ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 187
ಸಾರ
ನಾರಾಯಣನು ಮಾರ್ಕಂಡೇಯನಿಗೆ ಸೃಷ್ಟಿವಿಚಾರಗಳನ್ನು ತಿಳಿಸಿದುದು (1-47). ಆ ನಾರಾಯಣನೇ ನಿನ್ನ ಸಂಬಂಧಿ ಕೃಷ್ಣನೆಂದು ಮಾರ್ಕಂಡೇಯನು ಯುಧಿಷ್ಠಿರನಿಗೆ ಹೇಳುವುದು (48-55).
03187001 ದೇವ ಉವಾಚ।
03187001a ಕಾಮಂ ದೇವಾಪಿ ಮಾಂ ವಿಪ್ರ ನ ವಿಜಾನಂತಿ ತತ್ತ್ವತಃ।
03187001c ತ್ವತ್ಪ್ರೀತ್ಯಾ ತು ಪ್ರವಕ್ಷ್ಯಾಮಿ ಯಥೇದಂ ವಿಸೃಜಾಮ್ಯಹಂ।।
ದೇವನು ಹೇಳಿದನು: “ವಿಪ್ರ! ದೇವತೆಗಳೂ ಕೂಡ ನಾನು ಯಾರು ಎನ್ನುವುದನ್ನು ಸರಿಯಾಗಿ ತಿಳಿಯರು. ಆದರೆ ನಿನ್ನಮೇಲಿನ ಪ್ರೀತಿಯಿಂದ ನಾನು ಇದನ್ನು ಹೇಗೆ ಸೃಷ್ಟಿಸುತ್ತೇನೆ ಎನ್ನುವುದನ್ನು ಹೇಳುತ್ತೇನೆ.
03187002a ಪಿತೃಭಕ್ತೋಽಸಿ ವಿಪ್ರರ್ಷೇ ಮಾಂ ಚೈವ ಶರಣಂ ಗತಃ।
03187002c ಅತೋ ದೃಷ್ಟೋಽಸ್ಮಿ ತೇ ಸಾಕ್ಷಾದ್ಬ್ರಹ್ಮಚರ್ಯಂ ಚ ತೇ ಮಹತ್।।
ವಿಪ್ರರ್ಷೇ! ನೀನು ಪಿತೃಭಕ್ತನಾಗಿದ್ದೀಯೆ. ನನಗೇ ನೀನು ಶರಣುಬಂದಿದ್ದೀಯೆ. ನಿನ್ನ ಬ್ರಹ್ಮಚರ್ಯವು ದೊಡ್ಡದು. ಆದುದರಿಂದಲೇ ನೀನು ನನ್ನನ್ನು ಸಾಕ್ಷಾತ್ ನೋಡಿದ್ದೀಯೆ.
03187003a ಆಪೋ ನಾರಾ ಇತಿ ಪ್ರೋಕ್ತಾಃ ಸಂಜ್ಞಾನಾಮ ಕೃತಂ ಮಯಾ।
03187003c ತೇನ ನಾರಾಯಣೋಽಸ್ಮ್ಯುಕ್ತೋ ಮಮ ತದ್ಧ್ಯಯನಂ ಸದಾ।।
ನೀರನ್ನು ನಾರಾ ಎಂದು ಹೇಳುತ್ತಾರೆ. ನಾನು ಅದಕ್ಕೆ ಈ ಹೆಸರನ್ನು ಕೊಟ್ಟಿದ್ದೇನೆ. ಅದರಿಂದ ನನಗೆ ನಾರಾಯಣನೆಂದು ಕರೆಯುತ್ತಾರೆ. ನಾನು ಸದಾ ಅದರ ಗತಿಯನ್ನು ಅನುಸರಿಸುತ್ತೇನೆ.
03187004a ಅಹಂ ನಾರಾಯಣೋ ನಾಮ ಪ್ರಭವಃ ಶಾಶ್ವತೋಽವ್ಯಯಃ।
03187004c ವಿಧಾತಾ ಸರ್ವಭೂತಾನಾಂ ಸಂಹರ್ತಾ ಚ ದ್ವಿಜೋತ್ತಮ।।
03187005a ಅಹಂ ವಿಷ್ಣುರಹಂ ಬ್ರಹ್ಮಾ ಶಕ್ರಶ್ಚಾಹಂ ಸುರಾಧಿಪಃ।
03187005c ಅಹಂ ವೈಶ್ರವಣೋ ರಾಜಾ ಯಮಃ ಪ್ರೇತಾಧಿಪಸ್ತಥಾ।।
03187006a ಅಹಂ ಶಿವಶ್ಚ ಸೋಮಶ್ಚ ಕಶ್ಯಪಶ್ಚ ಪ್ರಜಾಪತಿಃ।
03187006c ಅಹಂ ಧಾತಾ ವಿಧಾತಾ ಚ ಯಜ್ಞಶ್ಚಾಹಂ ದ್ವಿಜೋತ್ತಮ।।
ದ್ವಿಜೋತ್ತಮ! ನಾನು ನಾರಾಯಣನೆಂಬ ಹೆಸರಿನವನು - ಪ್ರಭವ, ಶಾಶ್ವತ ಮತ್ತು ಅವ್ಯಯ. ಇರುವ ಎಲ್ಲವುಗಳ ವಿಧಾತಾ ಮತ್ತು ಸಂಹರ್ತ. ನಾನು ವಿಷ್ಣು. ನಾನು ಬ್ರಹ್ಮ. ನಾನು ಸುರಾಧಿಪ ಶಕ್ರ. ನಾನು ರಾಜಾ ವೈಶ್ರವಣ ಮತ್ತು ಪ್ರೇತಾಧಿಪತಿ ಯಮ. ದ್ವಿಜೋತ್ತಮ! ನಾನು ಶಿವ, ಸೋಮ, ಕಶ್ಯಪ ಮತ್ತು ಪ್ರಜಾಪತಿ. ನಾನು ಧಾತಾ, ವಿಧಾತಾ ಮತ್ತು ಯಜ್ಞ.
