ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀ-ಸತ್ಯಭಾಮಾಸಂವಾದ ಪರ್ವ
ಅಧ್ಯಾಯ 224
ಸಾರ
ಮಾರ್ಕಂಡೇಯಾದಿ ವಿಪ್ರರೊಂದಿಗೆ ಮತ್ತು ಪಾಂಡವರೊಂದಿಗೆ ಬೀಳ್ಕೊಂಡು ಕೃಷ್ಣನು ಹೊರಡಲು ಸಿದ್ಧನಾಗಲು ಸತ್ಯಭಾಮೆಯು ದ್ರೌಪದಿಯನ್ನು ಸಂತವಿಸಿ ಬೀಳ್ಕೊಂಡಿದುದು (1-14). ಕೃಷ್ಣ-ಸತ್ಯಭಾಮೆಯರು ಹಿಂದಿರುಗಿ ಹೋದುದು (15-17).
03224001 ವೈಶಂಪಾಯನ ಉವಾಚ।
03224001a ಮಾರ್ಕಂಡೇಯಾದಿಭಿರ್ವಿಪ್ರೈಃ ಪಾಂಡವೈಶ್ಚ ಮಹಾತ್ಮಭಿಃ।
03224001c ಕಥಾಭಿರನುಕೂಲಾಭಿಃ ಸಹಾಸಿತ್ವಾ ಜನಾರ್ದನಃ।।
03224002a ತತಸ್ತೈಃ ಸಂವಿದಂ ಕೃತ್ವಾ ಯಥಾವನ್ಮಧುಸೂದನಃ।
03224002c ಆರುರುಕ್ಷೂ ರಥಂ ಸತ್ಯಾಮಾಹ್ವಯಾಮಾಸ ಕೇಶವಃ।।
ವೈಶಂಪಾಯನನು ಹೇಳಿದನು: “ಜನಾರ್ದನ ಮಧುಸೂದನನು ಮಾರ್ಕಂಡೇಯಾದಿ ವಿಪ್ರರೊಂದಿಗೆ ಮತ್ತು ಮಹಾತ್ಮ ಪಾಂಡವರೊಂದಿಗೆ ಅನುಕೂಲಕರವಾದ ಮಾತುಕಥೆಗಳನ್ನಾಡಿ ಅವರೊಂದಿಗೆ ಯಥಾವಿಧಿಯಾಗಿ ಬೀಳ್ಕೊಂಡನು ಮತ್ತು ರಥವನ್ನೇರಲು ಸಿದ್ಧನಾದ ಕೇಶವನು ಸತ್ಯಭಾಮೆಯನ್ನು ಕರೆದನು.
03224003a ಸತ್ಯಭಾಮಾ ತತಸ್ತತ್ರ ಸ್ವಜಿತ್ವಾ ದ್ರುಪದಾತ್ಮಜಾಂ।
03224003c ಉವಾಚ ವಚನಂ ಹೃದ್ಯಂ ಯಥಾಭಾವಸಮಾಹಿತಂ।।
ಆಗ ಸತ್ಯಭಾಮೆಯು ದ್ರುಪದಾತ್ಮಜೆಯನ್ನು ಬಿಗಿದಪ್ಪಿ, ಹೃದಯದಲ್ಲಿ ಭಾವವನ್ನು ತುಂಬಿಸಿಕೊಂಡು ಈ ಮಾತುಗಳನ್ನಾಡಿದಳು.
03224004a ಕೃಷ್ಣೇ ಮಾ ಭೂತ್ತವೋತ್ಕಂಠಾ ಮಾ ವ್ಯಥಾ ಮಾ ಪ್ರಜಾಗರಃ।
03224004c ಭರ್ತೃಭಿರ್ದೇವಸಂಕಾಶೈರ್ಜಿತಾಂ ಪ್ರಾಪ್ಸ್ಯಸಿ ಮೇದಿನೀಂ।।
“ಕೃಷ್ಣೇ! ದುಗುಡಗೊಳ್ಳಬೇಡ! ವ್ಯಥೆಮಾಡಬೇಡ! ನಿದ್ದೆಯನ್ನು ಕಳೆದುಕೊಳ್ಳಬೇಡ! ದೇವಸಂಕಾಶ ಪತಿಗಳು ಗೆಲ್ಲುವ ಮೇದಿನಿಯನ್ನು ಹೊಂದುತ್ತೀಯೆ.
