ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಉದ್ಯೋಗ ಪರ್ವ
ಅಧ್ಯಾಯ 17
ಸಾರ
ಆಗ ಅಲ್ಲಿಗೆ ಆಗಮಿಸಿದ ಅಗಸ್ತ್ಯನು ಇಂದ್ರಾದಿ ದೇವತೆಗಳಿಗೆ ನಹುಷನು ದೇವರಾಜ್ಯದಿಂದ ಭ್ರಷ್ಟನಾದುದನ್ನು ತಿಳಿಸುವುದು (1-6). ಹೇಗೆಂದು ಕೇಳಲು, ಅಗಸ್ತ್ಯನು ನಹುಷನು ತನ್ನನ್ನು ಒದೆದುದನ್ನೂ, ತಾನು ಅವನಿಗೆ ಭೂಮಿಯಲ್ಲಿ ಹಾವಾಗಿ ಹತ್ತು ಸಾವಿರ ವರ್ಷಗಳು ಸಂಚರಿಸುತ್ತೀಯೆ ಎಂದು ಶಾಪವಿತ್ತುದನ್ನೂ ಹೇಳಿದುದು (7-20).
05017001 ಶಲ್ಯ ಉವಾಚ।
05017001a ಅಥ ಸಂಚಿಂತಯಾನಸ್ಯ ದೇವರಾಜಸ್ಯ ಧೀಮತಃ।
05017001c ನಹುಷಸ್ಯ ವಧೋಪಾಯಂ ಲೋಕಪಾಲೈಃ ಸಹೈವ ತೈಃ।।
05017001e ತಪಸ್ವೀ ತತ್ರ ಭಗವಾನಗಸ್ತ್ಯಃ ಪ್ರತ್ಯದೃಶ್ಯತ।।
ಶಲ್ಯನು ಹೇಳಿದನು: “ಧೀಮತ ದೇವರಾಜನು ನಹುಷನ ವಧೆಯ ಉಪಾಯವನ್ನು ಲೋಕಪಾಲಕರೊಡನೆ ಸಮಾಲೋಚಿಸುತ್ತಿರಲು ಅಲ್ಲಿ ತಪಸ್ವೀ ಭಗವಾನ್ ಅಗಸ್ತ್ಯನು ಕಾಣಿಸಿಕೊಂಡನು.
05017002a ಸೋಽಬ್ರವೀದರ್ಚ್ಯ ದೇವೇಂದ್ರಂ ದಿಷ್ಟ್ಯಾ ವೈ ವರ್ಧತೇ ಭವಾನ್।
05017002c ವಿಶ್ವರೂಪವಿನಾಶೇನ ವೃತ್ರಾಸುರವಧೇನ ಚ।।
ಅವನು ಇಂದ್ರನನ್ನು ಅರ್ಚಿಸಿ ಹೇಳಿದನು: “ಒಳ್ಳೆಯದಾಯಿತು! ನೀನು ವಿಶ್ವರೂಪನ ವಿನಾಶ ಮತ್ತು ವೃತ್ರಾಸುರನ ವಧೆಯ ನಂತರ ವೃದ್ಧಿಸಿದ್ದೀಯೆ.
05017003a ದಿಷ್ಟ್ಯಾ ಚ ನಹುಷೋ ಭ್ರಷ್ಟೋ ದೇವರಾಜ್ಯಾತ್ಪುರಂದರ।
05017003c ದಿಷ್ಟ್ಯಾ ಹತಾರಿಂ ಪಶ್ಯಾಮಿ ಭವಂತಂ ಬಲಸೂದನ।।
ಪುರಂದರ! ಒಳ್ಳೆಯದಾಯಿತು! ದೇವರಾಜ್ಯದಿಂದ ನಹುಷನು ಭ್ರಷ್ಟನಾಗಿದ್ದಾನೆ. ಬಲಸೂದನ! ಒಳ್ಳೆಯದಾಯಿತು! ನಿನ್ನ ಶತ್ರುಗಳು ನಾಶವಾಗಿ ನಿನ್ನನ್ನು ನಾನು ನೋಡುತ್ತಿದ್ದೇನೆ.”
