ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಘೋಷಯಾತ್ರಾ ಪರ್ವ
ಅಧ್ಯಾಯ 226
ಸಾರ
ಪರಮ ಸಂಪತ್ತಿನಿಂದ ಕೂಡಿ ಪಾಂಡವರು ವಾಸಿಸುತ್ತಿರುವ ದ್ವೈತಸರೋವರಕ್ಕೆ ಹೋಗಿ ಪಾಂಡುಪುತ್ರರನ್ನು ಸುಡು ಎಂದು ಕರ್ಣನು ದುರ್ಯೋಧನನಿಗೆ ಸಲಹೆ ನೀಡುವುದು (1-22).
03226001 ವೈಶಂಪಾಯನ ಉವಾಚ।
03226001a ಧೃತರಾಷ್ಟ್ರಸ್ಯ ತದ್ವಾಕ್ಯಂ ನಿಶಮ್ಯ ಸಹಸೌಬಲಃ।
03226001c ದುರ್ಯೋಧನಮಿದಂ ಕಾಲೇ ಕರ್ಣೋ ವಚನಮಬ್ರವೀತ್।।
ವೈಶಂಪಾಯನನು ಹೇಳಿದನು: “ಧೃತರಾಷ್ಟ್ರನ ಆ ಮಾತುಗಳನ್ನು ಕೇಳಿದ ಕರ್ಣನು ದುರ್ಯೋಧನ-ಸೌಬಲರು ಜೊತೆಯಿರುವಾಗ ಈ ಮಾತುಗಳನ್ನಾಡಿದನು.
03226002a ಪ್ರವ್ರಾಜ್ಯ ಪಾಂಡವಾನ್ವೀರಾನ್ಸ್ವೇನ ವೀರ್ಯೇಣ ಭಾರತ।
03226002c ಭುಂಕ್ತ್ವೇಮಾಂ ಪೃಥಿವೀಮೇಕೋ ದಿವಂ ಶಂಬರಹಾ ಯಥಾ।।
“ಭಾರತ! ವೀರ ಪಾಂಡವರನ್ನು ನಿನ್ನದೇ ವೀರ್ಯದಿಂದ ಹೊರಗಟ್ಟಿದ ನೀನು ಶಂಬರನನ್ನು ಕೊಂದವನು ಸ್ವರ್ಗವನ್ನು ಹೇಗೋ ಹಾಗೆ ಒಬ್ಬನೇ ಇಡೀ ಭೂಮಿಯನ್ನು ಭೋಗಿಸು!
03226003a ಪ್ರಾಚ್ಯಾಶ್ಚ ದಾಕ್ಷಿಣಾತ್ಯಾಶ್ಚ ಪ್ರತೀಚ್ಯೋದೀಚ್ಯವಾಸಿನಃ।
03226003c ಕೃತಾಃ ಕರಪ್ರದಾಃ ಸರ್ವೇ ರಾಜಾನಸ್ತೇ ನರಾಧಿಪ।।
ನರಾಧಿಪ! ಪೂರ್ವ-ದಕ್ಷಿಣ-ಪಶ್ಚಿಮ ಮತ್ತು ಉತ್ತರಗಳ ರಾಜರೆಲ್ಲರೂ ನಿನಗೆ ಕರವನ್ನು ಕೊಂಡುವಂತೆ ಮಾಡಿಯಾಗಿದೆ.
03226004a ಯಾ ಹಿ ಸಾ ದೀಪ್ಯಮಾನೇವ ಪಾಂಡವಾನ್ಭಜತೇ ಪುರಾ।
03226004c ಸಾದ್ಯ ಲಕ್ಷ್ಮೀಸ್ತ್ವಯಾ ರಾಜನ್ನವಾಪ್ತಾ ಭ್ರಾತೃಭಿಃ ಸಹ।।
ರಾಜನ್! ಹಿಂದೆ ಪಾಂಡವರನ್ನು ಸೇವಿಸುತ್ತಿದ್ದ ದೀಪ್ಯಮಾನ ಲಕ್ಷ್ಮಿಯನ್ನು ಸಹೋದರರೊಂದಿಗೆ ನೀನು ಪಡೆದಿದ್ದೀಯೆ.
