220

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 220

ಸಾರ

ಸ್ವಾಹಾಳು ಅಗ್ನಿಯನ್ನು ಸೇರಿದುದು (1-7). ಬ್ರಹ್ಮನ ಸೂಚನೆಯಂತೆ ಸ್ಕಂದನು ಶಿವ-ಉಮೆಯರನ್ನು ತಂದೆ ತಾಯಿಯರಂತೆ ಪೂಜಿಸಿದ್ದು (8-13). ಶ್ವೇತಪರ್ವತದಲ್ಲಿ ಉತ್ಸವ (14-27).

03220001 ಮಾರ್ಕಂಡೇಯ ಉವಾಚ।
03220001a ಯದಾ ಸ್ಕಂದೇನ ಮಾತೄಣಾಮೇವಮೇತತ್ಪ್ರಿಯಂ ಕೃತಂ।
03220001c ಅಥೈನಮಬ್ರವೀತ್ಸ್ವಾಹಾ ಮಮ ಪುತ್ರಸ್ತ್ವಮೌರಸಃ।।

ಮಾರ್ಕಂಡೇಯನು ಹೇಳಿದನು: “ಸ್ಕಂದನು ಈ ರೀತಿ ಮಾತೃಗಳಿಗೆ ಪ್ರಿಯವಾದುದನ್ನು ಮಾಡಲು ಸ್ವಾಹಾಳು ಅವನಿಗೆ ಹೇಳಿದಳು: “ನೀನು ನನ್ನ ಔರಸ ಪುತ್ರ.

03220002a ಇಚ್ಚಾಮ್ಯಹಂ ತ್ವಯಾ ದತ್ತಾಂ ಪ್ರೀತಿಂ ಪರಮದುರ್ಲಭಾಂ।
03220002c ತಾಮಬ್ರವೀತ್ತತಃ ಸ್ಕಂದಃ ಪ್ರೀತಿಮಿಚ್ಚಸಿ ಕೀದೃಶೀಂ।।

ನೀನು ನನ್ನ ಪ್ರೀತಿಯ ಪರಮ ದುರ್ಲಭವಾದುದನ್ನು ಕೊಡಬೇಕೆಂದು ಬಯಸುತ್ತೇನೆ.” ಅದಕ್ಕೆ ಸ್ಕಂದನು ಅವಳಿಗೆ ಕೇಳಿದನು: “ನಿನಗೆ ಪ್ರೀತಿಯಾದ ಏನನ್ನು ಬಯಸುತ್ತೀಯೆ?”

03220003 ಸ್ವಾಹೋವಾಚ।
03220003a ದಕ್ಷಸ್ಯಾಹಂ ಪ್ರಿಯಾ ಕನ್ಯಾ ಸ್ವಾಹಾ ನಾಮ ಮಹಾಭುಜ।
03220003c ಬಾಲ್ಯಾತ್ಪ್ರಭೃತಿ ನಿತ್ಯಂ ಚ ಜಾತಕಾಮಾ ಹುತಾಶನೇ।।

ಸ್ವಾಹಾಳು ಹೇಳಿದಳು: “ಮಹಾಭುಜ! ನಾನು ದಕ್ಷನ ಪ್ರಿಯ ಕನ್ಯೆ. ಹೆಸರು ಸ್ವಾಹಾ. ಬಾಲ್ಯದಿಂದಲೂ ನಾನು ಸದಾ ಹುತಾಶನನನ್ನು ಕಾಮಿಸಿದ್ದೆ.

03220004a ನ ಚ ಮಾಂ ಕಾಮಿನೀಂ ಪುತ್ರ ಸಮ್ಯಗ್ಜಾನಾತಿ ಪಾವಕಃ।
03220004c ಇಚ್ಚಾಮಿ ಶಾಶ್ವತಂ ವಾಸಂ ವಸ್ತುಂ ಪುತ್ರ ಸಹಾಗ್ನಿನಾ।।

ಆದರೆ ಪುತ್ರ! ಪಾವಕನು ಈ ಕಾಮಿನಿಯನ್ನು ಅರ್ಥಮಾಡಿಕೊಂಡಿಲ್ಲ. ಪುತ್ರ! ನಾನು ಅಗ್ನಿಯೊಂದಿಗೆ ಶಾಶ್ವತವಾಗಿ ವಾಸಿಸಲು ಇಚ್ಛಿಸುತ್ತೇನೆ.”

