ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 195
ಸಾರ
ಮಧು-ಕೈಟಭರ ಮಗ ಧುಂಧುವು ಬ್ರಹ್ಮನಿಂದ ವರವನ್ನು ಪಡೆದುದು (1-9). ನಾರಾಯಣನ ತೇಜಸ್ಸಿನಿಂದ ಬಲಗೊಂಡ ಕುವಲಾಶ್ವನು ಧುಂಧುವನ್ನು ಸಂಹರಿಸಲು ಹೊರಟಿದುದು (10-21). ಧುಂಧುವನ್ನು ಸಂಹರಿಸಿ ಕುವಲಾಶ್ವನು ಧುಂಧುಮಾರನಾದುದು (22-39).
03195001 ಮಾರ್ಕಂಡೇಯ ಉವಾಚ।
03195001a ಧುಂಧುರ್ನಾಮ ಮಹಾತೇಜಾಸ್ತಯೋಃ ಪುತ್ರೋ ಮಹಾದ್ಯುತಿಃ।
03195001c ಸ ತಪೋಽತಪ್ಯತ ಮಹನ್ಮಹಾವೀರ್ಯಪರಾಕ್ರಮಃ।।
ಮಾರ್ಕಂಡೇಯನು ಹೇಳಿದನು: “ಮಹಾಧ್ಯುತಿ ಧುಂಧು ಎಂಬ ಹೆಸರಿನವರ ಆ ಮಹಾತೇಜಸ್ವಿಗಳ ಮಗ. ಆ ಮಹಾವೀರ್ಯಪರಾಕ್ರಮಿಯು ಮಹಾ ತಪಸ್ಸನ್ನು ತಪಿಸಿದನು.
03195002a ಅತಿಷ್ಠದೇಕಪಾದೇನ ಕೃಶೋ ಧಮನಿಸಂತತಃ।
03195002c ತಸ್ಮೈ ಬ್ರಹ್ಮಾ ದದೌ ಪ್ರೀತೋ ವರಂ ವವ್ರೇ ಸ ಚ ಪ್ರಭೋ।।
ಧಮನಿಗಳು ಮಾತ್ರ ಕಾಣುವಷ್ಟು ಕೃಶನಾದ ಅವನು ಒಂದೇ ಕಾಲಿನ ಮೇಲೆ ನಿಂತುಕೊಂಡಿದ್ದನು. ಪ್ರೀತನಾಗಿ ಬ್ರಹ್ಮನು ಅವನಿಗೆ ವರವನ್ನು ಕೊಟ್ಟನು. ಆ ಪ್ರಭುವು ಈ ವರವನ್ನು ಬೇಡಿದನು.
03195003a ದೇವದಾನವಯಕ್ಷಾಣಾಂ ಸರ್ಪಗಂಧರ್ವರಕ್ಷಸಾಂ।
03195003c ಅವಧ್ಯೋಽಹಂ ಭವೇಯಂ ವೈ ವರ ಏಷ ವೃತೋ ಮಯಾ।।
“ದೇವ, ದಾನವ, ಯಕ್ಷ, ಸರ್ಪ, ಗಂಧರ್ವ, ರಾಕ್ಷಸರಿಗೆ ನಾನು ಅವಧ್ಯನಾಗಲಿ. ಇದೇ ನಾನು ಕೇಳುವ ವರ.”
03195004a ಏವಂ ಭವತು ಗಚ್ಚೇತಿ ತಮುವಾಚ ಪಿತಾಮಹಃ।
03195004c ಸ ಏವಮುಕ್ತಸ್ತತ್ಪಾದೌ ಮೂರ್ಧ್ನಾ ಸ್ಪೃಶ್ಯ ಜಗಾಮ ಹ।।
“ಹಾಗೆಯೇ ಆಗುತ್ತದೆ! ಹೋಗು!” ಎಂದು ಪಿತಾಮಹನು ಅವನಿಗೆ ಹೇಳಿದನು. ಇದನ್ನು ಕೇಳಿದ ಅವನು ಅವನ ಪಾದಗಳಿಗೆ ತಲೆಯನ್ನಿರಿಸಿ ಹೋದನು.
