ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ
ಉದ್ಯೋಗ ಪರ್ವ
ಅಧ್ಯಾಯ 15
ಸಾರ
ವಇಂದ್ರನ ಸೂಚನೆಯಂತೆ ಶಚಿಯು ನಹುಷನಿಗೆ ಋಷಿಯಾನದಲ್ಲಿ ಬಂದು ನನ್ನನ್ನು ಸೇರು ಎಂದು ಕೇಳಿಕೊಳ್ಳುವುದು, ಅದರಂತೆ ನಹುಷನು ಋಷಿಯಾನವನ್ನೇರುವುದು (1-21). ಇಂದ್ರನನ್ನು ಹುಡುಕಲು ಬೃಹಸ್ಪತಿಯು ಅಗ್ನಿಯನ್ನು ನಿಯೋಜಿಸಿದುದು (22-32).
05015001 ಶಲ್ಯ ಉವಾಚ।
05015001a ಏವಮುಕ್ತಃ ಸ ಭಗವಾನ್ ಶಚ್ಯಾ ಪುನರಥಾಬ್ರವೀತ್।
05015001c ವಿಕ್ರಮಸ್ಯ ನ ಕಾಲೋಽಯಂ ನಹುಷೋ ಬಲವತ್ತರಃ।।
ಶಲ್ಯನು ಹೇಳಿದನು: “ಶಚಿಯು ಹೀಗೆ ಹೇಳಲು ಭಗವಾನನು ಪುನಃ ಹೇಳಿದನು: “ವಿಕ್ರಮದ ಕಾಲವಿದಲ್ಲ. ನಹುಷನು ನನಗಿಂತ ಬಲಶಾಲಿಯು.
05015002a ವಿವರ್ಧಿತಶ್ಚ ಋಷಿಭಿರ್ಹವ್ಯೈಃ ಕವ್ಯೈಶ್ಚ ಭಾಮಿನಿ।
05015002c ನೀತಿಮತ್ರ ವಿಧಾಸ್ಯಾಮಿ ದೇವಿ ತಾಂ ಕರ್ತುಮರ್ಹಸಿ।।
ಭಾಮಿನೀ! ಋಷಿಗಳ ಹವ್ಯ-ಕವ್ಯಗಳಿಂದ ಅವನು ವರ್ಧಿಸಿದ್ದಾನೆ. ದೇವಿ! ನಾನೊಂದು ಉಪಾಯವನ್ನು ಹೇಳುತ್ತೇನೆ. ನೀನು ಅದನ್ನು ಮಾಡಬೇಕು.
05015003a ಗುಹ್ಯಂ ಚೈತತ್ತ್ವಯಾ ಕಾರ್ಯಂ ನಾಖ್ಯಾತವ್ಯಂ ಶುಭೇ ಕ್ವ ಚಿತ್।
05015003c ಗತ್ವಾ ನಹುಷಮೇಕಾಂತೇ ಬ್ರವೀಹಿ ತನುಮಧ್ಯಮೇ।।
ಶುಭೇ! ಇದನ್ನು ನೀನು ಗುಪ್ತವಾಗಿ ನೆರವೇರಿಸಬೇಕು. ಇದನ್ನು ಯಾರಿಗೂ ಹೇಳಬಾರದು. ತನುಮಧ್ಯಮೇ! ಏಕಾಂತದಲ್ಲಿ ನಹುಷನಲ್ಲಿಗೆ ಹೋಗಿ ಹೇಳು.
05015004a ಋಷಿಯಾನೇನ ದಿವ್ಯೇನ ಮಾಮುಪೈಹಿ ಜಗತ್ಪತೇ।
05015004c ಏವಂ ತವ ವಶೇ ಪ್ರೀತಾ ಭವಿಷ್ಯಾಮೀತಿ ತಂ ವದ।।
ಜಗತ್ಪತೇ! ದಿವ್ಯವಾದ ಋಷಿಯಾನದಲ್ಲಿ ನನ್ನ ಬಳಿ ಬಾ. ಈ ರೀತಿಯಲ್ಲಿ ನಾನು ನಿನ್ನನ್ನು ಪ್ರೀತಿಸಿ ವಶದಲ್ಲಿ ಬರುತ್ತೇನೆ ಎಂದು ಹೇಳು.”
