ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 204
ಸಾರ
ತನ್ನ ಧರ್ಮವನ್ನು ಪ್ರತ್ಯಕ್ಷವಾಗಿ ನೋಡೆಂದು ವ್ಯಾಧನು ಕೌಶಿಕನನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ ತನ್ನ ವೃದ್ಧ ತಂದೆ-ತಾಯಿಯರನ್ನು ತೋರಿಸಿದುದು (1-15). ವೃದ್ಧ ತಂದೆತಾಯಿಯರ ಸೇವೆಯೇ ತನ್ನ ಪರಮ ಧರ್ಮವೆಂದು ವಿವರಿಸಿದುದು (16-27).
03204001 ಮಾರ್ಕಂಡೇಯ ಉವಾಚ।
03204001a ಏವಂ ಸಂಕಥಿತೇ ಕೃತ್ಸ್ನೇ ಮೋಕ್ಷಧರ್ಮೇ ಯುಧಿಷ್ಠಿರ।
03204001c ದೃಢಂ ಪ್ರೀತಮನಾ ವಿಪ್ರೋ ಧರ್ಮವ್ಯಾಧಮುವಾಚ ಹ।।
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ಈ ರೀತಿ ಮೋಕ್ಷಧರ್ಮದ ಕುರಿತು ವಿವರಿಸಿ ಹೇಳಲು ನಿಶ್ಚಯವಾಗಿಯೂ ಸಂತೋಷಗೊಂಡ ವಿಪ್ರನು ಧರ್ಮವ್ಯಾಧನಿಗೆ ಹೇಳಿದನು:
03204002a ನ್ಯಾಯಯುಕ್ತಮಿದಂ ಸರ್ವಂ ಭವತಾ ಪರಿಕೀರ್ತಿತಂ।
03204002c ನ ತೇಽಸ್ತ್ಯವಿದಿತಂ ಕಿಂ ಚಿದ್ಧರ್ಮೇಷ್ವಿಹ ಹಿ ದೃಶ್ಯತೇ।।
“ನೀನು ಹೇಳಿದುದೆಲ್ಲವೂ ನ್ಯಾಯಯುಕ್ತವಾಗಿವೆ. ಧರ್ಮದ ಕುರಿತು ನಿನಗೆ ತಿಳಿಯದೇ ಇರುವುದು ಏನೂ ಇಲ್ಲವೆಂದು ಕಾಣುತ್ತದೆ.”
03204003 ವ್ಯಾಧ ಉವಾಚ।
03204003a ಪ್ರತ್ಯಕ್ಷಂ ಮಮ ಯೋ ಧರ್ಮಸ್ತಂ ಪಶ್ಯ ದ್ವಿಜಸತ್ತಮ।
03204003c ಯೇನ ಸಿದ್ಧಿರಿಯಂ ಪ್ರಾಪ್ತಾ ಮಯಾ ಬ್ರಾಹ್ಮಣಪುಂಗವ।।
ವ್ಯಾಧನು ಹೇಳಿದನು: “ದ್ವಿಜಸತ್ತಮ! ಬ್ರಾಹ್ಮಣ ಪುಂಗವ! ನನ್ನ ಧರ್ಮವೇನೆನ್ನುವುದನ್ನು ಮತ್ತು ಯಾವುದರಿಂದ ನಾನು ಈ ಸಿದ್ಧಿಯನ್ನು ಪಡೆದಿದ್ದೇನೆ ಎನ್ನುವುದನ್ನು ನೀನು ಪ್ರತ್ಯಕ್ಷವಾಗಿ ನೋಡು!