03187007a ಅಗ್ನಿರಾಸ್ಯಂ ಕ್ಷಿತಿಃ ಪಾದೌ ಚಂದ್ರಾದಿತ್ಯೌ ಚ ಲೋಚನೇ।
03187007c ಸದಿಶಂ ಚ ನಭಃ ಕಾಯೋ ವಾಯುರ್ಮನಸಿ ಮೇ ಸ್ಥಿತಃ।।
ಅಗ್ನಿಯು ನನ್ನ ಮುಖ, ಕ್ಷಿತಿಯು ಪಾದಗಳು, ಚಂದ್ರಾದಿತ್ಯರು ಕಣ್ಣುಗಳು, ದಿಕ್ಕುಗಳೊಂದಿಗೆ ನಭವು ನನ್ನ ದೇಹ ಮತ್ತು ವಾಯುವು ನನ್ನ ಮೂಗಿನಲ್ಲಿ ನೆಲೆಸಿದ್ದಾನೆ.
03187008a ಮಯಾ ಕ್ರತುಶತೈರಿಷ್ಟಂ ಬಹುಭಿಃ ಸ್ವಾಪ್ತದಕ್ಷಿಣೈಃ।
03187008c ಯಜಂತೇ ವೇದವಿದುಷೋ ಮಾಂ ದೇವಯಜನೇ ಸ್ಥಿತಂ।।
ವೇದವಿದುಷರು ನನ್ನನ್ನು ಬಹಳಷ್ಟು ಆಪ್ತದಕ್ಷಿಣೆಗಳಿಂದ ಕೂಡಿದ ನೂರಾರು ಕ್ರತು ಮತ್ತು ಇಷ್ಟಗಳಿಂದ ಪೂಜಿಸುವಲ್ಲಿ ನಾನು ನೆಲೆಸಿದ್ದೇನೆ.
03187009a ಪೃಥಿವ್ಯಾಂ ಕ್ಷತ್ರಿಯೇಂದ್ರಾಶ್ಚ ಪಾರ್ಥಿವಾಃ ಸ್ವರ್ಗಕಾಂಕ್ಷಿಣಃ।
03187009c ಯಜಂತೇ ಮಾಂ ತಥಾ ವೈಶ್ಯಾಃ ಸ್ವರ್ಗಲೋಕಜಿಗೀಷವಃ।।
ಪೃಥ್ವಿಯಲ್ಲಿನ ಸ್ವರ್ಗಾಕಾಂಕ್ಷಿಗಳಾದ ಕ್ಷತ್ರಿಯೇಂದ್ರ ಪಾರ್ಥಿವರು ನನ್ನನ್ನು ಯಜಿಸುತ್ತಾರೆ. ಇದರಿಂದ ಸ್ವರ್ಗಲೋಕವನ್ನು ಬಯಸುವ ವೈಶ್ಯರಿಗೂ ಸಹಾಯವಾಗುತ್ತದೆ.
03187010a ಚತುಹ್ಸಮುದ್ರಪರ್ಯಂತಾಂ ಮೇರುಮಂದರಭೂಷಣಾಂ।
03187010c ಶೇಷೋ ಭೂತ್ವಾಹಮೇವೈತಾಂ ಧಾರಯಾಮಿ ವಸುಂಧರಾಂ।।
ಶೇಷನಾಗಿ ನಾನು ನಾಲ್ಕು ಸಮುದ್ರಗಳಿಂದ ಆವರಿಸಲ್ಪಟ್ಟ, ಮೇರು-ಮಂದರಗಳಿಂದ ಭೂಷಿತವಾದ, ಈ ವಸುಂಧರೆಯನ್ನು ಹೊರುತ್ತೇನೆ.
03187011a ವಾರಾಹಂ ರೂಪಮಾಸ್ಥಾಯ ಮಯೇಯಂ ಜಗತೀ ಪುರಾ।
03187011c ಮಜ್ಜಮಾನಾ ಜಲೇ ವಿಪ್ರ ವೀರ್ಯೇಣಾಸೀತ್ಸಮುದ್ಧೃತಾ।।
ವಿಪ್ರ! ಹಿಂದೆ ಜಲದಲ್ಲಿ ಮುಳುಗಿಹೋಗಿದ್ದ ಜಗತ್ತನ್ನು ವರಾಹ ರೂಪವನ್ನು ಪಡೆದು ವೀರ್ಯದಿಂದ ಎಳೆದು ಮೇಲೆತ್ತಿದ್ದೆ.
03187012a ಅಗ್ನಿಶ್ಚ ವಡವಾವಕ್ತ್ರೋ ಭೂತ್ವಾಹಂ ದ್ವಿಜಸತ್ತಮ।
03187012c ಪಿಬಾಮ್ಯಪಃ ಸಮಾವಿದ್ಧಾಸ್ತಾಶ್ಚೈವ ವಿಸೃಜಾಮ್ಯಹಂ।।
ದ್ವಿಜಸತ್ತಮ! ಕುದುರೆಯ ಮುಖದ ಅಗ್ನಿಯಾಗಿ ನಾನು ಕ್ಷೋಭೆಗೊಂಡ ನೀರನ್ನು ಕುಡಿಯುತ್ತೇನೆ ಮತ್ತು ನಾನೇ ಅದನ್ನು ವಿಸರ್ಜಿಸುತ್ತೇನೆ.
03187013a ಬ್ರಹ್ಮ ವಕ್ತ್ರಂ ಭುಜೌ ಕ್ಷತ್ರಂ ಊರೂ ಮೇ ಸಂಶ್ರಿತಾ ವಿಶಃ।
03187013c ಪಾದೌ ಶೂದ್ರಾ ಭಜಂತೇ ಮೇ ವಿಕ್ರಮೇಣ ಕ್ರಮೇಣ ಚ।।
ನನ್ನ ವಿಕ್ರಮದಿಂದ ಕ್ರಮೇಣವಾಗಿ ಮುಖವು ಬ್ರಹ್ಮ, ಭುಜಗಳು ಕ್ಷತ್ರ. ತೊಡೆಗಳಲ್ಲಿ ವೈಶ್ಯರು ನೆಲೆಸಿದ್ದಾರೆ ಮತ್ತು ಪಾದಗಳಲ್ಲಿ ಶೂದ್ರರು ಭಜಿಸುತ್ತಾರೆ.
