ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 249
ಸಾರ
ಕೋಟಿಕಾಶ್ಯನು ದ್ರೌಪದಿಯ ಬಳಿಸಾರಿ ತನ್ನ ಪರಿಚಯವನ್ನು ಹೇಳಿಕೊಂಡು ಅವಳ್ಯಾರೆಂದು ಕೇಳಿದುದು (1-13).
03249001 ಕೋಟಿಕಾಶ್ಯ ಉವಾಚ।
03249001a ಕಾ ತ್ವಂ ಕದಂಬಸ್ಯ ವಿನಮ್ಯ ಶಾಖಾಂ। ಏಕಾಶ್ರಮೇ ತಿಷ್ಠಸಿ ಶೋಭಮಾನಾ।
03249001c ದೇದೀಪ್ಯಮಾನಾಗ್ನಿಶಿಖೇವ ನಕ್ತಂ। ದೋಧೂಯಮಾನಾ ಪವನೇನ ಸುಭ್ರೂಃ।।
ಕೋಟಿಕಾಶ್ಯನು ಹೇಳಿದನು: “ಕದಂಬಶಾಖೆಯನ್ನು ಬಗ್ಗಿಸುತ್ತಿರುವ ನೀನು ಯಾರು? ಒಬ್ಬಳೇ ಆಶ್ರಮದಲ್ಲಿ ಶೋಭಮಾನಳಾಗಿ ನಿಂತಿರುವೆ? ಸುಭ್ರು! ರಾತ್ರಿಯಲ್ಲಿ ಅಗ್ನಿಶಿಖೆಯಂತೆ ಉರಿದು ಗಾಳಿಯ ಸಹಾಯದಿಂದ ಅರಣ್ಯವನ್ನೇ ಸುಡುವಂತಿರುವೆ.
03249002a ಅತೀವ ರೂಪೇಣ ಸಮನ್ವಿತಾ ತ್ವಂ। ನ ಚಾಪ್ಯರಣ್ಯೇಷು ಬಿಭೇಷಿ ಕಿಂ ನು।
03249002c ದೇವೀ ನು ಯಕ್ಷೀ ಯದಿ ದಾನವೀ ವಾ। ವರಾಪ್ಸರಾ ದೈತ್ಯವರಾಂಗನಾ ವಾ।।
ನೀನು ಅತೀವ ರೂಪಸಮನ್ವಿತೆಯಾಗಿರುವೆ. ಈ ಅರಣ್ಯದಲ್ಲಿ ಏಕೆ ನಿನಗೆ ಭಯವೆಂಬುದಿಲ್ಲ? ನೀನು ದೇವಿಯೋ, ಯಕ್ಷಿಯೋ, ದಾನವಿಯೋ, ಅಪ್ಸರೆಯೋ ಅಥವಾ ದೈತ್ಯವರಾಂಗನೆಯೋ?
03249003a ವಪುಷ್ಮತೀ ವೋರಗರಾಜಕನ್ಯಾ। ವನೇಚರೀ ವಾ ಕ್ಷಣದಾಚರಸ್ತ್ರೀ।
03249003c ಯದ್ಯೇವ ರಾಜ್ಞೋ ವರುಣಸ್ಯ ಪತ್ನೀ। ಯಮಸ್ಯ ಸೋಮಸ್ಯ ಧನೇಶ್ವರಸ್ಯ।।
ಅಥವಾ ನೀನು ಸುಂದರ ಉರಗರಾಜಕನ್ಯೆಯೋ? ಅಥವಾ ರಾತ್ರಿಹೊತ್ತು ವನವನ್ನು ಸಂಚರಿಸುವ ಕ್ಷಣದೆಯೋ? ಅಥವಾ ರಾಜ ವರುಣನ, ಯಮನ, ಸೋಮನ ಅಥವಾ ಧನೇಶ್ವರನ ಪತ್ನಿಯಾಗಿರಬಹುದೋ?
