189 ಯುಧಿಷ್ಠಿರಾನುಶಾಸನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 189

ಸಾರ

ಕಲ್ಕಿಯಿಂದ ಕೃತಯುಗದ ಪ್ರಾರಂಭ (1-16). ಆತ್ಮವನ್ನು ಧರ್ಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಮಾರ್ಕಂಡೇಯನು ಯುಧಿಷ್ಠಿರನಿಗೆ ಉಪದೇಶಿಸುವುದು (17-31).

03189001 ಮಾರ್ಕಂಡೇಯ ಉವಾಚ।
03189001a ತತಶ್ಚೋರಕ್ಷಯಂ ಕೃತ್ವಾ ದ್ವಿಜೇಭ್ಯಃ ಪೃಥಿವೀಮಿಮಾಂ।
03189001c ವಾಜಿಮೇಧೇ ಮಹಾಯಜ್ಞೇ ವಿಧಿವತ್ಕಲ್ಪಯಿಷ್ಯತಿ।।

ಮಾರ್ಕಂಡೇಯನು ಹೇಳಿದನು: “ಚೋರರನ್ನು ನಾಶಮಾಡಿ ಅವನು ಮಹಾಯಜ್ಞ ಅಶ್ವಮೇಧದಲ್ಲಿ ವಿಧಿವತ್ತಾಗಿ ಈ ಭೂಮಿಯನ್ನು ದ್ವಿಜರಿಗೆ ಒಪ್ಪಿಸುತ್ತಾನೆ.

03189002a ಸ್ಥಾಪಯಿತ್ವಾ ಸ ಮರ್ಯಾದಾಃ ಸ್ವಯಂಭುವಿಹಿತಾಃ ಶುಭಾಃ।
03189002c ವನಂ ಪುಣ್ಯಯಶಃಕರ್ಮಾ ಜರಾವಾನ್ಸಂಶ್ರಯಿಷ್ಯತಿ।।

ಅವನು ಸ್ವಯಂಭುವಿನಿಂದ ವಿಹಿತವಾದ ಮರ್ಯಾದೆಗಳನ್ನು ಪುನಃ ಸ್ಥಾಪನೆಮಾಡಿ ಪುಣ್ಯಕರವೂ ಯಶಕರವೂ ಆದ ಕರ್ಮಗಳನ್ನು ಮಾಡಿ ವೃದ್ಧಾಪ್ಯದಲ್ಲಿ ವನದಲ್ಲಿ ವಾಸಿಸುತ್ತಾನೆ.

03189003a ತಚ್ಚೀಲಮನುವರ್ತ್ಸ್ಯಂತೇ ಮನುಷ್ಯಾ ಲೋಕವಾಸಿನಃ।
03189003c ವಿಪ್ರೈಶ್ಚೋರಕ್ಷಯೇ ಚೈವ ಕೃತೇ ಕ್ಷೇಮಂ ಭವಿಷ್ಯತಿ।।

ಅವನ ಶೀಲವನ್ನೇ ಲೋಕವಾಸಿಗಳಾದ ಮನುಷ್ಯರು ಅನುಸರಿಸುವರು. ವಿಪ್ರರಿಂದ ಚೋರರು ನಾಶಗೊಳ್ಳಲು ಕೃತಯುಗದಲ್ಲಿ ಕ್ಷೇಮವುಂಟಾಗುತ್ತದೆ.

03189004a ಕೃಷ್ಣಾಜಿನಾನಿ ಶಕ್ತೀಶ್ಚ ತ್ರಿಶೂಲಾನ್ಯಾಯುಧಾನಿ ಚ।
03189004c ಸ್ಥಾಪಯನ್ವಿಪ್ರಶಾರ್ದೂಲೋ ದೇಶೇಷು ವಿಜಿತೇಷು ಚ।।
03189005a ಸಂಸ್ತೂಯಮಾನೋ ವಿಪ್ರೇಂದ್ರೈರ್ಮಾನಯಾನೋ ದ್ವಿಜೋತ್ತಮಾನ್।
03189005c ಕಲ್ಕಿಶ್ಚರಿಷ್ಯತಿ ಮಹೀಂ ಸದಾ ದಸ್ಯುವಧೇ ರತಃ।।

