ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ವ್ರೀಹಿದ್ರೌಣಿಕಮಾಖ್ಯಾನ ಪರ್ವ
ಅಧ್ಯಾಯ 247
ಸಾರ
ದೇವದೂತನು ಸ್ವರ್ಗದ ಗುಣ-ದೋಷಗಳನ್ನು ವರ್ಣಿಸಿದುದು (1-36). ಮಹಾ ಗುಣ-ದೋಷಗಳಿರುವ ಸ್ವರ್ಗವು ತನಗೆ ಬೇಡವೆಂದು ದೇವದೂತನನ್ನು ಹಿಂದೆ ಕಳುಹಿಸಿ ಮುದ್ಗಲನು ಭತ್ತ ಕುಟ್ಟುವ ವೃತ್ತಿಯನ್ನು ತೊರೆದು ಧ್ಯಾನಯೋಗದಿಂದ ಪರಮ ಸಿದ್ಧಿಯನ್ನು ಪಡೆದುದು (37-43). ಯುಧಿಷ್ಠಿರನಿಗೂ ತಪಸ್ಸಿನಿಂದ ರಾಜ್ಯವನ್ನು ಪಡೆಯುತ್ತೀಯೆ ಎಂದು ಹೇಳಿ ವ್ಯಾಸನು ತೆರಳಿದುದು (44-47).
03247001 ದೇವದೂತ ಉವಾಚ।
03247001a ಮಹರ್ಷೇಽಕಾರ್ಯಬುದ್ಧಿಸ್ತ್ವಂ ಯಃ ಸ್ವರ್ಗಸುಖಮುತ್ತಮಂ।
03247001c ಸಂಪ್ರಾಪ್ತಂ ಬಹು ಮಂತವ್ಯಂ ವಿಮೃಶಸ್ಯಬುಧೋ ಯಥಾ।।
ದೇವದೂತನು ಹೇಳಿದನು: “ಮಹಾರ್ಷೇ! ನಿನ್ನ ಬುದ್ಧಿಯು ಕೆಲಸಕ್ಕೆ ಬಾರದೇ ಇರುವಂಥಹುದು! ಉತ್ತಮವಾದ, ಗೌರವಾನ್ವಿತವಾದ ಸ್ವರ್ಗಸುಖವನ್ನು ಪಡೆದು ತಿಳಿಯದೇ ಇರುವವನಂತೆ ವಿಮರ್ಶಿಸುತ್ತಿದ್ದೀಯೆ.
03247002a ಉಪರಿಷ್ಟಾದಸೌ ಲೋಕೋ ಯೋಽಯಂ ಸ್ವರಿತಿ ಸಂಜ್ಞಿತಃ।
03247002c ಊರ್ಧ್ವಗಃ ಸತ್ಪಥಃ ಶಶ್ವದ್ದೇವಯಾನಚರೋ ಮುನೇ।।
ಮುನೇ! ಸ್ವರ್ಗವೆಂದು ಕರೆಯಲ್ಪಟ್ಟಿರುವ ಲೋಕವು ನಮ್ಮ ಮೇಲೆ ಇದೆ. ಮೇಲೆ ಹೋಗಲು ದೇವಯಾನಗಳು ಓಡಾಡುವ ಉತ್ತಮ ಮಾರ್ಗವಿದೆ.
03247003a ನಾತಪ್ತತಪಸಃ ಪುಂಸೋ ನಾಮಹಾಯಜ್ಞಯಾಜಿನಃ।
03247003c ನಾನೃತಾ ನಾಸ್ತಿಕಾಶ್ಚೈವ ತತ್ರ ಗಚ್ಚಂತಿ ಮುದ್ಗಲ।।
ಮುದ್ಗಲ! ತಪಸ್ಸನ್ನು ತಪಿಸದ ತಪಸ್ವಿ, ಮಹಾಯಜ್ಞಗಳನ್ನು ಯಾಜಿಸದ ಪುರುಷ, ಸುಳ್ಳುಹೇಳುವವ, ಮತ್ತು ನಾಸ್ತಿಕ ಇವರುಗಳು ಅಲ್ಲಿಗೆ ಹೋಗಲಾರರು.
03247004a ಧರ್ಮಾತ್ಮಾನೋ ಜಿತಾತ್ಮಾನಃ ಶಾಂತಾ ದಾಂತಾ ವಿಮತ್ಸರಾಃ।
03247004c ದಾನಧರ್ಮರತಾಃ ಪುಂಸಃ ಶೂರಾಶ್ಚಾಹತಲಕ್ಷಣಾಃ।।
03247005a ತತ್ರ ಗಚ್ಚಂತಿ ಕರ್ಮಾಗ್ರ್ಯಂ ಕೃತ್ವಾ ಶಮದಮಾತ್ಮಕಂ।
03247005c ಲೋಕಾನ್ಪುಣ್ಯಕೃತಾಂ ಬ್ರಹ್ಮನ್ಸದ್ಭಿರಾಸೇವಿತಾನ್ನೃಭಿಃ।।
ಬ್ರಹ್ಮನ್! ಧರ್ಮಾತ್ಮರು, ಜಿತಾತ್ಮರು, ಶಾಂತರು, ದಾಂತರು, ಮಾತ್ಸರ್ಯವಿಲ್ಲದವರು, ದಾನ-ಧರ್ಮಗಳಲ್ಲಿ ನಿರತರಾದವರು, ಶೂರರು, ಯುದ್ಧದಲ್ಲಿ ಗಾಯದ ಗುರುತನ್ನು ಪಡೆದ ಪುರುಷರು, ಶಮ-ದಮಗಳಿಂದ ಆತ್ಮವನ್ನು ನಿಯಂತ್ರಣದಲ್ಲಿಟ್ಟುಕೊಂಡವರು, ಮತ್ತು ಒಳ್ಳೆಯವರು ಪುಣ್ಯಕೃತರು ವಾಸಿಸುವ ಆ ಲೋಕಗಳಿಗೆ ಹೋಗುತ್ತಾರೆ.