03249004a ಧಾತುರ್ವಿಧಾತುಃ ಸವಿತುರ್ವಿಭೋರ್ವಾ। ಶಕ್ರಸ್ಯ ವಾ ತ್ವಂ ಸದನಾತ್ಪ್ರಪನ್ನಾ।
03249004c ನ ಹ್ಯೇವ ನಃ ಪೃಚ್ಚಸಿ ಯೇ ವಯಂ ಸ್ಮ। ನ ಚಾಪಿ ಜಾನೀಮ ತವೇಹ ನಾಥಂ।।
ಧಾತ, ವಿಧಾತ, ಸವಿತು ಅಥವಾ ವಿಭು ಶಕ್ರನ ಅರಮನೆಯಿಂದ ಬಂದಿರುವವಳೋ? ನಾವು ಯಾರಾಗಿರಬಹುದೆಂದು ನೀನು ಕೇಳುತ್ತಿಲ್ಲ. ನಿನ್ನ ನಾಥರು ಯಾರೆಂದೂ ನಮಗೆ ತಿಳಿದಿಲ್ಲ.
03249005a ವಯಂ ಹಿ ಮಾನಂ ತವ ವರ್ಧಯಂತಃ। ಪೃಚ್ಚಾಮ ಭದ್ರೇ ಪ್ರಭವಂ ಪ್ರಭುಂ ಚ।
03249005c ಆಚಕ್ಷ್ವ ಬಂಧೂಂಶ್ಚ ಪತಿಂ ಕುಲಂ ಚ। ತತ್ತ್ವೇನ ಯಚ್ಚೇಹ ಕರೋಷಿ ಕಾರ್ಯಂ।।
ನಿನ್ನ ಮಾನವನ್ನು ಹೆಚ್ಚಿಸಲು ನಾವು ಕೇಳುತ್ತಿದ್ದೇವೆ. ಭದ್ರೇ! ನಿನ್ನ ಹುಟ್ಟು, ಪ್ರಭು, ಬಂಧುಗಳು, ಪತಿ, ಕುಲಗಳನ್ನು ಹೇಳು. ಮತ್ತು ಇಲ್ಲಿ ನಿನ್ನ ಕೆಲಸವೇನೆಂಬುದನ್ನೂ ಹೇಳು.
03249006a ಅಹಂ ತು ರಾಜ್ಞಃ ಸುರಥಸ್ಯ ಪುತ್ರೋ। ಯಂ ಕೋಟಿಕಾಶ್ಯೇತಿ ವಿದುರ್ಮನುಷ್ಯಾಃ।
03249006c ಅಸೌ ತು ಯಸ್ತಿಷ್ಠತಿ ಕಾಂಚನಾಂಗೇ। ರಥೇ ಹುತೋಽಗ್ನಿಶ್ಚಯನೇ ಯಥೈವ।
03249006e ತ್ರಿಗರ್ತರಾಜಃ ಕಮಲಾಯತಾಕ್ಷಿ। ಕ್ಷೇಮಂಕರೋ ನಾಮ ಸ ಏಷ ವೀರಃ।।
ನಾನು ರಾಜ ಸುರಥನ ಪುತ್ರ. ಜನರು ನನ್ನನ್ನು ಕೋಟಿಕಾಶ್ಯನೆಂದು ತಿಳಿದಿದ್ದಾರೆ. ಕಮಲಾಯತಾಕ್ಷೀ! ಕುಂಡಕ್ಕೆ ಆಹುತಿಯನ್ನು ಹಾಕಿದಾಗ ಉರಿಯುತ್ತಿರುವ ಅಗ್ನಿಯಂತೆ ಅಲ್ಲಿ ಕಾಂಚನ ರಥದಲ್ಲಿ ಇರುವ ಅವನು ತ್ರಿಗರ್ತರಾಜ ಕ್ಷೇಮಂಕರ ಎಂಬ ಹೆಸರಿನ ವೀರ.
