ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 193
ಸಾರ
ಇಕ್ಷ್ವಾಕು ವಂಶಾವಳಿ - ಇಕ್ಷ್ವಾಕು, ಶಶಾದ, ಕಕುತ್ಸ್ಥ, ಅನೇನ, ಪೃಥು, ವಿಶ್ವಗಶ್ವ, ಆದ್ರ, ಯುವನಾಶ್ವ, ಶ್ರಾವಸ್ತ, ಬೃಹದಶ್ವ ಮತ್ತು ಕುವಲಾಶ್ವ (1-4). ಬೃಹದಶ್ವನು ಕುವಲಾಶ್ವನಿಗೆ ರಾಜ್ಯವನ್ನಿತ್ತು ವನಕ್ಕೆ ತೆರಳುವಾಗ ಉತ್ತಂಕನು ಮರುಭೂಮಿಯಲ್ಲಿ ತಪಸ್ಸನ್ನಾಚರಿಸುತ್ತಿರುವ ಮಧು-ಕೈಟಭರ ಮಗ ಧುಂಧುವನ್ನು ವಧಿಸಿ ಹೋಗಬೇಕೆಂದು ತಡೆದುದು (5-27).
03193001 ಮಾರ್ಕಂಡೇಯ ಉವಾಚ।
03193001a ಇಕ್ಷ್ವಾಕೌ ಸಂಸ್ಥಿತೇ ರಾಜಂ ಶಶಾದಃ ಪೃಥಿವೀಮಿಮಾಂ।
03193001c ಪ್ರಾಪ್ತಃ ಪರಮಧರ್ಮಾತ್ಮಾ ಸೋಽಯೋಧ್ಯಾಯಾಂ ನೃಪೋಽಭವತ್।।
ಮಾರ್ಕಂಡೇಯನು ಹೇಳಿದನು: “ರಾಜನ್! ಇಕ್ಷ್ವಾಕುವಿನ ಮರಣದ ನಂತರ ಶಶಾದನು ಈ ಪೃಥ್ವಿಯನ್ನು ಪಡೆದನು ಮತ್ತು ಪರಮಧರ್ಮಾತ್ಮನಾಗಿ ಅಯೋಧ್ಯೆಯ ನೃಪನಾದನು.
03193002a ಶಶಾದಸ್ಯ ತು ದಾಯಾದಃ ಕಕುತ್ಸ್ಥೋ ನಾಮ ವೀರ್ಯವಾನ್।
03193002c ಅನೇನಾಶ್ಚಾಪಿ ಕಾಕುತ್ಸ್ಥಃ ಪೃಥುಶ್ಚಾನೇನಸಃ ಸುತಃ।।
ವೀರ್ಯವಾನ್ ಕಕುಸ್ಥ ಎಂಬ ಹೆಸರಿನವನು ಶಶಾದನ ಮಗನು. ಅನೇನನು ಕಕುಸ್ಥನ ಮಗ ಮತ್ತು ಪೃಥುವು ಅನೇನನ ಮಗ.
03193003a ವಿಷ್ವಗಶ್ವಃ ಪೃಥೋಃ ಪುತ್ರಸ್ತಸ್ಮಾದಾರ್ದ್ರಸ್ತು ಜಜ್ಞಿವಾನ್।
03193003c ಆರ್ದ್ರಸ್ಯ ಯುವನಾಶ್ವಸ್ತು ಶ್ರಾವಸ್ತಸ್ತಸ್ಯ ಚಾತ್ಮಜಃ।।
ವಿಶ್ವಗಶ್ವನು ಪೃಥುವಿನ ಮಗ. ಅವನಲ್ಲಿ ಆದ್ರನು ಜನಿಸಿದನು. ಆದ್ರನ ಮಗ ಯುವನಾಶ್ವ. ಅವನ ಮಗ ಶ್ರಾವಸ್ತ.
03193004a ಜಜ್ಞೇ ಶ್ರಾವಸ್ತಕೋ ರಾಜಾ ಶ್ರಾವಸ್ತೀ ಯೇನ ನಿರ್ಮಿತಾ।
03193004c ಶ್ರಾವಸ್ತಸ್ಯ ತು ದಾಯಾದೋ ಬೃಹದಶ್ವೋ ಮಹಾಬಲಃ।।
03193004e ಬೃಹದಶ್ವಸುತಶ್ಚಾಪಿ ಕುವಲಾಶ್ವ ಇತಿ ಸ್ಮೃತಃ।।
ರಾಜ ಶ್ರಾವಸ್ತನು ಶ್ರಾವಸ್ತಿಯನ್ನು ನಿರ್ಮಿಸಿದನು. ಶ್ರಾವಸ್ತನ ಮಗ ಮಹಾಬಲಿ ಬೃಹದಶ್ವ. ಬೃಹದಶ್ವನ ಮಗ ಕುವಲನೆಂದು ಖ್ಯಾತನಾದನು.