ಆ ವಿಪ್ರಶಾರ್ದೂಲ ಕಲ್ಕಿಯು ಜಯಿಸಿದ ದೇಶಗಳಲ್ಲಿ ಕೃಷ್ಣಾಜಿನ, ಶಕ್ತಿ, ತ್ರಿಶೂಲ ಮತ್ತು ಆಯುಧಗಳನ್ನು ಸ್ಥಾಪಿಸಿ, ಮಾನಿನಿಗಳಾದ ದ್ವಿಜೋತ್ತಮ ವಿಪ್ರೇಂದ್ರರಿಂದ ಸ್ತುತಿಸಲ್ಪಟ್ಟು, ಸದಾ ದಸ್ಯುಗಳ ವಧೆಯಲ್ಲಿ ನಿರತನಾಗಿ ಭೂಮಿಯಲ್ಲಿ ಸಂಚರಿಸುತ್ತಾನೆ.

03189006a ಹಾ ತಾತ ಹಾ ಸುತೇತ್ಯೇವಂ ತಾಸ್ತಾ ವಾಚಃ ಸುದಾರುಣಾಃ।
03189006c ವಿಕ್ರೋಶಮಾನಾನ್ಸುಭೃಶಂ ದಸ್ಯೂನ್ನೇಷ್ಯತಿ ಸಂಕ್ಷಯಂ।।

ಇವನು ದಸ್ಯುಗಳ ನಾಶವನ್ನು ನಡೆಸುತ್ತಿರುವಾಗ ಅವರು ಹಾ ತಂದೇ! ಹಾ ಮಗನೇ! ಎಂದು ದಾರುಣವಾಗಿ ಕೂಗಿ ಕರೆಯುತ್ತಿರುವುದು ಕೇಳಿಬರುತ್ತದೆ.

03189007a ತತೋಽಧರ್ಮವಿನಾಶೋ ವೈ ಧರ್ಮವೃದ್ಧಿಶ್ಚ ಭಾರತ।
03189007c ಭವಿಷ್ಯತಿ ಕೃತೇ ಪ್ರಾಪ್ತೇ ಕ್ರಿಯಾವಾಂಶ್ಚ ಜನಸ್ತಥಾ।।

ಭಾರತ! ಕೃತವು ಪ್ರಾಪ್ತವಾದಾಗ ಅಧರ್ಮವು ವಿನಾಶವಾಗಿ ಧರ್ವವು ವೃದ್ಧಿಯಾಗುತ್ತದೆ. ಆಗ ಜನರು ಕ್ರಿಯಾಶಾಲಿಗಳಾಗುತ್ತಾರೆ.

03189008a ಆರಾಮಾಶ್ಚೈವ ಚೈತ್ಯಾಶ್ಚ ತಟಾಕಾನ್ಯವಟಾಸ್ತಥಾ।
03189008c ಯಜ್ಞಕ್ರಿಯಾಶ್ಚ ವಿವಿಧಾ ಭವಿಷ್ಯಂತಿ ಕೃತೇ ಯುಗೇ।।

ಕೃತಯುಗದಲ್ಲಿ ಉದ್ಯಾನಗಳು, ಚೈತ್ಯಗಳು, ತಟಾಕಗಳು, ಮತ್ತು ವಟಗಳು ಮತ್ತು ವಿವಿಧ ಯಜ್ಞಕ್ರಿಯೆಗಳು ನಡೆಯುತ್ತವೆ.

03189009a ಬ್ರಾಹ್ಮಣಾಃ ಸಾಧವಶ್ಚೈವ ಮುನಯಶ್ಚ ತಪಸ್ವಿನಃ।
03189009c ಆಶ್ರಮಾಃ ಸಹಪಾಷಂಡಾಃ ಸ್ಥಿತಾಃ ಸತ್ಯೇ ಜನಾಃ ಪ್ರಜಾಃ।।

ಬ್ರಾಹ್ಮಣರು ಸಾಧುಗಳಾಗಿರುತ್ತಾರೆ; ಮುನಿಗಳು ತಪಸ್ವಿಗಳಾಗುತ್ತಾರೆ; ಪಾಷಂಡಗಳಾಗಿದ್ದ ಆಶ್ರಮಗಳು ಸತ್ಯದಲ್ಲಿ ನೆಲೆಗೊಳ್ಳುತ್ತವೆ ಮತ್ತು ಜನರು ಪ್ರಜೆಗಳಾಗುತ್ತಾರೆ.