03224005a ನ ಹ್ಯೇವಂ ಶೀಲಸಂಪನ್ನಾ ನೈವಂ ಪೂಜಿತಲಕ್ಷಣಾಃ।
03224005c ಪ್ರಾಪ್ನುವಂತಿ ಚಿರಂ ಕ್ಲೇಶಂ ಯಥಾ ತ್ವಮಸಿತೇಕ್ಷಣೇ।।
ಅಸಿತೇಕ್ಷಣೇ! ನಿನ್ನ ಹಾಗೆ ಪೂಜಿತ ಲಕ್ಷಣಗಳನ್ನುಳ್ಳ, ಶೀಲಸಂಪನ್ನೆಯು ತುಂಬಾ ಸಮಯದವರೆಗೆ ಕ್ಲೇಶವನ್ನು ಹೊಂದುವುದಿಲ್ಲ.
03224006a ಅವಶ್ಯಂ ಚ ತ್ವಯಾ ಭೂಮಿರಿಯಂ ನಿಹತಕಂಟಕಾ।
03224006c ಭರ್ತೃಭಿಃ ಸಹ ಭೋಕ್ತವ್ಯಾ ನಿರ್ದ್ವಂದ್ವೇತಿ ಶ್ರುತಂ ಮಯಾ।।
ಅವಶ್ಯವಾಗಿಯೂ ಕಂಟಕರು ನಿಹತರಾಗಿ ನೀನು ಈ ಭೂಮಿಯನ್ನು ಪತಿಗಳೊಂದಿಗೆ, ಪ್ರತಿಸ್ಪರ್ಧಿಗಳಿಲ್ಲದೇ ಭೋಗಿಸುತ್ತೀಯೆ ಎಂದು ಕೇಳಿದ್ದೇನೆ.
03224007a ಧಾರ್ತರಾಷ್ಟ್ರವಧಂ ಕೃತ್ವಾ ವೈರಾಣಿ ಪ್ರತಿಯಾತ್ಯ ಚ।
03224007c ಯುಧಿಷ್ಠಿರಸ್ಥಾಂ ಪೃಥಿವೀಂ ದ್ರಷ್ಟಾಸಿ ದ್ರುಪದಾತ್ಮಜೇ।।
ದ್ರುಪದಾತ್ಮಜೇ! ಧಾರ್ತರಾಷ್ಟ್ರರ ವಧೆಯನ್ನು ಮಾಡಿ, ವೈರಕ್ಕೆ ಪ್ರತೀಕಾರವನ್ನು ಮಾಡಿ, ಪೃಥ್ವಿಯು ಯುಧಿಷ್ಠಿರನಲ್ಲಿ ನೆಲೆಸುವುದನ್ನು ನಾನು ಕಂಡಿದ್ದೇನೆ.
03224008a ಯಾಸ್ತಾಃ ಪ್ರವ್ರಾಜಮಾನಾಂ ತ್ವಾಂ ಪ್ರಾಹಸನ್ದರ್ಪಮೋಹಿತಾಃ।
03224008c ತಾಃ ಕ್ಷಿಪ್ರಂ ಹತಸಂಕಲ್ಪಾ ದ್ರಕ್ಷ್ಯಸಿ ತ್ವಂ ಕುರುಸ್ತ್ರಿಯಃ।।
ನೀನು ವನದಲ್ಲಿರುವಾಗ ದರ್ಪಮೋಹಿತರಾಗಿ ನಕ್ಕ ಕುರುಸ್ತ್ರೀಯರು ಬೇಗನೇ ಹತಸಂಕಲ್ಪರಾಗುವುದನ್ನು ನೀನು ನೋಡುತ್ತೀಯೆ.
03224009a ತವ ದುಃಖೋಪಪನ್ನಾಯಾ ಯೈರಾಚರಿತಮಪ್ರಿಯಂ।
03224009c ವಿದ್ಧಿ ಸಂಪ್ರಸ್ಥಿತಾನ್ಸರ್ವಾಂಸ್ತಾನ್ಕೃಷ್ಣೇ ಯಮಸಾದನಂ।।
ಕೃಷ್ಣೇ! ನೀನು ದುಃಖದಲ್ಲಿರುವಾಗ ಯಾರು ಕೆಟ್ಟದಾಗಿ ನಡೆದುಕೊಂಡರೋ ಅವರೆಲ್ಲರೂ ಯಮಸಾದನಕ್ಕೆ ಹೋಗುತ್ತಾರೆಂದು ತಿಳಿ.