03193005a ಕುವಲಾಶ್ವಸ್ಯ ಪುತ್ರಾಣಾಂ ಸಹಸ್ರಾಣ್ಯೇಕವಿಂಶತಿಃ।
03193005c ಸರ್ವೇ ವಿದ್ಯಾಸು ನಿಷ್ಣಾತಾ ಬಲವಂತೋ ದುರಾಸದಾಃ।।
ಕುವಲಾಶ್ವನಿಗೆ ಇಪ್ಪತ್ತೊಂದು ಸಾವಿರ ಪುತ್ರರು. ಎಲ್ಲರೂ ವಿದ್ಯಾಪ್ರವೀಣರು, ಬಲಬಂತರು, ಮತ್ತು ದುರಾಸದರು.
03193006a ಕುವಲಾಶ್ವಸ್ತು ಪಿತೃತೋ ಗುಣೈರಭ್ಯಧಿಕೋಽಭವತ್।
03193006c ಸಮಯೇ ತಂ ತತೋ ರಾಜ್ಯೇ ಬೃಹದಶ್ವೋಽಭ್ಯಷೇಚಯತ್।।
03193006e ಕುವಲಾಶ್ವಂ ಮಹಾರಾಜ ಶೂರಮುತ್ತಮಧಾರ್ಮಿಕಂ।।
ಮಹಾರಾಜ! ಕುವಲಾಶ್ವನು ಗುಣಗಳಲ್ಲಿ ತಂದೆಗಿಂತ ಅಧಿಕನಾಗಿದ್ದನು. ಸಮಯವು ಬಂದಾಗ ಬೃಹದಶ್ವನು ಶೂರನೂ ಉತ್ತಮ ಧಾರ್ಮಿಕನೂ ಆದ ಕುವಲಾಶ್ವನನ್ನು ರಾಜನನ್ನಾಗಿ ಅಭಿಷೇಕಿಸಿದನು.
03193007a ಪುತ್ರಸಂಕ್ರಾಮಿತಶ್ರೀಸ್ತು ಬೃಹದಶ್ವೋ ಮಹೀಪತಿಃ।
03193007c ಜಗಾಮ ತಪಸೇ ಧೀಮಾಂಸ್ತಪೋವನಮಮಿತ್ರಹಾ।।
ಆ ಅಮಿತ್ರಹ ಮಹೀಪತಿ ಧೀಮಂತ ಬೃಹದಾಶ್ವನು ಪುತ್ರನಿಗೆ ಸಂಪತ್ತನ್ನು ಕೊಟ್ಟು ತಪೋವನಕ್ಕೆ ತಪಸ್ಸಿಗೆ ಹೊರಟನು.
03193008a ಅಥ ಶುಶ್ರಾವ ರಾಜರ್ಷಿಂ ತಮುತ್ತಂಕೋ ಯುಧಿಷ್ಠಿರ।
03193008c ವನಂ ಸಂಪ್ರಸ್ಥಿತಂ ರಾಜನ್ಬೃಹದಶ್ವಂ ದ್ವಿಜೋತ್ತಮಃ।।
ರಾಜನ್! ಯುಧಿಷ್ಠಿರ! ದ್ವಿಜೋತ್ತಮ ಉತ್ತಂಕನು ರಾಜರ್ಷಿ ಬೃಹದಶ್ವನು ವನಕ್ಕೆ ಹೋಗುತ್ತಿದ್ದಾನೆಂದು ಕೇಳಿದನು.
03193009a ತಮುತ್ತಂಕೋ ಮಹಾತೇಜಾಃ ಸರ್ವಾಸ್ತ್ರವಿದುಷಾಂ ವರಂ।
03193009c ನ್ಯವಾರಯದಮೇಯಾತ್ಮಾ ಸಮಾಸಾದ್ಯ ನರೋತ್ತಮಂ।।
ಆಗ ಮಹಾತೇಜ ಅಮೇಯಾತ್ಮ ಉತ್ತಂಕನು ಸರ್ವ ಅಸ್ತ್ರವಿದುಷರಲ್ಲಿ ಶ್ರೇಷ್ಠನಾದ ನರೋತ್ತಮನ ಬಳಿಸಾರಿ ತಡೆದನು.
