ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 278
ಸಾರ
ಒಮ್ಮೆ ಅಶ್ವಪತಿಯು ನಾರದನ ಜೊತೆ ಸಭಾಮಧ್ಯದಲ್ಲಿ ಕುಳಿತು ಮಾತಿನಲ್ಲಿ ತೊಡಗಿರಲು ಸಾವಿತ್ರಿಯು ಹಿಂದಿರುಗಿದುದು; ಯಾರನ್ನು ವರಿಸಿದಳೆಂದು ಕೇಳಲು ಸತ್ಯವಾನನನ್ನು ಎಂದಾಗ ನಾರದನು “ಕ್ಷೀಣಾಯು ಸತ್ಯವಾನನು ಇಂದಿನಿಂದ ಒಂದು ವರ್ಷದಲ್ಲಿ ದೇಹತ್ಯಾಗ ಮಾಡುತ್ತಾನೆ” ಎಂದಾಗ ಎಷ್ಟು ಹೇಳಿದರೂ ಸತ್ಯವಾನನೇ ತನ್ನ ಪತಿಯಾಗುತ್ತಾನೆಂದು ಸಾವಿತ್ರಿಯು ನಿರ್ಧರಿಸಿದುದು (1-32).
03278001 ಮಾರ್ಕಂಡೇಯ ಉವಾಚ।
03278001a ಅಥ ಮದ್ರಾಧಿಪೋ ರಾಜಾ ನಾರದೇನ ಸಮಾಗತಃ।
03278001c ಉಪವಿಷ್ಟಃ ಸಭಾಮಧ್ಯೇ ಕಥಾಯೋಗೇನ ಭಾರತ।।
ಮಾರ್ಕಂಡೇಯನು ಹೇಳಿದನು: “ಭಾರತ! ಆಗ ಒಮ್ಮೆ ಮದ್ರಾಧಿಪ ರಾಜನು ನಾರದನ ಜೊತೆಗೆ ಸಭಾಮಧ್ಯದಲ್ಲಿ ಕುಳಿದು ಮಾತಿನಲ್ಲಿ ತೊಡಗಿದ್ದನು.
03278002a ತತೋಽಭಿಗಮ್ಯ ತೀರ್ಥಾನಿ ಸರ್ವಾಣ್ಯೇವಾಶ್ರಮಾಂಸ್ತಥಾ।
03278002c ಆಜಗಾಮ ಪಿತುರ್ವೇಶ್ಮ ಸಾವಿತ್ರೀ ಸಹ ಮಂತ್ರಿಭಿಃ।।
ಆಗ ಸರ್ವ ತೀರ್ಥ-ಆಶ್ರಮಗಳಿಗೆ ಹೋಗಿದ್ದ ಸಾವಿತ್ರಿಯು ಮಂತ್ರಿಗಳ ಸಹಿತ ತಂದೆಯ ಮನೆಗೆ ಹಿಂದಿರುಗಿದಳು.
03278003a ನಾರದೇನ ಸಹಾಸೀನಂ ದೃಷ್ಟ್ವಾ ಸಾ ಪಿತರಂ ಶುಭಾ।
03278003c ಉಭಯೋರೇವ ಶಿರಸಾ ಚಕ್ರೇ ಪಾದಾಭಿವಂದನಂ।।
ನಾರದನೊಂದಿಗೆ ಕುಳಿತಿದ್ದ ತಂದೆಯನ್ನು ನೋಡಿ ಆ ಶುಭೆಯು ಇಬ್ಬರ ಪಾದಗಳಿಗೂ ಶಿರಬಾಗಿ ನಮಸ್ಕರಿಸಿದಳು.
