014 ಇಂದ್ರಾಣೀಂದ್ರಸ್ತವಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ

ಉದ್ಯೋಗ ಪರ್ವ

ಅಧ್ಯಾಯ 14

ಸಾರ

ಉಪಶ್ರುತಿಯ ಸಹಾಯದಿಂದ ಶಚಿಯು ಸರೋವರವೊಂದರ ಪದ್ಮದ ನಾಲದ ತಂತುವಿನಲ್ಲಿ ಸೂಕ್ಷ್ಮನಾಗಿ ಅಡಗಿಕೊಂಡಿದ್ದ ಇಂದ್ರನನ್ನು ನೋಡಿ ಸ್ತುತಿಸಿದುದು (1-11). ನಹುಷನನ್ನು ಗೆಲ್ಲಲು ಇಂದ್ರನನ್ನು ಪ್ರಚೋದಿಸಿದುದು (12-15).

05014001 ಶಲ್ಯ ಉವಾಚ।
05014001a ಅಥೈನಾಂ ರುಪಿಣೀಂ ಸಾಧ್ವೀಮುಪಾತಿಷ್ಠದುಪಶ್ರುತಿಃ।
05014001c ತಾಂ ವಯೋರೂಪಸಂಪನ್ನಾಂ ದೃಷ್ಟ್ವಾ ದೇವೀಮುಪಸ್ಥಿತಾಂ।।
05014002a ಇಂದ್ರಾಣೀ ಸಂಪ್ರಹೃಷ್ಟಾ ಸಾ ಸಂಪೂಜ್ಯೈನಾಮಪೃಚ್ಚತ।
05014002c ಇಚ್ಚಾಮಿ ತ್ವಾಮಹಂ ಜ್ಞಾತುಂ ಕಾ ತ್ವಂ ಬ್ರೂಹಿ ವರಾನನೇ।।

ಶಲ್ಯನು ಹೇಳಿದನು: “ಆಗ ದೇವೀ ಉಪಶ್ರುತಿಯು ಸಾಧ್ವೀ ರೂಪಿಣಿ ವಯೋರೂಪಸಂಪನ್ನೆಯನ್ನು ನೋಡಿ ಅವಳ ಉಪಸ್ಥಿತಿಯಲ್ಲಿ ಬಂದಳು. ಸಂತೋಷಗೊಂಡ ಇಂದ್ರಾಣಿಯು ಅವಳನ್ನು ಪೂಜಿಸಿ ಹೇಳಿದಳು: “ವರಾನನೇ! ನೀನು ಯಾರೆಂದು ತಿಳಿಯಲು ಇಚ್ಛಿಸುತ್ತೇನೆ. ಹೇಳು.”

05014003 ಉಪಶ್ರುತಿರುವಾಚ।
05014003a ಉಪಶ್ರುತಿರಹಂ ದೇವಿ ತವಾಂತಿಕಮುಪಾಗತಾ।
05014003c ದರ್ಶನಂ ಚೈವ ಸಂಪ್ರಾಪ್ತಾ ತವ ಸತ್ಯೇನ ತೋಷಿತಾ।।

ಉಪಶ್ರುತಿಯು ಹೇಳಿದಳು: “ದೇವಿ! ನಿನ್ನ ಬಳಿ ಬಂದಿರುವ ನಾನು ಉಪಶ್ರುತಿ. ಸತ್ಯನಿರತಳಾದ ನಿನಗೆ ದರ್ಶನವನ್ನಿತ್ತಿದ್ದೇನೆ.

05014004a ಪತಿವ್ರತಾಸಿ ಯುಕ್ತಾ ಚ ಯಮೇನ ನಿಯಮೇನ ಚ।
05014004c ದರ್ಶಯಿಷ್ಯಾಮಿ ತೇ ಶಕ್ರಂ ದೇವಂ ವೃತ್ರನಿಷೂದನಂ।
05014004e ಕ್ಷಿಪ್ರಮನ್ವೇಹಿ ಭದ್ರಂ ತೇ ದ್ರಕ್ಷ್ಯಸೇ ಸುರಸತ್ತಮಂ।।

ಯಮ-ನಿಯಮಗಳಿಂದ ಯುಕ್ತಳಾಗಿ ಪತಿವ್ರತೆಯಾಗಿದ್ದೀಯೆ. ನಿನಗೆ ವೃತ್ರನಿಷೂದನ ದೇವ ಶಕ್ರನನ್ನು ತೋರಿಸುತ್ತೇನೆ. ನಿನಗೆ ಮಂಗಳವಾಗಲಿ! ಬೇಗನೆ ನನ್ನನ್ನು ಹಿಂಬಾಲಿಸಿ ಬಾ. ಸುರಸತ್ತಮನನ್ನು ನೋಡುವಿಯಂತೆ.””

