133 ಲೋಮಶತೀರ್ಥಯಾತ್ರಾಯಾಂ ಅಷ್ಟಾವಕ್ರೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ತೀರ್ಥಯಾತ್ರಾ ಪರ್ವ

ಅಧ್ಯಾಯ 133

ಸಾರ

ರಾಜ ಮತ್ತು ದ್ವಾರಪಾಲರೊಡನೆ ವಾದಿಸಿ ಅಷ್ಟಾವಕ್ರನು ಆಸ್ಥಾನಕ್ಕೆ ಬಂದುದು (1-27).

03133001 ಅಷ್ಟಾವಕ್ರ ಉವಾಚ।
03133001a ಅಂಧಸ್ಯ ಪಂಥಾ ಬಧಿರಸ್ಯ ಪಂಥಾಃ। ಸ್ತ್ರಿಯಃ ಪಂಥಾ ವೈವಧಿಕಸ್ಯ ಪಂಥಾಃ।
03133001c ರಾಜ್ಞಃ ಪಂಥಾ ಬ್ರಾಹ್ಮಣೇನಾಸಮೇತ್ಯ। ಸಮೇತ್ಯ ತು ಬ್ರಾಹ್ಮಣಸ್ಯೈವ ಪಂಥಾಃ।।

ಅಷ್ಟಾವಕ್ರನು ಹೇಳಿದನು: “ಕುರುಡನ ಮಾರ್ಗ, ಕಿವುಡನ ಮಾರ್ಗ, ಸ್ತ್ರೀಯ ಮಾರ್ಗ, ಕೂಲಿಯ ಮಾರ್ಗ, ಬ್ರಾಹ್ಮಣನನ್ನು ಭೇಟಿಯಾಗದೇ ಇದ್ದರೆ ರಾಜನ ಮಾರ್ಗ. ಭೇಟಿಯಾದರೆ ಅದು ಬ್ರಾಹ್ಮಣನದೇ ಮಾರ್ಗವಾಗುತ್ತದೆ.”

03133002 ರಾಜೋವಾಚ।
03133002a ಪಂಥಾ ಅಯಂ ತೇಽದ್ಯ ಮಯಾ ನಿಸೃಷ್ಟೋ। ಯೇನೇಚ್ಚಸೇ ತೇನ ಕಾಮಂ ವ್ರಜಸ್ವ।
03133002c ನ ಪಾವಕೋ ವಿದ್ಯತೇ ವೈ ಲಘೀಯಾನ್। ಇಂದ್ರೋಽಪಿ ನಿತ್ಯಂ ನಮತೇ ಬ್ರಾಹ್ಮಣಾನಾಂ।।

ರಾಜನು ಹೇಳಿದನು: “ಹಾಗಾದರೆ ಇಂದು ನಾನು ಈ ದಾರಿಯನ್ನು ನಿನಗಾಗಿ ಬಿಟ್ಟುಕೊಡುತ್ತೇನೆ. ಎಲ್ಲಿ ಬೇಕಾದಲ್ಲಿ ಪ್ರಯಾಣಮಾಡು. ಎಷ್ಟೇ ಸಣ್ಣದಾದರೂ ಬೆಂಕಿಯನ್ನು ತಿಳಿಯಲಿಕ್ಕಾಗುವುದಿಲ್ಲ. ಇಂದ್ರನೂ ಕೂಡ ನಿತ್ಯವೂ ಬ್ರಾಹ್ಮಣರನ್ನು ನಮಸ್ಕರಿಸುತ್ತಾನೆ.”

03133003 ಅಷ್ಟಾವಕ್ರ ಉವಾಚ।
03133003a ಯಜ್ಞಂ ದ್ರಷ್ಟುಂ ಪ್ರಾಪ್ತವಂತೌ ಸ್ವ ತಾತ। ಕೌತೂಹಲಂ ನೌ ಬಲವದ್ವೈ ವಿವೃದ್ಧಂ।
03133003c ಆವಾಂ ಪ್ರಾಪ್ತಾವತಿಥೀ ಸಂಪ್ರವೇಶಂ। ಕಾಂಕ್ಷಾವಹೇ ದ್ವಾರಪತೇ ತವಾಜ್ಞಾಂ।।

ಅಷ್ಟಾವಕ್ರನು ಹೇಳಿದನು: “ಮಗೂ! ನಾವು ಯಜ್ಞವನ್ನು ನೋಡಲು ಬಂದಿದ್ದೇವೆ. ಬಲವಂತ! ನಮ್ಮ ಕುತೂಹಲವು ಹೆಚ್ಚಾಗುತ್ತಿದೆ. ನಾವು ಅತಿಥಿಗಳಾಗಿ ಪ್ರವೇಶಿಸುತ್ತಿದ್ದೇವೆ. ದ್ವಾರಪತಿ! ನಿನ್ನ ಆಜ್ಞೆಯನ್ನು ಬಯಸುತ್ತೇವೆ.

