217 ಅಂಗೀರಸೋಪಾಖ್ಯಾನೇ ಸ್ಕಂದೋತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 217

ಸಾರ

ವಜ್ರಪ್ರಹಾರದಿಂದ ಜನಿಸಿದ ಕುಮಾರ ಕುಮಾರಿಯರ ವರ್ಣನೆ (1-14).

03217001 ಮಾರ್ಕಂಡೇಯ ಉವಾಚ।
03217001a ಸ್ಕಂದಸ್ಯ ಪಾರ್ಷದಾನ್ಘೋರಾಂ ಶೃಣುಷ್ವಾದ್ಭುತದರ್ಶನಾನ್।
03217001c ವಜ್ರಪ್ರಹಾರಾತ್ಸ್ಕಂದಸ್ಯ ಜಜ್ಞುಸ್ತತ್ರ ಕುಮಾರಕಾಃ।।
03217001e ಯೇ ಹರಂತಿ ಶಿಶೂಂ ಜಾತಾನ್ಗರ್ಭಸ್ಥಾಂಶ್ಚೈವ ದಾರುಣಾಃ।।

ಮಾರ್ಕಂಡೇಯನು ಹೇಳಿದನು: “ಈಗ ಘೋರರೂ ಅದ್ಭುತದರ್ಶನರೂ ಆದ ಸ್ಕಂದನ ಅನುಯಾಯಿಗಳ ಕುರಿತು ಕೇಳು. ಸ್ಕಂದನ ವಜ್ರಪ್ರಹಾರದಿಂದಾಗಿ ಹುಟ್ಟಿದ ಮತ್ತು ಗರ್ಭದಲ್ಲಿಯೂ ಇರುವ ಶಿಶುಗಳನ್ನು ಅಪಹರಿಸುವ ದಾರುಣ ಕುಮಾರಕರು ಹುಟ್ಟಿದರು.

03217002a ವಜ್ರಪ್ರಹಾರಾತ್ಕನ್ಯಾಶ್ಚ ಜಜ್ಞಿರೇಽಸ್ಯ ಮಹಾಬಲಾಃ।
03217002c ಕುಮಾರಾಶ್ಚ ವಿಶಾಖಂ ತಂ ಪಿತೃತ್ವೇ ಸಮಕಲ್ಪಯನ್।।

ವಜ್ರಪ್ರಹಾರದಿಂದ ಮಹಾಬಲಶಾಲಿಗಳಾದ ಕನ್ಯೆಯರೂ ಹುಟ್ಟಿದರು. ಕುಮಾರರು ವಿಶಾಖನನ್ನು ತಮ್ಮ ತಂದೆಯೆಂದು ತಿಳಿದರು.

03217003a ಸ ಭೂತ್ವಾ ಭಗವಾನ್ಸಂಖ್ಯೇ ರಕ್ಷಂಶ್ಚಾಗಮುಖಸ್ತದಾ।
03217003c ವೃತಃ ಕನ್ಯಾಗಣೈಃ ಸರ್ವೈರಾತ್ಮನೀನೈಶ್ಚ ಪುತ್ರಕೈಃ।।
03217004a ಮಾತೄಣಾಂ ಪ್ರೇಕ್ಷತೀನಾಂ ಚ ಭದ್ರಶಾಖಶ್ಚ ಕೌಶಲಃ।
03217004c ತತಃ ಕುಮಾರಪಿತರಂ ಸ್ಕಂದಮಾಹುರ್ಜನಾ ಭುವಿ।।

ಆ ಭಗವಾನನು ರಣದಲ್ಲಿ ಆಡಿನ ಮುಖವನ್ನು ಧರಿಸಿ, ತಾನೇ ಹೊರತಂದ ಪುತ್ರರು ಮತ್ತು ಕನ್ಯಾಗಣಗಳೆಲ್ಲರಿಂದ ಆವೃತನಾಗಿ ಮಾತೃಗಳ ಸಮಕ್ಷಮದಲ್ಲಿ ಕೌಶಲದಿಂದ ಭದ್ರಶಾಖನಾಗಿ ನಿಂತನು. ಆದುದರಿಂದ ಸ್ಕಂದನನ್ನು ಭುವಿಯಲ್ಲಿ ಕುಮಾರಪಿತನೆಂದು ಜನರು ಕರೆಯುತ್ತಾರೆ.

