028 ಕೃಪವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ವಿರಾಟ ಪರ್ವ

ಗೋಹರಣ ಪರ್ವ

ಅಧ್ಯಾಯ 28

ಸಾರ

ನಿನ್ನ ಬಲವನ್ನೂ ಕೋಶವನ್ನೂ ನೀತಿಯನ್ನೂ ನಿರ್ಧರಿಸಿಕೋ; ಅವರ ಉದಯಕಾಲ ಬಂದಾಗ ಅವರೊಡನೆ ಅನುಕೂಲವಾದ ಸಂಧಿಯನ್ನು ಮಾಡಿಕೊಳ್ಳೋಣವೆಂದು ಕೃಪನು ಸಲಹೆನೀಡುವುದು (1-14).

04028001 ವೈಶಂಪಾಯನ ಉವಾಚ।
04028001a ತತಃ ಶಾರದ್ವತೋ ವಾಕ್ಯಮಿತ್ಯುವಾಚ ಕೃಪಸ್ತದಾ।
04028001c ಯುಕ್ತಂ ಪ್ರಾಪ್ತಂ ಚ ವೃದ್ಧೇನ ಪಾಂಡವಾನ್ಪ್ರತಿ ಭಾಷಿತಂ।।
04028002a ಧರ್ಮಾರ್ಥಸಹಿತಂ ಶ್ಲಕ್ಷ್ಣಂ ತತ್ತ್ವತಶ್ಚ ಸಹೇತುಮತ್।
04028002c ತತ್ರಾನುರೂಪಂ ಭೀಷ್ಮೇಣ ಮಮಾಪ್ಯತ್ರ ಗಿರಂ ಶೃಣು।।

ವೈಶಂಪಾಯನನು ಹೇಳಿದನು: “ಅನಂತರ ಶಾರದ್ವತ ಕೃಪನು ಹೀಗೆ ನುಡಿದನು - “ಹಿರಿಯನಾದ ಭೀಷ್ಮನು ಪಾಂಡವರ ವಿಷಯದಲ್ಲಿ ಹೇಳಿದ್ದುದು ಯುಕ್ತವೂ, ಸಂದರ್ಭೋಚಿತವೂ, ಧರ್ಮಾರ್ಥಸಹಿತವೂ, ಸುಂದರವೂ, ತಾತ್ವಿಕವೂ, ಸಕಾರಣವೂ, ಅವನಿಗೆ ತಕ್ಕದ್ದೂ ಆಗಿದೆ. ಇದರ ಬಗ್ಗೆ ನನ್ನ ಮಾತನ್ನೂ ಕೇಳು.

04028003a ತೇಷಾಂ ಚೈವ ಗತಿಸ್ತೀರ್ಥೈರ್ವಾಸಶ್ಚೈಷಾಂ ಪ್ರಚಿಂತ್ಯತಾಂ।
04028003c ನೀತಿರ್ವಿಧೀಯತಾಂ ಚಾಪಿ ಸಾಂಪ್ರತಂ ಯಾ ಹಿತಾ ಭವೇತ್।।

ಅವರ ಜಾಡು, ನಿವಾಸದ ಕುರಿತು ಹಿರಿಯರೊಡನೆ ಸಮಾಲೋಚಿಸಬೇಕು. ಹಿತಕರವಾಗುವ ನೀತಿಯನ್ನೀಗ ಅನುಸರಿಸಬೇಕು.

04028004a ನಾವಜ್ಞೇಯೋ ರಿಪುಸ್ತಾತ ಪ್ರಾಕೃತೋಽಪಿ ಬುಭೂಷತಾ।
04028004c ಕಿಂ ಪುನಃ ಪಾಂಡವಾಸ್ತಾತ ಸರ್ವಾಸ್ತ್ರಕುಶಲಾ ರಣೇ।।

ಅಯ್ಯಾ! ಶತ್ರುವು ಸಾಮಾನ್ಯನಾದರೂ, ಅಭ್ಯುದಯಾಕಾಂಕ್ಷಿಗಳು ಅವನನ್ನು ಅಲಕ್ಷಿಸಬಾರದು. ಇನ್ನು ಯುದ್ಧದಲ್ಲಿ ಸರ್ವಾಸ್ತ್ರಕುಶಲರಾದ ಪಾಂಡವರನ್ನು ಅಲಕ್ಷಿಸುವುದೇ?