03189010a ಜಾಸ್ಯಂತಿ ಸರ್ವಬೀಜಾನಿ ಉಪ್ಯಮಾನಾನಿ ಚೈವ ಹ।
03189010c ಸರ್ವೇಷ್ವೃತುಷು ರಾಜೇಂದ್ರ ಸರ್ವಂ ಸಸ್ಯಂ ಭವಿಷ್ಯತಿ।।

ರಾಜೇಂದ್ರ! ಬಿತ್ತಿದ ಬೀಜಗಳೆಲ್ಲವೂ ಬೆಳೆಯುತ್ತವೆ ಮತ್ತು ಎಲ್ಲ ಋತುಗಳಲ್ಲಿಯೂ ಬೆಳೆಗಳು ಬೆಳೆಯುತ್ತವೆ.

03189011a ನರಾ ದಾನೇಷು ನಿರತಾ ವ್ರತೇಷು ನಿಯಮೇಷು ಚ।
03189011c ಜಪಯಜ್ಞಪರಾ ವಿಪ್ರಾ ಧರ್ಮಕಾಮಾ ಮುದಾ ಯುತಾಃ।।
03189011e ಪಾಲಯಿಷ್ಯಂತಿ ರಾಜಾನೋ ಧರ್ಮೇಣೇಮಾಂ ವಸುಂಧರಾಂ।।

ನರರು ದಾನಗಳಲ್ಲಿ ವ್ರತಗಳಲ್ಲಿ ನಿಯಮಗಳಲ್ಲಿ ನಿರತರಾಗಿರುತ್ತಾರೆ. ವಿಪ್ರರು ಜಪ-ಯಜ್ಞಪರರಾಗಿ, ಧರ್ಮವನ್ನೇ ಬಯಸಿ ಸಂತೋಷದಿಂದಿರುತ್ತಾರೆ. ರಾಜರು ಈ ವಸುಂಧರೆಯನ್ನು ಧರ್ಮದಿಂದ ಪಾಲಿಸುತ್ತಾರೆ.

03189012a ವ್ಯವಹಾರರತಾ ವೈಶ್ಯಾ ಭವಿಷ್ಯಂತಿ ಕೃತೇ ಯುಗೇ।
03189012c ಷಟ್ಕರ್ಮನಿರತಾ ವಿಪ್ರಾಃ ಕ್ಷತ್ರಿಯಾ ರಕ್ಷಣೇ ರತಾಃ।।
03189013a ಶುಶ್ರೂಷಾಯಾಂ ರತಾಃ ಶೂದ್ರಾಸ್ತಥಾ ವರ್ಣತ್ರಯಸ್ಯ ಚ।

ಕೃತಯುಗದಲ್ಲಿ ವೈಶ್ಯರು ವ್ಯವಹಾರದಲ್ಲಿ ನಿರತರಾಗಿರುತ್ತಾರೆ; ವಿಪ್ರರು ಷಟ್ಕರ್ಮ ನಿರತರಾಗಿರುತ್ತಾರೆ; ಕ್ಷತ್ರಿಯರು ರಕ್ಷಣೆಯಲ್ಲಿ ತೊಡಗಿರುತ್ತಾರೆ ಮತ್ತು ಶೂದ್ರರು ಈ ಮೂರು ವರ್ಣದವರ ಶುಶ್ರೂಷೆಯಲ್ಲಿ ನಿರತರಾಗಿರುತ್ತಾರೆ1.

03189013c ಏಷ ಧರ್ಮಃ ಕೃತಯುಗೇ ತ್ರೇತಾಯಾಂ ದ್ವಾಪರೇ ತಥಾ।।
03189013e ಪಶ್ಚಿಮೇ ಯುಗಕಾಲೇ ಚ ಯಃ ಸ ತೇ ಸಂಪ್ರಕೀರ್ತಿತಃ।।

ನಾನು ವರ್ಣಿಸಿದ ಇದು ಕೃತಯುಗ, ತ್ರೇತ, ಮತ್ತು ದ್ವಾಪರ ಹಾಗೂ ಯುಗದ ಅಂತ್ಯಕಾಲಗಳ ಧರ್ಮ.