03187014a ಋಗ್ವೇದಃ ಸಾಮವೇದಶ್ಚ ಯಜುರ್ವೇದೋಽಪ್ಯಥರ್ವಣಃ।
03187014c ಮತ್ತಃ ಪ್ರಾದುರ್ಭವಂತ್ಯೇತೇ ಮಾಮೇವ ಪ್ರವಿಶಂತಿ ಚ।।
ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವಣಗಳು ನನ್ನಿಂದ ಪ್ರಾದುರ್ಭವಿಸುತ್ತವೆ ಮತ್ತು ಇವುಗಳು ನನ್ನನ್ನೇ ಪ್ರವೇಶಿಸುತ್ತವೆ.
03187015a ಯತಯಃ ಶಾಂತಿಪರಮಾ ಯತಾತ್ಮಾನೋ ಮುಮುಕ್ಷವಃ।
03187015c ಕಾಮಕ್ರೋಧದ್ವೇಷಮುಕ್ತಾ ನಿಃಸಂಗಾ ವೀತಕಲ್ಮಷಾಃ।।
03187016a ಸತ್ತ್ವಸ್ಥಾ ನಿರಹಂಕಾರಾ ನಿತ್ಯಮಧ್ಯಾತ್ಮಕೋವಿದಾಃ।
03187016c ಮಾಮೇವ ಸತತಂ ವಿಪ್ರಾಶ್ಚಿಂತಯಂತ ಉಪಾಸತೇ।।
ಶಾಂತಿಪರರಾದ ಯತಿಗಳು ಮಕ್ತಿಯನ್ನು ಬಯಸುವ ಯತಿಗಳು, ಕಾಮ-ಕ್ರೋಧ-ದ್ವೇಷಗಳಿಂದ ಮುಕ್ತರಾದ, ನಿಃಸಂಗರಾದ, ಕಲ್ಮಷವನ್ನು ಕಳೆದುಕೊಂಡ, ಸತ್ವದಲ್ಲಿ ನೆಲೆಸಿರುವ, ನಿರಂಕಾರರಾದ, ನಿತ್ಯವೂ ಆಧ್ಯಾತ್ಮ ಕೋವಿದರಾದ ವಿಪ್ರರು ಸತತವಾಗಿ ನನ್ನನ್ನೇ ಚಿಂತಿಸಿ ಉಪಾಸಿಸುತ್ತಾರೆ.
03187017a ಅಹಂ ಸಂವರ್ತಕೋ ಜ್ಯೋತಿರಹಂ ಸರ್ವರ್ತಕೋ ಯಮಃ।
03187017c ಅಹಂ ಸಂವರ್ತಕಃ ಸೂರ್ಯೋ ಅಹಂ ಸಂವರ್ತಕೋಽನಿಲಃ।।
ನಾನು ಸಂವರ್ತಕ ಜ್ಯೋತಿ. ನಾನು ಸರ್ವರ್ತಕ ಯಮ. ನಾನು ಸಂವರ್ತಕ ಸೂರ್ಯ ಮತ್ತು ನಾನು ಸಂವರ್ತಕ ಅನಿಲ.
03187018a ತಾರಾರೂಪಾಣಿ ದೃಶ್ಯಂತೇ ಯಾನ್ಯೇತಾನಿ ನಭಸ್ತಲೇ।
03187018c ಮಮ ರೂಪಾಣ್ಯಥೈತಾನಿ ವಿದ್ಧಿ ತ್ವಂ ದ್ವಿಜಸತ್ತಮ।।
ದ್ವಿಜಸತ್ತಮ! ನಭಸ್ತಲದಲ್ಲಿ ಕಾಣುವ ತಾರಾರೂಪಗಳು ನನ್ನ ರೂಪಗಳೆಂದೇ ತಿಳಿ.
03187019a ರತ್ನಾಕರಾಃ ಸಮುದ್ರಾಶ್ಚ ಸರ್ವ ಏವ ಚತುರ್ದಿಶಂ।
03187019c ವಸನಂ ಶಯನಂ ಚೈವ ನಿಲಯಂ ಚೈವ ವಿದ್ಧಿ ಮೇ।।
ರತ್ನಾಕರಗಳು ನನ್ನ ಬಟ್ಟೆ, ಸಮುದ್ರವು ಹಾಸಿಗೆ ಮತ್ತು ಚತುರ್ದಿಶಗಳೇ ನನ್ನ ನಿಲಯವೆಂದು ತಿಳಿ.
03187020a ಕಾಮಂ ಕ್ರೋಧಂ ಚ ಹರ್ಷಂ ಚ ಭಯಂ ಮೋಹಂ ತಥೈವ ಚ।
03187020c ಮಮೈವ ವಿದ್ಧಿ ರೂಪಾಣಿ ಸರ್ವಾಣ್ಯೇತಾನಿ ಸತ್ತಮ।।
03187021a ಪ್ರಾಪ್ನುವಂತಿ ನರಾ ವಿಪ್ರ ಯತ್ಕೃತ್ವಾ ಕರ್ಮಶೋಭನಂ।
03187021c ಸತ್ಯಂ ದಾನಂ ತಪಶ್ಚೋಗ್ರಮಹಿಂಸಾ ಚೈವ ಜಂತುಷು।।
ಸತ್ತಮ! ಕಾಮ, ಕ್ರೋಧ, ಹರ್ಷ, ಭಯ, ಮತ್ತು ಹಾಗೆಯೇ ಮೋಹ ಮತ್ತು ವಿಪ್ರ! ಯಾವುದರಿಂದ ನರರು ಉತ್ತಮ ಕರ್ಮವನ್ನು ಮಾಡಿ ಪಡೆಯುವಂತಹ ಸತ್ಯ, ದಾನ, ಉಗ್ರ ತಪಸ್ಸು, ಜಂತುಗಳೊಂದಿಗೆ ಅಹಿಂಸೆ ಇವೆಲ್ಲವೂ ನನ್ನದೇ ರೂಪಗಳೆಂದು ತಿಳಿ.