03247006a ದೇವಾಃ ಸಾಧ್ಯಾಸ್ತಥಾ ವಿಶ್ವೇ ಮರುತಶ್ಚ ಮಹರ್ಷಿಭಿಃ।
03247006c ಯಾಮಾ ಧಾಮಾಶ್ಚ ಮೌದ್ಗಲ್ಯ ಗಂಧರ್ವಾಪ್ಸರಸಸ್ತಥಾ।।
03247007a ಏಷಾಂ ದೇವನಿಕಾಯಾನಾಂ ಪೃಥಕ್ ಪೃಥಗನೇಕಶಃ।
03247007c ಭಾಸ್ವಂತಃ ಕಾಮಸಂಪನ್ನಾ ಲೋಕಾಸ್ತೇಜೋಮಯಾಃ ಶುಭಾಃ।।
ಮುದ್ಗಲ! ಅಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ದೇವತೆಗಳು, ಸಾಧ್ಯರು, ವಿಶ್ವೇದೇವರು, ಮರುತರು, ಮಹರ್ಷಿಗಳು, ಯಮ, ಧರ್ಮ, ಗಂಧರ್ವರು, ಹಾಗೆಯೇ ಅಪ್ಸರೆಯರು ವಾಸಿಸುವ, ಬೇಕಾದುದನ್ನು ನೀಡಬಲ್ಲ, ಪ್ರಕಾಶ-ತೇಜೋಮಯ ಶುಭ ಲೋಕಗಳು ಅನೇಕವಿವೆ.
03247008a ತ್ರಯಸ್ತ್ರಿಂಶತ್ಸಹಸ್ರಾಣಿ ಯೋಜನಾನಾಂ ಹಿರಣ್ಮಯಃ।
03247008c ಮೇರುಃ ಪರ್ವತರಾಡ್ಯತ್ರ ದೇವೋದ್ಯಾನಾನಿ ಮುದ್ಗಲ।।
03247009a ನಂದನಾದೀನಿ ಪುಣ್ಯಾನಿ ವಿಹಾರಾಃ ಪುಣ್ಯಕರ್ಮಣಾಂ।
ಮುದ್ಗಲ! ಅಲ್ಲಿ ಮೂವತ್ಮೂರು ಸಾವಿರ ಯೋಜನೆಯ ವಿಸ್ತೀರ್ಣದಲ್ಲಿ ಹಿರಣ್ಮಯ ಪರ್ವತರಾಜ ಮೇರುವಿದೆ. ಅಲ್ಲಿ ಪುಣ್ಯಕರ್ಮಿಗಳು ವಿಹರಿಸುವ ನಂದನ ಮೊದಲಾದ ದೇವ ಉದ್ಯಾನಗಳಿವೆ.
03247009c ನ ಕ್ಷುತ್ಪಿಪಾಸೇ ನ ಗ್ಲಾನಿರ್ನ ಶೀತೋಷ್ಣಭಯಂ ತಥಾ।।
03247010a ಬೀಭತ್ಸಮಶುಭಂ ವಾಪಿ ರೋಗಾ ವಾ ತತ್ರ ಕೇ ಚನ।
ಅಲ್ಲಿ ಹಸಿವು, ಬಾಯಾರಿಕೆ, ದುಃಖ, ಶೀತ, ಉಷ್ಣಗಳ ಭಯ, ಬೀಭತ್ಸ, ಅಶುಭ ಅಥವಾ ರೋಗವಾಗಲೀ ಏನೂ ಇಲ್ಲ.
03247010c ಮನೋಜ್ಞಾಃ ಸರ್ವತೋ ಗಂಧಾಃ ಸುಖಸ್ಪರ್ಶಾಶ್ಚ ಸರ್ವಶಃ।।
03247011a ಶಬ್ದಾಃ ಶ್ರುತಿಮನೋಗ್ರಾಹ್ಯಾಃ ಸರ್ವತಸ್ತತ್ರ ವೈ ಮುನೇ।
ಮುನೇ! ಅಲ್ಲಿ ಎಲ್ಲಡೆಯಲ್ಲಿಯೂ ಮನೋಜ್ಞವಾದ ಸುಗಂಧ, ಎಲ್ಲೆಡೆಯಲ್ಲಿಯೂ ಸುಖಸ್ಪರ್ಶ, ಮತ್ತು ಎಲ್ಲೆಡೆಯಿಂದಲೂ ಮನಸ್ಸಿಗೆ ಹಿಡಿಯುವ ಶಬ್ಧಗಳು ಕೇಳಿಬರುತ್ತವೆ.