05017004 ಇಂದ್ರ ಉವಾಚ।
05017004a ಸ್ವಾಗತಂ ತೇ ಮಹರ್ಷೇಽಸ್ತು ಪ್ರೀತೋಽಹಂ ದರ್ಶನಾತ್ತವ।
05017004c ಪಾದ್ಯಮಾಚಮನೀಯಂ ಚ ಗಾಮರ್ಘ್ಯಂ ಚ ಪ್ರತೀಚ್ಚ ಮೇ।।
ಇಂದ್ರನು ಹೇಳಿದನು: “ಮಹರ್ಷೇ! ನಿನಗೆ ಸ್ವಾಗತ. ನಿನ್ನ ದರ್ಶನದಿಂದ ನಾನು ಪ್ರೀತನಾಗಿದ್ದೇನೆ. ನನ್ನಿಂದ ಈ ಪಾದ್ಯ, ಆಚಮನೀಯ ಮತ್ತು ಅರ್ಘ್ಯವನ್ನು ಸ್ವೀಕರಿಸು!””
05017005 ಶಲ್ಯ ಉವಾಚ।
05017005a ಪೂಜಿತಂ ಚೋಪವಿಷ್ಟಂ ತಮಾಸನೇ ಮುನಿಸತ್ತಮಂ।
05017005c ಪರ್ಯಪೃಚ್ಚತ ದೇವೇಶಃ ಪ್ರಹೃಷ್ಟೋ ಬ್ರಾಹ್ಮಣರ್ಷಭಂ।।
05017006a ಏತದಿಚ್ಚಾಮಿ ಭಗವನ್ಕಥ್ಯಮಾನಂ ದ್ವಿಜೋತ್ತಮ।
05017006c ಪರಿಭ್ರಷ್ಟಃ ಕಥಂ ಸ್ವರ್ಗಾನ್ನಹುಷಃ ಪಾಪನಿಶ್ಚಯಃ।।
ಶಲ್ಯನು ಹೇಳಿದನು: “ಆ ಮುನಿಸತ್ತಮನನ್ನು ಪೂಜಿಸಿ ಆಸನದಲ್ಲಿ ಕುಳ್ಳಿರಿಸಿ ಸಂತೋಷಗೊಂಡ ದೇವೇಶನು ಬ್ರಾಹ್ಮಣರ್ಷಭನನ್ನು ಕೇಳಿದನು: “ಭಗವನ್! ದ್ವಿಜೋತ್ತಮ! ಪಾಪನಿಶ್ಚಯ ನಹುಷನು ಸ್ವರ್ಗದಿಂದ ಹೇಗೆ ಪರಿಭ್ರಷ್ಟನಾದ ಎಂದು ಕೇಳಲು ಬಯಸುತ್ತೇನೆ.”
05017007 ಅಗಸ್ತ್ಯ ಉವಾಚ।
05017007a ಶೃಣು ಶಕ್ರ ಪ್ರಿಯಂ ವಾಕ್ಯಂ ಯಥಾ ರಾಜಾ ದುರಾತ್ಮವಾನ್।
05017007c ಸ್ವರ್ಗಾದ್ಭ್ರಷ್ಟೋ ದುರಾಚಾರೋ ನಹುಷೋ ಬಲದರ್ಪಿತಃ।।
ಅಗಸ್ತ್ಯನು ಹೇಳಿದನು: “ಶಕ್ರ! ದುರಾತ್ಮ, ರಾಜಾ, ದುರಾಚಾರಿ, ಬಲದರ್ಪಿತ ನಹುಷನು ಸ್ವರ್ಗದಿಂದ ಹೇಗೆ ಭ್ರಷ್ಟನಾದ ಎನ್ನುವ ಪ್ರಿಯ ವಾರ್ತೆಯನ್ನು ಕೇಳು.