03133004a ಐಂದ್ರದ್ಯುಮ್ನೇರ್ಯಜ್ಞದೃಶಾವಿಹಾವಾಂ। ವಿವಕ್ಷೂ ವೈ ಜನಕೇಂದ್ರಂ ದಿದೃಕ್ಷೂ।
03133004c ನ ವೈ ಕ್ರೋಧಾದ್ವ್ಯಾಧಿನೈವೋತ್ತಮೇನ। ಸಮ್ಯೋಜಯ ದ್ವಾರಪಾಲ ಕ್ಷಣೇನ।।

ಐಂದ್ರದ್ಯುಮ್ನಿಯ ಯಜ್ಞವನ್ನು ನೋಡಿ ನಾವು ಜನಕೇಂದ್ರನನ್ನೂ ನೋಡಬಯಸುತ್ತೇವೆ. ದ್ವಾರಪಾಲ! ನಮ್ಮ ಕೋಪದಿಂದ ಇದೇ ಕ್ಷಣದಲ್ಲಿ ಗುಣವಾಗದ ವ್ಯಾಧಿಯಿಂದ ಬಳಲಬೇಡ!”

03133005 ದ್ವಾರಪಾಲ ಉವಾಚ।
03133005a ಬಂದೇಃ ಸಮಾದೇಶಕರಾ ವಯಂ ಸ್ಮ। ನಿಬೋಧ ವಾಕ್ಯಂ ಚ ಮಯೇರ್ಯಮಾಣಂ।
03133005c ನ ವೈ ಬಾಲಾಃ ಪ್ರವಿಶಂತ್ಯತ್ರ ವಿಪ್ರಾ। ವೃದ್ಧಾ ವಿದ್ವಾಂಸಃ ಪ್ರವಿಶಂತಿ ದ್ವಿಜಾಗ್ರ್ಯಾಃ।।

ದ್ವಾರಪಾಲಕನು ಹೇಳಿದನು: “ನಾವು ಬಂದಿಯ ಆದೇಶದಂತೆ ನಡೆಯುತ್ತೇವೆ. ನಾನು ಹೇಳಿದಂತೆ ನಡೆದುಕೊಳ್ಳಿ. ಯಾವ ವಿಪ್ರ ಬಾಲಕರೂ ಇಲ್ಲಿಗೆ ಪ್ರವೇಶಿಸದಿರಲಿ. ಆದರೆ ವೃದ್ಧ ಮತ್ತು ವಿಧ್ವಾಂಸ ದ್ವಿಜಾಗ್ರರು ಪ್ರವೇಶಿಸಲಿ.”

03133006 ಅಷ್ಟಾವಕ್ರ ಉವಾಚ।
03133006a ಯದ್ಯತ್ರ ವೃದ್ಧೇಷು ಕೃತಃ ಪ್ರವೇಶೋ। ಯುಕ್ತಂ ಮಮ ದ್ವಾರಪಾಲ ಪ್ರವೇಷ್ಟುಂ।
03133006c ವಯಂ ಹಿ ವೃದ್ಧಾಶ್ಚರಿತವ್ರತಾಶ್ಚ। ವೇದಪ್ರಭಾವೇನ ಪ್ರವೇಶನಾರ್ಹಾಃ।।

ಅಷ್ಟಾವಕ್ರನು ಹೇಳಿದನು: “ವೃದ್ಧರಿಗೆ ಇಲ್ಲಿ ಪ್ರವೇಶವಿದೆಯೆಂದಾದರೆ ದ್ವಾರಪಾಲ! ನಾನು ಪ್ರವೇಶಿಸಲು ಅರ್ಹನಾಗಿದ್ದೇನೆ. ಯಾಕೆಂದರೆ ನಾವು ವೃದ್ಧರು ಮತ್ತು ವ್ರತಗಳನ್ನು ಪಾಲಿಸುತ್ತಿದ್ದೇವೆ. ವೇದಪ್ರಭಾವದಿಂದ ನಾವು ಪ್ರವೇಶಿಸಲು ಅರ್ಹರಾಗಿದ್ದೇವೆ.