03193010 ಉತ್ತಂಕ ಉವಾಚ।
03193010a ಭವತಾ ರಕ್ಷಣಂ ಕಾರ್ಯಂ ತತ್ತಾವತ್ಕರ್ತುಮರ್ಹಸಿ।
03193010c ನಿರುದ್ವಿಗ್ನಾ ವಯಂ ರಾಜಂಸ್ತ್ವತ್ಪ್ರಸಾದಾದ್ವಸೇಮಹಿ।।
ಉತ್ತಂಕನು ಹೇಳಿದನು: “ರಾಜನ್! ರಕ್ಷಣೆಯು ನಿನ್ನ ಕಾರ್ಯ. ಆದುದರಿಂದ ನೀನು ಅದನ್ನು ಮಾಡಬೇಕು. ನಿನ್ನ ಪ್ರಸಾದದಿಂದ ನಾವು ನಿರುದ್ವಿಗ್ನರಾಗಿರುತ್ತೇವೆ.
03193011a ತ್ವಯಾ ಹಿ ಪೃಥಿವೀ ರಾಜನ್ರಕ್ಷ್ಯಮಾಣಾ ಮಹಾತ್ಮನಾ।
03193011c ಭವಿಷ್ಯತಿ ನಿರುದ್ವಿಗ್ನಾ ನಾರಣ್ಯಂ ಗಂತುಮರ್ಹಸಿ।।
ರಾಜನ್! ಮಹಾತ್ಮನಾದ ನಿನ್ನಿಂದ ರಕ್ಷಿಸಲ್ಪಟ್ಟ ಈ ಭೂಮಿಯು ನಿರುದ್ವಿಗ್ನವಾಗಿರುತ್ತದೆ. ನೀನು ಅರಣ್ಯಕ್ಕೆ ಹೋಗಬಾರದು.
03193012a ಪಾಲನೇ ಹಿ ಮಹಾನ್ಧರ್ಮಃ ಪ್ರಜಾನಾಮಿಹ ದೃಶ್ಯತೇ।
03193012c ನ ತಥಾ ದೃಶ್ಯತೇಽರಣ್ಯೇ ಮಾ ತೇ ಭೂದ್ಬುದ್ಧಿರೀದೃಶೀ।।
ಇಲ್ಲಿ ಪ್ರಜೆಗಳ ಪಾಲನೆಯೇ ಮಹಾ ಧರ್ಮವೆಂದು ತೋರುತ್ತದೆ. ಅರಣ್ಯದಲ್ಲಿ ಇದು ಹೀಗೆಯೇ ಇರುವುದಿಲ್ಲ. ಆದುದರಿಂದ ನಿನ್ನ ಈ ನಿಶ್ಚಯವನ್ನು ಬಿಟ್ಟುಬಿಡು.
03193013a ಈದೃಶೋ ನ ಹಿ ರಾಜೇಂದ್ರ ಧರ್ಮಃ ಕ್ವ ಚನ ದೃಶ್ಯತೇ।
03193013c ಪ್ರಜಾನಾಂ ಪಾಲನೇ ಯೋ ವೈ ಪುರಾ ರಾಜರ್ಷಿಭಿಃ ಕೃತಃ।।
03193013e ರಕ್ಷಿತವ್ಯಾಃ ಪ್ರಜಾ ರಾಜ್ಞಾ ತಾಸ್ತ್ವಂ ರಕ್ಷಿತುಮರ್ಹಸಿ।।
ರಾಜೇಂದ್ರ! ರಾಜರ್ಷಿಗಳು ಹಿಂದಿನಿಂದ ಮಾಡಿಕೊಂಡು ಬಂದಿರುವ ಪ್ರಜಾಪಾಲನೆಗಿಂತ ಹೆಚ್ಚಿನದಾದ ಧರ್ಮವು ಬೇರೆ ಎಲ್ಲಿಯೂ ಇಲ್ಲ. ರಾಜನಿಂದ ರಕ್ಷಿಸಲ್ಪಡಬೇಕಾದ ಪ್ರಜೆಗಳ ರಕ್ಷಣೆಯನ್ನು ನೀನು ಮಾಡಬೇಕು.
