ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಕುಂಡಲಾಹರಣ ಪರ್ವ
ಅಧ್ಯಾಯ 291
ಸಾರ
ಕುಂತಿಯನ್ನು ಸೇರಿ ಅವಳಿಗೆ ಗರ್ಭವನ್ನಿತ್ತು ಸೂರ್ಯನು ಅಂತರ್ಧಾನನಾದುದು (1-26).
03291001 ವೈಶಂಪಾಯನ ಉವಾಚ।
03291001a ಸಾ ತು ಕನ್ಯಾ ಬಹುವಿಧಂ ಬ್ರುವಂತೀ ಮಧುರಂ ವಚಃ।
03291001c ಅನುನೇತುಂ ಸಹಸ್ರಾಂಶುಂ ನ ಶಶಾಕ ಮನಸ್ವಿನೀ।।
ವೈಶಂಪಾಯನನು ಹೇಳಿದನು: “ಆ ಮನಸ್ವಿನಿ ಕನ್ಯೆಯಾದರೋ ಬಹುವಿಧವಾಗಿ ಮಧುರ ವಚನಗಳಿಂದ ಮಾತನಾಡಿದರೂ ಸಹಸ್ರಾಂಶುವನ್ನು ಹಿಂದೆ ಕಳುಹಿಸಲು ಶಕ್ಯಳಾಗಲಿಲ್ಲ.
03291002a ನ ಶಶಾಕ ಯದಾ ಬಾಲಾ ಪ್ರತ್ಯಾಖ್ಯಾತುಂ ತಮೋನುದಂ।
03291002c ಭೀತಾ ಶಾಪಾತ್ತತೋ ರಾಜನ್ದಧ್ಯೌ ದೀರ್ಘಮಥಾಂತರಂ।।
ರಾಜನ್! ಅವನನ್ನು ಹಿಂದೆ ಕಳುಹಿಸಲು ಅಶಕ್ಯಳಾದ ಬಾಲಕಿಯು ಶಾಪದಿಂದ ಭೀತಳಾಗಿ ಬಹಳ ಸಮಯದ ನಂತರ ಒಂದು ಉಪಾಯವನ್ನು ಕಂಡುಕೊಂಡಳು.
03291003a ಅನಾಗಸಃ ಪಿತುಃ ಶಾಪೋ ಬ್ರಾಹ್ಮಣಸ್ಯ ತಥೈವ ಚ।
03291003c ಮನ್ನಿಮಿತ್ತಃ ಕಥಂ ನ ಸ್ಯಾತ್ಕ್ರುದ್ಧಾದಸ್ಮಾದ್ವಿಭಾವಸೋಃ।।
“ನನ್ನ ಕಾರಣದಿಂದ ವಿಭಾವಸುವಿನ ಕೋಪದಿಂದ ಅನಾಗಸ ತಂದೆ ಮತ್ತು ಆ ಬ್ರಾಹ್ಮಣರು ಶಾಪಹೊಂದದಂತೆ ತಡೆಯಲು ಏನು ಮಾಡಲಿ?
03291004a ಬಾಲೇನಾಪಿ ಸತಾ ಮೋಹಾದ್ಭೃಶಂ ಸಾಪಹ್ನವಾನ್ಯಪಿ।
03291004c ನಾತ್ಯಾಸಾದಯಿತವ್ಯಾನಿ ತೇಜಾಂಸಿ ಚ ತಪಾಂಸಿ ಚ।।
ಬಾಲೆಯಾಗಿದ್ದರೂ, ಸತ್ಪುರುಷರ ತೇಜಸ್ಸು-ತಪಸ್ಸುಗಳು ಬಹಿರಂಗವಾಗಿದ್ದರೂ ಮೋಹದಿಂದ ಅವುಗಳನ್ನು ಮುಟ್ಟಲು ಹೋಗಬಾರದು.
03291005a ಸಾಹಮದ್ಯ ಭೃಶಂ ಭೀತಾ ಗೃಹೀತಾ ಚ ಕರೇ ಭೃಶಂ।
03291005c ಕಥಂ ತ್ವಕಾರ್ಯಂ ಕುರ್ಯಾಂ ವೈ ಪ್ರದಾನಂ ಹ್ಯಾತ್ಮನಃ ಸ್ವಯಂ।।
ಇಂದು ನನ್ನ ಕೈಯನ್ನು ಅವನು ಗಟ್ಟಿಯಾಗಿ ಹಿಡಿದುಕೊಂಡಿದ್ದುದರಿಂದ ನಾನು ತುಂಬಾ ಭಯಭೀತಳಾಗಿದ್ದೇನೆ. ನನ್ನನ್ನು ನಾನೇ ಕೊಟ್ಟು ಹೇಗೆ ಈ ಅಕಾರ್ಯವನ್ನು ಮಾಡಲಿ?”