03204004a ಉತ್ತಿಷ್ಠ ಭಗವನ್ ಕ್ಷಿಪ್ರಂ ಪ್ರವಿಶ್ಯಾಭ್ಯಂತರಂ ಗೃಹಂ।
03204004c ದ್ರಷ್ಟುಮರ್ಹಸಿ ಧರ್ಮಜ್ಞ ಮಾತರಂ ಪಿತರಂ ಚ ಮೇ।।
ಭಗವನ್! ಧರ್ಮಜ್ಞ! ಕೂಡಲೇ ಏಳು! ಮನೆಯ ಒಳಗೆ ಪ್ರವೇಶಿಸು. ನನ್ನ ತಾಯಿ-ತಂದೆಯರನ್ನು ನೀನು ನೋಡಬೇಕು.””
03204005 ಮಾರ್ಕಂಡೇಯ ಉವಾಚ।
03204005a ಇತ್ಯುಕ್ತಃ ಸ ಪ್ರವಿಶ್ಯಾಥ ದದರ್ಶ ಪರಮಾರ್ಚಿತಂ।
03204005c ಸೌಧಂ ಹೃದ್ಯಂ ಚತುಃಶಾಲಮತೀವ ಚ ಮನೋಹರಂ।।
ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಲು ಅವನು ಒಳಗೆ ಪ್ರವೇಶಿಸಿ ಸುಂದರವಾದ ಮನೆಯನ್ನು ನೋಡಿದನು. ಅದು ನಾಲ್ಕು ಕೋಣೆಗಳಿಂದ ಕೂಡಿತ್ತು. ಅತೀವ ಮನೋಹರವಾಗಿತ್ತು.
03204006a ದೇವತಾಗೃಹಸಂಕಾಶಂ ದೈವತೈಶ್ಚ ಸುಪೂಜಿತಂ।
03204006c ಶಯನಾಸನಸಂಬಾಧಂ ಗಂಧೈಶ್ಚ ಪರಮೈರ್ಯುತಂ।।
ದೇವತೆಗಳಿಂದ ಸುಪೂಜಿತವಾದ ದೇವತೆಗಳ ಮನೆಯಂತಿದ್ದ ಅದು ಸುಂದರ ಆಸನ ಹಾಸಿಗೆಗಳಿಂದ ಕೂಡಿತ್ತು. ಪರಮ ಸುಗಂಧದಿಂದ ಸೂಸುತ್ತಿತ್ತು.
03204007a ತತ್ರ ಶುಕ್ಲಾಂಬರಧರೌ ಪಿತರಾವಸ್ಯ ಪೂಜಿತೌ।
03204007c ಕೃತಾಹಾರೌ ಸುತುಷ್ಟೌ ತಾವುಪವಿಷ್ಟೌ ವರಾಸನೇ।
03204007e ಧರ್ಮವ್ಯಾಧಸ್ತು ತೌ ದೃಷ್ಟ್ವಾ ಪಾದೇಷು ಶಿರಸಾಪತತ್।।
ಅಲ್ಲಿ ಬಿಳಿಯ ವಸ್ತ್ರಗಳನ್ನು ಧರಿಸಿದ್ದ ಸುಪೂಜಿತರಾದ, ಊಟಮಾಡಿ ತುಷ್ಟರಾಗಿ ವರಾಸನದಲ್ಲಿ ಕುಳಿತಿದ್ದ ಅವನ ತಂದೆತಾಯಿಯರನ್ನು ಧರ್ಮವ್ಯಾಧನು ನೋಡಿ ಅವರ ಪಾದಗಳಲ್ಲಿ ತನ್ನ ಶಿರವನ್ನಿಟ್ಟನು.