03193014a ನಿರುದ್ವಿಗ್ನಸ್ತಪಶ್ಚರ್ತುಂ ನ ಹಿ ಶಕ್ನೋಮಿ ಪಾರ್ಥಿವ।
03193014c ಮಮಾಶ್ರಮಸಮೀಪೇ ವೈ ಸಮೇಷು ಮರುಧನ್ವಸು।।
03193015a ಸಮುದ್ರೋ ವಾಲುಕಾಪೂರ್ಣ ಉಜ್ಜಾನಕ ಇತಿ ಸ್ಮೃತಃ।
03193015c ಬಹುಯೋಜನವಿಸ್ತೀರ್ಣೋ ಬಹುಯೋಜನಮಾಯತಃ।।
ಪಾರ್ಥಿವ! ನಾನು ನಿರುದ್ವಿಗ್ನನಾಗಿ ತಪಸ್ಸನ್ನು ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಆಶ್ರಮದ ಸಮೀಪದಲ್ಲಿ ಮರುಭೂಮಿಯ ಸಮಭೂಮಿಯಲ್ಲಿ ಉಜ್ಜನಕ ಎಂದು ಹೇಳಿಕೊಂಡು ಬಂದಿರುವ, ಬಹುಯೋಜನ ವಿಸ್ತೀರ್ಣದ ಬಹುಯೋಜನ ವಿಶಾಲವಾದ ಮರಳಿನ ರಾಶಿಯಿದೆ.
03193016a ತತ್ರ ರೌದ್ರೋ ದಾನವೇಂದ್ರೋ ಮಹಾವೀರ್ಯಪರಾಕ್ರಮಃ।
03193016c ಮಧುಕೈಟಭಯೋಃ ಪುತ್ರೋ ಧುಂಧುರ್ನಾಮ ಸುದಾರುಣಃ।।
ಅಲ್ಲಿ ಮಧು-ಕೈಟಭರ ಪುತ್ರ ಧುಂಧು ಎಂಬ ಹೆಸರಿನ ಸುದಾರುಣ, ರೌದ್ರ, ಮಹಾವೀರ್ಯಪರಾಕ್ರಮಿ ದಾನವೇಂದ್ರನಿದ್ದಾನೆ.
03193017a ಅಂತರ್ಭೂಮಿಗತೋ ರಾಜನ್ವಸತ್ಯಮಿತವಿಕ್ರಮಃ।
03193017c ತಂ ನಿಹತ್ಯ ಮಹಾರಾಜ ವನಂ ತ್ವಂ ಗಂತುಮರ್ಹಸಿ।।
ರಾಜನ್! ಆ ಅಮಿತವಿಕ್ರಮನು ಭೂಮಿಯು ಆಳದಲ್ಲಿ ವಾಸಿಸುತ್ತಾನೆ. ಮಹಾರಾಜ! ಅವನನ್ನು ಕೊಂದು ನೀನು ವನಕ್ಕೆ ಹೋಗಬೇಕು.
03193018a ಶೇತೇ ಲೋಕವಿನಾಶಾಯ ತಪ ಆಸ್ಥಾಯ ದಾರುಣಂ।
03193018c ತ್ರಿದಶಾನಾಂ ವಿನಾಶಾಯ ಲೋಕಾನಾಂ ಚಾಪಿ ಪಾರ್ಥಿವ।।
ಪಾರ್ಥಿವ! ತ್ರಿದಶರ ಮತ್ತು ಲೋಕಗಳ ವಿನಾಶಕ್ಕಾಗಿ ದಾರುಣವಾದ ತಪಸ್ಸನ್ನಾಚರಿಸುತ್ತಿದ್ದಾನೆ.
03193019a ಅವಧ್ಯೋ ದೇವತಾನಾಂ ಸ ದೈತ್ಯಾನಾಮಥ ರಕ್ಷಸಾಂ।
03193019c ನಾಗಾನಾಮಥ ಯಕ್ಷಾಣಾಂ ಗಂಧರ್ವಾಣಾಂ ಚ ಸರ್ವಶಃ।।
03193019e ಅವಾಪ್ಯ ಸ ವರಂ ರಾಜನ್ಸರ್ವಲೋಕಪಿತಾಮಹಾತ್।।
ಅವನು ದೇವತೆಗಳಿಗಾಗಲೀ, ದೈತ್ಯರಾಕ್ಷಸರಿಗಾಗಲೀ, ನಾಗಗಳಿಗಾಗಲೀ, ಯಕ್ಷರಿಗಾಗಲೀ, ಗಂಧರ್ವರಿಗಾಗಲೀ, ಎಲ್ಲರಿಗೂ ಅವಧ್ಯ. ರಾಜನ್! ಆ ವರವನ್ನು ಅವನು ಸರ್ವಲೋಕ ಪಿತಾಮಹನಿಂದ ಪಡೆದಿದ್ದಾನೆ.
