ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 257
ಸಾರ
ದ್ರೌಪದಿಯ ಅಪಹರಣದ ಪ್ರಕರಣದಿಂದ ದುಃಖಿತನಾದ ಯುಧಿಷ್ಠಿರನು ತನಗಿಂತಲೂ ಹೆಚ್ಚು ದುರಾದೃಷ್ಟವಂತರು ಇನ್ನು ಯಾರಾದರೂ ಇದ್ದಾರೆಯೇ ಅಥವಾ ಹಿಂದೆ ಇದ್ದರೇ ಎಂದು ಮುನಿ ಮಾರ್ಕಂಡೇಯನಲ್ಲಿ ಪ್ರಶ್ನಿಸುವುದು (1-10).
03257001 ಜನಮೇಜಯ ಉವಾಚ।
03257001a ಏವಂ ಹೃತಾಯಾಂ ಕೃಷ್ಣಾಯಾಂ ಪ್ರಾಪ್ಯ ಕ್ಲೇಶಮನುತ್ತಮಂ।
03257001c ಅತ ಊರ್ಧ್ವಂ ನರವ್ಯಾಘ್ರಾಃ ಕಿಮಕುರ್ವತ ಪಾಂಡವಾಃ।।
ಜನಮೇಜಯನು ಹೇಳಿದನು: “ಕೃಷ್ಣೆಯ ಅಪಹರಣದಿಂದ ತುಂಬಾ ಕಷ್ಟವನ್ನು ಅನುಭವಿಸಿದ ನಂತರ ನರವ್ಯಾಘ್ರ ಪಾಂಡವರು ಏನು ಮಾಡಿದರು?”
03257002 ವೈಶಂಪಾಯನ ಉವಾಚ।
03257002a ಏವಂ ಕೃಷ್ಣಾಂ ಮೋಕ್ಷಯಿತ್ವಾ ವಿನಿರ್ಜಿತ್ಯ ಜಯದ್ರಥಂ।
03257002c ಆಸಾಂ ಚಕ್ರೇ ಮುನಿಗಣೈರ್ಧರ್ಮರಾಜೋ ಯುಧಿಷ್ಠಿರಃ।।
ವೈಶಂಪಾಯನನು ಹೇಳಿದನು: “ಈ ರೀತಿ ಜಯದ್ರಥನನ್ನು ಸೋಲಿಸಿ ಕೃಷ್ಣೆಯನ್ನು ಬಿಡುಗಡೆಗೊಳಿಸಿದ ಧರ್ಮರಾಜ ಯುಧಿಷ್ಠಿರನು ಮುನಿಗಳ ಮಧ್ಯದಲ್ಲಿ ಕುಳಿತುಕೊಂಡಿದ್ದನು.
03257003a ತೇಷಾಂ ಮಧ್ಯೇ ಮಹರ್ಷೀಣಾಂ ಶೃಣ್ವತಾಮನುಶೋಚತಾಂ।
03257003c ಮಾರ್ಕಂಡೇಯಮಿದಂ ವಾಕ್ಯಮಬ್ರವೀತ್ಪಾಂಡುನಂದನಃ।।
ಅದರ ಕುರಿತು ಕೇಳಿ ದುಃಖಿತರಾದ ಆ ಮಹರ್ಷಿಗಳ ಮಧ್ಯದಲ್ಲಿದ್ದ ಮಾರ್ಕಂಡೇಯನಿಗೆ ಪಾಂಡುನಂದನನು ಈ ಮಾತುಗಳನ್ನಾಡಿದನು:
03257004a ಮನ್ಯೇ ಕಾಲಶ್ಚ ಬಲವಾನ್ದೈವಂ ಚ ವಿಧಿನಿರ್ಮಿತಂ।
03257004c ಭವಿತವ್ಯಂ ಚ ಭೂತಾನಾಂ ಯಸ್ಯ ನಾಸ್ತಿ ವ್ಯತಿಕ್ರಮಃ।।
“ಬಲವಾನ್ ಕಾಲ ಮತ್ತು ಆಗಬೇಕಾಗಿದ್ದ ವಿಧಿನಿರ್ಮಿತ ದೈವವನ್ನು ಇರುವ ಯಾರೂ ಅತಿಕ್ರಮಿಸಲು ಆಗುವುದಿಲ್ಲ ಎನ್ನುವುದನ್ನು ಮನ್ನಿಸೋಣ.
03257005a ಕಥಂ ಹಿ ಪತ್ನೀಮಸ್ಮಾಕಂ ಧರ್ಮಜ್ಞಾಂ ಧರ್ಮಚಾರಿಣೀಂ।
03257005c ಸಂಸ್ಪೃಶೇದೀದೃಶೋ ಭಾವಃ ಶುಚಿಂ ಸ್ತೈನ್ಯಮಿವಾನೃತಂ।।
ಧರ್ಮಜ್ಞೆ ಮತ್ತು ಧರ್ಮಚಾರಿಣಿ ನಮ್ಮ ಪತ್ನಿಗೆ ಹೇಗೆ ತಾನೆ ಈ ರೀತಿ ನಡೆಯುತ್ತದೆ ಮತ್ತು ಶುಚಿಯಾದವನಿಗೆ ಸುಳ್ಳಿನ ಅಪವಾದವು ಹೇಗೆ ಬರುತ್ತದೆ?
