018 ಶಲ್ಯಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉದ್ಯೋಗ ಪರ್ವ

ಅಧ್ಯಾಯ 18

ಸಾರ

ಇಂದ್ರನು ದೇವರಾಜತ್ವವನ್ನು ಪುನಃ ಪಡೆದುದನ್ನು ಹೇಳಿ ಶಲ್ಯನು ಇಂದ್ರೋಪಾಖ್ಯಾನವನ್ನು ಸಮಾಪ್ತಿಗೊಳಿಸಿದುದು (1-10). ಇಂದ್ರನಂತೆ ನೀನೂ ಕಷ್ಟಗಳನ್ನು ಕಳೆದು ರಾಜ್ಯವನ್ನು ಗಳಿಸುತ್ತೀಯೆ ಎಂದು ಯುಧಿಷ್ಠಿರನಿಗೆ ಹೇಳಿ ಶಲ್ಯನು ಬೀಳ್ಕೊಂಡಿದುದು (11-25).

05018001 ಶಲ್ಯ ಉವಾಚ।
05018001a ತತಃ ಶಕ್ರಃ ಸ್ತೂಯಮಾನೋ ಗಂಧರ್ವಾಪ್ಸರಸಾಂ ಗಣೈಃ।
05018001c ಐರಾವತಂ ಸಮಾರುಹ್ಯ ದ್ವಿಪೇಂದ್ರಂ ಲಕ್ಷಣೈರ್ಯುತಂ।।

ಶಲ್ಯನು ಹೇಳಿದನು: “ಆಗ ಗಂಧರ್ವಾಪ್ಸರ ಗಣಗಳಿಂದ ಸ್ತುತಿಸಲ್ಪಟ್ಟ ಇಂದ್ರ ಶಕ್ರನು ಲಕ್ಷಣಗಳಿಂದ ಕೂಡಿದ ಐರಾವತವನ್ನು ಏರಿದನು.

05018002a ಪಾವಕಶ್ಚ ಮಹಾತೇಜಾ ಮಹರ್ಷಿಶ್ಚ ಬೃಹಸ್ಪತಿಃ।
05018002c ಯಮಶ್ಚ ವರುಣಶ್ಚೈವ ಕುಬೇರಶ್ಚ ಧನೇಶ್ವರಃ।।

ಮಹಾತೇಜಸ್ವಿ ಅಗ್ನಿ, ಮಹರ್ಷಿ ಬೃಹಸ್ಪತಿ ಮತ್ತು ಯಮ, ವರುಣ ಮತ್ತು ಧನೇಶ್ವರ ಕುಬೇರರು ಒಡಗೂಡಿದರು.

05018003a ಸರ್ವೈರ್ದೇವೈಃ ಪರಿವೃತಃ ಶಕ್ರೋ ವೃತ್ರನಿಷೂದನಃ।
05018003c ಗಂಧರ್ವೈರಪ್ಸರೋಭಿಶ್ಚ ಯಾತಸ್ತ್ರಿಭುವನಂ ಪ್ರಭುಃ।।

ವೃತ್ರ ನಿಷೂದನ ಪ್ರಭು ಶಕ್ರನು ಸರ್ವ ದೇವತೆಗಳಿಂದ ಗಂಧರ್ವ, ಅಪ್ಸರೆಯರಿಂದ ಪರಿವೃತನಾಗಿ ತ್ರಿಭುವನಕ್ಕೆ ಪ್ರಯಾಣಿಸಿದನು.

05018004a ಸ ಸಮೇತ್ಯ ಮಹೇಂದ್ರಾಣ್ಯಾ ದೇವರಾಜಃ ಶತಕ್ರತುಃ।
05018004c ಮುದಾ ಪರಮಯಾ ಯುಕ್ತಃ ಪಾಲಯಾಮಾಸ ದೇವರಾಟ್।।

ಆ ಶತಕ್ರತು ದೇವರಾಜನು ಮಹೇಂದ್ರಾಣಿಯನ್ನು ಸೇರಿ ಪರಮ ಸಂತೋಷದಿಂದ ದೇವರಾಜ್ಯವನ್ನು ಪಾಲಿಸಿದನು.

05018005a ತತಃ ಸ ಭಗವಾಂಸ್ತತ್ರ ಅಂಗಿರಾಃ ಸಮದೃಶ್ಯತ।
05018005c ಅಥರ್ವವೇದಮಂತ್ರೈಶ್ಚ ದೇವೇಂದ್ರಂ ಸಮಪೂಜಯತ್।।

ಆಗ ಅಲ್ಲಿಗೆ ಭಗವಾನ್ ಅಂಗಿರಸನು ಕಾಣಿಸಿಕೊಂಡನು. ಅವನು ದೇವೇಂದ್ರನನ್ನು ಅಥರ್ವ ವೇದ ಮಂತ್ರಗಳಿಂದ ಪೂಜಿಸಿದನು.

