210 ಅಂಗಿರಸೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 210

ಸಾರ

ಪಾಂಚಜನ್ಯಾಗ್ನಿಯ ಉತ್ಪತ್ತಿ ಮತ್ತು ಅವನ ಸಂತಾನ ವರ್ಣನೆ (1-19).

03210001 1ಮಾರ್ಕಂಡೇಯ ಉವಾಚ। 03210001a ಕಾಶ್ಯಪೋ ಹ್ಯಥ ವಾಸಿಷ್ಠಃ ಪ್ರಾಣಶ್ಚ ಪ್ರಾಣಪುತ್ರಕಃ।
03210001c ಅಗ್ನಿರಾಂಗಿರಸಶ್ಚೈವ ಚ್ಯವನಸ್ತ್ರಿಷುವರ್ಚಕಃ।।
03210002a ಅಚರಂತ ತಪಸ್ತೀವ್ರಂ ಪುತ್ರಾರ್ಥೇ ಬಹುವಾರ್ಷಿಕಂ।
03210002c ಪುತ್ರಂ ಲಭೇಮ ಧರ್ಮಿಷ್ಠಂ ಯಶಸಾ ಬ್ರಹ್ಮಣಾ ಸಮಂ।।

ಮಾರ್ಕಂಡೇಯನು ಹೇಳಿದನು: “ಕಾಶ್ಯಪ ವಸಿಷ್ಠ, ಪ್ರಾಣ, ಪ್ರಾಣನ ಪುತ್ರ, ಅಗ್ನಿ ಆಂಗಿರಸ ಮತ್ತು ಚ್ಯವನ ತ್ರಿಷುವರ್ಚಕರು ಪುತ್ರನಿಗೋಸ್ಕರ ನಮಗೆ ಧರ್ಮಿಷ್ಠನೂ ಯಶಸ್ಸಿನಲ್ಲಿ ಬ್ರಹ್ಮನ ಸಮನೂ ಆದ ಮಗನು ದೊರಕಲಿ ಎಂದು ಬಹಳ ವರ್ಷಗಳ ತೀವ್ರ ತಪಸ್ಸನ್ನು ಆಚರಿಸಿದರು.

03210003a ಮಹಾವ್ಯಾಹೃತಿಭಿರ್ಧ್ಯಾತಃ ಪಂಚಭಿಸ್ತೈಸ್ತದಾ ತ್ವಥ।
03210003c ಜಜ್ಞೇ ತೇಜೋಮಯೋಽರ್ಚಿಷ್ಮಾನ್ಪಂಚವರ್ಣಃ ಪ್ರಭಾವನಃ।।

ಹೀಗೆ ಧ್ಯಾನಿಸಿ ಆ ಐವರು ಮಹಾ ಆಹುತಿಗಳನ್ನು ನೀಡಲು ಅಲ್ಲಿ ಹೊಳೆಯುತ್ತಿರುವ, ಐದು ಬಣ್ಣಗಳಿಂದ ವಿಜೃಂಭಿಸುವ ತೇಜೋರಾಶಿಯು ಹೊರಹೊಮ್ಮಿತು.

03210004a ಸಮಿದ್ಧೋಽಗ್ನಿಃ ಶಿರಸ್ತಸ್ಯ ಬಾಹೂ ಸೂರ್ಯನಿಭೌ ತಥಾ।
03210004c ತ್ವಂನೇತ್ರೇ ಚ ಸುವರ್ಣಾಭೇ ಕೃಷ್ಣೇ ಜಂಘೇ ಚ ಭಾರತ।।

ಭಾರತ! ಚೆನ್ನಾಗಿ ಉರಿಯುತ್ತಿರುವ ಬೆಂಕಿಯು ಅವನ ಶಿರವಾಗಿತ್ತು. ಬಾಹುಗಳು ಸೂರ್ಯನಂತಿದ್ದವು. ಕಣ್ಣುಗಳು ಬಂಗಾರದ ಬಣ್ಣಗಳದ್ದಾಗಿದ್ದವು ಮತ್ತು ಜಂಘವು ಕಪ್ಪಾಗಿತ್ತು.