03291006a ಸೈವಂ ಶಾಪಪರಿತ್ರಸ್ತಾ ಬಹು ಚಿಂತಯತೀ ತದಾ।
03291006c ಮೋಹೇನಾಭಿಪರೀತಾಂಗೀ ಸ್ಮಯಮಾನಾ ಪುನಃ ಪುನಃ।।
ಶಾಪಕ್ಕೆ ತುಂಬಾ ಹೆದರಿ ಬಹಳ ಚಿಂತಿಸುತ್ತಿದ್ದ ಅವಳು ಮೋಹದಿಂದ ದೇಹವು ನಡುಗುತ್ತಿರಲು ಪುನಃ ಪುನಃ ಮುಗುಳ್ನಗುತ್ತಿದ್ದಳು.
03291007a ತಂ ದೇವಮಬ್ರವೀದ್ಭೀತಾ ಬಂಧೂನಾಂ ರಾಜಸತ್ತಮ।
03291007c ವ್ರೀಡಾವಿಹ್ವಲಯಾ ವಾಚಾ ಶಾಪತ್ರಸ್ತಾ ವಿಶಾಂ ಪತೇ।।
ರಾಜಸತ್ತಮ! ವಿಶಾಂಪತೇ! ಅವಳು ಬಂಧುಗಳಿಗೆ ಹೆದರಿ ದೇವನಿಗೆ ನಾಚಿ, ವಿಹ್ವಲಳಾಗಿ ಶಾಪಕ್ಕೆ ಹೆದರಿ ಈ ಮಾತುಗಳನ್ನು ಹೇಳಿದಳು.
03291008 ಕುಂತ್ಯುವಾಚ।
03291008a ಪಿತಾ ಮೇ ಧ್ರಿಯತೇ ದೇವ ಮಾತಾ ಚಾನ್ಯೇ ಚ ಬಾಂಧವಾಃ।
03291008c ನ ತೇಷು ಧ್ರಿಯಮಾಣೇಷು ವಿಧಿಲೋಪೋ ಭವೇದಯಂ।।
ಕುಂತಿಯು ಹೇಳಿದಳು: “ದೇವ! ನನ್ನ ತಂದೆಯೂ ತಾಯಿಯೂ ಮತ್ತು ಇತರ ಬಾಂಧವರೂ ಜೀವಿಸಿದ್ದಾರೆ. ಅವರು ಜೀವಿಸಿರುವಾಗ ಈ ವಿಧಿಲೋಪವು ಆಗಕೂಡದು.
03291009a ತ್ವಯಾ ಮೇ ಸಂಗಮೋ ದೇವ ಯದಿ ಸ್ಯಾದ್ವಿಧಿವರ್ಜಿತಃ।
03291009c ಮನ್ನಿಮಿತ್ತಂ ಕುಲಸ್ಯಾಸ್ಯ ಲೋಕೇ ಕೀರ್ತಿರ್ನಶೇತ್ತತಃ।।
ದೇವ! ಒಂದುವೇಳೆ ನನ್ನ ಮತ್ತು ನಿನ್ನ ಸಂಗಮವು ವಿಧಿವರ್ಜಿತವಾಗಿದ್ದರೆ ನನ್ನ ಕಾರಣದಿಂದ ಲೋಕದಲ್ಲಿ ಈ ಕುಲದ ಕೀರ್ತಿಯು ನಾಶವಾಗುತ್ತದೆ.
03291010a ಅಥ ವಾ ಧರ್ಮಮೇತಂ ತ್ವಂ ಮನ್ಯಸೇ ತಪತಾಂ ವರ।
03291010c ಋತೇ ಪ್ರದಾನಾದ್ಬಂಧುಭ್ಯಸ್ತವ ಕಾಮಂ ಕರೋಮ್ಯಹಂ।।
ಅಥವಾ ತಪಸ್ವಿಗಳಲ್ಲಿ ಶ್ರೇಷ್ಠನೇ! ಇದು ಧರ್ಮವೆಂದೇ ನೀನು ತಿಳಿದರೆ ನನ್ನ ಬಂಧುಗಳಿಂದ ಕೊಡಲ್ಪಡದೇ ನಿನಗಿಷ್ಟವಾದುದನ್ನು ಮಾಡುತ್ತೇನೆ.