05015005a ಇತ್ಯುಕ್ತಾ ದೇವರಾಜೇನ ಪತ್ನೀ ಸಾ ಕಮಲೇಕ್ಷಣಾ।
05015005c ಏವಮಸ್ತ್ವಿತ್ಯಥೋಕ್ತ್ವಾ ತು ಜಗಾಮ ನಹುಷಂ ಪ್ರತಿ।।
ದೇವರಾಜನು ಹೀಗೆ ಹೇಳಲು ಅವನ ಪತ್ನಿ ಕಮಲೇಕ್ಷಣೆಯು “ಹೀಗೆಯೇ ಆಗುತ್ತದೆ” ಎಂದು ಹೇಳಿ ನಹುಷನ ಬಳಿ ಹೋದಳು.
05015006a ನಹುಷಸ್ತಾಂ ತತೋ ದೃಷ್ಟ್ವಾ ವಿಸ್ಮಿತೋ ವಾಕ್ಯಮಬ್ರವೀತ್।
05015006c ಸ್ವಾಗತಂ ತೇ ವರಾರೋಹೇ ಕಿಂ ಕರೋಮಿ ಶುಚಿಸ್ಮಿತೇ।।
ಆಗ ನಹುಷನು ಅವಳನ್ನು ಕಂಡು ವಿಸ್ಮಿತನಾಗಿ ಹೇಳಿದನು: “ವರಾರೋಹೇ! ನಿನಗೆ ಸ್ವಾಗತ! ಶುಚಿಸ್ಮಿತೇ! ನಿನಗೆ ಏನು ಮಾಡಲಿ?
05015007a ಭಕ್ತಂ ಮಾಂ ಭಜ ಕಲ್ಯಾಣಿ ಕಿಮಿಚ್ಚಸಿ ಮನಸ್ವಿನಿ।
05015007c ತವ ಕಲ್ಯಾಣಿ ಯತ್ಕಾರ್ಯಂ ತತ್ಕರಿಷ್ಯೇ ಸುಮಧ್ಯಮೇ।।
ಕಲ್ಯಾಣೀ! ಭಕ್ತನಾದ ನನ್ನನ್ನು ಭಜಿಸು. ಮನಸ್ವಿನಿ! ಏನನ್ನು ಬಯಸುತ್ತೀಯೆ. ಕಲ್ಯಾಣೀ! ಸುಮಧ್ಯಮೇ! ಮಾಡುವುದೇನೇ ಇದ್ದರೂ ಅದನ್ನು ಮಾಡುತ್ತೇನೆ.
05015008a ನ ಚ ವ್ರೀಡಾ ತ್ವಯಾ ಕಾರ್ಯಾ ಸುಶ್ರೋಣಿ ಮಯಿ ವಿಶ್ವಸ।
05015008c ಸತ್ಯೇನ ವೈ ಶಪೇ ದೇವಿ ಕರ್ತಾಸ್ಮಿ ವಚನಂ ತವ।।
ಸುಶ್ರೋಣೀ! ನಾಚದಿರು! ನನ್ನ ಮೇಲೆ ವಿಶ್ವಾಸವಿಡು ದೇವೀ! ಸತ್ಯದಲ್ಲಿ ಶಪಥ ಮಾಡಿ ಮಾಡುತ್ತೇನೆ ಎಂದು ವಚನವನ್ನು ನೀಡುತ್ತೇನೆ.”