03247011c ನ ಶೋಕೋ ನ ಜರಾ ತತ್ರ ನಾಯಾಸಪರಿದೇವನೇ।।
03247012a ಈದೃಶಃ ಸ ಮುನೇ ಲೋಕಃ ಸ್ವಕರ್ಮಫಲಹೇತುಕಃ।
ಅಲ್ಲಿ ಶೋಕವಿಲ್ಲ, ವೃದ್ಧಾಪ್ಯವಿಲ್ಲ, ಆಯಾಸ ಪರಿದೇವನೆಗಳಿಲ್ಲ. ಮುನೇ! ಸ್ವಕರ್ಮಫಲಕಾರಣವಾದ ಆ ಲೋಕವು ಈ ರೀತಿಯಿದೆ.
03247012c ಸುಕೃತೈಸ್ತತ್ರ ಪುರುಷಾಃ ಸಂಭವಂತ್ಯಾತ್ಮಕರ್ಮಭಿಃ।।
03247013a ತೈಜಸಾನಿ ಶರೀರಾಣಿ ಭವಂತ್ಯತ್ರೋಪಪದ್ಯತಾಂ।
03247013c ಕರ್ಮಜಾನ್ಯೇವ ಮೌದ್ಗಲ್ಯ ನ ಮಾತೃಪಿತೃಜಾನ್ಯುತ।।
ಪುರುಷರು ತಮ್ಮ ಸುಕೃತಗಳಿಂದ ಅಲ್ಲಿರುತ್ತಾರೆ. ಅಲ್ಲಿರುವವರ ಶರೀರಗಳು ಹೊಳೆಯುತ್ತಿರುತ್ತವೆ. ಮೌದ್ಗಲ್ಯ! ಇದು ಅವರ ಸ್ವಂತ ಕರ್ಮಗಳಿಂದ ಹುಟ್ಟಿರುವುದು. ತಂದೆತಾಯಿಯರ ಕರ್ಮಗಳಿಂದಲ್ಲ.
03247014a ನ ಚ ಸ್ವೇದೋ ನ ದೌರ್ಗಂಧ್ಯಂ ಪುರೀಷಂ ಮೂತ್ರಮೇವ ಚ।
03247014c ತೇಷಾಂ ನ ಚ ರಜೋ ವಸ್ತ್ರಂ ಬಾಧತೇ ತತ್ರ ವೈ ಮುನೇ।।
ಅಲ್ಲಿ ಬೆವರಿಲ್ಲ, ದುರ್ಗಂಧವಿಲ್ಲ, ಮಲವಿಲ್ಲ, ಮೂತ್ರವಿಲ್ಲ. ಮುನೇ! ಅಲ್ಲಿ ಧೂಳು ಅವರ ವಸ್ತ್ರವನ್ನು ಹೊಲಸುಮಾಡುವುದಿಲ್ಲ.
03247015a ನ ಮ್ಲಾಯಂತಿ ಸ್ರಜಸ್ತೇಷಾಂ ದಿವ್ಯಗಂಧಾ ಮನೋರಮಾಃ।
03247015c ಪರ್ಯುಹ್ಯಂತೇ ವಿಮಾನೈಶ್ಚ ಬ್ರಹ್ಮನ್ನೇವಂವಿಧಾಶ್ಚ ತೇ।।
ಅವರ ದಿವ್ಯಸುಗಂಧದ ಮನೋರಮ ಮಾಲೆಗಳು ಮಾಸುವುದಿಲ್ಲ. ಬ್ರಹ್ಮನ್! ಈ ತರಹದ ವಿಮಾನಗಳಲ್ಲಿ ಸಂಚರಿಸುತ್ತಾರೆ.
03247016a ಈರ್ಷ್ಯಾಶೋಕಕ್ಲಮಾಪೇತಾ ಮೋಹಮಾತ್ಸರ್ಯವರ್ಜಿತಾಃ।
03247016c ಸುಖಂ ಸ್ವರ್ಗಜಿತಸ್ತತ್ರ ವರ್ತಯಂತಿ ಮಹಾಮುನೇ।।
ಮಹಾಮುನೇ! ಈರ್ಷ್ಯೆ, ಶೋಕ, ಆಯಾಸ, ಮೋಹ, ಮಾತ್ಸ್ಯರ್ಯಗಳನ್ನು ತೊರೆದು ಸ್ವರ್ಗವನ್ನು ಗೆದ್ದವರು ಅಲ್ಲಿ ಸುಖವಾಗಿರುತ್ತಾರೆ.
03247017a ತೇಷಾಂ ತಥಾವಿಧಾನಾಂ ತು ಲೋಕಾನಾಂ ಮುನಿಪುಂಗವ।
03247017c ಉಪರ್ಯುಪರಿ ಶಕ್ರಸ್ಯ ಲೋಕಾ ದಿವ್ಯಗುಣಾನ್ವಿತಾಃ।।
ಮುನಿಪುಂಗವ! ಇವುಗಳ ಮೇಲೆ ಇನ್ನೂ ಅನೇಕ ದಿವ್ಯ ಗುಣಾನ್ವಿತ ಲೋಕಗಳಿವೆ. ಮೇಲೆ ಶಕ್ರನ ಲೋಕವಿದೆ.