03291011a ಆತ್ಮಪ್ರದಾನಂ ದುರ್ಧರ್ಷ ತವ ಕೃತ್ವಾ ಸತೀ ತ್ವಹಂ।
03291011c ತ್ವಯಿ ಧರ್ಮೋ ಯಶಶ್ಚೈವ ಕೀರ್ತಿರಾಯುಶ್ಚ ದೇಹಿನಾಂ।।
ದುರ್ದರ್ಷ! ನಾನು ನಿನಗೆ ನನ್ನನ್ನು ಕೊಟ್ಟುಕೊಂಡರೂ ಸತಿಯಾಗಿಯೇ ಇರುತ್ತೇನೆ. ಯಾಕೆಂದರೆ ನಿನ್ನಲ್ಲಿ ದೇಹಿಗಳ ಧರ್ಮ, ಯಶಸ್ಸು, ಕೀರ್ತಿ ಮತ್ತು ಆಯಸ್ಸುಗಳು ಇವೆ.”
03291012 ಸೂರ್ಯ ಉವಾಚ।
03291012a ನ ತೇ ಪಿತಾ ನ ತೇ ಮಾತಾ ಗುರವೋ ವಾ ಶುಚಿಸ್ಮಿತೇ।
03291012c ಪ್ರಭವಂತಿ ವರಾರೋಹೇ ಭದ್ರಂ ತೇ ಶೃಣು ಮೇ ವಚಃ।।
ಸೂರ್ಯನು ಹೇಳಿದನು: “ಶುಚಿಸ್ಮಿತೇ! ನಿನ್ನ ತಂದೆಯಾಗಲೀ ತಾಯಿಯಾಗಲೀ ಮತ್ತು ಹಿರಿಯರಾಗಲೀ ಶಕ್ಯರಿಲ್ಲ. ವರಾರೋಹೇ! ನಿನಗೆ ಮಂಗಳವಾಗಲಿ! ನನ್ನ ಮಾತನ್ನು ಕೇಳು.
03291013a ಸರ್ವಾನ್ಕಾಮಯತೇ ಯಸ್ಮಾತ್ಕನೇರ್ಧಾತೋಶ್ಚ ಭಾಮಿನಿ।
03291013c ತಸ್ಮಾತ್ಕನ್ಯೇಹ ಸುಶ್ರೋಣಿ ಸ್ವತಂತ್ರಾ ವರವರ್ಣಿನಿ।।
ಭಾಮಿನಿ! ಸುಶ್ರೋಣೀ! ವರವರ್ಣಿನೀ! ಎಲ್ಲ ಕಾಮಗಳೆಂಬ ಅರ್ಥವುಳ್ಳ ಕನೇ ಎಂಬ ಧಾತುವಿನಿಂದ ಬಂದಿದ್ದುದಕ್ಕೆ ಕನ್ಯೆಯನ್ನು ಸ್ವತಂತ್ರಳೆಂದು ಹೇಳುತ್ತಾರೆ.
03291014a ನಾಧರ್ಮಶ್ಚರಿತಃ ಕಶ್ಚಿತ್ತ್ವಯಾ ಭವತಿ ಭಾಮಿನಿ।
03291014c ಅಧರ್ಮಂ ಕುತ ಏವಾಹಂ ಚರೇಯಂ ಲೋಕಕಾಮ್ಯಯಾ।।
ಭಾಮಿನಿ! ಇದರಲ್ಲಿ ನಿನ್ನಿಂದ ಯಾವುದೇ ಅಧರ್ಮವು ನಡೆಯುವುದಿಲ್ಲ. ಲೋಕಕಾಮದಿಂದ ನಡೆಯುವ ನಾನು ಅಧರ್ಮವನ್ನು ಹೇಗೆ ಮಾಡಿಯೇನು?
03291015a ಅನಾವೃತಾಃ ಸ್ತ್ರಿಯಃ ಸರ್ವಾ ನರಾಶ್ಚ ವರವರ್ಣಿನಿ।
03291015c ಸ್ವಭಾವ ಏಷ ಲೋಕಾನಾಂ ವಿಕಾರೋಽನ್ಯ ಇತಿ ಸ್ಮೃತಃ।।
ವರವರ್ಣಿನೀ! ಎಲ್ಲ ಸ್ತ್ರೀಯರೂ ನರರೂ ಅನಾವೃತರು. ಲೋಕಗಳ ಸ್ವಭಾವವೇ ಇದು. ಬೇರೆ ರೀತಿಯಲ್ಲಿಲ್ಲ ಎಂದು ಸ್ಮೃತಿಗಳು ಹೇಳುತ್ತವೆ.
