ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 211
ಸಾರ
ಭಾನು (ಮನು) ಸಂತತಿಯ ಅಗ್ನಿಗಳ ವರ್ಣನೆ (1-31).
03211001 ಮಾರ್ಕಂಡೇಯ ಉವಾಚ।
03211001a ಗುರುಭಿರ್ನಿಯಮೈರ್ಯುಕ್ತೋ ಭರತೋ ನಾಮ ಪಾವಕಃ।
03211001c ಅಗ್ನಿಃ ಪುಷ್ಟಿಮತಿರ್ನಾಮ ತುಷ್ಟಃ ಪುಷ್ಟಿಂ ಪ್ರಯಚ್ಚತಿ।
03211001e ಭರತ್ಯೇಷ ಪ್ರಜಾಃ ಸರ್ವಾಸ್ತತೋ ಭರತ ಉಚ್ಯತೇ।।
ಮಾರ್ಕಂಡೇಯನು ಹೇಳಿದನು: “ಭರತ ಎಂಬ ಹೆಸರಿನ ಪಾವಕನು ಭಾರದ ನಿಯಮಗಳಿಗೆ ಬದ್ಧನಾಗಿದ್ದನು. ತುಷ್ಟನಾದಾಗ ಪುಷ್ಟಿಯನ್ನು ತರುವುದರಿಂದ ಪುಷ್ಟಿಮತಿ ಎಂಬುದು ಈ ಅಗ್ನಿಯ ಇನ್ನೊಂದು ಹೆಸರು. ಪ್ರಜೆಗಳೆಲ್ಲರನ್ನೂ ಪೊರೆಯುವುದರಿಂದ ಇದಕ್ಕೆ ಭರತ ಎಂದು ಹೇಳುತ್ತಾರೆ.
03211002a ಅಗ್ನಿರ್ಯಸ್ತು ಶಿವೋ ನಾಮ ಶಕ್ತಿಪೂಜಾಪರಶ್ಚ ಸಃ।
03211002c ದುಃಖಾರ್ತಾನಾಂ ಸ ಸರ್ವೇಷಾಂ ಶಿವಕೃತ್ಸತತಂ ಶಿವಃ।।
ಇನ್ನೊಂದು ಅಗ್ನಿಯ ಹೆಸರು ಶಿವ. ಶಕ್ತಿಪೂಜೆಯಲ್ಲಿ ನಿರತನಾದವನು. ದುಃಖಾರ್ತರೆಲ್ಲರಿಗೆ ಮಂಗಳವನ್ನುಂಟುಮಾಡುವುದರಿಂದ ಇವನು ಶಿವ.
03211003a ತಪಸಸ್ತು ಫಲಂ ದೃಷ್ಟ್ವಾ ಸಂಪ್ರವೃದ್ಧಂ ತಪೋ ಮಹತ್।
03211003c ಉದ್ಧರ್ತುಕಾಮೋ ಮತಿಮಾನ್ಪುತ್ರೋ ಜಜ್ಞೇ ಪುರಂದರಃ।।
ಮಹಾತಪಸ್ಸಿನ ಫಲವು ಪ್ರವೃದ್ಧವಾದುದನ್ನು ನೋಡಿ ತಪನು ಕಾಮೋದ್ಯುಕ್ತನಾದಾಗ ಅವನಿಗೆ ಪುರಂದರನೆಂಬ ಮತಿವಂತ ಪುತ್ರನು ಜನಿಸಿದನು.
03211004a ಊಷ್ಮಾ ಚೈವೋಷ್ಮಣೋ ಜಜ್ಞೇ ಸೋಽಗ್ನಿರ್ಭೂತೇಷು ಲಕ್ಷ್ಯತೇ।
03211004c ಅಗ್ನಿಶ್ಚಾಪಿ ಮನುರ್ನಾಮ ಪ್ರಾಜಾಪತ್ಯಮಕಾರಯತ್।।
ಉಷ್ಮ ಎನ್ನುವ ಇನ್ನೊಬ್ಬ ಮಗನೂ ಹುಟ್ಟಿದನು. ಭೂತಗಳು ಆವಿಯಾದಾಗ ಈ ಅಗ್ನಿಯು ಕಾಣಿಸಿಕೊಳ್ಳುತ್ತಾನೆ. ಮನು ಎಂಬ ಹೆಸರಿನ ಅಗ್ನಿಯು ಪ್ರಜಾಪತಿಯಾದನು.