03189014a ಸರ್ವಲೋಕಸ್ಯ ವಿದಿತಾ ಯುಗಸಂಖ್ಯಾ ಚ ಪಾಂಡವ।
03189014c ಏತತ್ತೇ ಸರ್ವಮಾಖ್ಯಾತಮತೀತಾನಾಗತಂ ಮಯಾ।।
03189014e ವಾಯುಪ್ರೋಕ್ತಮನುಸ್ಮೃತ್ಯ ಪುರಾಣಮೃಷಿಸಂಸ್ತುತಂ।।

ಪಾಂಡವ! ಯುಗಗಳ ಸಂಖ್ಯೆಗಳನ್ನು ಸರ್ವಲೋಕಗಳಿಗೂ ತಿಳಿದಿದೆ. ನನಗೆ ನೆನಪಿದ್ದಷ್ಟು ಕಳೆದ ಮತ್ತು ಮುಂದಾದವುಗಳೆಲ್ಲವನ್ನೂ ನಾನು ಹೇಳಿದ್ದೇನೆ. ವಾಯುವು ಹೇಳಿದ್ದ ಇದನ್ನು ಋಷಿಗಳು ಪುರಾಣದಲ್ಲಿ ಸಂಗ್ರಹಿಸಿದ್ದಾರೆ2.

03189015a ಏವಂ ಸಂಸಾರಮಾರ್ಗಾ ಮೇ ಬಹುಶಶ್ಚಿರಜೀವಿನಾ।
03189015c ದೃಷ್ಟಾಶ್ಚೈವಾನುಭೂತಾಶ್ಚ ತಾಂಸ್ತೇ ಕಥಿತವಾನಹಂ।।

ಚಿರಂಜೀವಿಯಾದ ನಾನು ಬಹಳ ಬಾರಿ ಈ ಸಂಸಾರಮಾರ್ಗವನ್ನು ನೋಡಿದ್ದೇನೆ ಅನುಭವಿಸಿದ್ದೇನೆ. ಅವುಗಳನ್ನು ನಾನು ನಿನಗೆ ಹೇಳಿದ್ದೇನೆ.

03189016a ಇದಂ ಚೈವಾಪರಂ ಭೂಯಃ ಸಹ ಭ್ರಾತೃಭಿರಚ್ಯುತ।
03189016c ಧರ್ಮಸಂಶಯಮೋಕ್ಷಾರ್ಥಂ ನಿಬೋಧ ವಚನಂ ಮಮ।।

ಈಗ ಅಚ್ಯುತ! ಭ್ರಾತೃಗಳೊಂದಿಗೆ ಧರ್ಮಸಂಶಯವನ್ನು ಹೋಗಲಾಡಿಸುವ ನನ್ನ ಈ ಮಾತುಗಳನ್ನು ಕೇಳು.

03189017a ಧರ್ಮೇ ತ್ವಯಾತ್ಮಾ ಸಂಯೋಜ್ಯೋ ನಿತ್ಯಂ ಧರ್ಮಭೃತಾಂ ವರ।
03189017c ಧರ್ಮಾತ್ಮಾ ಹಿ ಸುಖಂ ರಾಜಾ ಪ್ರೇತ್ಯ ಚೇಹ ಚ ನಂದತಿ।।

ಧರ್ಮಭೃತರಲ್ಲಿ ಶ್ರೇಷ್ಠ! ನಿನ್ನ ಆತ್ಮವನ್ನು ಧರ್ಮದೊಡನೆ ಜೋಡಿಸಿಕೋ! ರಾಜ! ಧರ್ಮಾತ್ಮನೇ ಇಲ್ಲಿಯ ಮತ್ತು ನಂತರದ ಸುಖವನ್ನು ಅನುಭವಿಸುತ್ತಾನೆ.

03189018a ನಿಬೋಧ ಚ ಶುಭಾಂ ವಾಣೀಂ ಯಾಂ ಪ್ರವಕ್ಷ್ಯಾಮಿ ತೇಽನಘ।
03189018c ನ ಬ್ರಾಹ್ಮಣೇ ಪರಿಭವಃ ಕರ್ತವ್ಯಸ್ತೇ ಕದಾ ಚನ।।
03189018e ಬ್ರಾಹ್ಮಣೋ ರುಷಿತೋ ಹನ್ಯಾದಪಿ ಲೋಕಾನ್ಪ್ರತಿಜ್ಞಯಾ।।

ಅನಘ! ನಾನು ನಿನಗೆ ಹೇಳುವ ಈ ಶುಭ ವಾಣಿಯನ್ನು ಕೇಳು. ಎಂದೂ ಬ್ರಾಹ್ಮಣನನ್ನು ಸೋಲಿಸುವ ಕರ್ತವ್ಯವನ್ನು ಮಾಡಬೇಡ! ಕೋಪಗೊಂಡ ಬ್ರಾಹ್ಮಣನು ಪ್ರತಿಜ್ಞೆಯಿಂದ ಲೋಕಗಳನ್ನೇ ನಾಶಪಡಿಸುತ್ತಾನೆ.””