03226005a ಇಂದ್ರಪ್ರಸ್ಥಗತೇ ಯಾಂ ತಾಂ ದೀಪ್ಯಮಾನಾಂ ಯುಧಿಷ್ಠಿರೇ।
03226005c ಅಪಶ್ಯಾಮ ಶ್ರಿಯಂ ರಾಜನ್ನಚಿರಂ ಶೋಕಕರ್ಶಿತಾಃ।।
ರಾಜನ್! ಇಂದ್ರಪ್ರಸ್ಥಕ್ಕೆ ಹೋದಾಗ ಯುಧಿಷ್ಠಿರನಲ್ಲಿ ದೀಪ್ಯಮಾನ ಶ್ರೀಯನ್ನು ನಾವು ನೋಡಿ ತಕ್ಷಣವೇ ಶೋಕದಿಂದ ಸಣ್ಣವರಾಗಿದ್ದೆವು.
03226006a ಸಾ ತು ಬುದ್ಧಿಬಲೇನೇಯಂ ರಾಜ್ಞಸ್ತಸ್ಮಾದ್ಯುಧಿಷ್ಠಿರಾತ್।
03226006c ತ್ವಯಾಕ್ಷಿಪ್ತಾ ಮಹಾಬಾಹೋ ದೀಪ್ಯಮಾನೇವ ದೃಶ್ಯತೇ।।
ಮಹಾಬಾಹೋ! ನೀನು ಬುದ್ಧಿಬಲವನ್ನು ಉಪಯೋಗಿಸಿ ಯುಧಿಷ್ಠಿರನಿಂದ ಆ ರಾಜ್ಯವನ್ನು ಕಸಿದುಕೊಂಡು ದೀಪ್ಯಮಾನನಾಗಿ ಕಾಣುತ್ತಿದ್ದೀಯೆ.
03226007a ತಥೈವ ತವ ರಾಜೇಂದ್ರ ರಾಜಾನಃ ಪರವೀರಹನ್।
03226007c ಶಾಸನೇಽಧಿಷ್ಠಿತಾಃ ಸರ್ವೇ ಕಿಂ ಕುರ್ಮ ಇತಿ ವಾದಿನಃ।।
ರಾಜೇಂದ್ರ! ಪರವೀರಹ! ಹಾಗೆಯೇ ಎಲ್ಲ ರಾಜರೂ ನಿನ್ನ ಶಾಸನದಡಿಯಲ್ಲಿ ಇದ್ದಾರೆ ಮತ್ತು ಏನು ಮಾಡಬೇಕೆಂದು ನಿನ್ನನ್ನೇ ಕೇಳುತ್ತಾರೆ.
03226008a ತವಾದ್ಯ ಪೃಥಿವೀ ರಾಜನ್ನಿಖಿಲಾ ಸಾಗರಾಂಬರಾ।
03226008c ಸಪರ್ವತವನಾ ದೇವೀ ಸಗ್ರಾಮನಗರಾಕರಾ।
03226008e ನಾನಾವನೋದ್ದೇಶವತೀ ಪತ್ತನೈರುಪಶೋಭಿತಾ।।
ರಾಜನ್! ಇಂದು ಸಾಗರ, ಆಕಾಶ, ಪರ್ವತ, ಗ್ರಾಮ, ನಗರ, ಆಕರಗಳು, ನಾನಾ ವನೋದ್ದೇಶಗಳು, ಸುಂದರವಾಗಿ ಶೋಭಿಸುವ ಪಟ್ಟಣಗಳಿಂದ ಕೂಡಿದ ಇಡೀ ಪೃಥ್ವಿ ದೇವಿಯು ನಿನ್ನದಾಗಿದ್ದಾಳೆ.
03226009a ವಂದ್ಯಮಾನೋ ದ್ವಿಜೈ ರಾಜನ್ಪೂಜ್ಯಮಾನಶ್ಚ ರಾಜಭಿಃ।
03226009c ಪೌರುಷಾದ್ದಿವಿ ದೇವೇಷು ಭ್ರಾಜಸೇ ರಶ್ಮಿವಾನಿವ।।
ರಾಜನ್! ದ್ವಿಜರಿಂದ ವಂದಿಸಲ್ಪಟ್ಟು, ರಾಜರಿಂದ ಪೂಜಿಸಲ್ಪಟ್ಟು, ನೀನು ಪೌರುಷದಲ್ಲಿ ದೇವತೆಗಳ ಮಧ್ಯೆ ರವಿಯಂತೆ ಬೆಳಗುತ್ತಿದ್ದೀಯೆ.