05017008a ಶ್ರಮಾರ್ತಾಸ್ತು ವಹಂತಸ್ತಂ ನಹುಷಂ ಪಾಪಕಾರಿಣಂ।
05017008c ದೇವರ್ಷಯೋ ಮಹಾಭಾಗಾಸ್ತಥಾ ಬ್ರಹ್ಮರ್ಷಯೋಽಮಲಾಃ।।
05017008e ಪಪ್ರಚ್ಚುಃ ಸಂಶಯಂ ದೇವ ನಹುಷಂ ಜಯತಾಂ ವರ।।
05017009a ಯ ಇಮೇ ಬ್ರಹ್ಮಣಾ ಪ್ರೋಕ್ತಾ ಮಂತ್ರಾ ವೈ ಪ್ರೋಕ್ಷಣೇ ಗವಾಂ।
05017009c ಏತೇ ಪ್ರಮಾಣಂ ಭವತ ಉತಾಹೋ ನೇತಿ ವಾಸವ।।
05017009e ನಹುಷೋ ನೇತಿ ತಾನಾಹ ತಮಸಾ ಮೂಢಚೇತನಃ।।
ದೇವ! ವಿಜಯಿಗಳಲ್ಲಿ ಶ್ರೇಷ್ಠ! ಪಾಪಕಾರಿಣಿ ನಹುಷನನ್ನು ಹೊತ್ತು ಆಯಾಸಗೊಂಡ ಮಹಾಭಾಗ, ಅಮಲ ಬ್ರಹ್ಮರ್ಷಿ ದೇವರ್ಷಿಗಳು ನಹುಷನನ್ನು ಕೇಳಿದರು: “ಹಸುಗಳಿಗೆ ಪ್ರೋಕ್ಷಣೆ ಮಾಡುವಾಗ ಹೇಳುವ ಮಂತ್ರಗಳು ವೇದಗಳಲ್ಲಿ ಇವೆಯಷ್ಟೇ! ಅವುಗಳಿಗೆ ಪ್ರಮಾಣಗಳಿವೆಯೇ ಹೇಳು!” ವಾಸವ! ತಮಸ್ಸಿನಿಂದ ಮೂಢಚೇತನನಾಗಿದ್ದ ನಹುಷನು ಇಲ್ಲವೆಂದು ಹೇಳಿದನು.
05017010 ಋಷಯ ಊಚುಃ।
05017010a ಅಧರ್ಮೇ ಸಂಪ್ರವೃತ್ತಸ್ತ್ವಂ ಧರ್ಮಂ ನ ಪ್ರತಿಪದ್ಯಸೇ।
05017010c ಪ್ರಮಾಣಮೇತದಸ್ಮಾಕಂ ಪೂರ್ವಂ ಪ್ರೋಕ್ತಂ ಮಹರ್ಷಿಭಿಃ।।
ಋಷಿಗಳು ಹೇಳಿದರು: “ನೀನು ಅಧರ್ಮದಲ್ಲಿ ನಡೆದುಕೊಳ್ಳುತ್ತಿದ್ದೀಯೆ. ಧರ್ಮದಲ್ಲಿ ನಡೆಯುತ್ತಿಲ್ಲ. ಹಿಂದೆ ಮಹರ್ಷಿಗಳು ಇವಕ್ಕೆ ಪ್ರಮಾಣಗಳಿವೆಯೆಂದು ಹೇಳಿದ್ದಾರೆ.””
05017011 ಅಗಸ್ತ್ಯ ಉವಾಚ।
05017011a ತತೋ ವಿವದಮಾನಃ ಸ ಮುನಿಭಿಃ ಸಹ ವಾಸವ।
05017011c ಅಥ ಮಾಮಸ್ಪೃಶನ್ಮೂರ್ಧ್ನಿ ಪಾದೇನಾಧರ್ಮಪೀಡಿತಃ।।
ಅಗಸ್ತ್ಯನು ಹೇಳಿದನು: “ವಾಸವ! ಹೀಗೆ ಮುನಿಗಳೊಂದಿಗೆ ವಾದಿಸುತ್ತಿರಲು ಅಧರ್ಮಪೀಡಿತನಾದ ಅವನು ಪಾದದಿಂದ ನನ್ನ ನೆತ್ತಿಯನ್ನು ಮುಟ್ಟಿದನು.