03189019 ವೈಶಂಪಾಯನ ಉವಾಚ।
03189019a ಮಾರ್ಕಂಡೇಯವಚಃ ಶ್ರುತ್ವಾ ಕುರೂಣಾಂ ಪ್ರವರೋ ನೃಪಃ।
03189019c ಉವಾಚ ವಚನಂ ಧೀಮಾನ್ಪರಮಂ ಪರಮದ್ಯುತಿಃ।।

ವೈಶಂಪಾಯನನು ಹೇಳಿದನು: “ಮಾರ್ಕಂಡೇಯನ ಮಾತನ್ನು ಕೇಳಿ ಕುರುಗಳ ಪ್ರವರ ನೃಪ ಧೀಮಂತ ಪರಮದ್ಯುತಿಯು ಶ್ರೇಷ್ಠವಾದ ಈ ಮಾತನ್ನಾಡಿದನು.

03189020a ಕಸ್ಮಿನ್ಧರ್ಮೇ ಮಯಾ ಸ್ಥೇಯಂ ಪ್ರಜಾಃ ಸಂರಕ್ಷತಾ ಮುನೇ।
03189020c ಕಥಂ ಚ ವರ್ತಮಾನೋ ವೈ ನ ಚ್ಯವೇಯಂ ಸ್ವಧರ್ಮತಃ।।

“ಮುನೇ! ನಾನು ಪ್ರಜೆಗಳನ್ನು ಸಂರಕ್ಷಿಸಬೇಕಾದರೆ ಯಾವ ಧರ್ಮವನ್ನು ಪಾಲಿಸಬೇಕು? ಸ್ವಧರ್ಮದಿಂದ ಚ್ಯುತಿಹೊಂದದೇ ನಾನು ಹೇಗೆ ನಡೆದುಕೊಳ್ಳಲಿ?”

03189021 ಮಾರ್ಕಂಡೇಯ ಉವಾಚ।
03189021a ದಯಾವಾನ್ಸರ್ವಭೂತೇಷು ಹಿತೋ ರಕ್ತೋಽನಸೂಯಕಃ।
03189021c ಅಪತ್ಯಾನಾಮಿವ ಸ್ವೇಷಾಂ ಪ್ರಜಾನಾಂ ರಕ್ಷಣೇ ರತಃ।।
03189021e ಚರ ಧರ್ಮಂ ತ್ಯಜಾಧರ್ಮಂ ಪಿತೄನ್ದೇವಾಂಶ್ಚ ಪೂಜಯ।।

ಮಾರ್ಕಂಡೇಯನು ಹೇಳಿದನು: “ಸರ್ವಭೂತಗಳಿಗೆ ದಯಾವಂತನಾಗಿರು. ಅನಸೂಯಕನಾಗಿ ಅವರ ಹಿತಗಳಲ್ಲಿ ನಿರತನಾಗಿರು. ನಿನ್ನದೇ ಮಕ್ಕಳಂತೆ ಪ್ರಜೆಗಳ ರಕ್ಷಣೆಯಲ್ಲಿ ನಿರತನಾಗಿರು. ಅಧರ್ಮವನ್ನು ತೊರೆದು ಧರ್ಮದಲ್ಲಿ ನಡೆ. ಪಿತೃಗಳನ್ನು ಮತ್ತು ದೇವತೆಗಳನ್ನು ಪೂಜಿಸು.

03189022a ಪ್ರಮಾದಾದ್ಯತ್ಕೃತಂ ತೇಽಭೂತ್ಸಮ್ಯಗ್ದಾನೇನ ತಜ್ಜಯ।
03189022c ಅಲಂ ತೇ ಮಾನಮಾಶ್ರಿತ್ಯ ಸತತಂ ಪರವಾನ್ಭವ।।

ಅಪ್ರಮಾದದಿಂದ ಮಾಡಿದವುಗಳನ್ನು ಉತ್ತಮ ದಾನಗಳಿಂದ ಜಯಿಸು. ಮಾನವನ್ನು ತೊರೆ. ವಿನೀತನಾಗು.