03247018a ಪುರಸ್ತಾದ್ಬ್ರಹ್ಮಣಸ್ತತ್ರ ಲೋಕಾಸ್ತೇಜೋಮಯಾಃ ಶುಭಾಃ।
03247018c ಯತ್ರ ಯಾಂತ್ಯೃಷಯೋ ಬ್ರಹ್ಮನ್ಪೂತಾಃ ಸ್ವೈಃ ಕರ್ಮಭಿಃ ಶುಭೈಃ।।
ಅದರ ಮೇಲೆ ತೇಜೋಮಯವಾದ ಶುಭ ಬ್ರಹ್ಮಲೋಕವಿದೆ. ಬ್ರಹ್ಮನ್! ಅಲ್ಲಿ ತಮ್ಮ ಶುಭಕರ್ಮಗಳಿಂದ ಪೂತರಾದ ಋಷಿಗಳು ಹೋಗುತ್ತಾರೆ.
03247019a ಋಭವೋ ನಾಮ ತತ್ರಾನ್ಯೇ ದೇವಾನಾಮಪಿ ದೇವತಾಃ।
03247019c ತೇಷಾಂ ಲೋಕಾಃ ಪರತರೇ ತಾನ್ಯಜಂತೀಹ ದೇವತಾಃ।।
ಅಲ್ಲಿ ದೇವತೆಗಳಿಗೂ ದೇವತೆಗಳಾದ ಋಭವ ಎನ್ನುವವರು ವಾಸಿಸುತ್ತಾರೆ. ಅವರ ಲೋಕಗಳು ಪರತರವಾಗಿವೆ ಮತ್ತು ದೇವತೆಗಳೂ ಅಲ್ಲಿ ಯಾಜಿಸುತ್ತಾರೆ.
03247020a ಸ್ವಯಂಪ್ರಭಾಸ್ತೇ ಭಾಸ್ವಂತೋ ಲೋಕಾಃ ಕಾಮದುಘಾಃ ಪರೇ।
03247020c ನ ತೇಷಾಂ ಸ್ತ್ರೀಕೃತಸ್ತಾಪೋ ನ ಲೋಕೈಶ್ವರ್ಯಮತ್ಸರಃ।।
ಅವರು ತಮ್ಮದೇ ಪ್ರಭೆಯಿಂದ ಬೆಳಗುತ್ತಾರೆ ಮತ್ತು ಜನರು ಬಯಸಿದುದನ್ನು ಕೊಡುತ್ತಾರೆ. ಅವರಿಗೆ ಸ್ತ್ರೀಯರಿಂದುಂಟಾಗುವ ತಾಪವಿರುವುದಿಲ್ಲ. ಐಶ್ವರ್ಯವನ್ನು ಹೊಂದಿರುವುದಿಲ್ಲ; ಮಾತ್ಸರ್ಯವಿರುವುದಿಲ್ಲ.
03247021a ನ ವರ್ತಯಂತ್ಯಾಹುತಿಭಿಸ್ತೇ ನಾಪ್ಯಮೃತಭೋಜನಾಃ।
03247021c ತಥಾ ದಿವ್ಯಶರೀರಾಸ್ತೇ ನ ಚ ವಿಗ್ರಹಮೂರ್ತಯಃ।।
ಅವರು ಆಹುತಿಗಳನ್ನು ಸ್ವೀಕರಿಸಿ ವೃದ್ಧಿಯಾಗುವುದಿಲ್ಲ. ಅಮೃತಭೋಜನವನ್ನೂ ಮಾಡಿದವರಲ್ಲ. ಅವರು ದಿವ್ಯಶರೀರವನ್ನು ಹೊಂದಿರುತ್ತಾರೆ. ವಿಗ್ರಹ ಮೂರ್ತಿಗಳಲ್ಲ.
03247022a ನ ಸುಖೇ ಸುಖಕಾಮಾಶ್ಚ ದೇವದೇವಾಃ ಸನಾತನಾಃ।
03247022c ನ ಕಲ್ಪಪರಿವರ್ತೇಷು ಪರಿವರ್ತಂತಿ ತೇ ತಥಾ।।
ಈ ಸನಾತನ ದೇವರ ದೇವತೆಗಳು ಸುಖವನ್ನು ಬಯಸಿ ಸುಖದಿಂದಿರುವುದಿಲ್ಲ. ಅವರು ಕಲ್ಪಗಳು ಬದಲಾಗುವಾಗ ಬದಲಾಗುವುದಿಲ್ಲ.
03247023a ಜರಾ ಮೃತ್ಯುಃ ಕುತಸ್ತೇಷಾಂ ಹರ್ಷಃ ಪ್ರೀತಿಃ ಸುಖಂ ನ ಚ।
03247023c ನ ದುಃಖಂ ನ ಸುಖಂ ಚಾಪಿ ರಾಗದ್ವೇಷೌ ಕುತೋ ಮುನೇ।।
ಮುನೇ! ಅವರಿಗೆ ವೃದ್ಧಾಪ್ಯ, ಮೃತ್ಯುವು ಎಲ್ಲಿದೆ? ಪ್ರೀತಿ ಸುಖಗಳೂ ಇಲ್ಲ. ದುಃಖ-ಸುಖಗಳಿಲ್ಲದ ಅವರಿಗೆ ರಾಗ-ದ್ವೇಷಗಳು ಎಲ್ಲಿಂದ?