03211005a ಶಂಭುಮಗ್ನಿಮಥ ಪ್ರಾಹುರ್ಬ್ರಾಹ್ಮಣಾ ವೇದಪಾರಗಾಃ।
03211005c ಆವಸಥ್ಯಂ ದ್ವಿಜಾಃ ಪ್ರಾಹುರ್ದೀಪ್ತಮಗ್ನಿಂ ಮಹಾಪ್ರಭಂ।।
ವೇದಪಾರಂಗತರಾದ ಬ್ರಾಹ್ಮಣರು ಶಂಭು ಎನ್ನುವ ಅಗ್ನಿಯ ಕುರಿತು ಹೇಳುತ್ತಾರೆ. ಅನಂತರ ದ್ವಿಜರು ಮಹಾಪ್ರಭೆಯ ಅವಸಥ್ಯ ಎನ್ನುವ ಅಗ್ನಿಯ ಕುರಿತು ಹೇಳುತ್ತಾರೆ.
03211006a ಊರ್ಜಸ್ಕರಾನ್ ಹವ್ಯವಾಹಾನ್ಸುವರ್ಣಸದೃಶಪ್ರಭಾನ್।
03211006c ಅಗ್ನಿಸ್ತಪೋ ಹ್ಯಜನಯತ್ಪಂಚ ಯಜ್ಞಸುತಾನಿಹ।।
ಹೀಗೆ ತಪನು ಐದು ಸುವರ್ಣಸದೃಶ ಫ್ರಭೆಯುಳ್ಳ ಹವ್ಯವಾಹನ ಅಗ್ನಿಗಳನ್ನು ಹುಟ್ಟಿಸಿದನು.
03211007a ಪ್ರಶಾಂತೇಽಗ್ನಿರ್ಮಹಾಭಾಗ ಪರಿಶ್ರಾಂತೋ ಗವಾಂಪತಿಃ।
03211007c ಅಸುರಾಂ ಜನಯನ್ಘೋರಾನ್ಮರ್ತ್ಯಾಂಶ್ಚೈವ ಪೃಥಗ್ವಿಧಾನ್।।
ಪರಿಶ್ರಾಂತನಾದ ಮಹಾಭಾಗ ಗವಾಂಪತಿ (ಸೂರ್ಯ) ಯನ್ನು ಪ್ರಾಶಾಂತ ಅಗ್ನಿಯೆಂದು ಹೇಳುತ್ತಾರೆ. ಅವನು ಭೂಮಿಯಮೇಲೆ ಘೋರ ಅಸುರರನ್ನೂ ಮತ್ತು ಇತರ ಮರ್ತ್ಯರನ್ನು ಹುಟ್ಟಿಸಿದನು.
03211008a ತಪಸಶ್ಚ ಮನುಂ ಪುತ್ರಂ ಭಾನುಂ ಚಾಪ್ಯಂಗಿರಾಸೃಜತ್।
03211008c ಬೃಹದ್ಭಾನುಂ ತು ತಂ ಪ್ರಾಹುರ್ಬ್ರಾಹ್ಮಣಾ ವೇದಪಾರಗಾಃ।।
ಅಂಗಿರಸನು ತಪನ ಮಗ ಮನು ಭಾನುವನ್ನು ಸೃಷ್ಟಿಸಿದನು. ಅವನನ್ನು ವೇದಪಾರಂಗತ ಬ್ರಾಹ್ಮಣರು ಬೃದದ್ಭಾನುವೆಂದು ಕರೆಯುತ್ತಾರೆ.
03211009a ಭಾನೋರ್ಭಾರ್ಯಾ ಸುಪ್ರಜಾ ತು ಬೃಹದ್ಭಾಸಾ ತು ಸೋಮಜಾ।
03211009c ಅಸೃಜೇತಾಂ ತು ಷಟ್ಪುತ್ರಾಂ ಶೃಣು ತಾಸಾಂ ಪ್ರಜಾವಿಧಿಂ।।
ಭಾನುವಿನ ಪತ್ನಿಯರು ಸುಪ್ರಜಾ ಮತ್ತು ಸೋಮನ ಮಗಳು ಬೃಹದ್ಭಾಸಾ. ಅವರಿಗೆ ಆರು ಪುತ್ರರು ಹುಟ್ಟಿದರು. ಅವರ ಹುಟ್ಟುವಿಕೆಯನ್ನು ಕೇಳು.