03291016a ಸಾ ಮಯಾ ಸಹ ಸಂಗಮ್ಯ ಪುನಃ ಕನ್ಯಾ ಭವಿಷ್ಯಸಿ।
03291016c ಪುತ್ರಶ್ಚ ತೇ ಮಹಾಬಾಹುರ್ವವಿಷ್ಯತಿ ಮಹಾಯಶಾಃ।।
ನನ್ನೊಡನೆ ಕೂಡಿ ಪುನಃ ಕನ್ಯೆಯಾಗುತ್ತೀಯೆ. ನಿನ್ನ ಮಗನು ಮಹಾಬಾಹುವೂ ಮಹಾಯಶಸ್ವಿಯೂ ಆಗುತ್ತಾನೆ.”
03291017 ಕುಂತ್ಯುವಾಚ।
03291017a ಯದಿ ಪುತ್ರೋ ಮಮ ಭವೇತ್ತ್ವತ್ತಃ ಸರ್ವತಮೋಪಹ।
03291017c ಕುಂಡಲೀ ಕವಚೀ ಶೂರೋ ಮಹಾಬಾಹುರ್ಮಹಾಬಲಃ।।
ಕುಂತಿಯು ಹೇಳಿದಳು: “ಸರ್ವಕತ್ತಲೆಯನ್ನೂ ಕಳೆಯುವವನೇ! ನಿನ್ನಿಂದ ಪಡೆದ ನನ್ನ ಪುತ್ರನು ಕುಂಡಲಿಯಾಗಿದ್ದು, ಕವಚಿಯಾಗಿದ್ದು, ಶೂರನೂ, ಮಹಾಬಾಹುವೂ, ಮಹಾಬಲನೂ ಆಗಲಿ.”
03291018 ಸೂರ್ಯ ಉವಾಚ।
03291018a ಭವಿಷ್ಯತಿ ಮಹಾಬಾಹುಃ ಕುಂಡಲೀ ದಿವ್ಯವರ್ಮಭೃತ್।
03291018c ಉಭಯಂ ಚಾಮೃತಮಯಂ ತಸ್ಯ ಭದ್ರೇ ಭವಿಷ್ಯತಿ।।
ಸೂರ್ಯನು ಹೇಳಿದನು: “ಭದ್ರೇ! ಅವನು ಮಹಾಬಾಹುವೂ, ಮತ್ತು ಧರಿಸಿದ ಕುಂಡಲ ದಿವ್ಯಕವಚಗಳೆರಡೂ ಅಮೃತ ಮಯವಾಗಿರುತ್ತವೆ.”
03291019 ಕುಂತ್ಯುವಾಚ।
03291019a ಯದ್ಯೇತದಮೃತಾದಸ್ತಿ ಕುಂಡಲೇ ವರ್ಮ ಚೋತ್ತಮಂ।
03291019c ಮಮ ಪುತ್ರಸ್ಯ ಯಂ ವೈ ತ್ವಂ ಮತ್ತ ಉತ್ಪಾದಯಿಷ್ಯಸಿ।।
ಕುಂತಿಯು ಹೇಳಿದಳು: “ನನ್ನ ಪುತ್ರನ ಉತ್ತಮ ಕುಂಡಲ ಕವಚಗಳು ಅಮೃತಮಯವಾಗಿರುತ್ತವೆಯೆಂದಾದರೆ ಅವನನ್ನು ನನ್ನಲ್ಲಿ ಹುಟ್ಟಿಸು.
03291020a ಅಸ್ತು ಮೇ ಸಂಗಮೋ ದೇವ ಯಥೋಕ್ತಂ ಭಗವನ್ಸ್ತ್ವಯಾ।
03291020c ತ್ವದ್ವೀರ್ಯರೂಪಸತ್ತ್ವೌಜಾ ಧರ್ಮಯುಕ್ತೋ ಭವೇತ್ಸ ಚ।।
ದೇವ! ಭಗವನ್! ನೀನು ಹೇಳಿದಂತೆ ನಿನ್ನೊಡನೆ ನನ್ನ ಸಂಗಮವಾಗಲಿ. ಅವನು ವೀರ್ಯದಲ್ಲಿ, ರೂಪದಲ್ಲಿ, ಸತ್ವದಲ್ಲಿ, ತೇಜಸ್ಸಿನಲ್ಲಿ ನಿನ್ನ ಹಾಗೆಯೇ ಆಗಲಿ. ಧರ್ಮಯುಕ್ತನಾಗಿರಲಿ.”