03187022a ಮದ್ವಿಧಾನೇನ ವಿಹಿತಾ ಮಮ ದೇಹವಿಹಾರಿಣಃ।
03187022c ಮಯಾಭಿಭೂತವಿಜ್ಞಾನಾ ವಿಚೇಷ್ಟಂತೇ ನ ಕಾಮತಃ।।
ದೇಹಧಾರಿಗಳು ನನ್ನದೇ ವಿಧಾನಕ್ಕೊಳಪಡುತ್ತಾರೆ, ಅವರು ತಮ್ಮದೇ ಕಾಮದಿಂದ ನಡೆಯುವುದಿಲ್ಲ. ಆದರೆ ನನ್ನ ನಿಯಂತ್ರಣದಲ್ಲಿರುವ ಮನಸ್ಸಿನ ಮೂಲಕ ನಡೆಯುತ್ತಾರೆ.
03187023a ಸಮ್ಯಗ್ವೇದಮಧೀಯಾನಾ ಯಜಂತೋ ವಿವಿಧೈರ್ಮಖೈಃ।
03187023c ಶಾಂತಾತ್ಮಾನೋ ಜಿತಕ್ರೋಧಾಃ ಪ್ರಾಪ್ನುವಂತಿ ದ್ವಿಜಾತಯಃ।।
03187024a ಪ್ರಾಪ್ತುಂ ನ ಶಕ್ಯೋ ಯೋ ವಿದ್ವನ್ನರೈರ್ದುಷ್ಕೃತಕರ್ಮಭಿಃ।
03187024c ಲೋಭಾಭಿಭೂತೈಃ ಕೃಪಣೈರನಾರ್ಯೈರಕೃತಾತ್ಮಭಿಃ।।
03187025a ತಂ ಮಾಂ ಮಹಾಫಲಂ ವಿದ್ಧಿ ಪದಂ ಸುಕೃತಕರ್ಮಣಃ।
03187025c ದುಷ್ಪ್ರಾಪಂ ವಿಪ್ರಮೂಢಾನಾಂ ಮಾರ್ಗಂ ಯೋಗೈರ್ನಿಷೇವಿತಂ।।
ವೇದಗಳನ್ನು ಚೆನ್ನಾಗಿ ಕಲಿಯುವುದರಿಂದ, ವಿವಿಧ ಮಖಗಳನ್ನು ಯಜಿಸುವುದರಿಂದ, ಶಾಂತಾತ್ಮ, ಜಿತಕ್ರೋಧ ದ್ವಿಜರು ಏನನ್ನು ಪಡೆಯುವರೋ; ದುಷ್ಕೃತಕರ್ಮಿ ನರರಿಂದ ಲೋಭದಿಂದ ಕೂಡಿದ ಕೃಪಣರಾದ ಅನಾರ್ಯ ಅಕೃತಾತ್ಮರಿಂದ ಏನನ್ನು ಪಡೆಯಲು ಸಾಧ್ಯವಿಲ್ಲವೋ; ಆ ಮಹಾಫಲ, ಸುಕೃತಕರ್ಮಿಗಳ ಪರಮ ಗುರಿ, ದುಷ್ಪಾಪಿ ಮೂಢರಿಗೆ ಮುಚ್ಚಿದ ಆದರೆ ಯೋಗಿಗಳಿಗೆ ತೆರೆದಿರುವ ಮಾರ್ಗವೇ ನಾನೆಂದು ತಿಳಿ!
03187026a ಯದಾ ಯದಾ ಚ ಧರ್ಮಸ್ಯ ಗ್ಲಾನಿರ್ಭವತಿ ಸತ್ತಮ।
03187026c ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ।।
ಸತ್ತಮ! ಯಾವಾಗಲೆಲ್ಲ ಧರ್ಮದ ಅಧೋಗತಿಯಾಗುತ್ತದೆಯೋ ಮತ್ತು ಅಧರ್ಮವು ತಲೆಯೆತ್ತುತ್ತದೆಯೋ ಆವಾಗಲೆಲ್ಲ ನಾನು ನನ್ನನ್ನು ಸೃಷ್ಟಿಸಿಕೊಳ್ಳುತ್ತೇನೆ1.
03187027a ದೈತ್ಯಾ ಹಿಂಸಾನುರಕ್ತಾಶ್ಚ ಅವಧ್ಯಾಃ ಸುರಸತ್ತಮೈಃ।
03187027c ರಾಕ್ಷಸಾಶ್ಚಾಪಿ ಲೋಕೇಽಸ್ಮಿನ್ಯದೋತ್ಪತ್ಸ್ಯಂತಿ ದಾರುಣಾಃ।।
03187028a ತದಾಹಂ ಸಂಪ್ರಸೂಯಾಮಿ ಗೃಹೇಷು ಶುಭಕರ್ಮಣಾಂ।
03187028c ಪ್ರವಿಷ್ಟೋ ಮಾನುಷಂ ದೇಹಂ ಸರ್ವಂ ಪ್ರಶಮಯಾಮ್ಯಹಂ।।
ಸುರಸತ್ತಮರಿಗೆ ಅವಧ್ಯರಾದ ಹಿಂಸಾನುರಕ್ತರಾದ ದೈತ್ಯರು ಮತ್ತು ದಾರುಣ ರಾಕ್ಷಸರು ಈ ಲೋಕದಲ್ಲಿ ಯಾವಾಗ ಹುಟ್ಟಿಕೊಳ್ಳುತ್ತಾರೋ ಆಗ ನಾನು ಶುಭಕರ್ಮಿಗಳ ಮನೆಗಳಲ್ಲಿ ಮನುಷ್ಯ ದೇಹವನ್ನು ಪ್ರವೇಶಿಸಿ ಎಲ್ಲವನ್ನೂ ಪ್ರಶಮನಗೊಳಿಸುತ್ತೇನೆ.