03204008 ವೃದ್ಧೌ ಊಚತುಃ।
03204008a ಉತ್ತಿಷ್ಠೋತ್ತಿಷ್ಠ ಧರ್ಮಜ್ಞ ಧರ್ಮಸ್ತ್ವಾಮಭಿರಕ್ಷತು।
03204008c ಪ್ರೀತೌ ಸ್ವಸ್ತವ ಶೌಚೇನ ದೀರ್ಘಮಾಯುರವಾಪ್ನುಹಿ।
03204008e ಸತ್ಪುತ್ರೇಣ ತ್ವಯಾ ಪುತ್ರ ನಿತ್ಯಕಾಲಂ ಸುಪೂಜಿತೌ।।
ವೃದ್ಧರು ಹೇಳಿದರು: “ಧರ್ಮಜ್ಞ! ಮೇಲೇಳು! ಧರ್ಮವು ನಿನ್ನನ್ನು ರಕ್ಷಿಸಲಿ. ನಿನ್ನ ಶುಚಿತ್ವದಿಂದ ಪ್ರೀತರಾಗಿದ್ದೇವೆ. ದೀರ್ಘ ಆಯುಸ್ಸನ್ನು ಹೊಂದುತ್ತೀಯೆ. ಪುತ್ರ! ಸತ್ಪುತ್ರನಾದ ನಿನ್ನಿಂದ ನಿತ್ಯಕಾಲವೂ ನಾವು ಸುಪೂಜಿತರಾಗಿದ್ದೇವೆ.
03204009a ನ ತೇಽನ್ಯದ್ದೈವತಂ ಕಿಂ ಚಿದ್ದೈವತೇಷ್ವಪಿ ವರ್ತತೇ।
03204009c ಪ್ರಯತತ್ವಾದ್ದ್ವಿಜಾತೀನಾಂ ದಮೇನಾಸಿ ಸಮನ್ವಿತಃ।।
ದೇವತೆಗಳಲ್ಲಿಯೂ ಕೂಡ ನಿನಗೆ ಅನ್ಯ ದೇವತೆಗಳಿಲ್ಲ. ಪ್ರಯತ್ನಪಟ್ಟು ನೀನು ದ್ವಿಜಾತಿಯವರ ದಮಗಳಿಂದ ಸಮನ್ವಿತನಾಗಿದ್ದೀಯೆ.
03204010a ಪಿತುಃ ಪಿತಾಮಹಾ ಯೇ ಚ ತಥೈವ ಪ್ರಪಿತಾಮಹಾಃ।
03204010c ಪ್ರೀತಾಸ್ತೇ ಸತತಂ ಪುತ್ರ ದಮೇನಾವಾಂ ಚ ಪೂಜಯಾ।।
ಪುತ್ರ! ನಿನ್ನ ಈ ದಮ ಮತ್ತು ಪೂಜನೆಯಿಂದ ಪಿತ ಪಿತಾಮಹರು ಮತ್ತು ಪ್ರಪಿತಾಮಹರೂ ಪ್ರೀತರಾಗಿದ್ದಾರೆ.
03204011a ಮನಸಾ ಕರ್ಮಣಾ ವಾಚಾ ಶುಶ್ರೂಷಾ ನೈವ ಹೀಯತೇ।
03204011c ನ ಚಾನ್ಯಾ ವಿತಥಾ ಬುದ್ಧಿರ್ದೃಶ್ಯತೇ ಸಾಂಪ್ರತಂ ತವ।।
ಮನಸಾ, ಕರ್ಮಣಾ, ವಾಚಾ ನೀನು ನಮ್ಮ ಶುಶ್ರೂಷೆಯನ್ನು ಕಡೆಗಣಿಸಿಲ್ಲ. ಈಗಲೂ ಕೂಡ ನಿನ್ನ ಬುದ್ಧಿಯಲ್ಲಿ ಬೇರೆ ಏನೂ ಕಾಣುತ್ತಿಲ್ಲವೆಂದು ನಮಗನ್ನಿಸುತ್ತದೆ.
03204012a ಜಾಮದಗ್ನ್ಯೇನ ರಾಮೇಣ ಯಥಾ ವೃದ್ಧೌ ಸುಪೂಜಿತೌ।
03204012c ತಥಾ ತ್ವಯಾ ಕೃತಂ ಸರ್ವಂ ತದ್ವಿಶಿಷ್ಟಂ ಚ ಪುತ್ರಕ।।
ಪುತ್ರಕ! ಜಾಮದಗ್ನ್ಯ ರಾಮನಿಂದ ವೃದ್ಧರು ಹೇಗೆ ಸುಪೂಜಿತರಾಗಿದ್ದರೋ ಹಾಗೆ ನೀನೂ ಕೂಡ ಎಲ್ಲ ವಿಶಿಷ್ಟಗಳನ್ನೂ ಮಾಡಿದ್ದೀಯೆ.””
