ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಪ್ರಜಾಗರ ಪರ್ವ
ಅಧ್ಯಾಯ 41
ಸಾರ
ಶೂದ್ರನಾದ ತಾನು ಇದಕ್ಕಿಂತಲೂ ಹೆಚ್ಚಿನದನ್ನು ಹೇಳುವುದಿಲ್ಲ ಆದರೆ ಮೃತ್ಯುವಿಲ್ಲವೆಂದು ಹೇಳಿದ ಸನತ್ಸುಜಾತನು ಗುಹ್ಯವಾಗಿರುವ ಎಲ್ಲದರ ಮೇಲೆ ಬೆಳಕು ಚೆಲ್ಲುತ್ತಾನೆ ಎಂದು ವಿದುರನು ಸನತ್ಸುಜಾತನನ್ನು ಸ್ಮರಿಸಿ ಕರೆಯಿಸಿಕೊಳ್ಳುವುದು (1-8). ಧೃತರಾಷ್ಟ್ರನ ಮನಸ್ಸಿನಲ್ಲಿರುವ ಸಂಶಯಗಳನ್ನು ಹೋಗಲಾಡಿಸಬೇಕೆಂದು ಸನತ್ಸುಜಾತನಲ್ಲಿ ವಿದುರನು ಪ್ರಾರ್ಥಿಸಿಕೊಂಡಿದುದು (9-11).
05041001 ಧೃತರಾಷ್ಟ್ರ ಉವಾಚ।
05041001a ಅನುಕ್ತಂ ಯದಿ ತೇ ಕಿಂ ಚಿದ್ವಾಚಾ ವಿದುರ ವಿದ್ಯತೇ।
05041001c ತನ್ಮೇ ಶುಶ್ರೂಷವೇ ಬ್ರೂಹಿ ವಿಚಿತ್ರಾಣಿ ಹಿ ಭಾಷಸೇ।।
ಧೃತರಾಷ್ಟ್ರನು ಹೇಳಿದನು: “ವಿದುರ! ಇನ್ನೂ ಏನನ್ನಾದರೂ ಹೇಳುವುದಿದ್ದರೆ ಹೇಳು. ನಾನು ಕೇಳಲು ಸಿದ್ಧನಿದ್ದೇನೆ. ನಿನ್ನ ಮಾತು ಸ್ವಾರಸ್ಯವಾಗಿದೆ.”
05041002 ವಿದುರ ಉವಾಚ।
05041002a ಧೃತರಾಷ್ಟ್ರ ಕುಮಾರೋ ವೈ ಯಃ ಪುರಾಣಃ ಸನಾತನಃ।
05041002c ಸನತ್ಸುಜಾತಃ ಪ್ರೋವಾಚ ಮೃತ್ಯುರ್ನಾಸ್ತೀತಿ ಭಾರತ।।
ವಿದುರನು ಹೇಳಿದನು: “ಧೃತರಾಷ್ಟ್ರ! ಭಾರತ! ಪುರಾಣನೂ ಸನಾತನನೂ ಆದ ಕುಮಾರ ಸನತ್ಸುಜಾತನು ಮೃತ್ಯುವಿಲ್ಲವೆಂದು ಹೇಳಿದನು.
05041003a ಸ ತೇ ಗುಹ್ಯಾನ್ಪ್ರಕಾಶಾಂಶ್ಚ ಸರ್ವಾನ್ ಹೃದಯಸಂಶ್ರಯಾನ್।
05041003c ಪ್ರವಕ್ಷ್ಯತಿ ಮಹಾರಾಜ ಸರ್ವಬುದ್ಧಿಮತಾಂ ವರಃ।।
ಮಹಾರಾಜ! ಸರ್ವಬುದ್ಧಿಮತರಲ್ಲಿ ಶ್ರೇಷ್ಠನಾದ ಅವನು ನಿನಗೆ ಗುಹ್ಯವಾಗಿರುವ ಎಲ್ಲದರ ಮೇಲೆ ಬೆಳಕನ್ನು ಬೀರಿ ನಿನ್ನ ಹೃದಯದಲ್ಲಿ ನೆಲೆಸುವಂತೆ ಹೇಳುತ್ತಾನೆ.”
