ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಘೋಷಯಾತ್ರಾ ಪರ್ವ
ಅಧ್ಯಾಯ 235
ಸಾರ
ಪತ್ನಿಯರೊಡನೆ ಕೌರವರನ್ನು ಏಕೆ ಬಂಧಿಸಿದೆ ಎಂದು ಅರ್ಜುನನು ಕೇಳಲು ಚಿತ್ರರಥನು “ಇವರು ನಿಮ್ಮನ್ನು ಮತ್ತು ದ್ರೌಪದಿಯನ್ನು ಅಣಗಿಸಲು ಇಲ್ಲಿಗೆ ಬಂದಿದ್ದಾರೆ” ಎಂದೂ ತಾನು ಇಂದ್ರನ ವಚನದಂತೆ ದುರ್ಯೋಧನಾದಿಗಳನ್ನು ಸೆರೆಹಿಡಿದು ಸುರಲೋಕಕ್ಕೆ ಕೊಂಡೊಯ್ಯುತ್ತಿದ್ದೇನೆ ಎನ್ನುವುದು (1-7). ಗಂಧರ್ವರು ಹೊರಟುಹೋದುದು; ದೇವರಾಜನು ಮೃತರಾದ ಗಂಧರ್ವರನ್ನು ಬದುಕಿಸಿದುದು (8-17). ಪಾಂಡವರು ರಾಜಪತ್ನಿಯರೊಂದಿಗೆ ತಮ್ಮ ಕುಲದವರನ್ನು ಬಿಡುಗಡೆ ಮಾಡಿದುದು; ಪಾಂಡವರಿಂದ ಬೀಳ್ಕೊಂಡ ದುರ್ಯೋಧನನು ನಾಚಿಕೆಯಿಂದ ಪೀಡಿತನಾಗಿ ನಗರದ ಕಡೆ ಹೊರಟಿದುದು (18-25).
03235001 ವೈಶಂಪಾಯನ ಉವಾಚ।
03235001a ತತೋಽರ್ಜುನಶ್ಚಿತ್ರಸೇನಂ ಪ್ರಹಸನ್ನಿದಮಬ್ರವೀತ್।
03235001c ಮಧ್ಯೇ ಗಂಧರ್ವಸೈನ್ಯಾನಾಂ ಮಹೇಷ್ವಾಸೋ ಮಹಾದ್ಯುತಿಃ।।
ವೈಶಂಪಾಯನನು ಹೇಳಿದನು: “ಆಗ ಮಹೇಷ್ವಾಸ ಮಹಾದ್ಯುತಿ ಅರ್ಜುನನು ಆ ಗಂಧರ್ವ ಸೇನೆಯ ಮಧ್ಯೆ ನಗುತ್ತಾ ಚಿತ್ರಸೇನನಿಗೆ ಹೇಳಿದನು:
03235002a ಕಿಂ ತೇ ವ್ಯವಸಿತಂ ವೀರ ಕೌರವಾಣಾಂ ವಿನಿಗ್ರಹೇ।
03235002c ಕಿಮರ್ಥಂ ಚ ಸದಾರೋಽಯಂ ನಿಗೃಹೀತಃ ಸುಯೋಧನಃ।।
“ವೀರ! ಏಕೆ ನೀನು ಕೌರವರನ್ನು ಶಿಕ್ಷಿಸಲು ತೊಡಗಿದೆ? ಏಕೆ ಸುಯೋಧನನನ್ನು ಅವನ ಪತ್ನಿಯೊಂದಿಗೆ ಸೆರೆಹಿಡಿದೆ?”