05018006a ತತಸ್ತು ಭಗವಾನಿಂದ್ರಃ ಪ್ರಹೃಷ್ಟಃ ಸಮಪದ್ಯತ।
05018006c ವರಂ ಚ ಪ್ರದದೌ ತಸ್ಮೈ ಅಥರ್ವಾಂಗಿರಸೇ ತದಾ।।

ಆಗ ಭಗವಾನ್ ಇಂದ್ರನು ಸಂತೋಷಗೊಂಡು ಅಥರ್ವಾಂಗಿರಸನಿಗೆ ವರವನ್ನು ನೀಡಿದನು.

05018007a ಅಥರ್ವಾಂಗಿರಸಂ ನಾಮ ಅಸ್ಮಿನ್ವೇದೇ ಭವಿಷ್ಯತಿ।
05018007c ಉದಾಹರಣಮೇತದ್ಧಿ ಯಜ್ಞಾಭಾಗಂ ಚ ಲಪ್ಸ್ಯಸೇ।।

“ಈ ವೇದವು ಅಥರ್ವಾಂಗಿರಸ ಎಂಬ ಹೆಸರನ್ನು ಹೊಂದುತ್ತದೆ. ಉದಾಹರಣೆಗೆ ಇದಕ್ಕೆ ಯಜ್ಞದ ಭಾಗವೂ ದೊರೆಯುತ್ತದೆ.”

05018008a ಏವಂ ಸಂಪೂಜ್ಯ ಭಗವಾನಥರ್ವಾಂಗಿರಸಂ ತದಾ।
05018008c ವ್ಯಸರ್ಜಯನ್ಮಹಾರಾಜ ದೇವರಾಜಃ ಶತಕ್ರತುಃ।।

ಈ ರೀತಿ ಅಥರ್ವಾಂಗಿರಸನನ್ನು ಸಂಪೂಜಿಸಿ ಭಗವಾನ್ ಮಹಾರಾಜ ದೇವರಾಜ ಶತುಕ್ರತುವು ಕಳುಹಿಸಿಕೊಟ್ಟನು.

05018009a ಸಂಪೂಜ್ಯ ಸರ್ವಾಂಸ್ತ್ರಿದಶಾನೃಷೀಂಶ್ಚಾಪಿ ತಪೋಧನಾನ್।
05018009c ಇಂದ್ರಃ ಪ್ರಮುದಿತೋ ರಾಜನ್ಧರ್ಮೇಣಾಪಾಲಯತ್ಪ್ರಜಾಃ।।

ರಾಜನ್! ಸರ್ವ ತ್ರಿದಶರನ್ನೂ ತಪೋಧನ ಋಷಿಗಳನ್ನು ಸಂಪೂಜಿಸಿ ಇಂದ್ರನು ಸಂತೋಷಗೊಂಡು ಪ್ರಜೆಗಳನ್ನು ಧರ್ಮದಿಂದ ಪಾಲಿಸಿದನು.

05018010a ಏವಂ ದುಃಖಮನುಪ್ರಾಪ್ತಮಿಂದ್ರೇಣ ಸಹ ಭಾರ್ಯಯಾ।
05018010c ಅಜ್ಞಾತವಾಸಶ್ಚ ಕೃತಃ ಶತ್ರೂಣಾಂ ವಧಕಾಂಕ್ಷಯಾ।।

ಹೀಗೆ ಭಾರ್ಯೆಯೊಂದಿಗೆ ಇಂದ್ರನು ದುಃಖವನ್ನು ಹೊಂದಿ ಶತ್ರುಗಳ ವಧೆಯನ್ನು ಬಯಸಿ ಅಜ್ಞಾತವಾಸವನ್ನು ಮಾಡಿದನು.