03249007a ಅಸ್ಮಾತ್ಪರಸ್ತ್ವೇಷ ಮಹಾಧನುಷ್ಮಾನ್। ಪುತ್ರಃ ಕುಣಿಂದಾಧಿಪತೇರ್ವರಿಷ್ಠಃ।
03249007c ನಿರೀಕ್ಷತೇ ತ್ವಾಂ ವಿಪುಲಾಯತಾಂಸಃ। ಸುವಿಸ್ಮಿತಃ ಪರ್ವತವಾಸನಿತ್ಯಃ।।
ಅವನ ಹಿಂದೆ ಮಹಾಧನುಸ್ಸನ್ನು ಹಿಡಿದಿರುವವನು ಕುಣಿಂದಾಧಿಪತಿಯ ಹಿರಿಯ ಮಗನು. ನಿನ್ನನ್ನು ಅರಳಿದ ಕಣ್ಣುಗಳಿಂದ ದಿಟ್ಟಿಸಿ ನೋಡುತ್ತಿರುವ ಆ ಸುವಿಸ್ಮಿತನು ನಿತ್ಯವೂ ಪರ್ವತವಾಸಿಯು.
03249008a ಅಸೌ ತು ಯಃ ಪುಷ್ಕರಿಣೀಸಮೀಪೇ। ಶ್ಯಾಮೋ ಯುವಾ ತಿಷ್ಠತಿ ದರ್ಶನೀಯಃ।
03249008c ಇಕ್ಷ್ವಾಕುರಾಜ್ಞಃ ಸುಬಲಸ್ಯ ಪುತ್ರಃ। ಸ ಏಷ ಹಂತಾ ದ್ವಿಷತಾಂ ಸುಗಾತ್ರಿ।।
ಸುಂದರ ದೇಹದವಳೇ! ಅಲ್ಲಿ ತಾವರೆಯ ಕೊಳದ ಸಮೀಪದಲ್ಲಿ ನಿಂತಿರುವ ಕಪ್ಪುಬಣ್ಣದ ಸುಂದರ ಯುವಕನು ಇಕ್ಷ್ವಾಕುರಾಜ ಸುಬಲನ ಪುತ್ರ. ಇವನು ಅರಿಗಳ ಹಂತಕ.
03249009a ಯಸ್ಯಾನುಯಾತ್ರಂ ಧ್ವಜಿನಃ ಪ್ರಯಾಂತಿ। ಸೌವೀರಕಾ ದ್ವಾದಶ ರಾಜಪುತ್ರಾಃ।
03249009c ಶೋಣಾಶ್ವಯುಕ್ತೇಷು ರಥೇಷು ಸರ್ವೇ। ಮಖೇಷು ದೀಪ್ತಾ ಇವ ಹವ್ಯವಾಹಾಃ।।
03249010a ಅಂಗಾರಕಃ ಕುಂಜರಗುಪ್ತಕಶ್ಚ। ಶತ್ರುಂಜಯಃ ಸಂಜಯಸುಪ್ರವೃದ್ಧೌ।
03249010c ಪ್ರಭಂಕರೋಽಥ ಭ್ರಮರೋ ರವಿಶ್ಚ। ಶೂರಃ ಪ್ರತಾಪಃ ಕುಹರಶ್ಚ ನಾಮ।।
ಅಲ್ಲಿ ರಕ್ತದ ಬಣ್ಣದ ರಥಗಳಲ್ಲಿ ಕುಳಿತು ಮಖದಲ್ಲಿ ಪ್ರಜ್ವಲಿಸುವ ಅಗ್ನಿಗಳಂತೆ ಧ್ವಜಗಳನ್ನು ಹಾರಿಸುತ್ತಾ ಹೋಗುತ್ತಿರುವವರು ಹನ್ನೆರಡು ಸೌವೀರಕ ರಾಜಪುತ್ರರು. ಅವರ ಹೆಸರುಗಳು - ಅಂಗಾರಕ, ಕುಂಜರ, ಗುಪ್ತಕ, ಶತ್ರುಂಜಯ, ಸಂಜಯ, ಸುಪ್ರವೃದ್ಧ, ಪ್ರಭಂಕರ, ರವಿ, ಬ್ರಮರ, ಶೂರ, ಪ್ರತಾಮ ಮತ್ತು ಕುಹರ.