05014005 ಶಲ್ಯ ಉವಾಚ।
05014005a ತತಸ್ತಾಂ ಪ್ರಸ್ಥಿತಾಂ ದೇವೀಮಿಂದ್ರಾಣೀ ಸಾ ಸಮನ್ವಗಾತ್।
05014005c ದೇವಾರಣ್ಯಾನ್ಯತಿಕ್ರಮ್ಯ ಪರ್ವತಾಂಶ್ಚ ಬಹೂಂಸ್ತತಃ।
05014005e ಹಿಮವಂತಮತಿಕ್ರಮ್ಯ ಉತ್ತರಂ ಪಾರ್ಶ್ವಮಾಗಮತ್।।

ಶಲ್ಯನು ಹೇಳಿದನು: “ಆಗ ಅವಳು ಹೊರಡಲು, ದೇವೀ ಇಂದ್ರಾಣಿಯು ಅವಳನ್ನು ಅನುಸರಿಸಿದಳು. ಅವಳು ದೇವಾರಣ್ಯವನ್ನೂ ಬಹಳಷ್ಟು ಪರ್ವತಗಳನ್ನೂ ದಾಟಿ ಹಿಮವಂತವನ್ನು ಅತಿಕ್ರಮಿಸಿ ಉತ್ತರದ ಕಡೆ ಬಂದಳು.

05014006a ಸಮುದ್ರಂ ಚ ಸಮಾಸಾದ್ಯ ಬಹುಯೋಜನವಿಸ್ತೃತಂ।
05014006c ಆಸಸಾದ ಮಹಾದ್ವೀಪಂ ನಾನಾದ್ರುಮಲತಾವೃತಂ।।

ಸಮುದ್ರವನ್ನೂ ತಲುಪಿ ಅಲ್ಲಿ ಬಹುಯೋಜನ ವಿಸ್ತಾರವಾದ ನಾನಾ ದ್ರುಮಲತೆಗಳಿಂದ ತುಂಬಿದ್ದ ಮಹಾದ್ವೀಪವನ್ನು ತಲುಪಿದರು.

05014007a ತತ್ರಾಪಶ್ಯತ್ಸರೋ ದಿವ್ಯಂ ನಾನಾಶಕುನಿಭಿರ್ವೃತಂ।
05014007c ಶತಯೋಜನವಿಸ್ತೀರ್ಣಂ ತಾವದೇವಾಯತಂ ಶುಭಂ।।

ಅಲ್ಲಿ ನಾನಾ ಪಕ್ಷಿಗಳಿಂದ ತುಂಬಿದ್ದ ಶತಯೋಜನ ವಿಸ್ತೀರ್ಣದ ಅಷ್ಟೇ ಅಗಲವಾಗಿದ್ದ ದಿವ್ಯ ಶುಭ ಸರೋವರವನ್ನು ಕಂಡರು.

05014008a ತತ್ರ ದಿವ್ಯಾನಿ ಪದ್ಮಾನಿ ಪಂಚವರ್ಣಾನಿ ಭಾರತ।
05014008c ಷಟ್ಪದೈರುಪಗೀತಾನಿ ಪ್ರಫುಲ್ಲಾನಿ ಸಹಸ್ರಶಃ।।

ಭಾರತ! ಅಲ್ಲಿ ಐದು ಬಣ್ಣಗಳ, ಅರಳಿದ, ಸಾವಿರಾರು ದಿವ್ಯ ಪದ್ಮಗಳು, ದುಂಬಿಗಳ ಗೀತೆಗಳೊಂದಿಗೆ ಇದ್ದವು.

05014009a ಪದ್ಮಸ್ಯ ಭಿತ್ತ್ವಾ ನಾಲಂ ಚ ವಿವೇಶ ಸಹಿತಾ ತಯಾ।
05014009c ಬಿಸತಂತುಪ್ರವಿಷ್ಟಂ ಚ ತತ್ರಾಪಶ್ಯಚ್ಚತಕ್ರತುಂ।।

ಪದ್ಮದ ನಾಲವನ್ನು ಸೀಳಿ ಅವಳೊಂದಿಗೆ ಪ್ರವೇಶಿಸಿದಳು ಮತ್ತು ಅಲ್ಲಿ ತಂತುವಿನಲ್ಲಿ ಅಡಗಿದ್ದ ಶತಕ್ರತುವನ್ನು ನೋಡಿದಳು.

05014010a ತಂ ದೃಷ್ಟ್ವಾ ಚ ಸುಸೂಕ್ಷ್ಮೇಣ ರೂಪೇಣಾವಸ್ಥಿತಂ ಪ್ರಭುಂ।
05014010c ಸೂಕ್ಷ್ಮರೂಪಧರಾ ದೇವೀ ಬಭೂವೋಪಶ್ರುತಿಶ್ಚ ಸಾ।।

ಅತಿ ಸೂಕ್ಷ್ಮ ರೂಪಾವಸ್ಥೆಯಲ್ಲಿದ್ದ ಪ್ರಭುವನ್ನು ನೋಡಿ ದೇವಿ ಮತ್ತು ಉಪಶ್ರುತಿಯರು ಸೂಕ್ಷ್ಮರೂಪಗಳನ್ನು ಧರಿಸಿದರು.