03220005 ಸ್ಕಂದ ಉವಾಚ।
03220005a ಹವ್ಯಂ ಕವ್ಯಂ ಚ ಯತ್ಕಿಂಚಿದ್ದ್ವಿಜಾ ಮಂತ್ರಪುರಸ್ಕೃತಂ।
03220005c ಹೋಷ್ಯಂತ್ಯಗ್ನೌ ಸದಾ ದೇವಿ ಸ್ವಾಹೇತ್ಯುಕ್ತ್ವಾ ಸಮುದ್ಯತಂ।।
03220006a ಅದ್ಯ ಪ್ರಭೃತಿ ದಾಸ್ಯಂತಿ ಸುವೃತ್ತಾಃ ಸತ್ಪಥೇ ಸ್ಥಿತಾಃ।
03220006c ಏವಮಗ್ನಿಸ್ತ್ವಯಾ ಸಾರ್ಧಂ ಸದಾ ವತ್ಸ್ಯತಿ ಶೋಭನೇ।।

ಸ್ಕಂದನು ಹೇಳಿದನು: “ದೇವಿ! ಇಂದಿನಿಂದ ಒಳ್ಳೆಯ ನಡತೆಯ ಸತ್ಯದ ಮಾರ್ಗದಲ್ಲಿ ನೆಲೆಸಿರುವ ದ್ವಿಜರು ಮಂತ್ರಪುರಸ್ಕೃತವಾದ ಏನು ಹವ್ಯಕವ್ಯಗಳನ್ನು ಮಾಡಿ ಅಗ್ನಿಯಲ್ಲಿ ಹವಿಸ್ಸನ್ನು ಹೋಮಿಸುತ್ತಾರೋ ಆಗ ಸದಾ ಸ್ವಾಹಾ ಎಂದು ಹೇಳಿಯೇ ಹಾಕಲಿ. ಹೀಗೆ ಶೋಭನೇ! ನೀನು ಸದಾ ಅಗ್ನಿಯ ಜೊತೆಯಲ್ಲಿ ವಾಸಿಸಿರುವೆ.””

03220007 ಮಾರ್ಕಂಡೇಯ ಉವಾಚ।
03220007a ಏವಮುಕ್ತಾ ತತಃ ಸ್ವಾಹಾ ತುಷ್ಟಾ ಸ್ಕಂದೇನ ಪೂಜಿತಾ।
03220007c ಪಾವಕೇನ ಸಮಾಯುಕ್ತಾ ಭರ್ತ್ರಾ ಸ್ಕಂದಮಪೂಜಯತ್।।

ಮಾರ್ಕಂಡೇಯನು ಹೇಳಿದನು: “ಹೀಗೆ ಸ್ಕಂದನಿಂದ ಪೂಜಿತಳಾಗಿ ತೃಪ್ತಳಾದ ಸ್ವಾಹಾಳು ಪತಿ ಪಾವಕನನ್ನು ಸೇರಿ ಸ್ಕಂದನನ್ನು ಗೌರವಿಸಿದಳು.

03220008a ತತೋ ಬ್ರಹ್ಮಾ ಮಹಾಸೇನಂ ಪ್ರಜಾಪತಿರಥಾಬ್ರವೀತ್।
03220008c ಅಭಿಗಚ್ಚ ಮಹಾದೇವಂ ಪಿತರಂ ತ್ರಿಪುರಾರ್ದನಂ।।

ಆಗ ಪ್ರಜಾಪತಿ ಬ್ರಹ್ಮನು ಮಹಾಸೇನನಿಗೆ ಹೇಳಿದನು: “ನಿನ್ನ ತಂದೆ ತ್ರಿಪುರಾರ್ದನ ಮಹಾದೇವನಲ್ಲಿಗೆ ಹೋಗು!