03217005a ರುದ್ರಮಗ್ನಿಮುಮಾಂ ಸ್ವಾಹಾಂ ಪ್ರದೇಶೇಷು ಮಹಾಬಲಾಂ।
03217005c ಯಜಂತಿ ಪುತ್ರಕಾಮಾಶ್ಚ ಪುತ್ರಿಣಶ್ಚ ಸದಾ ಜನಾಃ।।

ಪುತ್ರರನ್ನು ಮತ್ತು ಪುತ್ರಿಯರನ್ನು ಬಯಸುವ ಜನರು ಸದಾ ಅವರ ಪ್ರದೇಶದಲ್ಲಿ ರುದ್ರನನ್ನು ಮಹಾಬಲ ಅಗ್ನಿಯನ್ನಾಗಿಯೂ ಉಮೆಯನ್ನು ಸ್ವಾಹಾ ಎಂದೂ ಯಾಜಿಸುತ್ತಾರೆ.

03217006a ಯಾಸ್ತಾಸ್ತ್ವಜನಯತ್ಕನ್ಯಾಸ್ತಪೋ ನಾಮ ಹುತಾಶನಃ।
03217006c ಕಿಂ ಕರೋಮೀತಿ ತಾಃ ಸ್ಕಂದಂ ಸಂಪ್ರಾಪ್ತಾಃ ಸಮಭಾಷತ।।

ತಪ ಎಂಬ ಹೆಸರಿನ ಅಗ್ನಿಯಿಂದ ಜನಿಸಿದ ಕನ್ಯೆಯರು ಸ್ಕಂದನ ಬಳಿಸಾರಲು ಅವರಿಗೆ “ಏನು ಮಾಡಲಿ?” ಎಂದು ಸ್ಕಂದನು ಕೇಳಿದನು.

03217007 ಮಾತರ ಊಚುಃ।
03217007a ಭವೇಮ ಸರ್ವಲೋಕಸ್ಯ ವಯಂ ಮಾತರ ಉತ್ತಮಾಃ।
03217007c ಪ್ರಸಾದಾತ್ತವ ಪೂಜ್ಯಾಶ್ಚ ಪ್ರಿಯಮೇತತ್ಕುರುಷ್ವ ನಃ।।

ಮಾತರರು ಹೇಳಿದರು: “ನಿನ್ನ ಪ್ರಸಾದದಂತೆ ನಾವು ಸರ್ವಲೋಕದ ಪೂಜ್ಯ ಉತ್ತಮ ಮಾತರರೆಂದಾಗಲಿ. ನಮಗೆ ಈ ಪ್ರಿಯವಾದುದನ್ನು ಮಾಡು!””

03217008 ಮಾರ್ಕಂಡೇಯ ಉವಾಚ।
03217008a ಸೋಽಬ್ರವೀದ್ಬಾಢಮಿತ್ಯೇವಂ ಭವಿಷ್ಯಧ್ವಂ ಪೃಥಗ್ವಿಧಾಃ।
03217008c ಅಶಿವಾಶ್ಚ ಶಿವಾಶ್ಚೈವ ಪುನಃ ಪುನರುದಾರಧೀಃ।।

ಮಾರ್ಕಂಡೇಯನು ಹೇಳಿದನು: ““ಹಾಗೆಯೇ ಆಗಲಿ! ನೀವು ಅಶಿವ ಶಿವರೆಂದು ಎರಡು ಭಾಗಗಳಾಗುತ್ತೀರಿ!” ಎಂದು ಆ ಉದಾರಧಿಯು ಪುನಃ ಪುನಃ ಹೇಳಿದನು.

03217009a ತತಃ ಸಂಕಲ್ಪ್ಯ ಪುತ್ರತ್ವೇ ಸ್ಕಂದಂ ಮಾತೃಗಣೋಽಗಮತ್।
03217009c ಕಾಕೀ ಚ ಹಲಿಮಾ ಚೈವ ರುದ್ರಾಥ ಬೃಹಲೀ ತಥಾ।
03217009e ಆರ್ಯಾ ಪಲಾಲಾ ವೈ ಮಿತ್ರಾ ಸಪ್ತೈತಾಃ ಶಿಶುಮಾತರಃ।।

ಆಗ ಸ್ಕಂದನ ಪುತ್ರತ್ವವನ್ನು ಪಡೆದು ಮಾತೃಗಣವು ಹೊರಟಿತು. ಕಾಕೀ, ಹಲಿಮಾ, ರುದ್ರಾ, ಬೃಹಲೀ, ಆರ್ಯಾ, ಪಲಾಲಾ, ಮತ್ತು ಮಿತ್ರಾ ಇವರು ಆ ಏಳು ಶಿಶುಮಾತರರು.