03291021 ಸೂರ್ಯ ಉವಾಚ।
03291021a ಅದಿತ್ಯಾ ಕುಂಡಲೇ ರಾಜ್ಞಿ ದತ್ತೇ ಮೇ ಮತ್ತಕಾಶಿನಿ।
03291021c ತೇಽಸ್ಯ ದಾಸ್ಯಾಮಿ ವೈ ಭೀರು ವರ್ಮ ಚೈವೇದಮುತ್ತಮಂ।।
ಸೂರ್ಯನು ಹೇಳಿದನು: “ರಾಣಿ! ಮತ್ತಕಾಶಿನೀ! ಭೀರು! ಅದಿತಿಯು ನನಗೆ ಕೊಟ್ಟಿದ್ದ ಕುಂಡಲಗಳನ್ನೂ ಅನುತ್ತಮ ಕವಚವನ್ನೂ ಅವನಿಗೆ ನೀಡುತ್ತೇನೆ.”
03291022 ಪೃಥೋವಾಚ।
03291022a ಪರಮಂ ಭಗವನ್ದೇವ ಸಂಗಮಿಷ್ಯೇ ತ್ವಯಾ ಸಹ।
03291022c ಯದಿ ಪುತ್ರೋ ಭವೇದೇವಂ ಯಥಾ ವದಸಿ ಗೋಪತೇ।।
ಪೃಥೆಯು ಹೇಳಿದಳು: “ಪರಮ ಭಗವನ್! ದೇವ! ಗೋಪತೇ! ನೀನು ಹೇಳಿದಂಥ ಪುತ್ರನಾಗುತ್ತಾನೆಂದರೆ ನಾನು ನಿನ್ನೊಡನೆ ಕೂಡುತ್ತೇನೆ.””
03291023 ವೈಶಂಪಾಯನ ಉವಾಚ।
03291023a ತಥೇತ್ಯುಕ್ತ್ವಾ ತು ತಾಂ ಕುಂತೀಮಾವಿವೇಶ ವಿಹಂಗಮಃ।
03291023c ಸ್ವರ್ಭಾನುಶತ್ರುರ್ಯೋಗಾತ್ಮಾ ನಾಭ್ಯಾಂ ಪಸ್ಪರ್ಶ ಚೈವ ತಾಂ।।
ವೈಶಂಪಾಯನನು ಹೇಳಿದನು: “ಹಾಗೆಯೇ ಆಗಲೆಂದು ಹೇಳಿ ಆ ವಿಹಂಗಮನು ಕುಂತಿಯನ್ನು ಪ್ರವೇಶಿಸಿದನು. ಆ ಸ್ವರ್ಭಾನುಶತ್ರು ಯೋಗಾತ್ಮನು ಅವಳ ಹೊಕ್ಕಳನ್ನು ಮುಟ್ಟಿದನು.
03291024a ತತಃ ಸಾ ವಿಹ್ವಲೇವಾಸೀತ್ಕನ್ಯಾ ಸೂರ್ಯಸ್ಯ ತೇಜಸಾ।
03291024c ಪಪಾತಾಥ ಚ ಸಾ ದೇವೀ ಶಯನೇ ಮೂಢಚೇತನಾ।।
ಆಗ ಆ ದೇವಿ ಕನ್ಯೆಯು ಸೂರ್ಯನ ತೇಜಸ್ಸಿನಿಂದ ವಿಹ್ವಲಳಾಗಿ ಮೂಢಚೇತನಳಾಗಿ ಹಾಸಿಗೆಯ ಮೇಲೆ ಬಿದ್ದಳು.”