03278004 ನಾರದ ಉವಾಚ।
03278004a ಕ್ವ ಗತಾಭೂತ್ಸುತೇಯಂ ತೇ ಕುತಶ್ಚೈವಾಗತಾ ನೃಪ।
03278004c ಕಿಮರ್ಥಂ ಯುವತೀಂ ಭರ್ತ್ರೇ ನ ಚೈನಾಂ ಸಂಪ್ರಯಚ್ಚಸಿ।।
ನಾರದನು ಹೇಳಿದನು: “ನೃಪ! ನಿನ್ನ ಮಗಳು ಎಲ್ಲಿಗೆ ಹೋಗಿದ್ದಳು ಮತ್ತು ಎಲ್ಲಿಂದ ಬರುತ್ತಿದ್ದಾಳೆ? ಯಾವ ಕಾರಣದಿಂದ ನೀನು ಈ ಯುವತಿಯನ್ನು ಇದೂವರೆಗೂ ಯೋಗ್ಯ ವರನಿಗೆ ಕೊಟ್ಟಿಲ್ಲ?”
03278005 ಅಶ್ವಪತಿರುವಾಚ।
03278005a ಕಾರ್ಯೇಣ ಖಲ್ವನೇನೈವ ಪ್ರೇಷಿತಾದ್ಯೈವ ಚಾಗತಾ।
03278005c ತದಸ್ಯಾಃ ಶೃಣು ದೇವರ್ಷೇ ಭರ್ತಾರಂ ಯೋಽನಯಾ ವೃತಃ।।
ಅಶ್ವಪತಿಯು ಹೇಳಿದನು: “ದೇವರ್ಷೇ! ಇದೇ ಕಾರ್ಯದ ಸಲುವಾಗಿ ನಾನು ಅವಳನ್ನು ಕಳುಹಿಸಿದ್ದೆ ಮತ್ತು ಅಲ್ಲಿಂದಲೇ ಬರುತ್ತಿದ್ದಾಳೆ. ಅವಳು ಯಾರನ್ನು ಪತಿಯನ್ನಾಗಿ ವರಿಸಿದ್ದಾಳೆ ಎನ್ನುವುದನ್ನು ಅವಳಿಂದಲೇ ಕೇಳೋಣ.””
03278006 ಮಾರ್ಕಂಡೇಯ ಉವಾಚ।
03278006a ಸಾ ಬ್ರೂಹಿ ವಿಸ್ತರೇಣೇತಿ ಪಿತ್ರಾ ಸಂಚೋದಿತಾ ಶುಭಾ।
03278006c ದೈವತಸ್ಯೇವ ವಚನಂ ಪ್ರತಿಗೃಹ್ಯೇದಮಬ್ರವೀತ್।।
ಮಾರ್ಕಂಡೇಯನು ಹೇಳಿದನು: “ವಿಸ್ತಾರವಾಗಿ ಹೇಳು ಎಂದು ತಂದೆಯಿಂದ ಆಜ್ಞಾಪಿತಳಾದ ಆ ಶುಭೆಯು ಅವನ ಮಾತನ್ನು ದೇವನದೆಂದೇ ಸ್ವೀಕರಿಸಿ ಹೇಳಿದಳು:
03278007a ಆಸೀಚ್ಚಾಲ್ವೇಷು ಧರ್ಮಾತ್ಮಾ ಕ್ಷತ್ರಿಯಃ ಪೃಥಿವೀಪತಿಃ।
03278007c ದ್ಯುಮತ್ಸೇನ ಇತಿ ಖ್ಯಾತಃ ಪಶ್ಚಾದಂಧೋ ಬಭೂವ ಹ।।
“ಶಾಲ್ವದಲ್ಲಿ ಧರ್ಮಾತ್ಮ ಕ್ಷತ್ರಿಯ ಪೃಥಿವೀಪತಿ ದ್ಯುಮತ್ಸೇನ ಎಂದು ಖ್ಯಾತನಾದ ರಾಜನಿದ್ದನು. ಆದರೆ ಅವನು ಅಂಧನಾದನು.