03220009a ರುದ್ರೇಣಾಗ್ನಿಂ ಸಮಾವಿಶ್ಯ ಸ್ವಾಹಾಮಾವಿಶ್ಯ ಚೋಮಯಾ।
03220009c ಹಿತಾರ್ಥಂ ಸರ್ವಲೋಕಾನಾಂ ಜಾತಸ್ತ್ವಮಪರಾಜಿತಃ।।

ರುದ್ರನು ಅಗ್ನಿಯನ್ನು ಸಮಾವೇಶಗೊಂಡು ಮತ್ತು ಉಮೆಯು ಸ್ವಾಹಾಗಳನ್ನು ಆವೇಶಗೊಂಡು ಸರ್ವಲೋಕಗಳ ಹಿತಕ್ಕಾಗಿ ಅಪರಾಜಿತನಾದ ನಿನ್ನನ್ನು ಹುಟ್ಟಿಸಿದ್ದಾರೆ.

03220010a ಉಮಾಯೋನ್ಯಾಂ ಚ ರುದ್ರೇಣ ಶುಕ್ರಂ ಸಿಕ್ತಂ ಮಹಾತ್ಮನಾ।
03220010c ಆಸ್ತೇ ಗಿರೌ ನಿಪತಿತಂ ಮಿಂಜಿಕಾಮಿಂಜಿಕಂ ಯತಃ।।

ಮಹಾತ್ಮ ರುದ್ರನ ಶುಕ್ರವು ಉಮೆಯ ಯೋನಿಯನ್ನು ಸೇರಿದಾಗ ಅದು ಇಲ್ಲಿ ಬಿದ್ದು ಮಿಂಜಿಕ ಮತ್ತು ಅಮಿಂಜಿಕಗಳೆಂಬ ಎರಡು ಗಿರಿಗಳಾದವು.

03220011a ಸಂಭೂತಂ ಲೋಹಿತೋದೇ ತು ಶುಕ್ರಶೇಷಮವಾಪತತ್।
03220011c ಸೂರ್ಯರಶ್ಮಿಷು ಚಾಪ್ಯನ್ಯದನ್ಯಚ್ಚೈವಾಪತದ್ಭುವಿ।
03220011e ಆಸಕ್ತಮನ್ಯದ್ವೃಕ್ಷೇಷು ತದೇವಂ ಪಂಚಧಾಪತತ್।।

ಆ ಶುಕ್ರದ ಒಂದು ಭಾಗವು ಕೆಂಪುಸಮುದ್ರದಲ್ಲಿ ಬಿದ್ದಿತು. ಇನ್ನೊಂದು ಭಾಗವು ಸೂರ್ಯನ ರಶ್ಮಿಗಳಲ್ಲಿ ಮತ್ತು ಇನ್ನೂ ಒಂದು ಭಾಗವು ಭೂಮಿಯ ಮೇಲೆ ಹೀಗೆ ಅದು ಐದು ಭಾಗಗಳಾಗಿ ಹರಡಿ ಚೆಲ್ಲಲ್ಪಟ್ಟಿತು.

03220012a ತ ಏತೇ ವಿವಿಧಾಕಾರಾ ಗಣಾ ಜ್ಞೇಯಾ ಮನೀಷಿಭಿಃ।
03220012c ತವ ಪಾರಿಷದಾ ಘೋರಾ ಯ ಏತೇ ಪಿಶಿತಾಶನಾಃ।।

ಮಾಂಸಗಳನ್ನು ತಿನ್ನುವ ವಿವಿಧಾಕಾರಗಳ ಘೋರ ಪಾರಿಷದಾ ಎನ್ನುವ ನಿನ್ನ ಗಣವು ಇವುಗಳಿಂದಲೇ ಹುಟ್ಟಿದವೆಂದು ವಿದ್ವಾಂಸರು ತಿಳಿದಿರುತ್ತಾರೆ.”