03210005a ಪಂಚವರ್ಣಃ ಸ ತಪಸಾ ಕೃತಸ್ತೈಃ ಪಂಚಭಿರ್ಜನೈಃ।
03210005c ಪಾಂಚಜನ್ಯಃ ಶ್ರುತೋ ವೇದೇ ಪಂಚವಂಶಕರಸ್ತು ಸಃ।।

ಐದು ಬಣ್ಣಗಳ, ಆ ಐದು ಜನರ ತಪಸ್ಸಿನಿಂದ ಮಾಡಲ್ಪಟ್ಟ ಅವನು ವೇದಗಳಲ್ಲಿ ಪಾಂಚಜನ್ಯನೆಂದು ಕರೆಯಲ್ಪಟ್ಟಿದ್ದಾನೆ ಮತ್ತು ಅವನು ಐದು ವಂಶಗಳನ್ನು ಹುಟ್ಟಿಸಿದನು.

03210006a ದಶ ವರ್ಷಸಹಸ್ರಾಣಿ ತಪಸ್ತಪ್ತ್ವಾ ಮಹಾತಪಾಃ।
03210006c ಜನಯತ್ಪಾವಕಂ ಘೋರಂ ಪಿತೄಣಾಂ ಸ ಪ್ರಜಾಃ ಸೃಜನ್।।

ಆ ಮಹಾತಪಸ್ವಿಯು ಹತ್ತು ಸಾವಿರ ವರ್ಷಗಳ ತಪಸ್ಸನ್ನು ತಪಿಸಿ ಪಿತೃಗಳ ಘೋರ ಬೆಂಕಿಯನ್ನು ಹುಟ್ಟಿಸಿದನು ಮತ್ತು ಪ್ರಜೆಗಳನ್ನು ಸೃಷ್ಟಿಸಿದನು.

03210007a ಬೃಹದ್ರಥಂತರಂ ಮೂರ್ಧ್ನೋ ವಕ್ತ್ರಾಚ್ಚ ತರಸಾಹರೌ।
03210007c ಶಿವಂ ನಾಭ್ಯಾಂ ಬಲಾದಿಂದ್ರಂ ವಾಯ್ವಗ್ನೀ ಪ್ರಾಣತೋಽಸೃಜತ್।।

ನೆತ್ತಿ ಮತ್ತು ಮುಖದಿಂದ ಬೃಹದ್ ಮತ್ತು ರಥಂತರಗಳೆಂಬ ಶೀಘ್ರಹಾರಿಗಳನ್ನು, ಹೊಕ್ಕಳಿನಿಂದ ಶಿವನನ್ನು, ಬಲದಿಂದ ಇಂದ್ರನನ್ನು, ಮತ್ತು ಪ್ರಾಣದಿಂದ ವಾಯು-ಅಗ್ನಿಗಳನ್ನು ಸೃಷ್ಟಿಸಿದನು.

03210008a ಬಾಹುಭ್ಯಾಮನುದಾತ್ತೌ ಚ ವಿಶ್ವೇ ಭೂತಾನಿ ಚೈವ ಹ।
03210008c ಏತಾನ್ಸೃಷ್ಟ್ವಾ ತತಃ ಪಂಚ ಪಿತೄಣಾಮಸೃಜತ್ಸುತಾನ್।।
03210009a ಬೃಹದೂರ್ಜಸ್ಯ ಪ್ರಣಿಧಿಃ ಕಾಶ್ಯಪಸ್ಯ ಬೃಹತ್ತರಃ।
03210009c ಭಾನುರಂಗಿರಸೋ ವೀರಃ ಪುತ್ರೋ ವರ್ಚಸ್ಯ ಸೌಭರಃ।।
03210010a ಪ್ರಾಣಸ್ಯ ಚಾನುದಾತ್ತಶ್ಚ ವ್ಯಾಖ್ಯಾತಾಃ ಪಂಚ ವಂಶಜಾಃ।