03235003 ಚಿತ್ರಸೇನ ಉವಾಚ।
03235003a ವಿದಿತೋಽಯಮಭಿಪ್ರಾಯಸ್ತತ್ರಸ್ಥೇನ ಮಹಾತ್ಮನಾ।
03235003c ದುರ್ಯೋಧನಸ್ಯ ಪಾಪಸ್ಯ ಕರ್ಣಸ್ಯ ಚ ಧನಂಜಯ।।
ಚಿತ್ರಸೇನನು ಹೇಳಿದನು: “ಧನಂಜಯ! ಅಲ್ಲಿ ಕುಳಿತಿರುವ ಮಹಾತ್ಮನಿಗೆ ಪಾಪಿ ದುರ್ಯೋಧನ ಮತ್ತು ಕರ್ಣನ ಉದ್ದೇಶವು ತಿಳಿದಿದೆ.
03235004a ವನಸ್ಥಾನ್ಭವತೋ ಜ್ಞಾತ್ವಾ ಕ್ಲಿಶ್ಯಮಾನಾನನರ್ಹವತ್।
03235004c ಇಮೇಽವಹಸಿತುಂ ಪ್ರಾಪ್ತಾ ದ್ರೌಪದೀಂ ಚ ಯಶಸ್ವಿನೀಂ।।
ನೀವು ಈ ವನದಲ್ಲಿ ವಾಸಿಸುತ್ತಿದ್ದೀರಿ ಮತ್ತು ಅನರ್ಹರಾದರೂ ಕಷ್ಟಗಳನ್ನು ಅನುಭವಿಸುತ್ತಿದ್ದೀರಿ ಎಂದು ತಿಳಿದು ಇವರು ನಿಮ್ಮನ್ನು ಮತ್ತು ಯಶಸ್ವಿನೀ ದ್ರೌಪದಿಯನ್ನು ಅಣಗಿಸಲು ಇಲ್ಲಿಗೆ ಬಂದಿದ್ದಾರೆ.
03235005a ಜ್ಞಾತ್ವಾ ಚಿಕೀರ್ಷಿತಂ ಚೈಷಾಂ ಮಾಮುವಾಚ ಸುರೇಶ್ವರಃ।
03235005c ಗಚ್ಚ ದುರ್ಯೋಧನಂ ಬದ್ಧ್ವಾ ಸಾಮಾತ್ಯಂ ತ್ವಮಿಹಾನಯ।।
ಅವರ ಇಂಗಿತವನ್ನು ತಿಳಿದ ಸುರೇಶ್ವರನು ನನಗೆ ಹೇಳಿದನು: “ಹೋಗು! ಅಮಾತ್ಯರೊಂದಿಗೆ ದುರ್ಯೋಧನನನ್ನು ಬಂದಿಸಿ ಇಲ್ಲಿಗೆ ಕರೆದುಕೊಂಡು ಬಾ!
03235006a ಧನಂಜಯಶ್ಚ ತೇ ರಕ್ಷ್ಯಃ ಸಹ ಭ್ರಾತೃಭಿರಾಹವೇ।
03235006c ಸ ಹಿ ಪ್ರಿಯಃ ಸಖಾ ತುಭ್ಯಂ ಶಿಷ್ಯಶ್ಚ ತವ ಪಾಂಡವಃ।।
ಯುದ್ಧದಲ್ಲಿ ಅವನ ಸಹೋದರರೊಂದಿಗೆ ಧನಂಜಯನನ್ನು ರಕ್ಷಿಸು. ಏಕೆಂದರೆ ಆ ಪಾಂಡವನು ನಿನ್ನ ಪ್ರಿಯ ಸಖ ಮತ್ತು ಶಿಷ್ಯ.”
03235007a ವಚನಾದ್ದೇವರಾಜಸ್ಯ ತತೋಽಸ್ಮೀಹಾಗತೋ ದ್ರುತಂ।
03235007c ಅಯಂ ದುರಾತ್ಮಾ ಬದ್ಧಶ್ಚ ಗಮಿಷ್ಯಾಮಿ ಸುರಾಲಯಂ।।
ದೇವರಾಜನ ವಚನದಂತೆ ನಾನು ಬೇಗ ಇಲ್ಲಿಗೆ ಬಂದೆ. ಈ ದುರಾತ್ಮನನ್ನು ಬಂಧಿಸಿ ಸುರಾಲಯಕ್ಕೆ ಹೋಗುತ್ತೇನೆ.”
