ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ತೀರ್ಥಯಾತ್ರಾ ಪರ್ವ
ಅಧ್ಯಾಯ 136
ಸಾರ
ಸೊಕ್ಕಿನಿಂದ ವಿನಾಶಹೊಂದುತ್ತೀಯೆ ಎಂದೂ ರೈಭ್ಯ ಮತ್ತು ಅವನ ಮಕ್ಕಳನ್ನು ಮೀರಿಸಲು ಪ್ರಯತ್ನಪಡಬೇಡವೆಂದು ಭರದ್ವಾಜನು ಮಗನಿಗೆ ಹೇಳುವುದು; ಯವಕ್ರಿಯು ಒಪ್ಪಿಕೊಳ್ಳುವುದು (1-18).
03136001 ಯವಕ್ರೀರುವಾಚ।
03136001a ಪ್ರತಿಭಾಸ್ಯಂತಿ ವೈ ವೇದಾ ಮಮ ತಾತಸ್ಯ ಚೋಭಯೋಃ।
03136001c ಅತಿ ಚಾನ್ಯಾನ್ಭವಿಷ್ಯಾವೋ ವರಾ ಲಬ್ಧಾಸ್ತಥಾ ಮಯಾ।।
ಯವಕ್ರಿಯು ಹೇಳಿದನು: “ತಂದೇ! ನಮಗಿಬ್ಬರಿಗೂ ವೇದಗಳು ಪ್ರಕಟಗೊಳ್ಳುತ್ತವೆ, ಮತ್ತು ಇತರರಿಗಿಂತ ಮೇಲಾಗಬಹುದು. ಈ ರೀತಿಯ ವರವನ್ನು ನಾನು ಪಡೆದಿದ್ದೇನೆ.”
03136002 ಭರದ್ವಾಜ ಉವಾಚ।
03136002a ದರ್ಪಸ್ತೇ ಭವಿತಾ ತಾತ ವರಾಽಲ್ಲಬ್ಧ್ವಾ ಯಥೇಪ್ಸಿತಾನ್।
03136002c ಸ ದರ್ಪಪೂರ್ಣಃ ಕೃಪಣಃ ಕ್ಷಿಪ್ರಮೇವ ವಿನಶ್ಯಸಿ।।
ಭರದ್ವಾಜನು ಹೇಳಿದನು: “ಮಗೂ! ನೀನು ಬಯಸಿದ ವರಗಳನ್ನು ಪಡೆದು ನಿನಗೆ ಹೆಮ್ಮೆಯಿನಿಸಿರಬಹುದು. ಆ ಸೊಕ್ಕು ತುಂಬಿ ನೀನು ಬೇಗನೇ ಅತಿ ಕೆಟ್ಟದಾಗಿ ವಿನಾಶವನ್ನು ಹೊಂದುತ್ತೀಯೆ.
03136003a ಅತ್ರಾಪ್ಯುದಾಹರಂತೀಮಾ ಗಾಥಾ ದೇವೈರುದಾಹೃತಾಃ।
03136003c ಋಷಿರಾಸೀತ್ಪುರಾ ಪುತ್ರ ಬಾಲಧಿರ್ನಾಮ ವೀರ್ಯವಾನ್।।
ಇದರ ಮೇಲೆ ಹಿಂದೆ ದೇವತೆಗಳು ಹೇಳಿದ ಗಾಥೆಯನ್ನು ಹೇಳುತ್ತಾರೆ: ಮಗನೇ! ಹಿಂದೆ ಬಾಲಧಿ ಎಂಬ ಹೆಸರಿನ ವೀರ್ಯವಂತ ಋಷಿಯಿದ್ದನು.
03136004a ಸ ಪುತ್ರಶೋಕಾದುದ್ವಿಗ್ನಸ್ತಪಸ್ತೇಪೇ ಸುದುಶ್ಚರಂ।
03136004c ಭವೇನ್ಮಮ ಸುತೋಽಮರ್ತ್ಯ ಇತಿ ತಂ ಲಬ್ಧವಾಂಶ್ಚ ಸಃ।।
ಅವನು ಪುತ್ರಶೋಕದಿಂದ ಉದ್ವಿಗ್ನನಾಗಿ ನನಗೆ ಅಮರನಾದ ಮಗನಾಗಲಿ ಎಂದು ದುಷ್ಕರ ತಪಸ್ಸನ್ನು ತಪಿಸಿದನು ಮತ್ತು ಅಂಥವನು ಅವನಿಗೆ ದೊರಕಿದ ಕೂಡ.