03133007a ಶುಶ್ರೂಷವಶ್ಚಾಪಿ ಜಿತೇಂದ್ರಿಯಾಶ್ಚ। ಜ್ಞಾನಾಗಮೇ ಚಾಪಿ ಗತಾಃ ಸ್ಮ ನಿಷ್ಠಾಂ।
03133007c ನ ಬಾಲ ಇತ್ಯವಮಂತವ್ಯಮಾಹುರ್। ಬಾಲೋಽಪ್ಯಗ್ನಿರ್ದಹತಿ ಸ್ಪೃಶ್ಯಮಾನಃ।।

ಶುಶ್ರೂಷೆ ಮಾಡುವವರು ಮತ್ತು ಜಿತೇಂದ್ರಿಯರಾದ ನಾವು ನಿಷ್ಠೆಯಿಂದ ಜ್ಞಾನದ ಕೊನೆಯವರೆಗೆ ತಲುಪಿದ್ದೇವೆ. ಬಾಲಕರೆಂದು ನಮ್ಮನ್ನು ಅಪಮಾನಿಸಬೇಡ. ಸಣ್ಣದಾಗಿದ್ದರೂ ಬೆಂಕಿಯನ್ನು ಮುಟ್ಟಿದರೆ ಸುಡುತ್ತದೆ.”

03133008 ದ್ವಾರಪಾಲ ಉವಾಚ।
03133008a ಸರಸ್ವತೀಮೀರಯ ವೇದಜುಷ್ಟಾಂ। ಏಕಾಕ್ಷರಾಂ ಬಹುರೂಪಾಂ ವಿರಾಜಂ।
03133008c ಅಂಗಾತ್ಮಾನಂ ಸಮವೇಕ್ಷಸ್ವ ಬಾಲಂ। ಕಿಂ ಶ್ಲಾಘಸೇ ದುರ್ಲಭಾ ವಾದಸಿದ್ಧಿಃ।।

ದ್ವಾರಪಾಲಕನು ಹೇಳಿದನು: “ಹಾಗಾದರೆ ವೇದಜುಷ್ಟವಾದ ಒಂದೇ ಒಂದು ಅಕ್ಷರವಾದರೂ ಬಹುರೂಪದಲ್ಲಿ ವಿರಾಜಿಸುವ ಸರಸ್ವತಿಯನ್ನು ಹೇಳು. ಬಾಲಕ! ನಿನ್ನ ದೇಹವನ್ನು ನೋಡಿಕೋ! ವಾದಸಿದ್ಧಿಯನ್ನು ಪಡೆಯದೇ ಇದ್ದರೂ ಯಾಕೆ ಹೊಗಳಿಕೊಳ್ಳುತ್ತಿದ್ದೀಯೆ?”

03133009 ಅಷ್ಟಾವಕ್ರ ಉವಾಚ।
03133009a ನ ಜ್ಞಾಯತೇ ಕಾಯವೃದ್ಧ್ಯಾ ವಿವೃದ್ಧಿರ್। ಯಥಾಷ್ಠೀಲಾ ಶಾಲ್ಮಲೇಃ ಸಂಪ್ರವೃದ್ಧಾ।
03133009c ಹ್ರಸ್ವೋಽಲ್ಪಕಾಯಃ ಫಲಿತೋ ವಿವೃದ್ಧೋ। ಯಶ್ಚಾಫಲಸ್ತಸ್ಯ ನ ವೃದ್ಧಭಾವಃ।।

ಅಷ್ಟಾವಕ್ರನು ಹೇಳಿದನು: “ಶಾಲ್ಮೀಲ ವೃಕ್ಷದಲ್ಲಿ ಬೆಳೆಯುವ ಕಳೆಯಂತೆ ವೃದ್ಧರೆಂದರೆ ದೇಹದ ವಯಸ್ಸು ಹೆಚ್ಚಿನದು ಎಂದು ತಿಳಿಯಬಾರದು. ಸಣ್ಣದಾದರೂ, ಗಿಡ್ಡದಾದರೂ ಫಲವನ್ನು ಪಡೆದರೆ ವೃದ್ಧವೆನಿಸಿಕೊಳ್ಳುತ್ತದೆ. ಫಲವನ್ನೇ ಪಡೆಯದ ವೃಕ್ಷವು ವೃದ್ಧವೆಂದೆನಿಸಿಕೊಳ್ಳುವುದಿಲ್ಲ.”