03187029a ಸೃಷ್ಟ್ವಾ ದೇವಮನುಷ್ಯಾಂಶ್ಚ ಗಂಧರ್ವೋರಗರಾಕ್ಷಸಾನ್।
03187029c ಸ್ಥಾವರಾಣಿ ಚ ಭೂತಾನಿ ಸಂಹರಾಮ್ಯಾತ್ಮಮಾಯಯಾ।।
ದೇವ-ಮನುಷ್ಯರನ್ನು, ಗಂಧರ್ವ-ಉರಗ-ರಾಕ್ಷಸರನ್ನು, ಸ್ಥಾವರ ಭೂತಗಳನ್ನೂ ಸೃಷ್ಟಿಸಿ, ನನ್ನ ಮಾಯೆಯಿಂದ ಸಂಹರಿಸುತ್ತೇನೆ.
03187030a ಕರ್ಮಕಾಲೇ ಪುನರ್ದೇಹಮನುಚಿಂತ್ಯ ಸೃಜಾಮ್ಯಹಂ।
03187030c ಪ್ರವಿಶ್ಯ ಮಾನುಷಂ ದೇಹಂ ಮರ್ಯಾದಾಬಂಧಕಾರಣಾತ್।।
ಕರ್ಮದ ಕಾಲದಲ್ಲಿ ಪುನಃ ದೇಹವನ್ನು ಚಿಂತಿಸಿ, ಮನುಷ್ಯದೇಹವನ್ನು ಪ್ರವೇಶಿಸಿ, ಗಡಿಯನ್ನು ನಿರ್ಧಿಷ್ಟಪಡಿಸುವುದಕ್ಕಾಗಿ ನನ್ನನ್ನು ನಾನೇ ಸೃಷ್ಟಿಸಿಕೊಳ್ಳುತ್ತೇನೆ.
03187031a ಶ್ವೇತಃ ಕೃತಯುಗೇ ವರ್ಣಃ ಪೀತಸ್ತ್ರೇತಾಯುಗೇ ಮಮ।
03187031c ರಕ್ತೋ ದ್ವಾಪರಮಾಸಾದ್ಯ ಕೃಷ್ಣಃ ಕಲಿಯುಗೇ ತಥಾ।।
ಕೃತಯುಗದಲ್ಲಿ ನನ್ನ ಬಣ್ಣ ಬಿಳಿ, ತ್ರೇತಾಯುಗದಲ್ಲಿ ನಾನು ಹಳದಿ, ದ್ವಾಪರದಲ್ಲಿ ಕೆಂಪುಬಣ್ಣವನ್ನು ಹೊಂದಿ, ಕಲಿಯುಗದಲ್ಲಿ ಕಪ್ಪಾಗಿರುತ್ತೇನೆ2.
03187032a ತ್ರಯೋ ಭಾಗಾ ಹ್ಯಧರ್ಮಸ್ಯ ತಸ್ಮಿನ್ಕಾಲೇ ಭವಂತ್ಯುತ।
03187032c ಅಂತಕಾಲೇ ಚ ಸಂಪ್ರಾಪ್ತೇ ಕಾಲೋ ಭೂತ್ವಾತಿದಾರುಣಃ।।
03187032e ತ್ರೈಲೋಕ್ಯಂ ನಾಶಯಾಮ್ಯೇಕಃ ಕೃತ್ಸ್ನಂ ಸ್ಥಾವರಜಂಗಮಂ।।
ಕಾಲವು ಅಂತ್ಯವಾಗುವಾಗ ಮುಕ್ಕಾಲು ಭಾಗ ಅಧರ್ಮವು ಇರುತ್ತದೆ. ಕಾಲದ ಅಂತ್ಯಕಾಲವು ಬಂದಾಗ ನಾನು ಅತಿದಾರುಣನಾದ ಕಾಲನಾಗಿ ಏಕಾಂಗಿಯಾಗಿ ಸ್ಥಾವರಜಂಗಮಗಳೊಂದಿಗೆ ಮೂರು ಲೋಕಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತೇನೆ.
03187033a ಅಹಂ ತ್ರಿವರ್ತ್ಮಾ ಸರ್ವಾತ್ಮಾ ಸರ್ವಲೋಕಸುಖಾವಹಃ।
03187033c ಅಭಿಭೂಃ ಸರ್ವಗೋಽನಂತೋ ಹೃಷೀಕೇಶ ಉರುಕ್ರಮಃ।।
ನಾನು ತ್ರಿವರ್ತ್ಮಾ. ಸರ್ವಾತ್ಮ. ಸರ್ವಲೋಕಗಳಿಗೂ ಸುಖವನ್ನು ತರುವವ. ಸಾಮ್ರಟ. ಎಲ್ಲಿಯೂ ಇರುವವ. ಅನಂತ, ಮತ್ತು ವಿಸ್ತಾರವಾಗಿ ಗಮಿಸಬಲ್ಲ ಹೃಷೀಕೇಶ.
03187034a ಕಾಲಚಕ್ರಂ ನಯಾಮ್ಯೇಕೋ ಬ್ರಹ್ಮನ್ನಹಮರೂಪಿ ವೈ।
03187034c ಶಮನಂ ಸರ್ವಭೂತಾನಾಂ ಸರ್ವಲೋಕಕೃತೋದ್ಯಮಂ।।
ನಾನೊಬ್ಬನೇ ಕಾಲಚಕ್ರವನ್ನು ನಡೆಸುತ್ತೇನೆ. ನಾನು ಬ್ರಹ್ಮ. ನಾನು ಅರೂಪಿ. ಸರ್ವಭೂತಗಳನ್ನು ಶಮನಗೊಳಿಸುತ್ತೇನೆ. ಮತ್ತು ಸರ್ವಲೋಕಗಳಿಗೆ ಬೇಕಾದುದನ್ನು ಮಾಡುತ್ತೇನೆ.