03195005a ಸ ತು ಧುಂಧುರ್ವರಂ ಲಬ್ಧ್ವಾ ಮಹಾವೀರ್ಯಪರಾಕ್ರಮಃ।
03195005c ಅನುಸ್ಮರನ್ಪಿತೃವಧಂ ತತೋ ವಿಷ್ಣುಮುಪಾದ್ರವತ್।।
ಆ ವರವನ್ನು ಪಡೆದು ಮಹಾವೀರ್ಯಪರಾಕ್ರಮಿ ಧುಂಧುವು ಪಿತೃಗಳ ವಧೆಯನ್ನು ನೆನಪಿಸಿಕೊಂಡು ವಿಷ್ಣುವಿಗೆ ಉಪದ್ರವಿಸಿದನು.
03195006a ಸ ತು ದೇವಾನ್ಸಗಂಧರ್ವಾನ್ಜಿತ್ವಾ ಧುಂಧುರಮರ್ಷಣಃ।
03195006c ಬಬಾಧ ಸರ್ವಾನಸಕೃದ್ದೇವಾನ್ವಿಷ್ಣುಂ ಚ ವೈ ಭೃಶಂ।।
ಆ ಅಮರ್ಷಣ ಧುಂಧುವು ದೇವ-ಗಂಧರ್ವರನ್ನು ಜಯಿಸಿ ಎಲ್ಲ ದೇವತೆಗಳನ್ನೂ ವಿಷ್ಣುವನ್ನೂ ಚೆನ್ನಾಗಿ ಬಾಧಿಸಿದನು.
03195007a ಸಮುದ್ರೋ ವಾಲುಕಾಪೂರ್ಣ ಉಜ್ಜಾನಕ ಇತಿ ಸ್ಮೃತಃ।
03195007c ಆಗಮ್ಯ ಚ ಸ ದುಷ್ಟಾತ್ಮಾ ತಂ ದೇಶಂ ಭರತರ್ಷಭ।।
ಭರತರ್ಷಭ! ಪ್ರಭೋ! ಉಜ್ಜಾನಕವೆಂದು ಪ್ರಸಿದ್ಧವಾದ ಮರಳಿನ ಸಮುದ್ರಕ್ಕೆ ಹೋಗಿ, ಆ ಪ್ರದೇಶದಲ್ಲಿರುವ ಉತ್ತಂಕನ ಆ ಆಶ್ರಮವನ್ನು ಪರಮ ಶಕ್ತಿಯಿಂದ ಬಾಧಿಸತೊಡಗಿದನು.
03195007e ಬಾಧತೇ ಸ್ಮ ಪರಂ ಶಕ್ತ್ಯಾ ತಮುತ್ತಂಕಾಶ್ರಮಂ ಪ್ರಭೋ।।
03195008a ಅಂತರ್ಭೂಮಿಗತಸ್ತತ್ರ ವಾಲುಕಾಂತರ್ಹಿತಸ್ತದಾ।
03195008c ಮಧುಕೈಟಭಯೋಃ ಪುತ್ರೋ ಧುಂಧುರ್ಭೀಮಪರಾಕ್ರಮಃ।।
03195009a ಶೇತೇ ಲೋಕವಿನಾಶಾಯ ತಪೋಬಲಸಮಾಶ್ರಿತಃ।
03195009c ಉತ್ತಂಕಸ್ಯಾಶ್ರಮಾಭ್ಯಾಶೇ ನಿಃಶ್ವಸನ್ಪಾವಕಾರ್ಚಿಷಃ।।
ಅಲ್ಲಿ ಭೂಮಿಯ ಒಳಗೆ ಹೋಗಿ, ಮರಳಿನಲ್ಲಿ ಭೀಮಪರಾಕ್ರಮಿ, ಮಧು-ಕೈಟಭರ ಪುತ್ರ ಧುಂಧುವು, ತಪೋಬಲವನ್ನಾಶ್ರಯಿಸಿ ಲೋಕವಿನಾಶಕ್ಕಾಗಿ ಉತ್ತಂಕನ ಆಶ್ರಮದ ಬಳಿ ಬೆಂಕಿಯನ್ನು ಉಸಿರಾಡುತ್ತಾ ಮಲಗಿಕೊಂಡಿದ್ದನು.