ಎರಡು ಬಾಹುಗಳಿಂದ ವಿಶ್ವೇಭೂತಗಳು ಹುಟ್ಟಿದವು. ಇವುಗಳನ್ನು ಸೃಷ್ಟಿಸಿ ಪಿತೃಗಳ ಐವರು ಮಕ್ಕಳನ್ನು ಹುಟ್ಟಿಸಿದನು. ಬೃಹದೂರ್ಜನಲ್ಲಿ ಪ್ರಣಿಧಿ, ಕಾಶ್ಯಪನಲ್ಲಿ ಬೃಹತ್ತರ, ಅಂಗಿರಸನ ವೀರ ಪುತ್ರ ಭಾನು, ವರ್ಚನ ಸೌಭರ, ಪ್ರಾಣನ ಅನುದತ್ತ – ಈ ಐದು ವಂಶಗಳು ಹೇಳಲ್ಪಟ್ಟಿವೆ.

03210010c ದೇವಾನ್ಯಜ್ಞಮುಷಶ್ಚಾನ್ಯಾನ್ಸೃಜನ್ಪಂಚದಶೋತ್ತರಾನ್।।
03210011a ಅಭೀಮಮತಿಭೀಮಂ ಚ ಭೀಮಂ ಭೀಮಬಲಾಬಲಂ।
03210011c ಏತಾನ್ಯಜ್ಞಮುಷಃ ಪಂಚ ದೇವಾನಭ್ಯಸೃಜತ್ತಪಃ।।

ತಪನು ಯಜ್ಞಗಳನ್ನು ತಡೆಗಟ್ಟುವಂತಹ ಹದಿನೈದು ದೇವತೆಗಳನ್ನು ಸೃಷ್ಟಿಸಿದನು. ಅಭೀಮ, ಅತಿಭೀಮ, ಭೀಮ, ಭೀಮಬಲ ಮತ್ತು ಅಬಲ - ಈ ಐವರು ಯಜ್ಞಗಳನ್ನು ನಿಲ್ಲಿಸುವ ದೇವತೆಗಳು.

03210012a ಸುಮಿತ್ರಂ ಮಿತ್ರವಂತಂ ಚ ಮಿತ್ರಜ್ಞಂ ಮಿತ್ರವರ್ಧನಂ।
03210012c ಮಿತ್ರಧರ್ಮಾಣಮಿತ್ಯೇತಾನ್ದೇವಾನಭ್ಯಸೃಜತ್ತಪಃ।।

ಸುಮಿತ್ರ, ಮಿತ್ರವಂತ, ಮಿತ್ರಜ್ಞ, ಮಿತ್ರವರ್ಧನ ಮತ್ತು ಮಿತ್ರಧರ್ಮಾಣ – ಇವರು ತಪನು ಸೃಷ್ಟಿಸಿದ ದೇವತೆಗಳು.

03210013a ಸುರಪ್ರವೀರಂ ವೀರಂ ಚ ಸುಕೇಶಂ ಚ ಸುವರ್ಚಸಂ।
03210013c ಸುರಾಣಾಮಪಿ ಹಂತಾರಂ ಪಂಚೈತಾನಸೃಜತ್ತಪಃ।।

ಸುರಪ್ರವೀರ, ವೀರ, ಸುಕೇಶ, ಸುವರ್ಚಸ ಮತ್ತು ಸುರಹಂತ್ರಿ – ಈ ಐವರು ತಪನಿಂದ ಸೃಷ್ಟಿಸಲ್ಪಟ್ಟವರು.

03210014a ತ್ರಿವಿಧಂ ಸಂಸ್ಥಿತಾ ಹ್ಯೇತೇ ಪಂಚ ಪಂಚ ಪೃಥಕ್ ಪೃಥಕ್।
03210014c ಮುಷ್ಣಂತ್ಯತ್ರ ಸ್ಥಿತಾ ಹ್ಯೇತೇ ಸ್ವರ್ಗತೋ ಯಜ್ಞಯಾಜಿನಃ।।

ಇವರು ಪ್ರತ್ಯೇಕ ಪ್ರತ್ಯೇಕವಾಗಿ ಐದೈದರಂತೆ ಮೂರು ವಿಧಗಳಲ್ಲಿ ಇದ್ದಾರೆ. ಅವರು ಇಲ್ಲಿ ಇದ್ದುಕೊಂಡು ಸ್ವರ್ಗದ ಯಜ್ಞಯಾಜಿಗಳನ್ನು ನಾಶಮಾಡುತ್ತಾರೆ.