03217010a ಏತಾಸಾಂ ವೀರ್ಯಸಂಪನ್ನಃ ಶಿಶುರ್ನಾಮಾತಿದಾರುಣಃ।
03217010c ಸ್ಕಂದಪ್ರಸಾದಜಃ ಪುತ್ರೋ ಲೋಹಿತಾಕ್ಷೋ ಭಯಂಕರಃ।।

ಅವರು ವೀರ್ಯಸಂಪನ್ನನಾದ ಅತಿದಾರುಣನಾದ ಲೋಹಿತಾಕ್ಷ ಭಯಂಕರನಾದ ಸ್ಕಂದನ ಪ್ರಸಾದದಿಂದ ಹುಟ್ಟಿದ ಶಿಶು ಎಂಬ ಹೆಸರಿನ ಮಗನನ್ನು ಪಡೆದರು.

03217011a ಏಷ ವೀರಾಷ್ಟಕಃ ಪ್ರೋಕ್ತಃ ಸ್ಕಂದಮಾತೃಗಣೋದ್ಭವಃ।
03217011c ಚಾಗವಕ್ತ್ರೇಣ ಸಹಿತೋ ನವಕಃ ಪರಿಕೀರ್ತ್ಯತೇ।।

ಈ ವೀರನು ಸ್ಕಂದ-ಮಾತೃಗಣಕ್ಕೆ ಜನಿಸಿದ ಎಂಟನೆಯ ಪುತ್ರನೆಂದು ಹೇಳುತ್ತಾರೆ. ಆದರೆ ಆ ಆಡಿನ ಮುಖದವನನ್ನು ಸೇರಿಸಿ, ಇವನನ್ನು ಒಂಭತ್ತನೆಯವನೆಂದು ಹೇಳುತ್ತಾರೆ.

03217012a ಷಷ್ಠಂ ಚಾಗಮಯಂ ವಕ್ತ್ರಂ ಸ್ಕಂದಸ್ಯೈವೇತಿ ವಿದ್ಧಿ ತತ್।
03217012c ಷಟ್ಶಿರೋಽಭ್ಯಂತರಂ ರಾಜನ್ನಿತ್ಯಂ ಮಾತೃಗಣಾರ್ಚಿತಂ।।

ರಾಜನ್! ಸ್ಕಂದನ ಆರನೆಯ ಮುಖವು ಆಡಿನದೆಂದು ತಿಳಿ. ಮಧ್ಯದಲ್ಲಿರುವ ಈ ಆರನೆಯ ಮುಖವನ್ನು ಮಾತೃಗಣವು ಸದಾ ಪೂಜಿಸುತ್ತದೆ.

03217013a ಷಣ್ಣಾಂ ತು ಪ್ರವರಂ ತಸ್ಯ ಶೀರ್ಷಾಣಾಮಿಹ ಶಬ್ದ್ಯತೇ।
03217013c ಶಕ್ತಿಂ ಯೇನಾಸೃಜದ್ದಿವ್ಯಾಂ ಭದ್ರಶಾಖ ಇತಿ ಸ್ಮ ಹ।।

ಆರನೆಯ ಆ ಶೀರ್ಷವು ಅತ್ಯಂತ ಪ್ರಮುಖವಾದುದೆಂದು ಕೇಳಿಬರುತ್ತದೆ. ಏಕೆಂದರೆ ಇದರಿಂದಲೇ ಭದ್ರಶಾಖನು ಶಕ್ತಿಯನ್ನು ಸೃಷ್ಟಿಸಿದನೆಂದು ಹೇಳುತ್ತಾರೆ.

03217014a ಇತ್ಯೇತದ್ವಿವಿಧಾಕಾರಂ ವೃತ್ತಂ ಶುಕ್ಲಸ್ಯ ಪಂಚಮೀಂ।
03217014c ತತ್ರ ಯುದ್ಧಂ ಮಹಾಘೋರಂ ವೃತ್ತಂ ಷಷ್ಠ್ಯಾಂ ಜನಾಧಿಪ।।

ಜನಾಧಿಪ! ಈ ವಿವಿಧ ಘಟನೆಗಳು ಶುಕ್ಲಪಕ್ಷದ ಪಂಚಮಿಯೆಂದು ನಡೆದವು. ಷಷ್ಠಿಯಂದು ಅಲ್ಲಿ ಮಹಾಘೋರ ಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗೀರಸೋಪಾಖ್ಯಾನೇ ಸ್ಕಂದೋತ್ಪತ್ತೌ ಸಪ್ತದಶಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಸ್ಕಂದೋತ್ಪತ್ತಿಯಲ್ಲಿ ಇನ್ನೂರಾಹದಿನೇಳನೆಯ ಅಧ್ಯಾಯವು.