03291025 ಸೂರ್ಯ ಉವಾಚ।
03291025a ಸಾಧಯಿಷ್ಯಾಮಿ ಸುಶ್ರೋಣಿ ಪುತ್ರಂ ವೈ ಜನಯಿಷ್ಯಸಿ।
03291025c ಸರ್ವಶಸ್ತ್ರಭೃತಾಂ ಶ್ರೇಷ್ಠಂ ಕನ್ಯಾ ಚೈವ ಭವಿಷ್ಯಸಿ।।
ಸೂರ್ಯನು ಹೇಳಿದನು: “ಸುಶ್ರೋಣೀ! ಮುಗಿಸುತ್ತಿದ್ದೇನೆ. ನಿನಗೆ ಪುತ್ರನು ಜನಿಸುತ್ತಾನೆ. ಕನ್ಯೇ! ಶಸ್ತ್ರಭೃತರೆಲ್ಲರಲ್ಲಿ ಶ್ರೇಷ್ಠನಾಗುತ್ತಾನೆ.””
03291026 ವೈಶಂಪಾಯನ ಉವಾಚ।
03291026a ತತಃ ಸಾ ವ್ರೀಡಿತಾ ಬಾಲಾ ತದಾ ಸೂರ್ಯಮಥಾಬ್ರವೀತ್।
03291026c ಏವಮಸ್ತ್ವಿತಿ ರಾಜೇಂದ್ರ ಪ್ರಸ್ಥಿತಂ ಭೂರಿವರ್ಚಸಂ।।
ವೈಶಂಪಾಯನನು ಹೇಳಿದನು: “ಆಗ ನಾಚಿಕೆಯಿಂದ ಆ ಬಾಲಕಿಯು ಹಾಗೆಯೇ ಆಗಲೆಂದು ಸೂರ್ಯನಿಗೆ ಹೇಳಿದಳು. ರಾಜೇಂದ್ರ! ಅನಂತರ ಭೂರಿವರ್ಚಸ ಸೂರ್ಯನು ಮುಂದುವರೆದನು.
03291027a ಇತಿ ಸ್ಮೋಕ್ತಾ ಕುಂತಿರಾಜಾತ್ಮಜಾ ಸಾ। ವಿವಸ್ವಂತಂ ಯಾಚಮಾನಾ ಸಲಜ್ಜಾ।
03291027c ತಸ್ಮಿನ್ಪುಣ್ಯೇ ಶಯನೀಯೇ ಪಪಾತ। ಮೋಹಾವಿಷ್ಟಾ ಭಜ್ಯಮಾನಾ ಲತೇವ।।
ಈ ರೀತಿ ಭರವಸೆಯನ್ನು ಪಡೆದ ಕುಂತಿರಾಜನ ಮಗಳು ವಿವಸ್ವತನನ್ನು ಯಾಚಿಸುವುದರಲ್ಲಿ ಲಜ್ಜಿತಳಾಗಿ, ಮೋಹಾವಿಷ್ಟಳಾಗಿ, ತುಂಡರಿಸಿದ ಲತೆಯಂತೆ ಆ ಪುಣ್ಯ ಶಯನದಲ್ಲಿ ಬಿದ್ದಳು.
03291028a ತಾಂ ತಿಗ್ಮಾಂಶುಸ್ತೇಜಸಾ ಮೋಹಯಿತ್ವಾ। ಯೋಗೇನಾವಿಷ್ಯಾತ್ಮಸಂಸ್ಥಾಂ ಚಕಾರ।
03291028c ನ ಚೈವೈನಾಂ ದೂಷಯಾಮಾಸ ಭಾನುಃ। ಸಂಜ್ಞಾಂ ಲೇಭೇ ಭೂಯ ಏವಾಥ ಬಾಲಾ।।
ತಿಗ್ಮಾಂಶುವು ತೇಜಸ್ಸಿನಿಂದ ಅವಳನ್ನು ಮೋಹಿಸುತ್ತಾ ಯೋಗದಿಂದ ಅವಳನ್ನು ಪ್ರವೇಶಿಸಿ ಗರ್ಭಿಣಿಯನ್ನಾಗಿ ಮಾಡಿದನು. ಆದರೆ ಆ ಭಾನುವು ಅವಳನ್ನು ದೂಷಿಸಲಿಲ್ಲ. ಮತ್ತು ಆ ಬಾಲಕಿಯು ಪುನಃ ತನ್ನ ಸಂಜ್ಞೆಗಳನ್ನು ಪಡೆದಳು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಸೂರ್ಯಕುಂತೀಸಮಾಗಮೇ ಏಕನವತ್ಯಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಸೂರ್ಯಕುಂತೀಸಮಾಗಮದಲ್ಲಿ ಇನ್ನೂರಾತೊಂಭತ್ತೊಂದನೆಯ ಅಧ್ಯಾಯವು.