ಷಭ! ಭೀಷ್ಮ, ದ್ರೋಣ, ಕೃಪ, ಶಲ್ಯ, ಕೃತವರ್ಮ, ಜಯದ್ರಥ, ಅಶ್ವತ್ಥಾಮ, ವಿಕರ್ಣ, ಸೋಮದತ್ತ, ಬಾಹ್ಲೀಕ, ಮಹಾಪ್ರಾಜ್ಞ ವಿದುರ, ಮಹಾರಥಿ ಯುಯುತ್ಸು ಮತ್ತು ಎಲ್ಲ ಶೂರ ಪಾರ್ಥಿವರೂ ಒಟ್ಟಿಗೆ ಧೃತರಾಷ್ಟ್ರನ ಹಿಂದೆ ಶುಭ ಸಭೆಯನ್ನು ಪ್ರವೇಶಿಸಿದರು.

05046008a ದುಃಶಾಸನಶ್ಚಿತ್ರಸೇನಃ ಶಕುನಿಶ್ಚಾಪಿ ಸೌಬಲಃ।
05046008c ದುರ್ಮುಖೋ ದುಃಸ್ಸಹಃ ಕರ್ಣ ಉಲೂಕೋಽಥ ವಿವಿಂಶತಿಃ।।
05046009a ಕುರುರಾಜಂ ಪುರಸ್ಕೃತ್ಯ ದುರ್ಯೋಧನಮಮರ್ಷಣಂ।
05046009c ವಿವಿಶುಸ್ತಾಂ ಸಭಾಂ ರಾಜನ್ಸುರಾಃ ಶಕ್ರಸದೋ ಯಥಾ।।

ರಾಜನ್! ದುಃಶಾಸನ, ಚಿತ್ರಸೇನ, ಸೌಬಲ ಶಕುನಿ, ದುರ್ಮುಖ, ದುಃಸ್ಸಹ, ಕರ್ಣ, ಉಲೂಕ, ವಿವಿಂಶತಿಯರು ಅಮರ್ಷಣ ಕುರುರಾಜ ದುರ್ಯೋಧನನನ್ನು ಮುಂದಿಟ್ಟುಕೊಂಡು ಸುರರು ಶಕ್ರಸಭೆಯನ್ನು ಹೇಗೋ ಹಾಗೆ ಸಭೆಯನ್ನು ಪ್ರವೇಶಿಸಿದರು.

05046010a ಆವಿಶದ್ಭಿಸ್ತದಾ ರಾಜನ್ ಶೂರೈಃ ಪರಿಘಬಾಹುಭಿಃ।
05046010c ಶುಶುಭೇ ಸಾ ಸಭಾ ರಾಜನ್ಸಿಂಹೈರಿವ ಗಿರೇರ್ಗುಹಾ।।

ರಾಜನ್! ಪರಿಘದಂತೆ ಬಾಹುಗಳನ್ನುಳ್ಳ ಆ ಶೂರರು ಪ್ರವೇಶಿಸಲು ಸಭೆಯು ಗಿರಿಗಳಲ್ಲಿ ಸಿಂಹಗಳಿರುವ ಗುಹೆಯಂತೆ ಶೋಭಿಸಿತು.

05046011a ತೇ ಪ್ರವಿಶ್ಯ ಮಹೇಷ್ವಾಸಾಃ ಸಭಾಂ ಸಮಿತಿಶೋಭನಾಃ।
05046011c ಆಸನಾನಿ ಮಹಾರ್ಹಾಣಿ ಭೇಜಿರೇ ಸೂರ್ಯವರ್ಚಸಃ।।

ಒಟ್ಟಿಗೇ ಶೋಭಿಸುತ್ತಿದ್ದ ಆ ಮಹೇಷ್ವಾಸರು ಸಭೆಯನ್ನು ಪ್ರವೇಶಿಸಿ ಬೆಲೆಬಾಳುವ ಆಸನಗಳಲ್ಲಿ ಸೂರ್ಯವರ್ಚಸರಂತೆ ಬೆಳಗಿದರು.

05046012a ಆಸನಸ್ಥೇಷು ಸರ್ವೇಷು ತೇಷು ರಾಜಸು ಭಾರತ।
05046012c ದ್ವಾಃಸ್ಥೋ ನಿವೇದಯಾಮಾಸ ಸೂತಪುತ್ರಮುಪಸ್ಥಿತಂ।।

ಭಾರತ! ಆ ಸರ್ವ ರಾಜರು ಆಸನಗಳಲ್ಲಿರಲು ಸೂತಪುತ್ರನು ಬಂದಿರುವುದನ್ನು ದ್ವಾರಪಾಲಕನು ನಿವೇದಿಸಿದನು.