03211010a ದುರ್ಬಲಾನಾಂ ತು ಭೂತಾನಾಂ ತನುಂ ಯಃ ಸಂಪ್ರಯಚ್ಚತಿ।
03211010c ತಮಗ್ನಿಂ ಬಲದಂ ಪ್ರಾಹುಃ ಪ್ರಥಮಂ ಭಾನುತಃ ಸುತಂ।।
ದುರ್ಬಲ ಜೀವಿಗಳಿಗೆ ಬಲವನ್ನು ನೀಡುವವನಿಗೆ ಬಲದನೆಂದು ಕರೆಯುತ್ತಾರೆ. ಇವನು ಭಾನುವಿನ ಮೊದಲನೆಯ ಮಗ.
03211011a ಯಃ ಪ್ರಶಾಂತೇಷು ಭೂತೇಷು ಮನ್ಯುರ್ಭವತಿ ದಾರುಣಃ।
03211011c ಅಗ್ನಿಃ ಸ ಮನ್ಯುಮಾನ್ನಾಮ ದ್ವಿತೀಯೋ ಭಾನುತಃ ಸುತಃ।।
ಭೂತಗಳು ಪ್ರಶಾಂತರಾಗಿರುವಾಗ ದಾರುಣ ಕೋಪನಾಗಿರುವ ಅಗ್ನಿಯು ಮನ್ಯು ಎಂಬ ಹೆಸರಿನ ಭಾನುವಿನ ಎರಡನೆಯ ಮಗ.
03211012a ದರ್ಶೇ ಚ ಪೌರ್ಣಮಾಸೇ ಚ ಯಸ್ಯೇಹ ಹವಿರುಚ್ಯತೇ।
03211012c ವಿಷ್ಣುರ್ನಾಮೇಹ ಯೋಽಗ್ನಿಸ್ತು ಧೃತಿಮಾನ್ನಾಮ ಸೋಽಂಗಿರಾಃ।।
ಇಲ್ಲಿ ದರ್ಶ ಮತ್ತು ಪೌರ್ಣಿಮೆಗಳಲ್ಲಿ ಯಾರಿಗೆ ಹವಿಸ್ಸನ್ನು ಹಾಕುತ್ತೇವೋ ಅವನೇ ವಿಷ್ಣುವೆಂಬ ಅಗ್ನಿ – ಧೃತಿ ಎಂಬ ಹೆಸರಿದೆ. ಅಂಗಿರಸ ಎಂದೂ ಇದೆ.
03211013a ಇಂದ್ರೇಣ ಸಹಿತಂ ಯಸ್ಯ ಹವಿರಾಗ್ರಯಣಂ ಸ್ಮೃತಂ।
03211013c ಅಗ್ನಿರಾಗ್ರಯಣೋ ನಾಮ ಭಾನೋರೇವಾನ್ವಯಸ್ತು ಸಃ।।
ಇಂದ್ರನ ಸಹಿತ ಅಗ್ರಯನ ಹವಿಸ್ಸನ್ನು ಸೇರಿಸಲಾಗುವ ಆ ಅಗ್ನಿಯು ಅಗ್ರಯಣ ಎಂಬ ಹೆಸರಿನ ಭಾನುವಿನ ಇನ್ನೊಬ್ಬ ಪುತ್ರ.
03211014a ಚಾತುರ್ಮಾಸ್ಯೇಷು ನಿತ್ಯಾನಾಂ ಹವಿಷಾಂ ಯೋ ನಿರಗ್ರಹಃ।
03211014c ಚತುರ್ಭಿಃ ಸಹಿತಃ ಪುತ್ರೈರ್ಭಾನೋರೇವಾನ್ವಯಸ್ತು ಸಃ।।
ಚಾತುರ್ಮಾಸ್ಯಗಳಲ್ಲಿ ನಿತ್ಯವೂ ಹವಿಸ್ಸನ್ನು ಹಾಕುವ ನಿರಗ್ರಹನು ಭಾನುವಿನ ಐದನೆಯ ಮಗ.