03220013a ಏವಮಸ್ತ್ವಿತಿ ಚಾಪ್ಯುಕ್ತ್ವಾ ಮಹಾಸೇನೋ ಮಹೇಶ್ವರಂ।
03220013c ಅಪೂಜಯದಮೇಯಾತ್ಮಾ ಪಿತರಂ ಪಿತೃವತ್ಸಲಃ।।

ಹಾಗೆಯೇ ಆಗಲೆಂದು ಪಿತೃವತ್ಸಲ ಮಹಾಸೇನನು ಮಹೇಶ್ವರ, ಅಮೇಯಾತ್ಮ ತಂದೆಯನ್ನು ಪೂಜಿಸಿದನು.

03220014a ಅರ್ಕಪುಷ್ಪೈಸ್ತು ತೇ ಪಂಚ ಗಣಾಃ ಪೂಜ್ಯಾ ಧನಾರ್ಥಿಭಿಃ।
03220014c ವ್ಯಾಧಿಪ್ರಶಮನಾರ್ಥಂ ಚ ತೇಷಾಂ ಪೂಜಾಂ ಸಮಾಚರೇತ್।।

ಧನಾರ್ಥಿಗಳು ಈ ಐದು ಗಣಗಳನ್ನು ಅರ್ಕಪುಷ್ಪಗಳಿಂದ ಪೂಜಿಸಬೇಕು. ವ್ಯಾಧಿಪ್ರಶಮನಕ್ಕಾಗಿಯೂ ಇವರ ಪೂಜೆಯನ್ನು ಆಚರಿಸಬೇಕು.

03220015a ಮಿಂಜಿಕಾಮಿಂಜಿಕಂ ಚೈವ ಮಿಥುನಂ ರುದ್ರಸಂಭವಂ।
03220015c ನಮಸ್ಕಾರ್ಯಂ ಸದೈವೇಹ ಬಾಲಾನಾಂ ಹಿತಮಿಚ್ಚತಾ।।

ಚಿಕ್ಕ ಬಾಲಕರ ಹಿತವನ್ನು ಬಯಸುವವರು ರುದ್ರಸಂಭವರಾದ ಮಿಂಜಿಕ-ಅಮಿಂಜಿಕರನ್ನು ಸದಾ ನಮಸ್ಕರಿಸಬೇಕು.

03220016a ಸ್ತ್ರಿಯೋ ಮಾನುಷಮಾಂಸಾದಾ ವೃದ್ಧಿಕಾ ನಾಮ ನಾಮತಃ।
03220016c ವೃಕ್ಷೇಷು ಜಾತಾಸ್ತಾ ದೇವ್ಯೋ ನಮಸ್ಕಾರ್ಯಾಃ ಪ್ರಜಾರ್ಥಿಭಿಃ।।

ಮಕ್ಕಳನ್ನು ಬಯಸುವವರು ಮನುಷ್ಯರ ಮಾಂಸವನ್ನು ತಿನ್ನುವ ವೃಕ್ಷಗಳಲ್ಲಿ ಹುಟ್ಟುವ ವೃದ್ಧಿಕಾ ಎಂಬ ಹೆಸರಿನ ಹೆಣ್ಣು ದೇವತೆಯನ್ನು ಸಮಸ್ಕರಿಸಬೇಕು.

03220017a ಏವಮೇತೇ ಪಿಶಾಚಾನಾಮಸಂಖ್ಯೇಯಾ ಗಣಾಃ ಸ್ಮೃತಾಃ।
03220017c ಘಂಟಾಯಾಃ ಸಪತಾಕಾಯಾಃ ಶೃಣು ಮೇ ಸಂಭವಂ ನೃಪ।।

ಹೀಗೆ ಪಿಶಾಚಿಗಳು ಅಸಂಖ್ಯ ಗುಂಪುಗಳಲ್ಲಿ ವಿಂಗಡಣೆಗೊಂದಿದ್ದಾರೆಂದು ಕೇಳುತ್ತೇವೆ. ನೃಪ! ಈಗ ಸ್ಕಂದನ ಘಂಟೆ ಮತ್ತು ಪತಾಕೆಗಳ ಕುರಿತು ನನ್ನಿಂದ ಕೇಳು.

