179 ಕಾಮ್ಯಕವನಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 179

ಸಾರ

ದ್ವೈತವನದಲ್ಲಿ ಮಳೆಗಾಲದ ವರ್ಣನೆ (1-18).

03179001 ವೈಶಂಪಾಯನ ಉವಾಚ।
03179001a ನಿದಾಘಾಂತಕರಃ ಕಾಲಃ ಸರ್ವಭೂತಸುಖಾವಹಃ।
03179001c ತತ್ರೈವ ವಸತಾಂ ತೇಷಾಂ ಪ್ರಾವೃಟ್ಸಮಭಿಪದ್ಯತ।।

ವೈಶಂಪಾಯನನು ಹೇಳಿದನು: “ಅಲ್ಲಿ ಅವರು ವಾಸಿಸುತ್ತಿರುವಾಗ ಬೇಸಗೆಯನ್ನು ಕೊನೆಗೊಳಿಸುವ, ಸರ್ವಭೂತಗಳಿಗೂ ಸುಖಕರ ಮಳೆಗಾಲವು ಪ್ರಾರಂಭವಾಯಿತು.

03179002a ಚಾದಯಂತೋ ಮಹಾಘೋಷಾಃ ಖಂ ದಿಶಶ್ಚ ಬಲಾಹಕಾಃ।
03179002c ಪ್ರವವರ್ಷುರ್ದಿವಾರಾತ್ರಮಸಿತಾಃ ಸತತಂ ತದಾ।।

ಆಗ ಆಕಾಶ ಮತ್ತು ಎಲ್ಲ ದಿಕ್ಕುಗಳನ್ನೂ ಆವರಿಸಿ, ಜೋರಾಗಿ ಗುಡುಗುವ ಕಪ್ಪು ಮೋಡಗಳು ಒಂದೇ ಸಮನೆ ದಿನರಾತ್ರಿಯೂ ಮಳೆಸುರಿಸಲು ಪ್ರಾರಂಭಿಸಿದವು.

03179003a ತಪಾತ್ಯಯನಿಕೇತಾಶ್ಚ ಶತಶೋಽಥ ಸಹಸ್ರಶಃ।
03179003c ಅಪೇತಾರ್ಕಪ್ರಭಾಜಾಲಾಃ ಸವಿದ್ಯುದ್ವಿಮಲಪ್ರಭಾಃ।।
03179004a ವಿರೂಢಶಷ್ಪಾ ಪೃಥಿವೀ ಮತ್ತದಂಶಸರೀಸೃಪಾ।
03179004c ಬಭೂವ ಪಯಸಾ ಸಿಕ್ತಾ ಶಾಂತಧೂಮರಜೋಽರುಣಾ।।

ನೂರಾರು ಸಾವಿರಾರು ಸಂಖ್ಯೆಗಳ ಈ ಮಳೆಗಾಲದ ಮೋಡಗಳು ಗೋಪುರಗಳಂತೆ ಕಂಡವು. ಭೂಮಿಯಿಂದ ಸೂರ್ಯನ ಪ್ರತಾಪವೇ ಇಲ್ಲದಂತಾಗಿ, ಬದಲಾಗಿ ಮಿಂಚಿನ ಪ್ರಭೆಯೇ ಬೆಳಕನ್ನು ತಂದಿತು. ಬೆಳೆದ ಹುಲ್ಲು ಸಸ್ಯಗಳಿಂದ ತುಂಬಿದ ಭೂಮಿಯು ಎಲ್ಲರಿಗೂ ಸಂತಸವನ್ನು ತಂದಿತು. ಮಳೆಯಿಂದ ತೋಯ್ದ ಸರೀಸರ್ಪಗಳು ತಂಪಾಗಿ ಸಂತಸಗೊಂಡವು.

03179005a ನ ಸ್ಮ ಪ್ರಜ್ಞಾಯತೇ ಕಿಂ ಚಿದಂಭಸಾ ಸಮವಸ್ತೃತೇ।
03179005c ಸಮಂ ವಾ ವಿಷಮಂ ವಾಪಿ ನದ್ಯೋ ವಾ ಸ್ಥಾವರಾಣಿ ವಾ।।

ನೆಲದ ಮೇಲೆಲ್ಲಾ ನೀರು ತುಂಬಿರಲು ನೆಲದಲ್ಲಿನ ಏರು ತಗ್ಗುಗಳು ಕಾಣದಂತಾಯಿತು; ನದಿಯಿದೆಯೋ, ಕಾಡಿದೆಯೋ ಏನೂ ತೋರದಂತಾಯಿತು.

03179006a ಕ್ಷುಬ್ಧತೋಯಾ ಮಹಾಘೋಷಾಃ ಶ್ವಸಮಾನಾ ಇವಾಶುಗಾಃ।
03179006c ಸಿಂಧವಃ ಶೋಭಯಾಂ ಚಕ್ರುಃ ಕಾನನಾನಿ ತಪಾತ್ಯಯೇ।।

ಬೇಸಗೆಯು ಕೊನೆಗೊಳ್ಳಲು ತುಂಬಿದ ನದಿಗಳು ಭುಸುಗುಟ್ಟುವ ಸರ್ಪಗಳಂತೆ ಜೋರಾಗಿ ಆರ್ಭಟಿಸುತ್ತಾ ಅತಿ ವೇಗದಲ್ಲಿ ಕಾಡುಗಳಲ್ಲಿ ಹರಿದವು.