03211015a ನಿಶಾಂ ತ್ವಜನಯತ್ಕನ್ಯಾಮಗ್ನೀಷೋಮಾವುಭೌ ತಥಾ।
03211015c ಮನೋರೇವಾಭವದ್ಭಾರ್ಯಾ ಸುಷುವೇ ಪಂಚ ಪಾವಕಾನ್।।
ನಿಶಾ ಎನ್ನುವವಳು ಮನುವಿನ ಇನ್ನೊಬ್ಬ ಪತ್ನಿ. ಅವಳು ಓರ್ವ ಕನ್ಯೆಯನ್ನೂ, ಇಬ್ಬರು ಅಗ್ನಿಷ್ಟೋಮರನ್ನೂ ಮತ್ತು ಐದು ಪಾವಕರನ್ನೂ ಜನಿಸಿದಳು.
03211016a ಪೂಜ್ಯತೇ ಹವಿಷಾಗ್ರ್ಯೇಣ ಚಾತುರ್ಮಾಸ್ಯೇಷು ಪಾವಕಃ।
03211016c ಪರ್ಜನ್ಯಸಹಿತಃ ಶ್ರೀಮಾನಗ್ನಿರ್ವೈಶ್ವಾನರಸ್ತು ಸಃ।।
ಚಾತುರ್ಮಾಸ್ಯದಲ್ಲಿ ಹವಿಸ್ಸಿನ ಮೊದಲು ಪರ್ಜನ್ಯನ ಸಹಿತ ಪೂಜಿಸುವ ಪಾವಕನನ್ನು ಶ್ರೀಮಾನ್ ವೈಶ್ವಾನರನೆಂದು ಕರೆಯುತ್ತಾರೆ.
03211017a ಅಸ್ಯ ಲೋಕಸ್ಯ ಸರ್ವಸ್ಯ ಯಃ ಪತಿಃ ಪರಿಪಠ್ಯತೇ।
03211017c ಸೋಽಗ್ನಿರ್ವಿಶ್ವಪತಿರ್ನಾಮ ದ್ವಿತೀಯೋ ವೈ ಮನೋಃ ಸುತಃ।
03211017e ತತಃ ಸ್ವಿಷ್ಟಂ ಭವೇದಾಜ್ಯಂ ಸ್ವಿಷ್ಟಕೃತ್ಪರಮಃ ಸ್ಮೃತಃ।।
ಈ ಲೋಕಗಳೆಲ್ಲವುಗಳ ಪತಿಯಾರಿದ್ದಾನೋ ಆ ಮನುವಿನ ಎರಡನೆಯ ಮಗ ಅಗ್ನಿಯನ್ನು ವಿಶ್ಪಪತಿ ಎಂಬ ಹೆಸರಿನಿಂದ ಕರೆಯುತ್ತಾರೆ. ಮನುವಿನ ಮಗಳನ್ನು ಸ್ವಿಷ್ಟಕೃತ್ ಎಂದು ಕರೆಯುತ್ತಾರೆ. ಏಕೆಂದರೆ ಅವಳಿಗೆ ಆಜ್ಯವನ್ನು ನೀಡುವುದರಿಂದ ಪರಮ ಪುಣ್ಯವು ದೊರೆಯುತ್ತದೆ.
03211018a ಕನ್ಯಾ ಸಾ ರೋಹಿಣೀ ನಾಮ ಹಿರಣ್ಯಕಶಿಪೋಃ ಸುತಾ।
03211018c ಕರ್ಮಣಾಸೌ ಬಭೌ ಭಾರ್ಯಾ ಸ ವಹ್ನಿಃ ಸ ಪ್ರಜಾಪತಿಃ।।
ರೋಹಿಣೀ ಎಂಬ ಹೆಸರಿನ ಹಿರಣ್ಯಕಶಿಪುವಿನ ಮಗಳು ಕನ್ಯೆಯು ತನ್ನ ಕರ್ಮಗಳಿಂದ ಅವನ ಭಾರ್ಯೆಯಾದಳು. ಅವಳೂ ಕೂಡ ಪ್ರಜಾಪತಿ ಅಗ್ನಿ.