05018011a ನಾತ್ರ ಮನ್ಯುಸ್ತ್ವಯಾ ಕಾರ್ಯೋ ಯತ್ಕ್ಲಿಷ್ಟೋಽಸಿ ಮಹಾವನೇ।
05018011c ದ್ರೌಪದ್ಯಾ ಸಹ ರಾಜೇಂದ್ರ ಭ್ರಾತೃಭಿಶ್ಚ ಮಹಾತ್ಮಭಿಃ।।

ರಾಜೇಂದ್ರ! ದ್ರೌಪದಿಯೊಂದಿಗೆ ಮತ್ತು ಮಹಾತ್ಮ ಸಹೋದರರೊಂದಿಗೆ ಮಹಾವನದಲ್ಲಿ ಕ್ಲಿಷ್ಟಗಳನ್ನು ಅನುಭವಿಸಿದುದನ್ನು ನಿನ್ನ ಹೃದಯಕ್ಕೆ ತೆಗೆದುಕೊಳ್ಳಬೇಡ.

05018012a ಏವಂ ತ್ವಮಪಿ ರಾಜೇಂದ್ರ ರಾಜ್ಯಂ ಪ್ರಾಪ್ಸ್ಯಸಿ ಭಾರತ।
05018012c ವೃತ್ರಂ ಹತ್ವಾ ಯಥಾ ಪ್ರಾಪ್ತಃ ಶಕ್ರಃ ಕೌರವನಂದನ।।

ರಾಜೇಂದ್ರ! ಭಾರತ! ಕೌರವನಂದನ! ಹೇಗೆ ಶಕ್ರನು ವೃತ್ರನನ್ನು ಕೊಂದು ಪಡೆದನೋ ಹಾಗೆ ನೀನೂ ಕೂಡ ರಾಜ್ಯವನ್ನು ಪಡೆಯುತ್ತೀಯೆ.

05018013a ದುರಾಚಾರಶ್ಚ ನಹುಷೋ ಬ್ರಹ್ಮದ್ವಿಟ್ಪಾಪಚೇತನಃ।
05018013c ಅಗಸ್ತ್ಯಶಾಪಾಭಿಹತೋ ವಿನಷ್ಟಃ ಶಾಶ್ವತೀಃ ಸಮಾಃ।।

ದುರಾಚಾರಿ, ಪಾಪಚೇತನ, ಬ್ರಹ್ಮದ್ವೇಷೀ ನಹುಷನೂ ಕೂಡ ಅಗಸ್ತ್ಯನ ಶಾಪದಿಂದ ಹತನಾಗಿ ಶಾಶ್ವತ ಸಮಯದವರೆಗೆ ವಿನಿಷ್ಟನಾದನು1.

05018014a ಏವಂ ತವ ದುರಾತ್ಮಾನಃ ಶತ್ರವಃ ಶತ್ರುಸೂದನ।
05018014c ಕ್ಷಿಪ್ರಂ ನಾಶಂ ಗಮಿಷ್ಯಂತಿ ಕರ್ಣದುರ್ಯೋಧನಾದಯಃ।।

ಶತ್ರುಸೂದನ! ಹಾಗೆ ದುರಾತ್ಮರಾದ ಕರ್ಣ-ದುರ್ಯೋಧನರೇ ಮೊದಲಾದ ನಿನ್ನ ಶತ್ರುಗಳು ಕ್ಷಿಪ್ರವಾಗಿ ನಾಶವನ್ನು ಹೊಂದುತ್ತಾರೆ.

05018015a ತತಃ ಸಾಗರಪರ್ಯಂತಾಂ ಭೋಕ್ಷ್ಯಸೇ ಮೇದಿನೀಮಿಮಾಂ।
05018015c ಭ್ರಾತೃಭಿಃ ಸಹಿತೋ ವೀರ ದ್ರೌಪದ್ಯಾ ಚ ಸಹಾಭಿಭೋ।।

ಆಗ ವಿಭೋ! ವೀರ! ಸಾಗರಪರ್ಯಂತವಾದ ಈ ಮೇದಿನಿಯನ್ನು ಭ್ರಾತೃಗಳ ಸಹಿತ ಮತ್ತು ದ್ರೌಪದಿಯ ಸಹಿತ ಭೋಗಿಸುತ್ತೀಯೆ.

05018016a ಉಪಾಖ್ಯಾನಮಿದಂ ಶಕ್ರವಿಜಯಂ ವೇದಸಮ್ಮಿತಂ।
05018016c ರಾಜ್ಞೋ ವ್ಯೂಢೇಷ್ವನೀಕೇಷು ಶ್ರೋತವ್ಯಂ ಜಯಮಿಚ್ಚತಾ।।

ವೇದಸಮ್ಮಿತವಾದ ಶಕ್ರವಿಜಯದ ಈ ಆಖ್ಯಾನವನ್ನು ಜಯವನ್ನು ಬಯಸುವ ರಾಜನು ವ್ಯೂಢವನ್ನು ರಚಿಸುವಾಗ ಕೇಳಬೇಕು.