03195010a ಏತಸ್ಮಿನ್ನೇವ ಕಾಲೇ ತು ಸಭೃತ್ಯಬಲವಾಹನಃ।
03195010c ಕುವಲಾಶ್ವೋ ನರಪತಿರನ್ವಿತೋ ಬಲಶಾಲಿನಾಂ।।
03195011a ಸಹಸ್ರೈರೇಕವಿಂಶತ್ಯಾ ಪುತ್ರಾಣಾಮರಿಮರ್ದನಃ।
03195011c ಪ್ರಾಯಾದುತ್ತಂಕಸಹಿತೋ ಧುಂಧೋಸ್ತಸ್ಯ ನಿವೇಶನಂ।।
ಇದೇ ಸಮಯದಲ್ಲಿ ನರಪತಿ ಅರಿಮರ್ದನ ಕುವಲಾಶ್ವನು ಸೇವಕ, ಬಲ ವಾಹನಗಳಿಂದ ಕೂಡಿದವನಾಗಿ ಇಪ್ಪತ್ತೊಂದು ಸಾವಿರ ಬಲಶಾಲಿ ಪುತ್ರರೊಂದಿಗೆ ಧುಂಧುವಿನ ವಾಸಸ್ಥಳಕ್ಕೆ ಹೊರಟನು.
03195012a ತಮಾವಿಶತ್ತತೋ ವಿಷ್ಣುರ್ಭಗವಾನ್ ಸ್ತೇಜಸಾ ಪ್ರಭುಃ।
03195012c ಉತ್ತಂಕಸ್ಯ ನಿಯೋಗೇನ ಲೋಕಾನಾಂ ಹಿತಕಾಮ್ಯಯಾ।।
ಆಗ ಪ್ರಭು ಭಗವಾನ್ ವಿಷ್ಣುವು ಉತ್ತಂಕನ ನಿಯೋಗದಂತೆ ಲೋಕಗಳ ಹಿತವನ್ನು ಬಯಸಿ ತೇಜಸ್ಸಿನಿಂದ ಅವರಲ್ಲಿ ಆವೇಶಗೊಂಡನು.
03195013a ತಸ್ಮಿನ್ಪ್ರಯಾತೇ ದುರ್ಧರ್ಷೇ ದಿವಿ ಶಬ್ಧೋ ಮಹಾನಭೂತ್।
03195013c ಏಷ ಶ್ರೀಮಾನ್ನೃಪಸುತೋ ಧುಂಧುಮಾರೋ ಭವಿಷ್ಯತಿ।।
ಆ ದುರ್ಧರ್ಷರು ಹೊರಡುವಾಗ ದಿವಿಯಲ್ಲಿ ಈ ಶ್ರೀಮಾನ್ ನೃಪಸುತನು ಧುಂಧುಮಾರನಾಗುತ್ತಾನೆ ಎಂದು ಮಹಾ ಶಬ್ಧವುಂಟಾಯಿತು.
03195014a ದಿವ್ಯೈಶ್ಚ ಪುಷ್ಪೈಸ್ತಂ ದೇವಾಃ ಸಮಂತಾತ್ಪರ್ಯವಾಕಿರನ್।
03195014c ದೇವದುಂದುಭಯಶ್ಚೈವ ನೇದುಃ ಸ್ವಯಮುದೀರಿತಾಃ।।
ದೇವತೆಗಳು ದಿವ್ಯ ಪುಷ್ಪಗಳನ್ನು ಎಲ್ಲೆಡೆಯೂ ಚೆಲ್ಲಿದರು. ದೇವದುಂದುಭಿಗಳನ್ನೇ ಅವರು ಮೊಳಗಿಸಿದರು.
03195015a ಶೀತಶ್ಚ ವಾಯುಃ ಪ್ರವವೌ ಪ್ರಯಾಣೇ ತಸ್ಯ ಧೀಮತಃ।
03195015c ವಿಪಾಂಸುಲಾಂ ಮಹೀಂ ಕುರ್ವನ್ವವರ್ಷ ಚ ಸುರೇಶ್ವರಃ।।
ಆ ಧೀಮಂತನ ಪ್ರಯಾಣದಲ್ಲಿ ಶೀತಲ ಗಾಳಿಯು ಬೀಸಿತು. ಸುರೇಶ್ವರನು ಮಳೆಸುರಿಸಿ ನೆಲವನ್ನು ಧೂಳಿಲ್ಲದಂತೆ ಮಾಡಿದನು.
03195016a ಅಂತರಿಕ್ಷೇ ವಿಮಾನಾನಿ ದೇವತಾನಾಂ ಯುಧಿಷ್ಠಿರ।
03195016c ತತ್ರೈವ ಸಮದೃಶ್ಯಂತ ಧುಂಧುರ್ಯತ್ರ ಮಹಾಸುರಃ।।
ಯುಧಿಷ್ಠಿರ! ಮಹಾಸುರ ಧುಂಧುವಿರುವಲ್ಲಿ ಅಂತರಿಕ್ಷದಲ್ಲಿ ದೇವತೆಗಳ ವಿಮಾನಗಳು ಕಂಡುಬಂದವು.