05014011a ಇಂದ್ರಂ ತುಷ್ಟಾವ ಚೇಂದ್ರಾಣೀ ವಿಶ್ರುತೈಃ ಪೂರ್ವಕರ್ಮಭಿಃ।
05014011c ಸ್ತೂಯಮಾನಸ್ತತೋ ದೇವಃ ಶಚೀಮಾಹ ಪುರಂದರಃ।।

ಆಗ ಇಂದ್ರಾಣಿಯು ಅವನ ವಿಶೃತ ಪೂರ್ವಕರ್ಮಗಳಿಂದ ಅವನನ್ನು ಸ್ತುತಿಸಿದಳು. ಈ ರೀತಿ ಸ್ತುತಿಸಲ್ಪಡಲು ದೇವ ಪುರಂದರನು ಶಚಿಗೆ ಹೇಳಿದನು.

05014012a ಕಿಮರ್ಥಮಸಿ ಸಂಪ್ರಾಪ್ತಾ ವಿಜ್ಞಾತಶ್ಚ ಕಥಂ ತ್ವಹಂ।
05014012c ತತಃ ಸಾ ಕಥಯಾಮಾಸ ನಹುಷಸ್ಯ ವಿಚೇಷ್ಟಿತಂ।।

“ಇಲ್ಲಿಗೆ ಏಕೆ ಬಂದಿರುವೆ? ನನ್ನನ್ನು ಹೇಗೆ ಹುಡುಕಿದೆ?” ಆಗ ಅವಳು ನಹುಷನು ಮಾಡಿದುದರ ಕುರಿತು ಹೇಳಿದಳು.

05014013a ಇಂದ್ರತ್ವಂ ತ್ರಿಷು ಲೋಕೇಷು ಪ್ರಾಪ್ಯ ವೀರ್ಯಮದಾನ್ವಿತಃ।
05014013c ದರ್ಪಾವಿಷ್ಟಶ್ಚ ದುಷ್ಟಾತ್ಮಾ ಮಾಮುವಾಚ ಶತಕ್ರತೋ।
05014013e ಉಪತಿಷ್ಠ ಮಾಮಿತಿ ಕ್ರೂರಃ ಕಾಲಂ ಚ ಕೃತವಾನ್ಮಮ।।

“ಶತಕ್ರತೋ! ಮೂರು ಲೋಕಗಳ ಇಂದ್ರತ್ವವನ್ನು ಪಡೆದು ವೀರ್ಯಮದಾನ್ವಿತನೂ ದರ್ಪಭರಿತನೂ ಆಗಿ ಆ ದುಷ್ಟಾತ್ಮನು ನನ್ನನ್ನು ಕೂಡು ಎಂದು ಕ್ರೂರವಾಗಿ ಆಡಿದನು ಮತ್ತು ನನಗೆ ಸಮಯವನ್ನೂ ನಿರ್ದಿಷ್ಟಪಡಿಸಿದ್ದಾನೆ.

05014014a ಯದಿ ನ ತ್ರಾಸ್ಯಸಿ ವಿಭೋ ಕರಿಷ್ಯತಿ ಸ ಮಾಂ ವಶೇ।
05014014c ಏತೇನ ಚಾಹಂ ಸಂತಪ್ತಾ ಪ್ರಾಪ್ತಾ ಶಕ್ರ ತವಾಂತಿಕಂ।
05014014e ಜಹಿ ರೌದ್ರಂ ಮಹಾಬಾಹೋ ನಹುಷಂ ಪಾಪನಿಶ್ಚಯಂ।।

ವಿಭೋ! ನನ್ನನ್ನು ರಕ್ಷಿಸದೇ ಇದ್ದರೆ ಅವನು ನನ್ನನ್ನು ವಶಪಡಿಸಿಕೊಳ್ಳುತ್ತಾನೆ. ಶಕ್ರ! ಈ ಕಾರಣದಿಂದಲೇ ನಾನು ನಿನ್ನ ಬಳಿ ಬಂದಿದ್ದೇನೆ. ಮಹಾಬಾಹೋ! ರೌದ್ರನಾದ ಪಾಪನಿಶ್ಚಯ ನಹುಷನನ್ನು ಗೆಲ್ಲು.

05014015a ಪ್ರಕಾಶಯಸ್ವ ಚಾತ್ಮಾನಂ ದೈತ್ಯದಾನವಸೂದನ।
05014015c ತೇಜಃ ಸಮಾಪ್ನುಹಿ ವಿಭೋ ದೇವರಾಜ್ಯಂ ಪ್ರಶಾಧಿ ಚ।।

ದೈತ್ಯದಾನವಸೂದನ! ನಿನ್ನನ್ನು ತೋರಿಸಿಕೋ! ವಿಭೋ! ತೇಜಸ್ಸನ್ನು ತಳೆದು ದೇವರಾಜ್ಯವನ್ನಾಳು!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉದ್ಯೋಗ ಪರ್ವಣಿ ಇಂದ್ರಾಣೀಂದ್ರಸ್ತವೇ ಚತುರ್ದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉದ್ಯೋಗ ಪರ್ವದಲ್ಲಿ ಇಂದ್ರಾಣೀಂದ್ರಸ್ತವದಲ್ಲಿ ಹದಿನಾಲ್ಕನೆಯ ಅಧ್ಯಾಯವು।