03226010a ರುದ್ರೈರಿವ ಯಮೋ ರಾಜಾ ಮರುದ್ಭಿರಿವ ವಾಸವಃ।
03226010c ಕುರುಭಿಸ್ತ್ವಂ ವೃತೋ ರಾಜನ್ ಭಾಸಿ ನಕ್ಷತ್ರರಾಡಿವ।।
ರಾಜನ್! ರುದ್ರರಲ್ಲಿ ಯಮನಂತೆ, ಮರುತ್ತರಲ್ಲಿ ವಾಸವನಂತೆ, ಕುರುಗಳಿಂದ ಆವೃತನಾಗಿ ನಕ್ಷತ್ರರಾಜನಂತೆ ಬೆಳಗುತ್ತಿರುವೆ.
03226011a ಯೇ ಸ್ಮ ತೇ ನಾದ್ರಿಯಂತೇಽಜ್ಞಾ ನೋದ್ವಿಜಂತೇ ಕದಾ ಚ ನ।
03226011c ಪಶ್ಯಾಮಸ್ತಾಂ ಶ್ರಿಯಾ ಹೀನಾನ್ಪಾಂಡವಾನ್ವನವಾಸಿನಃ।।
ನಿನ್ನನ್ನು ಯಾವಾಗಲೂ ನಿರ್ಲಕ್ಷಿಸಿದ, ನಿನ್ನನ್ನು ಅರ್ಥಮಾಡಿಕೊಳ್ಳದ ಪಾಂಡವರು ಈಗ ಹೇಗೆ ಸಂಪತ್ತನ್ನು ಕಳೆದುಕೊಂಡು ವನವಾಸಿಗಳಾಗಿದ್ದಾರೆ ಎನ್ನುವುದನ್ನು ನೋಡುತ್ತಿದ್ದೇವೆ.
03226012a ಶ್ರೂಯಂತೇ ಹಿ ಮಹಾರಾಜ ಸರೋ ದ್ವೈತವನಂ ಪ್ರತಿ।
03226012c ವಸಂತಃ ಪಾಂಡವಾಃ ಸಾರ್ಧಂ ಬ್ರಾಹ್ಮಣೈರ್ವನವಾಸಿಭಿಃ।।
ಮಹಾರಾಜ! ಪಾಂಡವರು ವನವಾಸಿಗಳಾದ ಬ್ರಾಹ್ಮಣರೊಂದಿಗೆ ದ್ವೈತವನದ ಸರೋವರದ ಹತ್ತಿರ ವಾಸಿಸುತ್ತಿದ್ದಾರೆಂದು ಕೇಳುತ್ತೇವೆ.
03226013a ಸ ಪ್ರಯಾಹಿ ಮಹಾರಾಜ ಶ್ರಿಯಾ ಪರಮಯಾ ಯುತಃ।
03226013c ಪ್ರತಪನ್ಪಾಂಡುಪುತ್ರಾಂಸ್ತ್ವಂ ರಶ್ಮಿವಾನಿವ ತೇಜಸಾ।।
ಮಹಾರಾಜ! ಪರಮ ಸಂಪತ್ತಿನಿಂದ ಕೂಡಿ ಅಲ್ಲಿಗೆ ಹೋಗಿ ಸೂರ್ಯನು ತನ್ನ ತೇಜಸ್ಸಿನಿಂದ ಹೇಗೋ ಹಾಗೆ ಪಾಂಡುಪುತ್ರರನ್ನು ಸುಡು.