03195017a ಕುವಲಾಶ್ವಸ್ಯ ಧುಂಧೋಶ್ಚ ಯುದ್ಧಕೌತೂಹಲಾನ್ವಿತಾಃ।
03195017c ದೇವಗಂಧರ್ವಸಹಿತಾಃ ಸಮವೈಕ್ಷನ್ಮಹರ್ಷಯಃ।।
ಕುವಲಾಶ್ವ ಮತ್ತು ಧುಂಧುವಿನ ಯುದ್ಧವನ್ನು ನೋಡಲು ಕುತೂಹಲಗೊಂಡ ಮಹರ್ಷಿಗಳು ದೇವ-ಗಂಧರ್ವರೊಡನೆ ಸೇರಿದರು.
03195018a ನಾರಾಯಣೇನ ಕೌರವ್ಯ ತೇಜಸಾಪ್ಯಾಯಿತಸ್ತದಾ।
03195018c ಸ ಗತೋ ನೃಪತಿಃ ಕ್ಷಿಪ್ರಂ ಪುತ್ರೈಸ್ತೈಃ ಸರ್ವತೋದಿಶಂ।।
ಕೌರವ್ಯ! ನಾರಾಯಣನ ತೇಜಸ್ಸಿನಿಂದ ಬಲಗೊಂಡ ನೃಪತಿಯು ತನ್ನ ಪುತ್ರರೊಂದಿಗೆ ಎಲ್ಲ ದಿಕ್ಕುಗಳಿಂದಲೂ ಕ್ಷಿಪ್ರವಾಗಿ ಮುಂದುವರೆದನು.
03195019a ಅರ್ಣವಂ ಖಾನಯಾಮಾಸ ಕುವಲಾಶ್ವೋ ಮಹೀಪತಿಃ।
03195019c ಕುವಲಾಶ್ವಸ್ಯ ಪುತ್ರೈಸ್ತು ತಸ್ಮಿನ್ವೈ ವಾಲುಕಾರ್ಣವೇ।।
03195020a ಸಪ್ತಭಿರ್ದಿವಸೈಃ ಖಾತ್ವಾ ದೃಷ್ಟೋ ಧುಂಧುರ್ಮಹಾಬಲಃ।
ಕುವಲಾಶ್ವನು ಮರಳಿನ ರಾಶಿಯನ್ನು ಅಗೆಯಿಸಿದನು. ಆ ಮರಳಿನ ರಾಶಿಯನ್ನು ಏಳು ದಿವಸಗಳು ಅಗೆದ ನಂತರ ಕುವಲಾಶ್ವನ ಪುತ್ರರು ಮಹಾಬಲಿ ಧುಂಧುವನ್ನು ಕಂಡರು.
03195020c ಆಸೀದ್ಘೋರಂ ವಪುಸ್ತಸ್ಯ ವಾಲುಕಾಂತರ್ಹಿತಂ ಮಹತ್।।
03195020e ದೀಪ್ಯಮಾನಂ ಯಥಾ ಸೂರ್ಯಸ್ತೇಜಸಾ ಭರತರ್ಷಭ।।
ಮರಳಿನೊಳಗಿದ್ದ ಅವನ ಮಹಾಕಾಯವು ಘೋರವಾಗಿತ್ತು. ಭರತರ್ಷಭ! ಸೂರ್ಯನ ತೇಜಸ್ಸಿನಂತೆ ಬೆಳಗುತ್ತಿತ್ತು.
03195021a ತತೋ ಧುಂಧುರ್ಮಹಾರಾಜ ದಿಶಮಾಶ್ರಿತ್ಯ ಪಶ್ಚಿಮಾಂ।
03195021c ಸುಪ್ತೋಽಭೂದ್ರಾಜಶಾರ್ದೂಲ ಕಾಲಾನಲಸಮದ್ಯುತಿಃ।।
ಮಹಾರಾಜ! ರಾಜಶಾರ್ದೂಲ! ಅಲ್ಲಿ ಧುಂಧುವು ಪಶ್ಚಿಮ ದಿಕ್ಕನ್ನು ಮುಚ್ಚಿ ಕಾಲಾನಲನಂತೆ ಬೆಳಗಿ ಮಲಗಿದ್ದನು.