03179007a ನದತಾಂ ಕಾನನಾಂತೇಷು ಶ್ರೂಯಂತೇ ವಿವಿಧಾಃ ಸ್ವನಾಃ।
03179007c ವೃಷ್ಟಿಭಿಸ್ತಾಡ್ಯಮಾನಾನಾಂ ವರಾಹಮೃಗಪಕ್ಷಿಣಾಂ।।

ಮಳೆಯ ಹೊಡೆತಕ್ಕೆ ಸಿಲುಕಿದ ಹಂದಿಗಳು, ಜಿಂಕೆಗಳು ಮತ್ತು ಪಕ್ಷಿಗಳು ವಿವಿಧ ರೀತಿಗಳಲ್ಲಿ ಕೂಗಾಡುವುದು ಕಾನನದ ಕೊನೆಯವರೆಗೂ ಕೇಳಿಬರುತ್ತಿತ್ತು.

03179008a ಸ್ತೋಕಕಾಃ ಶಿಖಿನಶ್ಚೈವ ಪುಂಸ್ಕೋಕಿಲಗಣೈಃ ಸಹ।
03179008c ಮತ್ತಾಃ ಪರಿಪತಂತಿ ಸ್ಮ ದರ್ದುರಾಶ್ಚೈವ ದರ್ಪಿತಾಃ।।
03179009a ತಥಾ ಬಹುವಿಧಾಕಾರಾ ಪ್ರಾವೃಣ್ಮೇಘಾನುನಾದಿತಾ।
03179009c ಅಭ್ಯತೀತಾ ಶಿವಾ ತೇಷಾಂ ಚರತಾಂ ಮರುಧನ್ವಸು।।
03179010a ಕ್ರೌಂಚಹಂಸಗಣಾಕೀರ್ಣಾ ಶರತ್ಪ್ರಣಿಹಿತಾಭವತ್।
03179010c ರೂಢಕಕ್ಷವನಪ್ರಸ್ಥಾ ಪ್ರಸನ್ನಜಲನಿನ್ನಗಾ।।
03179011a ವಿಮಲಾಕಾಶನಕ್ಷತ್ರಾ ಶರತ್ತೇಷಾಂ ಶಿವಾಭವತ್।
03179011c ಮೃಗದ್ವಿಜಸಮಾಕೀರ್ಣಾ ಪಾಂಡವಾನಾಂ ಮಹಾತ್ಮನಾಂ।।
03179012a ಪಶ್ಯಂತಃ ಶಾಂತರಜಸಃ ಕ್ಷಪಾ ಜಲದಶೀತಲಾಃ।
03179012c ಗ್ರಹನಕ್ಷತ್ರಸಂಘೈಶ್ಚ ಸೋಮೇನ ಚ ವಿರಾಜಿತಾಃ।।
03179013a ಕುಮುದೈಃ ಪುಂಡರೀಕೈಶ್ಚ ಶೀತವಾರಿಧರಾಃ ಶಿವಾಃ।
03179013c ನದೀಃ ಪುಷ್ಕರಿಣೀಶ್ಚೈವ ದದೃಶುಃ ಸಮಲಂಕೃತಾಃ।।
03179014a ಆಕಾಶನೀಕಾಶತಟಾಂ ನೀಪನೀವಾರಸಂಕುಲಾಂ।
03179014c ಬಭೂವ ಚರತಾಂ ಹರ್ಷಃ ಪುಣ್ಯತೀರ್ಥಾಂ ಸರಸ್ವತೀಂ।।
03179015a ತೇ ವೈ ಮುಮುದಿರೇ ವೀರಾಃ ಪ್ರಸನ್ನಸಲಿಲಾಂ ಶಿವಾಂ।
03179015c ಪಶ್ಯಂತೋ ದೃಢಧನ್ವಾನಃ ಪರಿಪೂರ್ಣಾಂ ಸರಸ್ವತೀಂ।।
03179016a ತೇಷಾಂ ಪುಣ್ಯತಮಾ ರಾತ್ರಿಃ ಪರ್ವಸಂಧೌ ಸ್ಮ ಶಾರದೀ।
03179016c ತತ್ರೈವ ವಸತಾಮಾಸೀತ್ಕಾರ್ತ್ತಿಕೀ ಜನಮೇಜಯ।।
03179017a ಪುಣ್ಯಕೃದ್ಭಿರ್ಮಹಾಸತ್ತ್ವೈಸ್ತಾಪಸೈಃ ಸಹ ಪಾಂಡವಾಃ।
03179017c ತತ್ಸರ್ವಂ ಭರತಶ್ರೇಷ್ಠಾಃ ಸಮೂಹುರ್ಯೋಗಮುತ್ತಮಂ।।
03179018a ತಮಿಸ್ರಾಭ್ಯುದಯೇ ತಸ್ಮಿನ್ಧೌಮ್ಯೇನ ಸಹ ಪಾಂಡವಾಃ।
03179018c ಸೂತೈಃ ಪೌರೋಗವೈಶ್ಚೈವ ಕಾಮ್ಯಕಂ ಪ್ರಯಯುರ್ವನಂ।।

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಕಾಮ್ಯಕವನಪ್ರವೇಶೇ ಏಕೋನಶೀತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಕಾಮ್ಯಕವನಪ್ರವೇಶದಲ್ಲಿ ನೂರಾಎಪ್ಪತ್ತೊಂಭತ್ತನೆಯ ಅಧ್ಯಾಯವು.