03133010 ದ್ವಾರಪಾಲ ಉವಾಚ।
03133010a ವೃದ್ಧೇಭ್ಯ ಏವೇಹ ಮತಿಂ ಸ್ಮ ಬಾಲಾ। ಗೃಹ್ಣಂತಿ ಕಾಲೇನ ಭವಂತಿ ವೃದ್ಧಾಃ।
03133010c ನ ಹಿ ಜ್ಞಾನಮಲ್ಪಕಾಲೇನ ಶಕ್ಯಂ। ಕಸ್ಮಾದ್ಬಾಲೋ ವೃದ್ಧ ಇವಾವಭಾಷಸೇ।।

ದ್ವಾರಪಾಲಕನು ಹೇಳಿದನು: “ಬಾಲಕರು ವೃದ್ಧರಾಗುವವರೆಗೆ ವೃದ್ಧರಿಂದಲೇ ತಮ್ಮ ಬುದ್ಧಿಯನ್ನು ಪಡೆಯುತ್ತಾರೆ. ಸ್ವಲ್ಪವೇ ಸಮಯದಲ್ಲಿ ಜ್ಞಾನವನ್ನು ಪಡೆಯುವುದು ಶಕ್ಯವಿಲ್ಲ. ಹಾಗಿದ್ದಾಗ ಬಾಲಕರಾದ ನೀವು ನಿಮ್ಮನ್ನು ವೃದ್ಧರೆಂದು ಏಕೆ ಕರೆದುಕೊಳ್ಳುತ್ತಿದ್ದೀರಿ?”

03133011 ಅಷ್ಟಾವಕ್ರ ಉವಾಚ।
03133011a ನ ತೇನ ಸ್ಥವಿರೋ ಭವತಿ ಯೇನಾಸ್ಯ ಪಲಿತಂ ಶಿರಃ।
03133011c ಬಾಲೋಽಪಿ ಯಃ ಪ್ರಜಾನಾತಿ ತಂ ದೇವಾಃ ಸ್ಥವಿರಂ ವಿದುಃ।।

ಅಷ್ಟಾವಕ್ರನು ಹೇಳಿದನು: “ಬೆಳೆದ ಬಿಳಿಕೂದಲಿದ್ದರೆ ಮಾತ್ರ ವೃದ್ಧನೆಂದಾಗುವುದಿಲ್ಲ. ತಿಳಿದಿರುವವನನ್ನು ಬಾಲಕನಾಗಿದ್ದರೂ ದೇವತೆಗಳು ವೃದ್ಧನೆಂದು ತಿಳಿಯುತ್ತಾರೆ.

03133012a ನ ಹಾಯನೈರ್ನ ಪಲಿತೈರ್ನ ವಿತ್ತೇನ ನ ಬಂಧುಭಿಃ।
03133012c ಋಷಯಶ್ಚಕ್ರಿರೇ ಧರ್ಮಂ ಯೋಽನೂಚಾನಃ ಸ ನೋ ಮಹಾನ್।।

ವಯಸ್ಸಿನಿಂದಾಗಲೀ, ಬಿಳಿಕೂದಲಿನಿಂದಾಗಲೀ, ಸಂಪತ್ತಿನಿಂದಾಗಲೀ, ಬಂಧುಗಳಿಂದಾಗಲೀ ಋಷಿಗಳು ಧರ್ಮವನ್ನು ಮಾಡಿಲ್ಲ. ಯಾರು ಕಲಿತಿದ್ದಾನೋ ಅವನೇ ದೊಡ್ಡವನು.

03133013a ದಿದೃಕ್ಷುರಸ್ಮಿ ಸಂಪ್ರಾಪ್ತೋ ಬಂದಿನಂ ರಾಜಸಂಸದಿ।
03133013c ನಿವೇದಯಸ್ವ ಮಾಂ ದ್ವಾಃಸ್ಥ ರಾಜ್ಞೇ ಪುಷ್ಕರಮಾಲಿನೇ।।

ರಾಜಸಭೆಯಲ್ಲಿ ಬಂದಿಯನ್ನು ನೋಡಲು ಬಂದಿದ್ದೇವೆ. ದ್ವಾರಪಾಲಕ! ಪುಷ್ಕರ ಮಾಲಿನಿ ರಾಜನಿಗೆ ನಾವು ಬಂದಿರುವುದನ್ನು ಹೇಳು.

