173 ಗಂಧಮಾದನಪ್ರಸ್ಥಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಅಜಗರ ಪರ್ವ

ಅಧ್ಯಾಯ 173

ಸಾರ

ವನವಾಸದ ಹತ್ತು ವರ್ಷಗಳು ತುಂಬಲು ಭೀಮನು ಯುಧಿಷ್ಠಿರನಿಗೆ ಯುದ್ಧದ ವಿಷಯವಾಗಿ ಮಾತನಾಡುವುದು (1-16). ಯುಧಿಷ್ಠಿರನು ಗಂಧಮಾದನ ಪರ್ವತದಿಂದ ಇಳಿಯುವುದು (17-22).

03173001 ಜನಮೇಜಯ ಉವಾಚ।
03173001a ತಸ್ಮಿನ್ ಕೃತಾಸ್ತ್ರೇ ರಥಿನಾಂ ಪ್ರಧಾನೇ। ಪ್ರತ್ಯಾಗತೇ ಭವನಾದ್ವೃತ್ರಹಂತುಃ।
03173001c ಅತಃ ಪರಂ ಕಿಮಕುರ್ವಂತ ಪಾರ್ಥಾಃ। ಸಮೇತ್ಯ ಶೂರೇಣ ಧನಂಜಯೇನ।।

ಜನಮೇಜಯನು ಹೇಳಿದನು: “ಕೃತಾರ್ಥನಾದ ಆ ರಥಿಗಳಲ್ಲಿ ಪ್ರಧಾನನು ವೃತ್ರಹಂತುವಿನ ಭವನದಿಂದ ಹಿಂದಿರುಗಿದ ನಂತರ ಶೂರ ಧನಂಜಯನೊಂದಿಗೆ ಸೇರಿ ಆ ಪಾರ್ಥರು ಏನು ಮಾಡಿದರು?”

03173002 ವೈಶಂಪಾಯನ ಉವಾಚ।
03173002a ವನೇಷು ತೇಷ್ವೇವ ತು ತೇ ನರೇಂದ್ರಾಃ। ಸಹಾರ್ಜುನೇನೇಂದ್ರಸಮೇನ ವೀರಾಃ।
03173002c ತಸ್ಮಿಂಶ್ಚ ಶೈಲಪ್ರವರೇ ಸುರಮ್ಯೇ। ಧನೇಶ್ವರಾಕ್ರೀಡಗತಾ ವಿಜಃರುಃ।।

ವೈಶಂಪಾಯನನು ಹೇಳಿದನು: “ಅದೇ ವನದಲ್ಲಿ ಆ ನರೇಂದ್ರರು ಇಂದ್ರಸಮಾನನಾದ ಅರ್ಜುನನೊಂದಿಗೆ ಸುರಮ್ಯವಾದ ಧನೇಶ್ವರನ ಶೈಲಪ್ರವರದಮೇಲೆ ಕ್ರೀಡಾನುಗತರಾಗಿದ್ದರು.

03173003a ವೇಶ್ಮಾನಿ ತಾನ್ಯಪ್ರತಿಮಾನಿ ಪಶ್ಯನ್। ಕ್ರೀಡಾಶ್ಚ ನಾನಾದ್ರುಮಸಮ್ನಿಕರ್ಷಾಃ।
03173003c ಚಚಾರ ಧನ್ವೀ ಬಹುಧಾ ನರೇಂದ್ರಃ। ಸೋಽಸ್ತ್ರೇಷು ಯತ್ತಃ ಸತತಂ ಕಿರೀಟೀ।।

ಆ ಅಪ್ರತಿಮ ಕಟ್ಟಡಗಳನ್ನು ಮತ್ತು ನಾನಾ ದ್ರುಮಗಳಿಂದ ಕೂಡಿದ್ದ ಕ್ರೀಡಾಪ್ರದೇಶವನ್ನು ನೋಡಿ ಸತತವೂ ತನ್ನ ಅಸ್ತ್ರಗಳಲ್ಲಿಯೇ ಮಗ್ನನಾದ, ಆ ಕಿರೀಟಿ ಧನ್ವಿ ನರೇಂದ್ರನು ತುಂಬಾ ತಿರುಗಾಡಿದನು.