03220018a ಐರಾವತಸ್ಯ ಘಂಟೇ ದ್ವೇ ವೈಜಯಂತ್ಯಾವಿತಿ ಶ್ರುತೇ।
03220018c ಗುಹಸ್ಯ ತೇ ಸ್ವಯಂ ದತ್ತೇ ಶಕ್ರೇಣಾನಾಯ್ಯ ಧೀಮತಾ।।

ಐರಾವತಕ್ಕೆ ವೈಜಂತ ಎನ್ನುವ ಎರಡು ಘಂಟೆಗಳಿವೆಯೆಂದು ಕೇಳಿದ್ದೇವೆ. ಸ್ವಯಂ ಧೀಮಂತ ಶಕ್ರನೇ ಅವುಗಳನ್ನು ತಂದು ಗುಹನಿಗೆ ಕೊಟ್ಟನು.

03220019a ಏಕಾ ತತ್ರ ವಿಶಾಖಸ್ಯ ಘಂಟಾ ಸ್ಕಂದಸ್ಯ ಚಾಪರಾ।
03220019c ಪತಾಕಾ ಕಾರ್ತ್ತಿಕೇಯಸ್ಯ ವಿಶಾಖಸ್ಯ ಚ ಲೋಹಿತಾ।।

ಅದರಲ್ಲಿ ಒಂದು ವಿಶಾಖನಿಗೆ ಮತ್ತು ಇನ್ನೊಂದು ಸ್ಕಂದನಿಗಾಯಿತು. ಕಾರ್ತಿಕೇಯ ಮತ್ತು ವಿಶಾಖನ ಪತಾಕೆಗಳು ಕೆಂಪು ಬಣ್ಣದವು.

03220020a ಯಾನಿ ಕ್ರೀಡನಕಾನ್ಯಸ್ಯ ದೇವೈರ್ದತ್ತಾನಿ ವೈ ತದಾ।
03220020c ತೈರೇವ ರಮತೇ ದೇವೋ ಮಹಾಸೇನೋ ಮಹಾಬಲಃ।।

ದೇವತೆಗಳು ಕೊಟ್ಟ ಆಟದ ಸಾಮಾನುಗಳಿಂದ ಮಹಾಬಲ ಮಹಾಸೇನ ದೇವನು ಸಂತೋಷಪಟ್ಟನು.

03220021a ಸ ಸಂವೃತಃ ಪಿಶಾಚಾನಾಂ ಗಣೈರ್ದೇವಗಣೈಸ್ತಥಾ।
03220021c ಶುಶುಭೇ ಕಾಂಚನೇ ಶೈಲೇ ದೀಪ್ಯಮಾನಃ ಶ್ರಿಯಾ ವೃತಃ।।

ಪಿಶಾಚಿಗಳ ಗಣ ಮತ್ತು ದೇವಗಣಗಳಿಂದ ಸುತ್ತುವರೆಯಲ್ಪಟ್ಟ ಮತ್ತು ಶ್ರೀಯಿಂದ ಆವೃತನಾದ ಅವನು ಆ ಕಾಂಚನಗಿರಿಯಲ್ಲಿ ಬೆಳಗುತ್ತಾ ಶೋಭಾಯಮಾನನಾಗಿ ಕಂಡನು.

03220022a ತೇನ ವೀರೇಣ ಶುಶುಭೇ ಸ ಶೈಲಃ ಶುಭಕಾನನಃ।
03220022c ಆದಿತ್ಯೇನೇವಾಂಶುಮತಾ ಮಂದರಶ್ಚಾರುಕಂದರಃ।।

ಕಂದರಗಳಿಂದ ಕೂಡಿದ, ಶುಭಕಾನನಗಳ ಆ ಮಂದರ ಶೈಲವು ಅಂಶುಮತ ಆದಿತ್ಯನಿಂದ ಹೇಗೋ ಹಾಗೆ ವೀರನಿಂದ ಶೋಭಿಸಿತು.

