269 ರಾಮೋಪಾಖ್ಯಾನೇ ರಾಮರಾವಣದ್ವಂದ್ವಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 269

ಸಾರ

ಯುದ್ಧವರ್ಣನೆ (1-14)

03269001 ಮಾರ್ಕಂಡೇಯ ಉವಾಚ।
03269001a ತತೋ ನಿವಿಶಮಾನಾಂಸ್ತಾನ್ಸೈನಿಕಾನ್ರಾವಣಾನುಗಾಃ।
03269001c ಅಭಿಜಗ್ಮುರ್ಗಣಾನೇಕೇ ಪಿಶಾಚಕ್ಷುದ್ರರಕ್ಷಸಾಂ।।
03269002a ಪರ್ವಣಃ ಪೂತನೋ ಜಂಭಃ ಖರಃ ಕ್ರೋಧವಶೋ ಹರಿಃ।
03269002c ಪ್ರರುಜಶ್ಚಾರುಜಶ್ಚೈವ ಪ್ರಘಸಶ್ಚೈವಮಾದಯಃ।।

ಮಾರ್ಕಂಡೇಯನು ಹೇಳಿದನು: “ಆಗ ಸೈನಿಕರು ಅಲ್ಲಿ ಬೀಡುಬಿಟ್ಟಿರಲು, ಅವರನ್ನು ರಾವಣನ ಕೆಲವು ಪಿಶಾಚ ಮತ್ತು ರಾಕ್ಷಸ ಅನುಚರರು - ಪರ್ವಣ, ಪೂತನ, ಜಂಭ, ಖರ, ಕ್ರೋಧವಶ, ಹರಿ, ಪ್ರರುಜ, ಅರುಜ, ಪ್ರಘಾಸ ಮತ್ತಿತರರು - ಆಕ್ರಮಣಮಾಡಿದರು.

03269003a ತತೋಽಭಿಪತತಾಂ ತೇಷಾಮದೃಶ್ಯಾನಾಂ ದುರಾತ್ಮನಾಂ।
03269003c ಅಂತರ್ಧಾನವಧಂ ತಜ್ಞಶ್ಚಕಾರ ಸ ವಿಭೀಷಣಃ।।
03269004a ತೇ ದೃಶ್ಯಮಾನಾ ಹರಿಭಿರ್ಬಲಿಭಿರ್ದೂರಪಾತಿಭಿಃ।
03269004c ನಿಹತಾಃ ಸರ್ವಶೋ ರಾಜನ್ಮಹೀಂ ಜಗ್ಮುರ್ಗತಾಸವಃ।।

ಆ ದುರಾತ್ಮರು ಅದೃಶ್ಯರಾಗಿ ಆಕ್ರಮಣ ಮಾಡಿದರು. ಆದರೆ ವಿಭೀಷಣನು ಅವರ ಅಂತರ್ಧಾನತ್ವವನ್ನು ಕೊನೆಗಾಳಿಸಿದನು. ರಾಜನ್! ಅವರು ಕಾಣುವಂತಾದಾಗ ಬಲಶಾಲಿಗಳು ದೂರಹಾರಬಲ್ಲವರೂ ಆದ ಕಪಿಗಳು ಅವರೆಲ್ಲರನ್ನೂ ಕೊಂದರು ಮತ್ತು ಅವರು ಸತ್ತು ನೆಲದಮೇಲೆ ಬಿದ್ದರು.

03269005a ಅಮೃಷ್ಯಮಾಣಃ ಸಬಲೋ ರಾವಣೋ ನಿರ್ಯಯಾವಥ।
03269005c ವ್ಯೂಹ್ಯ ಚೌಶನಸಂ ವ್ಯೂಹಂ ಹರೀನ್ಸರ್ವಾನಹಾರಯತ್।।

ಇದನ್ನು ಸಹಿಸಲಾರದೇ ರಾವಣನು, ಎಲ್ಲಕಪಿಗಳನ್ನೂ ಸಂಹರಿಸುವ ಉದ್ದೇಶದಿಂದ ಉಶಾನಸನ ವ್ಯೂಹವನ್ನು ರಚಿಸಿ ತನ್ನ ಬಲದೊಂದಿಗೆ ಹೊರಬಂದನು.