03195022a ಕುವಲಾಶ್ವಸ್ಯ ಪುತ್ರೈಸ್ತು ಸರ್ವತಃ ಪರಿವಾರಿತಃ।
03195022c ಅಭಿದ್ರುತಃ ಶರೈಸ್ತೀಕ್ಷ್ಣೈರ್ಗದಾಭಿರ್ಮುಸಲೈರಪಿ।।
03195022e ಪಟ್ಟಿಶೈಃ ಪರಿಘೈಃ ಪ್ರಾಸೈಃ ಖಡ್ಗೈಶ್ಚ ವಿಮಲೈಃ ಶಿತೈಃ।।
ಕುವಲಾಶ್ವನ ಪುತ್ರರು ಎಲ್ಲಕಡೆಯಿಂದ ಸುತ್ತುವರೆದು, ತೀಕ್ಷ್ಣ ಶರಗಳಿಂದ, ಗದೆಗಳಿಂದ ಮತ್ತು ಮುಸಲ, ಪಟ್ಟಿಶ, ಪರಿಘ, ಪ್ರಾಸ, ಹರಿತ ವಿಮಲ ಖಡ್ಗಗಳಿಂದ ಅವನನ್ನು ತಿವಿದರು.
03195023a ಸ ವಧ್ಯಮಾನಃ ಸಂಕ್ರುದ್ಧಃ ಸಮುತ್ತಸ್ಥೌ ಮಹಾಬಲಃ।
03195023c ಕ್ರುದ್ಧಶ್ಚಾಭಕ್ಷಯತ್ತೇಷಾಂ ಶಸ್ತ್ರಾಣಿ ವಿವಿಧಾನಿ ಚ।।
ಹೀಗೆ ಪೆಟ್ಟು ತಿಂದ ಆ ಮಹಾಬಲನು ಸಂಕ್ರುದ್ದನಾಗಿ ಮೇಲೆದ್ದು ಕೋಪದಿಂದ ವಿವಿಧ ಶಸ್ತ್ರಗಳನ್ನು ಭಕ್ಷಿಸಿದನು.
03195024a ಆಸ್ಯಾದ್ವಮನ್ಪಾವಕಂ ಸ ಸಂವರ್ತಕಸಮಂ ತದಾ।
03195024c ತಾನ್ಸರ್ವಾನ್ನೃಪತೇಃ ಪುತ್ರಾನದಹತ್ಸ್ವೇನ ತೇಜಸಾ।।
ಬಾಯಿಯಿಂದ ಸಂವರ್ತಕನ ಸಮನಾದ ಬೆಂಕಿಯನ್ನು ಕಾರುತ್ತಾ, ಅದರ ತೇಜಸ್ಸಿನಿಂದ ಅವನು ನೃಪತಿಯ ಎಲ್ಲ ಮಕ್ಕಳನ್ನೂ ಸುಟ್ಟುಹಾಕಿದನು.
03195025a ಮುಖಜೇನಾಗ್ನಿನಾ ಕ್ರುದ್ಧೋ ಲೋಕಾನುದ್ವರ್ತಯನ್ನಿವ।
03195025c ಕ್ಷಣೇನ ರಾಜಶಾರ್ದೂಲ ಪುರೇವ ಕಪಿಲಃ ಪ್ರಭುಃ।।
03195025e ಸಗರಸ್ಯಾತ್ಮಜಾನ್ ಕ್ರುದ್ಧಸ್ತದದ್ಭುತಮಿವಾಭವತ್।।
ರಾಜಶಾರ್ದೂಲ! ಮುಖದಿಂದ ಹುಟ್ಟಿದ ಅಗ್ನಿಯಿಂದ ಲೋಕಗಳನ್ನು ಕೊನೆಗೊಳಿಸುವನೋ ಎಂಬಂತೆ ಕೃದ್ಧನಾಗಿ, ಹಿಂದೆ ಪ್ರಭು ಕಪಿಲನು ಕೃದ್ಧನಾಗಿ ಸಗರನ ಮಕ್ಕಳನ್ನು ಸುಟ್ಟಂತೆ, ಕ್ಷಣಾರ್ಧದಲ್ಲಿ ಅವರನ್ನು ಸುಟ್ಟು ಅದ್ಭುತವನ್ನೆಸಗಿದನು.