03226014a ಸ್ಥಿತೋ ರಾಜ್ಯೇ ಚ್ಯುತಾನ್ರಾಜ್ಯಾಚ್ಚ್ರಿಯಾ ಹೀನಾಂ ಶ್ರಿಯಾ ವೃತಃ।
03226014c ಅಸಮೃದ್ಧಾನ್ಸಮೃದ್ಧಾರ್ಥಃ ಪಶ್ಯ ಪಾಂಡುಸುತಾನ್ನೃಪ।।
ನೃಪ! ರಾಜ್ಯವನ್ನು ಪಡೆದ ನೀನು ರಾಜ್ಯವನ್ನು ಕಳೆದುಕೊಂಡ ಪಾಂಡವರನ್ನು, ಶ್ರೀಯನ್ನು ಕಳೆದು ಕೊಂಡ ಅವರನ್ನು ಶ್ರೀಯಿಂದ ಆವೃತನಾಗಿ, ಅಸಮೃದ್ಧರಾದ ಅವರನ್ನು ಸಮೃದ್ಧ ಸಂಪತ್ತಿನ ನೀನು ನೋಡು!
03226015a ಮಹಾಭಿಜನಸಂಪನ್ನಂ ಭದ್ರೇ ಮಹತಿ ಸಂಸ್ಥಿತಂ।
03226015c ಪಾಂಡವಾಸ್ತ್ವಾಭಿವೀಕ್ಷಂತಾಂ ಯಯಾತಿಮಿವ ನಾಹುಷಂ।।
ನಾಹುಷ ಯಯಾತಿಯೋ ಎಂಬಂತೆ ಮಹಾಭಿಜನಸಂಪನ್ನನಾದ, ಭದ್ರವಾಗಿ ಮಹತ್ತರವಾಗಿ ಸ್ಥಾಪಿತನಾಗಿರುವ ನಿನ್ನನ್ನು ಪಾಂಡವರು ನೋಡಲಿ!
03226016a ಯಾಂ ಶ್ರಿಯಂ ಸುಹೃದಶ್ಚೈವ ದುರ್ಹೃದಶ್ಚ ವಿಶಾಂ ಪತೇ।
03226016c ಪಶ್ಯಂತಿ ಪುರುಷೇ ದೀಪ್ತಾಂ ಸಾ ಸಮರ್ಥಾ ಭವತ್ಯುತ।।
ವಿಶಾಂಪತೇ! ಸ್ನೇಹಿತರೂ ಶತ್ರುಗಳೂ ಪುರುಷನಲ್ಲಿ ತೇಜಸ್ಸನ್ನು ಕಾಣಲು ಸಮರ್ಥರು ಎನ್ನುವುದು ಅದೃಷ್ಟದ ಮಹತ್ವವೇ ಸರಿ.
03226017a ಸಮಸ್ಥೋ ವಿಷಮಸ್ಥಾನ್ಹಿ ದುರ್ಹೃದೋ ಯೋಽಭಿವೀಕ್ಷತೇ।
03226017c ಜಗತೀಸ್ಥಾನಿವಾದ್ರಿಸ್ಥಃ ಕಿಂ ತತಃ ಪರಮಂ ಸುಖಂ।।
ಸಮಪ್ರದೇಶದಲ್ಲಿ ನಿಂತು ವಿಷಮಸ್ಥಾನದಲ್ಲಿರುವ ಶತ್ರುಗಳನ್ನು ನೋಡುವುದಕ್ಕಿಂತಲೂ ಹೆಚ್ಚಿನ ಸುಖವು ಈ ಜಗತ್ತಿನಲ್ಲಿ ಇನ್ನೇನಿದೆ?
03226018a ನ ಪುತ್ರಧನಲಾಭೇನ ನ ರಾಜ್ಯೇನಾಪಿ ವಿಂದತಿ।
03226018c ಪ್ರೀತಿಂ ನೃಪತಿಶಾರ್ದೂಲ ಯಾಮಮಿತ್ರಾಘದರ್ಶನಾತ್।।
ನೃಪತಿಶಾರ್ದೂಲ! ಮಗನು ಹುಟ್ಟಿದನೆನ್ನುವುದಾಗಲೀ, ಧನ ಅಥವಾ ರಾಜ್ಯ ಲಾಭವಾಯಿತೆನ್ನುವುದಾಗಲೀ, ಶತ್ರುಗಳು ಕಷ್ಟದಲ್ಲಿರುವುದನ್ನು ನೋಡಿದೆನೆನ್ನುವಷ್ಟು ಸಂತೋಷವನ್ನು ತರುವುದಿಲ್ಲ.