03210015a ತೇಷಾಮಿಷ್ಟಂ ಹರಂತ್ಯೇತೇ ನಿಘ್ನಂತಿ ಚ ಮಹದ್ಭುವಿ।
03210015c ಸ್ಪರ್ಧಯಾ ಹವ್ಯವಾಹಾನಾಂ ನಿಘ್ನಂತ್ಯೇತೇ ಹರಂತಿ ಚ।।

ಅವರು ಭೂಮಿಯಲ್ಲಿ ಇಷ್ಟವನ್ನು ಹರಣಗೊಳಿಸಿ ಮಹಾ ವಿಘ್ನಗಳನ್ನು ತರುತ್ತಾರೆ. ಹವಿಸ್ಸುಗಳನ್ನು ಕೊಂಡೊಯ್ಯುವವರೊಂದಿಗೆ ಸ್ಪರ್ಧಿಸಿ ನಿಲ್ಲಿಸುತ್ತಾರೆ.

03210016a ಹವಿರ್ವೇದ್ಯಾಂ ತದಾದಾನಂ ಕುಶಲೈಃ ಸಂಪ್ರವರ್ತಿತಂ।
03210016c ತದೇತೇ ನೋಪಸರ್ಪಂತಿ ಯತ್ರ ಚಾಗ್ನಿಃ ಸ್ಥಿತೋ ಭವೇತ್।।

ಎಲ್ಲಿ ಅಗ್ನಿಯನ್ನು ಸ್ಥಾಪಿಸಿರುತ್ತಾರೋ ಅಲ್ಲಿಗೆ ಅವರು ಹೋಗದಂತೆ ವೇದಗಳಲ್ಲಿ ಕುಶಲರಾದವರು ಅವರಿಗೆ ಹವಿಸ್ಸನ್ನು ಯಜ್ಞವೇದಿಕೆಯ ಹೊರಗೆ ನೀಡುತ್ತಾರೆ.

03210017a ಚಿತೋಽಗ್ನಿರುದ್ವಹನ್ಯಜ್ಞಂ ಪಕ್ಷಾಭ್ಯಾಂ ತಾನ್ಪ್ರಬಾಧತೇ।
03210017c ಮಂತ್ರೈಃ ಪ್ರಶಮಿತಾ ಹ್ಯೇತೇ ನೇಷ್ಟಂ ಮುಷ್ಣಂತಿ ಯಜ್ಞಿಯಂ।।

ಅವರು ಯಜ್ಞದ ಅಗ್ನಿಯನ್ನು ತಮ್ಮ ರೆಕ್ಕೆಗಳ ಮೇಲೆ ಒಯ್ಯುತ್ತಾರೆ. ಮಂತ್ರಗಳಿಂದ ಶಾಂತಗೊಂಡರೆ ಅವರು ಯಜ್ಞವನ್ನು ನಿಲ್ಲಿಸುವುದಿಲ್ಲ.

03210018a ಬೃಹದುಕ್ಥತಪಸ್ಯೈವ ಪುತ್ರೋ ಭೂಮಿಮುಪಾಶ್ರಿತಃ।
03210018c ಅಗ್ನಿಹೋತ್ರೇ ಹೂಯಮಾನೇ ಪೃಥಿವ್ಯಾಂ ಸದ್ಭಿರಿಜ್ಯತೇ।।

ತಪನ ಇನ್ನೊಬ್ಬ ಮಗ ಬೃಹದುಕ್ತನು ಭೂಮಿಯಲ್ಲಿ ವಾಸಿಸುತ್ತಾನೆ. ಅವನು ಭೂಮಿಯಲ್ಲಿ ಅಗ್ನಿಹೋತ್ರವನ್ನು ಮಾಡುವ ಒಳ್ಳೆಯವರಿಂದ ಪೂಜಿಸಲ್ಪಡುತ್ತಾನೆ.