03136005a ತಸ್ಯ ಪ್ರಸಾದೋ ದೇವೈಶ್ಚ ಕೃತೋ ನ ತ್ವಮರೈಃ ಸಮಃ।
03136005c ನಾಮರ್ತ್ಯೋ ವಿದ್ಯತೇ ಮರ್ತ್ಯೋ ನಿಮಿತ್ತಾಯುರ್ಭವಿಷ್ಯತಿ।।
ದೇವತೆಗಳು ಅವನಿಗೆ ವರವನ್ನಿತ್ತರೂ ಅವನನ್ನು ಅಮರರಿಗೆ ಸಮನಾಗಿ ಮಾಡಲಿಲ್ಲ. ಮನುಷ್ಯರು ಅಮರರಾಗಿರುವುದಿಲ್ಲ. ಅವನ ಆಯಸ್ಸು ನಿಮಿತ್ತವಾಗುತ್ತದೆ.
03136006 ಬಾಲಧಿರುವಾಚ।
03136006a ಯಥೇಮೇ ಪರ್ವತಾಃ ಶಶ್ವತ್ತಿಷ್ಠಂತಿ ಸುರಸತ್ತಮಾಃ।
03136006c ಅಕ್ಷಯಾಸ್ತನ್ನಿಮಿತ್ತಂ ಮೇ ಸುತಸ್ಯಾಯುರ್ಭವೇದಿತಿ।।
ಬಾಲಧಿಯು ಹೇಳಿದನು: “ಸುರಸತ್ತಮರೇ! ಎಲ್ಲಿಯವರೆಗೆ ಈ ಪರ್ವತಗಳು ಶಾಶ್ವತವಾಗಿ ನಿಂತಿರುತ್ತವೆಯೋ ಅಲ್ಲಿಯವರೆಗೆ ನನ್ನ ಮಗನ ಆಯಸ್ಸು ಅಕ್ಷಯವಾಗಿ ಇರಲಿ ಎಂದು ನಿಮಿತ್ತವಾಗಿಸಿ.””
03136007 ಭರದ್ವಾಜ ಉವಾಚ।
03136007a ತಸ್ಯ ಪುತ್ರಸ್ತದಾ ಜಜ್ಞೇ ಮೇಧಾವೀ ಕ್ರೋಧನಃ ಸದಾ।
03136007c ಸ ತಚ್ಛೃತ್ವಾಕರೋದ್ದರ್ಪಮೃಷೀಂಶ್ಚೈವಾವಮನ್ಯತ।।
ಭರದ್ವಾಜನು ಹೇಳಿದನು: “ಅನಂತರ ಅವನಿಗೆ ಸದಾ ಕೋಪಿಷ್ಟನಾಗಿದ್ದ ಮೇಧಾವೀ ಮಗನು ಹುಟ್ಟಿದನು. ಅವನು ತನಗಿದ್ದ ವರದ ಕುರಿತು ಕೇಳಿ ಸೊಕ್ಕಿನಿಂದ ಋಷಿಗಳನ್ನು ಅಪಮಾನಿಸತೊಡಗಿದನು.
03136008a ವಿಕುರ್ವಾಣೋ ಮುನೀನಾಂ ತು ಚರಮಾಣೋ ಮಹೀಮಿಮಾಂ।
03136008c ಆಸಸಾದ ಮಹಾವೀರ್ಯಂ ಧನುಷಾಕ್ಷಂ ಮನೀಷಿಣಂ।।
ಮುನಿಗಳನ್ನು ಬೈಯುತ್ತಾ ಅವನು ಭೂಮಿಯ ಮೇಲೆ ತಿರುಗಾಡಿದನು. ಆಗ ಅವನು ಮಹಾವೀರ ಮನೀಷಿಣೀ ಧನುಷಾಕ್ಷನನ್ನು ಭೇಟಿಯಾದನು.
03136009a ತಸ್ಯಾಪಚಕ್ರೇ ಮೇಧಾವೀ ತಂ ಶಶಾಪ ಸ ವೀರ್ಯವಾನ್।
03136009c ಭವ ಭಸ್ಮೇತಿ ಚೋಕ್ತಃ ಸ ನ ಭಸ್ಮ ಸಮಪದ್ಯತ।।
ಮೇಧಾವಿಯು ಅವನನ್ನು ಅಪಮಾನಿಸಲು ಆ ವೀರ್ಯವಂತನು ಭಸ್ಮವಾಗು ಎಂದು ಅವನಿಗೆ ಶಪಿಸಿದನು. ಆದರೂ ಅವನು ಭಸ್ಮವಾಗಲಿಲ್ಲ.