03235008 ಅರ್ಜುನ ಉವಾಚ।
03235008a ಉತ್ಸೃಜ್ಯತಾಂ ಚಿತ್ರಸೇನ ಭ್ರಾತಾಸ್ಮಾಕಂ ಸುಯೋಧನಃ।
03235008c ಧರ್ಮರಾಜಸ್ಯ ಸಂದೇಶಾನ್ಮಮ ಚೇದಿಚ್ಚಸಿ ಪ್ರಿಯಂ।।
ಅರ್ಜುನನು ಹೇಳಿದನು: “ಚಿತ್ರಸೇನ! ನನಗೆ ಪ್ರಿಯವಾದುದನ್ನು ಮಾಡಬೇಕೆಂದಾದರೆ ಧರ್ಮರಾಜನ ಸಂದೇಶದಂತೆ ನಮ್ಮ ಭ್ರಾತಾ ಸುಯೋಧನನನ್ನು ಬಿಟ್ಟುಬಿಡು!”
03235009 ಚಿತ್ರಸೇನ ಉವಾಚ।
03235009a ಪಾಪೋಽಯಂ ನಿತ್ಯಸಂದುಷ್ಟೋ ನ ವಿಮೋಕ್ಷಣಮರ್ಹತಿ।
03235009c ಪ್ರಲಬ್ಧಾ ಧರ್ಮರಾಜಸ್ಯ ಕೃಷ್ಣಾಯಾಶ್ಚ ಧನಂಜಯ।।
ಚಿತ್ರಸೇನನು ಹೇಳಿದನು: “ನಿತ್ಯವೂ ಪಾಪಿಯೂ ಅತಿದುಷ್ಟನೂ ಆಗಿರುವ ಇವನು ಬಿಡುಗಡೆಗೆ ಅರ್ಹನಲ್ಲ. ಧನಂಜಯ! ಇವನು ಧರ್ಮರಾಜನನ್ನೂ ಕೃಷ್ಣೆಯನ್ನೂ ಕಾಡಿಸಿದ್ದಾನೆ.
03235010a ನೇದಂ ಚಿಕೀರ್ಷಿತಂ ತಸ್ಯ ಕುಂತೀಪುತ್ರೋ ಮಹಾವ್ರತಃ।
03235010c ಜಾನಾತಿ ಧರ್ಮರಾಜೋ ಹಿ ಶ್ರುತ್ವಾ ಕುರು ಯಥೇಚ್ಚಸಿ।।
ಮಹಾವ್ರತ ಕುಂತೀಪುತ್ರ ಧರ್ಮರಾಜನಿಗೆ ಇವನ ಉದ್ದೇಶವು ತಿಳಿದಿಲ್ಲ. ಇದನ್ನು ಕೇಳಿ ಬಯಸಿದುದನ್ನು ಮಾಡು.””
03235011 ವೈಶಂಪಾಯನ ಉವಾಚ।
03235011a ತೇ ಸರ್ವ ಏವ ರಾಜಾನಮಭಿಜಗ್ಮುರ್ಯುಧಿಷ್ಠಿರಂ।
03235011c ಅಭಿಗಮ್ಯ ಚ ತತ್ಸರ್ವಂ ಶಶಂಸುಸ್ತಸ್ಯ ದುಷ್ಕೃತಂ।।
ವೈಶಂಪಾಯನನು ಹೇಳಿದನು: “ಅವರೆಲ್ಲರೂ ರಾಜ ಯುಧಿಷ್ಠಿರನ ಬಳಿ ಹೋದರು. ಹೋಗಿ ಅವನ ದುಷ್ಕೃತ್ಯಗಳೆಲ್ಲವನ್ನೂ ಹೇಳಿದರು.