04028005a ತಸ್ಮಾತ್ಸತ್ರಂ ಪ್ರವಿಷ್ಟೇಷು ಪಾಂಡವೇಷು ಮಹಾತ್ಮಸು।
04028005c ಗೂಢಭಾವೇಷು ಚನ್ನೇಷು ಕಾಲೇ ಚೋದಯಮಾಗತೇ।।
04028006a ಸ್ವರಾಷ್ಟ್ರಪರರಾಷ್ಟ್ರೇಷು ಜ್ಞಾತವ್ಯಂ ಬಲಮಾತ್ಮನಃ।
04028006c ಉದಯೇ ಪಾಂಡವಾನಾಂ ಚ ಪ್ರಾಪ್ತೇ ಕಾಲೇ ನ ಸಂಶಯಃ।।

ಆದ್ದರಿಂದ, ಮಹಾತ್ಮ ಪಾಂಡವರು ವೇಷ ಮರೆಸಿಕೊಂಡು, ಗೂಢವಾಗಿ ಅಡಗಿರಲು ಹಾಗೂ ಅವರ ಅಭ್ಯುದಯ ಕಾಲವು ಬಂದಿರಲು, ಸ್ವರಾಷ್ಟ್ರದಲ್ಲೂ ಪರರಾಷ್ಟ್ರದಲ್ಲೂ ನಿನಗಿರುವ ಬಲವನ್ನು ತಿಳಿದುಕೊಳ್ಳಬೇಕು. ಒಳ್ಳೆಯ ಕಾಲ ಒದಗಿ ಬಂದಾಗ ಪಾಂಡವರು ಏಳಿಗೆ ಹೊಂದುವುದರಲ್ಲಿ ಸಂಶಯವಿಲ್ಲ.

04028007a ನಿವೃತ್ತಸಮಯಾಃ ಪಾರ್ಥಾ ಮಹಾತ್ಮಾನೋ ಮಹಾಬಲಾಃ।
04028007c ಮಹೋತ್ಸಾಹಾ ಭವಿಷ್ಯಂತಿ ಪಾಂಡವಾ ಹ್ಯತಿತೇಜಸಃ।।

ಪ್ರತಿಜ್ಞೆಯನ್ನು ಪೂರೈಸಿದ ಮಹಾತ್ಮರೂ ಮಹಾಬಲರೂ ಆದ ಪಾಂಡವರು ನಿಸ್ಸಂಶಯವಾಗಿ ಮಹೋತ್ಸಾಹಶಾಲಿಗಳೂ ಅತಿ ತೇಜಸ್ವಿಗಳೂ ಆಗಿಬಿಡುತ್ತಾರೆ.

04028008a ತಸ್ಮಾದ್ಬಲಂ ಚ ಕೋಶಂ ಚ ನೀತಿಶ್ಚಾಪಿ ವಿಧೀಯತಾಂ।
04028008c ಯಥಾ ಕಾಲೋದಯೇ ಪ್ರಾಪ್ತೇ ಸಮ್ಯಕ್ತೈಃ ಸಂದಧಾಮಹೇ।।

ಅದ್ದರಿಂದ ನಿನ್ನ ಬಲವನ್ನೂ ಕೋಶವನ್ನೂ ನೀತಿಯನ್ನೂ ನಿರ್ಧರಿಸಿಕೋ; ಅವರ ಉದಯಕಾಲ ಬಂದಾಗ ಅವರೊಡನೆ ಅನುಕೂಲವಾದ ಸಂಧಿಯನ್ನು ಮಾಡಿಕೊಳ್ಳೋಣ.

04028009a ತಾತ ಮನ್ಯಾಮಿ ತತ್ಸರ್ವಂ ಬುಧ್ಯಸ್ವ ಬಲಮಾತ್ಮನಃ।
04028009c ನಿಯತಂ ಸರ್ವಮಿತ್ರೇಷು ಬಲವತ್ಸ್ವಬಲೇಷು ಚ।।

ಅಯ್ಯಾ! ಬಲಶಾಲಿಗಳೂ ಅಬಲರೂ ಆದ ಎಲ್ಲ ಮಿತ್ರರಲ್ಲಿ ನಿನಗಿರುವ ಬಲವನ್ನೆಲ್ಲ ನೀನು ಖಚಿತವಾಗಿ ತಿಳಿದುಕೊಳ್ಳಬೇಕೆಂದು ಭಾವಿಸುತ್ತೇನೆ.