03136010a ಧನುಷಾಕ್ಷಸ್ತು ತಂ ದೃಷ್ಟ್ವಾ ಮೇಧಾವಿನಮನಾಮಯಂ।
03136010c ನಿಮಿತ್ತಮಸ್ಯ ಮಹಿಷೈರ್ಭೇದಯಾಮಾಸ ವೀರ್ಯವಾನ್।।
ಶಾಪಕ್ಕೊಳಗಾಗದೇ ಇದ್ದ ಆ ಮೇಧಾವಿಯನ್ನು ಕಂಡು ಧನುಷಾಕ್ಷನು ಆ ವೀರ್ಯವಂತ ಮಹರ್ಷಿಯು ಅವನ ನಿಮಿತ್ತ ಗಿರಿಗಳನ್ನು ಒಡೆದನು.
03136011a ಸ ನಿಮಿತ್ತೇ ವಿನಷ್ಟೇ ತು ಮಮಾರ ಸಹಸಾ ಶಿಶುಃ।
03136011c ತಂ ಮೃತಂ ಪುತ್ರಮಾದಾಯ ವಿಲಲಾಪ ತತಃ ಪಿತಾ।।
ತನ್ನ ನಿಮಿತ್ತವು ನಾಶಗೊಳ್ಳಲು ಆ ಬಾಲಕನು ತಕ್ಷಣವೇ ಸತ್ತು ಬಿದ್ದನು. ಆಗ ಆ ಮೃತ ಮಗನನ್ನು ಹಿಡಿದು ತಂದೆಯು ವಿಲಪಿಸಿದನು.
03136012a ಲಾಲಪ್ಯಮಾನಂ ತಂ ದೃಷ್ಟ್ವಾ ಮುನಯಃ ಪುನರಾರ್ತವತ್।
03136012c ಊಚುರ್ವೇದೋಕ್ತಯಾ ಪೂರ್ವಂ ಗಾಥಯಾ ತನ್ನಿಬೋಧ ಮೇ।।
ಜೋರಾಗಿ ವಿಲಪಿಸುತ್ತಿದ್ದ ಅವನನ್ನು ನೋಡಿ ಮುನಿಗಳು ಪುನರಾವರ್ತಿಸಿದರು. ಅದನ್ನೇ ಹಿಂದೆ ವೇದಗಳಲ್ಲಿ ಹೇಳಿದೆ. ಅದನ್ನು ನಾನು ನಿನಗೆ ಹೇಳುತ್ತೇನೆ.
03136013a ನ ದಿಷ್ಟಮರ್ಥಮತ್ಯೇತುಮೀಶೋ ಮರ್ತ್ಯಃ ಕಥಂ ಚನ।
03136013c ಮಹಿಷೈರ್ಭೇದಯಾಮಾಸ ಧನುಷಾಕ್ಷೋ ಮಹೀಧರಾನ್।।
ಮನುಷ್ಯನು ಎಂದೂ ವಿಧಿಯನ್ನು ಬದಲಿಸುವಷ್ಟು ಒಡೆಯನಾಗಲಾರ! ಮಹರ್ಷಿ ಧನುಷಾಕ್ಷನು ಪರ್ವತಗಳನ್ನೇ ತುಂಡರಿಸಿದನು.
03136014a ಏವಂ ಲಬ್ಧ್ವಾ ವರಾನ್ಬಾಲಾ ದರ್ಪಪೂರ್ಣಾಸ್ತರಸ್ವಿನಃ।
03136014c ಕ್ಷಿಪ್ರಮೇವ ವಿನಶ್ಯಂತಿ ಯಥಾ ನ ಸ್ಯಾತ್ತಥಾ ಭವಾನ್।।
ಹೀಗೆ ಬಾಲಕರು ವರಗಳನ್ನು ಪಡೆದು ಸೊಕ್ಕಿನಿಂದ ತುಂಬಿ ಸಾಹಸಿಗಳಾಗುತ್ತಾರೆ ಮತ್ತು ಬೇಗನೇ ವಿನಾಶಹೊಂದುತ್ತಾರೆ. ಹೀಗೆ ನಿನಗೂ ಆಗಬಾರದು.