03204013 ಮಾರ್ಕಂಡೇಯ ಉವಾಚ।
03204013a ತತಸ್ತಂ ಬ್ರಾಹ್ಮಣಂ ತಾಭ್ಯಾಂ ಧರ್ಮವ್ಯಾಧೋ ನ್ಯವೇದಯತ್।
03204013c ತೌ ಸ್ವಾಗತೇನ ತಂ ವಿಪ್ರಮರ್ಚಯಾಮಾಸತುಸ್ತದಾ।।
ಮಾರ್ಕಂಡೇಯನು ಹೇಳಿದನು: “ಆಗ ಧರ್ಮವ್ಯಾಧನು ಆ ಬ್ರಾಹ್ಮಣನನ್ನು ಅವರಿಬ್ಬರಿಗೆ ಪರಿಚಯಿಸಿದನು. ಅವರಿಬ್ಬರೂ ಅವನನ್ನು ಸ್ವಾಗತಿಸಲು ವಿಪ್ರನೂ ಅವರನ್ನು ಗೌರವಿಸಿದನು.
03204014a ಪ್ರತಿಗೃಹ್ಯ ಚ ತಾಂ ಪೂಜಾಂ ದ್ವಿಜಃ ಪಪ್ರಚ್ಚ ತಾವುಭೌ।
03204014c ಸಪುತ್ರಾಭ್ಯಾಂ ಸಭೃತ್ಯಾಭ್ಯಾಂ ಕಚ್ಚಿದ್ವಾಂ ಕುಶಲಂ ಗೃಹೇ।
03204014e ಅನಾಮಯಂ ಚ ವಾಂ ಕಚ್ಚಿತ್ಸದೈವೇಹ ಶರೀರಯೋಃ।।
ಅವರ ಪೂಜೆಯನ್ನು ಸ್ವೀಕರಿಸಿ ದ್ವಿಜನು ಅವರಿಬ್ಬರನ್ನೂ ಪುತ್ರರೊಂದಿಗೆ, ಸೇವಕರೊಂದಿಗೆ ಮತ್ತು ಮನೆಯಲ್ಲಿ ಉಳಿದವರೆಲ್ಲರೊಂದಿಗೆ ಅವರು ಕುಶಲವಾಗಿದ್ದಾರೆಯೇ ಮತ್ತು ಸದೈವ ಶರೀರಗಳಲ್ಲಿ ಅನಾಮಯರಾಗಿದ್ದಾರೆಯೇ ಎಂದು ಕೇಳಿದನು.
03204015 ವೃದ್ಧೌ ಊಚತುಃ।
03204015a ಕುಶಲಂ ನೋ ಗೃಹೇ ವಿಪ್ರ ಭೃತ್ಯವರ್ಗೇ ಚ ಸರ್ವಶಃ।
03204015c ಕಚ್ಚಿತ್ತ್ವಮಪ್ಯವಿಘ್ನೇನ ಸಂಪ್ರಾಪ್ತೋ ಭಗವನ್ನಿಹ।।
ವೃದ್ಧರು ಹೇಳಿದರು: “ವಿಪ್ರ! ಮನೆಯಲ್ಲಿ ಎಲ್ಲರೂ, ಸೇವಕ ವರ್ಗವೂ ಕುಶಲರಾಗಿದ್ದಾರೆ. ನೀನೂ ಕೂಡ ನಿರ್ವಿಘ್ನವಾಗಿ ಇಲ್ಲಿಗೆ ಬಂದಿರುವೆಯಾ?””