03278008a ವಿನಷ್ಟಚಕ್ಷುಷಸ್ತಸ್ಯ ಬಾಲಪುತ್ರಸ್ಯ ಧೀಮತಃ।
03278008c ಸಾಮೀಪ್ಯೇನ ಹೃತಂ ರಾಜ್ಯಂ ಚಿದ್ರೇಽಸ್ಮಿನ್ಪೂರ್ವವೈರಿಣಾ।।
ಕಣ್ಣುಗಳನ್ನು ಕಳೆದು ಕೊಂಡ ಮತ್ತು ಮಗನು ಇನ್ನೂ ಬಾಲಕನಾಗಿದ್ದ ಆ ಧೀಮಂತನ ಮೇಲೆ ಹಿಂದಿನಿಂದಲೇ ವೈರತ್ವವನ್ನು ಹೊಂದಿದ್ದ ನೆರೆಯ ರಾಜನು ಆಕ್ರಮಣ ಮಾಡಿ ರಾಜ್ಯವನ್ನು ಅಪಹರಿಸಿದನು.
03278009a ಸ ಬಾಲವತ್ಸಯಾ ಸಾರ್ಧಂ ಭಾರ್ಯಯಾ ಪ್ರಸ್ಥಿತೋ ವನಂ।
03278009c ಮಹಾರಣ್ಯಗತಶ್ಚಾಪಿ ತಪಸ್ತೇಪೇ ಮಹಾವ್ರತಃ।।
ಅವನು ಬಾಲಕ ಮಗ ಮತ್ತು ಪತ್ನಿಯೊಡನೆ ವನವನ್ನು ಸೇರಿದನು. ಮಹಾರಣ್ಯಕ್ಕೆ ಹೋಗಿ ಆ ಮಹಾವ್ರತನು ತಪಸ್ಸನ್ನು ತಪಿಸಿದನು.
03278010a ತಸ್ಯ ಪುತ್ರಃ ಪುರೇ ಜಾತಃ ಸಂವೃದ್ಧಶ್ಚ ತಪೋವನೇ।
03278010c ಸತ್ಯವಾನನುರೂಪೋ ಮೇ ಭರ್ತೇತಿ ಮನಸಾ ವೃತಃ।।
ರಾಜಧಾನಿಯಲ್ಲಿ ಹುಟ್ಟಿದ ಅವನ ಮಗನು ತಪೋವನದಲ್ಲಿ ಬೆಳೆದನು. ಆ ಸತ್ಯವಾನನು ನನಗೆ ಅನುರೂಪ ಪತಿಯೆಂದು ಮನಸಾ ಆರಿಸಿಕೊಂಡಿದ್ದೇನೆ.”
03278011 ನಾರದ ಉವಾಚ।
03278011a ಅಹೋ ಬತ ಮಹತ್ಪಾಪಂ ಸಾವಿತ್ರ್ಯಾ ನೃಪತೇ ಕೃತಂ।
03278011c ಅಜಾನಂತ್ಯಾ ಯದನಯಾ ಗುಣವಾನ್ಸತ್ಯವಾನ್ವೃತಃ।।
ನಾರದನು ಹೇಳಿದನು: “ಅಹೋ! ನೃಪತೇ! ಸಾವಿತ್ರಿಯಿಂದ ಮಹಾ ಪಾಪವೇ ನಡೆದುಹೋಯಿತು! ತಿಳಿಯದೇ ಗುಣವಂತನೆಂದು ಇವಳು ಸತ್ಯವಾನನನ್ನು ವರಿಸಿದ್ದಾಳೆ.
03278012a ಸತ್ಯಂ ವದತ್ಯಸ್ಯ ಪಿತಾ ಸತ್ಯಂ ಮಾತಾ ಪ್ರಭಾಷತೇ।
03278012c ತತೋಽಸ್ಯ ಬ್ರಾಹ್ಮಣಾಶ್ಚಕ್ರುರ್ನಾಮೈತತ್ಸತ್ಯವಾನಿತಿ।।
ಅವನ ತಂದೆಯು ಸದಾ ಸತ್ಯವನ್ನು ನುಡಿಯುತ್ತಾನೆ. ತಾಯಿಯೂ ಸತ್ಯವನ್ನೇ ನುಡಿಯುತ್ತಾಳೆ. ಆದುದರಿಂದಲೇ ಅವನಿಗೆ ಸತ್ಯವಾನನೆಂದು ಬ್ರಾಹ್ಮಣರು ಹೆಸರನ್ನಿಟ್ಟಿದ್ದಾರೆ.