03235012a ಅಜಾತಶತ್ರುಸ್ತಚ್ಚ್ರುತ್ವಾ ಗಂಧರ್ವಸ್ಯ ವಚಸ್ತದಾ।
03235012c ಮೋಕ್ಷಯಾಮಾಸ ತಾನ್ಸರ್ವಾನ್ಗಂಧರ್ವಾನ್ಪ್ರಶಶಂಸ ಚ।।
ಗಂಧರ್ವನ ಮಾತನ್ನು ಕೇಳಿ ಅಜಾತಶತ್ರುವು ಆ ಗಂಧರ್ವರೆಲ್ಲರನ್ನೂ ಬಿಡುಗಡೆ ಮಾಡಿ ಹೇಳಿದನು.
03235013a ದಿಷ್ಟ್ಯಾ ಭವದ್ಭಿರ್ಬಲಿಭಿಃ ಶಕ್ತೈಃ ಸರ್ವೈರ್ನ ಹಿಂಸಿತಃ।
03235013c ದುರ್ವೃತ್ತೋ ಧಾರ್ತರಾಷ್ಟ್ರೋಽಯಂ ಸಾಮಾತ್ಯಜ್ಞಾತಿಬಾಂಧವಃ।।
“ನೀವು ಶಕ್ತಿಯಲ್ಲಿ ಬಲಿಷ್ಟರಾಗಿದ್ದರೂ ಅಮಾತ್ಯ ಮತ್ತು ಜ್ಞಾತಿಬಾಂಧವರ ಜೊತೆಗೆ ಈ ಧಾರ್ತರಾಷ್ಟ್ರನೊಡನೆ ದುರ್ವೃತ್ತಿಯನ್ನೆಸಗಲಿಲ್ಲ ಎನ್ನುವುದು ಒಳ್ಳೆಯದೇ ಆಯಿತು.
03235014a ಉಪಕಾರೋ ಮಹಾಂಸ್ತಾತ ಕೃತೋಽಯಂ ಮಮ ಖೇಚರಾಃ।
03235014c ಕುಲಂ ನ ಪರಿಭೂತಂ ಮೇ ಮೋಕ್ಷೇಣಾಸ್ಯ ದುರಾತ್ಮನಃ।।
ಮಹಾಖೇಚರರೇ! ಕುಲವನ್ನು ಅತಿಕ್ರಮಿಸದೇ ಈ ದುರಾತ್ಮನನ್ನು ಬಿಡುಗಡೆಮಾಡಿ ನೀವು ನನಗೆ ದೊಡ್ಡ ಉಪಕಾರವನ್ನು ಮಾಡಿದ್ದೀರಿ.
03235015a ಆಜ್ಞಾಪಯಧ್ವಮಿಷ್ಟಾನಿ ಪ್ರೀಯಾಮೋ ದರ್ಶನೇನ ವಃ।
03235015c ಪ್ರಾಪ್ಯ ಸರ್ವಾನಭಿಪ್ರಾಯಾಂಸ್ತತೋ ವ್ರಜತ ಮಾಚಿರಂ।।
ನಿಮ್ಮ ದರ್ಶನದಿಂದ ನಾವು ಸಂತುಷ್ಟರಾಗಿದ್ದೇವೆ. ನಿಮಗಿಷ್ಟವಾದುದನ್ನು ಆಜ್ಞಾಪಿಸಿ. ಬೇಕಾದುದನ್ನು ಪಡೆದು ಬೇಗ ಹೊರಡಿ.”