03257006a ನ ಹಿ ಪಾಪಂ ಕೃತಂ ಕಿಂ ಚಿತ್ಕರ್ಮ ವಾ ನಿಂದಿತಂ ಕ್ವ ಚಿತ್।
03257006c ದ್ರೌಪದ್ಯಾ ಬ್ರಾಹ್ಮಣೇಷ್ವೇವ ಧರ್ಮಃ ಸುಚರಿತೋ ಮಹಾನ್।।
ದ್ರೌಪದಿಯು ಯಾವುದೇ ಪಾಪಕರ್ಮವನ್ನೂ ಮಾಡಲಿಲ್ಲ ಮತ್ತು ಯಾರನ್ನೂ ನಿಂದಿಸಲಿಲ್ಲ. ಮತ್ತು ಬ್ರಾಹ್ಮಣರೊಡನೆಯೂ ಮಹಾಧರ್ಮವನ್ನು ಆಚರಿಸಿಕೊಂಡಿದ್ದಾಳೆ.
03257007a ತಾಂ ಜಹಾರ ಬಲಾದ್ರಾಜಾ ಮೂಢಬುದ್ಧಿರ್ಜಯದ್ರಥಃ।
03257007c ತಸ್ಯಾಃ ಸಂಹರಣಾತ್ಪ್ರಾಪ್ತಃ ಶಿರಸಃ ಕೇಶವಾಪನಂ।।
03257007e ಪರಾಜಯಂ ಚ ಸಂಗ್ರಾಮೇ ಸಸಹಾಯಃ ಸಮಾಪ್ತವಾನ್।।
ಮೂಢಬುದ್ಧಿಯ ರಾಜಾ ಜಯದ್ರಥನು ಬಲಾತ್ಕಾರದಿಂದ ಅವಳನ್ನು ಅಪಹರಿಸಿದ. ಅವಳನ್ನು ಅಪಹರಿಸಿಹೋದುದರಿಂದ ತಲೆಯ ಕೂದಲನ್ನು ಬೋಳಿಸಿಕೊಂಡ. ಅವನ ಅನುಯಾಯಿಗಳೊಂದಿಗೆ ಸಂಗ್ರಾಮದಲ್ಲಿ ಪರಾಜಯವನ್ನು ಹೊಂದಿದ.
03257008a ಪ್ರತ್ಯಾಹೃತಾ ತಥಾಸ್ಮಾಭಿರ್ಹತ್ವಾ ತತ್ಸೈಂಧವಂ ಬಲಂ।
03257008c ತದ್ದಾರಹರಣಂ ಪ್ರಾಪ್ತಮಸ್ಮಾಭಿರವಿತರ್ಕಿತಂ।।
ಆ ಸೈಂಧವನ ಸೇನೆಯನ್ನು ಸಂಹರಿಸಿ ಅವಳನ್ನು ಹಿಂದೆ ಕರೆದುಕೊಂಡು ಬರುತ್ತಿದ್ದೆವು. ಆದರೆ ಅವನು ನಮ್ಮ ಪತ್ನಿಯನ್ನು ವಿಚಾರಮಾಡದೇ ಅಪಹರಿಸಿದ.
03257009a ದುಃಖಶ್ಚಾಯಂ ವನೇ ವಾಸೋ ಮೃಗಯಾಯಾಂ ಚ ಜೀವಿಕಾ।
03257009c ಹಿಂಸಾ ಚ ಮೃಗಜಾತೀನಾಂ ವನೌಕೋಭಿರ್ವನೌಕಸಾಂ।
03257009e ಜ್ಞಾತಿಭಿರ್ವಿಪ್ರವಾಸಶ್ಚ ಮಿಥ್ಯಾ ವ್ಯವಸಿತೈರಯಂ।।
ಮೃಗಗಳನ್ನು ಅವಲಂಬಿಸಿ ಜೀವಿಸುವ ಈ ವನವಾಸವು ದುಃಖತರವಾದುದು. ವನದಲ್ಲಿ ವಾಸಿಸುವವರು ವನದಲ್ಲಿರುವ ಮೃಗಜಾತಿಗಳನ್ನು ಬೇಟೆಯಾಡಿ ಹಿಂಸಿಸಬೇಕಾಗುತ್ತದೆ. ಮತ್ತು ಈ ವನವಾಸವನ್ನು ಮೋಸದಿಂದ ನಡೆದುಕೊಳ್ಳುವ ನಮ್ಮ ಬಾಂಧವರೇ ನಮಗೆ ಕೊಟ್ಟಿದ್ದಾರೆ.
03257010a ಅಸ್ತಿ ನೂನಂ ಮಯಾ ಕಶ್ಚಿದಲ್ಪಭಾಗ್ಯತರೋ ನರಃ।
03257010c ಭವತಾ ದೃಷ್ಟಪೂರ್ವೋ ವಾ ಶ್ರುತಪೂರ್ವೋಽಪಿ ವಾ ಭವೇತ್।।
ನನಗಿಂತಲೂ ದುರಾದೃಷ್ಟವಂತರು ಇನ್ನು ಯಾರಾದರೂ ಇದ್ದಾರೆಯೇ ಅಥವಾ ಹಿಂದೆ ಯಾರಾದರೂ ಇದ್ದರೇ? ಅಂಥವರನ್ನು ನೀನು ಇದಕ್ಕೂ ಹಿಂದೆ ನೋಡಿದ್ದೆಯಾ ಅಥವಾ ಕೇಳಿದ್ದೆಯಾ?”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಯುಧಿಷ್ಠಿರಪ್ರಶ್ನೇ ಸಪ್ತಪಂಚಾಶದಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಯುಧಿಷ್ಠಿರಪ್ರಶ್ನದಲ್ಲಿ ಇನ್ನೂರಾಐವತ್ತೇಳನೆಯ ಅಧ್ಯಾಯವು.