03204016 ಮಾರ್ಕಂಡೇಯ ಉವಾಚ।
03204016a ಬಾಢಮಿತ್ಯೇವ ತೌ ವಿಪ್ರಃ ಪ್ರತ್ಯುವಾಚ ಮುದಾನ್ವಿತಃ।
03204016c ಧರ್ಮವ್ಯಾಧಸ್ತು ತಂ ವಿಪ್ರಮರ್ಥವದ್ವಾಕ್ಯಮಬ್ರವೀತ್।।
ಮಾರ್ಕಂಡೇಯನು ಹೇಳಿದನು: “ಸಂತೋಷಗೊಂಡ ವಿಪ್ರನು “ಚೆನ್ನಾಗಿದ್ದೇನೆ” ಎಂದು ಅವರಿಬ್ಬರಿಗೆ ಉತ್ತರಿಸಿದನು. ಧರ್ಮವ್ಯಾಧನು ವಿಪ್ರನಿಗೆ ಅರ್ಥವತ್ತಾದ ಈ ಮಾತುಗಳನ್ನಾಡಿದನು:
03204017a ಪಿತಾ ಮಾತಾ ಚ ಭಗವನ್ನೇತೌ ಮೇ ದೈವತಂ ಪರಂ।
03204017c ಯದ್ದೈವತೇಭ್ಯಃ ಕರ್ತವ್ಯಂ ತದೇತಾಭ್ಯಾಂ ಕರೋಮ್ಯಹಂ।।
“ಭಗವನ್! ತಂದೆ ಮತ್ತು ತಾಯಿ ಇವರೇ ನನ್ನ ಪರಮ ದೇವರು. ದೇವತೆಗಳಿಗೆ ಮಾಡಬೇಕಾದುದನ್ನು ಇವರಿಬ್ಬರಿಗೆ ನಾನು ಮಾಡುತ್ತೇನೆ.
03204018a ತ್ರಯಸ್ತ್ರಿಂಶದ್ಯಥಾ ದೇವಾಃ ಸರ್ವೇ ಶಕ್ರಪುರೋಗಮಾಃ।
03204018c ಸಂಪೂಜ್ಯಾಃ ಸರ್ವಲೋಕಸ್ಯ ತಥಾ ವೃದ್ಧಾವಿಮೌ ಮಮ।।
ಇಂದ್ರನ ನಾಯಕತ್ವದಲ್ಲಿರುವ ಮೂವತ್ತುಮೂರು ದೇವತೆಗಳೆಲ್ಲರನ್ನೂ1 ಸರ್ವಲೋಕವು ಹೇಗೆ ಪೂಜಿಸುತ್ತದೆಯೋ ಹಾಗೆ ಈ ವೃದ್ಧರೀರ್ವರನ್ನು ನಾನು ಪೂಜಿಸುತ್ತೇನೆ.
03204019a ಉಪಹಾರಾನಾಹರಂತೋ ದೇವತಾನಾಂ ಯಥಾ ದ್ವಿಜಾಃ।
03204019c ಕುರ್ವತೇ ತದ್ವದೇತಾಭ್ಯಾಂ ಕರೋಮ್ಯಹಮತಂದ್ರಿತಃ।।
ದ್ವಿಜರು ದೇವತೆಗಳ ನೈವೇದ್ಯಕ್ಕೆ ಆಹಾರವನ್ನು ಹೇಗೆ ಶ್ರಮಪಟ್ಟು ತಯಾರಿಸುತ್ತಾರೋ ಹಾಗೆ ನಾನೂ ಕೂಡ ಇವರಿಬ್ಬರಿಗೆ ಮಾಡುತ್ತೇನೆ.