05015009 ಇಂದ್ರಾಣ್ಯುವಾಚ।
05015009a ಯೋ ಮೇ ತ್ವಯಾ ಕೃತಃ ಕಾಲಸ್ತಮಾಕಾಂಕ್ಷೇ ಜಗತ್ಪತೇ।
05015009c ತತಸ್ತ್ವಮೇವ ಭರ್ತಾ ಮೇ ಭವಿಷ್ಯಸಿ ಸುರಾಧಿಪ।।
ಇಂದ್ರಾಣಿಯು ಹೇಳಿದಳು: “ಜಗತ್ಪತೇ! ಬಯಸಿದಂತೆ ನನಗೆ ಸಮಯವನ್ನು ಮಾಡಿಕೊಟ್ಟಿದ್ದೀಯೆ. ಸುರಾಧಿಪ! ಇದರ ನಂತರ ನೀನೇ ನನ್ನ ಪತಿಯಾಗುತ್ತೀಯೆ.
05015010a ಕಾರ್ಯಂ ಚ ಹೃದಿ ಮೇ ಯತ್ತದ್ದೇವರಾಜಾವಧಾರಯ।
05015010c ವಕ್ಷ್ಯಾಮಿ ಯದಿ ಮೇ ರಾಜನ್ಪ್ರಿಯಮೇತತ್ಕರಿಷ್ಯಸಿ।
ದೇವರಾಜ! ನನ್ನ ಹೃದಯದಲ್ಲಿ ಒಂದು ಬಯಕೆಯಿದೆ. ರಾಜನ್! ಚಿತ್ತವಿಟ್ಟು ಕೇಳು. ನನ್ನ ಪ್ರೀತಿಯ ಅದನ್ನು ಮಾಡುವೆಯಾದರೆ ಹೇಳುತ್ತೇನೆ.
05015010e ವಾಕ್ಯಂ ಪ್ರಣಯಸಂಯುಕ್ತಂ ತತಃ ಸ್ಯಾಂ ವಶಗಾ ತವ।।
05015011a ಇಂದ್ರಸ್ಯ ವಾಜಿನೋ ವಾಹಾ ಹಸ್ತಿನೋಽಥ ರಥಾಸ್ತಥಾ।
05015011c ಇಚ್ಚಾಮ್ಯಹಮಿಹಾಪೂರ್ವಂ ವಾಹನಂ ತೇ ಸುರಾಧಿಪ।।
05015011e ಯನ್ನ ವಿಷ್ಣೋರ್ನ ರುದ್ರಸ್ಯ ನಾಸುರಾಣಾಂ ನ ರಕ್ಷಸಾಂ।।
ಈ ಮಾತನ್ನು ನಡೆಸಿಕೊಟ್ಟರೆ ನಾನು ನಿನ್ನ ವಶದಲ್ಲಿ ಬರುತ್ತೇನೆ. ಇಂದ್ರನು ವಾಹನವಾಗಿ ಕುದುರೆಗಳನ್ನು, ಆನೆಗಳನ್ನು ಮತ್ತು ರಥಗಳನ್ನು ಹೊಂದಿದ್ದನು. ಸುರಾಧಿಪ! ಈ ಮೊದಲು ವಿಷ್ಣುವಿನಲ್ಲಿಯಾಗಲೀ, ರುದ್ರನಲ್ಲಿಯಾಗಲೀ, ಅಸುರರಲ್ಲಿಯಾಗಲೀ ರಾಕ್ಷಸರಲ್ಲಿಯಾಗಲೀ ಇಲ್ಲದೇ ಇರುವ ವಾಹನವು ನಿನ್ನದಾಗಬೇಕೆಂದು ನನಗೆ ಬಯಕೆಯಿದೆ.
05015012a ವಹಂತು ತ್ವಾಂ ಮಹಾರಾಜ ಋಷಯಃ ಸಂಗತಾ ವಿಭೋ।
05015012c ಸರ್ವೇ ಶಿಬಿಕಯಾ ರಾಜನ್ನೇತದ್ಧಿ ಮಮ ರೋಚತೇ।।
ಮಹಾರಾಜ! ವಿಭೋ! ಋಷಿಗಳು ಒಟ್ಟಾಗಿ ಎಲ್ಲರೂ ನಿನ್ನನ್ನು ಪಲ್ಲಕ್ಕಿಯಲ್ಲಿ ಹೊರಬೇಕು. ರಾಜನ್! ಇದು ನನಗೆ ಇಷ್ಟವಾಗುತ್ತದೆ.