03193020a ತಂ ವಿನಾಶಯ ಭದ್ರಂ ತೇ ಮಾ ತೇ ಬುದ್ಧಿರತೋಽನ್ಯಥಾ।
03193020c ಪ್ರಾಪ್ಸ್ಯಸೇ ಮಹತೀಂ ಕೀರ್ತಿಂ ಶಾಶ್ವತೀಮವ್ಯಯಾಂ ಧ್ರುವಾಂ।।
ನಿನಗೆ ಮಂಗಳವಾಗಲಿ! ಅವನನ್ನು ನಾಶಪಡಿಸು. ಬೇರೆ ಯಾವ ನಿಶ್ಚಯವನ್ನೂ ತೆಗೆದುಕೊಳ್ಳಬೇಡ! ಮಹತ್ತರವಾದ, ಶಾಶ್ವತವಾದ, ಅವ್ಯಯವಾದ, ನಿಶ್ಚಯವಾದ ಕೀರ್ತಿಯನ್ನು ಹೊಂದುತ್ತೀಯೆ.
03193021a ಕ್ರೂರಸ್ಯ ಸ್ವಪತಸ್ತಸ್ಯ ವಾಲುಕಾಂತರ್ಹಿತಸ್ಯ ವೈ।
03193021c ಸಂವತ್ಸರಸ್ಯ ಪರ್ಯಂತೇ ನಿಃಶ್ವಾಸಃ ಸಂಪ್ರವರ್ತತೇ।।
03193021e ಯದಾ ತದಾ ಭೂಶ್ಚಲತಿ ಸಶೈಲವನಕಾನನಾ।।
ಒಂದುವರ್ಷದ ನಂತರ ಮರಳಿನ ಅಡಿಯಲ್ಲಿ ವಾಸಿಸುವ ಆ ಕ್ರೂರನು ನಿಟ್ಟುಸಿರು ಬಿಟ್ಟಾಗ ಇಡೀ ಭೂಮಿಯು, ಗಿರಿ, ವನ ಕಾನನಗಳೊಂದಿಗೆ ನಡುಗುತ್ತದೆ.
03193022a ತಸ್ಯ ನಿಃಶ್ವಾಸವಾತೇನ ರಜ ಉದ್ಧೂಯತೇ ಮಹತ್।
03193022c ಆದಿತ್ಯಪಥಮಾವೃತ್ಯ ಸಪ್ತಾಹಂ ಭೂಮಿಕಂಪನಂ।।
03193022e ಸವಿಸ್ಫುಲಿಂಗಂ ಸಜ್ವಾಲಂ ಸಧೂಮಂ ಹ್ಯತಿದಾರುಣಂ।।
ಅವನ ನಿಶ್ವಾಸದೊಂದಿಗೆ ಧೂಳಿನ ಮಹಾ ಭಿರುಗಾಳಿಯೇ ಎದ್ದು ಸೂರ್ಯನ ದಾರಿಯನ್ನು ಮುಸುಕುಹಾಕುತ್ತದೆ. ಕಿಡಿಗಳಿಂದ ಜ್ವಾಲೆಗಳಿಂದ ಮತ್ತು ಹೊಗೆಯಿಂದ ಕೂಡಿದ ಆ ಅತಿದಾರುಣ ಭೂಕಂಪನವು ಏಳುದಿನವಿರುತ್ತದೆ.
03193023a ತೇನ ರಾಜನ್ನ ಶಕ್ನೋಮಿ ತಸ್ಮಿನ್ಸ್ಥಾತುಂ ಸ್ವ ಆಶ್ರಮೇ।
03193023c ತಂ ವಿನಾಶಯ ರಾಜೇಂದ್ರ ಲೋಕಾನಾಂ ಹಿತಕಾಮ್ಯಯಾ।।
03193023e ಲೋಕಾಃ ಸ್ವಸ್ಥಾ ಭವಂತ್ವದ್ಯ ತಸ್ಮಿನ್ವಿನಿಹತೇಽಸುರೇ।।
ರಾಜನ್! ಇದೇ ಕಾರಣದಿಂದ ನನ್ನ ಆ ಆಶ್ರಮದಲ್ಲಿ ನಾನೇ ನಿಲ್ಲಲು ಸಾಧ್ಯವಾಗುತ್ತಿಲ್ಲ. ರಾಜೇಂದ್ರ! ಲೋಕಗಳ ಹಿತವನ್ನು ಬಯಸಿ ಅವನನ್ನು ನಾಶಪಡಿಸು. ಆ ಅಸುರನನ್ನು ನೀನು ಇಂದು ಸಂಹರಿಸಿ ಲೋಕಗಳು ಸ್ವಾಸ್ಥ್ಯದಿಂದಿರಲಿ.