03204020a ಏತೌ ಮೇ ಪರಮಂ ಬ್ರಹ್ಮನ್ಪಿತಾ ಮಾತಾ ಚ ದೈವತಂ।
03204020c ಏತೌ ಪುಷ್ಪೈಃ ಫಲೈ ರತ್ನೈಸ್ತೋಷಯಾಮಿ ಸದಾ ದ್ವಿಜ।।
ಬ್ರಹ್ಮನ್! ಈ ತಂದೆತಾಯಿಯರಿಬ್ಬರೂ ನನ್ನ ಪರಮ ದೇವರುಗಳು. ದ್ವಿಜ! ಇವರನ್ನು ನಾನು ಪುಷ್ಪ, ಫಲ ರತ್ನಗಳಿಂದ ಸಂತುಷ್ಟಗೊಳಿಸುತ್ತೇನೆ.
03204021a ಏತಾವೇವಾಗ್ನಯೋ ಮಹ್ಯಂ ಯಾನ್ವದಂತಿ ಮನೀಷಿಣಃ।
03204021c ಯಜ್ಞಾ ವೇದಾಶ್ಚ ಚತ್ವಾರಃ ಸರ್ವಮೇತೌ ಮಮ ದ್ವಿಜ।।
ಮನೀಷಿಣರು ಹೇಳುವ ಮೂರು ಅಗ್ನಿಗಳು (ದಕ್ಷಿಣಾಗ್ನಿ, ಗಾರ್ಹಪತ್ಯ ಮತ್ತು ಆಹವನೀಯ) ನನಗೆ ಇವರೇ. ದ್ವಿಜ! ಇವರೇ ನನಗೆ ಯಜ್ಞ ಮತ್ತು ನಾಲ್ಕು ವೇದಗಳು ಮತ್ತು ಸರ್ವಸ್ವವೂ.
03204022a ಏತದರ್ಥಂ ಮಮ ಪ್ರಾಣಾ ಭಾರ್ಯಾ ಪುತ್ರಾಃ ಸುಹೃಜ್ಜನಾಃ।
03204022c ಸಪುತ್ರದಾರಃ ಶುಶ್ರೂಷಾಂ ನಿತ್ಯಮೇವ ಕರೋಮ್ಯಹಂ।।
ನನ್ನ ಪ್ರಾಣಗಳಾದ ಪತ್ನಿ, ಪುತ್ರರು ಮತ್ತು ಸುಪುತ್ರರು ಇವರಿಗಾಗಿಯೇ ಇದ್ದಾರೆ. ಪುತ್ರ ಮತ್ತು ಪತ್ನಿಯೊಂದಿಗೆ ನಾನು ನಿತ್ಯವೂ ಇವರ ಶುಶ್ರೂಷೆಯನ್ನು ಮಾಡುತ್ತೇನೆ.
03204023a ಸ್ವಯಂ ಚ ಸ್ನಾಪಯಾಮ್ಯೇತೌ ತಥಾ ಪಾದೌ ಪ್ರಧಾವಯೇ।
03204023c ಆಹಾರಂ ಸಂಪ್ರಯಚ್ಚಾಮಿ ಸ್ವಯಂ ಚ ದ್ವಿಜಸತ್ತಮ।।
ದ್ವಿಜಸತ್ತಮ! ಸ್ವಯಂ ನಾನೇ ಇವರಿಗೆ ಸ್ನಾನಮಾಡಿಸುತ್ತೇನೆ, ಪಾದಗಳನ್ನು ತೊಳೆಯುತ್ತೇನೆ, ಮತ್ತು ನಾನೇ ಅವರಿಗೆ ಆಹಾರವನ್ನು ಉಣಿಸುತ್ತೇನೆ.
03204024a ಅನುಕೂಲಾಃ ಕಥಾ ವಚ್ಮಿ ವಿಪ್ರಿಯಂ ಪರಿವರ್ಜಯನ್।
03204024c ಅಧರ್ಮೇಣಾಪಿ ಸಮ್ಯುಕ್ತಂ ಪ್ರಿಯಮಾಭ್ಯಾಂ ಕರೋಮ್ಯಹಂ।।
ವಿಪ್ರಿಯವಾದುದನ್ನು ವರ್ಜಿಸಿ ಅನುಕೂಲವಾದುದನ್ನೇ ಅವರಿಗೆ ಹೇಳುತ್ತೇನೆ. ಅಧರ್ಮವಾಗಿದ್ದರೂ ನಾನು ಇವರಿಬ್ಬರಿಗೆ ಪ್ರಿಯವಾದುದನ್ನು ನಿಜವಾಗಿಯೂ ಮಾಡುತ್ತೇನೆ.