03173004a ಅವಾಪ್ಯ ವಾಸಂ ನರದೇವಪುತ್ರಾಃ। ಪ್ರಸಾದಜಂ ವೈಶ್ರವಣಸ್ಯ ರಾಜ್ಞಃ।
03173004c ನ ಪ್ರಾಣಿನಾಂ ತೇ ಸ್ಪೃಹಯಂತಿ ರಾಜಂ। ಶಿವಶ್ಚ ಕಾಲಃ ಸ ಬಭೂವ ತೇಷಾಂ।।

ರಾಜನ್! ರಾಜ ವೈಶ್ರವಣನ ಕೃಪೆಯಿಂದ ವಾಸಸ್ಥಳವನ್ನು ಪಡೆದ ಆ ನರದೇವಪುತ್ರರು ಪ್ರಾಣಿಗಳು ಬಯಸುವ ಸುಖವನ್ನು ಬಯಸದೇ ಅವರು ಕಳೆದ ಸಮಯವು ಶುಭವಾಗಿತ್ತು.

03173005a ಸಮೇತ್ಯ ಪಾರ್ಥೇನ ಯಥೈಕರಾತ್ರಂ। ಊಷುಃ ಸಮಾಸ್ತತ್ರ ತದಾ ಚತಸ್ರಃ।
03173005c ಪೂರ್ವಾಶ್ಚ ಷಟ್ತಾ ದಶ ಪಾಂಡವಾನಾಂ। ಶಿವಾ ಬಭೂವುರ್ವಸತಾಂ ವನೇಷು।।

ಪಾರ್ಥನನ್ನು ಸೇರಿದ ಅವರು ನಾಲ್ಕು ವರ್ಷಗಳನ್ನು ಕಳೆದರು ಮತ್ತು ಅಲ್ಲಿ ಕಳೆದ ವರ್ಷಗಳು ಒಂದೇ ರಾತ್ರಿಯಂತೆ ಕಳೆದುಹೋಯಿತು. ಹಿಂದಿನ ಆರು ವರ್ಷಗಳನ್ನೂ ಸೇರಿ ಪಾಂಡವರು ಮಂಗಳಕರ ವನಗಳಲ್ಲಿ ಹತ್ತು ವರ್ಷಗಳು ವಾಸಿಸಿದರು.

03173006a ತತೋಽಬ್ರವೀದ್ವಾಯುಸುತಸ್ತರಸ್ವೀ। ಜಿಷ್ಣುಶ್ಚ ರಾಜಾನಮುಪೋಪವಿಶ್ಯ।
03173006c ಯಮೌ ಚ ವೀರೌ ಸುರರಾಜಕಲ್ಪಾವ್। ಏಕಾಂತಮಾಸ್ಥಾಯ ಹಿತಂ ಪ್ರಿಯಂ ಚ।।

ಜಿಷ್ಣು, ಸುರರಾಜನಂತಿದ್ದ ವೀರ ಯಮಳರು ಏಕಾಂತದಲ್ಲಿ ರಾಜನೊಂದಿಗೆ ಕುಳಿತುಕೊಂಡ ನಂತರ ತರಸ್ವೀ ವಾಯುಸುತನು ಹಿತವೂ ಪ್ರಿಯವೂ ಆದ ಈ ಮಾತುಗಳನ್ನಾಡಿದನು:

03173007a ತವ ಪ್ರತಿಜ್ಞಾಂ ಕುರುರಾಜ ಸತ್ಯಾಂ। ಚಿಕೀರ್ಷಮಾಣಾಸ್ತ್ವದನು ಪ್ರಿಯಂ ಚ।
03173007c ತತೋಽನುಗಚ್ಚಾಮ ವನಾನ್ಯಪಾಸ್ಯ। ಸುಯೋಧನಂ ಸಾನುಚರಂ ನಿಹಂತುಂ।।

“ಕುರುರಾಜ! ನಿನ್ನ ಪ್ರತಿಜ್ಞೆಯನ್ನು ಸತ್ಯವಾಗಿಸಲು ಮತ್ತು ನಿನಗೆ ಪ್ರಿಯವಾದುದನ್ನು ಮಾಡಲು ವನಕ್ಕೂ ನಿನ್ನನ್ನು ಅನುಸರಿಸಿ ಬಂದೆವು ಮತ್ತು ಸುಯೋಧನನ್ನು ಅವನ ಅನುಚರರೊಂದಿಗೆ ಸಂಹರಿಸಲಿಲ್ಲ.