03278013a ಬಾಲಸ್ಯಾಶ್ವಾಃ ಪ್ರಿಯಾಶ್ಚಾಸ್ಯ ಕರೋತ್ಯಶ್ವಾಂಶ್ಚ ಮೃನ್ಮಯಾನ್।
03278013c ಚಿತ್ರೇಽಪಿ ಚ ಲಿಖತ್ಯಶ್ವಾಂಶ್ಚಿತ್ರಾಶ್ವ ಇತಿ ಚೋಚ್ಯತೇ।।
ಬಾಲ್ಯದಲಿ ಅವನಿಗೆ ಕುದುರೆಗಳು ಅತಿ ಪ್ರಿಯವಾಗಿದ್ದವು ಮತ್ತು ಅವನು ಕುದುರೆಗಳ ಚಿತ್ರವನ್ನೂ ಬರೆಯುತ್ತಿದ್ದನು. ಅಶ್ವಗಳ ಚಿತ್ರವನ್ನು ಬರೆಯುತ್ತಿದ್ದುದರಿಂದ ಅವನನ್ನು ಚಿತ್ರಾಶ್ವ ಎಂದೂ ಕರೆಯುತ್ತಾರೆ.”
03278014 ರಾಜೋವಾಚ।
03278014a ಅಪೀದಾನೀಂ ಸ ತೇಜಸ್ವೀ ಬುದ್ಧಿಮಾನ್ವಾ ನೃಪಾತ್ಮಜಃ।
03278014c ಕ್ಷಮಾವಾನಪಿ ವಾ ಶೂರಃ ಸತ್ಯವಾನ್ಪಿತೃನಂದನಃ।।
ರಾಜನು ಹೇಳಿದನು: “ಆ ನೃಪಾತ್ಮಜ ಪಿತೃನಂದನನು ತೇಜಸ್ವಿಯೂ, ಬುದ್ಧಿವಂತನೂ ಆಗಿದ್ದಾನೆಯೇ? ಸತ್ಯವಾನನು ಕ್ಷಮಾವಂತನೂ ಶೂರನೂ ಆಗಿದ್ದಾನೆಯೇ?”
03278015 ನಾರದ ಉವಾಚ।
03278015a ವಿವಸ್ವಾನಿವ ತೇಜಸ್ವೀ ಬೃಹಸ್ಪತಿಸಮೋ ಮತೌ।
03278015c ಮಹೇಂದ್ರ ಇವ ಶೂರಶ್ಚ ವಸುಧೇವ ಕ್ಷಮಾನ್ವಿತಃ।।
ನಾರದನು ಹೇಳಿದನು: “ವಿವಸ್ವತನಂತೆ ತೇಜಸ್ವಿಯೂ ಮತಿಯಲ್ಲಿ ಬೃಹಸ್ಪತಿಯ ಸಮನೂ ಆಗಿದ್ದಾನೆ. ಮಹೇಂದ್ರನಂತೆ ಶೂರನೂ ವಸುಧೆಯಂತೆ ಕ್ಷಮಾನ್ವಿತನೂ ಹೌದು.”
03278016 ಅಶ್ವಪತಿರುವಾಚ।
03278016a ಅಪಿ ರಾಜಾತ್ಮಜೋ ದಾತಾ ಬ್ರಹ್ಮಣ್ಯೋ ವಾಪಿ ಸತ್ಯವಾನ್।
03278016c ರೂಪವಾನಪ್ಯುದಾರೋ ವಾಪ್ಯಥ ವಾ ಪ್ರಿಯದರ್ಶನಃ।।
ಅಶ್ವಪತಿಯು ಹೇಳಿದನು: “ಆ ರಾಜಾತ್ಮಜ ಸತ್ಯವಾನನು ದಾನಿಯೂ ಬ್ರಾಹ್ಮಣರನ್ನು ಗೌರವಿಸುವವನೂ ಆಗಿದ್ದಾನೆಯೇ? ಉದಾರನಾದ ಅವನು ರೂಪವಂತನೂ, ನೋಡಲು ಸುಂದರನೂ ಆಗಿದ್ದಾನೆಯೇ?”