03247024a ದೇವಾನಾಮಪಿ ಮೌದ್ಗಲ್ಯ ಕಾಂಕ್ಷಿತಾ ಸಾ ಗತಿಃ ಪರಾ।
03247024c ದುಷ್ಪ್ರಾಪಾ ಪರಮಾ ಸಿದ್ಧಿರಾಗಮ್ಯಾ ಕಾಮಗೋಚರೈಃ।।
ಮುದ್ಗಲ! ಅವರ ಪರಮ ಗತಿಯನ್ನು ದೇವತೆಗಳು ಕೂಡ ಬಯಸುತ್ತಾರೆ. ಆ ಪರಮಸಿದ್ಧಿಯನ್ನು ಪಡೆಯುವುದು ಕಷ್ಟ ಮತ್ತು ಕಾಮಗೋಚರರಿಗೆ ಅಗಮ್ಯ.
03247025a ತ್ರಯಸ್ತ್ರಿಂಶದಿಮೇ ಲೋಕಾಃ ಶೇಷಾ ಲೋಕಾ ಮನೀಷಿಭಿಃ।
03247025c ಗಮ್ಯಂತೇ ನಿಯಮೈಃ ಶ್ರೇಷ್ಠೈರ್ದಾನೈರ್ವಾ ವಿಧಿಪೂರ್ವಕೈಃ।।
ಅಂಥಹವರ ಸಂಖ್ಯೆ ಮೂವತ್ತುಮೂರು. ಅವರ ಲೋಕಕ್ಕೆ ವಿಧಿಪೂರ್ವಕವಾಗಿ ನಿಯಮಗಳಿಂದ ಶ್ರೇಷ್ಠ ದಾನಮಾಡಿದವರು ಹೋಗುತ್ತಾರೆ.
03247026a ಸೇಯಂ ದಾನಕೃತಾ ವ್ಯುಷ್ಟಿರತ್ರ ಪ್ರಾಪ್ತಾ ಸುಖಾವಹಾ।
03247026c ತಾಂ ಭುಂಕ್ಷ್ವ ಸುಕೃತೈರ್ಲಬ್ಧಾಂ ತಪಸಾ ದ್ಯೋತಿತಪ್ರಭಃ।।
ನೀನು ಮಾಡಿದ ದಾನಗಳ ಮೂಲಕ ನೀನೂ ಕೂಡ ಪ್ರಭೆಯಿಂದ ದ್ಯೋತಿಸಲ್ಪಟ್ಟ ಈ ಸುಖವನ್ನು ಪಡೆದಿದ್ದೀಯೆ. ತಪಸ್ಸಿನಿಂದ ಸುಕೃತಗಳಿಂದ ಪಡೆದ ಅದನ್ನು ಅನುಭೋಗಿಸು.
03247027a ಏತತ್ಸ್ವರ್ಗಸುಖಂ ವಿಪ್ರ ಲೋಕಾ ನಾನಾವಿಧಾಸ್ತಥಾ।
03247027c ಗುಣಾಃ ಸ್ವರ್ಗಸ್ಯ ಪ್ರೋಕ್ತಾಸ್ತೇ ದೋಷಾನಪಿ ನಿಬೋಧ ಮೇ।।
ವಿಪ್ರ! ಇದು ಸ್ವರ್ಗಲೋಕದ ನಾನಾವಿಧದ ಸುಖದ ಗುಣಗಳು. ಈಗ ನಿನಗೆ ಹೇಳುವ ದೋಷಗಳ ಕುರಿತೂ ಕೇಳು.
03247028a ಕೃತಸ್ಯ ಕರ್ಮಣಸ್ತತ್ರ ಭುಜ್ಯತೇ ಯತ್ಫಲಂ ದಿವಿ।
03247028c ನ ಚಾನ್ಯತ್ಕ್ರಿಯತೇ ಕರ್ಮ ಮೂಲಚ್ಚೇದೇನ ಭುಜ್ಯತೇ।।
03247029a ಸೋಽತ್ರ ದೋಷೋ ಮಮ ಮತಸ್ತಸ್ಯಾಂತೇ ಪತನಂ ಚ ಯತ್।
03247029c ಸುಖವ್ಯಾಪ್ತಮನಸ್ಕಾನಾಂ ಪತನಂ ಯಚ್ಚ ಮುದ್ಗಲ।।
ಮುದ್ಗಲ! ದಿವಿಯಲ್ಲಿ ಮೊದಲೇ ಮಾಡಿದ ಕರ್ಮಗಳ ಫಲವನ್ನು ಅಲ್ಲಿ ಅನುಭವಿಸಬಹುದೇ ಹೊರತು ಇತರ ಕರ್ಮಗಳನ್ನು ಮಾಡಲಿಕ್ಕಾಗುವುದಿಲ್ಲ. ಹಿಂದಿನ ಕರ್ಮಗಳ ಫಲಗಳನ್ನು ಸಂಪೂರ್ಣವಾಗಿ ಅನುಭವಿಸಬೇಕು ಮತ್ತು ಅದು ಮುಗಿದ ನಂತರ ಅಲ್ಲಿಂದ ಪತನವನ್ನು ಹೊಂದುತ್ತಾನೆ ಎನ್ನುವುದು ನನ್ನ ಪ್ರಕಾರ ಅಲ್ಲಿಯ ದೋಷ.