03133014a ದ್ರಷ್ಟಾಸ್ಯದ್ಯ ವದತೋ ದ್ವಾರಪಾಲ। ಮನೀಷಿಭಿಃ ಸಹ ವಾದೇ ವಿವೃದ್ಧೇ।
03133014c ಉತಾಹೋ ವಾಪ್ಯುಚ್ಚತಾಂ ನೀಚತಾಂ ವಾ। ತೂಷ್ಣೀಂ ಭೂತೇಷ್ವಥ ಸರ್ವೇಷು ಚಾದ್ಯ।।

ದ್ವಾರಪಾಲಕ! ಇಂದು ನಾನು ತಿಳಿದವರೊಡನೆ ವಾದಮಾಡುವುದನ್ನು ನೋಡು. ಎಲ್ಲರೂ ಸುಮ್ಮನಿರುವಾಗ ನಾನು ಮೇಲಾಗುವುದನ್ನು ಅಥವಾ ಕೆಳಗಾಗುವುದನ್ನು ನೋಡು.”

03133015 ದ್ವಾರಪಾಲ ಉವಾಚ।
03133015a ಕಥಂ ಯಜ್ಞಂ ದಶವರ್ಷೋ ವಿಶೇಸ್ತ್ವಂ। ವಿನೀತಾನಾಂ ವಿದುಷಾಂ ಸಂಪ್ರವೇಶ್ಯಂ।
03133015c ಉಪಾಯತಃ ಪ್ರಯತಿಷ್ಯೇ ತವಾಹಂ। ಪ್ರವೇಶನೇ ಕುರು ಯತ್ನಂ ಯಥಾವತ್।।

ದ್ವಾರಪಾಲಕನು ಹೇಳಿದನು: “ವಿನೀತರಿಗೆ ಮತ್ತು ವಿದುಷರಿಗೆ ಮಾತ್ರ ಪ್ರವೇಶವುಳ್ಳ ಯಜ್ಞಶಾಲೆಗೆ ಹತ್ತುವರ್ಷದ ನೀವು ಹೇಗೆ ಪ್ರವೇಶಿಸುವಿರಿ? ನಿಮ್ಮನ್ನು ಒಳಗೆ ಬಿಡಲು ನಾನು ಉಪಾಯವನ್ನು ಹುಡುಕುತ್ತೇನೆ. ನೀವೂ ಕೂಡ ಪ್ರಯತ್ನಮಾಡಬೇಕು.”

03133016 ಅಷ್ಟಾವಕ್ರ ಉವಾಚ।
03133016a ಭೋ ಭೋ ರಾಜಂ ಜನಕಾನಾಂ ವರಿಷ್ಠ। ಸಭಾಜ್ಯಸ್ತ್ವಂ ತ್ವಯಿ ಸರ್ವಂ ಸಮೃದ್ಧಂ।
03133016c ತ್ವಂ ವಾ ಕರ್ತಾ ಕರ್ಮಣಾಂ ಯಜ್ಞಿಯಾನಾಂ। ಯಯಾತಿರೇಕೋ ನೃಪತಿರ್ವಾ ಪುರಸ್ತಾತ್।।

ಅಷ್ಟಾವಕ್ರನು ಹೇಳಿದನು: “ಭೋ ಭೋ ರಾಜನ್! ಜನಕರಲ್ಲಿ ವರಿಷ್ಠ! ನಿನ್ನ ಸಭೆಗೆ ಜಯವಾಗಲಿ, ನಿನ್ನ ಸರ್ವ ಸಮೃದ್ಧಿಗೆ ಜಯವಾಗಲಿ! ನೀನು ನಡೆಸುತ್ತಿರುವ ಈ ಯಜ್ಞದಂಥಹ ಕರ್ತನು ಹಿಂದೆ ಯಯಾತಿ ಮಾತ್ರ ಇದ್ದನು!