03195026a ತೇಷು ಕ್ರೋಧಾಗ್ನಿದಗ್ಧೇಷು ತದಾ ಭರತಸತ್ತಮ।
03195026c ತಂ ಪ್ರಬುದ್ಧಂ ಮಹಾತ್ಮಾನಂ ಕುಂಭಕರ್ಣಮಿವಾಪರಂ।।
03195026e ಆಸಸಾದ ಮಹಾತೇಜಾಃ ಕುವಲಾಶ್ವೋ ಮಹೀಪತಿಃ।।
ಭರತಸತ್ತಮ! ಅವರು ಕ್ರೋಧಾಗ್ನಿಯಲ್ಲಿ ಸುಟ್ಟುಹೋಗಲು, ಮಹಾತೇಜಸ್ವಿ ಮಹೀಪತಿ ಕುವಲಾಶ್ವನು ಕುಂಭಕರ್ಣನಂತೆ ಬೆಳೆದಿದ್ದ ಆ ಮಹಾತ್ಮನನ್ನು ಎದುರಿಸಿದನು.
03195027a ತಸ್ಯ ವಾರಿ ಮಹಾರಾಜ ಸುಸ್ರಾವ ಬಹು ದೇಹತಃ।
03195027c ತದಾಪೀಯತ ತತ್ತೇಜೋ ರಾಜಾ ವಾರಿಮಯಂ ನೃಪ।।
03195027e ಯೋಗೀ ಯೋಗೇನ ವಹ್ನಿಂ ಚ ಶಮಯಾಮಾಸ ವಾರಿಣಾ।।
ಮಹಾರಾಜ! ಅವನ ದೇಹದಿಂದ ಬಹಳಷ್ಟು ನೀರು ಹರಿಯಿತು. ರಾಜ ನೃಪನಿಂದ ಹರಿದ ಆ ನೀರಿನ ರಾಶಿಯು ಆ ತೇಜಸ್ಸನ್ನು ಕುಡಿಯಿತು. ಆ ಯೋಗಿಯು ಯೋಗದ ನೀರಿನಿಂದ ಆ ಬೆಂಕಿಯನ್ನು ಆರಿಸಿದನು.
03195028a ಬ್ರಹ್ಮಾಸ್ತ್ರೇಣ ತದಾ ರಾಜಾ ದೈತ್ಯಂ ಕ್ರೂರಪರಾಕ್ರಮಂ।
03195028c ದದಾಹ ಭರತಶ್ರೇಷ್ಠ ಸರ್ವಲೋಕಾಭಯಾಯ ವೈ।।
ಭರತಶ್ರೇಷ್ಠ! ಆಗ ರಾಜನು ಸರ್ವಲೋಕಭಯವನ್ನು ನಿವಾರಿಸಲು ಬ್ರಹ್ಮಾಸ್ತ್ರದಿಂದ ಆ ಕ್ರೂರಪರಾಕ್ರಮಿ ದೈತ್ಯನನ್ನು ಸುಟ್ಟುಹಾಕಿದನು.
03195029a ಸೋಽಸ್ತ್ರೇಣ ದಗ್ಧ್ವಾ ರಾಜರ್ಷಿಃ ಕುವಲಾಶ್ವೋ ಮಹಾಸುರಂ।
03195029c ಸುರಶತ್ರುಮಮಿತ್ರಘ್ನಸ್ತ್ರಿಲೋಕೇಶ ಇವಾಪರಃ।।
03195029e ಧುಂಧುಮಾರ ಇತಿ ಖ್ಯಾತೋ ನಾಮ್ನಾ ಸಮಭವತ್ತತಃ।।
ಆ ಸುರಶತ್ರು, ಅಮಿತ್ರಘ್ನ, ಇನ್ನೊಬ್ಬ ತ್ರಿಲೋಕೇಶನಂತಿರುವ ಮಹಾಸುರನನ್ನು ಅಸ್ತ್ರದಿಂದ ಸುಟ್ಟಿದುದರಿಂದ ರಾಜರ್ಷಿ ಕುವಲಾಶ್ವನು ಧುಂಧುಮಾರ ಎಂಬ ಹೆಸರಿನಿಂದ ಖ್ಯಾತನಾದನು.