03136015a ಏಷ ರೈಭ್ಯೋ ಮಹಾವೀರ್ಯಃ ಪುತ್ರೌ ಚಾಸ್ಯ ತಥಾವಿಧೌ।
03136015c ತಂ ಯಥಾ ಪುತ್ರ ನಾಭ್ಯೇಷಿ ತಥಾ ಕುರ್ಯಾಸ್ತ್ವತಂದ್ರಿತಃ।।
ಈ ರೈಭ್ಯನೂ ಮತ್ತು ಹಾಗೆ ಅವನ ಮಕ್ಕಳಿಬ್ಬರೂ ವೀರ್ಯವಂತರು. ಮಗನೇ! ಅವನನ್ನು ಮೀರಿಸಲು ಪ್ರಯತ್ನಪಡದೇ ಇರು.
03136016a ಸ ಹಿ ಕ್ರುದ್ಧಃ ಸಮರ್ಥಸ್ತ್ವಾಂ ಪುತ್ರ ಪೀಡಯಿತುಂ ರುಷಾ।
03136016c ವೈದ್ಯಶ್ಚಾಪಿ ತಪಸ್ವೀ ಚ ಕೋಪನಶ್ಚ ಮಹಾನೃಷಿಃ।।
ಮಗನೇ! ಯಾಕೆಂದರೆ ಆ ಮಹಾನೃಷಿಯು ಕೃದ್ಧನೂ, ರೋಷದಿಂದ ಪೀಡಿಸಲು ಸಮರ್ಥನೂ, ತಿಳಿದವನೂ, ತಪಸ್ವಿಯೂ ಮತ್ತು ಕ್ರೋಧನನೂ ಅಗಿದ್ದಾನೆ.”
03136017 ಯವಕ್ರೀರುವಾಚ।
03136017a ಏವಂ ಕರಿಷ್ಯೇ ಮಾ ತಾಪಂ ತಾತ ಕಾರ್ಷೀಃ ಕಥಂ ಚನ।
03136017c ಯಥಾ ಹಿ ಮೇ ಭವಾನ್ಮಾನ್ಯಸ್ತಥಾ ರೈಭ್ಯಃ ಪಿತಾ ಮಮ।।
ಯವಕ್ರಿಯು ಹೇಳಿದನು: “ತಂದೇ! ಹಾಗೆಯೇ ಮಾಡುತ್ತೇನೆ. ನನ್ನ ಮೇಲೆ ಎಂದೂ ಭಿರುಸಾಗಬೇಡ. ನಿನ್ನನ್ನು ಹೇಗೆ ನಾನು ಮನ್ನಿಸುತ್ತೇನೋ ಹಾಗೆ ರೈಭ್ಯನನ್ನೂ ಕೂಡ ನನ್ನ ತಂದೆಯಂತೆ ಗೌರವಿಸುತ್ತೇನೆ.””
03136018 ಲೋಮಶ ಉವಾಚ।
03136018a ಉಕ್ತ್ವಾ ಸ ಪಿತರಂ ಶ್ಲಕ್ಷ್ಣಂ ಯವಕ್ರೀರಕುತೋಭಯಃ।
03136018c ವಿಪ್ರಕುರ್ವನ್ನೃಷೀನನ್ಯಾನತುಷ್ಯತ್ಪರಯಾ ಮುದಾ।।
ಲೋಮಶನು ಹೇಳಿದನು: “ಈ ರೀತಿ ಯಾವುದಕ್ಕೂ ಭಯಪಡದ ಯವಕ್ರಿಯು ತನ್ನ ತಂದೆಗೆ ಮೆಚ್ಚುಗೆಯಾಗುವ ಈ ಮಾತುಗಳನ್ನಾಡಿ, ಇತರ ಋಷಿಗಳನ್ನು ಅವಹೇಳನೆ ಮಾಡುವುದರಲ್ಲಿ ಪರಮ ಸಂತೋಷವನ್ನು ಪಡೆದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಯವಕ್ರೀತೋಪಖ್ಯಾನೇ ಷಟ್ತ್ರಿಂಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಯವಕ್ರೀತೋಪಖ್ಯಾನದಲ್ಲಿ ನೂರಾಮೂವತ್ತಾರನೆಯ ಅಧ್ಯಾಯವು.