05015013a ನಾಸುರೇಷು ನ ದೇವೇಷು ತುಲ್ಯೋ ಭವಿತುಮರ್ಹಸಿ।
05015013c ಸರ್ವೇಷಾಂ ತೇಜ ಆದತ್ಸ್ವ ಸ್ವೇನ ವೀರ್ಯೇಣ ದರ್ಶನಾತ್।
05015013e ನ ತೇ ಪ್ರಮುಖತಃ ಸ್ಥಾತುಂ ಕಶ್ಚಿದಿಚ್ಚತಿ ವೀರ್ಯವಾನ್।।
ಅಸುರರಲ್ಲಿ ಮತ್ತು ದೇವತೆಗಳಲ್ಲಿ ನಿನ್ನ ಸರಿಸಮನಾದವರು ಯಾರೂ ಇರಬಾರದು. ನಿನ್ನನ್ನು ನೋಡಿದವರೆಲ್ಲರ ತೇಜಸ್ಸನ್ನು ನಿನ್ನದೇ ವೀರ್ಯದಿಂದ ಆಕರ್ಶಿಸಿಕೊಳ್ಳುತ್ತೀಯೆ. ನಿನ್ನನ್ನು ಎದುರಿಸಿ ನಿಲ್ಲುವವನು ಯಾರೂ ಇಲ್ಲ.””
05015014 ಶಲ್ಯ ಉವಾಚ।
05015014a ಏವಮುಕ್ತಸ್ತು ನಹುಷಃ ಪ್ರಾಹೃಷ್ಯತ ತದಾ ಕಿಲ।
05015014c ಉವಾಚ ವಚನಂ ಚಾಪಿ ಸುರೇಂದ್ರಸ್ತಾಮನಿಂದಿತಾಂ।।
ಶಲ್ಯನು ಹೇಳಿದನು: “ಹೀಗೆ ಹೇಳಲು ನಹುಷನು ತುಂಬಾ ಹರ್ಷಿತನಾದನು. ಆಗ ಸುರೇಂದ್ರನು ಆ ಅನಿಂದಿತೆಗೆ ಹೇಳಿದನು:
05015015a ಅಪೂರ್ವಂ ವಾಹನಮಿದಂ ತ್ವಯೋಕ್ತಂ ವರವರ್ಣಿನಿ।
05015015c ದೃಢಂ ಮೇ ರುಚಿತಂ ದೇವಿ ತ್ವದ್ವಶೋಽಸ್ಮಿ ವರಾನನೇ।।
“ವರವರ್ಣಿನೀ! ನೀನು ಹೇಳಿದ ಈ ವಾಹನವು ಅಪೂರ್ವವಾದುದು. ವರಾನನೇ! ನಾನು ನಿನ್ನ ವಶದಲ್ಲಿದ್ದೇನೆ ಎಂದು ತುಂಬಾ ಸಂತೋಷವಾಗುತ್ತಿದೆ.
05015016a ನ ಹ್ಯಲ್ಪವೀರ್ಯೋ ಭವತಿ ಯೋ ವಾಹಾನ್ಕುರುತೇ ಮುನೀನ್।
05015016c ಅಹಂ ತಪಸ್ವೀ ಬಲವಾನ್ಭೂತಭವ್ಯಭವತ್ಪ್ರಭುಃ।।
ಮುನಿಗಳನ್ನು ವಾಹನವಾಗಿ ಮಾಡಿಕೊಳ್ಳವನು ಅಲ್ಪವೀರ್ಯನಾಗಿರುವುದಿಲ್ಲ. ನಾನು ತಪಸ್ವಿ, ಬಲವಂತ ಮತ್ತು ಆಗಿದುದರ, ಆಗುತ್ತಿರುವುದರ ಮತ್ತು ಆಗುವುದರ ಪ್ರಭು.