03235016a ಅನುಜ್ಞಾತಾಸ್ತು ಗಂಧರ್ವಾಃ ಪಾಂಡುಪುತ್ರೇಣ ಧೀಮತಾ।
03235016c ಸಹಾಪ್ಸರೋಭಿಃ ಸಂಹೃಷ್ಟಾಶ್ಚಿತ್ರಸೇನಮುಖಾ ಯಯುಃ।।
ಧೀಮತ ಪಾಂಡುಪುತ್ರನಿಂದ ಬೀಳ್ಕೊಂಡು ಸಂತೋಷಗೊಂಡ ಗಂಧರ್ವರು ಚಿತ್ರಸೇನನನ್ನು ಮುಂದಿಟ್ಟುಕೊಂಡು ಅಪ್ಸರೆಯರೊಂದಿಗೆ ಹೋದರು.
03235017a ದೇವರಾಡಪಿ ಗಂಧರ್ವಾನ್ಮೃತಾಂಸ್ತಾನ್ಸಮಜೀವಯತ್।
03235017c ದಿವ್ಯೇನಾಮೃತವರ್ಷೇಣ ಯೇ ಹತಾಃ ಕೌರವೈರ್ಯುಧಿ।।
ದೇವರಾಜನೂ ಕೂಡ ಯುದ್ಧದಲ್ಲಿ ಕೌರವರಿಂದ ಮೃತರಾಗಿದ್ದ ಗಂಧರ್ವರನ್ನು ದಿವ್ಯ ಅಮೃತದ ಮಳೆಸುರಿಸಿ ಪುನರ್ಜೀವಗೊಳಿಸಿದನು.
03235018a ಜ್ಞಾತೀಂಸ್ತಾನವಮುಚ್ಯಾಥ ರಾಜದಾರಾಂಶ್ಚ ಸರ್ವಶಃ।
03235018c ಕೃತ್ವಾ ಚ ದುಷ್ಕರಂ ಕರ್ಮ ಪ್ರೀತಿಯುಕ್ತಾಶ್ಚ ಪಾಂಡವಾಃ।।
ಪಾಂಡವರು ರಾಜಪತ್ನಿಯರೊಂದಿಗೆ ತಮ್ಮ ಕುಲದವರನ್ನು ಬಿಡುಗಡೆ ಮಾಡಿದರು. ಈ ದುಷ್ಕರ ಕೃತ್ಯವನ್ನು ಮಾಡಿ ಅವರು ಸಂತೋಷಗೊಂಡರು.
03235019a ಸಸ್ತ್ರೀಕುಮಾರೈಃ ಕುರುಭಿಃ ಪೂಜ್ಯಮಾನಾ ಮಹಾರಥಾಃ।
03235019c ಬಭ್ರಾಜಿರೇ ಮಹಾತ್ಮಾನಃ ಕುರುಮಧ್ಯೇ ಯಥಾಗ್ನಯಃ।।
ಸ್ತ್ರೀಯರು ಮತ್ತು ಕುಮಾರರೊಂದಿಗೆ ಕುರುಗಳಿಂದ ಪೂಜಿಸಲ್ಪಟ್ಟ ಆ ಮಹಾರಥಿ ಮಹಾತ್ಮರು ಕುರುಗಳ ಮಧ್ಯದಲ್ಲಿ ಅಗ್ನಿಗಳಂತೆ ಪ್ರಜ್ವಲಿಸಿದರು.
03235020a ತತೋ ದುರ್ಯೋಧನಂ ಮುಚ್ಯ ಭ್ರಾತೃಭಿಃ ಸಹಿತಂ ತದಾ।
03235020c ಯುಧಿಷ್ಠಿರಃ ಸಪ್ರಣಯಮಿದಂ ವಚನಮಬ್ರವೀತ್।।
ಆಗ ಭ್ರಾತೃಗಳ ಸಹಿತ ದುರ್ಯೋಧನನ್ನು ಬಿಡುಗಡೆ ಮಾಡುವಾಗ ಯುಧಿಷ್ಠಿರನು ಪ್ರೀತಿಯಿಂದ ಈ ಮಾತುಗಳನ್ನಾಡಿದನು.