05017012a ತೇನಾಭೂದ್ಧತತೇಜಾಃ ಸ ನಿಃಶ್ರೀಕಶ್ಚ ಶಚೀಪತೇ।
05017012c ತತಸ್ತಮಹಮಾವಿಗ್ನಮವೋಚಂ ಭಯಪೀಡಿತಂ।।
05017013a ಯಸ್ಮಾತ್ಪೂರ್ವೈಃ ಕೃತಂ ಬ್ರಹ್ಮ ಬ್ರಹ್ಮರ್ಷಿಭಿರನುಷ್ಠಿತಂ।
05017013c ಅದುಷ್ಟಂ ದೂಷಯಸಿ ವೈ ಯಚ್ಚ ಮೂರ್ಧ್ನ್ಯಸ್ಪೃಶಃ ಪದಾ।।
05017014a ಯಚ್ಚಾಪಿ ತ್ವಮೃಷೀನ್ಮೂಢ ಬ್ರಹ್ಮಕಲ್ಪಾನ್ದುರಾಸದಾನ್।
05017014c ವಾಹಾನ್ಕೃತ್ವಾ ವಾಹಯಸಿ ತೇನ ಸ್ವರ್ಗಾದ್ಧತಪ್ರಭಃ।।
ಶಚೀಪತೇ! ಆಗ ಅವನು ತೇಜಸ್ಸನ್ನು ಕಳೆದುಕೊಂಡು ಭಯಭೀತನಾದನು. ಆ ಭಯಪೀಡಿತ ಅವಿಗ್ನನಿಗೆ ನಾನು ಹೇಳಿದೆನು: “ಪೂರ್ವದಲ್ಲಿ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಬ್ರಹ್ಮರ್ಷಿಗಳು ಅನುಷ್ಠಾನ ಮಾಡುತ್ತಿರುವುದನ್ನು ಅದುಷ್ಟವೆಂದು ದೂಷಿಸುತ್ತಿದ್ದೀಯೆ ಮತ್ತು ಪಾದದಿಂದ ನನ್ನನ್ನು ಸ್ಪರ್ಷಿಸಿದ್ದೀಯೆ. ಮೂಢ! ಬ್ರಹ್ಮನ ಸಮಾನರಾದ ದುರಾಸದರಾದ ಈ ಋಷಿಗಳನ್ನು ವಾಹನಗಳನ್ನಾಗಿಸಿ ಪ್ರಯಾಣಿಸುತ್ತಿದ್ದೀಯಲ್ಲ! ನೀನು ಸ್ವರ್ಗದಿಂದ ಪ್ರಭೆಯನ್ನು ಕಳೆದುಕೊಂಡು ಬೀಳು.
05017015a ಧ್ವಂಸ ಪಾಪ ಪರಿಭ್ರಷ್ಟಃ ಕ್ಷೀಣಪುಣ್ಯೋ ಮಹೀತಲಂ।
05017015c ದಶ ವರ್ಷಸಹಸ್ರಾಣಿ ಸರ್ಪರೂಪಧರೋ ಮಹಾನ್।
05017015e ವಿಚರಿಷ್ಯಸಿ ಪೂರ್ಣೇಷು ಪುನಃ ಸ್ವರ್ಗಮವಾಪ್ಸ್ಯಸಿ।।
ಪುಣ್ಯವನ್ನು ಕಳೆದುಕೊಂಡು ಮಹೀತಲದಲ್ಲಿ ಪರಿಭ್ರಷ್ಟನಾಗಿ ಹತ್ತು ಸಾವಿರ ವರ್ಷಗಳು ಮಹಾ ಸರ್ಪದ ರೂಪವನ್ನು ಧರಿಸಿ ಸಂಚರಿಸುತ್ತೀಯೆ. ಪಾಪವು ಸಂಪೂರ್ಣವಾಗಿ ಧ್ವಂಸವಾದ ನಂತರ ಪುನಃ ಸ್ವರ್ಗವನ್ನು ಪಡೆಯುತ್ತೀಯೆ.
05017016a ಏವಂ ಭ್ರಷ್ಟೋ ದುರಾತ್ಮಾ ಸ ದೇವರಾಜ್ಯಾದರಿಂದಮ।
05017016c ದಿಷ್ಟ್ಯಾ ವರ್ಧಾಮಹೇ ಶಕ್ರ ಹತೋ ಬ್ರಾಹ್ಮಣಕಂಟಕಃ।।
ಅರಿಂದಮ! ಈ ರೀತಿ ಆ ದುರಾತ್ಮನು ದೇವರಾಜ್ಯದಿಂದ ಭ್ರಷ್ಟನಾದನು. ಶಕ್ರ! ಆ ಬ್ರಾಹ್ಮಣಕಂಟಕನು ಹತನಾದುದು ಮತ್ತು ನೀನು ವೃದ್ಧಿಹೊಂದಿದುದು ಒಳ್ಳೆಯದೇ ಆಯಿತು.