03187035a ಏವಂ ಪ್ರಣಿಹಿತಃ ಸಮ್ಯಮ್ಮಯಾತ್ಮಾ ಮುನಿಸತ್ತಮ।
03187035c ಸರ್ವಭೂತೇಷು ವಿಪ್ರೇಂದ್ರ ನ ಚ ಮಾಂ ವೇತ್ತಿ ಕಶ್ಚನ।।
ಮುನಿಸತ್ತಮ! ವಿಪ್ರೇಂದ್ರ! ಹೀಗೆ ನಾನು ಸರ್ವಭೂತಗಳಲ್ಲಿ ನನ್ನನ್ನು ಸಂಪೂರ್ಣವಾಗಿ ಹೊಕ್ಕಿರುತ್ತೇನೆ. ಆದರೆ ಯಾರೂ ನನ್ನನ್ನು ತಿಳಿದಿಲ್ಲ.
03187036a ಯಚ್ಚ ಕಿಂ ಚಿತ್ತ್ವಯಾ ಪ್ರಾಪ್ತಂ ಮಯಿ ಕ್ಲೇಷಾತ್ಮಕಂ ದ್ವಿಜ।
03187036c ಸುಖೋದಯಾಯ ತತ್ಸರ್ವಂ ಶ್ರೇಯಸೇ ಚ ತವಾನಘ।।
ಅನಘ! ದ್ವಿಜ! ನನ್ನೊಳಗೆ ಇರುವಾಗ ನೀನು ಏನೆಲ್ಲ ಕಷ್ಟಗಳನ್ನು ಅನುಭವಿಸಿದೆಯೋ ಅದೆಲ್ಲವೂ ನಿನಗೆ ಸುಖವನ್ನು ತರುವ ಶ್ರೇಯಸ್ಸಿಗಾಗಿಯೇ ಆಗಿವೆ.
03187037a ಯಚ್ಚ ಕಿಂ ಚಿತ್ತ್ವಯಾ ಲೋಕೇ ದೃಷ್ಟಂ ಸ್ಥಾವರಜಂಗಮಂ।
03187037c ವಿಹಿತಃ ಸರ್ವಥೈವಾಸೌ ಮಮಾತ್ಮಾ ಮುನಿಸತ್ತಮ।।
ಮುನಿಸತ್ತಮ! ನೀನು ಅಲ್ಲಿ ಲೋಕಗಳಲ್ಲಿರುವ ಏನೆಲ್ಲ ಸ್ಥಾವರಜಂಗಮಗಳನ್ನು ನೋಡಿದೆಯೋ ಅವೆಲ್ಲವೂ ನಾನೇ. ನನ್ನಿಂದಲೇ ವಿಹಿತವಾಗಿವೆ.
03187038a ಅರ್ಧಂ ಮಮ ಶರೀರಸ್ಯ ಸರ್ವಲೋಕಪಿತಾಮಹಃ।
03187038c ಅಹಂ ನಾರಾಯಣೋ ನಾಮ ಶಂಖಚಕ್ರಗದಾಧರಃ।।
ನನ್ನ ಶರೀರದ ಅರ್ಧ ಸರ್ವಲೋಕ ಪಿತಾಮಹ. ನಾನು ಶಂಖಚಕ್ರಗದೆಗಳನ್ನು ಹಿಡಿದಿರುವವನು. ನನ್ನ ಹೆಸರು ನಾರಾಯಣ.
03187039a ಯಾವದ್ಯುಗಾನಾಂ ವಿಪ್ರರ್ಷೇ ಸಹಸ್ರಪರಿವರ್ತನಂ।
03187039c ತಾವತ್ಸ್ವಪಿಮಿ ವಿಶ್ವಾತ್ಮಾ ಸರ್ವಲೋಕಪಿತಾಮಹಃ।।
ವಿಪ್ರರ್ಷೇ! ಸರ್ವಲೋಕಪಿತಾಮಹ ವಿಶ್ವಾತ್ಮನಾದ ನಾನು ಒಂದು ಸಹಸ್ರ ಯುಗಗಳು ಕಳೆಯುವವರೆಗೆ ಮಲಗಿರುತ್ತೇನೆ.
03187040a ಏವಂ ಸರ್ವಮಹಂ ಕಾಲಮಿಹಾಸೇ ಮುನಿಸತ್ತಮ।
03187040c ಅಶಿಶುಃ ಶಿಶುರೂಪೇಣ ಯಾವದ್ಬ್ರಹ್ಮಾ ನ ಬುಧ್ಯತೇ।।
ಮುನಿಸತ್ತಮ! ಆ ಎಲ್ಲ ಕಾಲವೂ ಬ್ರಹ್ಮನು ಎಚ್ಚತ್ತುವವರೆಗೆ ಶಿಶುವಲ್ಲದಿದ್ದರೂ ಶಿಶುವಿನ ರೂಪದಲ್ಲಿ ಇಲ್ಲಿಯೇ ಇರುತ್ತೇನೆ.
03187041a ಮಯಾ ಚ ವಿಪ್ರ ದತ್ತೋಽಯಂ ವರಸ್ತೇ ಬ್ರಹ್ಮರೂಪಿಣಾ।
03187041c ಅಸಕೃತ್ಪರಿತುಷ್ಟೇನ ವಿಪ್ರರ್ಷಿಗಣಪೂಜಿತ।।
ವಿಪ್ರ! ವಿಪ್ರರ್ಷಿಗಣಪೂಜಿತನಾದ ನಿನ್ನಿಂದ ನಾನು ಬಹಳಷ್ಟು ಬಾರಿ ಸಂತುಷ್ಟನಾಗಿ ಬ್ರಹ್ಮರೂಪದಲ್ಲಿರುವಾಗ ನಿನಗೆ ಈ ವರವನ್ನು ನೀಡಿದ್ದೆ.