03195030a ಪ್ರೀತೈಶ್ಚ ತ್ರಿದಶೈಃ ಸರ್ವೈರ್ಮಹರ್ಷಿಸಹಿತೈಸ್ತದಾ।
03195030c ವರಂ ವೃಣೀಷ್ವೇತ್ಯುಕ್ತಃ ಸ ಪ್ರಾಂಜಲಿಃ ಪ್ರಣತಸ್ತದಾ।।
03195030e ಅತೀವ ಮುದಿತೋ ರಾಜನ್ನಿದಂ ವಚನಮಬ್ರವೀತ್।।
ಮುದಿತರಾಗಿ ಸರ್ವ ಮಹರ್ಷಿಗಳ ಸಹಿತ ತ್ರಿದಶರು ಅವನಿಗೆ ವರವನ್ನು ಕೇಳಿಕೋ ಎಂದು ಹೇಳಿದರು. ಆಗ ಅತೀವ ಮುದಿತನಾದ ರಾಜನು ಅಂಜಲೀಬದ್ದನಾಗಿ ಹೇಳಿದನು:
03195031a ದದ್ಯಾಂ ವಿತ್ತಂ ದ್ವಿಜಾಗ್ರ್ಯೇಭ್ಯಃ ಶತ್ರೂಣಾಂ ಚಾಪಿ ದುರ್ಜಯಃ।
03195031c ಸಖ್ಯಂ ಚ ವಿಷ್ಣುನಾ ಮೇ ಸ್ಯಾದ್ಭೂತೇಷ್ವದ್ರೋಹ ಏವ ಚ।।
03195031e ಧರ್ಮೇ ರತಿಶ್ಚ ಸತತಂ ಸ್ವರ್ಗೇ ವಾಸಸ್ತಥಾಕ್ಷಯಃ।।
“ನಾನು ದ್ವಿಜಾಗ್ರರಿಗೆ ವಿತ್ತವನ್ನು ಕೊಡುವಂಥವನಾಗಲಿ, ಶತ್ರುಗಳಿಗೆ ದುರ್ಜಯನಾಗಲಿ, ವಿಷ್ಣುವಿನೊಂದಿಗೆ ನನ್ನ ಸಖ್ಯವು ಇರಲಿ, ಭೂತಗಳಿಗೆ ಏನೂ ದ್ರೋಹವನ್ನೆಸಗದೇ ಇರಲಿ. ಸತತವೂ ಧರ್ಮದಲ್ಲಿ ಸಂತೋಷಹೊಂದುವವನಾಗಲಿ, ಮತ್ತು ಸ್ವರ್ಗವಾಸವು ಅಕ್ಷಯವಾಗಲಿ.”
03195032a ತಥಾಸ್ತ್ವಿತಿ ತತೋ ದೇವೈಃ ಪ್ರೀತೈರುಕ್ತಃ ಸ ಪಾರ್ಥಿವಃ।
03195032c ಋಷಿಭಿಶ್ಚ ಸಗಂಧರ್ವೈರುತ್ತಂಕೇನ ಚ ಧೀಮತಾ।।
“ಹಾಗೆಯೇ ಆಗಲಿ” ಎಂದು ದೇವತೆಗಳು, ಋಷಿಗಳು, ಗಂಧರ್ವರು ಮತ್ತು ಧೀಮತ ಉತ್ತಂಕನೂ ಸೇರಿ, ಪ್ರೀತಿಯಿಂದ ರಾಜನಿಗೆ ಉತ್ತರಿಸಿದರು.
03195033a ಸಭಾಜ್ಯ ಚೈನಂ ವಿವಿಧೈರಾಶೀರ್ವಾದೈಸ್ತತೋ ನೃಪಂ।
03195033c ದೇವಾ ಮಹರ್ಷಯಶ್ಚೈವ ಸ್ವಾನಿ ಸ್ಥಾನಾನಿ ಭೇಜಿರೇ।।
ರಾಜನಿಗೆ ವಿವಿಧ ಆಶೀರ್ವಾದಗಳನ್ನಿತ್ತು ದೇವತೆಗಳೂ ಮಹರ್ಷಿಗಳೂ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು.
03195034a ತಸ್ಯ ಪುತ್ರಾಸ್ತ್ರಯಃ ಶಿಷ್ಟಾ ಯುಧಿಷ್ಠಿರ ತದಾಭವನ್।
03195034c ದೃಢಾಶ್ವಃ ಕಪಿಲಾಶ್ವಶ್ಚ ಚಂದ್ರಾಶ್ವಶ್ಚೈವ ಭಾರತ।।
03195034e ತೇಭ್ಯಃ ಪರಂಪರಾ ರಾಜನ್ನಿಕ್ಷ್ವಾಕೂಣಾಂ ಮಹಾತ್ಮನಾಂ।।
ಯುಧಿಷ್ಠಿರ! ಭಾರತ! ರಾಜನ್! ಅವನಿಗೆ ಮೂವರು ಶಿಷ್ಠರಾದ ಪುತ್ರರಾದರು - ದೃಢಾಶ್ವ, ಕಪಿಲಾಶ್ವ ಮತ್ತು ಚಂದ್ರಾಶ್ವ. ಅವರಿಂದ ಮಹಾತ್ಮ ಇಕ್ಷ್ವಾಕುಗಳ ಪರಂಪರೆಯು ಮುಂದುವರೆಯಿತು.