03249011a ಯಂ ಷಟ್ಸಹಸ್ರಾ ರಥಿನೋಽನುಯಾಂತಿ। ನಾಗಾ ಹಯಾಶ್ಚೈವ ಪದಾತಿನಶ್ಚ।
03249011c ಜಯದ್ರಥೋ ನಾಮ ಯದಿ ಶ್ರುತಸ್ತೇ। ಸೌವೀರರಾಜಃ ಸುಭಗೇ ಸ ಏಷಃ।।
ಸುಭಗೇ! ಆನೆಗಳು, ಕುದುರೆಗಳು ಮತ್ತು ಪದಾತಿಗಳೊಂದಿಗೆ ಆರು ಸಾವಿರ ರಥಿಗಳಿಂದ ಹಿಂಬಾಲಿಸಲ್ಪಟ್ಟು ಬರುತ್ತಿರುವವನೇ ಜಯದ್ರಥ ಎಂಬ ಹೆಸರಿನ, ನೀನು ಕೇಳಿರಬಲ್ಲವನಾದ, ಸೌವೀರರಾಜ.
03249012a ತಸ್ಯಾಪರೇ ಭ್ರಾತರೋಽದೀನಸತ್ತ್ವಾ। ಬಲಾಹಕಾನೀಕವಿದಾರಣಾಧ್ಯಾಃ।
03249012c ಸೌವೀರವೀರಾಃ ಪ್ರವರಾ ಯುವಾನೋ। ರಾಜಾನಮೇತೇ ಬಲಿನೋಽನುಯಾಂತಿ।।
ಅವನ ಹಿಂದೆ ಅವನ ತಮ್ಮಂದಿರು ಅದೀನಸತ್ವರಾದ ಸೌವೀರವೀರರು ಯುವ ಪ್ರವರರು ಈ ರಾಜನ ದಂಡನ್ನು ಬಲದಿಂದ ಕಾಯುತ್ತಿದ್ದಾರೆ.
03249013a ಏತೈಃ ಸಹಾಯೈರುಪಯಾತಿ ರಾಜಾ। ಮರುದ್ಗಣೈರಿಂದ್ರ ಇವಾಭಿಗುಪ್ತಃ।
03249013c ಅಜಾನತಾಂ ಖ್ಯಾಪಯ ನಃ ಸುಕೇಶಿ। ಕಸ್ಯಾಸಿ ಭಾರ್ಯಾ ದುಹಿತಾ ಚ ಕಸ್ಯ।।
ಮರುತರೆಂಬ ರಕ್ಷಕರೊಂದಿಗೆ ಇಂದ್ರನು ಹೇಗೋ ಹಾಗೆ ಇವರೊಂದಿಗೆ ರಾಜನು ಪ್ರಯಾಣಿಸುತ್ತಿದ್ದಾನೆ. ಸುಕೇಶೀ! ಈಗ ನೀನು ಯಾರ ಭಾರ್ಯೆ ಮತ್ತು ಯಾರ ಮಗಳು ಎನ್ನುವುದನ್ನು ನಮಗೆ ತಿಳಿಸಿಕೊಡು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಕೋಟಿಕಾಶ್ಯಪ್ರಶ್ನೇ ಏಕೋನಪಂಚದಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಕೋಟಿಕಾಶ್ಯಪ್ರಶ್ನದಲ್ಲಿ ಇನ್ನೂರಾನಲ್ವತ್ತೊಂಭತ್ತನೆಯ ಅಧ್ಯಾಯವು.