03187042a ಸರ್ವಮೇಕಾರ್ಣವಂ ದೃಷ್ಟ್ವಾ ನಷ್ಟಂ ಸ್ಥಾವರಜಂಗಮಂ।
03187042c ವಿಕ್ಲವೋಽಸಿ ಮಯಾ ಜ್ಞಾತಸ್ತತಸ್ತೇ ದರ್ಶಿತಂ ಜಗತ್।।
ಎಲ್ಲವೂ ಒಂದೇ ನೀರಾಗಿ ಸ್ಥಾವರಜಂಗಮಗಳು ನಷ್ಟವಾದುದನ್ನು ನೋಡಿ ನೀನು ಗಾಬರಿಗೊಂಡೆ. ಆದುದರಿಂದ ನಾನು ನಿನಗೆ ಜಗತ್ತನ್ನು ತೋರಿಸಿ ತಿಳಿಸಿದೆ.
03187043a ಅಭ್ಯಂತರಂ ಶರೀರಸ್ಯ ಪ್ರವಿಷ್ಟೋಽಸಿ ಯದಾ ಮಮ।
03187043c ದೃಷ್ಟ್ವಾ ಲೋಕಂ ಸಮಸ್ತಂ ಚ ವಿಸ್ಮಿತೋ ನಾವಬುಧ್ಯಸೇ।।
03187044a ತತೋಽಸಿ ವಕ್ತ್ರಾದ್ವಿಪ್ರರ್ಷೇ ದ್ರುತಂ ನಿಃಸಾರಿತೋ ಮಯಾ।
03187044c ಆಖ್ಯಾತಸ್ತೇ ಮಯಾ ಚಾತ್ಮಾ ದುರ್ಜ್ಞೇಯೋಽಪಿ ಸುರಾಸುರೈಃ।।
ವಿಪ್ರರ್ಷೇ! ನೀನು ನನ್ನ ಶರೀರವನ್ನು ಪ್ರವೇಶಿಸಿ ಅಲ್ಲಿ ಸಮಸ್ತ ಲೋಕವನ್ನೂ ನೋಡಿ ವಿಸ್ಮಿತನಾಗಿ ತಿಳಿಯದಾದೆ. ಆಗ ನಾನು ನನ್ನ ಬಾಯಿಯಿಂದಲೇ, ಸುರಾಸುರರಿಗೂ ತಿಳಿಯಲಿಕ್ಕಾಗದ, ನಾನು ಯಾರೆಂದು ನಿನಗೆ ವಿವರಿಸಿದ್ದೇನೆ.
03187045a ಯಾವತ್ಸ ಭಗವಾನ್ಬ್ರಹ್ಮಾ ನ ಬುಧ್ಯತಿ ಮಹಾತಪಾಃ।
03187045c ತಾವತ್ತ್ವಮಿಹ ವಿಪ್ರರ್ಷೇ ವಿಶ್ರಬ್ಧಶ್ಚರ ವೈ ಸುಖಂ।।
ವಿಪ್ರರ್ಷೇ! ಮಹಾತಪಸ್ವಿ ಭಗವಾನ್ ಬ್ರಹ್ಮನು ಎಚ್ಚೆತ್ತು ಏಳುವ ತನಕ ನೀನು ಇಲ್ಲಿ ಸುಖವಾಗಿ ತಿರುಗಾಡಿಕೊಂಡಿರು.
03187046a ತತೋ ವಿಬುದ್ಧೇ ತಸ್ಮಿಂಸ್ತು ಸರ್ವಲೋಕಪಿತಾಮಹೇ।
03187046c ಏಕೀಭೂತೋ ಹಿ ಸ್ರಕ್ಷ್ಯಾಮಿ ಶರೀರಾದ್ದ್ವಿಜಸತ್ತಮ।।
03187047a ಆಕಾಶಂ ಪೃಥಿವೀಂ ಜ್ಯೋತಿರ್ವಾಯುಂ ಸಲಿಲಮೇವ ಚ।
03187047c ಲೋಕೇ ಯಚ್ಚ ಭವೇಚ್ಚೇಷಮಿಹ ಸ್ಥಾವರಜಂಗಮಂ।।
ದ್ವಿಜಸತ್ತಮ! ಸರ್ವಲೋಕಪಿತಾಮಹನು ಎಚ್ಚೆತ್ತಾಗ ಏಕಾಂಗಿಯಾಗಿ ಶರೀರದಿಂದಲೇ ಆಕಾಶ, ಪೃಥ್ವಿ, ಜ್ಯೋತಿ, ವಾಯು, ಸಲಿಲಗಳನ್ನೂ ಲೋಕಗಳಲ್ಲಿ ಬೇರೆ ಏನೆಲ್ಲ ಸ್ಥಾವರಜಂಗಮಗಳು ಇವೆಯೋ ಅವೆಲ್ಲವನ್ನೂ ಸೃಷ್ಟಿಸುತ್ತೇನೆ.””
03187048 ಮಾರ್ಕಂಡೇಯ ಉವಾಚ।
03187048a ಇತ್ಯುಕ್ತ್ವಾಂತರ್ಹಿತಸ್ತಾತ ಸ ದೇವಃ ಪರಮಾದ್ಭುತಃ।
03187048c ಪ್ರಜಾಶ್ಚೇಮಾಃ ಪ್ರಪಶ್ಯಾಮಿ ವಿಚಿತ್ರಾ ಬಹುಧಾಕೃತಾಃ।।
ಮಾರ್ಕಂಡೇಯನು ಹೇಳಿದನು: “ಮಗೂ! ಅವನು ಹೀಗೆ ಹೇಳಿದ ನಂತರ ಆ ಪರಮಾದ್ಭುತ ದೇವನು ಅಂತರ್ಧಾನನಾಗುತ್ತಾನೆ, ಮತ್ತು ನಾನು ಈ ವಿಚಿತ್ರ ಬಹುಧಾಕಾರಗಳ ಪ್ರಜೆಗಳನ್ನು ನೋಡುತ್ತೇನೆ.