03247030a ಅಸಂತೋಷಃ ಪರೀತಾಪೋ ದೃಷ್ಟ್ವಾ ದೀಪ್ತತರಾಃ ಶ್ರಿಯಃ।
03247030c ಯದ್ಭವತ್ಯವರೇ ಸ್ಥಾನೇ ಸ್ಥಿತಾನಾಂ ತಚ್ಚ ದುಷ್ಕರಂ।।
ಆ ಶ್ರೇಷ್ಠ ಸ್ಥಾನದಲ್ಲಿದ್ದುಕೊಂಡು, ದೀಪ್ತ ಶ್ರೀಯನ್ನು ಹೊಂದಿದ್ದು ನಂತರ ಪರಿತಪಿಸುವುದು ಮತ್ತು ದುಃಖಪಡುವುದನ್ನು ನೋಡುವುದು ದುಷ್ಕರ.
03247031a ಸಂಜ್ಞಾಮೋಹಶ್ಚ ಪತತಾಂ ರಜಸಾ ಚ ಪ್ರಧರ್ಷಣಂ।
03247031c ಪ್ರಂಲಾನೇಷು ಚ ಮಾಲ್ಯೇಷು ತತಃ ಪಿಪತಿಷೋರ್ಭಯಂ।।
ಕೆಳಗೆ ಬೀಳುವವರ ಸಂಜ್ಞೆಗಳು ಮೋಹದಿಂದ ಕೂಡಿದ್ದು ರಜಸ್ಸಿನಿಂದ ತುಂಬಿರುತ್ತವೆ. ಬಾಡಿಹೋಗುತ್ತಿರುವ ಮಾಲೆಗಳಂತೆ ಬೀಳುತ್ತಿರುವವರನ್ನು ಭಯವು ಕವಿಯುತ್ತದೆ.
03247032a ಆ ಬ್ರಹ್ಮಭವನಾದೇತೇ ದೋಷಾ ಮೌದ್ಗಲ್ಯ ದಾರುಣಾಃ।
03247032c ನಾಕಲೋಕೇ ಸುಕೃತಿನಾಂ ಗುಣಾಸ್ತ್ವಯುತಶೋ ನೃಣಾಂ।।
ಮುದ್ಗಲ! ಈ ದಾರುಣ ದೋಷಗಳು ಬ್ರಹ್ಮಭವನದವರೆಗೂ ಇದೆ. ಸುಕೃತ ಮಾನವರು ನಾಕಲೋಕದಲ್ಲಿ ಅಗಣಿತ ಗುಣಗಳನ್ನು ಅನುಭವಿಸುತ್ತಾರೆ.
03247033a ಅಯಂ ತ್ವನ್ಯೋ ಗುಣಃ ಶ್ರೇಷ್ಠಶ್ಚ್ಯುತಾನಾಂ ಸ್ವರ್ಗತೋ ಮುನೇ।
03247033c ಶುಭಾನುಶಯಯೋಗೇನ ಮನುಷ್ಯೇಷೂಪಜಾಯತೇ।।
ಮುನೇ! ಸ್ವರ್ಗದಿಂದ ಚ್ಯುತರಾದ ಶ್ರೇಷ್ಠರು ಶುಭಾನುಶಯ ಯೋಗದಿಂದ ಮನುಷ್ಯರಲ್ಲಿ ಹುಟ್ಟುತ್ತಾರೆ. ಇದು ಇದರ ಇನ್ನೊಂದು ಗುಣ.
03247034a ತತ್ರಾಪಿ ಸುಮಹಾಭಾಗಃ ಸುಖಭಾಗಭಿಜಾಯತೇ।
03247034c ನ ಚೇತ್ಸಂಬುಧ್ಯತೇ ತತ್ರ ಗಚ್ಚತ್ಯಧಮತಾಂ ತತಃ।।
ಅಲ್ಲಿಯೂ ಕೂಡ ಆ ಸುಮಹಾಭಾಗರು ತಿಳಿದವರಾಗಿದ್ದರೆ ಸುಖಗಳಿಗೆ ಭಾಗಿಯಾಗುತ್ತಾರೆ. ಇಲ್ಲದಿದ್ದರೆ ಕೆಳಗೆ ಹೋಗುತ್ತಾರೆ.
03247035a ಇಹ ಯತ್ಕ್ರಿಯತೇ ಕರ್ಮ ತತ್ಪರತ್ರೋಪಭುಜ್ಯತೇ।
03247035c ಕರ್ಮಭೂಮಿರಿಯಂ ಬ್ರಹ್ಮನ್ಫಲಭೂಮಿರಸೌ ಮತಾ।।
ಇಲ್ಲಿ ಮಾಡಿದ ಕರ್ಮಗಳನ್ನು ಮುಂದಿನದರಲ್ಲಿ ಅನುಭವಿಸುತ್ತಾರೆ. ಬ್ರಹ್ಮನ್! ಇದು ಕರ್ಮಭೂಮಿಯಾಗಿದ್ದರೆ ಅದನ್ನು ಫಲಭೂಮಿಯೆಂದು ತಿಳಿಯುತ್ತಾರೆ.
03247036a ಏತತ್ತೇ ಸರ್ವಮಾಖ್ಯಾತಂ ಯನ್ಮಾಂ ಪೃಚ್ಚಸಿ ಮುದ್ಗಲ।
03247036c ತವಾನುಕಂಪಯಾ ಸಾಧೋ ಸಾಧು ಗಚ್ಚಾಮ ಮಾಚಿರಂ।।
ಮುದ್ಗಲ! ನನಗೆ ಕೇಳಿದ ಎಲ್ಲವನ್ನೂ ನಿನಗೆ ಹೇಳಿದ್ದೇನೆ. ಸಾಧು! ನಿನಗೆ ಒಳ್ಳೆಯ ಅನುಕಂಪವಿದ್ದರೆ ತಡಮಾಡದೇ ಹೋಗೋಣ.””