05015017a ಮಯಿ ಕ್ರುದ್ಧೇ ಜಗನ್ನ ಸ್ಯಾನ್ಮಯಿ ಸರ್ವಂ ಪ್ರತಿಷ್ಠಿತಂ।
05015017c ದೇವದಾನವಗಂಧರ್ವಾಃ ಕಿನ್ನರೋರಗರಾಕ್ಷಸಾಃ।।
05015018a ನ ಮೇ ಕ್ರುದ್ಧಸ್ಯ ಪರ್ಯಾಪ್ತಾಃ ಸರ್ವೇ ಲೋಕಾಃ ಶುಚಿಸ್ಮಿತೇ।
05015018c ಚಕ್ಷುಷಾ ಯಂ ಪ್ರಪಶ್ಯಾಮಿ ತಸ್ಯ ತೇಜೋ ಹರಾಮ್ಯಹಂ।।
ನಾನು ಸಿಟ್ಟಾದರೆ ಜಗತ್ತು ಇರುವುದಿಲ್ಲ. ಎಲ್ಲವೂ ನನ್ನನ್ನು ಆಧರಿಸಿವೆ. ಶುಚಿಸ್ಮಿತೇ! ದೇವ, ದಾನವ, ಗಂಧರ್ವ, ಕಿನ್ನರ, ಉರಗ ರಾಕ್ಷಸರು - ಸರ್ವ ಲೋಕಗಳೂ ಕ್ರುದ್ಧನಾದ ನನ್ನನ್ನು ಎದುರಿಸಲಾರರು. ಯಾರ ಮೇಲೆ ನನ್ನ ಕಣ್ಣನ್ನು ಹಾಯಿಸುತ್ತೇನೋ ಅವರ ತೇಜಸ್ಸನ್ನು ಅಪಹರಿಸುತ್ತೇನೆ.
05015019a ತಸ್ಮಾತ್ತೇ ವಚನಂ ದೇವಿ ಕರಿಷ್ಯಾಮಿ ನ ಸಂಶಯಃ।
05015019c ಸಪ್ತರ್ಷಯೋ ಮಾಂ ವಕ್ಷ್ಯಂತಿ ಸರ್ವೇ ಬ್ರಹ್ಮರ್ಷಯಸ್ತಥಾ।
05015019e ಪಶ್ಯ ಮಾಹಾತ್ಮ್ಯಮಸ್ಮಾಕಮೃದ್ಧಿಂ ಚ ವರವರ್ಣಿನಿ।।
ಆದುದರಿಂದ ದೇವೀ! ನಿನ್ನ ಮಾತಿನಂತೆ ಮಾಡುತ್ತೇನೆ. ಸಂಶಯವಿಲ್ಲ. ಬ್ರಹ್ಮರ್ಷಿಗಳಾದ ಸಪ್ತ ಋಷಿಗಳು ನನ್ನನ್ನು ಹೊರುತ್ತಾರೆ. ವರವರ್ಣಿನೀ! ನಮ್ಮ ಮಹಾತ್ಮೆ ಮತ್ತು ಅಭಿವೃದ್ಧಿಯನ್ನು ನೋಡು.”
05015020a ಏವಮುಕ್ತ್ವಾ ತು ತಾಂ ದೇವೀಂ ವಿಸೃಜ್ಯ ಚ ವರಾನನಾಂ।
05015020c ವಿಮಾನೇ ಯೋಜಯಿತ್ವಾ ಸ ಋಷೀನ್ನಿಯಮಮಾಸ್ಥಿತಾನ್।।
ಹೀಗೆ ಹೇಳಿ ಅವನು ಆ ವರಾನನೆ ದೇವಿಯನ್ನು ಕಳುಹಿಸಿ, ನಿಯಮದಲ್ಲಿರುವ ಋಷಿಗಳನ್ನು ವಿಮಾನಕ್ಕೆ ಹೂಡಿದನು.