05046013a ಅಯಂ ಸ ರಥ ಆಯಾತಿ ಯೋಽಯಾಸೀತ್ಪಾಂಡವಾನ್ಪ್ರತಿ।
05046013c ದೂತೋ ನಸ್ತೂರ್ಣಮಾಯಾತಃ ಸೈಂಧವೈಃ ಸಾಧುವಾಹಿಭಿಃ।।

“ಉತ್ತಮ ಸೈಂಧವ ಕುದುರೆಗಳನ್ನು ಕಟ್ಟಿದ ರಥದಲ್ಲಿ ಪಾಂಡವರ ಕಡೆ ಹೋಗಿದ್ದ ದೂತನು ಅವಸರದಿಂದ ಬಂದಿದ್ದಾನೆ.”

05046014a ಉಪಯಾಯ ತು ಸ ಕ್ಷಿಪ್ರಂ ರಥಾತ್ಪ್ರಸ್ಕಂದ್ಯ ಕುಂಡಲೀ।
05046014c ಪ್ರವಿವೇಶ ಸಭಾಂ ಪೂರ್ಣಾಂ ಮಹೀಪಾಲೈರ್ಮಹಾತ್ಮಭಿಃ।।

ಕುಂಡಲಗಳನ್ನು ಧರಿಸಿದ ಅವನು ಬೇಗನೆ ರಥದಿಂದ ಇಳಿದು ಮಹಾತ್ಮ ಮಹೀಪಾಲರಿಂದ ತುಂಬಿದ್ದ ಸಭೆಯನ್ನು ಪ್ರವೇಶಿಸಿದನು.

05046015 ಸಂಜಯ ಉವಾಚ।
05046015a ಪ್ರಾಪ್ತೋಽಸ್ಮಿ ಪಾಂಡವಾನ್ಗತ್ವಾ ತದ್ವಿಜಾನೀತ ಕೌರವಾಃ।
05046015c ಯಥಾವಯಃ ಕುರೂನ್ಸರ್ವಾನ್ಪ್ರತಿನಂದಂತಿ ಪಾಂಡವಾಃ।।

ಸಂಜಯನು ಹೇಳಿದನು: “ಕೌರವರೇ! ನಾನು ಪಾಂಡವರ ಬಳಿ ಹೋಗಿ ಬಂದಿದ್ದೇನೆಂದು ತಿಳಿಯಿರಿ. ಅವರವರ ವಯಸ್ಸಿನ ಪ್ರಕಾರ ಕುರುಗಳೆಲ್ಲರಿಗೆ ಪಾಂಡವರು ಪ್ರತಿನಂದಿಸುತ್ತಾರೆ.

05046016a ಅಭಿವಾದಯಂತಿ ವೃದ್ಧಾಂಶ್ಚ ವಯಸ್ಯಾಂಶ್ಚ ವಯಸ್ಯವತ್।
05046016c ಯೂನಶ್ಚಾಭ್ಯವದನ್ಪಾರ್ಥಾಃ ಪ್ರತಿಪೂಜ್ಯ ಯಥಾವಯಃ।।

ವೃದ್ಧರನ್ನೂ, ತಮ್ಮ ವಯಸ್ಸಿನವರನ್ನೂ ವಯಸ್ಸಿಗೆ ತಕ್ಕಂತೆ ಅಭಿವಂದಿಸುತ್ತಾರೆ. ಸಣ್ಣ ವಯಸ್ಸಿನವರನ್ನು ವಯಸ್ಸಿಗೆ ತಕ್ಕಂತೆ ಪಾರ್ಥರು ಪ್ರತಿಪೂಜಿಸಿ ಅಭಿವಾದಿಸುತ್ತಾರೆ.

05046017a ಯಥಾಹಂ ಧೃತರಾಷ್ಟ್ರೇಣ ಶಿಷ್ಟಃ ಪೂರ್ವಮಿತೋ ಗತಃ।
05046017c ಅಬ್ರುವಂ ಪಾಂಡವಾನ್ಗತ್ವಾ ತನ್ನಿಬೋಧತ ಪಾರ್ಥಿವಾಃ।।

ಪಾರ್ಥಿವರೇ! ಧೃತರಾಷ್ಟ್ರನ ಆಜ್ಞೆಯಂತೆ ಈ ಮೊದಲೇ ಇಲ್ಲಿಂದ ಹೋದ ನಾನು ಪಾಂಡುವರಲ್ಲಿಗೆ ಹೋಗಿಬಂದು ಏನು ಹೇಳಲಿರುವೆನೋ ಅದನ್ನು ಕೇಳಿ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯಪ್ರತ್ಯಾಗಮನೇ ಷಟ್‌ಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯಪ್ರತ್ಯಾಗಮನದಲ್ಲಿ ನಲ್ವತ್ತಾರನೆಯ ಅಧ್ಯಾಯವು.