03226019a ಕಿಂ ನು ತಸ್ಯ ಸುಖಂ ನ ಸ್ಯಾದಾಶ್ರಮೇ ಯೋ ಧನಂಜಯಂ।
03226019c ಅಭಿವೀಕ್ಷೇತ ಸಿದ್ಧಾರ್ಥೋ ವಲ್ಕಲಾಜಿನವಾಸಸಂ।।
ಯಶಸ್ವಿಯಾದ ಯಾರು ತಾನೇ ಆಶ್ರಮದಲ್ಲಿ ವಲ್ಕಲ ಜಿನಗಳನ್ನುಟ್ಟಿರುವ ಧನಂಜಯನನ್ನು ನೋಡಿ ಸಂತೋಷಪಡುವುದಿಲ್ಲ?
03226020a ಸುವಾಸಸೋ ಹಿ ತೇ ಭಾರ್ಯಾ ವಲ್ಕಲಾಜಿನವಾಸಸಂ।
03226020c ಪಶ್ಯಂತ್ವಸುಖಿತಾಂ ಕೃಷ್ಣಾಂ ಸಾ ಚ ನಿರ್ವಿದ್ಯತಾಂ ಪುನಃ।
03226020e ವಿನಿಂದತಾಂ ತಥಾತ್ಮಾನಂ ಜೀವಿತಂ ಚ ಧನಚ್ಯುತಾ।।
ಸುಂದರ ವಸ್ತ್ರಗಳನ್ನುಟ್ಟಿರುವ ನಿನ್ನ ಭಾರ್ಯೆಯರು ವಲ್ಕಲ ಜಿನಗಳನ್ನು ಉಟ್ಟಿರುವ ಅಸುಖಿ ಕೃಷ್ಣೆಯನ್ನು ನೋಡಲಿ ಮತ್ತು ಅವಳ ದುಃಖವನ್ನು ಹೆಚ್ಚಿಸಲಿ! ಧನವನ್ನು ಕಳೆದುಕೊಂಡ ತನ್ನ ಜೀವನವನ್ನು ತಾನೇ ನಿಂದನೆಮಾಡಿಕೊಳ್ಳುವಂತಾಗಲಿ.
03226021a ನ ತಥಾ ಹಿ ಸಭಾಮಧ್ಯೇ ತಸ್ಯಾ ಭವಿತುಮರ್ಹತಿ।
03226021c ವೈಮನಸ್ಯಂ ಯಥಾ ದೃಷ್ಟ್ವಾ ತವ ಭಾರ್ಯಾಃ ಸ್ವಲಂಕೃತಾಃ।।
ಸಭಾಮಧ್ಯದಲ್ಲಿ ಅವಳು ಅನುಭವಿಸಿದ ದುಃಖವು ಸ್ವಲಂಕೃತರಾದ ನಿನ್ನ ಭಾರ್ಯೆಯರನ್ನು ನೋಡುವುದಕ್ಕಿಂತ ಹೆಚ್ಚಿನದಾಗಲಾರದು!”
03226022a ಏವಮುಕ್ತ್ವಾ ತು ರಾಜಾನಂ ಕರ್ಣಃ ಶಕುನಿನಾ ಸಹ।
03226022c ತೂಷ್ಣೀಂ ಬಭೂವತುರುಭೌ ವಾಕ್ಯಾಂತೇ ಜನಮೇಜಯ।।
ಜನಮೇಜಯ! ಹೀಗೆ ಶಕುನಿಯೊಂದಿಗಿದ್ದ ರಾಜನಿಗೆ ಕರ್ಣನು ಹೇಳಲು, ಮಾತಿನ ಕೊನೆಯಲ್ಲಿ ಅವರಿಬ್ಬರೂ ಸುಮ್ಮನಾದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಕರ್ಣಶಕುನಿವಾಕ್ಯೇ ಷಡ್ವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಕರ್ಣಶಕುನಿವಾಕ್ಯೇ ಇನ್ನೂರಾಇಪ್ಪತ್ತಾರನೆಯ ಅಧ್ಯಾಯವು.