03211019a ಪ್ರಾಣಮಾಶ್ರಿತ್ಯ ಯೋ ದೇಹಂ ಪ್ರವರ್ತಯತಿ ದೇಹಿನಾಂ।
03211019c ತಸ್ಯ ಸನ್ನಿಹಿತೋ ನಾಮ ಶಬ್ದರೂಪಸ್ಯ ಸಾಧನಃ।।
ದೇಹದ ಪ್ರಾಣದಲ್ಲಿ ನೆಲೆಸಿಕೊಂಡು ದೇಹಿಗಳನ್ನು ನಡೆಸುವವನ ಹೆಸರು ಸಂನಿಹಿತ - ಅವನು ಶಬ್ಧ ರೂಪಗಳ ಸಾಧನ.
03211020a ಶುಕ್ಲಕೃಷ್ಣಗತಿರ್ದೇವೋ ಯೋ ಬಿಭರ್ತಿ ಹುತಾಶನಂ।
03211020c ಅಕಲ್ಮಷಃ ಕಲ್ಮಷಾಣಾಂ ಕರ್ತಾ ಕ್ರೋಧಾಶ್ರಿತಸ್ತು ಸಃ।।
03211021a ಕಪಿಲಂ ಪರಮರ್ಷಿಂ ಚ ಯಂ ಪ್ರಾಹುರ್ಯತಯಃ ಸದಾ।
03211021c ಅಗ್ನಿಃ ಸ ಕಪಿಲೋ ನಾಮ ಸಾಂಖ್ಯಯೋಗಪ್ರವರ್ತಕಃ।।
ಶುಕ್ಲ ಮತ್ತು ಕೃಷ್ಣ ಗತಿಯಲ್ಲಿ ಹೋಗುವ, ಹುತಾಶನನನ್ನು ಕಾಪಾಡುವ ಅಕಲ್ಮಷ, ಕಲ್ಮಷರ ಕ್ರೋಧಾಶ್ರಿತರ ಕರ್ತ ದೇವನನ್ನು ಕಪಿಲ ಮಹರ್ಷಿಯೆಂದು ಯತಿಗಳು ಸದಾ ಹೇಳುತ್ತಾರೆ. ಅವನೇ ಸಾಂಖ್ಯಯೋಗ ಪ್ರವರ್ತಕ ಕಪಿಲ ಎಂಬ ಹೆಸರಿನ ಅಗ್ನಿ.
03211022a ಅಗ್ನಿರ್ಯಚ್ಚತಿ ಭೂತಾನಿ ಯೇನ ಭೂತಾನಿ ನಿತ್ಯದಾ।
03211022c ಕರ್ಮಸ್ವಿಹ ವಿಚಿತ್ರೇಷು ಸೋಽಗ್ರಣೀರ್ವಹ್ನಿರುಚ್ಯತೇ।।
ಯಾವ ಅಗ್ನಿಯಲ್ಲಿ ಭೂತಗಳು ಭೂತಗಳಿಗೆ ನಿತ್ಯವೂ ಆಹುತಿಗಳನ್ನು ವಿಚಿತ್ರ ಕರ್ಮದಲ್ಲಿ ನೀಡುತ್ತವೆಯೋ ಅದನ್ನು ಅಗ್ರಣೀ ವಹ್ನಿಯೆಂದು ಹೇಳುತ್ತಾರೆ.
03211023a ಇಮಾನನ್ಯಾನ್ಸಮಸೃಜತ್ಪಾವಕಾನ್ಪ್ರಥಿತಾನ್ಭುವಿ।
03211023c ಅಗ್ನಿಹೋತ್ರಸ್ಯ ದುಷ್ಟಸ್ಯ ಪ್ರಾಯಶ್ಚಿತ್ತಾರ್ಥಮುಲ್ಬಣಾನ್।।
ಅಗ್ನಿಹೋತ್ರದ ದೋಷಗಳನ್ನು ಉಲ್ಬಣವಾಗದೇ ಪ್ರಾಯಶ್ಚಿತ್ತಕ್ಕಾಗಿ ಇವು ಮತ್ತು ಅನ್ಯ ಪಾವಕಗಳನ್ನು ಭೂಮಿಯಲ್ಲಿ ಸೃಷ್ಟಿಸಲಾಯಿತು ಎಂದು ಪ್ರಥಿತವಾಗಿದೆ.