03247037 ವ್ಯಾಸ ಉವಾಚ।
03247037a ಏತಚ್ಚ್ರುತ್ವಾ ತು ಮೌದ್ಗಲ್ಯೋ ವಾಕ್ಯಂ ವಿಮಮೃಶೇ ಧಿಯಾ।
03247037c ವಿಮೃಶ್ಯ ಚ ಮುನಿಶ್ರೇಷ್ಠೋ ದೇವದೂತಮುವಾಚ ಹ।।
ವ್ಯಾಸನು ಹೇಳಿದನು: “ಇದನ್ನು ಕೇಳಿದ ಮೌದ್ಗಲ್ಯನು ಮನಸ್ಸಿನಲ್ಲಿಯೇ ವಿಮರ್ಶಿಸಿದನು. ವಿಮರ್ಶಿಸಿ ಆ ಮುನಿಶ್ರೇಷ್ಠನು ದೇವದೂತನಿಗೆ ಹೇಳಿದನು.
03247038a ದೇವದೂತ ನಮಸ್ತೇಽಸ್ತು ಗಚ್ಚ ತಾತ ಯಥಾಸುಖಂ।
03247038c ಮಹಾದೋಷೇಣ ಮೇ ಕಾರ್ಯಂ ನ ಸ್ವರ್ಗೇಣ ಸುಖೇನ ವಾ।।
“ಗೆಳೆಯ! ದೇವದೂತ! ನಿನಗೆ ನಮಸ್ಕಾರಗಳು. ಯಥಾಸುಖವಾಗಿ ಹೋಗು. ಮಹಾದೋಷ ಅಥವಾ ಗುಣಗಳಿಂದ ಕೂಡಿದ ಸ್ವರ್ಗದಿಂದ ನನಗೇನೂ ಕೆಲಸವಿಲ್ಲ.
03247039a ಪತನಂ ತನ್ಮಹದ್ದುಃಖಂ ಪರಿತಾಪಃ ಸುದಾರುಣಃ।
03247039c ಸ್ವರ್ಗಭಾಜಶ್ಚ್ಯವಂತೀಹ ತಸ್ಮಾತ್ಸ್ವರ್ಗಂ ನ ಕಾಮಯೇ।।
ಸ್ವರ್ಗವನ್ನು ಭೋಗಿಸಿದ ನಂತರ ಆ ಮಹಾದುಃಖ ಮತ್ತು ಸುದಾರುಣ ಪರಿತಾಪದ ಪತನವಿದೆ. ಆದುದರಿಂದ ನನಗೆ ಸ್ವರ್ಗವು ಬೇಕಾಗಿಲ್ಲ.
03247040a ಯತ್ರ ಗತ್ವಾ ನ ಶೋಚಂತಿ ನ ವ್ಯಥಂತಿ ಚಲಂತಿ ವಾ।
03247040c ತದಹಂ ಸ್ಥಾನಮತ್ಯಂತಂ ಮಾರ್ಗಯಿಷ್ಯಾಮಿ ಕೇವಲಂ।।
ಎಲ್ಲಿ ಶೋಕವಿಲ್ಲವೋ, ವ್ಯಥೆಯಿಲ್ಲವೋ, ಚಲನೆಯಿಲ್ಲವೋ ಕೇವಲ ಆ ಅತ್ಯಂತವಾದ ಸ್ಥಾನದ ಮಾರ್ಗವಾಗಿ ಹೋಗಲು ಬಯಸುತ್ತೇನೆ.”
03247041a ಇತ್ಯುಕ್ತ್ವಾ ಸ ಮುನಿರ್ವಾಕ್ಯಂ ದೇವದೂತಂ ವಿಸೃಜ್ಯ ತಂ।
03247041c ಶಿಲೋಂಚವೃತ್ತಿಮುತ್ಸೃಜ್ಯ ಶಮಮಾತಿಷ್ಠದುತ್ತಮಂ।।
ಈ ಮಾತುಗಳನ್ನಾಡಿ ಆ ಮುನಿಯು ದೇವದೂತನನ್ನು ಕಳುಹಿಸಿದನು. ಭತ್ತಕುಟ್ಟುವ ವೃತ್ತಿಯನ್ನು ಬಿಟ್ಟು ಉತ್ತಮ ಶಾಂತಿಯನ್ನು ಹೊಂದಿದನು.
03247042a ತುಲ್ಯನಿಂದಾಸ್ತುತಿರ್ಭೂತ್ವಾ ಸಮಲೋಷ್ಟಾಶ್ಮಕಾಂಚನಃ।
03247042c ಜ್ಞಾನಯೋಗೇನ ಶುದ್ಧೇನ ಧ್ಯಾನನಿತ್ಯೋ ಬಭೂವ ಹ।।
ನಿಂದನೆ ಸ್ತುತಿಗಳನ್ನು ಸಮನಾಗಿ ಕಾಣುತ್ತಾ, ಕಲ್ಲು ಕಾಂಚನಗಳನ್ನು ಸಮನಾಗಿ ಕಾಣುತ್ತಾ ಜ್ಞಾನಯೋಗದಿಂದ ಶುದ್ಧನಾಗಿ ಧ್ಯಾನನಿತ್ಯನಾದನು.