04028010a ಉಚ್ಚಾವಚಂ ಬಲಂ ಜ್ಞಾತ್ವಾ ಮಧ್ಯಸ್ಥಂ ಚಾಪಿ ಭಾರತ।
04028010c ಪ್ರಹೃಷ್ಟಮಪ್ರಹೃಷ್ಟಂ ಚ ಸಂದಧಾಮ ತಥಾ ಪರೈಃ।।

ಭಾರತ! ನಿನ್ನ ಸೈನ್ಯ ಉತ್ತಮವಾಗಿದೆಯೋ, ಮಧ್ಯಸ್ಥವಾಗಿದೆಯೋ, ಅಧಮವಾಗಿದೆಯೋ, ಸಂತುಷ್ಟವಾಗಿದೆಯೋ, ಅಸಂತುಷ್ಟವಾಗಿದೆಯೋ, ಎಂಬುದನ್ನು ತಿಳಿದುಕೊಂಡು ಅನಂತರ ಶತ್ರುಗಳೊಡನೆ ಸಂಧಿ ಮಾಡಿಕೊಳ್ಳೋಣ.

04028011a ಸಾಮ್ನಾ ಭೇದೇನ ದಾನೇನ ದಂಡೇನ ಬಲಿಕರ್ಮಣಾ।
04028011c ನ್ಯಾಯೇನಾನಮ್ಯ ಚ ಪರಾನ್ಬಲಾಚ್ಚಾನಮ್ಯ ದುರ್ಬಲಾನ್।।
04028012a ಸಾಂತ್ವಯಿತ್ವಾ ಚ ಮಿತ್ರಾಣಿ ಬಲಂ ಚಾಭಾಷ್ಯತಾಂ ಸುಖಂ।
04028012c ಸಕೋಶಬಲಸಂವೃದ್ಧಃ ಸಮ್ಯಕ್ಸಿದ್ಧಿಮವಾಪ್ಸ್ಯಸಿ।।

ಸಾಮ, ಭೇದ, ದಾನ, ದಂಡಗಳಿಂದ, ಕಾಣಿಕೆಗಳಿಂದ, ನ್ಯಾಯದಿಂದ, ವೈರಿಗಳನ್ನು ಮಣಿಸಿ, ಬಲಪ್ರಯೋಗದಿಂದ ದುರ್ಬರಲನ್ನು ಮಣಿಸಿ, ಮಿತ್ರರನ್ನು ತೃಪ್ತಿಗೊಳಿಸಿ, ಸೈನ್ಯದೊಡನೆ ಸವಿನುಡಿಗಳನ್ನಾಡಿದರೆ ನಿನ್ನ ಕೋಶ-ಬಲಗಳು ವೃದ್ಧಿಸಿ ನೀನು ಉತ್ತಮ ಸಿದ್ಧಿಯನ್ನು ಪಡೆಯುವೆ.

04028013a ಯೋತ್ಸ್ಯಸೇ ಚಾಪಿ ಬಲಿಭಿರರಿಭಿಃ ಪ್ರತ್ಯುಪಸ್ಥಿತೈಃ।
04028013c ಅನ್ಯೈಸ್ತ್ವಂ ಪಾಂಡವೈರ್ವಾಪಿ ಹೀನಸ್ವಬಲವಾಹನೈಃ।।

ಹೀಗೆ ಮಾಡಿದಲ್ಲಿ ಎದುರುಬಿದ್ದ ಬಲಶಾಲಿ ಅನ್ಯ ಶತ್ರುಗಳೊಡನಾಗಲಿ ಸ್ವಸೈನ್ಯ ವಾಹನಗಳಿಲ್ಲದ ಪಾಂಡವರೊಡನಾಗಲಿ ನೀನು ಹೋರಾಡಬಲ್ಲೆ.

04028014a ಏವಂ ಸರ್ವಂ ವಿನಿಶ್ಚಿತ್ಯ ವ್ಯವಸಾಯಂ ಸ್ವಧರ್ಮತಃ।
04028014c ಯಥಾಕಾಲಂ ಮನುಷ್ಯೇಂದ್ರ ಚಿರಂ ಸುಖಮವಾಪ್ಸ್ಯಸಿ।।

ರಾಜ! ಹೀಗೆ ಸ್ವಧರ್ಮಾನುಸಾರವಾಗಿ ಕಾಲೋಚಿತವಾಗಿ ನಿಶ್ಚಯಿಸಿ ಎಲ್ಲ ಕಾರ್ಯವನ್ನೂ ಮಾಡಿದರೆ ನೀನು ಶಾಶ್ವತವಾದ ಸುಖವನ್ನು ಪಡೆಯುವೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಕೃಪವಾಕ್ಯೇ ಅಷ್ಟವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಕೃಪವಾಕ್ಯದಲ್ಲಿ ಇಪ್ಪತ್ತೆಂಟನೆಯ ಅಧ್ಯಾಯವು.