03211024a ಸಂಸ್ಪೃಶೇಯುರ್ಯದಾನ್ಯೋನ್ಯಂ ಕಥಂ ಚಿದ್ವಾಯುನಾಗ್ನಯಃ।
03211024c ಇಷ್ಟಿರಷ್ಟಾಕಪಾಲೇನ ಕಾರ್ಯಾ ವೈ ಶುಚಯೇಽಗ್ನಯೇ।।
ವಾಯುವಿನಿಂದಾಗಿ ಅಗ್ನಿಗಳು ಅನ್ಯೋನ್ಯರನ್ನು ಮುಟ್ಟಿದರೆ ಅಷ್ಟಾಕಪಾಲ ಅಗ್ನಿಯಿಂದ ಇಷ್ಟಿಯ1 ಮೂಲಕ ಶುಚಿಯನ್ನು ಪೂಜಿಸಬೇಕು.
03211025a ದಕ್ಷಿಣಾಗ್ನಿರ್ಯದಾ ದ್ವಾಭ್ಯಾಂ ಸಂಸೃಜೇತ ತದಾ ಕಿಲ।
03211025c ಇಷ್ಟಿರಷ್ಟಾಕಪಾಲೇನ ಕಾರ್ಯಾ ವೈ ವೀತಯೇಽಗ್ನಯೇ।।
ದಕ್ಷಿಣಾಗ್ನಿಯು ಇತರ ಎರಡು ಅಗ್ನಿಗಳನ್ನು ಮುಟ್ಟಿದರೆ ಅಷ್ಟಾಕಪಾಲ ಇಷ್ಟಿಯಿಂದ ವೀತ ಅಗ್ನಿಯನ್ನು ಪೂಜಿಸಬೇಕು.
03211026a ಯದ್ಯಗ್ನಯೋ ಹಿ ಸ್ಪೃಶ್ಯೇಯುರ್ನಿವೇಶಸ್ಥಾ ದವಾಗ್ನಿನಾ।
03211026c ಇಷ್ಟಿರಷ್ಟಾಕಪಾಲೇನ ಕಾರ್ಯಾ ತು ಶುಚಯೇಽಗ್ನಯೇ।।
ನಿವೇಶ ಎಂಬ ಅಗ್ನಿಯು ದವಾ ಎಂಬ ಅಗ್ನಿಯೊಂದಿಗೆ ಸೇರಿದರೆ ಅಷ್ಟಾಕಪಾಲ ಇಷ್ಟಿಯಿಂದ ಶುಚೀ ಅಗ್ನಿಯನ್ನು ಪೂಜಿಸಬೇಕು.
03211027a ಅಗ್ನಿಂ ರಜಸ್ವಲಾ ಚೇತ್ಸ್ತ್ರೀ ಸಂಸ್ಪೃಶೇದಗ್ನಿಹೋತ್ರಿಕಂ।
03211027c ಇಷ್ಟಿರಷ್ಟಾಕಪಾಲೇನ ಕಾರ್ಯಾ ದಸ್ಯುಮತೇಽಗ್ನಯೇ।।
ಅಗ್ನಿಹೋತ್ರಕನ ಅಗ್ನಿಯನ್ನು ರಜಸ್ವಲೆಯು ಸ್ಪರ್ಶಿಸಿದರೆ ಅಷ್ಟಾಕಪಾಲ ಇಷ್ಟಿಯಿಂದ ದಸ್ಯುಮತಿ ಅಗ್ನಿಯನ್ನು ಪೂಜಿಸಬೇಕು.