03224010a ಪುತ್ರಸ್ತೇ ಪ್ರತಿವಿಂಧ್ಯಶ್ಚ ಸುತಸೋಮಸ್ತಥಾ ವಿಭುಃ।
03224010c ಶ್ರುತಕರ್ಮಾರ್ಜುನಿಶ್ಚೈವ ಶತಾನೀಕಶ್ಚ ನಾಕುಲಿಃ।
03224010e ಸಹದೇವಾಚ್ಚ ಯೋ ಜಾತಃ ಶ್ರುತಸೇನಸ್ತವಾತ್ಮಜಃ।।
03224011a ಸರ್ವೇ ಕುಶಲಿನೋ ವೀರಾಃ ಕೃತಾಸ್ತ್ರಾಶ್ಚ ಸುತಾಸ್ತವ।
03224011c ಅಭಿಮನ್ಯುರಿವ ಪ್ರೀತಾ ದ್ವಾರವತ್ಯಾಂ ರತಾ ಭೃಶಂ।।
ನಿನ್ನ ಮಕ್ಕಳು ಪ್ರತಿವಿಂಧ್ಯ ಮತ್ತು ರಾಜಕುಮಾರ ಸುತಸೋಮ, ಅರ್ಜುನನ ಶ್ರುತಕರ್ಮ, ನಕುಲನ ಶತಾನೀಕ ಮತ್ತು ಸಹದೇವನಿಂದ ಹುಟ್ಟಿದ ನಿನ್ನ ಮಗ ಶ್ರುತಸೇನ ಈ ಎಲ್ಲ ಮಕ್ಕಳೂ ಕುಶಲರೂ ಕೃತಾಸ್ತ್ರರೂ ಆಗಿದ್ದಾರೆ. ಅಭಿಮನ್ಯುವಿನಂತೆ ಅವರೆಲ್ಲರೂ ಸಂತೋಷದಿಂದ ದ್ವಾರಾವತಿಯನ್ನು ತುಂಬಾ ಇಷ್ಟಪಡುತ್ತಾರೆ.
03224012a ತ್ವಮಿವೈಷಾಂ ಸುಭದ್ರಾ ಚ ಪ್ರೀತ್ಯಾ ಸರ್ವಾತ್ಮನಾ ಸ್ಥಿತಾ।
03224012c ಪ್ರೀಯತೇ ಭಾವನಿರ್ದ್ವಂದ್ವಾ ತೇಭ್ಯಶ್ಚ ವಿಗತಜ್ವರಾ।।
ಸುಭದ್ರೆಯು ನಿನ್ನ ಹಾಗೆ ಅವರನ್ನು ಸಂಪೂರ್ಣವಾಗಿ ಪ್ರೀತಿಸುತ್ತಾಳೆ. ಪ್ರೀತಿಗೆ ಪ್ರತಿಸ್ಪರ್ಧಿಗಳಲ್ಲದೇ ಪ್ರೀತಿಸಿ, ಅವರ ಕುರಿತು ಸ್ವಲ್ಪವೂ ಚಿಂತಿಸುವುದಿಲ್ಲ.
03224013a ಭೇಜೇ ಸರ್ವಾತ್ಮನಾ ಚೈವ ಪ್ರದ್ಯುಮ್ನಜನನೀ ತಥಾ।
03224013c ಭಾನುಪ್ರಭೃತಿಭಿಶ್ಚೈನಾನ್ವಿಶಿನಷ್ಟಿ ಚ ಕೇಶವಃ।।
ಪ್ರದ್ಯುಮ್ನನ ತಾಯಿಯೂ ಕೂಡ ಅವರನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾಳೆ. ಕೇಶವನೂ ಕೂಡ ಭಾನುವಿನೊಂದಿಗೆ ಅವರ ಮೇಲ್ವಿಚಾರಣೆ ಮಾಡುತ್ತಾನೆ.