03278017 ನಾರದ ಉವಾಚ।
03278017a ಸಾಂಕೃತೇ ರಂತಿದೇವಸ್ಯ ಸ ಶಕ್ತ್ಯಾ ದಾನತಃ ಸಮಃ।
03278017c ಬ್ರಹ್ಮಣ್ಯಃ ಸತ್ಯವಾದೀ ಚ ಶಿಬಿರೌಶೀನರೋ ಯಥಾ।।
ನಾರದನು ಹೇಳಿದನು: “ಸಾಂಕೃತಿ ರಂತಿದೇವನಂತೆ ಅವನು ತನ್ನ ಶಕ್ತಿಗೆ ತಕ್ಕಂತೆ ದಾನಗಳನ್ನು ನೀಡುತ್ತಾನೆ. ಶಿಬಿ ಔಷೀನರನಂತೆ ಬ್ರಾಹ್ಮಣರನ್ನು ಪೂಜಿಸುತ್ತಾನೆ ಮತ್ತು ಸತ್ಯವಾದಿಯಾಗಿದ್ದಾನೆ.
03278018a ಯಯಾತಿರಿವ ಚೋದಾರಃ ಸೋಮವತ್ಪ್ರಿಯದರ್ಶನಃ।
03278018c ರೂಪೇಣಾನ್ಯತಮೋಽಶ್ವಿಭ್ಯಾಂ ದ್ಯುಮತ್ಸೇನಸುತೋ ಬಲೀ।।
ಯಯಾತಿಯಂತೆ ಉದಾರನಾಗಿದ್ದಾನೆ ಮತ್ತು ಚಂದ್ರನಂತೆ ನೋಡಲು ಸುಂದರನಾಗಿದ್ದಾನೆ. ದ್ಯುಮತ್ಸೇನನ ಬಲಶಾಲಿ ಮಗನು ರೂಪದಲ್ಲಿ ಇಬ್ಬರು ಅಶ್ವಿನಿಯರಂತಿದ್ದಾನೆ.
03278019a ಸ ದಾಂತಃ ಸ ಮೃದುಃ ಶೂರಃ ಸ ಸತ್ಯಃ ಸ ಜಿತೇಂದ್ರಿಯಃ।
03278019c ಸ ಮೈತ್ರಃ ಸೋಽನಸೂಯಶ್ಚ ಸ ಹ್ರೀಮಾನ್ಧೃತಿಮಾಂಶ್ಚ ಸಃ।।
ಅವನು ತನ್ನ ಆಸೆಗಳನ್ನು ಹಿಡಿತದಲಿಟ್ಟುಕೊಂಡವನು, ಮೃದು, ಶೂರ, ಸತ್ಯವಂತ ಮತ್ತು ಜಿತೇಂದ್ರಿಯ. ಅವನು ಸ್ನೇಹಸ್ವಭಾವದವನು, ಅಸೂಯೆಯಿಲ್ಲದವನು, ಸ್ವಲ್ಪ ನಾಚಿಕೆ ಸ್ವಭಾವದವನು ಮತ್ತು ಧೃತಿವಂತನು.
03278020a ನಿತ್ಯಶಶ್ಚಾರ್ಜವಂ ತಸ್ಮಿನ್ಸ್ಥಿತಿಸ್ತಸ್ಯೈವ ಚ ಧ್ರುವಾ।
03278020c ಸಂಕ್ಷೇಪತಸ್ತಪೋವೃದ್ಧೈಃ ಶೀಲವೃದ್ಧೈಶ್ಚ ಕಥ್ಯತೇ।।
ಅವನು ನಿತ್ಯವೂ ನೇರವಾಗಿ ನಡೆದುಕೊಳ್ಳುತ್ತಾನೆ ಮತ್ತು ಧೃವನಂತೆ ಸ್ಥಿರನಾಗಿರುತ್ತಾನೆ ಎಂದು ತಪೋವೃದ್ಧರೂ ಶೀಲವೃದ್ಧರೂ ಹೇಳುತ್ತಾರೆ.”