03133017a ವಿದ್ವಾನ್ಬಂದೀ ವೇದವಿದೋ ನಿಗೃಹ್ಯ। ವಾದೇ ಭಗ್ನಾನಪ್ರತಿಶಮ್ಕಮಾನಃ।
03133017c ತ್ವಯಾ ನಿಸೃಷ್ಟೈಃ ಪುರುಷೈರಾಪ್ತಕೃದ್ಭಿರ್। ಜಲೇ ಸರ್ವಾನ್ಮಜ್ಜಯತೀತಿ ನಃ ಶ್ರುತಂ।।

ವಿದ್ವಾನ್ ವೇದವಿದ ಬಂದಿಯು ವಾದದಲ್ಲಿ ಅನುಮಾನಿತರನ್ನು ಸೋಲಿಸಿ ನೀನು ಕಳುಹಿಸಿದ ಆಪ್ತ ಜನರಿಂದ ಎಲ್ಲರನ್ನೂ ಸಮುದ್ರದಲ್ಲಿ ಹಾಕಿ ಮುಳುಗಿಸಿದನೆಂದು ಕೇಳಲಿಲ್ಲವೇ?

03133018a ಸ ತಚ್ಛೃತ್ವಾ ಬ್ರಾಹ್ಮಣಾನಾಂ ಸಕಾಶಾದ್। ಬ್ರಹ್ಮೋದ್ಯಂ ವೈ ಕಥಯಿತುಮಾಗತೋಽಸ್ಮಿ।
03133018c ಕ್ವಾಸೌ ಬಂದೀ ಯಾವದೇನಂ ಸಮೇತ್ಯ। ನಕ್ಷತ್ರಾಣೀವ ಸವಿತಾ ನಾಶಯಾಮಿ।।

ಬ್ರಾಹ್ಮಣರಿಂದ ಇದನ್ನು ಕೇಳಿದ ನಾನು ಇಂದು ಬ್ರಹ್ಮನನ್ನು ಹೇಳಲು ಬಂದಿದ್ದೇನೆ. ಬಂದಿಯು ಎಲ್ಲಿದ್ದಾನೆ? ಸೂರ್ಯನು ನಕ್ಷತ್ರಗಳನ್ನು ಹೇಗೋ ಹಾಗೆ ನಾನು ಅವನನ್ನು ವಾದದಲ್ಲಿ ಎದುರಿಸಿ ನಾಶಗೊಳಿಸುತ್ತೇನೆ.”

03133019 ರಾಜೋವಾಚ।
03133019a ಆಶಂಸಸೇ ಬಂದಿನಂ ತ್ವಂ ವಿಜೇತುಂ। ಅವಿಜ್ಞಾತ್ವಾ ವಾಕ್ಯಬಲಂ ಪರಸ್ಯ।
03133019c ವಿಜ್ಞಾತವೀರ್ಯೈಃ ಶಕ್ಯಮೇವಂ ಪ್ರವಕ್ತುಂ। ದೃಷ್ಟಶ್ಚಾಸೌ ಬ್ರಾಹ್ಮಣೈರ್ವಾದಶೀಲೈಃ।।

ರಾಜನು ಹೇಳಿದನು: “ಎದುರಾಳಿಯ ವಾಕ್ಯಬಲವನ್ನು ತಿಳಿಯದೇ ಬಂದಿಯನ್ನು ನೀನು ಸೋಲಿಸುತ್ತೀಯೆ ಎಂದು ಹೇಳುತ್ತಿರುವೆಯಲ್ಲ! ಹೀಗೆ ಹೇಳಲು ಕೇವಲ ವಿಜ್ಞಾತವೀರರಿಗೆ ಶಕ್ಯ. ವಾದಶೀಲ ಬ್ರಾಹ್ಮಣರು ಇದನ್ನು ಕಂಡುಕೊಂಡಿದ್ದಾರೆ.”

03133020 ಅಷ್ಟಾವಕ್ರ ಉವಾಚ।
03133020a ವಿವಾದಿತೋಽಸೌ ನ ಹಿ ಮಾದೃಶೈರ್ಹಿ। ಸಿಂಹೀಕೃತಸ್ತೇನ ವದತ್ಯಭೀತಃ।
03133020c ಸಮೇತ್ಯ ಮಾಂ ನಿಹತಃ ಶೇಷ್ಯತೇಽದ್ಯ। ಮಾರ್ಗೇ ಭಗ್ನಂ ಶಕಟಮಿವಾಬಲಾಕ್ಷಂ।।

ಅಷ್ಟಾವಕ್ರನು ಹೇಳಿದನು: “ಅವನೊಂದಿಗೆ ವಾದಮಾಡಿದವರು ನನ್ನ ಹಾಗಿಲ್ಲ. ವಾದದಲ್ಲಿ ಭೀತರಾದ ಅವರು ಅವನನ್ನು ಸಿಂಹನನ್ನಾಗಿ ಮಾಡಿದ್ದಾರೆ. ನನ್ನನ್ನು ಭೇಟಿಯಾದ ನಂತರ ಇಂದು ಗಾಲಿ ಕಳಚಿದ ಬಂಡಿಯಂತೆ ಮಾರ್ಗಮದ್ಯದಲ್ಲಿ ಉಳಿಯುತ್ತಾನೆ.”