03173008a ಏಕಾದಶಂ ವರ್ಷಮಿದಂ ವಸಾಮಃ ಸುಯೋಧನೇನಾತ್ತಸುಖಾಃ ಸುಖಾರ್ಹಾಃ।
03173008c ತಂ ವಂಚಯಿತ್ವಾಧಮಬುದ್ಧಿಶೀಲಂ। ಅಜ್ಞಾತವಾಸಂ ಸುಖಮಾಪ್ನುಯಾಮಃ।।

ಇದು ನಮ್ಮ ವನವಾಸದ ಹನ್ನೊಂದನೆಯ ವರ್ಷ! ಸುಯೋಧನನು ನಮ್ಮದಾಗಿದ್ದ ಉತ್ತಮ ಸುಖವನ್ನು ಕಸಿದುಕೊಂಡಿದ್ದಾನೆ. ಅತ್ಯಂತ ಕೀಳು ಬುದ್ಧಿ ಮತ್ತು ನಡತೆಯ ಅವನನ್ನು ವಂಚಿಸಿ ಅಜ್ಞಾತವಾಸವನ್ನು ಸುಖವಾಗಿ ಕಳೆಯೋಣ.

03173009a ತವಾಜ್ಞಯಾ ಪಾರ್ಥಿವ ನಿರ್ವಿಶಮ್ಕಾ। ವಿಹಾಯ ಮಾನಂ ವಿಚರನ್ವನಾನಿ।
03173009c ಸಮೀಪವಾಸೇನ ವಿಲೋಭಿತಾಸ್ತೇ। ಜ್ಞಾಸ್ಯಂತಿ ನಾಸ್ಮಾನಪಕೃಷ್ಟದೇಶಾನ್।।

ಪಾರ್ಥಿವ! ನಿನ್ನ ಆಜ್ಞೆಯಂತೆ ನಮ್ಮ ಗೌರವವನ್ನು ತೊರೆದು ನಿರ್ವಿಶಂಕರಾಗಿ ವನಗಳಲ್ಲಿ ಸಂಚರಿಸುತ್ತಿದ್ದೇವೆ. ಸಮೀಪದಲ್ಲಿಯೇ ವಾಸಿಸುತ್ತಿದ್ದುದರಿಂದ ನಾವು ಬೇರೆ ದೇಶಕ್ಕೆ ಹೋದರೆ ಅವರಿಗೆ ಗೊತ್ತಾಗುವುದಿಲ್ಲ.

03173010a ಸಂವತ್ಸರಂ ತಂ ತು ವಿಹೃತ್ಯ ಗೂಢಂ। ನರಾಧಮಂ ತಂ ಸುಖಮುದ್ಧರೇಮ।
03173010c ನಿರ್ಯಾತ್ಯ ವೈರಂ ಸಫಲಂ ಸಪುಷ್ಪಂ। ತಸ್ಮೈ ನರೇಂದ್ರಾಧಮಪೂರುಷಾಯ।।

ನರೇಂದ್ರ! ಗೂಢವಾಗಿ ವಾಸಿಸಿ ಆ ಒಂದು ವರ್ಷವನ್ನು ಕಳೆದನಂತರ ಆ ನರಾಧಮನನ್ನು ಸುಲಭವಾಗಿ ಸೋಲಿಸಬಹುದು. ಆ ಅಧಮ ಪುರುಷನ ವೈರದ ಮರವನ್ನು ಫಲ ಪುಷ್ಪಗಳೊಂದಿಗೆ ಕೀಳಬಹುದು.

03173011a ಸುಯೋಧನಾಯಾನುಚರೈರ್ವೃತಾಯ। ತತೋ ಮಹೀಮಾಹರ ಧರ್ಮರಾಜ।
03173011c ಸ್ವರ್ಗೋಪಮಂ ಶೈಲಮಿಮಂ ಚರದ್ಭಿಃ। ಶಕ್ಯೋ ವಿಹಂತುಂ ನರದೇವ ಶೋಕಃ।।

ಧರ್ಮರಾಜ! ಅನುಚರರಿಂದ ಆವೃತನಾದ ಸುಯೋಧನನ ನಂತರ ನೀನು ಈ ಭೂಮಿಯನ್ನು ಆಳು. ನರದೇವ! ಸ್ವರ್ಗೋಪಮ ಈ ಶೈಲದಲ್ಲಿ ತಿರುಗಾಡಬಹುದು. ಶೋಕವನ್ನು ತೊಲಗಿಸು.