03278021 ಅಶ್ವಪತಿರುವಾಚ।
03278021a ಗುಣೈರುಪೇತಂ ಸರ್ವೈಸ್ತಂ ಭಗವನ್ಪ್ರಬ್ರವೀಷಿ ಮೇ।
03278021c ದೋಷಾನಪ್ಯಸ್ಯ ಮೇ ಬ್ರೂಹಿ ಯದಿ ಸಂತೀಹ ಕೇ ಚನ।।
ಅಶ್ವಪತಿಯು ಹೇಳಿದನು: “ಭಗವನ್! ಅವನಲ್ಲಿರುವ ಎಲ್ಲ ಒಳ್ಳೆಯ ಗುಣಗಳ ಕುರಿತೇ ನೀನು ಹೇಳುತ್ತಿರುವೆ. ಅವನಲ್ಲಿ ಏನಾದರೂ ದೋಷವಿದ್ದರೆ ಅದರ ಕುರಿತೂ ಹೇಳು.”
03278022 ನಾರದ ಉವಾಚ।
03278022a ಏಕೋ ದೋಷೋಽಸ್ಯ ನಾನ್ಯೋಽಸ್ತಿ ಸೋಽದ್ಯ ಪ್ರಭೃತಿ ಸತ್ಯವಾನ್।
03278022c ಸಂವತ್ಸರೇಣ ಕ್ಷೀಣಾಯುರ್ದೇಹನ್ಯಾಸಂ ಕರಿಷ್ಯತಿ।।
ನಾರದನು ಹೇಳಿದನು: “ಅವನಲ್ಲಿ ಒಂದೇ ಒಂದು ದೋಷವಿದೆ ಬೇರೆ ಏನೂ ಇಲ್ಲ. ಕ್ಷೀಣಾಯು ಸತ್ಯವಾನನು ಇಂದಿನಿಂದ ಒಂದು ವರ್ಷದಲ್ಲಿ ದೇಹತ್ಯಾಗ ಮಾಡುತ್ತಾನೆ.”
03278023 ರಾಜೋವಾಚ।
03278023a ಏಹಿ ಸಾವಿತ್ರಿ ಗಚ್ಚ ತ್ವಮನ್ಯಂ ವರಯ ಶೋಭನೇ।
03278023c ತಸ್ಯ ದೋಷೋ ಮಹಾನೇಕೋ ಗುಣಾನಾಕ್ರಮ್ಯ ತಿಷ್ಠತಿ।।
ರಾಜನು ಹೇಳಿದನು: “ಇಲ್ಲಿ ಬಾ ಸಾವಿತ್ರಿ! ಶೋಭನೇ! ಹೋಗು! ಬೇರೆಯವನನ್ನು ವರಿಸು! ಅವನಲ್ಲಿರುವ ಈ ಮಹಾ ದೋಷವೊಂದೇ ಗುಣಗಳೆಲ್ಲವನ್ನೂ ಮೀರಿ ನಿಂತಿದೆ.
03278024a ಯಥಾ ಮೇ ಭಗವಾನಾಹ ನಾರದೋ ದೇವಸತ್ಕೃತಃ।
03278024c ಸಂವತ್ಸರೇಣ ಸೋಽಲ್ಪಾಯುರ್ದೇಹನ್ಯಾಸಂ ಕರಿಷ್ಯತಿ।।
ದೇವಸತ್ಕೃತ ಭಗವಾನ್ ನಾರದನು ನನಗೆ ಹೇಳಿದಂತೆ ಒಂದು ವರ್ಷದಲ್ಲಿ ಆ ಅಲ್ಪಾಯುವು ದೇಹತ್ಯಾಗ ಮಾಡುತ್ತಾನೆ.”