03220023a ಸಂತಾನಕವನೈಃ ಫುಲ್ಲೈಃ ಕರವೀರವನೈರಪಿ।
03220023c ಪಾರಿಜಾತವನೈಶ್ಚೈವ ಜಪಾಶೋಕವನೈಸ್ತಥಾ।।
03220024a ಕದಂಬತರುಷಂಡೈಶ್ಚ ದಿವ್ಯೈರ್ಮೃಗಗಣೈರಪಿ।
03220024c ದಿವ್ಯೈಃ ಪಕ್ಷಿಗಣೈಶ್ಚೈವ ಶುಶುಭೇ ಶ್ವೇತಪರ್ವತಃ।।

ಹೂಬಿಟ್ಟ ಸಂತಾನಕ ವನಗಳಿಂದ, ಕರವೀರ ವನಗಳಿಂದ, ಪಾರಿಜಾತ ವನಗಳಿಂದ, ಜಪ ಮತ್ತು ಅಶೋಕವನಗಳಿಂದ, ಕದಂಬ ಮರಗಿಡಗಳಿಂದ, ದಿವ್ಯ ಮೃಗಗಣಗಳಿಂದ, ದಿವ್ಯ ಪಕ್ಷಿಗಣಗಳಿಂದ ಶ್ವೇತಪರ್ವತವು ಶೋಭಿಸುತ್ತಿತ್ತು.

03220025a ತತ್ರ ದೇವಗಣಾಃ ಸರ್ವೇ ಸರ್ವೇ ಚೈವ ಮಹರ್ಷಯಃ।
03220025c ಮೇಘತೂರ್ಯರವಾಶ್ಚೈವ ಕ್ಷುಬ್ಧೋದಧಿಸಮಸ್ವನಾಃ।।

ಅಲ್ಲಿ ಎಲ್ಲ ದೇವಗಣಗಳೂ ಎಲ್ಲ ಮಹರ್ಷಿಗಳೂ ಇದ್ದರು. ಕ್ಷೋಭೆಗೆ ಸಿಲುಕಿದ ಸಮುದ್ರದ ಭೋರ್ಗರೆಯಂತೆ ಮೋಡಗಳ ಶಬ್ದವು ಕೇಳಿಬರುತ್ತಿತ್ತು.

03220026a ತತ್ರ ದಿವ್ಯಾಶ್ಚ ಗಂಧರ್ವಾ ನೃತ್ಯಂತ್ಯಪ್ಸರಸಸ್ತಥಾ।
03220026c ಹೃಷ್ಟಾನಾಂ ತತ್ರ ಭೂತಾನಾಂ ಶ್ರೂಯತೇ ನಿನದೋ ಮಹಾನ್।।

ಅಲ್ಲಿ ದಿವ್ಯ ಗಂಧರ್ವರು ಅಪ್ಸರೆಯರು ನೃತ್ಯಮಾಡುತ್ತಿದ್ದರು. ಅಲ್ಲಿದ್ದ ಭೂತಗಳ ಸಂತೋಷದಿಂದ ಮಹಾ ನಿನಾದವು ಕೇಳಿಬರುತ್ತಿತ್ತು.

03220027a ಏವಂ ಸೇಂದ್ರಂ ಜಗತ್ಸರ್ವಂ ಶ್ವೇತಪರ್ವತಸಂಸ್ಥಿತಂ।
03220027c ಪ್ರಹೃಷ್ಟಂ ಪ್ರೇಕ್ಷತೇ ಸ್ಕಂದಂ ನ ಚ ಗ್ಲಾಯತಿ ದರ್ಶನಾತ್।।

ಹೀಗೆ ಇಂದ್ರನೊಂದಿಗೆ ಸರ್ವ ಜಗತ್ತೂ ಶ್ವೇತಪರ್ವದ ಮೇಲಿತ್ತು. ಸ್ಕಂದನನ್ನು ನೋಡುತ್ತಾ ಸಂತೋಷಪಟ್ಟರು ಮತ್ತು ಅವನನ್ನು ನೋಡಿ ಆಯಾಸಪಡಲಿಲ್ಲ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಇನ್ನೂರಾಇಪ್ಪತ್ತನೆಯ ಅಧ್ಯಾಯವು.