03247043a ಧ್ಯಾನಯೋಗಾದ್ಬಲಂ ಲಬ್ಧ್ವಾ ಪ್ರಾಪ್ಯ ಚರ್ದ್ಧಿಮನುತ್ತಮಾಂ।
03247043c ಜಗಾಮ ಶಾಶ್ವತೀಂ ಸಿದ್ಧಿಂ ಪರಾಂ ನಿರ್ವಾಣಲಕ್ಷಣಾಂ।।
ಧ್ಯಾನಯೋಗದಿಂದ ಬಲವನ್ನು ಪಡೆದು ಅನುತ್ತಮ ಬುದ್ಧಿಯನ್ನು ಪಡೆದು ನಿರ್ವಾಣಲಕ್ಷಣದ ಶಾಶ್ವತ ಪರಮ ಸಿದ್ಧಿಯನ್ನು ಪಡೆದನು.
03247044a ತಸ್ಮಾತ್ತ್ವಮಪಿ ಕೌಂತೇಯ ನ ಶೋಕಂ ಕರ್ತುಮರ್ಹಸಿ।
03247044c ರಾಜ್ಯಾತ್ ಸ್ಫೀತಾತ್ಪರಿಭ್ರಷ್ಟಸ್ತಪಸಾ ತದವಾಪ್ಸ್ಯಸಿ।।
ಕೌಂತೇಯ! ನೀನು ಕೂಡ ಶೋಕಮಾಡಬಾರದು. ವೃದ್ಧಿಯಾಗುತ್ತಿರುವ ರಾಜ್ಯದಿಂದ ಪರಿಭ್ರಷ್ಟನಾಗಿದ್ದೀಯೆ. ಆದರೆ ಅದನ್ನು ತಪಸ್ಸಿನಿಂದ ಪಡೆಯುತ್ತೀಯೆ.
03247045a ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಂ।
03247045c ಪರ್ಯಾಯೇಣೋಪವರ್ತಂತೇ ನರಂ ನೇಮಿಮರಾ ಇವ।।
ಸುಖದ ನಂತರ ದುಃಖ ಮತ್ತು ದುಃಖದ ನಂತರ ಸುಖ ಇವು ಒಂದರ ನಂತರ ಒಂದರಂತೆ, ಗಾಲಿಯ ಚಕ್ರದಂತೆ ತಿರುಗಿ ಬರುತ್ತಿರುತ್ತವೆ.
03247046a ಪಿತೃಪೈತಾಮಹಂ ರಾಜ್ಯಂ ಪ್ರಾಪ್ಸ್ಯಸ್ಯಮಿತವಿಕ್ರಮ।
03247046c ವರ್ಷಾತ್ತ್ರಯೋದಶಾದೂರ್ಧ್ವಂ ವ್ಯೇತು ತೇ ಮಾನಸೋ ಜ್ವರಃ।।
ಅಮಿತವಿಕ್ರಮ! ಹದಿಮೂರುವರ್ಷಗಳು ಕಳೆದ ನಂತರ ನಿನ್ನ ಪಿತೃಪಿತಾಮಹರ ರಾಜ್ಯವನ್ನು ಪಡೆಯುತ್ತೀಯೆ. ಆದುದರಿಂದ ನಿನ್ನ ಈ ಮಾನಸಿಕ ಜ್ವರವನ್ನು ಕಳೆ.””
03247047 ವೈಶಂಪಾಯನ ಉವಾಚ।
03247047a ಏವಮುಕ್ತ್ವಾ ಸ ಭಗವಾನ್ವ್ಯಾಸಃ ಪಾಂಡವನಂದನಂ।
03247047c ಜಗಾಮ ತಪಸೇ ಧೀಮಾನ್ಪುನರೇವಾಶ್ರಮಂ ಪ್ರತಿ।।
ವೈಶಂಪಾಯನನು ಹೇಳಿದನು: “ಪಾಂಡುನಂದನನಿಗೆ ಹೀಗೆ ಹೇಳಿ ಆ ಭಗವಾನ್ ಧೀಮಾನ್ ವ್ಯಾಸನು ತಪಸ್ಸಿಗೆ ಪುನಃ ಆಶ್ರಮದ ಕಡೆ ನಡೆದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ವ್ರೀಹಿದ್ರೌಣಿಕಮಾಖ್ಯಾನ ಪರ್ವಣಿ ಮುದ್ಗಲದೂತಸಂವಾದೇ ಸಪ್ತಚತ್ವಾರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ವ್ರೀಹಿದ್ರೌಣಿಕಮಾಖ್ಯಾನ ಪರ್ವದಲ್ಲಿ ಮುದ್ಗಲದೂತಸಂವಾದದಲ್ಲಿ ಇನ್ನೂರಾನಲ್ವತ್ತೇಳನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ವ್ರೀಹಿದ್ರೌಣಿಕಮಾಖ್ಯಾನ ಪರ್ವಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ವ್ರೀಹಿದ್ರೌಣಿಕಮಾಖ್ಯಾನ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-41/100, ಅಧ್ಯಾಯಗಳು-544/1995, ಶ್ಲೋಕಗಳು-18164/73784.