03133021 ರಾಜೋವಾಚ।
03133021a ಷಣ್ಣಾಭೇರ್ದ್ವಾದಶಾಕ್ಷಸ್ಯ ಚತುರ್ವಿಂಶತಿಪರ್ವಣಃ।
03133021c ಯಸ್ತ್ರಿಷಷ್ಟಿಶತಾರಸ್ಯ ವೇದಾರ್ಥಂ ಸ ಪರಃ ಕವಿಃ।।

ರಾಜನು ಹೇಳಿದನು: “ಆರು ಭೇದಗಳನ್ನು, ಹನ್ನೆರಡು ಅಕ್ಷಗಳನ್ನು, ಇಪ್ಪತ್ನಾಲ್ಕು ಪರ್ವಗಳನ್ನು ಮತ್ತು ಮುನ್ನೂರಾ ಅರವತ್ತು ಚಕ್ರದ ಕಾಲುಗಳನ್ನು ತಿಳಿದವನೇ ಪರಮ ಕವಿಯು.”

03133022 ಅಷ್ಟಾವಕ್ರ ಉವಾಚ।
03133022a ಚತುರ್ವಿಂಶತಿಪರ್ವ ತ್ವಾಂ ಷಣ್ಣಾಭಿ ದ್ವಾದಶಪ್ರಧಿ।
03133022c ತತ್ತ್ರಿಷಷ್ಟಿಶತಾರಂ ವೈ ಚಕ್ರಂ ಪಾತು ಸದಾಗತಿ।।

ಅಷ್ಟಾವಕ್ರನು ಹೇಳಿದನು: “ಸದಾ ತಿರುಗುತ್ತಿರುವ ಇಪ್ಪತ್ನಾಲ್ಕು ಪರ್ವಗಳು, ಆರು ಭೇದಗಳುಳ್ಳ ಹನ್ನೆರಡು ಪ್ರಧಿಗಳನ್ನು ಹೊಂದಿದ ಮತ್ತು ಮುನ್ನೂರಾ ಅರವತ್ತು ಕಾಲುಗಳುಳ್ಳ ಚಕ್ರವು ನಿನ್ನನ್ನು ರಕ್ಷಿಸಲಿ!”

03133023 ರಾಜೋವಾಚ।
03133023a ವಡವೇ ಇವ ಸಂಯುಕ್ತೇ ಶ್ಯೇನಪಾತೇ ದಿವೌಕಸಾಂ।
03133023c ಕಸ್ತಯೋರ್ಗರ್ಭಮಾಧತ್ತೇ ಗರ್ಭಂ ಸುಷುವತುಶ್ಚ ಕಂ।।

ರಾಜನು ಹೇಳಿದನು: “ಎರಡು ಕುದುರೆಗಳನ್ನು ಕಟ್ಟಿದಂತಿದೆ, ಆಕಾಶದಿಂದ ಗಿಡುಗವು ಬಂದೆರಗುವಂತಿದೆ. ಅದು ಯಾವ ದೇವತೆಯ ಗರ್ಭದಿಂದ ಬಂದಿದೆ ಮತ್ತು ಯಾರು ಆ ಗರ್ಭದಿಂದ ಹುಟ್ಟಿದ್ದಾರೆ?”

03133024 ಅಷ್ಟಾವಕ್ರ ಉವಾಚ।
03133024a ಮಾ ಸ್ಮ ತೇ ತೇ ಗೃಹೇ ರಾಜಂ ಶಾತ್ರವಾಣಾಮಪಿ ಧ್ರುವಂ।
03133024c ವಾತಸಾರಥಿರಾಧತ್ತೇ ಗರ್ಭಂ ಸುಷುವತುಶ್ಚ ತಂ।।

ಅಷ್ಟಾವಕ್ರನು ಹೇಳಿದನು: “ರಾಜನ್! ಅವುಗಳನ್ನು ನಿನ್ನ ಮನೆಯಿಂದ ಮತ್ತು ನಿನ್ನ ಶತ್ರುವಿನ ಮನೆಯಿಂದಲೂ ದೂರವಿಡು! ವಾಯುಸಾರಥಿಯು ಅವನ್ನು ಪಡೆಯುತ್ತಾನೆ ಮತ್ತು ಅವು ಅವನ ಗರ್ಭದಲ್ಲಿ ಬೆಳೆಯುತ್ತವೆ.”