03193024a ತ್ವಂ ಹಿ ತಸ್ಯ ವಿನಾಶಾಯ ಪರ್ಯಾಪ್ತ ಇತಿ ಮೇ ಮತಿಃ।
03193024c ತೇಜಸಾ ತವ ತೇಜಶ್ಚ ವಿಷ್ಣುರಾಪ್ಯಾಯಯಿಷ್ಯತಿ।।
ಅವನ ವಿನಾಶಕ್ಕೆ ನೀನೇ ಪರ್ಯಾಪ್ತನೆಂದು ನನ್ನ ಮತ. ವಿಷ್ಣುವೂ ಕೂಡ ತನ್ನ ತೇಜಸ್ಸಿನಿಂದ ನಿನ್ನ ತೇಜಸ್ಸನ್ನು ವೃದ್ಧಿಸುತ್ತಾನೆ.
03193025a ವಿಷ್ಣುನಾ ಚ ವರೋ ದತ್ತೋ ಮಮ ಪೂರ್ವಂ ತತೋ ವಧೇ।
03193025c ಯಸ್ತಂ ಮಹಾಸುರಂ ರೌದ್ರಂ ವಧಿಷ್ಯತಿ ಮಹೀಪತಿಃ।।
03193025e ತೇಜಸ್ತಂ ವೈಷ್ಣವಮಿತಿ ಪ್ರವೇಕ್ಷ್ಯತಿ ದುರಾಸದಂ।।
ಹಿಂದೆ ವಿಷ್ಣುವು ನನಗೆ ವರವನ್ನಿತ್ತಿದ್ದನು: “ಯಾವ ರಾಜನು ಆ ರೌದ್ರ ಮಹಾ ಅಸುರನನ್ನು ವಧಿಸುತ್ತಾನೋ ಅವನನ್ನು ವಿಷ್ಣುವಿನ ದುರಾಸದ ತೇಜಸ್ಸು ಪ್ರವೇಶಿಸುತ್ತದೆ.”
03193026a ತತ್ತೇಜಸ್ತ್ವಂ ಸಮಾಧಾಯ ರಾಜೇಂದ್ರ ಭುವಿ ದುಃಸ್ಸಹಂ।
03193026c ತಂ ನಿಷೂದಯ ಸಂದುಷ್ಟಂ ದೈತ್ಯಂ ರೌದ್ರಪರಾಕ್ರಮಂ।।
ರಾಜೇಂದ್ರ! ಭೂಮಿಯಲ್ಲಿ ದುಃಸ್ಸಹವಾದ ಆ ತೇಜಸ್ಸನ್ನು ನೀನು ಪಡೆ. ರೌದ್ರ ಪರಾಕ್ರಮಿ ಆ ದುಷ್ಟ ದೈತ್ಯನನ್ನು ಸಂಹರಿಸು.
03193027a ನ ಹಿ ಧುಂಧುರ್ಮಹಾತೇಜಾಸ್ತೇಜಸಾಲ್ಪೇನ ಶಕ್ಯತೇ।
03193027c ನಿರ್ದಗ್ಧುಂ ಪೃಥಿವೀಪಾಲ ಸ ಹಿ ವರ್ಷಶತೈರಪಿ।।
ಪೃಥಿವೀಪಾಲ! ಧುಂಧುವಿನ ಮಹಾತೇಜಸ್ಸನ್ನು ಅಲ್ಪತೇಜಸ್ಸಿನಿಂದ ಸುಟ್ಟುಹಾಕಲು ನೂರುವರ್ಷಗಳವರೆಗಾದರೂ ಸಾಧ್ಯವಿಲ್ಲ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಧುಂಧುಮಾರೋಪಾಖ್ಯಾನೇ ತ್ರಿನವತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಧುಂಧುಮಾರೋಪಾಖ್ಯಾನದಲ್ಲಿ ನೂರಾತೊಂಭತ್ಮೂರನೆಯ ಅಧ್ಯಾಯವು.