03269006a ರಾಘವಸ್ತ್ವಭಿನಿರ್ಯಾಯ ವ್ಯೂಢಾನೀಕಂ ದಶಾನನಂ।
03269006c ಬಾರ್ಹಸ್ಪತ್ಯಂ ವಿಧಿಂ ಕೃತ್ವಾ ಪ್ರತ್ಯವ್ಯೂಹನ್ನಿಶಾಚರಂ।।

ರಾಘವನಾದರೂ ಬೃಹಸ್ಪತಿಯ ವ್ಯೂಹರಚನೆಯನ್ನು ಮಾಡಿ ನಿಶಾಚರ ದಶಾನನನ ಸೇನೆಯನ್ನು ಎದುರಿಸಿ ಮುಂದೆಬಂದನು.

03269007a ಸಮೇತ್ಯ ಯುಯುಧೇ ತತ್ರ ತತೋ ರಾಮೇಣ ರಾವಣಃ।
03269007c ಯುಯುಧೇ ಲಕ್ಷ್ಮಣಶ್ಚೈವ ತಥೈವೇಂದ್ರಜಿತಾ ಸಹ।।
03269008a ವಿರೂಪಾಕ್ಷೇಣ ಸುಗ್ರೀವಸ್ತಾರೇಣ ಚ ನಿಖರ್ವಟಃ।
03269008c ತುಂಡೇನ ಚ ನಲಸ್ತತ್ರ ಪಟುಶಃ ಪನಸೇನ ಚ।।

ಅಲ್ಲಿ ರಾಮ-ರಾವಣರು ಯುದ್ಧದಲ್ಲಿ ಸೆಣಸಾಡಿದರು. ಹಾಗೆಯೇ ಲಕ್ಷ್ಮಣನು ಇಂದ್ರಜಿತುವಿನೊಂದಿಗೆ, ಸುಗ್ರೀವನು ವಿರೂಪಾಕ್ಷನೊಂದಿಗೆ, ನಿಖರವ್ರತನು ತಾರನೊಂದಿಗೆ, ನಲನು ತುಂಡನೊಂದಿಗೆ, ಮತ್ತು ಪಟುಷನು ಪನಸನೊಂದಿಗೆ ಯುದ್ಧ ಮಾಡಿದರು.

03269009a ವಿಷಹ್ಯಂ ಯಂ ಹಿ ಯೋ ಮೇನೇ ಸ ಸ ತೇನ ಸಮೇಯಿವಾನ್।
03269009c ಯುಯುಧೇ ಯುದ್ಧವೇಲಾಯಾಂ ಸ್ವಬಾಹುಬಲಮಾಶ್ರಿತಃ।।

ಯಾರನ್ನು ಯುದ್ಧದಲ್ಲಿ ಸರಿಸಾಟಿಯೆಂದು ಪರಿಗಣಿಸಿದರೋ ಅವರೊಂದಿಗೆ ಯುದ್ಧದ ವೇಳೆಗಳಲ್ಲಿ ಸ್ವಬಾಹುಬಲವನ್ನು ಆಶ್ರಯಿಸಿ ಯುದ್ಧಮಾಡಿದರು.

03269010a ಸ ಸಂಪ್ರಹಾರೋ ವವೃಧೇ ಭೀರೂಣಾಂ ಭಯವರ್ಧನಃ।
03269010c ಲೋಮಸಂಹರ್ಷಣೋ ಘೋರಃ ಪುರಾ ದೇವಾಸುರೇ ಯಥಾ।।

ಆ ಹೊಡೆದಾಟವು ಹೇಡಿಗಳ ಭಯವನ್ನು ಹೆಚ್ಚುಮಾಡಿತು. ಮೈನವಿರೇಳಿಸುವ ಆ ಘೋರ ಯುದ್ಧವು ಹಿಂದೆ ನಡೆದ ದೇವಾಸುರರ ಯುದ್ಧದಂತಿತ್ತು.