03173012a ಕೀರ್ತಿಶ್ಚ ತೇ ಭಾರತ ಪುಣ್ಯಗಂಧಾ। ನಶ್ಯೇತ ಲೋಕೇಷು ಚರಾಚರೇಷು।
03173012c ತತ್ಪ್ರಾಪ್ಯ ರಾಜ್ಯಂ ಕುರುಪುಂಗವಾನಾಂ। ಶಕ್ಯಂ ಮಹತ್ಪ್ರಾಪ್ತಮಥ ಕ್ರಿಯಾಶ್ಚ।।

ಭಾರತ! ಪುಣ್ಯದ ಸುವಾಸುನೆಯಿಂದೊಡಗೂಡಿದ ನಿನ್ನ ಕೀರ್ತಿಯು ಲೋಕಗಳಲ್ಲಿ, ಚರಾಚರಗಳಲ್ಲಿ ನಾಶವಾಗುವುದಿಲ್ಲ. ಕುರುಪುಂಗವರ ರಾಜ್ಯವನ್ನು ಪಡೆದು ಮಹಾಕಾರ್ಯಗಳನ್ನೂ ಮಾಡಬಹುದು.

03173013a ಇದಂ ತು ಶಕ್ಯಂ ಸತತಂ ನರೇಂದ್ರ। ಪ್ರಾಪ್ತುಂ ತ್ವಯಾ ಯಲ್ಲಭಸೇ ಕುಬೇರಾತ್।
03173013c ಕುರುಷ್ವ ಬುದ್ಧಿಂ ದ್ವಿಷತಾಂ ವಧಾಯ। ಕೃತಾಗಸಾಂ ಭಾರತ ನಿಗ್ರಹೇ ಚ।।

ನರೇಂದ್ರ! ಕುಬೇರನಿಂದ ಈಗ ನೀನು ಪಡೆದುದೆಲ್ಲವನ್ನೂ ಸತತವಾಗಿ ಪಡೆಯಬಹುದು. ಭಾರತ! ದ್ವೇಷಿಗಳನ್ನು ವಧಿಸುವ, ನಿನಗೆ ಕೆಟ್ಟದ್ದನ್ನು ಮಾಡಿದವರನ್ನು ನಿಗ್ರಹಿಸುವ ಮನಸ್ಸುಮಾಡು.

03173014a ತೇಜಸ್ತವೋಗ್ರಂ ನ ಸಹೇತ ರಾಜನ್। ಸಮೇತ್ಯ ಸಾಕ್ಷಾದಪಿ ವಜ್ರಪಾಣಿಃ।
03173014c ನ ಹಿ ವ್ಯಥಾಂ ಜಾತು ಕರಿಷ್ಯತಸ್ತೌ। ಸಮೇತ್ಯ ದೇವೈರಪಿ ಧರ್ಮರಾಜ।।

ಧರ್ಮರಾಜ! ರಾಜನ್! ಸಾಕ್ಷಾದ್ ವಜ್ರಪಾಣಿಯೇ ನಿನ್ನನ್ನು ಭೇಟಿಮಾಡಿದರೆ ನಿನ್ನ ಈ ಉಗ್ರ ತೇಜಸ್ಸನ್ನು ಸಹಿಸಲಾರ. ದೇವತೆಗಳೆಲ್ಲರೂ ಒಟ್ಟಾಗಿ ಬಂದರೂ ನೀನು ಏನು ಮಾಡಬೇಕೆಂದು ಬಯಸಿದ್ದೀಯೋ ಅದಕ್ಕೆ ತಡೆಯೊಡ್ಡಲಾರರು.

03173015a ತ್ವದರ್ಥಸಿದ್ಧ್ಯರ್ಥಮಭಿಪ್ರವೃತ್ತೌ। ಸುಪರ್ಣಕೇತುಶ್ಚ ಶಿನೇಶ್ಚ ನಪ್ತಾ।
03173015c ಯಥೈವ ಕೃಷ್ಣೋಽಪ್ರತಿಮೋ ಬಲೇನ। ತಥೈವ ರಾಜನ್ಸ ಶಿನಿಪ್ರವೀರಃ।।

ಶಿನಿಪ್ರವೀರ ಕೃಷ್ಣನು ಹೇಗೆ ಬಲದಲ್ಲಿ ತನ್ನ ಸಮಾನರನ್ನು ಕಾಣುವುದಿಲ್ಲವೋ ಹಾಗೆ ಸುಪರ್ಣಕೇತು ಮತ್ತು ಶಿನಿ ಇವರೀರ್ವರೂ ಎಂದೂ ದುಃಖವನ್ನು ಹೊಂದುವುದಿಲ್ಲ.