03278025 ಸಾವಿತ್ರ್ಯುವಾಚ।
03278025a ಸಕೃದಂಶೋ ನಿಪತತಿ ಸಕೃತ್ಕನ್ಯಾ ಪ್ರದೀಯತೇ।
03278025c ಸಕೃದಾಹ ದದಾನೀತಿ ತ್ರೀಣ್ಯೇತಾನಿ ಸಕೃತ್ಸಕೃತ್।।
ಸಾವಿತ್ರಿಯು ಹೇಳಿದಳು: “ಆಸ್ತಿಯನ್ನು ಒಂದೇ ಬಾರಿ ವಿಂಗಡಿಸುತ್ತಾರೆ, ಕನ್ಯೆಯನ್ನು ಒಂದೇ ಬಾರಿ ಕೊಡುತ್ತಾರೆ, ಒಂದೇ ಬಾರಿ ದಾನವನ್ನು ನೀಡಲಾಗುತ್ತದೆ. ಈ ಮೂರನ್ನೂ ಒಂದೊಂದು ಬಾರಿಯೇ ಮಾಡಲಾಗುತ್ತದೆ.
03278026a ದೀರ್ಘಾಯುರಥ ವಾಲ್ಪಾಯುಃ ಸಗುಣೋ ನಿರ್ಗುಣೋಽಪಿ ವಾ।
03278026c ಸಕೃದ್ವೃತೋ ಮಯಾ ಭರ್ತಾ ನ ದ್ವಿತೀಯಂ ವೃಣೋಮ್ಯಹಂ।।
ದೀರ್ಘಾಯುವಾಗಿರಲಿ ಅಥವಾ ಅಲ್ಪಾಯುವಾಗಿರಲಿ, ಸುಗುಣನಾಗಿರಲಿ ಅಥವಾ ನಿರ್ಗುಣನಾಗಿರಲಿ, ನಾನು ಅವನನ್ನು ನನ್ನ ಪತಿಯನ್ನಾಗಿ ವರಿಸಿದ್ದೇನೆ. ಎರಡನೇ ಬಾರಿ ನಾನು ವರಿಸುವುದಿಲ್ಲ.
03278027a ಮನಸಾ ನಿಶ್ಚಯಂ ಕೃತ್ವಾ ತತೋ ವಾಚಾಭಿಧೀಯತೇ।
03278027c ಕ್ರಿಯತೇ ಕರ್ಮಣಾ ಪಶ್ಚಾತ್ಪ್ರಮಾಣಂ ಮೇ ಮನಸ್ತತಃ।।
ಮನಸ್ಸಿನಲ್ಲಿ ನಿರ್ಧಾರಮಾಡಿ ನಂತರ ಮಾತಿನಲ್ಲಿ ಹೊರಬರುತ್ತದೆ, ಮತ್ತು ನಂತರವೇ ಆ ಕ್ರಿಯೆಯನ್ನು ಮಾಡಲಾಗುತ್ತದೆ. ಆ ಮನಸ್ಸಿಗೆ ನಾನೇ ಪ್ರಮಾಣ.”
03278028 ನಾರದ ಉವಾಚ।
03278028a ಸ್ಥಿರಾ ಬುದ್ಧಿರ್ನರಶ್ರೇಷ್ಠ ಸಾವಿತ್ರ್ಯಾ ದುಹಿತುಸ್ತವ।
03278028c ನೈಷಾ ಚಾಲಯಿತುಂ ಶಕ್ಯಾ ಧರ್ಮಾದಸ್ಮಾತ್ಕಥಂ ಚನ।।
ನಾರದನು ಹೇಳಿದನು: “ನರಶ್ರೇಷ್ಠ! ನಿನ್ನ ಮಗಳ ಬುದ್ಧಿಯು ಸ್ಥಿರವಾಗಿದೆ. ಧರ್ಮದಲ್ಲಿ ನೆಲೆಗೊಂಡಿರುವ ಇವಳನ್ನು ಯಾರು ಏನು ಮಾಡಿದರೂ ಬದಲಾಯಿಸಲಿಕ್ಕಾಗುವುದಿಲ್ಲ.