03204025a ಧರ್ಮಮೇವ ಗುರುಂ ಜ್ಞಾತ್ವಾ ಕರೋಮಿ ದ್ವಿಜಸತ್ತಮ।
03204025c ಅತಂದ್ರಿತಃ ಸದಾ ವಿಪ್ರ ಶುಶ್ರೂಷಾಂ ವೈ ಕರೋಮ್ಯಹಂ।।
ದ್ವಿಜಸತ್ತಮ! ವಿಪ್ರ! ಧರ್ಮವೇ ಗುರುವೆಂದು ತಿಳಿದು ಮಾಡುತ್ತೇನೆ. ಆಯಾಸಗೊಳ್ಳದೇ ಸದಾ ಇವರ ಶುಶ್ರೂಷೆಯನ್ನು ಮಾಡುತ್ತೇನೆ.
03204026a ಪಂಚೈವ ಗುರವೋ ಬ್ರಹ್ಮನ್ಪುರುಷಸ್ಯ ಬುಭೂಷತಃ।
03204026c ಪಿತಾ ಮಾತಾಗ್ನಿರಾತ್ಮಾ ಚ ಗುರುಶ್ಚ ದ್ವಿಜಸತ್ತಮ।।
ಬ್ರಹ್ಮನ್! ದ್ವಿಜಸತ್ತಮ! ಪುರುಷನಿಗೆ ಐದೇ ಗುರುಗಳಿದ್ದಾರೆಂದು ಹೇಳುತ್ತಾರೆ: ತಂದೆ, ತಾಯಿ, ಅಗ್ನಿ, ಆತ್ಮ ಮತ್ತು ಗುರು.
03204027a ಏತೇಷು ಯಸ್ತು ವರ್ತೇತ ಸಮ್ಯಗೇವ ದ್ವಿಜೋತ್ತಮ।
03204027c ಭವೇಯುರಗ್ನಯಸ್ತಸ್ಯ ಪರಿಚೀರ್ಣಾಸ್ತು ನಿತ್ಯಶಃ।
03204027e ಗಾರ್ಹಸ್ಥ್ಯೇ ವರ್ತಮಾನಸ್ಯ ಧರ್ಮ ಏಷ ಸನಾತನಃ।।
ದ್ವಿಜೋತ್ತಮ! ಒಳ್ಳೆಯದನ್ನು ಬಯಸುವವರು ಇವರೊಂದಿಗೆ ಸರಿಯಾಗಿ ನಡೆದುಕೊಳ್ಳಬೇಕು. ಅವರನ್ನು ಸರಿಯಾಗಿ ಪೂಜಿಸುವುದು ಗಾರ್ಹಪತ್ಯ ಅಗ್ನಿಯನ್ನು ಕಾದಿರಿಸಿಕೊಂಡ ಹಾಗೆ. ಇದು ಸನಾತನ ಧರ್ಮ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಬ್ರಾಹ್ಮಣವ್ಯಾಧಸಂವಾದೇ ಚತುರಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ಇನ್ನೂರಾನಾಲ್ಕನೆಯ ಅಧ್ಯಾಯವು.
-
ಮೂವತ್ತುಮೂರು ದೇವತೆಗಳು: ಅಷ್ಟ ವಸುಗಳು, ಏಕಾದಶ ರುದ್ರರು, ದ್ವಾದಶಾದಿತ್ಯರು, ಇಂದ್ರ ಮತ್ತು ಪ್ರಜಾಪತಿ. ↩︎