05015021a ಅಬ್ರಹ್ಮಣ್ಯೋ ಬಲೋಪೇತೋ ಮತ್ತೋ ವರಮದೇನ ಚ।
05015021c ಕಾಮವೃತ್ತಃ ಸ ದುಷ್ಟಾತ್ಮಾ ವಾಹಯಾಮಾಸ ತಾನೃಷೀನ್।।
ಆ ಅಬ್ರಾಹ್ಮಣ್ಯ, ಬಲೋಪೇತ, ವರಮದದಿಂದ ಮತ್ತನಾದ ಕಾಮವೃತ್ತನಾದ ಆ ದುಷ್ಟಾತ್ಮನು ಋಷಿಗಳನ್ನು ಏರಿದನು.
05015022a ನಹುಷೇಣ ವಿಸೃಷ್ಟಾ ಚ ಬೃಹಸ್ಪತಿಮುವಾಚ ಸಾ।
05015022c ಸಮಯೋಽಲ್ಪಾವಶೇಷೋ ಮೇ ನಹುಷೇಣೇಹ ಯಃ ಕೃತಃ।
05015022e ಶಕ್ರಂ ಮೃಗಯ ಶೀಘ್ರಂ ತ್ವಂ ಭಕ್ತಾಯಾಃ ಕುರು ಮೇ ದಯಾಂ।।
ನಹುಷನಿಂದ ಕಳುಹಿಸಲ್ಪಟ್ಟ ಅವಳು ಬೃಹಸ್ಪತಿಗೆ ಹೇಳಿದಳು: “ನಹುಷನು ನನಗಿಟ್ಟಿದ್ದ ಸಮಯವು ಸ್ವಲ್ಪವೇ ಉಳಿದಿದೆ. ಶೀಘ್ರದಲ್ಲಿಯೇ ಶಕ್ರನನ್ನು ಹುಡುಕಿ ಭಕ್ತರಿಗೆ ದಯೆಯನ್ನು ಮಾಡು.”
05015023a ಬಾಢಮಿತ್ಯೇವ ಭಗವಾನ್ಬೃಹಸ್ಪತಿರುವಾಚ ತಾಂ।
05015023c ನ ಭೇತವ್ಯಂ ತ್ವಯಾ ದೇವಿ ನಹುಷಾದ್ದುಷ್ಟಚೇತಸಃ।।
ಭಗವಾನ್ ಬೃಹಸ್ಪತಿಯು ಅವಳಿಗೆ ಹೇಳಿದನು: “ಒಳ್ಳೆಯದಾಯಿತು. ದೇವಿ! ದುಷ್ಟಚೇತಸ ನಹುಷನಿಗೆ ನೀನು ಹೆದರಬಾರದು.
05015024a ನ ಹ್ಯೇಷ ಸ್ಥಾಸ್ಯತಿ ಚಿರಂ ಗತ ಏಷ ನರಾಧಮಃ।
05015024c ಅಧರ್ಮಜ್ಞೋ ಮಹರ್ಷೀಣಾಂ ವಾಹನಾಚ್ಚ ಹತಃ ಶುಭೇ।।
ಆ ನರಾಧಮನು ಬಹಳ ಕಾಲ ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದಿಲ್ಲ. ಶುಭೇ! ಆ ಅಧರ್ಮಜ್ಞನು ಮಹರ್ಷಿಗಳನ್ನು ವಾಹನವನ್ನಾಗಿ ಬಳಸುತ್ತಿದ್ದಾನೆಂದರೆ ಹತನಾಗುತ್ತಾನೆ.