05018017a ತಸ್ಮಾತ್ಸಂಶ್ರಾವಯಾಮಿ ತ್ವಾಂ ವಿಜಯಂ ಜಯತಾಂ ವರ।
05018017c ಸಂಸ್ತೂಯಮಾನಾ ವರ್ಧಂತೇ ಮಹಾತ್ಮಾನೋ ಯುಧಿಷ್ಠಿರ।।

ಯುಧಿಷ್ಠಿರ! ವಿಜಯಿಗಳಲ್ಲಿ ಶ್ರೇಷ್ಠ! ಆದುದರಿಂದ ನಿನ್ನ ವಿಜಯಕ್ಕಾಗಿ ಇದನ್ನು ಹೇಳುತ್ತಿದ್ದೇನೆ. ಮಹಾತ್ಮರು ಸ್ತುತಿಸಲ್ಪಟ್ಟಾಗ ವೃದ್ಧಿ ಹೊಂದುತ್ತಾರೆ.

05018018a ಕ್ಷತ್ರಿಯಾಣಾಮಭಾವೋಽಯಂ ಯುಧಿಷ್ಠಿರ ಮಹಾತ್ಮನಾಂ।
05018018c ದುರ್ಯೋಧನಾಪರಾಧೇನ ಭೀಮಾರ್ಜುನಬಲೇನ ಚ।।

ಯುಧಿಷ್ಠಿರ! ದುರ್ಯೋಧನನ ಅಪರಾಧದಿಂದ ಮತ್ತು ಭೀಮಾರ್ಜುನರ ಬಲದಿಂದ ಮಹಾತ್ಮ ಕ್ಷತ್ರಿಯರ ನಾಶವಾಗಲಿದೆ.

05018019a ಆಖ್ಯಾನಮಿಂದ್ರವಿಜಯಂ ಯ ಇದಂ ನಿಯತಃ ಪಠೇತ್।
05018019c ಧೂತಪಾಪ್ಮಾ ಜಿತಸ್ವರ್ಗಃ ಸ ಪ್ರೇತ್ಯೇಹ ಚ ಮೋದತೇ।।

ಇಂದ್ರವಿಜಯದ ಈ ಆಖ್ಯಾನವನ್ನು ಯಾರು ನಿಯತನಾಗಿ ಓದುತ್ತಾನೋ ಅವನು ಪಾಪವನ್ನು ಕಳೆದುಕೊಂಡು ಸ್ವರ್ಗವನ್ನು ಗೆದ್ದು ಇಲ್ಲಿ ಮತ್ತು ನಂತರದಲ್ಲಿ ಸಂತೋಷದಲ್ಲಿರುತ್ತಾನೆ.

05018020a ನ ಚಾರಿಜಂ ಭಯಂ ತಸ್ಯ ನ ಚಾಪುತ್ರೋ ಭವೇನ್ನರಃ।
05018020c ನಾಪದಂ ಪ್ರಾಪ್ನುಯಾತ್ಕಾಂ ಚಿದ್ದೀರ್ಘಮಾಯುಶ್ಚ ವಿಂದತಿ।
05018020e ಸರ್ವತ್ರ ಜಯಮಾಪ್ನೋತಿ ನ ಕದಾ ಚಿತ್ಪರಾಜಯಂ।।

ಅವನಿಗೆ ಶತ್ರುಗಳ ಭಯವಿರುವುದಿಲ್ಲ. ಅಂಥವನು ಅಪುತ್ರನಾಗುವುದಿಲ್ಲ. ಆಪತ್ತನ್ನು ಪಡೆಯುವುದಿಲ್ಲ ಮತ್ತು ದೀರ್ಘಾಯುಷಿಯಾಗುತ್ತಾನೆ. ಎಲ್ಲೆಡೆಯೂ ಜಯವನ್ನು ಹೊಂದುತ್ತಾನೆ ಮತ್ತು ಎಂದೂ ಪರಾಜಯುವನ್ನು ಪಡೆಯುವುದಿಲ್ಲ.””

05018021 ವೈಶಂಪಾಯನ ಉವಾಚ।
05018021a ಏವಮಾಶ್ವಾಸಿತೋ ರಾಜಾ ಶಲ್ಯೇನ ಭರತರ್ಷಭ।
05018021c ಪೂಜಯಾಮಾಸ ವಿಧಿವಚ್ಚಲ್ಯಂ ಧರ್ಮಭೃತಾಂ ವರಃ।।

ವೈಶಂಪಾಯನನು ಹೇಳಿದನು: “ಭರತರ್ಷಭ! ಶಲ್ಯನು ಹೀಗೆ ಆಶ್ವಾಸನೆಯನ್ನು ನೀಡಲು ಧರ್ಮಭೃತರಲ್ಲಿ ಶ್ರೇಷ್ಠ ರಾಜನು ಶಲ್ಯನನ್ನು ವಿಧಿವತ್ತಾಗಿ ಪೂಜಿಸಿದನು.