03173016a ತವಾರ್ಥಸಿದ್ಧ್ಯರ್ಥಮಭಿಪ್ರವೃತ್ತೌ। ಯಥೈವ ಕೃಷ್ಣಃ ಸಹ ಯಾದವೈಸ್ತೈಃ।
03173016c ತಥೈವ ಚಾವಾಂ ನರದೇವವರ್ಯ। ಯಮೌ ಚ ವೀರೌ ಕೃತಿನೌ ಪ್ರಯೋಗೇ।।
03173016e ತ್ವದರ್ಥಯೋಗಪ್ರಭವಪ್ರಧಾನಾಃ। ಸಮಂ ಕರಿಷ್ಯಾಮ ಪರಾನ್ಸಮೇತ್ಯ।।

ನರದೇವವರ್ಯ! ಕೃಷ್ಣ ಮತ್ತು ಯಾದವರು ಒಟ್ಟಿಗೆ ಹೇಗೋ ಹಾಗೆ ಈ ವೀರ ಯಮಳರೂ ಕೂಡ ನಿನ್ನ ಅರ್ಥ ಮತ್ತು ಸಿದ್ಧಿಗಳಿಗಾಗಿ ಹೋರಾಡುತ್ತಾರೆ. ನಿನ್ನ ಗುರಿಯನ್ನು ತಲುಪಲು ಹೋರಾಡಬೇಕೆಂದಾದರೆ ನಾವೆಲ್ಲರೂ ಸೇರಿ ಹೋರಾಡುತ್ತೇವೆ.”

03173017a ತತಸ್ತದಾಜ್ಞಾಯ ಮತಂ ಮಹಾತ್ಮಾ। ತೇಷಾಂ ಸ ಧರ್ಮಸ್ಯ ಸುತೋ ವರಿಷ್ಠಃ।
03173017c ಪ್ರದಕ್ಷಿಣಂ ವೈಶ್ರವಣಾಧಿವಾಸಂ। ಚಕಾರ ಧರ್ಮಾರ್ಥವಿದುತ್ತಮೌಜಃ।।

ಹೀಗೆ ಅವರ ಅಭಿಪ್ರಾಯಗಳನ್ನು ತಿಳಿದ ಮಹಾತ್ಮ, ಧರ್ಮಸುತ, ಹಿರಿಯ, ಧರ್ಮಾರ್ಥವಿದು, ಉತ್ತಮೌಜಸನು ವೈಶ್ರವಣನ ಪೀಠಕ್ಕೆ ಪ್ರದಕ್ಷಿಣೆಮಾಡಿದನು.

03173018a ಆಮಂತ್ರ್ಯ ವೇಶ್ಮಾನಿ ನದೀಃ ಸರಾಂಸಿ। ಸರ್ವಾಣಿ ರಕ್ಷಾಂಸಿ ಚ ಧರ್ಮರಾಜಃ।
03173018c ಯಥಾಗತಂ ಮಾರ್ಗಮವೇಕ್ಷಮಾಣಃ। ಪುನರ್ಗಿರಿಂ ಚೈವ ನಿರೀಕ್ಷಮಾಣಃ।।

ತಾನು ಬಂದಿರುವ ದಾರಿಯನ್ನು ನೋಡುತ್ತಾ ಪುನಃ ಗಿರಿಯಕಡೆ ನೋಡುತ್ತಾ ಧರ್ಮರಾಜನು ಮನೆಗಳು, ನದಿಗಳು, ಸರೋವರಗಳು ಮತ್ತು ಸರ್ವ ರಾಕ್ಷಸರಿಗೆ ವಿದಾಯವನ್ನು ಹೇಳಿದನು.

03173019a ಸಮಾಪ್ತಕರ್ಮಾ ಸಹಿತಃ ಸುಹೃದ್ಭಿರ್। ಜಿತ್ವಾ ಸಪತ್ನಾನ್ಪ್ರತಿಲಭ್ಯ ರಾಜ್ಯಂ।
03173019c ಶೈಲೇಂದ್ರ ಭೂಯಸ್ತಪಸೇ ಧೃತಾತ್ಮಾ। ದ್ರಷ್ಟಾ ತವಾಸ್ಮೀತಿ ಮತಿಂ ಚಕಾರ।।

“ಶೈಲೇಂದ್ರ! ಸುಹೃದಯರೊಂದಿಗೆ ಕಾರ್ಯಗಳನ್ನೆಲ್ಲ ಮುಗಿಸಿ, ಶತ್ರುಗಳನ್ನು ಜಯಿಸಿ ರಾಜ್ಯವನ್ನು ಹಿಂದೆ ಪಡೆದು ಧೃತಾತ್ಮನಾಗಿ ನಿನ್ನ ಮೇಲೆ ತಪಸ್ಸು ಮಾಡಲು ಬರುತ್ತೇನೆ” ಎಂದು ಮನಸ್ಸು ಮಾಡಿದನು.