05015025a ಇಷ್ಟಿಂ ಚಾಹಂ ಕರಿಷ್ಯಾಮಿ ವಿನಾಶಾಯಾಸ್ಯ ದುರ್ಮತೇಃ।
05015025c ಶಕ್ರಂ ಚಾಧಿಗಮಿಷ್ಯಾಮಿ ಮಾ ಭೈಸ್ತ್ವಂ ಭದ್ರಮಸ್ತು ತೇ।।
ಈ ದುರ್ಮತಿಯ ವಿನಾಶಕ್ಕಾಗಿ ಇಷ್ಟಿಯನ್ನು ಮಾಡುತ್ತೇನೆ. ಶಕ್ರನನ್ನೂ ಹುಡುಕುತ್ತೇನೆ. ಹೆದರಬೇಡ! ನಿನಗೆ ಮಂಗಳವಾಗಲಿ!”
05015026a ತತಃ ಪ್ರಜ್ವಾಲ್ಯ ವಿಧಿವಜ್ಜುಹಾವ ಪರಮಂ ಹವಿಃ।
05015026c ಬೃಹಸ್ಪತಿರ್ಮಹಾತೇಜಾ ದೇವರಾಜೋಪಲಬ್ಧಯೇ।।
ಆಗ ಮಹಾತೇಜಸ್ವಿ ಬೃಹಸ್ಪತಿಯು ದೇವರಾಜನನ್ನು ಪಡೆಯಲು ವಿಧಿವತ್ತಾಗಿ ಅಗ್ನಿಯನ್ನು ಪ್ರಜ್ವಲಿಸಿ ಪರಮ ಹವಿಸ್ಸನ್ನು ಯಜಿಸಿದನು.
05015027a ತಸ್ಮಾಚ್ಚ ಭಗವಾನ್ದೇವಃ ಸ್ವಯಮೇವ ಹುತಾಶನಃ।
05015027c ಸ್ತ್ರೀವೇಷಮದ್ಭುತಂ ಕೃತ್ವಾ ಸಹಸಾಂತರಧೀಯತ।।
ಆಗ ಸ್ವಯಂ ದೇವ ಭಗವಾನ್ ಹುತಾಶನನು ಅದ್ಭುತವಾದ ಸ್ತ್ರೀವೇಷವನ್ನು ಮಾಡಿಕೊಂಡು ತಕ್ಷಣ ಅಲ್ಲಿಯೇ ಅಂತರ್ಧಾನನಾದನು.
05015028a ಸ ದಿಶಃ ಪ್ರದಿಶಶ್ಚೈವ ಪರ್ವತಾಂಶ್ಚ ವನಾನಿ ಚ।
05015028c ಪೃಥಿವೀಂ ಚಾಂತರಿಕ್ಷಂ ಚ ವಿಚೀಯಾತಿಮನೋಗತಿಃ।
05015028e ನಿಮೇಷಾಂತರಮಾತ್ರೇಣ ಬೃಹಸ್ಪತಿಮುಪಾಗಮತ್।।
ಅವನು ದಿಕ್ಕುಗಳನ್ನು ಪರ್ವತಗಳನ್ನು ವನಗಳನ್ನು ಪೃಥ್ವಿ ಅಂತರಿಕ್ಷಗಳನ್ನು ಮನೋವೇಗಗತಿಯಲ್ಲಿ ಹೋಗಿ ಹುಡುಕಿದನು. ಕಣ್ಣುರೆಪ್ಪೆ ಬಡಿಯುವಷ್ಟರಲ್ಲಿ ಬೃಹಸ್ಪತಿಯಿದ್ದಲ್ಲಿಗೆ ಹಿಂದಿರುಗಿದನು.