03269011a ರಾವಣೋ ರಾಮಮಾನರ್ಚಚ್ಚಕ್ತಿಶೂಲಾಸಿವೃಷ್ಟಿಭಿಃ।
03269011c ನಿಶಿತೈರಾಯಸೈಸ್ತೀಕ್ಷ್ಣೈ ರಾವಣಂ ಚಾಪಿ ರಾಘವಃ।।

ರಾವಣನು ರಾಮನ ಮೇಲೆ ಶಕ್ತಿ, ಶೂಲ ಮತ್ತು ಖಡ್ಗಗಳ ಮಳೆಯನ್ನು ಸುರಿಸಲು, ರಾಘವನೂ ಕೂಡ ರಾವಣನನ್ನು ಹರಿತ ತೀಕ್ಷ್ಣ ಉಕ್ಕಿನ ಶರಗಳಿಂದ ಆಕ್ರಮಣಮಾಡಿದನು.

03269012a ತಥೈವೇಂದ್ರಜಿತಂ ಯತ್ತಂ ಲಕ್ಷ್ಮಣೋ ಮರ್ಮಭೇದಿಭಿಃ।
03269012c ಇಂದ್ರಜಿಚ್ಚಾಪಿ ಸೌಮಿತ್ರಿಂ ಬಿಭೇದ ಬಹುಭಿಃ ಶರೈಃ।।

ಹಾಗೆಯೇ ಲಕ್ಷ್ಮಣನು ಜಾಗರೂಕನಾಗಿದ್ದ ಇಂದ್ರಜಿತುವನ್ನು ಮರ್ಮಭೇದಿ ಶರಗಳಿಂದ ಘಾತಿಗೊಳಿಸಲು ಇಂದ್ರಜಿತುವೂ ಕೂಡ ಸೌಮಿತ್ರಿಯನ್ನು ಬಹುಶರಗಳಿಂದ ಭೇದಿಸಿದನು.

03269013a ವಿಭೀಷಣಃ ಪ್ರಹಸ್ತಂ ಚ ಪ್ರಹಸ್ತಶ್ಚ ವಿಭೀಷಣಂ।
03269013c ಖಗಪತ್ರೈಃ ಶರೈಸ್ತೀಕ್ಷ್ಣೈರಭ್ಯವರ್ಷದ್ಗತವ್ಯಥಃ।।

ವಿಭೀಷಣನು ಪ್ರಹಸ್ತನ ಮೇಲೆ ಮತ್ತು ಪ್ರಹಸ್ತನು ವಿಭೀಷಣನ ಮೇಲೆ ಏನೂ ಚಿಂತಿಸದೇ ಪಕ್ಷಿಗಳ ರೆಕ್ಕೆಗಳುಳ್ಳ, ತೀಕ್ಷ್ಣಬಾಣಗಳನ್ನು ಹೊಡೆದರು.

03269014a ತೇಷಾಂ ಬಲವತಾಮಾಸೀನ್ಮಹಾಸ್ತ್ರಾಣಾಂ ಸಮಾಗಮಃ।
03269014c ವಿವ್ಯಥುಃ ಸಕಲಾ ಯೇನ ತ್ರಯೋ ಲೋಕಾಶ್ಚರಾಚರಾಃ।।

ಅಲ್ಲಿ ಬಲವತ್ತಾದ ಮಹಾಸ್ತ್ರಗಳ ಸಮಾಗಮವಾಗುತ್ತಿತ್ತು. ಇದರಿಂದ ಮೂರು ಲೋಕಗಳ ಸಕಲ ಚರಾಚರರೂ ವ್ಯಾಕುಲರಾದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ರಾಮರಾವಣದ್ವಂದ್ವಯುದ್ಧೇ ಏಕೋನಸಪ್ತತ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ರಾಮರಾವಣದ್ವಂದ್ವಯುದ್ಧದಲ್ಲಿ ಇನ್ನೂರಾಅರವತ್ತೊಂಭತ್ತನೆಯ ಅಧ್ಯಾಯವು.