05017017a ತ್ರಿವಿಷ್ಟಪಂ ಪ್ರಪದ್ಯಸ್ವ ಪಾಹಿ ಲೋಕಾಂ ಶಚೀಪತೇ।
05017017c ಜಿತೇಂದ್ರಿಯೋ ಜಿತಾಮಿತ್ರಃ ಸ್ತೂಯಮಾನೋ ಮಹರ್ಷಿಭಿಃ।।
ಶಚೀಪತೇ! ತ್ರಿವಿಷ್ಟಪವನ್ನು ಸೇರಿ ಲೋಕಗಳನ್ನು ಪಾಲಿಸು. ಜಿತೇಂದ್ರಿಯರೂ ಶತ್ರುಗಳನ್ನು ಗೆದ್ದವರೂ ಆದ ಮಹರ್ಷಿಗಳಿಂದ ಸ್ತುತಿಸಿಕೊಳ್ಳು.””
05017018 ಶಲ್ಯ ಉವಾಚ।
05017018a ತತೋ ದೇವಾ ಭೃಶಂ ತುಷ್ಟಾ ಮಹರ್ಷಿಗಣಸಂವೃತಾಃ।
05017018c ಪಿತರಶ್ಚೈವ ಯಕ್ಷಾಶ್ಚ ಭುಜಗಾ ರಾಕ್ಷಸಾಸ್ತಥಾ।।
05017019a ಗಂಧರ್ವಾ ದೇವಕನ್ಯಾಶ್ಚ ಸರ್ವೇ ಚಾಪ್ಸರಸಾಂ ಗಣಾಃ।
ಶಲ್ಯನು ಹೇಳಿದನು: “ಆಗ ದೇವತೆಗಳು ತುಂಬಾ ಸಂತೋಷಗೊಂಡು ಮಹರ್ಷಿಗಣಗಳಿಂದ, ಪಿತೃಗಳು, ಯಕ್ಷರು, ಭುಜಗರು, ರಾಕ್ಷಸರು, ಗಂಧರ್ವರು, ದೇವಕನ್ಯೆಯರು ಮತ್ತು ಅಪ್ಸರ ಗಣಗಳಿಂದ ಸುತ್ತುವರೆಯಲ್ಪಟ್ಟರು.
05017019c ಸರಾಂಸಿ ಸರಿತಃ ಶೈಲಾಃ ಸಾಗರಾಶ್ಚ ವಿಶಾಂ ಪತೇ।।
05017020a ಉಪಗಮ್ಯಾಬ್ರುವನ್ಸರ್ವೇ ದಿಷ್ಟ್ಯಾ ವರ್ಧಸಿ ಶತ್ರುಹನ್।
ವಿಶಾಂಪತೇ! ಸರೋವರಗಳು, ನದಿಗಳು, ಪರ್ವತಗಳು, ಸಾಗರಗಳು ಎಲ್ಲರೂ ಹತ್ತಿರಬಂದು ಹೇಳಿದರು: “ಶತ್ರುಹನ್! ನೀನು ವರ್ಧಿಸುತ್ತಿರುವುದು ಒಳ್ಳೆಯದಾಯಿತು!
05017020c ಹತಶ್ಚ ನಹುಷಃ ಪಾಪೋ ದಿಷ್ಟ್ಯಾಗಸ್ತ್ಯೇನ ಧೀಮತಾ।
05017020e ದಿಷ್ಟ್ಯಾ ಪಾಪಸಮಾಚಾರಃ ಕೃತಃ ಸರ್ಪೋ ಮಹೀತಲೇ।।
ಧೀಮಂತ ಅಗಸ್ತ್ಯನಿಂದ ಆ ಪಾಪಿ ನಹುಷನು ಹತನಾದುದೂ ಒಳ್ಳೆಯದೇ ಆಯಿತು. ಒಳ್ಳೆಯದಾಯಿತು ಆ ಪಾಪಿಯನ್ನು ಮಹೀತಲದಲ್ಲಿ ಸರ್ಪವಾಗಿ ಸಂಚರಿಸುವಂತೆ ಮಾಡಲಾಯಿತು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಇಂದ್ರಾಗಸ್ತ್ಯಸಂವಾದೇ ಸಪ್ತದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಇಂದ್ರಾಗಸ್ತ್ಯಸಂವಾದದಲ್ಲಿ ಹದಿನೇಳನೆಯ ಅಧ್ಯಾಯವು।