05041004 ಧೃತರಾಷ್ಟ್ರ ಉವಾಚ।
05041004a ಕಿಂ ತ್ವಂ ನ ವೇದ ತದ್ಭೂಯೋ ಯನ್ಮೇ ಬ್ರೂಯಾತ್ಸನಾತನಃ।
05041004c ತ್ವಮೇವ ವಿದುರ ಬ್ರೂಹಿ ಪ್ರಜ್ಞಾಶೇಷೋಽಸ್ತಿ ಚೇತ್ತವ।।
ಧೃತರಾಷ್ಟ್ರನು ಹೇಳಿದನು: “ಆ ಸನಾತನ ಋಷಿಯು ನನಗೆ ಏನನ್ನು ಹೇಳಲಿದ್ದಾನೆಯೋ ಅದು ನಿನಗೆ ತಿಳಿದಿಲ್ಲವೇ? ವಿದುರ! ಅದನ್ನು ನೀನೇ ಹೇಳು. ಅಷ್ಟಕ್ಕೆ ನಿನ್ನಲ್ಲಿ ಪ್ರಜ್ಞೆಯಿದೆ.”
05041005 ವಿದುರ ಉವಾಚ।
05041005a ಶೂದ್ರಯೋನಾವಹಂ ಜಾತೋ ನಾತೋಽನ್ಯದ್ವಕ್ತುಮುತ್ಸಹೇ।
05041005c ಕುಮಾರಸ್ಯ ತು ಯಾ ಬುದ್ಧಿರ್ವೇದ ತಾಂ ಶಾಶ್ವತೀಮಹಂ।।
ವಿದುರನು ಹೇಳಿದನು: “ನಾನು ಶೂದ್ರಯೋನಿಯಲ್ಲಿ ಹುಟ್ಟಿದ್ದುದರಿಂದ ನಾನು ಇಷ್ಟರವರಗೆ ಹೇಳಿದುದಕ್ಕಿಂತ ಹೆಚ್ಚು ಹೇಳುವುದಿಲ್ಲ. ಆ ಕುಮಾರನಲ್ಲಿರುವ ವೇದಗಳ ಕುರಿತಾದ ಜ್ಞಾನವು ಶಾಶ್ವತವೆಂದು ನನಗನ್ನಿಸುತ್ತದೆ.
05041006a ಬ್ರಾಹ್ಮೀಂ ಹಿ ಯೋನಿಮಾಪನ್ನಃ ಸುಗುಹ್ಯಮಪಿ ಯೋ ವದೇತ್।
05041006c ನ ತೇನ ಗರ್ಹ್ಯೋ ದೇವಾನಾಂ ತಸ್ಮಾದೇತದ್ಬ್ರವೀಮಿ ತೇ।।
ಬ್ರಾಹ್ಮಣ ಯೋನಿಯಲ್ಲಿ ಜನಿಸಿದ ಅವನು ತುಂಬಾ ಗುಹ್ಯವಾದುದನ್ನೂ ತಿಳಿದಿದ್ದಾನೆ. ದೇವತೆಗಳು ಅವನನ್ನು ನಿಂದಿಸುವುದಿಲ್ಲ. ಆದುದರಿಂದ ಇದನ್ನು ನಿನಗೆ ಹೇಳುತ್ತಿದ್ದೇನೆ.”
05041007 ಧೃತರಾಷ್ಟ್ರ ಉವಾಚ।
05041007a ಬ್ರವೀಹಿ ವಿದುರ ತ್ವಂ ಮೇ ಪುರಾಣಂ ತಂ ಸನಾತನಂ।
05041007c ಕಥಮೇತೇನ ದೇಹೇನ ಸ್ಯಾದಿಹೈವ ಸಮಾಗಮಃ।।
ಧೃತರಾಷ್ಟ್ರನು ಹೇಳಿದನು: “ವಿದುರ! ಈ ದೇಹದಲ್ಲಿದ್ದುಕೊಂಡು ನಾನು ಹೇಗೆ ಆ ಪುರಾಣ ಸನಾತನನನ್ನು ಸಂದರ್ಶಿಸಬಲ್ಲೆ ಹೇಳು!””
05041008 ವೈಶಂಪಾಯನ ಉವಾಚ।
05041008a ಚಿಂತಯಾಮಾಸ ವಿದುರಸ್ತಮೃಷಿಂ ಸಂಶಿತವ್ರತಂ।
05041008c ಸ ಚ ತಚ್ಚಿಂತಿತಂ ಜ್ಞಾತ್ವಾ ದರ್ಶಯಾಮಾಸ ಭಾರತ।।
ವೈಶಂಪಾಯನನು ಹೇಳಿದನು: “ಭಾರತ! ಆಗ ವಿದುರನು ಆ ಸಂಶಿತವ್ರತ ಋಷಿಯ ಕುರಿತು ಚಿಂತಿಸಿದನು. ಅವನು ಚಿಂತಿಸುತ್ತಿರುವುದನ್ನು ತಿಳಿದು ಋಷಿಯು ಅಲ್ಲಿ ಕಾಣಿಸಿಕೊಂಡನು.