03133025 ರಾಜೋವಾಚ।
03133025a ಕಿಂ ಸ್ವಿತ್ಸುಪ್ತಂ ನ ನಿಮಿಷತಿ ಕಿಂ ಸ್ವಿಜ್ಜಾತಂ ನ ಚೋಪತಿ।
03133025c ಕಸ್ಯ ಸ್ವಿದ್ಧೃದಯಂ ನಾಸ್ತಿ ಕಿಂ ಸ್ವಿದ್ವೇಗೇನ ವರ್ಧತೇ।

ರಾಜನು ಹೇಳಿದನು: “ನಿದ್ರಿಸಿರುವಾಗ ಏನು ಕಣ್ಣನ್ನು ಮುಚ್ಚುವುದಿಲ್ಲ? ಹುಟ್ಟುವಾಗ ಯಾವುದು ಚಲಿಸುವುದಿಲ್ಲ? ಯಾವುದಕ್ಕೆ ಹೃದಯವೇ ಇಲ್ಲ? ಮತ್ತು ಯಾವುದು ವೇಗದಿಂದ ವೃದ್ಧಿಯಾಗುತ್ತದೆ?”

03133026 ಅಷ್ಟಾವಕ್ರ ಉವಾಚ।
03133026a ಮತ್ಸ್ಯಃ ಸುಪ್ತೋ ನ ನಿಮಿಷತ್ಯಂಡಂ ಜಾತಂ ನ ಚೋಪತಿ।
03133026c ಅಶ್ಮನೋ ಹೃದಯಂ ನಾಸ್ತಿ ನದೀ ವೇಗೇನ ವರ್ಧತೇ।।

ಅಷ್ಟಾವಕ್ರನು ಹೇಳಿದನು: “ಮೀನು ನಿದ್ದೆಮಾಡುತ್ತಿರುವಾಗ ಕಣ್ಣು ಮುಚ್ಚುವುದಿಲ್ಲ ಮತ್ತು ಮೊಟ್ಟೆಯು ಹುಟ್ಟಿದಾಗ ಚಲಿಸುವುದಿಲ್ಲ. ಕಲ್ಲಿಗೆ ಹೃದಯವಿಲ್ಲ ಮತ್ತು ನದಿಯು ವೇಗದಲ್ಲಿ ಬೆಳೆಯುತ್ತದೆ.”

03133027 ರಾಜೋವಾಚ।
03133027a ನ ತ್ವಾ ಮನ್ಯೇ ಮಾನುಷಂ ದೇವಸತ್ತ್ವಂ। ನ ತ್ವಂ ಬಾಲಃ ಸ್ಥವಿರಸ್ತ್ವಂ ಮತೋ ಮೇ।
03133027c ನ ತೇ ತುಲ್ಯೋ ವಿದ್ಯತೇ ವಾಕ್ಪ್ರಲಾಪೇ। ತಸ್ಮಾದ್ದ್ವಾರಂ ವಿತರಾಮ್ಯೇಷ ಬಂದೀ।।

ರಾಜನು ಹೇಳಿದನು: “ನೀನು ಮನುಷ್ಯನಲ್ಲ ದೇವಸತ್ವವೆಂದು ತಿಳಿಯುತ್ತೇನೆ. ನೀನು ಬಾಲಕನಲ್ಲ ಆದರೆ ಸ್ಥಾವಿರನೆಂದು ನನ್ನ ಅಭಿಪ್ರಾಯ. ಮಾತಿನ ಪ್ರವಾಹದಲ್ಲಿ ನಿನ್ನ ಸಮಾನನು ಇಲ್ಲವೆಂದೇ ತಿಳಿಯಬಹುದು. ಆದುದರಿಂದ ನಿನಗೆ ದ್ವಾರವು ತೆರೆಯಲ್ಪಡುತ್ತದೆ. ಇದೋ ಬಂದಿಯು!”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಷ್ಟಾವಕ್ರೀಯೇ ತ್ರಯಂಸ್ತ್ರಿಶದಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಷ್ಟಾವಕ್ರದಲ್ಲಿ ನೂರಾಮೂವತ್ಮೂರನೆಯ ಅಧ್ಯಾಯವು.