05018022a ಶ್ರುತ್ವಾ ಶಲ್ಯಸ್ಯ ವಚನಂ ಕುಂತೀಪುತ್ರೋ ಯುಧಿಷ್ಠಿರಃ।
05018022c ಪ್ರತ್ಯುವಾಚ ಮಹಾಬಾಹುರ್ಮದ್ರರಾಜಮಿದಂ ವಚಃ।।

ಶಲ್ಯನ ಮಾತನ್ನು ಕೇಳಿದ ಮಹಾಬಾಹು ಕುಂತೀಪುತ್ರ ಯುಧಿಷ್ಠಿರನು ಮದ್ರರಾಜನಿಗೆ ಉತ್ತರಿಸಿದನು:

05018023a ಭವಾನ್ಕರ್ಣಸ್ಯ ಸಾರಥ್ಯಂ ಕರಿಷ್ಯತಿ ನ ಸಂಶಯಃ।
05018023c ತತ್ರ ತೇಜೋವಧಃ ಕಾರ್ಯಃ ಕರ್ಣಸ್ಯ ಮಮ ಸಂಸ್ತವೈಃ।।

“ನೀನು ಕರ್ಣನ ಸಾರಥ್ಯವನ್ನು ಮಾಡುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಅಲ್ಲಿ ನನ್ನನ್ನು ಸ್ತುತಿಸಿ ಕರ್ಣನ ತೇಜೋವಧೆಯನ್ನು ಮಾಡಬೇಕು.”

05018024 ಶಲ್ಯ ಉವಾಚ।
05018024a ಏವಮೇತತ್ಕರಿಷ್ಯಾಮಿ ಯಥಾ ಮಾಂ ಸಂಪ್ರಭಾಷಸೇ।
05018024c ಯಚ್ಚಾನ್ಯದಪಿ ಶಕ್ಷ್ಯಾಮಿ ತತ್ಕರಿಷ್ಯಾಮ್ಯಹಂ ತವ।।

ಶಲ್ಯನು ಹೇಳಿದನು: “ನಾನು ಮಾತುಕೊಟ್ಟಂತೆ ಮಾಡುತ್ತೇನೆ. ಇನ್ನೂ ಏನನ್ನು ಮಾಡಲಿಕ್ಕಾಗುತ್ತದೆಯೋ ಅದನ್ನೂ ನಿನಗಾಗಿ ಮಾಡುತ್ತೇನೆ.””

05018025 ವೈಶಂಪಾಯನ ಉವಾಚ।
05018025a ತತ ಆಮಂತ್ರ್ಯ ಕೌಂತೇಯಾಂ ಶಲ್ಯೋ ಮದ್ರಾಧಿಪಸ್ತದಾ।
05018025c ಜಗಾಮ ಸಬಲಃ ಶ್ರೀಮಾನ್ದುರ್ಯೋಧನಮರಿಂದಮಃ।।

ವೈಶಂಪಾಯನನು ಹೇಳಿದನು: “ನಂತರ ಮದ್ರಾಧಿಪನು ಕೌಂತೇಯನನ್ನು ಬೀಳ್ಕೊಂಡು ಸೇನೆಯೊಂದಿಗೆ ಶ್ರೀಮಾನ್ ಅರಿಂದಮ ದುರ್ಯೋಧನನ ಬಳಿಗೆ ಹೋದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಶಲ್ಯಗಮನೇ ಅಷ್ಟಾದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಶಲ್ಯಗಮನದಲ್ಲಿ ಹದಿನೆಂಟನೆಯ ಅಧ್ಯಾಯವು।


  1. ಅರಣ್ಯದಲ್ಲಿ ಅಜಗರನ ರೂಪದಲ್ಲಿದ್ದ ನಹುಷನನ್ನು ಯುಧಿಷ್ಠಿರನು ಶಾಪದಿಂದ ವಿಮೋಚನಗೊಳಿಸಿದ ವಿಷಯವನ್ನು ಶಲ್ಯನು ಇಲ್ಲಿ ಸೂಚಿಸುವುದಿಲ್ಲ! ↩︎