03173020a ವೃತಃ ಸ ಸರ್ವೈರನುಜೈರ್ದ್ವಿಜೈಶ್ಚ। ತೇನೈವ ಮಾರ್ಗೇಣ ಪತಿಃ ಕುರೂಣಾಂ।
03173020c ಉವಾಹ ಚೈನಾನ್ಸಗಣಾಂಸ್ತಥೈವ। ಘಟೋತ್ಕಚಃ ಪರ್ವತನಿರ್ಝರೇಷು।।

ಸರ್ವ ಅನುಜರು ಮತ್ತು ದ್ವಿಜರಿಂದ ಸುತ್ತುವರೆಯಲ್ಪಟ್ಟ ಆ ಕುರುಗಳ ನಾಯಕನನ್ನು ಅವನ ಗುಂಪಿನಲ್ಲಿದ್ದವರೆಲ್ಲರನ್ನೂ ಸೇರಿಸಿ ಪುನಃ ಘಟೋತ್ಕಚನು ಪರ್ವತ ಕಂದರಗಳಿಂದ ಕೆಳಗಿಳಿಸಿದನು.

03173021a ತಾನ್ಪ್ರಸ್ಥಿತಾನ್ಪ್ರೀತಿಮನಾ ಮಹರ್ಷಿಃ। ಪಿತೇವ ಪುತ್ರಾನನುಶಿಷ್ಯ ಸರ್ವಾನ್।
03173021c ಸ ಲೋಮಶಃ ಪ್ರೀತಮನಾ ಜಗಾಮ। ದಿವೌಕಸಾಂ ಪುಣ್ಯತಮಂ ನಿವಾಸಂ।।

ಅವರು ಹೊರಡುವಾಗ ಪ್ರೀತಿಮನಸ್ಕ ಮಹರ್ಷಿ ಲೋಮಶನು ತಂದೆಯು ಪುತ್ರರಿಗೆ ಹೇಗೋ ಹಾಗೆ ಉಪದೇಶಿಸಿ ಸಂತೋಷಗೊಂಡು ದಿವೌಕಸರ ಪುಣ್ಯತಮ ನಿವಾಸಕ್ಕೆ ತೆರಳಿದನು.

03173022a ತೇನಾನುಶಿಷ್ಟಾರ್ಷ್ಟಿಷೇಣೇನ ಚೈವ। ತೀರ್ಥಾನಿ ರಮ್ಯಾಣಿ ತಪೋವನಾನಿ।
03173022c ಮಹಾಂತಿ ಚಾನ್ಯಾನಿ ಸರಾಂಸಿ ಪಾರ್ಥಾಃ। ಸಂಪಶ್ಯಮಾನಾಃ ಪ್ರಯಯುರ್ನರಾಗ್ರ್ಯಾಃ।।

ಅವನಿಂದ ಮತ್ತು ಅರ್ಷ್ಟಿಷೇಣನಿಂದ ಉಪದೇಶವನ್ನು ಪಡೆದು ಆ ನರವ್ಯಾಘ್ರ ಪಾರ್ಥರು ರಮ್ಯ ತೀರ್ಥಗಳನ್ನೂ, ತಪೋವನಗಳನ್ನೂ, ಮತ್ತು ಅನ್ಯ ಮಹಾ ಸರೋವರಗಳಿಗೂ ಭೀಟಿ ಕೊಡುತ್ತಾ ತಮ್ಮ ಪ್ರಯಾಣವನ್ನು ಮುಂದುವರಿಸಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅಜಗರಪರ್ವಣಿ ಗಂಧಮಾದನಪ್ರಸ್ಥಾನೇ ತ್ರಿಸಪ್ತತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಅಜಗರಪರ್ವದಲ್ಲಿ ಗಂಧಮಾದನಪ್ರಸ್ಥಾನದಲ್ಲಿ ನೂರಾಎಪ್ಪತ್ಮೂರನೆಯ ಅಧ್ಯಾಯವು.