03278029a ನಾನ್ಯಸ್ಮಿನ್ಪುರುಷೇ ಸಂತಿ ಯೇ ಸತ್ಯವತಿ ವೈ ಗುಣಾಃ।
03278029c ಪ್ರದಾನಮೇವ ತಸ್ಮಾನ್ಮೇ ರೋಚತೇ ದುಹಿತುಸ್ತವ।।
ಸತ್ಯವಾನನ ಗುಣಗಳನ್ನು ಪಡೆದ ಅನ್ಯ ಪುರುಷರು ಯಾರೂ ಇಲ್ಲ. ಆದುದರಿಂದ ನಿನ್ನ ಮಗಳನ್ನು ಅವನಿಗೇ ಕೊಡುವುದು ಸರಿಯೆಂದು ನನಗನ್ನಿಸುತ್ತದೆ.”
03278030 ರಾಜೋವಾಚ।
03278030a ಅವಿಚಾರ್ಯಮೇತದುಕ್ತಂ ಹಿ ತಥ್ಯಂ ಭಗವತಾ ವಚಃ।
03278030c ಕರಿಷ್ಯಾಮ್ಯೇತದೇವಂ ಚ ಗುರುರ್ಹಿ ಭಗವಾನ್ಮಮ।।
ರಾಜನು ಹೇಳಿದನು: “ಭಗವನ್! ನೀನು ಹೇಳುತ್ತಿರುವುದು ಸತ್ಯ ಮತ್ತು ಮಾಡಲೇಬೇಕಾಗಿದ್ದುದು. ಆದುದರಿಂದ ನೀನು ಹೇಳಿದಹಾಗೆಯೇ ಮಾಡುತ್ತೇನೆ. ನೀನು ನನ್ನ ಗುರು.”
03278031 ನಾರದ ಉವಾಚ।
03278031a ಅವಿಘ್ನಮಸ್ತು ಸಾವಿತ್ರ್ಯಾಃ ಪ್ರದಾನೇ ದುಹಿತುಸ್ತವ।
03278031c ಸಾಧಯಿಷ್ಯಾಮಹೇ ತಾವತ್ಸರ್ವೇಷಾಂ ಭದ್ರಮಸ್ತು ವಃ।।
ನಾರದನು ಹೇಳಿದನು: “ನಿನ್ನ ಮಗಳು ಸಾವಿತ್ರಿಯ ವಿವಾಹವು ವಿಘ್ನವಿಲ್ಲದೇ ನಡೆಯುತ್ತದೆ. ನಾನು ಈಗ ಹೊರಡುತ್ತಿದ್ದೇನೆ. ಸರ್ವರಿಗೂ ಮಂಗಳವಾಗಲಿ.””
03278032 ಮಾರ್ಕಂಡೇಯ ಉವಾಚ।
03278032a ಏವಮುಕ್ತ್ವಾ ಖಮುತ್ಪತ್ಯ ನಾರದಸ್ತ್ರಿದಿವಂ ಗತಃ।
03278032c ರಾಜಾಪಿ ದುಹಿತುಃ ಸರ್ವಂ ವೈವಾಹಿಕಮಕಾರಯತ್।।
ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿ ನಾರದನು ಗಗನವನ್ನೇರಿ ತ್ರಿದಿವಕ್ಕೆ ತೆರಳಿದನು. ರಾಜನಾದರೋ ಮಗಳ ವೈವಾಹಿಕ ಕಾರ್ಯಗಳೆಲ್ಲವನ್ನೂ ನಡೆಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ಅಷ್ಟಸಪ್ತತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಪ್ಪತ್ತೆಂಟನೆಯ ಅಧ್ಯಾಯವು.