05015029 ಅಗ್ನಿರುವಾಚ।
05015029a ಬೃಹಸ್ಪತೇ ನ ಪಶ್ಯಾಮಿ ದೇವರಾಜಮಹಂ ಕ್ವ ಚಿತ್।
05015029c ಆಪಃ ಶೇಷಾಃ ಸದಾ ಚಾಪಃ ಪ್ರವೇಷ್ಟುಂ ನೋತ್ಸಹಾಮ್ಯಹಂ।
05015029e ನ ಮೇ ತತ್ರ ಗತಿರ್ಬ್ರಹ್ಮನ್ಕಿಮನ್ಯತ್ಕರವಾಣಿ ತೇ।।
ಅಗ್ನಿಯು ಹೇಳಿದನು: “ಬೃಹಸ್ಪತೇ! ನಾನು ದೇವರಾಜನನ್ನು ಎಲ್ಲಿಯೂ ಕಾಣಲಿಲ್ಲ. ನೀರಿನಲ್ಲಿ ಹುಡುಕುವುದು ಮಾತ್ರ ಉಳಿದಿದೆ. ನೀರನ್ನು ಪ್ರವೇಶಿಸಲು ನನಗೆ ಉತ್ಸಾಹವಿಲ್ಲ. ಬ್ರಹ್ಮನ್! ಅಲ್ಲಿಗೆ ನನಗೆ ದಾರಿಯಿಲ್ಲ. ನಿನಗೆ ಇನ್ನೇನು ಮಾಡಬೇಕು?””
05015030 ಶಲ್ಯ ಉವಾಚ।
05015030a ತಮಬ್ರವೀದ್ದೇವಗುರುರಪೋ ವಿಶ ಮಹಾದ್ಯುತೇ।
ಶಲ್ಯನು ಹೇಳಿದನು: “ಅವನಿಗೆ ದೇವಗುರುವು ಹೇಳಿದನು: “ಮಹಾದ್ಯುತೇ! ನೀರನ್ನು ಪ್ರವೇಶಿಸು!”
05015031 ಅಗ್ನಿರುವಾಚ।
05015031a ನಾಪಃ ಪ್ರವೇಷ್ಟುಂ ಶಕ್ಷ್ಯಾಮಿ ಕ್ಷಯೋ ಮೇಽತ್ರ ಭವಿಷ್ಯತಿ।
05015031c ಶರಣಂ ತ್ವಾಂ ಪ್ರಪನ್ನೋಽಸ್ಮಿ ಸ್ವಸ್ತಿ ತೇಽಸ್ತು ಮಹಾದ್ಯುತೇ।।
ಅಗ್ನಿಯು ಹೇಳಿದನು: “ನೀರನ್ನು ಪ್ರವೇಶಿಸಲು ನನಗೆ ಶಕ್ಯವಿಲ್ಲ. ಅಲ್ಲಿ ನಾನು ನಾಶವಾಗುತ್ತೇನೆ. ನಿನ್ನ ಶರಣು ಹೊಗುತ್ತೇನೆ. ಮಹಾದ್ಯುತೇ! ನಿನಗೆ ಮಂಗಳವಾಗಲಿ!
05015032a ಅದ್ಭ್ಯೋಽಗ್ನಿರ್ಬ್ರಹ್ಮತಃ ಕ್ಷತ್ರಮಶ್ಮನೋ ಲೋಹಮುತ್ಥಿತಂ।
05015032c ತೇಷಾಂ ಸರ್ವತ್ರಗಂ ತೇಜಃ ಸ್ವಾಸು ಯೋನಿಷು ಶಾಮ್ಯತಿ।।
ನೀರಿನಿಂದ ಅಗ್ನಿಯು ಉದ್ಭವಿಸಿದೆ; ಕಲ್ಲಿನಿಂದ ಲೋಹವು ಹುಟ್ಟಿತು. ಎಲ್ಲೆಡೆಯೂ ಹೋಗಬಲ್ಲ ಅವರ ತೇಜಸ್ಸು ಅವು ಎಲ್ಲಿಂದ ಹುಟ್ಟಿಬಂದವೋ ಅಲ್ಲಿ ಶಮಿಸಿಹೋಗುತ್ತದೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಬೃಹಸ್ಪತ್ಯಗ್ನಿಸಂವಾದೇ ಪಂಚದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಬೃಹಸ್ಪತ್ಯಗ್ನಿಸಂವಾದದಲ್ಲಿ ಹದಿನೈದನೆಯ ಅಧ್ಯಾಯವು।