03187049a ಏತದ್ದೃಷ್ಟಂ ಮಯಾ ರಾಜಂಸ್ತಸ್ಮಿನ್ಪ್ರಾಪ್ತೇ ಯುಗಕ್ಷಯೇ।
03187049c ಆಶ್ಚರ್ಯಂ ಭರತಶ್ರೇಷ್ಠ ಸರ್ವಧರ್ಮಭೃತಾಂ ವರ।।
ರಾಜನ್! ಭರತಶ್ರೇಷ್ಠ! ಎಲ್ಲ ಧರ್ಮಭೃತರಲ್ಲಿ ಶ್ರೇಷ್ಠ! ಈ ರೀತಿ ನಾನು ಯುಗಕ್ಷಯವು ಪ್ರಾಪ್ತವಾದಾಗ ಆಶ್ಚರ್ಯವನ್ನು ಕಂಡೆ.
03187050a ಯಃ ಸ ದೇವೋ ಮಯಾ ದೃಷ್ಟಃ ಪುರಾ ಪದ್ಮನಿಭೇಕ್ಷಣಃ।
03187050c ಸ ಏಷ ಪುರುಷವ್ಯಾಘ್ರ ಸಂಬಂಧೀ ತೇ ಜನಾರ್ದನಃ।।
ಪುರುಷವ್ಯಾಘ್ರ! ಹಿಂದೆ ಪದ್ಮನಿಭೇಕ್ಷಣನಾದ ಯಾವ ದೇವನನ್ನು ನಾನು ನೋಡಿದೆನೋ ಅವನೇ ನಿನ್ನ ಸಂಬಂಧಿಯಾದ ಜನಾರ್ದನ.
03187051a ಅಸ್ಯೈವ ವರದಾನಾದ್ಧಿ ಸ್ಮೃತಿರ್ನ ಪ್ರಜಹಾತಿ ಮಾಂ।
03187051c ದೀರ್ಘಮಾಯುಶ್ಚ ಕೌಂತೇಯ ಸ್ವಚ್ಚಂದಮರಣಂ ತಥಾ।।
ಕೌಂತೇಯ! ಅವನ ವರದಾನದಿಂದಲೇ ನನ್ನ ನೆನಪು ಮರೆತುಹೋಗಿಲ್ಲ ಮತ್ತು ದೀರ್ಘಾಯುಷಿಯಾಗಿ, ಸ್ವಚ್ಛಂದ ಮರಣಿಯಾಗಿದ್ದೇನೆ.
03187052a ಸ ಏಷ ಕೃಷ್ಣೋ ವಾರ್ಷ್ಣೇಯಃ ಪುರಾಣಪುರುಷೋ ವಿಭುಃ।
03187052c ಆಸ್ತೇ ಹರಿರಚಿಂತ್ಯಾತ್ಮಾ ಕ್ರೀಡನ್ನಿವ ಮಹಾಭುಜಃ।।
ಅವನೇ ಈ ಕೃಷ್ಣ, ವಾರ್ಷ್ಣೇಯ, ಪುರಾಣ ಪುರುಷ, ವಿಭು, ಹರಿ, ಅಚಿಂತ್ಯಾತ್ಮ, ಮಹಾಭುಜ. ಆಡುವವನಂತೆ ಕುಳಿತುಕೊಂಡಿರುವವನು.
03187053a ಏಷ ಧಾತಾ ವಿಧಾತಾ ಚ ಸಂಹರ್ತಾ ಚೈವ ಸಾತ್ವತಃ।
03187053c ಶ್ರೀವತ್ಸವಕ್ಷಾ ಗೋವಿಂದಃ ಪ್ರಜಾಪತಿಪತಿಃ ಪ್ರಭುಃ।।
ಇವನೇ ಧಾತಾ, ವಿಧಾತಾ, ಮತ್ತು ಸಾತ್ವತರ ಸಂಹರ್ತಾ, ಶ್ರೀವತ್ಸವಕ್ಷ, ಗೋವಿಂದ, ಪ್ರಜಾಪತಿಪತಿ ಮತ್ತು ಪ್ರಭು.
03187054a ದೃಷ್ಟ್ವೇಮಂ ವೃಷ್ಣಿಶಾರ್ದೂಲಂ ಸ್ಮೃತಿರ್ಮಾಮಿಯಮಾಗತಾ।
03187054c ಆದಿದೇವಮಜಂ ವಿಷ್ಣುಂ ಪುರುಷಂ ಪೀತವಾಸಸಂ।।
ಈ ವೃಷ್ಣಿಶಾರ್ದೂಲನನ್ನು ನೋಡಿದಾಗ ಇವನು ಆದಿದೇವ, ಅಜ, ವಿಷ್ಣು, ಪುರುಷ, ಪೀತವಾಸಸನೆಂದು ನನಗೆ ನೆನಪಾಯಿತು.
03187055a ಸರ್ವೇಷಾಮೇವ ಭೂತಾನಾಂ ಪಿತಾ ಮಾತಾ ಚ ಮಾಧವಃ।
03187055c ಗಚ್ಚಧ್ವಮೇನಂ ಶರಣಂ ಶರಣ್ಯಂ ಕೌರವರ್ಷಭಾಃ।।
ಕೌರವರ್ಷಭ! ಈ ಎಲ್ಲ ಇರುವವುಗಳ ಮಾತಾಪಿತನಾದ ಈ ಮಾಧವ ಶರಣ್ಯನಲ್ಲಿ ಶರಣು ಹೋಗು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಭವಿಷ್ಯಕಥನೇ ಸಪ್ತಶೀತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಭವಿಷ್ಯಕಥನದಲ್ಲಿ ನೂರಾಎಂಭತ್ತೇಳನೆಯ ಅಧ್ಯಾಯವು.