03189023a ವಿಜಿತ್ಯ ಪೃಥಿವೀಂ ಸರ್ವಾಂ ಮೋದಮಾನಃ ಸುಖೀ ಭವ।
03189023c ಏಷ ಭೂತೋ ಭವಿಷ್ಯಶ್ಚ ಧರ್ಮಸ್ತೇ ಸಮುದೀರಿತಃ।।

ಸರ್ವ ಪೃಥಿವಿಯನ್ನೂ ಗೆದ್ದು ಸಂತೋಷಗೊಂಡು ಸುಖಿಯಾಗು. ಹಿಂದಿನ ಮತ್ತು ಮುಂದಿನ ಈ ಧರ್ಮವನ್ನು ನಾನು ನಿನಗೆ ಹೇಳಿದ್ದೇನೆ.

03189024a ನ ತೇಽಸ್ತ್ಯವಿದಿತಂ ಕಿಂ ಚಿದತೀತಾನಾಗತಂ ಭುವಿ।
03189024c ತಸ್ಮಾದಿಮಂ ಪರಿಕ್ಲೇಶಂ ತ್ವಂ ತಾತ ಹೃದಿ ಮಾ ಕೃಥಾಃ।।

ಭುವಿಯಲ್ಲಿ ಹಿಂದಿನ ಮುಂದಿನವುಗಳೆಲ್ಲವೂ ನಿನಗೆ ತಿಳಿದಿವೆ. ಆದುದರಿಂದ ಮಗೂ! ನಿನ್ನ ಹೃದಯದಲ್ಲಿರುವ ಈ ಪರಿಕ್ಲೇಶವನ್ನು ತೊರೆ.

03189025a ಏಷ ಕಾಲೋ ಮಹಾಬಾಹೋ ಅಪಿ ಸರ್ವದಿವೌಕಸಾಂ।
03189025c ಮುಹ್ಯಂತಿ ಹಿ ಪ್ರಜಾಸ್ತಾತ ಕಾಲೇನಾಭಿಪ್ರಚೋದಿತಾಃ।।

ಮಹಾಬಾಹೋ! ಮಗೂ! ಕಾಲದಿಂದ ಪ್ರಚೋದಿತರಾಗಿ ಈ ಕಾಲದಲ್ಲಿ ಸರ್ವ ದಿವೌಕಸರೂ ಪ್ರಜೆಗಳೂ ಗೊಂದಲಗಳಲ್ಲಿದ್ದಾರೆ.

03189026a ಮಾ ಚ ತೇಽತ್ರ ವಿಚಾರೋ ಭೂದ್ಯನ್ಮಯೋಕ್ತಂ ತವಾನಘ।
03189026c ಅತಿಶಂಕ್ಯ ವಚೋ ಹ್ಯೇತದ್ಧರ್ಮಲೋಪೋ ಭವೇತ್ತವ।।

ಅನಘ! ನಾನು ನಿನಗೆ ಹೇಳಿದುದರ ಕುರಿತು ತುಂಬಾ ವಿಚಾರಮಾಡಬೇಡ. ನನ್ನ ವಚನಗಳ ಮೇಲೆ ಅತಿಯಾದ ಶಂಕೆಯೇ ನಿನ್ನ ಧರ್ಮಲೋಪಕ್ಕೆ ಕಾರಣವಾಗಬಹುದು.

03189027a ಜಾತೋಽಸಿ ಪ್ರಥಿತೇ ವಂಶೇ ಕುರೂಣಾಂ ಭರತರ್ಷಭ।
03189027c ಕರ್ಮಣಾ ಮನಸಾ ವಾಚಾ ಸರ್ವಮೇತತ್ಸಮಾಚರ।।

ಭರತರ್ಷಭ! ಪ್ರಥಿತವಾದ ಕುರುಗಳ ವಂಶದಲ್ಲಿ ಜನಿಸಿರುವೆ. ಈಗ ಕರ್ಮದಲ್ಲಿ, ಮನಸ್ಸಿನಲ್ಲಿ ಮತ್ತು ಮಾತಿನಲ್ಲಿ ಎಲ್ಲವನ್ನೂ ಆಚರಿಸು.”