03235021a ಮಾ ಸ್ಮ ತಾತ ಪುನಃ ಕಾರ್ಷೀರೀದೃಶಂ ಸಾಹಸಂ ಕ್ವ ಚಿತ್।
03235021c ನ ಹಿ ಸಾಹಸಕರ್ತಾರಃ ಸುಖಮೇಧಂತಿ ಭಾರತ।।
“ಭಾರತ! ತಮ್ಮ! ಪುನಃ ಎಂದೂ ಈ ರೀತಿಯ ಸಾಹಸವನ್ನು ಮಾಡಬೇಡ. ಏಕೆಂದರೆ ಸಾಹಸಮಾಡುವವರು ಸುಖವನ್ನು ಹೊಂದುವುದಿಲ್ಲ.
03235022a ಸ್ವಸ್ತಿಮಾನ್ಸಹಿತಃ ಸರ್ವೈರ್ಭ್ರಾತೃಭಿಃ ಕುರುನಂದನ।
03235022c ಗೃಹಾನ್ವ್ರಜ ಯಥಾಕಾಮಂ ವೈಮನಸ್ಯಂ ಚ ಮಾ ಕೃಥಾಃ।।
ಕುರುನಂದನ! ನಿನಗಿಷ್ಟಬಂದಂತೆ ಒಳ್ಳೆಯದಾಗಿ ನಿನ್ನ ತಮ್ಮಂದಿರೊಡನೆ ಮನೆಗೆ ಹೊರಡು. ಬೇಸರಪಟ್ಟುಕೊಳ್ಳಬೇಡ!”
03235023a ಪಾಂಡವೇನಾಭ್ಯನುಜ್ಞಾತೋ ರಾಜಾ ದುರ್ಯೋಧನಸ್ತದಾ।
03235023c ವಿದೀರ್ಯಮಾಣೋ ವ್ರೀಡೇನ ಜಗಾಮ ನಗರಂ ಪ್ರತಿ।।
ಪಾಂಡವರಿಂದ ಬೀಳ್ಕೊಂಡ ರಾಜಾ ದುರ್ಯೋಧನನು ನಾಚಿಕೆಯಿಂದ ಪೀಡಿತನಾಗಿ ನಗರದ ಕಡೆ ಹೊರಟನು.
03235024a ತಸ್ಮಿನ್ಗತೇ ಕೌರವೇಯೇ ಕುಂತೀಪುತ್ರೋ ಯುಧಿಷ್ಠಿರಃ।
03235024c ಭ್ರಾತೃಭಿಃ ಸಹಿತೋ ವೀರಃ ಪೂಜ್ಯಮಾನೋ ದ್ವಿಜಾತಿಭಿಃ।।
03235025a ತಪೋಧನೈಶ್ಚ ತೈಃ ಸರ್ವೈರ್ವೃತಃ ಶಕ್ರ ಇವಾಮರೈಃ।
03235025c ವನೇ ದ್ವೈತವನೇ ತಸ್ಮಿನ್ವಿಜಹಾರ ಮುದಾ ಯುತಃ।।
ಆ ಕೌರವರು ಹೋಗಲು ವೀರ ಕುಂತೀಪುತ್ರ ಯುಧಿಷ್ಠಿರನು ಭ್ರಾತೃಗಳೊಂದಿಗೆ ದ್ವಿಜಾತಿ-ತಪೋಧನರಿಂದ ಪೂಜಿತನಾಗಿ, ಅಮರರಿಂದ ಶಕ್ರನು ಹೇಗೋ ಹಾಗೆ ಎಲ್ಲರಿಂದ ಸುತ್ತುವರೆಯಲ್ಪಟ್ಟು, ಆ ದ್ವೈತವನದಲ್ಲಿ ಸಂತೋಷದಿಂದ ವಿಹರಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಮೋಕ್ಷಣೇ ಪಂಚತ್ರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಮೋಕ್ಷಣದಲ್ಲಿ ಇನ್ನೂರಾಮೂವತ್ತೈದನೆಯ ಅಧ್ಯಾಯವು.