03210019a ರಥಂತರಶ್ಚ ತಪಸಃ ಪುತ್ರೋಽಗ್ನಿಃ ಪರಿಪಠ್ಯತೇ।
03210019c ಮಿತ್ರವಿಂದಾಯ ವೈ ತಸ್ಯ ಹವಿರಧ್ವರ್ಯವೋ ವಿದುಃ।
03210019e ಮುಮುದೇ ಪರಮಪ್ರೀತಃ ಸಹ ಪುತ್ರೈರ್ಮಹಾಯಶಾಃ।।

ರಥಂತರನೆಂದು ಕರೆಯಲ್ಪಡುವ ತಪನ ಪುತ್ರ ಅಗ್ನಿಯು ಮಿತ್ರವಿಂದನಿಗೆ ಹವಿಸ್ಸನ್ನು ಕೊಂಡೊಯ್ಯುತ್ತಾನೆ ಎಂದು ತಿಳಿಯುತ್ತಾರೆ. ತಪನು ತನ್ನ ಮಹಾಯಶಸ್ವಿ ಪುತ್ರರೊಂದಿಗೆ ಪರಮ ಪ್ರೀತನಾಗಿ ಮೋದಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗಿರಸೋಪಾಖ್ಯಾನೇ ದಶಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗಿರಸೋಪಾಖ್ಯಾನದಲ್ಲಿ ಇನ್ನೂರಾಹತ್ತನೆಯ ಅಧ್ಯಾಯವು.


  1. ಈ ಅಧ್ಯಾಯದ ಅರ್ಥವಿವರಣೆಯು ಬಹು ಕ್ಲಿಷ್ಟವಾಗಿದ್ದು ಪೂರ್ವ ಮೀಮಾಂಸಾ-ಉತ್ತರ ಮೀಮಾಂಸೆಗಳೆರಡನ್ನೂ ಅವಲಂಬಿಸಿದೆ. ವೇದಗಳಲ್ಲಿರುವ ಅನೇಕಾನೇಕ ಯಾಜ್ಞಿಕ ಪ್ರಯೋಗಗಳನ್ನು ಇಲ್ಲಿ ಶ್ಲೋಕರೂಪದಲ್ಲಿ ಕೊಡಲಾಗಿದೆ. ಇಲ್ಲಿ ಹೇಳಿರುವ ಅಗ್ನಿಗಳು ಶರೀರದಲ್ಲಿಯೂ ಇರುತ್ತವೆ. ಯಜ್ಞಯಾಗಾದಿಗಳಲ್ಲಿಯೂ ಕೂಡ ಈ ಹೆಸರುಗಳಿಂದಲೇ ಆರಾಧಿಸುತ್ತಾರೆ. ಅಂತರ್ವ್ಯಾಪಾರವನ್ನು ಬಹಿರ್ವ್ಯಾಪಾರದ ಮೂಲಕ ಸ್ಮರಣೆಗೆ ತರುವ ಮಹಾವಿದ್ಯೆಯು ಇದಾಗಿರುತ್ತದೆ. ಪ್ರತಿಯೊಂದು ಶ್ಲೋಕಕ್ಕೂ ವೇದ ಮತ್ತು ಶ್ರೌತ-ಸ್ಮಾರ್ತ-ಗೃಹ್ಯಸೂತ್ರಗಳನ್ನು ನಿರೂಪಣೆ ಕೊಟ್ಟು ವ್ಯಾಖ್ಯೆ ಮಾಡಲು ಬಹುವಿಸ್ತರಾವುವುದು (ಭಾರತ ದರ್ಶನ ಪ್ರಕಾಶನ, ಸಂಪುಟ 7, ಪುಟ 3504). ↩︎