03189028 ಯುಧಿಷ್ಠಿರ ಉವಾಚ।
03189028a ಯತ್ತ್ವಯೋಕ್ತಂ ದ್ವಿಜಶ್ರೇಷ್ಠ ವಾಕ್ಯಂ ಶ್ರುತಿಮನೋಹರಂ।
03189028c ತಥಾ ಕರಿಷ್ಯೇ ಯತ್ನೇನ ಭವತಃ ಶಾಸನಂ ವಿಭೋ।।

ಯುಧಿಷ್ಠಿರನು ಹೇಳಿದನು: “ವಿಭೋ! ದ್ವಿಜಶ್ರೇಷ್ಠ! ನೀನು ಹೇಳಿದ ಮಾತುಗಳು ಕೇಳಲು ಮನೋಹರವಾಗಿವೆ. ನಿನ್ನ ಶಾಸನದಂತೆ ಮಾಡಲು ಪ್ರಯತ್ನಿಸುತ್ತೇನೆ.

03189029a ನ ಮೇ ಲೋಭೋಽಸ್ತಿ ವಿಪ್ರೇಂದ್ರ ನ ಭಯಂ ನ ಚ ಮತ್ಸರಃ।
03189029c ಕರಿಷ್ಯಾಮಿ ಹಿ ತತ್ಸರ್ವಮುಕ್ತಂ ಯತ್ತೇ ಮಯಿ ಪ್ರಭೋ।।

ವಿಪ್ರೇಂದ್ರ! ನನ್ನಲ್ಲಿ ಲೋಭವಿಲ್ಲ, ಭಯವಿಲ್ಲ ಮತ್ತು ಮತ್ಸರವಿಲ್ಲ. ಪ್ರಭೋ! ನೀನು ನನಗೆ ಹೇಳಿದುದೆಲ್ಲವನ್ನು ಮಾಡುತ್ತೇನೆ.””

03189030 ವೈಶಂಪಾಯನ ಉವಾಚ।
03189030a ಶ್ರುತ್ವಾ ತು ವಚನಂ ತಸ್ಯ ಪಾಂಡವಸ್ಯ ಮಹಾತ್ಮನಃ।
03189030c ಪ್ರಹೃಷ್ಟಾಃ ಪಾಂಡವಾ ರಾಜನ್ಸಹಿತಾಃ ಶಾಂರ್ಙ್ಗಧನ್ವನಾ।।

ವೈಶಂಪಾಯನನು ಹೇಳಿದನು: “ರಾಜನ್! ಆ ಮಹಾತ್ಮ ಪಾಂಡವನ ಮಾತುಗಳನ್ನು ಕೇಳಿ ಶಾಂರ್ಙ್ಗಧನ್ವಿಯ ಸಹಿತ ಪಾಂಡವರು ಹರ್ಷಿತರಾದರು.

03189031a ತಥಾ ಕಥಾಂ ಶುಭಾಂ ಶ್ರುತ್ವಾ ಮಾರ್ಕಂಡೇಯಸ್ಯ ಧೀಮತಃ।
03189031c ವಿಸ್ಮಿತಾಃ ಸಮಪದ್ಯಂತ ಪುರಾಣಸ್ಯ ನಿವೇದನಾತ್।।

ಧೀಮಂತ ಮಾರ್ಕಂಡೇಯನಿಂದ ಶುಭ ಕಥನಗಳನ್ನು, ಪುರಾಣದ ವರ್ಣನೆಗಳನ್ನು ಕೇಳಿ ಅವರು ವಿಸ್ಮಿತರಾದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಯುಧಿಷ್ಠಿರಾನುಶಾಸನೇ ಏಕೋನನವತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಯುಧಿಷ್ಠಿರಾನುಶಾಸನದಲ್ಲಿ ನೂರಾಎಂಭತ್ತೊಂಭತ್ತನೆಯ ಅಧ್ಯಾಯವು.


  1. ಕೃತಯುಗದಲ್ಲಿ ವರ್ಣಬೇಧವಿರುವುದಿಲ್ಲವೆಂದು ಹಿಂದಿನ ಶ್ಲೋಕಗಳಲ್ಲಿ ಹೇಳಲಾಗಿತ್ತು. ↩︎

  2. ವಾಯುಪುರಾಣ . ↩︎