03195035a ಏವಂ ಸ ನಿಹತಸ್ತೇನ ಕುವಲಾಶ್ವೇನ ಸತ್ತಮ।
03195035c ಧುಂಧುರ್ದೈತ್ಯೋ ಮಹಾವೀರ್ಯೋ ಮಧುಕೈಟಭಯೋಃ ಸುತಃ।।
ಹೀಗೆ ಆ ಮಧು-ಕೈಟಭರ ಮಗ ಮಹಾವೀರ್ಯ ದೈತ್ಯ ಧುಂಧುವು ಸತ್ತಮ ಕುವಲಾಶ್ವನಿಂದ ಹತನಾದನು.
03195036a ಕುವಲಾಶ್ವಸ್ತು ನೃಪತಿರ್ಧುಂಧುಮಾರ ಇತಿ ಸ್ಮೃತಃ।
03195036c ನಾಮ್ನಾ ಚ ಗುಣಸಮ್ಯುಕ್ತಸ್ತದಾ ಪ್ರಭೃತಿ ಸೋಽಭವತ್।।
ಅಂದಿನಿಂದ ಗುಣಸಂಯುಕ್ತ ನೃಪತಿ ಕುವಲಾಶ್ವನಾದರೋ ಧುಂಧುಮಾರನೆಂಬ ಹೆಸರಿನಿಂದ ಪ್ರಸಿದ್ಧನಾದನು.
03195037a ಏತತ್ತೇ ಸರ್ವಮಾಖ್ಯಾತಂ ಯನ್ಮಾಂ ತ್ವಂ ಪರಿಪೃಚ್ಚಸಿ।
03195037c ಧೌಂಧುಮಾರಮುಪಾಖ್ಯಾನಂ ಪ್ರಥಿತಂ ಯಸ್ಯ ಕರ್ಮಣಾ।।
ಹೀಗೆ ನೀನು ಕೇಳಿದ ಯಾರ ಕರ್ಮದಿಂದ ಪ್ರಥಿತವಾಗಿದೆಯೋ ಆ ಧುಂಧುಮಾರನ ಉಪಾಖ್ಯಾನವನ್ನು ನಿನಗೆ ಹೇಳಿದ್ದೇನೆ.
03195038a ಇದಂ ತು ಪುಣ್ಯಮಾಖ್ಯಾನಂ ವಿಷ್ಣೋಃ ಸಮನುಕೀರ್ತನಂ।
03195038c ಶೃಣುಯಾದ್ಯಃ ಸ ಧರ್ಮಾತ್ಮಾ ಪುತ್ರವಾಂಶ್ಚ ಭವೇನ್ನರಃ।।
ಯಾರು, ವಿಷ್ಣುವಿನ ಕೀರ್ತನೆಯಿರುವ, ಈ ಪುಣ್ಯಕಥೆಯನ್ನು ಕೇಳುತ್ತಾರೋ ಆ ನರನು ಧರ್ಮಾತ್ಮನೂ ಪುತ್ರವಂತನೂ ಆಗುತ್ತಾನೆ.
03195039a ಆಯುಷ್ಮಾನ್ಧೃತಿಮಾಂಶ್ಚೈವ ಶ್ರುತ್ವಾ ಭವತಿ ಪರ್ವಸು।
03195039c ನ ಚ ವ್ಯಾಧಿಭಯಂ ಕಿಂ ಚಿತ್ಪ್ರಾಪ್ನೋತಿ ವಿಗತಜ್ವರಃ।।
ಪರ್ವಗಳಲ್ಲಿ ಕೇಳುವವನು ಧೃತಿವಂತನೂ ಆಯುಷ್ಮಂತನೂ ಆಗುತ್ತಾನೆ. ವ್ಯಾಧಿಭಯ ಯಾವುದನ್ನೂ ಹೊಂದದೇ ವಿಗತಜ್ವರನಾಗುತ್ತಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಧುಂಧುಮಾರೋಪಾಖ್ಯಾನೇ ಪಂಚನವತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಧುಂಧುಮಾರೋಪಾಖ್ಯಾನದಲ್ಲಿ ನೂರಾತೊಂಭತ್ತೈದನೆಯ ಅಧ್ಯಾಯವು.