03224014a ಭೋಜನಾಚ್ಚಾದನೇ ಚೈಷಾಂ ನಿತ್ಯಂ ಮೇ ಶ್ವಶುರಃ ಸ್ಥಿತಃ।
03224014c ರಾಮಪ್ರಭೃತಯಃ ಸರ್ವೇ ಭಜಂತ್ಯಂಧಕವೃಷ್ಣಯಃ।
03224014e ತುಲ್ಯೋ ಹಿ ಪ್ರಣಯಸ್ತೇಷಾಂ ಪ್ರದ್ಯುಮ್ನಸ್ಯ ಚ ಭಾಮಿನಿ।।
ನನ್ನ ಮಾವನು ಯಾವಾಗಲೂ ಅವರ ಊಟ ಉಪಚಾರಗಳನ್ನು ನೋಡಿಕೊಳ್ಳುತ್ತಾನೆ. ರಾಮನೂ ಸೇರಿ ಎಲ್ಲ ಅಂಧಕ-ವೃಷ್ಣಿಗಳು ಕೂಡ ಅವರನ್ನು ಇಷ್ಟಪಡುತ್ತಾರೆ. ಭಾಮಿನೀ! ಪ್ರದ್ಯುಮ್ನನಷ್ಟೇ ಅವರನ್ನೂ ಅವರು ಪ್ರೀತಿಸುತ್ತಾರೆ.”
03224015a ಏವಮಾದಿ ಪ್ರಿಯಂ ಪ್ರೀತ್ಯಾ ಹೃದ್ಯಮುಕ್ತ್ವಾ ಮನೋನುಗಂ।
03224015c ಗಮನಾಯ ಮನಶ್ಚಕ್ರೇ ವಾಸುದೇವರಥಂ ಪ್ರತಿ।।
ಈ ರೀತಿ ಮನಸ್ಸಿಗೆ ಹಿಡಿಯುವ, ಹೃದಯದಿಂದ ಹೊರಟ ಪ್ರಿಯವಾದ ಮಾತುಗಳನ್ನು ಪ್ರೀತಿಯಿಂದ ಹೇಳಿ, ಹೊರಡಲು ಮನಸ್ಸುಮಾಡಿ ವಾಸುದೇವನ ರಥದ ಕಡೆ ಹೋದಳು.
03224016a ತಾಂ ಕೃಷ್ಣಾಂ ಕೃಷ್ಣಮಹಿಷೀ ಚಕಾರಾಭಿಪ್ರದಕ್ಷಿಣಂ।
03224016c ಆರುರೋಹ ರಥಂ ಶೌರೇಃ ಸತ್ಯಭಾಮಾ ಚ ಭಾಮಿನೀ।।
ಕೃಷ್ಣನ ಮಹಿಷಿ ಭಾಮಿನೀ ಸತ್ಯಭಾಮೆಯು ಕೃಷ್ಣೆಗೆ ಪ್ರದಕ್ಷಿಣೆ ಮಾಡಿ ಶೌರಿಯ ರಥವನ್ನೇರಿದಳು.
03224017a ಸ್ಮಯಿತ್ವಾ ತು ಯದುಶ್ರೇಷ್ಠೋ ದ್ರೌಪದೀಂ ಪರಿಸಾಂತ್ವ್ಯ ಚ।
03224017c ಉಪಾವರ್ತ್ಯ ತತಃ ಶೀಘ್ರೈರ್ಹಯೈಃ ಪ್ರಾಯಾತ್ ಪರಂತಪಃ।।
ಮುಗುಳ್ನಕ್ಕು ದ್ರೌಪದಿಯನ್ನು ಸಂತವಿಸಿ ಪರಂತಪ ಯದುಶ್ರೇಷ್ಠನು ಶೀಘ್ರ ಹಯಗಳೊಡನೆ ಹಿಂತಿರುಗಿ ಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಸತ್ಯಭಾಮಾಸಂವಾದ ಪರ್ವಣಿ ಚತ್ರುರ್ವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಸತ್ಯಭಾಮಾಸಂವಾದ ಪರ್ವದಲ್ಲಿ ಇನ್ನೂರಾಇಪ್ಪತ್ನಾಲ್ಕನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀ-ಸತ್ಯಭಾಮಾಸಂವಾದ ಪರ್ವಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀ-ಸತ್ಯಭಾಮಾಸಂವಾದ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-38/100, ಅಧ್ಯಾಯಗಳು-521/1995, ಶ್ಲೋಕಗಳು-17512/73784.