03211028a ಮೃತಃ ಶ್ರೂಯೇತ ಯೋ ಜೀವನ್ಪರೇಯುಃ ಪಶವೋ ಯಥಾ।
03211028c ಇಷ್ಟಿರಷ್ಟಾಕಪಾಲೇನ ಕರ್ತವ್ಯಾಭಿಮತೇಽಗ್ನಯೇ।।
ಅಗ್ನಿಹೋತ್ರವನ್ನು ನಡೆಸುವಾಗ ಯಾರಾದರೂ ಸತ್ತ ವಿಷಯವನ್ನು ಕೇಳಿದರೆ ಅಥವಾ ಪ್ರಾಣಿಯು ಸತ್ತರೆ ಅಷ್ಟಾಕಪಾಲ ಇಷ್ಟಿಯನ್ನು ಮಾಡಿ ಅಭಿಮತ ಅಗ್ನಿಯನ್ನು ಪೂಜಿಸಬೇಕು.
03211029a ಆರ್ತೋ ನ ಜುಹುಯಾದಗ್ನಿಂ ತ್ರಿರಾತ್ರಂ ಯಸ್ತು ಬ್ರಾಹ್ಮಣಃ।
03211029c ಇಷ್ಟಿರಷ್ಟಾಕಪಾಲೇನ ಕಾರ್ಯಾ ಸ್ಯಾದುತ್ತರಾಗ್ನಯೇ।।
ಒಂದುವೇಳೆ ಖಾಯಿಲೆಯಲ್ಲಿದ್ದುಕೊಂಡು ಬ್ರಾಹ್ಮಣನು ಮೂರು ರಾತ್ರಿಗಳು ಅಗ್ನಿಕಾರ್ಯವನ್ನು ಮಾಡಲಿಕ್ಕಾಗಲಿಲ್ಲವಾದರೆ ಅಷ್ಟಾಕಪಾಲ ಇಷ್ಟಿಯನ್ನು ಮಾಡಿ ಉತ್ತರಾಗ್ನಿಯನ್ನು ಪೂಜಿಸಬೇಕು.
03211030a ದರ್ಶಂ ಚ ಪೌರ್ಣಮಾಸಂ ಚ ಯಸ್ಯ ತಿಷ್ಠೇತ್ಪ್ರತಿಷ್ಠಿತಂ।
03211030c ಇಷ್ಟಿರಷ್ಟಾಕಪಾಲೇನ ಕಾರ್ಯಾ ಪಥಿಕೃತೇಽಗ್ನಯೇ।।
ದರ್ಶ ಮತ್ತು ಪೌರ್ಣಮಾಸಗಳಲ್ಲಿ ಯಜ್ಞವನ್ನು ನಡೆಸುವವನು ಅಷ್ಟಾಕಪಾಲ ಇಷ್ಟಿಯಿಂದ ಪಥಿಕೃತ ಅಗ್ನಿಯನ್ನು ಪೂಜಿಸಬೇಕು.
03211031a ಸೂತಿಕಾಗ್ನಿರ್ಯದಾ ಚಾಗ್ನಿಂ ಸಂಸ್ಪೃಶೇದಗ್ನಿಹೋತ್ರಿಕಂ।
03211031c ಇಷ್ಟಿರಷ್ಟಾಕಪಾಲೇನ ಕಾರ್ಯಾ ಚಾಗ್ನಿಮತೇಽಗ್ನಯೇ।।
ಸೂತಿಕಾಗೃಹದಲ್ಲಿರುವ ಅಗ್ನಿಯು ಅಗ್ನಿಹೋತ್ರದೊಂದಿಗೆ ಸೇರಿದರೆ ಅಷ್ಟಾಕಪಾಲ ಇಷ್ಟಿಯಿಂದ ಅಗ್ನಿಮತ ಅಗ್ನಿಯನ್ನು ಪೂಜಿಸಬೇಕು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗಿರಸೋಪಾಖ್ಯಾನೇ ಏಕಾದಶಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗಿರಸೋಪಾಖ್ಯಾನದಲ್ಲಿ ಇನ್ನೂರಾಹನ್ನೊಂದನೆಯ ಅಧ್ಯಾಯವು.
-
ಚರು-ಪುರೋಡಾಶಾದಿ ದ್ರವ್ಯಗಳಿಂದ ಮಾಡುವ ದರ್ಶ-ಪೂರ್ಣಮಾಸಗಳೇ ಮೊದಲಾದ ಯಾಗಗಳು ಇಷ್ಟಿಗಳು. ↩︎