05041009a ಸ ಚೈನಂ ಪ್ರತಿಜಗ್ರಾಹ ವಿಧಿದೃಷ್ಟೇನ ಕರ್ಮಣಾ।
05041009c ಸುಖೋಪವಿಷ್ಟಂ ವಿಶ್ರಾಂತಮಥೈನಂ ವಿದುರೋಽಬ್ರವೀತ್।।
ಆಗ ಅವನನ್ನು ವಿಧಿವತ್ತಾಗಿ ಬರಮಾಡಿಕೊಂಡು, ಸುಖವಾಗಿ ಕುಳಿತುಕೊಂಡು, ಸ್ವಲ್ಪ ವಿಶ್ರಾಂತಿಯನ್ನು ಪಡೆಯಲು ವಿದುರನು ಹೇಳಿದನು:
05041010a ಭಗವನ್ಸಂಶಯಃ ಕಶ್ಚಿದ್ಧೃತರಾಷ್ಟ್ರಸ್ಯ ಮಾನಸೇ।
05041010c ಯೋ ನ ಶಕ್ಯೋ ಮಯಾ ವಕ್ತುಂ ತಮಸ್ಮೈ ವಕ್ತುಮರ್ಹಸಿ।।
05041010e ಯಂ ಶ್ರುತ್ವಾಯಂ ಮನುಷ್ಯೇಂದ್ರಃ ಸುಖದುಃಖಾತಿಗೋ ಭವೇತ್।।
05041011a ಲಾಭಾಲಾಭೌ ಪ್ರಿಯದ್ವೇಷ್ಯೌ ಯಥೈನಂ ನ ಜರಾಂತಕೌ।
05041011c ವಿಷಹೇರನ್ಭಯಾಮರ್ಷೌ ಕ್ಷುತ್ಪಿಪಾಸೇ ಮದೋದ್ಭವೌ।
05041011e ಅರತಿಶ್ಚೈವ ತಂದ್ರೀ ಚ ಕಾಮಕ್ರೋಧೌ ಕ್ಷಯೋದಯೌ।।
“ಭಗವನ್! ಧೃತರಾಷ್ಟ್ರನ ಮನಸ್ಸಿನಲ್ಲಿ ಕೆಲವು ಸಂಶಯಗಳಿವೆ. ನನಗೆ ಶಕ್ಯವಾದಷ್ಟನ್ನು ನಾನು ಹೇಳಿದ್ದೇನೆ. ಯಾವುದನ್ನು ಕೇಳಿ ಈ ಮನುಷ್ಯೇಂದ್ರನು ಸುಖ-ದುಃಖಗಳನ್ನೂ, ಲಾಭಾಲಾಭಗಳನ್ನೂ, ಪ್ರೀತಿ-ದ್ವೇಷಗಳನ್ನೂ, ಮುಪ್ಪು-ಮೃತ್ಯುಗಳನ್ನೂ, ಭಯ-ಮಾತ್ಸರ್ಯಗಳನ್ನೂ, ಹಸಿವು-ಬಾಯಾರಿಕೆಗಳನ್ನೂ, ಮದ ಮತ್ತು ವೈಭವ, ಅರತಿ, ಆಲಸ್ಯ, ಕಾಮ-ಕ್ರೋಧ ಮತ್ತು ಕ್ಷಯ-ಉದಯಗಳನ್ನು ದಾಟಬಹುದೋ ಅದನ್ನು ನೀನೂ ಅವನಿಗೆ ಹೇಳಬೇಕು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಣಿ ವಿದುರಕೃತಸನತ್ಸುಜಾತಪ್ರಾರ್ಥನೇ ಏಕಚತ್ವಾರಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವದಲ್ಲಿ ವಿದುರಕೃತಸನತ್ಸುಜಾತಪ್ರಾರ್ಥನದಲ್ಲಿ ನಲ್ವತ್ತೊಂದನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಪ್ರಜಾಗರ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಪ್ರಜಾಗರ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-4/18, ಉಪಪರ್ವಗಳು-58/100, ಅಧ್ಯಾಯಗಳು-704/1995, ಶ್ಲೋಕಗಳು-23138/73784.